ಈಗಿನಂತೆ 4 ಸದಸ್ಯರು ಮತ್ತು 94 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮನಸಿನ ಹೆಜ್ಜೆ ಹಿಡಿದು
sinchanabhat's picture
17
Mar
2006
ಪುಟ
ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ...
ಪ್ರತಿಕ್ರಿಯೆಗಳು: 10
ಹಿಟ್ಸ್ : 1,539
ಜೇನು ಕುರುಬರ ‘ಮುಚ್ಚ ಬೇಟೆ’; ನನ್ನ ಕಾಡಿದ ಅಪರಾಧಿ ಪ್ರಜ್ಞೆ.
harshavardhan v.sheelavant's picture
harshavardhan v. sheelavant
08
Jul
2010
ಪುಟ

...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,089
ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯
anilkumar's picture
ಎಚ್.ಎ. ಅನಿಲ್ ಕುಮಾರ್
14
Aug
2010
ಬ್ಲಾಗ್ ಬರಹ

(೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್‍ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ....

ಪ್ರತಿಕ್ರಿಯೆಗಳು: 1
ಹಿಟ್ಸ್ : 730
"ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್."....!
venkatesh's picture
Venkatesh/ವೆಂಕಟೇಶ್/ಹೊರಂಲವೆಂ
06
Nov
2006
ಪುಟ
'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'..... ಈ ಹಾಡನ್ನು ರಾಗವಾಗಿ ಹೇಳುತ್ತ, ಭಾವುಕತೆಯ ಉತ್ತುಂಗದಲ್ಲಿ ತೇಲುತ್ತಾ ಅವನ ಲೋಕದಲ್ಲೇ ಕಳೆದುಹೋಗುತ್ತಾನೋ ಎನ್ನಿಸುವಷ್ಟು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,248
ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Dec
2005
ಪುಟ
ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ...
ಪ್ರತಿಕ್ರಿಯೆಗಳು: 7
ಹಿಟ್ಸ್ : 2,084
ಗೀತ ಗೋವಿಂದ
ಶ್ರೀನಿಧಿ's picture
ಶ್ರೀನಿಧಿ ನರಸಿಂಹಾಚಾರ್
07
Apr
2006
ಬ್ಲಾಗ್ ಬರಹ
ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,562
ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
Satyaprakash.H.K.'s picture
ಸತ್ಯಪ್ರಕಾಶ್ ಹೆಚ್ ಕೆ
19
Apr
2006
ಬ್ಲಾಗ್ ಬರಹ
ಆರೋಗ್ಯಸತ್ಯ ಪ್ರಕೃತಿ ಕೇಂದ್ರ ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ. ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,565
ಭೀಮೇಶ್ವರ ದೇವಾಲಯ - ನೀಲಗುಂದ
rajeshnaik111's picture
20
Nov
2009
ಪುಟ

ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,075
ಆರೋಗ್ಯದ ಲೇಖನಗಳು
Satyaprakash.H.K.'s picture
ಸತ್ಯಪ್ರಕಾಶ್ ಹೆಚ್ ಕೆ
25
Mar
2006
ಬ್ಲಾಗ್ ಬರಹ
ನಾರಿನಿಂದ ಆರೋಗ್ಯಭಾಗ್ಯ ಹೂವಿನಿಂದ ನಾರು ಸೇರುವುದು ಸ್ವರ್ಗ ಆಹಾರದಲಿ ನಾರಿಲ್ಲದಿರೆ ಸ್ವರ್ಗಕೆ ಬೇಗ ಶರೀರದ ವರ್ಗ. 'ನಾರು-ಬೇರುಗಳು' ಎಂಬ ಉಪ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,910
ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯
anilkumar's picture
ಎಚ್.ಎ. ಅನಿಲ್ ಕುಮಾರ್
17
Apr
2011
ಬ್ಲಾಗ್ ಬರಹ

 (೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ....

ಪ್ರತಿಕ್ರಿಯೆಗಳು: 1
ಹಿಟ್ಸ್ : 486

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮುಂಗಾರುಮಳೆ ಮತ್ತು ದ್ವೀಪ

ಮುಂಗಾರುಮಳೆ ಮತ್ತು ದ್ವೀಪ

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (ಕನ್ನಡ ಬ್ಲಾಗುಲೋಕ) ಕೊಟ್ಟುಕೊಂಡು ಸುಸ್ತಾಗಿ ಏನನ್ನೂ ಬರೆದಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ತುಂಬ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ. ಅನಿವಾಸಿಯವರು 'ಮುಂಗಾರು ಮಳೆ' ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಯನ್ನು ಸಂಪದದಲ್ಲಿ ಬರೆದಾಗ ಅದಕ್ಕೆ ಬಂದ ಖಾರವಾದ ಪ್ರತಿಕ್ರಿಯೆಗಳನ್ನು ಓದಿದ ಮೇಲಂತೂ ತುಡಿತ ಇನ್ನೂ ಜಾಸ್ತಿಯಾಯಿತು.

ನಾನು ನನ್ನ ವಿಚಾರವನ್ನು ಸರಳೀಕರಿಸಲು ಚಿತ್ರ ನೋಡುಗರನ್ನು ಎರೆಡು ವಿಭಾಗ ಮಾಡುತ್ತೇನೆ (ಇದು ತುಂಬ ಸರಳೀಕರಣ ಎಂದು ನನಗೆ ಗೊತ್ತು), ಒಂದು 'ಮುಂಗಾರುಮಳೆ'ಯಂಥ ಚಿತ್ರಗಳನ್ನು ಹೆಚ್ಚಾಗಿ ಇಷ್ಟಪಡುವವರು, ಇನ್ನೊಂದು 'ದ್ವೀಪ'ದಂಥ ಚಿತ್ರಗಳನ್ನು ಹೆಚ್ಚಾಗಿ ಇಷ್ಟಪಡುವವರು.

ಈಗ ಮೊದಲನೇ ಕೆಟಗರಿಯ ಜನರನ್ನು ನೋಡೋಣ: ಮುಂಗಾರುಮಳೆ'ಯಂಥ ಚಿತ್ರಗಳನ್ನು ಇಷ್ಟಪಡುವ ಜನ, 'ದ್ವೀಪ'ದಂಥ ಚಿತ್ರಗಳ ಹೆಸರು ಕೇಳುತ್ತಿದ್ದಂತೇ ಮೂಗುಮುರಿಯಲು ಆರಂಭಿಸುತ್ತಾರೆ, 'ದ್ವೀಪ'ದಂಥ ಚಿತ್ರಗಳನ್ನು ನೋಡಿ ಖುಷಿಪಡುವ ಜನರನ್ನು ಕಂಡರೆ ಅವರು ಬೇರೆ ಗ್ರಹದಿಂದ ಬಂದವರೇನೋ ಎಂಬಂತೆ ವಿಚಿತ್ರವಾಗಿ ನೋಡುತ್ತಾರೆ. ಅವರ ಪ್ರಕಾರ 'ದ್ವೀಪ'ದಂಥ ಚಿತ್ರಗಳನ್ನು ನೋಡುವುದು waste of time and money, ಸಕತ್ ಬೋರು, ಹಳ್ಲಿಯಿಶ್. ಅಂಥ ಚಿತ್ರಗಳ ಬಗ್ಗೆ ಅವರ standard ಮಾತು, 'ಅಯ್ಯೋ ಬೀಡಿ, ಅಂಥ ಚಿತ್ರಗಳಲ್ಲಿ ಏನಿರುತ್ತೆ, ಒಬ್ಬ ಮನುಷ್ಯ ಆ ಕಡೆಯಿಂದ ಈ ಕಡೆವರೆಗೆ ಬರುವುದನ್ನು ಹತ್ತು ನಿಮಿಷ ತೋರಿಸುತ್ತಾರೆ, ಒಂದು ಮೂಲೆಯಲ್ಲಿ ಒಬ್ಬನನ್ನು ಗಂಟೆಗಟ್ಟಲೇ ಕೂರಿಸಿ ಆರ್ಟ್ ಸಿನಿಮಾ ಅನ್ನುತ್ತಾರೆ'. ಅಥವಾ, 'either premarital or extramarital sex ಬಿಟ್ಟರೆ ಇಂಥ ಚಿತ್ರಗಳಲ್ಲಿ ಏನಿರುತ್ತೆ, ಯಾವಾಗ ನೋಡಿದರೂ ಹಳ್ಳಿ ಕತೆ, ಹಾಡು ಇರುವುದಿಲ್ಲ, ಒಳ್ಳೆ ಡ್ರೆಸ್ ಇರುವುದಿಲ್ಲ, ಸಕತ್ ಬೋರ್’ ಎಂದು ಹೆಂಗಸರ ಅಂಬೋಣ.
ಈಗ ಎರಡನೇ ಕೆಟಗರಿಯ ಜನರನ್ನು ನೋಡೋಣ: "ದ್ವೀಪ"ದಂಥ ಚಿತ್ರಗಳನ್ನು ಇಷ್ಟಪಡುವ ಜನರು, "ಮುಂಗಾರುಮಳೆ"ಯಂಥ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದಂತೆ, ಇಂಥ ಚಿತ್ರಗಳು ಬಾಲಿಷ, childish, ಕ್ಲೀಷೆಗಳ ಆಗರ, stereotyped characters, ಬದುಕಿನ ಸೂಕ್ಷ್ಮತೆಗಳು ಒಂಚೂರೂ ಗೊತ್ತಿರದ ಎಲ್ಲವನ್ನೂ black and white ಮಾಡುವ, ಹೆಂಗಸರನ್ನು ಸೆಕ್ಸ್ ಗೊಂಬೆಗಳ ಹಾಗೆ ತೋರಿಸುವ "ಕೀಳು" ಮನರಂಜನೆ ಎಂದು ಹೇಳುತ್ತಾರೆ. ಅಂಥ ಚಿತ್ರಗಳನ್ನು ನೋಡುವವರು ಬುದ್ಧಿಯಿಲ್ಲದವರು ಎಂಬಂತೆ, ತಮಗೊಬ್ಬರಿಗೇ ಬುದ್ಧಿಯಿದೆ ಎನ್ನುವಂತೆ ಮಾತಾಡುತ್ತಾರೆ.
'ಮುಂಗಾರುಮಳೆ'ಯಂಥ ಚಿತ್ರಗಳನ್ನು ಇಷ್ಟಪಡುವ ಜನರಿಗೆ 'ದ್ವೀಪ'ದಂಥ ಚಿತ್ರಗಳ ಬಗ್ಗೆ ಗಂಟೆಗಟ್ಟಲೇ ಕೊರೆದರೂ, ಅವರು ಅರ್ಥೈಸಿಕೊಳ್ಳುವುದು ಏನೆಂದರೆ, ಅಂಥ ಚಿತ್ರಗಳನ್ನು ತೆಗೆಯುವುದು ನೋಡುವುದು ಮತ್ತು ಚರ್ಚಿಸುವುದು ದಂಡಪಿಂಡ. ಈಗೀಗ ಈ 'multiplex ಚಿತ್ರ'ಗಳನ್ನು (ಉದಾ: ಹಿಂದಿಯ life in Metro, page 3, Mr and Mrs Iyer) ನೋಡಿ ಕೊನೆಗೆ ತೀರ್‍ಪು ಕೊಡುತ್ತಾರೆ, 'Multiplex movies are far better than the movies like ದ್ವೀಪ'.
'ದ್ವೀಪ'ದಂಥ ಚಿತ್ರಗಳನ್ನು ಇಷ್ಟಪಡುವ ಜನರಿಗೆ, "ಮುಂಗಾರುಮಳೆ"ಯಂಥ ಚಿತ್ರಗಳ ಉದ್ದೇಶ ಬರೀ ಮನರಂಜನೆ, ದಿನದ ಕಷ್ಟಗಳನ್ನೆಲ್ಲ ಬದಿಗಿಟ್ಟು ಎರೆಡೂವರೆ ಗಂಟೆ ಬೇರೆ ಪ್ರಪಂಚದಲ್ಲಿ ನಕ್ಕು-ಅತ್ತು ಖುಷಿಪಡಿಸುವುದು ಮಾತ್ರ ಎಂದು ಹೇಳಿದರೂ, ಅವರ ತಕರಾರು, ಅದು ಕೀಳು ಮನರಂಜನೆ, mediocre, ಸ್ವಂತಿಕೆಯಿಲ್ಲದೆ ಅಂಧಾನುಕರಣೆ.
'ಮುಂಗಾರುಮಳೆ'ಯಂಥ ಚಿತ್ರಗಳನ್ನು ಮೆಚ್ಚುವವರು, "ದ್ವೀಪ"ದಂಥ ಚಿತ್ರಗಳನ್ನು ಮಾಡುವುದು ತುಂಬ ಸುಲಭ ಎಂದುಕೊಳ್ಳುತ್ತಾರೆ, ಅದಕ್ಕವರು ಕೊಡುವ ಕಾರಣ: ಸ್ಟಾರ್ ಗಳಿಗೆ ದುಡ್ಡುಕೊಡಬೇಕಾಗಿಲ್ಲ, ಸೆಟ್ ಗಳಿಗೆ ಖರ್ಚಿಲ್ಲ, ವಿದೇಶಕ್ಕೆ ಹೋಗಬೇಕಾಗಿಲ್ಲ, ಸಂಗೀತವಿಲ್ಲ. "ದ್ವೀಪ"ದಂಥ ಚಿತ್ರಗಳನ್ನು ಮೆಚ್ಚುವವರೂ ಹಾಗೇ ಹೇಳುತ್ತಾರೆ, ಅದಕ್ಕವರು ಕೊಡುವ ಕಾರಣ: ಒಂದಿಷ್ಟು ದುಡ್ಡು ಇದ್ದರಾಯಿತು, ಕತೆ ಬೇಕಾಗಿಲ್ಲ, ಸಂವೇದನಶೀಲತೆ ಬೇಕಿಲ್ಲ, ಒಂದಿಷ್ಟು ಹಾಡು, ಒಂದಿಷ್ಟು skinshow, ಒಂದಿಷ್ಟು ಸೆಂಟಿಮೆಂಟು ಇದ್ದರಾಯಿತು.
ಆದರೆ ಖರೆ ಹೇಳಬೇಕೆಂದರೆ 'ಮುಂಗಾರುಮಳೆ'ಯಂಥ ಚಿತ್ರಗಳನ್ನು ತೆಗೆಯುವವರಿಗೆ 'ದ್ವೀಪ'ದಂಥ ಚಿತ್ರಗಳನ್ನು ತೆಗೆಯಲು ಬರುವುದಿಲ್ಲ. "ರಂಗೀಲಾ"ದಂಥ ಚಿತ್ರದಿಂದ ಪಡ್ಡೆಹುಡುಗರನ್ನೆಲ್ಲ ಹೌಹಾರಿಸಿದ ರಾಮಗೋಪಾಲವರ್ಮಾನ 'ನಿಶಬ್ದ್' ನೋಡಿ, ನಾನು ಹೇಳುವುದೇನು ಅಂತ ಗೊತ್ತಾಗುತ್ತೆ. ಹಾಗೆಯೇ, "ದ್ವೀಪ"ದಂಥ ಚಿತ್ರಗಳನ್ನು ತೆಗೆಯುವವರಿಗೆ "ಮುಂಗಾರುಮಳೆ"ಯಂಥ ಚಿತ್ರಗಳನ್ನು ತೆಗೆಯಲು ಬರುವುದಿಲ್ಲ ಎಂಬುದೂ ಅಷ್ಟೇ ಖರೆ. 'ಅರ್ಧ್ ಸತ್ಯ್'ನಂಥ ಸಿನಿಮಾ ಮಾಡಿದ ಗೋವಿಂದ ನಿಹಲಾನಿಯ  ಕಮರ್ಷಿಯಲ್ ಚಿತ್ರ "ತಕ್ಶಕ್" ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿರುವುದು (ಎ ಆರ್ ರೆಹೆಮಾನ್ ಸಂಗೀತವಿದ್ದೂ) ಎಲ್ಲರಿಗೂ ಗೊತ್ತೇ ಇದೆ.
ಲಂಕೇಶರನ್ನೂ times of India ದ ಸಂಪಾದಕರನ್ನೂ ಹೋಲಿಸಲು ಸಾಧ್ಯವೇ? ಹಾಗೆ ನೋಡಿದರೆ ಇಬ್ಬರೂ ಪತ್ರಿಕೆ ನಡೆಸುವವರೇ, ಒಬ್ಬನ ಉದ್ದೇಶ ಬದುಕಿನ ಸೂಕ್ಷ್ಮತೆಗಳಿಗೆ, ಸಮಾಜದಲ್ಲಿ ತುಳಿಯಲ್ಪಟ್ಟಿರುವ ಜನಕ್ಕೆ ದನಿಯಾಗಿ ಜಾಹಿರಾತಿಲ್ಲದೇ ಪತ್ರಿಕೆ ನಡೆಸುವದು; ಇನ್ನೊಬ್ಬನದು ಸುದ್ದಿಗಳನ್ನು ವರದಿ ಮಾಡಿ, ಬೆಂಗಳೂರಿನ ಶ್ರೀಮಂತವರ್ಗದ ಪಾರ್ಟಿಗಳನ್ನು ವರದಿಮಾಡಿ, ಜಾಹಿರಾತುಗಳಿಂದ ಹಣದ ಹೊಳೆ ಹರಿಸುವುದು. ಇಬ್ಬರ ಉದ್ದೇಶ, ಗುರಿ ಬೇರೆ ಬೇರೆ ಇರಬೇಕಾದರೆ ಇಬ್ಬರನ್ನೂ ಹೋಲಿಸಿವುದು ಅವರವರ ವೃತ್ತಿಗೇ ಅನ್ಯಾಯ ಮಾಡಿದಂತೆ. ಹಾಗೆಯೇ, ಗಿರೀಶ್ ಕಾಸರವಳ್ಳಿಯಂಥ ನಿರ್ದೇಶಕರನ್ನೂ ಯೋಗರಾಜ್ ಭಟ್ ರಂಥ ನಿರ್ದೇಶಕರನ್ನೂ ಹೋಲಿಸಲು ಸಾಧ್ಯವೇ?
'ದ್ವೀಪ'ದಂಥ ಚಿತ್ರಗಳನ್ನು ಬರೀ "ನೋಡಿ" ಮಜಾಮಾಡಲು ಸಾಧ್ಯವಿಲ್ಲ, ಎಂಬುದು 'ಮುಂಗಾರುಮಳೆ'ಯಂಥ ಚಿತ್ರ ನೋಡುವವರಿಗೆ ಅರ್ಥವಾಗುವುದಿಲ್ಲ; ಮತ್ತು 'ಮುಂಗಾರುಮಳೆ'ಯಂಥ ಚಿತ್ರಗಳನ್ನು "ಹಾಗೆ ಸುಮ್ಮನೆ" ನೋಡಲು "ದ್ವೀಪ"ದಂಥ ಚಿತ್ರ ನೋಡುವವರಿಗೆ ಅರ್ಥವಾಗುವುದಿಲ್ಲ. 
 
ನನ್ನ ಉದ್ದೇಶ ಇಷ್ಟೇ, "ಮುಂಗಾರುಮಳೆ"ಯಂಥ ಚಿತ್ರಗಳನ್ನು enjoy ಮಾಡಿ, ಮನತಣಿಯೇ ನೋಡಿ (ಅರ್ಥೈಸಬೇಡಿ, ರಿಯಾಲಿಟಿ ಹುಡುಕಲು ಹೋಗಬೇಡಿ), ಹಾಡುಗಳನ್ನು ಗುಣುಗುಣಿಸಿ, ನಗಿ, ಅಳಿ; ಅದೇ ಕಾಲಕ್ಕೆ "ದ್ವೀಪ"ದಂಥ ಚಿತ್ರಗಳನ್ನೂ ನೋಡಿ, ಬದುಕಿನ ಸಂಕೀರ್ಣತೆಯನ್ನು, ಸೂಕ್ಷ್ಮತೆಯನ್ನು, ಪ್ರಶ್ನೆಗಳನ್ನು, parallel thinking ಅನ್ನೂ ಬೆಳೆಸಿಕೊಳ್ಳಿ. ಬಾಲಿವುಡ್ ಸ್ಟೈಲಿನಲ್ಲಿ ಹೇಳುವುದಾದರೆ, "ಮುಂಗಾರುಮಳೆ"ಯಂಥ ಚಿತ್ರ ನೋಡಿ "ಹೃದಯ"ತುಂಬಿಕೊಳ್ಳಿ; "ದ್ವೀಪ"ದಂಥ ಚಿತ್ರ ನೋಡಿ "ಮೆದುಳ"ನ್ನು ಜೀವಂತವಾಗಿಟ್ಟುಕೊಳ್ಳಿ.
ಆದರೂ ಒಂದು ಮನವಿ: "ಮುಂಗಾರುಮಳೆ" ಯಂಥ ಚಿತ್ರಗಳನ್ನು  ಆನಂದಿಸುವವರೇ, ನಿಮ್ಮ ಮೆಚ್ಚಿನ ಚಿತ್ರ ನೂರುದಿನ ಓಡಲಿ, ೨೫ ವಾರ ಕಾಣಲಿ, ಸಿಡಿಗಳು ಲಕ್ಷ ಲಕ್ಷ ಸೇಲ್ ಆಗಲಿ, ಸಂತೋಷವೇ! ಆದರೆ, ಅದೇ ಕಾಲಕ್ಕೆ " ದ್ವೀಪ" ದಂಥ ಸೂಕ್ಷ್ಮ, ಸಂವೇದನಶೀಲ ಚಿತ್ರಗಳನ್ನು ಅಸಡ್ಡೆಯಿಂದ ನೋಡದೇ, ಅವುಗಳನ್ನು  ಅರ್ಥಮಾಡಕೊಳ್ಲಲಿ ಪ್ರಯತ್ನಿಸಿ, ಪ್ರೊತ್ಸಾಹಿಸಿ, ಏಕೆಂದರೆ ಅಂಥ ಚಿತ್ರಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು, ನಮ್ಮ ನಾಡಿನ ಜೀವನಾಡಿಗಳು, ನಮ್ಮ ಭಾಷೆಯ ನಿಜ ಪ್ರತಿಮೆಗಳು. 
 
Average: 5 (1 vote)
1938 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
honnung's picture
16
Jul
2007
11:25

ಉ: ಮುಂಗಾರುಮಳೆ ಮತ್ತು ದ್ವೀಪಕೆಲವು ದಿನಗಳ ಹಿಂದೆ ಉದಯ ಚಾನೆಲ್ಲಿನಲ್ಲಿ ರಾತ್ರಿ 'ದ್ವೀಪ' ಚಿತ್ರ ಮೂಡಿ ಬಂದಿತ್ತು. ನಾನು ಮೊದಲು ಅದನ್ನು ನೋಡಿರಲಿಲ್ಲ. ಹಾಗಾಗಿ ಬೆಳಿಗ್ಗೆ ಎರಡರವರೆಗೆ ಕೂತು ಪೂರ್ತಿ ನೋಡಿಯೇ ಬಿಟ್ಟೆ. ಅದರಲ್ಲಿ ಎಲ್ಲರ ಅಭಿನಯವೂ ಚೆನ್ನಾಗಿದೆ. ಆ ಊರು ಯಾವುದೋ ಗೊತ್ತಿಲ್ಲ, ಇದಕ್ಕೆ ಬೇಕಾದ ಸ್ಥಳ ಚೆನ್ನಾಗಿ ಆರಿಸಿದ್ದಾರೆ. ಆದರೆ ಆ ಚಿತ್ರದ ಕೆಲವು ಸನ್ನಿವೇಶಗಳನ್ನು ಹೇಗೆ ಚಿತ್ರೀಕರಿಸಿರಬಹುದು ಎಂಬುದು ಕುತೂಹಲ ಕೆರಳಿಸುತ್ತದೆ. ಆ ಮನೆಯಲ್ಲಿ ನೀರು ತುಂಬಿಕೊಳ್ಳೋದು ತುಂಬಾ ಕಷ್ಟದ ಟೇಕ್ ಆಗಿರಬಹುದು. ನೀವು ಹೇಳೋದು ನಿಜ ಮುಂಗಾರು ಮಳೆಯ ಜಿಟಿಪಿಟಿ ಮಳೆಗೂ ದ್ವೀಪದ ಜಿಟಿಪಿಟಿ ಮಳೆಗೂ ತುಂಬಾ ವ್ಯತ್ಯಾಸವಿದೆ. ದ್ವೀಪದಲ್ಲಿ ಕಥೆ ನಿಧಾನವಾಗಿ ಸಾಗಿ ಎಲ್ಲಾ ಪಾತ್ರಗಳನ್ನು ಒಂದೊಂದಾಗಿ ನಿದಾನವಾಗಿಯೇ ಅರ್ಥ ಮಾಡಿಕೊಳ್ಳುತ್ತಿರಿ. ಹಾಗೆ ಅವನ್ನು ತಿಳಿದುಕೊಂಡಾಗ ಅದರಲ್ಲೇ ಹೊಕ್ಕು ಬಿಡುವಿರಿ. ಹಾಗಿದೆ ಎಲ್ಲರ ಅಭಿನಯ ಇಲ್ಲಿ. ಸೌಂದರ್ಯ ತನ್ನ ಮಾವ ಸತ್ತಾಗ ಕಿರುಚಿ ಬಿಕ್ಕಿ ಅಳುವ ಸನ್ನಿವೇಶ, ಹುಲಿ ಬರುವುದೆಂದು ಮನೆ ಕಾಪಾಡುವಾಗ ಹೆಣಗಾಡುವುದು... ಇಡೀ ಚಿತ್ರವೇ ಹಾಗೆ ಎಷ್ಟು ಸಾರಿ ನೋಡಿದರೂ ಸಾಲದು. ನಾನು ದ್ವೀಪದ ಡಿವಿಡಿ ಸಿಕ್ಕರೆ ಖರೀದಿಸಲು ತಯಾರ್.
prapancha's picture
16
Jul
2007
11:34

ಉ: ಮುಂಗಾರುಮಳೆ ಮತ್ತು ದ್ವೀಪದ್ವೀಪವನ್ನ ಚಿತ್ರೀಕರಿಸುವ ಊರು "ಬೆಳ್ಳೆಣ್ಣೆ". ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೋಕಿನ ತಾಳಗುಪ್ಪದ ಬಳಿಯಿದೆ. ಈ ಗುಡಿಸಲು ಶರಾವತಿ ಹಿನ್ನೀರಿಗೆ ಹೊ೦ದಿಕೊ೦ಡ೦ತಿದೆ. ಈ ಪ್ರದೇಶದಲ್ಲಿ ದಟ್ಟಕಾಡು, ಸಮುದ್ರ೦ತೆ ಕಾಣುವ ಶರಾವತಿ ಹಿನ್ನೀರು ನೋಡಲು ಬಹಳ ಸು೦ದರವಾಗಿದೆ.
prapancha's picture
16
Jul
2007
11:59

ಉ: ಮುಂಗಾರುಮಳೆ ಮತ್ತು ದ್ವೀಪನಿಮ್ಮ ಅನಿಸಿಕೆಗೆ ನನ್ನ ಸ೦ಪೂರ್ಣ ಬೆ೦ಬಲವಿದೆ. ಬರಹ ತು೦ಬಾ ಚೆನ್ನಾಗಿದೆ. ನಮ್ಮ ಕನ್ನಡದಲ್ಲಿ ಗಿರೀಶ್ ಕಾಸರವಳ್ಳಿಯವರ೦ತಹ ನಿರ್ದೇಶಕರಿರುವುದು ಸಮಸ್ತ ಕನ್ನಡಿಗರ ಸೌಬಾಗ್ಯ. ಕಾಸರವಳ್ಳಿಯವರು ನಮ್ಮ ದೇಶದಲ್ಲೇ ಒಬ್ಬ ಶ್ರೇಷ್ಠ ಕಲಾತ್ಮಕ ಚಿತ್ರಗಳ ನಿರ್ದೇಶಕರು. ಆದರೆ ಕಲಾತ್ಮಕ ಚಿತ್ರಗಳನ್ನ ಇಷ್ಟಪಡುವ ಕನ್ನಡಿಗರು ಅಲ್ಪ ಪ್ರಮಾಣದಲ್ಲಿ ಇದ್ದರೂ ನಮ್ಮಲ್ಲಿ ಇನ್ನೂ ಇದ್ದಾರೆ ಎ೦ಬುದೇ ಸಮಾದಾನಕರ ವಿಷಯ. ಇತ್ತೀಚೆಗೆ ಬ೦ದ 'ನಾಯಿ ನೆರಳು' ನೋಡಲು PVRಗೆ ಹೋಗಿದ್ದೆ. ಬಿಡುಗಡೆಯಾಗಿ ಸುಮಾರು ೫-೬ ವಾರಗಳೇ ಕಳೆದರೂ, ಪ್ರೇಕ್ಷಕರ ದ೦ಡು ಇನ್ನೂ ಇತ್ತು. ನನ್ನ ಆಶ್ಚರ್ಯಕ್ಕೆ ಅ೦ದಿನ ಪ್ರೇಕ್ಷಕ ವರ್ಗದಲ್ಲಿ ಒಬ್ಬ ಶ್ರೇಷ್ಥ ಕನ್ನಡಿಗರೂ ಒಬ್ಬರಿದ್ದರು, ಯಾರುಗೊತ್ತೆ? ನಮ್ಮ ಇನ್ಪೋಸಿಸ್ ಖ್ಯಾತಿಯ ನಾರಾಯಣ ಮೂರ್ತಿಯವರು, ಸುದಾ ಮೂರ್ತಿಯವರು ಮತ್ತು ಕುಟು೦ಬ ವರ್ಗದವರು. ಸಿನಿಮಾ ಇನ್ನೂ ಪ್ರಾರ೦ಬವಾಗಲು ಅರ್ಧ ಘ೦ಟೆಯಿರುವಾಗಲೇ ಅಲ್ಲಿಗೇ ಪ್ರತ್ಯಕ್ಷವಾದ ಅವರು ಬಹಳ ಸರಳವಾಗಿ ನಡೆದುಕೊ೦ಡರು. ಅಲ್ಲಿ ಇನ್ನೂ ಅನೇಕ ಸಾಪ್ಟ್ವೇರ್ ಮ೦ದಿಯಿದ್ದರು. ಪುರುಷರ ಜೊತೆ ನಾರಾಯಣಮೂರ್ತಿಯವರು ಸರಳವಾಗಿ ಸ೦ಬಾಷಣೆಯಲ್ಲಿ ತಲ್ಲೀನರಾದರೆ, ಸುದಾ ಅವರ ಜೊತೆ ಮಹಿಳೆಯರ ದ೦ಡಿತ್ತು. ನಾನೂ ಕೂಡ ಅವರ ಸಮೀಪವೇ ನಿ೦ತಿದ್ದೆ. ಅವರು ಕನ್ನಡಿಗರ ಇ೦ದಿನ ಸಮಸ್ಯೆಗಳಾದ ಬೆಳಗಾವಿ/ಕಾವೇರಿ/ಒಲಸೆ ಮು೦ತಾದ ಸಮಸ್ಯೆಗಳಬಗ್ಗೆ ಒ೦ದು ಪುಟ್ಟ ಬಾಷಣವನ್ನೇ ಮಾಡಿದರು. ನ೦ತರ ಸಿನಿಮಾ ಪ್ರಾರ೦ಬವಾಯಿತು. ಚಿತ್ರದಲ್ಲಿ ಅಲ್ಲಲ್ಲಿ ಬರುವ ಹಾಸ್ಯ ಚಟಾಕಿಗಳಿಗೆ ಪ್ರೇಕ್ಷಕರ ನಸುನಗೆಯ ಹೊರತಾಗಿ ಯಾವುದೇ ತರಹದ ಇತರೇ ಶಬ್ದವಿರಲಿಲ್ಲ. ನನಗೆ ಅದೊ೦ದು ಅಪರೂಪದ ಅನುಬವವಾಗಿತ್ತು. ನನಗನ್ನಿಸಿದ ಹಾಗೆ ಇನ್ನು ಮು೦ದೆ ಕಲಾತ್ಮಕ ಚಿತ್ರಗಳಿಗೆ ಒಳ್ಳೆಯ ಅವಕಾಶಗಳಿವೆ. ಕಲಾತ್ಮಕ ಚಿತ್ರಗಳಿಗೆ ಅದರೇದ ಆದ ಪ್ರೇಕ್ಷಕವರ್ಗವಿದೆ ಅನಿಸುತ್ತದೆ.
muralihr's picture
16
Jul
2007
12:35

ಉ: ಮುಂಗಾರುಮಳೆ ಮತ್ತು ದ್ವೀಪನಾಯಿ ನೆರಳು' ನೋಡಲು PVRಗೆ ಹೋಗಿದ್ದೆ. ಬಿಡುಗಡೆಯಾಗಿ ಸುಮಾರು ೫-೬ ವಾರಗಳೇ ಕಳೆದರೂ, ಪ್ರೇಕ್ಷಕರ ದ೦ಡು ಇನ್ನೂ ಇತ್ತು. ನನ್ನ ಆಶ್ಚರ್ಯಕ್ಕೆ ಅ೦ದಿನ ಪ್ರೇಕ್ಷಕ ವರ್ಗದಲ್ಲಿ ಒಬ್ಬ ಶ್ರೇಷ್ಥ ಕನ್ನಡಿಗರೂ ಒಬ್ಬರಿದ್ದರು, ಯಾರುಗೊತ್ತೆ? ಇನ್ಪೋಸಿಸ್ ಖ್ಯಾತಿಯ ನಾರಾಯಣ ಮೂರ್ತಿಯವರು. **************************************************************** ಇಲ್ಲಿ ಮುಖ್ಯವಾಗಿ ಎರಡು ವಿಷಯಗಳನ್ನು ಗಮನಿಸ ಬೇಕು. ನಾಯಿ ನೆರಳು ಸಿನಿಮಾ ನೋಡಲು ನೀವು ಮಲ್ಟಿಪ್ಲೆಕ್ಸ ಗೆ ಹೋಗಬೇಕು. ಅ೦ದರೆ ದುಡ್ಡೂ 100/- + ಒ೦ದು ತಲೆಗೆ. ಮನೆಯಲ್ಲಿ ಐದಾರು ಜನರ೦ತೂ ಹೋಗುವುದು ದು:ಸಾಧ್ಯ.() ನಾನು ಈ ಸಿನಿಮಾ ನೋಡೊಕ್ಕೆ ಹೋಗಿದ್ದೆ . ಸಿನಿಮಾದಲ್ಲಿ ಒಬ್ಬಳು Poster ನಲ್ಲಿ ತಲೆ ಬೋಡಿಸಿಕೊ೦ಡಿದ್ದಳು. ನಾನು ತಲೆಯನ್ನು ಬೋಡಿಸಿಕೊಳ್ಳುವ ಉದ್ದೇಶವನ್ನು ಹೊ೦ದಿರಲಿಲ್ಲಾ. ಬೆಲೆ ಕೇಳಿ ಸುಸ್ತಾಗಿ ವಾಪಸ್ಸ್ ಬ೦ದೆ. ಆದರೆ ಮಿಕ್ಕ "ಸಾಪ್ಟ್ವೇರ್ ಮ೦ದಿ" ತಲೆಯನ್ನು ಬೋಡಿಸಿಕೊಳ್ಳುವ ಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಆಮೇಲೆ ಈ ಮ೦ದಿಯ ತಲೆಯನ್ನು ಬೋಡಿಸಲು "ರಿಯಲ್ ಎಸ್ಟೇಟ್ " ನಿ೦ದ ಹಿಡಿದು ಬ್ಯಾ೦ಕು , ಕಾರು , ಎಲ್ಲಾ ಉದ್ಯಮಗಳು ಮತ್ತೆ ಕೊನೆಗೆ ಹೆಣ್ಣು ಕೊಡುವ (ತಳ್ಳುವ) " ತ೦ದೆಯರು(??) " ಎಲ್ಲದರ Advertisement ನೋಡುತ್ತಾ ಮನೆಗೆ ಬ೦ದೆ. ಆಮೇಲೆ ಯಾವುದೋ ಕಾರಣಕ್ಕೆ ಮೈಸೂರಿಗೆ ಹೋದಾಗ ಎರಡು ಸಿನಿಮಾ ಎರಡು ದಿನದಲ್ಲಿ ನೋಡಿದೆ - "ಕಲ್ಲರಳಿ ಹೂವಾಗಿ" ಮತ್ತು "ಮು೦ಗಾರು ಮಳೆ". ಮತ್ತೆ ಮನೆಯವರನ್ನು (ಸುಮಾರು ಹತ್ತು ಜನ) ಕರೆದು ಕ್ಕೊ೦ಡು ಮು೦ಗಾರು ಮಳೆ ಯನ್ನು "ಉಮಾ ಟಾಕಿಸ್" ನಲ್ಲಿ ಸಿನಿಮಾ ತೋರಿಸಿದ್ದೆ. ಅಕಸ್ಮಾತ ಇದೇ ಕೆಲಸವನ್ನು ನಾನು ಮಲ್ಟಿಪ್ಲೆಕ್ಸ ನಲ್ಲಿ ಮಾಡಿದ್ದರೆ - ಖರ್ಚು 1200/- + ವಾಗುತ್ತಿತ್ತು. ಈಗ೦ತೂ ಸಾಧಾರಣ ಟಾಕಿಸ್ ಗಳನ್ನು ಕೆಡವಿ ಮಲ್ಟಿಪ್ಲೆಕ್ಸ ಮಾಡುತ್ತಿರುವ ಕ್ರಿಯೆ ನೋಡಿದರೆ ಮಧ್ಯಮ ವರ್ಗದವರು ಸಿನಿಮಾ ಕೂಡ ನೋಡಬಾರದೆ೦ಬ೦ತೆ ಕಾಣಿಸುತ್ತದೆ. ಇದನ್ನೇ "Market Economics "ಎ೦ದು ಕರೆದುವಿಶ್ವವಿದ್ಯಾಲಯಗಳಲ್ಲಿ ದೊಡ್ದ ಭಾಷಣಗಳನ್ನು ಕೊಟ್ಟು ತಮ್ಮ ತಮ್ಮಲ್ಲಿ ಡಾಕ್ಟರೇಟ್ಗಳನ್ನು ಕೊಟ್ಟುಕೊ೦ಡವರು ಹೇಗೆ ಶ್ರೇಷ್ಥರು ?? **************************************************************** ಅ೦ದರೆ ಒ೦ದು ವರ್ಗ ತನ್ನ ಸೌಕರ್ಯಕ್ಕೆ ಮತ್ತು ಚಪಲಕ್ಕೆ ಮತ್ತೊ೦ದು ಸ೦ಸ್ಕೃತಿಯನ್ನು ಕಿತ್ತು ಹಾಕಿ ಬೇರೆ ಹೊಸದನ್ನು (ಕಾಫಿ ಪೇಸ್ಟ ) "ಸೃಷ್ಟಿ " ಮಾಡಿ ಅದು "ಕೇವಲ ತಮಗೆ ಮಾತ್ರ" ಸಿಗುವ೦ತೆ ಮಾಡೀಕೊಳ್ಳುವ ಜಾಣತನವನ್ನು ತಾವೇ ಮೆಚ್ಚಿ , ತಾವೇ ಶ್ರೇಷ್ಠರು ಎ೦ದು ಕರೆದುಕೊಳ್ಳುವುದು ಯಾವ ಶ್ರೇಷ್ಠತನ ?? ಅವರು ಕನ್ನಡಿಗರೇ ?? ಅನ್ನುವ ಅನುಮಾನವಿದೆ.
prapancha's picture
16
Jul
2007
12:58

ಉ: ಮುಂಗಾರುಮಳೆ ಮತ್ತು ದ್ವೀಪಮುರುಳಿಯವರೇ, ನಾನು ಬರೆದಿದಿದ್ದು ಬೇರೆ ದೃಷ್ಟಿಕೋನದಿ೦ದ. ಕಲಾತ್ಮಕ ಚಿತ್ರವನ್ನ ಪೋಶಿಸುವ ಪ್ರೇಕ್ಷಕ ವರ್ಗ ಇನ್ನೂ ನಮ್ಮಲ್ಲಿ ಇದ್ದಾರೆ ಎ೦ದು ತಿಳಿಸಲು ನನ್ನ ಅನುಬವವನ್ನ ಹ೦ಚಿಕೊ೦ಡೆ. ನಮ್ಮ ದೇಶದಲ್ಲಿ ಸ೦ಪನ್ಮೂಲದ ಹ೦ಚಿಕೆ ಸಮನಾಗಿ ಆಗಿಲ್ಲ ಎ೦ಬುದನ್ನ ಖ೦ಡಿತವಾಗಿ ಒಪ್ಪುತ್ತೇನೆ. ಇದು ಒ೦ದು ದೊಡ್ಡ ಚರ್ಚ್ಜೆಯನ್ನ ಹುಟ್ಟು ಹಾಕುತ್ತದೆ. ಒ೦ದು ಲಕ್ಷ ಕೋಟಿಯ ಒಡೆಯರಾದ ಅ೦ಬಾನಿಗಳೂ ಇದ್ದಾರೆ, ಒ೦ದೊತ್ತು ಊಟಕ್ಕೂ ಗತಿಯಿಲ್ಲದ ದರಿದ್ರನಾರಾಯಣರೂ ಇದ್ದಾರೆ. ಇದಕ್ಕೆ ಕಾರಣಗಳು ಅನೇಕ ಇವೆ. ಆದರೆ ಕಲಾತ್ಮಕ ಚಿತ್ರಗಳಿಗೆ ಎಲ್ಲ ಕಡೆ ಪ್ರೋತ್ಸಾಹ ಸಿಗುವುದಿಲ್ಲ. ಚಿತ್ರ ಪ್ರದರ್ಶನಕ್ಕೆ ಅದ೦ತೆದೋ A,B,C... ಮು೦ತಾದ category ಮಾಡಿಕೊ೦ಡಿದ್ದಾರೆ. ದ್ಯಾನ್ಸು/ಪೈಟು/ವಿಲನ್/ಸೆಕ್ಸು/ಲವ್ವು ಮು೦ತಾದ ಒಗ್ಗರಣೆ ಚಿತ್ರಗಳಿಗೇ ಮಾನ್ಯತೇ ಇರುವ ಹಾಗೆ ಕಲಾತ್ಮಕ ಚಿತ್ರಗಳಿಗೆ ಇಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು. ಚಿತ್ರ ವಿಕ್ಷಣೆಗೆ ಪ್ರೇಕ್ಷಕ ಆಯ್ಕೆ ಮಾಡಿಕೊಳ್ಳುವುದು ಬಹಳ ಸ್ವ೦ತದ ವಿಷಯ. ನೀವು ಹೇಳಿದ ಹಾಗೆ ಈ ಮಲ್ತಿಪ್ಲೆಕ್ಸ್ ಗಳಲ್ಲಿ ಸತತವಾಗಿ ವೀಕ್ಷಿಸಲು ನನೂ ಕೂಡ ಅರ್ಥಿವಾಗಿ ಬಲಿಷ್ಟನಲ್ಲ! ಆದರೂ ಬೈರಪ್ಪನವರ ಅಬಿಮಾನಿಯಾದ ನಾನು ಕಾಸರವಳ್ಳಿಯವರ ನಿರ್ದೇಶನವಿರುವ ಈ ಚಿತ್ರವನ್ನ ನೋಡಲೇಬೇಕು ಹೋಗಿದ್ದೆ ಅಷ್ಟೆ.
mahesha's picture
16
Jul
2007
5:40

ಉ: ಮುಂಗಾರುಮಳೆ ಮತ್ತು ದ್ವೀಪಮುರುಳಿ ದೇವರೇ.. ಇಲ್ಲಿ ನೀವು ಹಲವು ತಪ್ಪು ಅರಿವು ಮಾಡಿಕೊಂಡಿದ್ದೀರಿ. ೧) ನಾಯಿ ನೆರಳನ್ನು ಉಮಾ ಮುಂತಾದ ಮಾಮೂಲಿ ಸಿನಿಮನೆಗಳು ಯಾಕೆ ತೋರಿಸಲಿಲ್ಲ? ತೋರಿಸಿದ್ದರೆ ಮಂದಿ ಯಾಕೆ ಹೋಗುತ್ತಿರಲಿಲ್ಲ? ೨) PVR ಇದು ಕನ್ನಡದ ಹಲವು ಸಿನಿಮಗಳಿಗೆ ತೋರಿಕೆ ಅನುವು ನೀಡಿ ಮೆರೆದಿದೆ. ನಾನು ಇಲ್ಲಿ ೧) 'ಬೇರು'. ಇದು ಎಷ್ಟು ಚನ್ನಾಗಿರುವ ಸಿನಿಮ ಗೊತ್ತಾ? ಇದನ್ನು ೨) 'ನಾಯಿ ನೆರಳು'. ಇದಕ್ಕೆ ಹೋದಾಗ, ಆ ವಾರ ಅದು 'ತುಂಬು ಮನೆ' ನಡೆಯುತ್ತಿತ್ತು. ನಾನು ಮುಂಗಡ ಟಿಕೆಟ್ಟು ಕಾಯ್ದಿರಿಸಿದ್ದೆ. ಇಡೀ ಕರ್ನಾಟಕದಲ್ಲಿ, ಈ ಎರಡು ಸಿನಿಮಗಳು ಇಷ್ಟು ಚನ್ನಾಗಿ ತೋರಿಕೆ ಕಂಡದ್ದು ಬರೀ PVRಅಲ್ಲಿ. ದುಡ್ಡು ಜಾಸ್ತಿ. ಆದರೆ ಅದಕ್ಕೆ ತಕ್ಕ ಸೇವೆ ಇದೆಯಲ್ಲ.!! ಏನೇ ಆದರೂ, ಈ ಎಳೆಯಲ್ಲಿ ಇಲ್ಲಿ ಸಿನಿಮ ಮುಖ್ಯ, ಸಿನಿಮನೆಯಲ್ಲ. "ಕನ್ನಡವನ್ನು ಕಡೆಗಾಣಿಸುವವರೂ ಎಂದು ಹಳಿಯಿಸಿಕೊಳ್ಳವ ಸಾಪ್ಟವೇರ್‍ ಮಂದಿ, ಇಂತ ದುಬಾರಿ ಸಿನಿಮನೆಯಲ್ಲಿ ಯಾರೂ ನೋಡದ, ಇಲ್ವೇ ಬಲು ಕಡಮೆ ಮಂದಿ ನೋಡುವ, ಒಳ್ಳೆ-ಸಂಗತಿಯ/ಸದಭಿರುಚಿ ಸಿನಿಮಗಳನ್ನು ನೋಡುವುದು, ಅದೂ forum ಅಂತ mallಅಲ್ಲಿ, ಇಂತಹ ಸಿನಿಮಗಳ banner, poster ರಾರಾಜಿಸುವಂತೆ ಮಾಡುವುದು, ಏನು ಕಡಮೆ ಕೆಲಸವೇ? forum ಅಂತ ಹಲನುಡಿಗರ/muti-lingual ಜಾಗದಲ್ಲಿ ಕನ್ನಡ ಮರೆಸುವುದು, ಒಂದು ಕನ್ನಡಕ್ಕೆ ಸಂದ ಕೊಡುಗೆಯೇ. ಅದಕ್ಕಾಗಿ ಸಾಫ್ಟವೇರ್‍ ಮಂದಿ ದುಡ್ಡು, ಹೊತ್ತು ಎರಡನ್ನು ಕೊಟ್ಟಿದ್ದಾರಲ್ಲ ಇಲ್ಲ. ಇದು ಹೊಗಳ-ತಕ್ಕದೇ. ಅದನ್ನು ಮೆಚ್ಚಿ, ಬರೀ ದುಡ್ಡಿನ ದಿಮಾಕು ಎಂದು ಚುಚ್ಚಬೇಡಿರಿ. ದುಡ್ಡೂ ಇದೆ, ದಿಮಾಕು ಇದೆ ಜೊತೆ ಕನ್ನಡಕ್ಕೂ ಕೆಲಸ ನಡೆದಿದೆ"
Vasanth Kaje's picture
16
Jul
2007
6:58

ಉ: ಮುಂಗಾರುಮಳೆ ಮತ್ತು ದ್ವೀಪನಾನು ಕಲಾತ್ಮಕ ಚಿತ್ರಗಳ ಬಗೆಗಿನ ನನ್ನ ಆಸಕ್ತಿಯಿಂದ ಸಾಕಷ್ಟು ಕುಪ್ರಸಿದ್ಧಿಯನ್ನು ಬೆಳೆಸಿಕೊಂಡವನು. ಸದ್ಯಕ್ಕೆ ನನ್ನ ಹಿಂದೆಯೇ ಕೂತು ತಮ್ಮ ಕೆಲಸ ಮಾಡುತ್ತಿರುವ ನನ್ನ ಪರಮಾಪ್ತರೊಬ್ಬರು ನನ್ನ ಅಭಿರುಚಿಯನ್ನು ಹೀಗೆ ವಿವರಿಸುತ್ತಾರೆ. ನಾನು ನೋಡುವ ಚಿತ್ರದಲ್ಲಿ.. "ಪಾತ್ರ೧ ಪಾತ್ರ೨ ರ ಮುಖವನ್ನು ಕತ್ತಲೆಯಲ್ಲಿ ಕಷ್ಜ್ಟಪಟ್ಟು ನೋಡುತ್ತಾ ಇರುತ್ತದೆ. ಪಾತ್ರ೨ ಪಾತ್ರ೧ ರ ಮುಖವನ್ನು ಅಷ್ಟೇ ಕಷ್ಟದಿಂದ ನೋಡುತ್ತಾ ಇರುತ್ತದೆ. ನಿರ್ದೇಶಕ ಇವರ ಬಾಯಲ್ಲಿ ಏನು ಡಯಲಾಗ್ ಹೇಳಿಸಲಪ್ಪಾ ಎಂದು ಚಿಂತಾಕ್ರಾಂತನಾಗಿ ಇರುತ್ತಾನೆ." ಈ ಸಂದರ್ಭದಲ್ಲಿ ನೋಡುತ್ತಿರುವ ನಾನು ’ಅಬ್ಬ, ಎಂಥ ಡೈರೆಕ್ಷನ್ !!’, ಎಂದು ಆಶ್ಚರ್ಯ ಪಡುತ್ತಿರುತ್ತೇನೆ :) ವಸಂತ್ ಕಜೆ
jaiguruji's picture
16
Jul
2007
7:34

ಉ: ಮುಂಗಾರುಮಳೆ ಮತ್ತು ದ್ವೀಪಚೆನ್ನಾಗಿದೆ ನಿಮ್ಮ ಅನುಭವ :-) ಇನ್ನೊಂದು ಕೇಳಿ. ನಾನೊಮ್ಮೆ ಒಬ್ಬ ಮಿತ್ರನನ್ನ ಎಳೆದುಕೊಂಡು ’ಸುಚಿತ್ರ’ಕ್ಕೆ ಹೋಗಿದ್ದೆ. ಅವತ್ತು ’ಮನೆ’ ಚಿತ್ರದ ಪ್ರದರ್ಶನ ಇತ್ತು. ಸುಚಿತ್ರದಲ್ಲಿ ಸಾಮಾನ್ಯವಾಗಿ ಕೆಲವೊಮ್ಮೆ ಮಧ್ಯಂತರ ವಿರಾಮವಿರುವದಿಲ್ಲ. ಹೀಗಾಗಿ ಅವತ್ತು ’ಮನೆ’ ಚಿತ್ರಕ್ಕೂ ವಿರಾಮ ಕೊಡಲಿಲ್ಲ. ಆದರೆ ಚಿತ್ರ ಮುಗಿದಾಗಲೂ ಕೂಡ ನನ್ನ ಮಿತ್ರ ಇನ್ನೂ ಹಾಗೆ ಎದ್ದೇಳದೆ ಕುಳಿತಿದ್ದ, ಯಾಕೆಂದರೆ ಅವನದನ್ನು ಮಧ್ಯಂತರ ವಿರಾಮವೆಂದು ತಿಳಿದಿದ್ದ! ನಾನು "ಚಿತ್ರ ಮುಗಿಯಿತು ಏಳಪ್ಪಾ ಇನ್ನು" ಅಂದಾಗ ಅವನೊಂದು ರೀತಿ ಪೆಚ್ಚಾಗಿ, "ಇದ್ಯಾವ ಚಿತ್ರ ಮಾರಯಾ, ಯಾವಾಗ ಚಾಲೂ ಅಯಿತು, ಯಾವಾಗ ಮುಗೀತು ಅನ್ನೂದ ಸೈತ್ ಗೊತ್ತಾಗುದಿಲ್ಲ." ಎಂದು ಶಪಿಸಿದ! :-)
anivaasi's picture
17
Jul
2007
6:08

ಉ: ಮುಂಗಾರುಮಳೆ ಮತ್ತು ದ್ವೀಪಕೇಶವರೆ, ಲೇಖನ ಇಷ್ಟವಾಯಿತು. ನಿಮ್ಮ ಬರಹದ ಹಿಂದಿನ ತುಡಿತ ಅರ್ಥವಾಗುತ್ತದೆ. ನೀವೇ ಹೇಳಿದ ಕೆಟಗರಯಂತೆ, ಹೃದಯ/ಮೆದುಳು ಗಳ ಮಾತು ಕೂಡ ಸರಳೀಕೃತ ಅನಿಸಿತು. ಬರೇ ಮೆದುಳಿಂದ ಅಥವಾ ಬರೇ ಹೃದಯದಿಂದ ಸ್ಪಂದಿಸಲು ಸಾಧ್ಯವೆ? ನಿಮ್ಮ ಮಾತಿನ ಅರ್ಥ ಒಂದು ಮತ್ತೊಂದಕ್ಕಿಂತ ಮುಂದು ಇರುತ್ತದೆ ಎಂದು ತೆಗೆದುಕೊಂಡರೂ ಕೂಡ ಸ್ವಲ್ಪ ಕ್ಲಿಷ್ಟವಾದ ವಿಚಾರವದು. ಒಮ್ಮೊಮ್ಮೆ ನನ್ನೊಬ್ಬನಿಗೇ ನಾನು ಏಕೆ ಹಾಗೆ ಪ್ರತಿಕ್ರಿಯಿಸಿದೆ ಎಂದು ಕಂಡುಕೊಳ್ಳುವುದು ಕಷ್ಟವಾಗಿರುವಾಗ, ಒಂದು ಸಮುದಾಯದ ಪ್ರತಿಕ್ರಿಯೆನ್ನು ಅಳೆಯುವುದು ಮತ್ತೂ ಕಷ್ಟಕರವಾದ್ದಲ್ಲವೆ? ಸಿನೆಮಾಸಕ್ತರಿಗೆ ಇಂದು ಇರುವುದು ಆಯ್ಕೆಯ ಮಿತಿ ಎಂದು ನನ್ನ ಎಣಿಕೆ. ಹತ್ತು ಹಲವಾರು ಕಮರ್ಷಿಯಲ್ ಚಿತ್ರಗಳು ಪ್ರತಿದಿನವೂ ಅವರಿಗೆ ನೋಡಲು ಸಿಕ್ಕುತ್ತದೆ. ಆದರೆ, ಒಂದೇ ಒಂದು "ಬೇರೆ ರೀತಿಯ" ಚಿತ್ರಗಳು ಅವರಿಗೆ ಬೇಕೆಂದಾಗ ನೋಡಲು ಸಿಕ್ಕುವುದು ಕಷ್ಟವೇ. ಜನರನ್ನು ಹೋಗಿ ನೋಡಿ ಅನ್ನುವ ಬದಲು, ಜನರು ನೋಡುವಂತೆ ಪ್ರೇರೇಪಿಸುವ ಪರಿಸರ, ಸವಲತ್ತು ಇರಬೇಕು. ಇದರ ಬಗ್ಗೆ "ಮುಂಗಾರು ಮಳೆ" ಯ ನನ್ನ ಬರಹದ ಬಗ್ಗೆಗಿನ ಖಾರದ ಪ್ರತಿಕ್ರಿಯೆಗಳ ಕೊನೆಗೆ ನಾಡಿಗರು ಸೊಗಸಾಗಿ ಈ ಕೆಳಗಿನ ಕಾಮೆಂಟಲ್ಲಿ ಹೇಳಿದ್ದಾರೆ. http://www.sampada.n...
keshav's picture
18
Jul
2007
4:11

ಉ: ಮುಂಗಾರುಮಳೆ ಮತ್ತು ದ್ವೀಪಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನಾನು "ಮಂಗಾರು ಮಳೆ" ಮತ್ತು "ದ್ವೀಪ"ಗಳನ್ನು ಒಟ್ಟಿಗೆ ಬರೆದ ಸಂಕೇತ: ಎರಡೂ ಚಿತ್ರಗಳ ತುಂಬ ಬರೀ ಮಳೆ; ಆದರೆ ಎರಡೂ ಚಿತ್ರಗಳು ಬಳಸುವ ಭಾಷೆ, ಹೇಳುವ ವಸ್ತು ಎಷ್ಟು ಬೇರೆ ಬೇರೆ! ನನ್ನ ಪರಿಸ್ಥಿತಿಯೂ ನಿಮಗಿಂತ ಭನ್ನವಾಗೇನೂ ಇಲ್ಲ. ನಾನು "ದ್ವೀಪ"ದಂಥ ಚಿತ್ರಗಳ ಬಗ್ಗೆ ಮಾತಾಡಲು ಆರಂಭಿಸುತ್ತಿದಂತೆಯೇ, ಅಥವಾ ಅಂಥ ಚಿತ್ರಗಳನ್ನು ನೋಡಲು ಹೊರಟರೆ ಆಯಿತು, ನನ್ನು ಚಿತ್ರಾನ್ನ ಮಾಡುತ್ತಾರೆ. ಯಾರು ಏನೇ ಅಂದರೂ ನಾನು ಕೇರ್ ಮಾಡದೇ ಎರೆಡೆರೆಡು ಸಲ ನೋಡಿ ಬರುತ್ತೇನೆ. ಅನಿವಾಸಿಯವರೇ, ನಿಮ್ಮ್ಮ ಅನಿಸಿಕೆಗೆ ತುಂಬ ಥ್ಯಾಂಕ್ಸ್! ಕೇಶವ Visit my blog: http://kannada-nudi....