ಇವರೇ ಎನ್ ಆರ್ ಐ ಗಳೇ?
ನಮ್ಮ ಮನೆ ಇರೋದು ಲಂಡನ್ನಿನ ಹ್ಯಾರೋ (ನಾನು ನನ್ನ ಗೆಳೆಯ ಹಾರೂಕೇರಿ ಅಂತ ತಮಾಷೆ ಮಾಡುತ್ತೇವೆ) ದಲ್ಲಿ. ಇಲ್ಲಿ ಜಾಸ್ತಿ ಜನ ಭಾರತೀಯರು, ಪಾಕಿಸ್ತಾನದವರು ಮತ್ತು ಶ್ರೀಲಂಕದವರು. ಮೊನ್ನೆ ನಮ್ಮ ಮನೆಗೆ ಬಂದವರನ್ನು (ಅವರು ಇಂಗ್ಲಂಡಿಗೆ ಬಂದು ೧೦ ವರ್ಷವಾದವು) ಕರೆದುಕೊಂಡು ಹ್ಯಾರೋ-ಅನ್-ದ-ಹಿಲ್ ನ ಶಾಪಿಂಗ್ ಮಾಲ್ ಗೆ ಹೋಗಿದ್ದೆವು. ಅಲ್ಲಿ ವಿಂಡೊ ಷಾಪಿಂಗ್ ಮಾಡುತ್ತಿರುವಾಗ, ಅವರು ಹೇಳಿದರು, " ಅಯ್ಯೋ, ಎಷ್ಟು ಕೆಟ್ಟದಾಗಿದೆ ಈ ಶಾಪಿಂಗ್ ಜಾಗ, ಬರೀ ಇಂಡಿಯನ್ಸ್".
ಮನೆಗೆ ಬಂದು ಮಾತಾಡುತ್ತ ಕುಳಿತಿದ್ದೆವು, ಅಮೇರಿಕದ ಬಗ್ಗೆ ಮಾತು ಬಂತು. ಆಗ ಅವರು ಹೇಳಿದರು, " ಅಯ್ಯೊ, ನಾನಂತೂ ಅಮೇರಿಕಕ್ಕೆ ಹೋಗುವುದಿಲ್ಲ, ಅಮೇರಿಕನೂ ಇಂಡಿಯಾದಂತೆ, ತುಂಬ ಒರಟು ಜನ. ಇಂಗ್ಲಂಡಿನ ಜನ ಆರ್ಟಫಿಸಿಯಲ್ ಆದರೂ ಎಷಟು ಚೆನ್ನಾಗಿ ಬಿಹೇವ್ ಮಾಡುತ್ತಾರೆ".

- keshav ರವರ ಬ್ಲಾಗ್
- Login or register to post comments
- 504 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಇವರೇ ಎನ್ ಆರ್ ಐ ಗಳೇ?
ನಂನಿ!
ಉ: ಇವರೇ ಎನ್ ಆರ್ ಐ ಗಳೇ?
ಒಳಗಡೆ ಕೊಟ್ಟಿ ಮನಸ್ ಇಟ್ಟುಕೊಂಡು ಸುಳ್ ಸುಳ್ಳೇ ನಗ್ ನಗತಾ ಮಾತಾಡಿದ್ರ ಏನ್ ಬಂತು? ನಮ್ಮ್ ಇಂಡಿಯಾದಲ್ಲಿ ಹಂಗ್ ಅಲ್ಲಾ, ಒಳಗೂ ಹೊರಗೂ ಒಂದೇ ತರ. ನಮ್ ಹಳ್ಳಿಗಳ್ ಕಡೆ ಬರ್ರಿ, ಎಸ್ಟ್ ಒಳ್ಳೇ ಮಂದಿ ನಮ್ ಹಳ್ಳಿಗಳ ಕಡೆ.
ಇರಲಿ ತುಗೋರಿ, ಎಲ್ಲಾ ಎನ್.ಆರ್.ಐಗಳೂ ಅಂತವರೇ ಏನ್ ಅಲ್ಲಾ. ಅಮೇರಿಕದವರಿಗಿಂತ ಯುರೋಪಿಯನ್ನರು ಸಿಸ್ತ್ ಹೆಚ್ಚು ಅನಸ್ತೈತ್ರಿ....
ಉ: ಇವರೇ ಎನ್ ಆರ್ ಐ ಗಳೇ?
ಅಯ್ಯೋ ಅಣ್ಣ...
ಹಿಂಗೆ ಯರೊಪೊರು ಚನ್ನು ಅಮೆರಿಕದೊರಗಿಂತ ಅಂತೆಲ್ಲ ಅಂನಕ್ಕೆ ಬರಕ್ಕಿಲ್ಲ. ಅಮೆರಿಕದೊರ ಒಂದ್ ತರ, ಈ ಯುರೊಪೊರ್ ಒಂದ ತರ.
ಲೋಗದಾಗೆ ಬಲು ಬಿಂಕುಬುದ್ದಿ ಇರೋ ಮಂದಿ ನಂಮ ಇಂಡಿಯ ಪಾಕಿಸ್ತಾನದಾಗಾ ಅವ್ರಂತೆ. ಅಲ್ಲಿ ದೊಡ್ಡದೊಡ್ಡ ಮಂದಿ ಬಿಂಕಿದ್ರೆ, ಇಲ್ಲಿ ಹಾದಿಲ್ ಕಾಯಿಪಲ್ಲೆ ಮಾರೊನಿಂದ ಹಿಡಿದು, ನಮ್ನಾಳೋ ಮಂತಿರಿಗಳ ತನಕ ಎಲ್ರೂ ಬಲ್ ನನ್ ಮಕ್ಳೇ!!
======
ಬಿಂಕು = ಮೋಸ, cunning