ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › keshav ರವರ ಬ್ಲಾಗ್

ಬ್ಯಾಗೇಜ್ ಪ್ರಕರಣ

September 11, 2007 - 2:24am — keshav

ಲಂಡನ್ನಿನಿಂದ ಮುಂಬೈಗೆ, ಅಲ್ಲಿಂದ ಬೆಂಗಳೂರಿಗೆ ಇಳಿದರೆ ನಮ್ಮ ಮೇನ್ ಬ್ಯಾಗೇಜ್ ಮಿಸ್ಸಿಂಗ್! ಕಂಕುಳಲ್ಲಿ ಮಗುವನ್ನು, ಕೈಯಲ್ಲಿ ಹೆಂಡತಿಯನ್ನು ಹಿಡಿದುಕೊಂಡು ೧೮ ಗಂಟೆ ನಿದ್ದೆಯಿಲ್ಲದಿದ್ದರೂ ಖುಷಿಯಿಂದ ನಮ್ಮ ಕನ್ನಡ ನೆಲಕ್ಕೆ ಇಳಿದರೆ, ಶುರುವಾಯಿತೇ ರಾದ್ಧಾಂತ ಎಂದು ಕೆಂಡಾಮಂಡಲ (ಅಂದ್ರೇನು ಅಂತ ಕೇಳಬೇಡಿ) ಕೋಪ ಬಂದು, ಅಲ್ಲಿನ ಸ್ಟಾಫ್ ಗೆ ಎಗ್ಗಾ ಮುಗ್ಗಾ ಉಗಿದೆ, ಕನ್ನಡ-ಇಂಗ್ಲೀಷು ಎರಡೂ ಸೇರಿಸಿ. ಪಾಪ ಇಬ್ಬರೂ ಸ್ಟಾಫ್ ಗಳು ನೀರಿಳಿದರು. ಅಲ್ಲಿ ಇಲ್ಲಿ ಫೋನಿಸಿ, ನಮ್ಮ ಲಗೇಜು ಇನ್ನೊಂದು ವಿಮಾನದಲ್ಲಿ ಹೊರಟಿದೆಯೆಂದೂ, ನಮಗೆ ಕಂಪ್ಲಿಮೆಂಟರಿ ಬ್ರೇಕ್ ಫಾಸ್ಟ್ ಕೊಡುವುದಾಗಿಯೂ, ಮೈಸೂರಿಗೆ ಅವರ ಖರ್ಚಿನಲ್ಲೇ ನಮ್ಮ ಬ್ಯಾಗೇಜ್ ಸಮೇತ ಬಿಟ್ಟುಕೊಡುವುದಾಗಿಯೂ ಹೇಳಿ - ಹಾಗೇ ಮಾಡಿದರು. ಅಷ್ಟಾದರೂ ನನ್ನ ಕೋಪ ಆರಲೇ ಇಲ್ಲ.

ಇದೆಲ್ಲ ಆದ ಮೇಲೆ ಯೋಚಿಸಿದೆ: ಇದೇ ರೀತಿ ಲಂಡನ್ನಿನ ಹೀತ್ರೋ ಏರ್ಪೋರ್ಟಿನಲ್ಲಿ ಆಗಿದ್ದರೆ, ನಾನು ರೇಗಲು ಶುರು ಮಾಡುತ್ತಿರುವಂತೆಯೇ, 'Why are you shouting at me?' ಎಂದು ನನ್ನ ಮೇಲೇ ರೇಗುತ್ತಿದ್ದರು. ನಾನು ಇನ್ನೂ ರೇಗಲು ಶುರುವಚ್ಚಿಕೊಂಡರೆ, assault on staff ಎಂದು ನನ್ನನು ವಿಚಾರಣೆಗೆ ಒಳಪಡಿಸುತ್ತಿದ್ದರು. ನಾನು ರೇಗದೇ ಸೌಮ್ಯವಾಗಿಯೇ ಕೇಳಿದೆ ಎಂದಿಟ್ಟುಕೊಳ್ಳಿ, ಆಗ ಅವರು ಒಂದು ಪೇಪರ್ ಕೊಟ್ಟು ಒಂದು ಲಿಖಿತ ಅರ್ಜಿ ಬರೆಯಲು ಹೇಳುತ್ತಿದ್ದರು. ನನ್ನ ಬ್ಯಾಗೇಜು ನೆಕ್ಸ್ಟ್ ಫ್ಲೈಟಿನಲ್ಲಿ ಬರುತ್ತಿರುವಂತೆಯೇ, ನನಗೆ ಫೋನಿಸಿ ಯಾ ಈಮೇಲಿಸಿ ಕಳಿಸುತ್ತೇನೆ, ಬಂದು ತೆಗೆದುಕೊಂಡು ಹೋಗಿ ಎನ್ನುತ್ತಿದ್ದರು. ನಾನು ತೆಪ್ಪಗೆ ತಿ.. ಮುಚ್ಚಿಕೊಂಡು ನನ್ನ ಬ್ಯಾಗೇಜು ಬರುವುದನ್ನು ಕಾಯುತ್ತ ಅಲ್ಲೇ ಕೂತಿರುತ್ತಿದ್ದೆ, ಅಲ್ಲವೇ?

  • ಪ್ರಯಾಣ
  • ಹರಟೆ
~.~
  • keshav ರವರ ಬ್ಲಾಗ್
  • Login or register to post comments
  • 422 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 11, 2007 - 2:57am — betala

ಉ: ಬ್ಯಾಗೇಜ್ ಪ್ರಕರಣ

betala's picture

ಇಂಥ ಮಿಸ್ಸಿಂಗ್ ಪ್ರಕರಣಗಳು ನೀವು ಬ್ರಿಟೀಶ್ ಎರ್ ವೇಸ್ ನಲ್ಲಿ ಆಗೋದು ಸಹಜ ... ಅವರ ವಿಮಾನದಲ್ಲಿ ಜಗತ್ತಿನಲ್ಲಿ ಎಲ್ಲಿ ಹೋದರು ತೊಂದರೆ ತಪ್ಪಿದಲ್ಲ ...

ಒಬ್ಬ ನನ್ನ ಸ್ನೇಹಿತ ೨೦ ದಿನಗಳ ನಂತರ ತನ್ನ ಬ್ಯಾಗೇಂಜ್ ಕಷ್ಟಪಟ್ಟು ದಕ್ಕಿಸಿಕೊಂಡ !!! ಆದರೆ ಅವನು ಹೋಗಿದ್ದು ೨೫ ದಿನಗಳ ರಜೆ !!!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 11, 2007 - 10:12pm — kalpana

ಉ: ಬ್ಯಾಗೇಜ್ ಪ್ರಕರಣ

kalpana's picture

ನೀವ್ ಹೇಳೋದು ನಿಜ ಸ್ವಾಮಿ. ನಾವು ಪರದೇಶದಲ್ಲಿ ನಮ್ಮ best behavior ತೋರಿಸ್ತೀವಿ. ಇಲ್ಲಿ ಹೇಗಿದ್ರೂ ನಡೆಯತ್ತೆ ಎಂಬ ಧೋರಣೆ. ಆದ್ದರಿಂದ್ಲೇ ಈ ಸರ್ತಿ ಭಾರತಕ್ಕೆ ಹೋದಾಗ ಆದಷ್ಟು ಒಳ್ಳೆಯವಳ ತರಹ ಇರೋದಿಕ್ಕೆ ಪ್ರಯತ್ನ ಪಟ್ಟೆ. ಅಲ್ಲಿ security check ನಡೆಸಿದಾಗ, baggage checkin ಮಾಡ್ದಾಗ, ನಾನು thank you ಅಂತ ನಗನಗತಾನೆ ಇದ್ದೆ. ಇದ್ಯಾವುದೋ ಐಲು ಪಾಲ್ಟಿ ಅಂತ ಅವರು ಅಂನ್ಕೊಂಡಿದ್ರೆ ಹೆಚ್ಚಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)
  • ನಾನು ಗಾಂಧಿಯನ್ನು ಕೊಲ್ಲಲಿಲ್ಲ
  • ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
  • ಗಬಾಳ
  • ಸಾಹಿತ್ಯ
Syndicate content

ಲೇಖಕರು

keshav's picture

ಪರಿಚಯ

I am a radiologist (doctor) by profession, but I spend lots of time in literature, music, movies and internet.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:17pm
  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 116 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator