Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › keshav ರವರ ಬ್ಲಾಗ್

ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

August 4, 2007 - 7:46pm — keshav

ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ. ನನ್ನ ಬ್ಲಾಗಿನಲ್ಲಿ ಕನ್ನಡ ಬ್ಲಾಗುಲೋಕ ಎಂಬ ಖಾನೆಯಲ್ಲಿ ಕನ್ನಡದ ನೂರಾರೊ ಬ್ಲಾಗುಗಳ ಕೊಂಡಿಯನ್ನು ಕೊಟ್ಟಿದ್ದೇನೆ. ನಿಮಗೆ ಇಷ್ಟವಾಗಿರುವ ಎಲ್ಲ ಬ್ಲಾಗುಗಳನ್ನು ದಿನಾಲೂ ಸರ್ಫ್ ಮಾಡುವುದು ಅಸಾಧ್ಯದ ಮಾತು. ವೆಬ್ ನ RSS feed ಬಳಸಿ ಗೂಗಲ್ ರೀಡರ್ ನಲ್ಲಿ ಬ್ಲಾಗಿನಲ್ಲಿ ಸೇರ್ಪಡೆಯಾದ ಎಲ್ಲ ಹೊಸ ಬರಹಗಳನ್ನು ಅರ್ಧ ಗಂಟೆಯಲ್ಲಿ ಓದಬಹುದು.
(ಸೂಚನೆ: ಕೆಳಗಿನ ಚಿತ್ರಗಳನ್ನು ದೊಡ್ಡದಾಗಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿರಿ).

ಸ್ಟೆಪ್ ೧: http://www.google.com/ ನಲ್ಲಿ google reader ಅಂಥ ಸರ್ಚ್ ಮಾಡಿ. ಗೂಗಲ್ ರೀಡರ್ ಹೋಮ್ ಪೇಜ್ ಮೇಲೆ ಕ್ಲಿಕ್ಕಿಸಿ.

ಸ್ಟೆಪ್ ೨: GMail ಅಕೌಂಟ್ ಇದ್ದರೆ ನೊಂದಾಯಿಸುವುದು ಸುಲಭ, ಇಲ್ಲಾದ್ದಿದ್ದರೆ ಹೊಸ ಮೆಂಬರ್ ಆಗಿ.

ಸ್ಟೆಪ್ ೩: ಕೆಳಗಿನ ಚಿತ್ರ ಗೂಗಲ್ ರೀಡರ್ ನ ಸೈನ್-ಅಪ್ ಮಾಡಿದ ಪೇಜ್. ನಿಮ್ಮ ಇಷ್ಟದ ಬ್ಲಾಗನ್ನು ನಿಮ್ಮ ರೀಡರ್ ನಲ್ಲಿ ಹಾಕಲು, Add subscription ಮೇಲೆ ಕ್ಲಿಕ್ಕಿಸಿ.

 


ಸ್ಟೆಪ್ ೪: Add subscription ಖಾನೆಯಲ್ಲಿ ನಿಮ್ಮ ಇಷ್ಟದ ಬ್ಲಾಗಿನ ಅಡ್ರೆಸ್ಸನ್ನು (URL), ಅದರ ' http://' ಸಮೇತ ಟೈಪ್ ಮಾಡಿ add ಕೊಡಿ. ಹಾಗೇ ಎಷ್ಟು ಬ್ಲಾಗುಗಳನ್ನು ಬೇಕಾದರೂ ಹಾಕಿಕೊಳ್ಳಿ.

ಸ್ಟೆಪ್ ೫: ಪ್ರತಿದಿನ ನಿಮ್ಮ ಈ-ಮೇಲ್ ಚೆಕ್ ಮಾಡುವಂತೆ, ರೀಡರ್ ಅನ್ನೂ ಚೆಕ್ ಮಾಡಿದರೆ ಆಯಿತು. ನಿಮ್ಮ ಇಷ್ಟದ ಎಲ್ಲ ಬ್ಲಾಗುಗಳ ಹೊಸ ಬರಹಗಳನ್ನು ಆರಾಮಾಗಿ ಓದಬಹುದು. ಅಷ್ಟೇ ಅಲ್ಲ, ಆ ಬರಹಗಳಿಗೆ ಸ್ಟಾರ್ ಸೇರಿಸಬಹುದು, tag ಮಾಡಬಹುದು.

ಎಷ್ಟು ಸಿಂಪಲ್ ಅಲ್ವಾ?
  • ಗೂಗಲ್
  • ಬ್ಲಾಗು
  • ಬ್ಲಾಗ್
  • ರೀಡರ್
Ornamental seperator
  • keshav ರವರ ಬ್ಲಾಗ್
  • Login or register to post comments
  • 578 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 4, 2007 - 7:52pm — mahesha

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

mahesha's picture

ನಂನಿ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 5, 2007 - 12:45am — createam

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

createam's picture

ಒಂದು ಮುಖ್ಯವಾದ ಅಂಶವನ್ನು ಮರೆತುಬಿಟ್ಟಿರಿ. ಹೆಚ್ಚಿನ ಬ್ಲಾಗ್‍ ಪೇಜ್‍ಗಳಲ್ಲಿ "rss" ಅಥವಾ "xml" ಎಂಬ ಚಿಕ್ಕ ಬಟನ್‍ಗಳು ಇರುತ್ತವೆ. ಇವು ಬ್ಲಾಗ್‍ನ feedಗೆ ಲಿಂಕ್‍ಗಳು. ಈ ಲಿಂಕನ್ನು copy ಮಾಡಿ ನೀವು ರೀಡರ್‍‍ನಲ್ಲಿ ಸೇರಿಸಿಕೊಳ್ಳಬಹುದು. ನೀವು firefox browser ಉಪಯೋಗಿಸುತ್ತಿದ್ದರೆ (ಉಪಯೋಗಿಸಿ ಸಾರ್, ಸೂಪರ್‍ ಆಗಿದೆ, ಯಾಕೆ ಆ ಕಿತ್ತೋಗಿರೊ ie ಉಪಯೋಗಿಸುತ್ತೀರಾ) ಇನ್ನು ಸುಲಭ, rss ಬಟನ್ click ಮಾಡಿ ಅದು ನಿಮಗೆ ಯಾವ ರೀಡರ್ ಉಪಯೋಗಿಸಬೇಕಂದು ಕೆಳುತ್ತದೆ, google reader ಉಪಯೋಗಿಸುತ್ತಿದ್ದರೆ ಹೂ ಎನ್ನಿ (how to type "houdu" Sticking out tongue) ನಿಮ್ಮ readerಗೆ ಅದು ತಾನಾಗೆ ಸೇರಿಸುತ್ತೆ. ಸಿಂಪಲ್ ಅಲ್ವಾ Smiling

  • Login or register to post comments
  • link
  • Email this ಪ್ರತಿಕ್ರಿಯೆ
August 5, 2007 - 3:09am — keshav

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

keshav's picture

ಕ್ರಿಯೇಟೀಂ,
ಧನ್ಯವಾದಗಳು.
ನಿಮ್ಮ ವಿಚಾರ ವಿನಿಮಯಕ್ಕೆ ಥ್ಯಾಂಕ್ಸ್.
Firefox browser ನಂತೆ, ಈಗಿನ ಹೊಸ IEನಲ್ಲೂ RSS feed ಗುಂಡಿ ಇದೆ, ಆದರೆ ನನದನ್ನು ಎಂದೂ ಉಪಯೋಗಿಸಿಲ್ಲ.
ಕೇಶವ

Visit my blog:
http://kannada-nudi.blogspot.com

  • Login or register to post comments
  • link
  • Email this ಪ್ರತಿಕ್ರಿಯೆ
August 5, 2007 - 5:24am — createam

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

createam's picture

ಕ್ಷಮಿಸಿ, ಈಗ ie ನೋಡಿದೆ. ಯೆಲ್ಲಾ firefox ಭಟ್ಟಿ (copy ಅನ್ನೋದಿಕ್ಕೆ ಇದು ಸರಿಯಾದ ಶಬ್ದ ತಾನೆ?) ಇಳಿಸುತ್ತಾರೆ. Sticking out tongue

  • Login or register to post comments
  • link
  • Email this ಪ್ರತಿಕ್ರಿಯೆ
August 5, 2007 - 2:31pm — keshav

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

keshav's picture

ನಾನು firefox ಉಪಯೋಗಿಸಿಲ್ಲ. ಹಾಗೆಂದು ನಾನು IE ದ ಫ್ಯಾನ್ ಏನೂ ಅಲ್ಲ. ಐಟಿ ಅಲ್ಲದ ನನ್ನಂಥ ಜನಕ್ಕೆ Microsoft ಬಿಟ್ಟು ಏನೂ ಗೊತ್ತಿರುವುದಿಲ್ಲ, IE ಬಿಟ್ಟು ಇನ್ನೊಂದು ಬ್ರೌಸರ್ ಉಪಯೋಗಿಸಿರುವುದಿಲ್ಲ, Windows media player ಬಿಟ್ಟು ಇನ್ನೊಂದು ಮೀಡಿಯಾ ಪ್ಲೇಯರ್ ಗೊತ್ತಿರುವುದಿಲ್ಲ. ಸದ್ಯಕ್ಕೆ ಗೂಗಲ್ ಉಪಯೋಗಿಸಲು ಕಲಿಯುತ್ತಿದ್ದೇನೆ, ಗೂಗಲ್ ಸರ್ಚ್, ಈ-ಮೇಲ್, ರೀಡರ್, ಬ್ಲಾಗರ್, ಕ್ಯಾಲೆಂಡರ್, ಎಲ್ಲ ತುಂಬಾ user freindly, ಏನಂತೀರಾ?

ಕೇಶವ

Visit my blog:
http://kannada-nudi.blogspot.com

  • Login or register to post comments
  • link
  • Email this ಪ್ರತಿಕ್ರಿಯೆ
August 5, 2007 - 2:51pm — ಶ್ರೀನಿಧಿ

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

ಶ್ರೀನಿಧಿ's picture

Quote:
ಐಟಿ ಅಲ್ಲದ ನನ್ನಂಥ ಜನಕ್ಕೆ Microsoft ಬಿಟ್ಟು ಏನೂ ಗೊತ್ತಿರುವುದಿಲ್ಲ, IE ಬಿಟ್ಟು ಇನ್ನೊಂದು ಬ್ರೌಸರ್ ಉಪಯೋಗಿಸಿರುವುದಿಲ್ಲ, Windows media player ಬಿಟ್ಟು ಇನ್ನೊಂದು ಮೀಡಿಯಾ ಪ್ಲೇಯರ್ ಗೊತ್ತಿರುವುದಿಲ್ಲ.

Sad

ನಿಜವಾದ ಮಾತಾದರೂ ಆಲೂಗೆಡ್ಡೆ ಬಿಟ್ಟು ಬೇರೆ ತರಕಾರಿ ಉಪಯೋಗಿಸಿಲ್ಲ ಎನ್ನುವ ಉತ್ತರಪ್ರದೇಶದ ನನ್ನ ಗೆಳೆಯನೊಬ್ಬನ ನೆನಪಾಯ್ತು. Smiling. (ತಮಾಷೆ-ಮನಸ್ಸಿಗೆ ಹಚ್ಚಿಕೊಳ್ಳಬೇಡಿ)
ಖಂಡಿತ firefox ಉಪಯೋಗಿಸಿ. ಸದ್ಯಕ್ಕೆ ಅದೂ ಒಂದು choice ಅಂತಿಟ್ಟುಕೊಳ್ಳಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
April 26, 2008 - 11:17am — satyajoshi

ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)

satyajoshi's picture

ಧನ್ಯವಾದಗಳು ...

ನಾನೂ ಕೂಡ firefox ಬಳಸುತ್ತಿದ್ದೇನೆ ... ಆದರೆ ಕನ್ನಡ unicode ಅಕ್ಷರಗಳನ್ನು ಸರಿಯಾಗಿ ಓದಲಾಗುತ್ತಿಲ್ಲ. ಗೊತ್ತಿದ್ದ ಎಲ್ಲಾ ವೆಬ್ ಸೈಟುಗಳನ್ನು ನೋಡಿದೆ. "ಸಂಪದ" ಮತ್ತೆ "ಕೆಂಡಸಂಪಿಗೆ" ಓದಲು IE ಯನ್ನೇ ಬಳಸುತ್ತಿರುವೆ.

- ಸತ್ಯನಾರಾಯಣ ...

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯ
  • ಕನವರಿಕೆಯೊಳು ಕಂಡೆ ಕಳವಳವ..!!
  • ನಿನ್ನ ನೋಟಕೆ ಜಗ ನಡುಗಿದೆ.....!!
  • ನಾನು ಗಾಂಧಿಯನ್ನು ಕೊಲ್ಲಲಿಲ್ಲ
  • ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
Syndicate content

ಲೇಖಕರು

keshav's picture

ಪರಿಚಯ

I am a radiologist (doctor) by profession, but I spend lots of time in literature, music, movies and internet.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಗುಣಕ್ಕೆ ಮಚ್ಚರಮುಂಟೇ?

— ರನ್ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator