ಒಂದಿಷ್ಟು ನೀಲುಗಳು
"ಮುಂದಿನ ಜನ್ಮ ಅಂತ ಒಂದಿದ್ದರೆ
ಗಂಡಿನ ಚಪಲ ಇರುವ ಹೆಣ್ಣಾಗಿ ಹುಟ್ಟಿಸಯ್ಯಾ"
ಅಂತ ಗಂಡ ಬರೆದ ಪದ್ಯ ಸಿಕ್ಕು
ಮದುವೆ ರ್ರೇಷ್ಮಸೀರೆಗಳ ನಡುವೆ ಅಡಿಗಿಸಿಟ್ಟ
ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ನೆನೆಸಿಕೊಂಡು
ಮುಸಿ ಮುಸಿ ನಕ್ಕಳು
-----------------------------------------------------------
ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ
ಬಿ.ಎಫ್.ಗಳಲ್ಲಿ ಗಂಟೆಗಟ್ಟಲೇ ನಡೆಯುವ ನೀರಸ ಸಂಭೋಗದಂತೆ
ಎಂದು
ಇನ್ನೂ ಹಲ್ಲುಜ್ಜಿರದ ನನ್ನ ಬಾಯಿಗೆ ಗಟ್ಟಿ ಚುಂಬಿಸಿ
ಇದು ಕವಿತೆ ಎಂದಳು
--------------------------------------------------------------------------------
ಏಕಾಂತ ಮತ್ತು ಮೌನವಿಲ್ಲದೇ ಹೊಸದೇನೂ ಸೃಷ್ಟಿಯಾಗುವುದಿಲ್ಲ
ಎಂದು ಕವಿ ಹೇಳಿದ್ದಕ್ಕೆ
ನಾನಿಲ್ಲದೇ ಮಗುವನ್ನು ಸೃಷ್ಟಿಸು ನೋಡೋಣ
ಎಂದು ಕಣ್ಣುಮಿಟುಕಿಸಿದಳು
-----------------------------------------------------------------------------------
ಜಾತಿ ಧರ್ಮ ವರ್ಣ ಗಡಿ
ಇತಿಹಾಸದುದ್ದಕ್ಕೂ
ಚೆಲ್ಲಿದ ರಕ್ತ ದ್ವೇಷ ವೈಷಮ್ಯ
ಕುರಿತು ತಲ್ಲಣಗೊಂಡು ಮಾತಾಡುತ್ತಿದ್ದರೆ
ತನ್ನ ತುಂಬಿದ ಹೊಟ್ಟೆಯ ಮೇಲೆ ನನ್ನ ಕೈಯಿಟ್ಟು
'ಭವಿಷ್ಯ' ಎಂದು ನಿದ್ದೆ ಹೋದಳು
-------------------------------------------------------------------------------
ದಿನ ಪೂರ್ತಿ ಕೂತು ಬರೆದ ಕವನ
ಓದೇ ಅಂದರೆ
ಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತು
ಈ ಮುತ್ತಿಗಿಂತ ನಿನ್ನ ಕವನ ಚೆನ್ನ
ಎಂದರೆ ಮಾತ್ರ ಓದುತ್ತೇನೆ
ಎಂದು ಮಾಯವಾದಳು
-----------------------------------------------------------------------------------
ತಲೆಕೂದಲು ಡೈ ಮಾಡಿಕೊಳ್ಳುವಾಗ
ಕನ್ನಡಿಯಲ್ಲಿ
ಎದೆಯ ಬಿಳಿ ಕೂದಲು ಕಂಡು
ಗಾಬರಿಯಾದ
---------------------------------------------------------------------------------------

- keshav ರವರ ಬ್ಲಾಗ್
- Login or register to post comments
- 464 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಒಂದಿಷ್ಟು ನೀಲುಗಳು
ಕೇಶವ ಅವರೇ..
ಎಲ್ಲವು ಚನ್ನಾಗಿದೆ.. ಕೆಲವನ್ನ ಹಿಂದೆ ಕೇಳಿದಂತನ್ನಿಸ್ತಿದೆ...
ತಪ್ಪು ತಿಳಿಯಬೇಡಿ, ಎಲ್ಲವೂ ನಿಮ್ಮದೇ?
ನಿಮಗೆ ನೀಲುಗಳಲ್ಲಿ ಹುರುಪಿದ್ರೆ, ಅನಿವಾಸಿಯವರದನ್ನು ಓದಿ, ಚನ್ನಾಗಿರ್ತದೆ.
ಉ: ಒಂದಿಷ್ಟು ನೀಲುಗಳು
ಹೌದು, ಹಿಂದೊಮ್ಮೆ (ಬಹುಶಃ ಕೇಶವರ ಬ್ಲಾಗ್ ಸ್ಪಾಟ್ ಬ್ಲಾಗಿನಲ್ಲಿ) ಇವನ್ನು ಓದಿದ ನೆನಪು.
--
ನನ್ನ ಬ್ಲಾಗ್:
ಪರಿವೇಶಣ | PariveshaNa