ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡದ ತಾಂತ್ರಿಕ ಶಬ್ದಗಳು

ತಾಂತ್ರಿಕವಾದ ಇಂಗ್ಲೀಷ್ ಶಬ್ದಗಳನ್ನು ಕನ್ನಡೀಕರಣ ಮಾಡುವಾಗ ಸಂಸ್ಕೃತದ ಮೊರ ಹೋಗುತ್ತೇವೆ, ತಪ್ಪಲ್ಲ. ಆದರೆ ಸಂಸ್ಕೃತ ಕನ್ನಡವನ್ನು ತುಂಬ ಭಾರ ಮಾಡುತ್ತದೆ ಮತ್ತು ಮಾತಾಡುವಾಗ ಅಡ್ಡಬರುತ್ತದೆ, ಆದ್ದರಿಂದ ನಾವು ಮಾತಾಡುವಾಗ ಭಾಷಾಂತರಿಸಿದ ಸಂಸ್ಕೃತವನ್ನು ಉಪಯೋಗಿಸದೇ ಮೂಲ ಇಂಗ್ಲೀಷನ್ನೇ ಉಪಯೋಗಿಸುತ್ತೇವೆ. ಕನ್ನಡದಲ್ಲಿ ಸಂಸ್ಕೃತವನ್ನಾಗಲೀ, ಇಂಗ್ಲೀಷನ್ನಾಗಲೀ, ಉರ್ದು, ಪಾರ್ಸಿ, ಎನ್ನಾವುದೇ ಭಾಷೆಯನ್ನಾಗಲಿ ಉಪಯೋಗಿಸುವುದರ ವಿರುದ್ಧವೇನಲ್ಲ ನಾನು. ಹಾಗೆ ನೋಡಿದರೆ ಇಂಗ್ಲೀಷ್ ಭಾಷೆಯಲ್ಲಿ ಮೂಲ ಇಂಗ್ಲೀಷ್ ಪದಗಳು ಎಷ್ಟಿವೆ? ಆದರೂ ತಾಂತ್ರಿಕ ಪದಗಳಿಗೆ ಹೊಸದಾಗಿ ಕನ್ನಡ ಪದಗಳನ್ನು ಹುಟ್ಟುಹಾಕುವ, ಸಂಪದದಿಂದ ಕಡ ತಂದು ಒಟ್ಟು ಮಾಡುವ ಯೋಚನೆ ನನದು. ಹೊಸಪದಗಳು ಇಂಗ್ಲೀಷಿನ ಭಾಷಾಂತರವಾಗ ಬೇಕಿಲ್ಲ, ಮೂಲಕ್ಕೆ ಹತ್ತಿರ ಅರ್ಥ ಬಂದರಾಯಿತು.

B:

Blog: ಜಾಲಜಗುಲಿ = ಜಗುಲಿ (ಬ್ಲಾಗ್ - ಊಟವಾದ ಮೇಲೆ ಮನೆ ಮುಂದೆ ಜಗುಲಿಯಲ್ಲಿ ಕೂತು ದಿನ ಆಗುಹೋಗುಗಳನ್ನು ಹರಟಿದಂತೆ ಅಲ್ಲವೇ?),
C:
CD (Compact Disc): ಒತ್ತಟ್ಟೆ (ಒತ್ತಾಗಿರುವ ತಟ್ಟೆ), ಬಿಲ್ಲೆ
Chat room: ಹರಟೆಕಟ್ಟೆ
Computer: ಎಣಿ (ಎಣಿಸುವುದು ಯಾವುದೋ ಅದು ಎಣಿ), ಸಂಸ್ಕೃತ: ಗಣಕಯಂತ್ರ!!
E:
e-mail: ಮಿಂಚಂಚೆ, ಮಿನ್ನೋಲೆ 
H:
Hardware: ಗಟ್ಟಿಮಾಲು

L:
Laptop: ಪುಟ್ಟೆಣಿ (ಪುಟ್ಟ ಎಣಿ). Laptop ಸಣ್ಣ ಕಂಪ್ಯೂಟರ್ ತಾನೆ? ಗುರುಪ್ರಸಾದ್ ಕಾಗಿನೆಲೆ ತಮ್ಮ ’ಬಿಳಿಯ ಚಾದರ’ ಕಾದಂಬರಿಯಲ್ಲಿ ’ತೊಡೆಮೇಲಿಗ’ ಅಂತ ಕರೆದಿದ್ದಾರೆ.
Link: ಕೊಂಡಿ, ಎಳೆ

M:

Mobile: ಜಂಗಮ
P:
Palmtop: ಕೈಯೆಣಿ (ಕೈ ಎಣಿ)
Programme: ಕಾಯಕ
S:
Satellite Navigator (GPS): ಬಾನ್ಸೂಚಿ, ದಾರಿಣಿ (ದಾರಿ ತೋರಿಸುವ ಯಂತ್ರ)
Software: ಮೆದುಮಾಲು
W:
Web: ಜಾಲ, ಬಲೆ
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನ್ನಡದ ತಾಂತ್ರಿಕ ಶಬ್ದಗಳು

ವೈಭವ's picture

ಚನ್ನಾಗಿದೆ. ಹಿಡಿಸಿತು. ಅದ್ರಲ್ಲೂ ದಾರಿಣಿ(GPS) ಸಕ್ಕತ್ರೀ .

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಕನ್ನಡದ ತಾಂತ್ರಿಕ ಶಬ್ದಗಳು

hpn's picture

ಮೊಬೈಲ್ ಅನ್ನೋದು ಬಳಕೆಗೆ ಬಂದು ಹೋಗಿದೆಯಲ್ರಿ. ಹಳ್ಳಿ ಹಳ್ಳಿಯಲ್ಲೂ ಈಗ ಮೊಬೈಲ್ ಅಂತಾನೆ ಅಂತಾರೆ. :)
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಕನ್ನಡದ ತಾಂತ್ರಿಕ ಶಬ್ದಗಳು

madhava_hs's picture

Mobile ge 'jangama' andre beediyalli baruva 'jangamarige' enennutteeri?? :-)

ಉ: ಕನ್ನಡದ ತಾಂತ್ರಿಕ ಶಬ್ದಗಳು

madhava_hs's picture

computer ge 'gaNaka yantra' vE atyanta sooktavaada pada. eni/piNi andre jana yENi/GiNi anta confuse maadkottare.

MObile - sanchaari dooraVAni.

Chat room - sambhaashaNA koTaDi.

CD - Saandra taTTe.

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ಮೇಲಿನವು ಸಂಸ್ಕೃತದಲ್ಲಿ ಸರಿಯಾದವು.. ಕನ್ನಡದಲ್ಲಿ ಅಲ್ಲ...

ಸಂಸ್ಕೃತ ಮತ್ತು ಕನ್ನಡ ಬೇರೆ ಬೇರೆ ನುಡಿಗಳು.. ಇಂಗ್ಲೀಸು, ಮತ್ತು ಕನ್ನಡ ಇದ್ದ ಹಾಗೆ!

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ಭಾಷ್ ಅಂದ್‌ರೆ ಬೊಗಳೋದು ಅಂತ ಕೂಡ ..

ಸಂಭಾಷಣೆ ಅಂದ್ರೆ ಚನ್ನಾಗಿ ಬೊಗಳೂದು ಯಾಕೆ ಆಗಲ್ಲ? ಯಾವ ಸಂಸ್ಕೃತದ ವ್ಯಾಕರಣ ಹಾಗೆ ಹೇಳ್ತದೆ?

ಉ: ಕನ್ನಡದ ತಾಂತ್ರಿಕ ಶಬ್ದಗಳು

benaka's picture

ಭಾಷ್ ಎಂದರೆ ಬೊಗಳುವುದು????

ಬಹುಶಃ ನೀವು ತಪ್ಪು ತಿಳಿದಿದ್ದೀರಿ.
ಬೊಗಳುವುದಕ್ಕೆ ಸಕ್ಕದದಲ್ಲಿ "ಭಷ್" ಧಾತುವನ್ನುಪಯೋಗಿಸುತ್ತಾರೆ; "ಭಾಷ್" ಅಲ್ಲ!!
ಉದಾ:
ಮಹಾಭಾರತದ ಏಕಲವ್ಯನ ಬಾಣಪ್ರಯೋಗದ ಕೌಶಲ ಹೇಗಿತ್ತೆಂದರೆ,
"ಭಷತಸ್ತಸ್ಯ ಮುಖೇ ಯುಗಪತ್ಸಪ್ತಶರಾನ್ ಮುಮೋಚ"
-> ಬೊಗಳುವ (ನಾಯಿಯ) ಬಾಯಿಗೆ ಒಟ್ಟಿಗೆ ಏಳು ಬಾಣಗಳನ್ನು ಬಿಟ್ಟನು.

ಭಷ್ -> ಪರಸ್ಮೈಪದ => ಭಷತಿ
ಭಾಷ್ ->ಆತ್ಮನೇಪದ=> ಭಾಷತೇ

ಆದ್ದರಿಂದ, ಸಂಭಾಷಣೆ ಎಂದರೆ ಬೊಗಳುವಿಕೆ ಅಲ್ಲ!!(ಕೆಲವರನ್ನುಳಿದು...!?:-))

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ಸರಿ.. ಹಾಗೇ ಇರಲಿ... :)

ಹಾಗಾದ್ರೆ dialogue ಇದಕ್ಕೂ ಸಂಭಾಷಣೆ, chat ಇದಕ್ಕೂ ಸಂಭಾಷಣೆ ಅಂದ್ರೆ ಗಲಿಬಿಲಿ ಇಲ್ವಾ?

ಬೆನಕರು ತುಸು ಅಲ್ಲೂ ಹೇಳಬೇಕು :)..

ಇನ್ನೊಂದು ಬೆನಕರೇ ಹಿಂದೆ ’ಬಳ್ಳಿ’ ಸಂಸ್ಕೃತದ್ದೇ ಎಂದು....
ಈಗ ಹೇಳಿ ಸಂಭಾಷಣೆ ಕನ್ನಡವೂ, ಸಂಸ್ಕೃತವೂ? ಸಂಭಾಷಣೆ ಕನ್ನಡ ಪದವೋ, ಸಂಸ್ಕೃತ ಪದವೂ?

ಇಲ್ಲಿ ಕೇಶವ ಮಾಡಲು ಹೊರಟಿರುವುದು ಕನ್ನಡ ಪದಗಳನ್ನು, ಸಂಸ್ಕೃತದವನ್ನಲ್ಲ.!!!

ಇರಲಿ ಕನ್ನಡದಲ್ಲಿ ಪದಗಳು ಅಂತ ಪೂರ ಸಂಸ್ಕೃತದಲ್ಲಿ ಬರೆಯೋದು ಸರಿಯಾ?

ಸಾಂದ್ರತಟ್ಟೆ ಇಲ್ಲಿ compactಗೆ ನಾವು ಕನ್ನಡದಲ್ಲಿ ಸಾಂದ್ರ ಅಂತೀವ?

ಉ: ಕನ್ನಡದ ತಾಂತ್ರಿಕ ಶಬ್ದಗಳು

benaka's picture

ಮಹೇಶರೆ,

ಒಂದೇಮಾತಿನಲ್ಲಿ ಹೇಳುವುದಾದರೆ, ಯಾವುದು "ಅತಿ"ಯಾದರೂ ಸರಿಯಲ್ಲ. ಸಕ್ಕದವೇ ಅತಿಯಾಗಿ "ಉಪ ಆರಕ್ಷಕ ಮುಖ್ಯ ನಿರೀಕ್ಷರು" ಆದರೂ ಹಿಂಸೆಯೇ, ಬಳಕೆಯಲ್ಲಿಲ್ಲದ ಹಳೆಗನ್ನಡ ತುರುಕಲ್ಪಟ್ಟ "ನೆಗಳ್ಚು" ಆದರೂ ತೊಂದರೆಯೇ.

ಸಂಭಾಷಣೆ ಕನ್ನಡದಲ್ಲಿರುವ ಸಂಸ್ಕೃತಮೂಲದ ಪದ ಎಂದು ನಿಮಗೂ ತಿಳಿದೇ ಇದೆ; ಆದರೆ ಅದು ಕನ್ನಡಕ್ಕೆ ಸೇರಲೇಬಾರದೆಂದು ನಿಮ್ಮ ಅಭಿಪ್ರಾಯವೇ?

ಸಿ.ಡಿ. ಎಂದರೆ ಸಾಕು ಎಲ್ಲರಿಗೂ ಈಗ ತಿಳಿಯುತ್ತದೆ; ನನಗಂತೂ, ಸಾಂದ್ರ ತಟ್ಟೆಯಾಗಲೀ, ಒತ್ತಟ್ಟೆಯಾಗಲೀ ಸಮಾನದೂರವೇ ಸರಿ. ನಮಗೆ ಬೇಕಿರುವುದು ಎಲ್ಲವನ್ನೂ ಕನ್ನಡೀಕರಿಸುವುದಲ್ಲ; ಬದಲಿಗೆ ಇದ್ದ, ಇರುವ ಕನ್ನಡದ ಬಗೆಗಿನ ಅಭಿಮಾನ ಹಾಗೂ ಅದು ಇನ್ನೂ ಇರುವಂತೆ ನೋಡಿಕೊಳ್ಳುವ ಆಸಕ್ತಿ. ಅದಕ್ಕೆ ಪೂರಕವಾಗಿ ಕನ್ನಡೀಕರಣ ನಡೆದರೆ ಸಂತೋಷ!

ನನ್ನ ಅಭಿಪ್ರಾಯ :
ಚಾಟ್ ->ಹರಟೆ
ಡಯಲಾಗ್->ಸಂವಾದ

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ಸರಿಯಪ್ಪ.. ಅದನ್ನೇ ಹೇಳಿದ್ದು...

ಸಾಂದ್ರ ತಟ್ಟೆ...
ಸ್ಮೃತಿಕೋಶ ಇವೆಲ್ಲ ಬೇಡ....

ಹಾಗೇ

ಪರದು ಬೆಳಕು ಕೂಡಬೇಡ

ಟ್ರಾಪಿಕ್ ದೀಪ ಇರಲಿ!

ಉ: ಕನ್ನಡದ ತಾಂತ್ರಿಕ ಶಬ್ದಗಳು

keshav's picture

ಎಲ್ಲರಿಗೂ ಧನ್ಯವಾದಗಳು (ನನ್ನಿ)

ವೈಭವ್,
'ದಾರಿಣಿ' ಸತೀಶ್ ಅವರ ಬ್ಲಾಗಿನಿಂದ ಓದಿದ್ದು.

HPN,
ನಾವು ಈಗ ಬಹಳಷ್ಟು ತಾಂತ್ರಿಕ ಪದಗಳನ್ನು ಇಂಗ್ಲಿಷಿನಲ್ಲೇ ಬಳಸೋದು, ಮೊಬೈಲ್ ಅದಕ್ಕೆ ಹೊರತೆನಲ್ಲ.

ಮಾಧವ,
ಒಂದೆ ಪದಕ್ಕೆ ಬೇರೆ ಬೇರೆ ಅರ್ಥವಿರಬಾರದು ಎಂದೇನಿಲ್ಲವಲ್ಲ! ಇಂಗ್ಲಿಷಿನಲ್ಲಿ mobile ಅಂದರೆ ಚಲಿಸು ಅಂತ ಅರ್ಥ, mobile-phone ಅಂತಲೂ ಅರ್ಥ ಆಗೊಲ್ಲವಾ?
ಗಣಕಯಂತ್ರ, ಸಂಚಾರೀ ದೂರವಾಣಿ, ಸಂಭಾಷಣಾ ಕೊಠಡಿ, ಸಾಂದ್ರ ತಟ್ಟೆ - ತುಂಬ ಭಾರವಾದ ಸಂಸ್ಕೃತ ಪದಗಳು ಅನಿಸುವುದಿಲ್ಲವೇ? ಸರಳ ದಿನನಿತ್ಯದ ಪದಗಳು ಇರಬೇಕಾದರೆ ಯಾಕೆ ಕಷ್ಟ ಪಟ್ಟು ಸಂಸ್ಕೃತದಿಂದ ಕದ ತರಬೇಕು?

ಮಹೇಶ,
ನನ್ನಿ.

- ಕೇಶವ
my blog:
http://kannada-nudi....

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ಕೇಶವರೇ...

ನಿಮ್ಮ ಮೊಗಸು ಚನ್ನಾಗಿದೆ.

sewage treatment plant. ಇದಕ್ಕೆ ಕನ್ನಡದಲ್ಲಿ

"ಕೊಚ್ಚೆ ಹಸನು ಹಟ್ಟಿಗೆ"
"ಹೊಲಸುನೀರು ಹಸನು ತಾವು"
"ಚರಂಡಿನೀರು ಹಸನು ತಾವು"

ಇದನ್ನು ಬಿಟ್ಟು "ಮಲಿನಚಲ ಶುದ್ಧೀಕರಣ ಘಟಕ" ಅಂದ್ರೆ ಅದು ಪೂರ ಸಂಸ್ಕೃತ ಆಗೋಗಲ್ವ?

ಈ ಹಸನು ಒರೆ ನಮ್ಮ ಹಳ್ಳಿ ಹಳ್ಳಿಯವರ ಬಾಯಲ್ಲಿದೆ.. "ರಾಗಿ ಹಸನು ಮಾಡು", "ಹಸನಾದ ಕಾಫಿ ಪುಡಿ"

ಮಲಿನನೀರು ಅಂತ ಹೇಳಕ್ಕೆ ಬರಲ್ಲ..

ನೋಡಿ "ನೀರು ಮಂಡಲಿ" ಅಂತ ಎಲ್ಲಾದ್ರು ಇದ್ಯ? ಒಂದು ಸಂಸ್ಕೃತದ ಒರೆ/ಪದ ಬಂದ್ರೆ ಮುಂದೆಯೂ ಸಂಸ್ಕೃತದ ಒರೆಗಳ ಬಂದುಬಿಡವು ಎಡೆಗಳೂ ಹೆಚ್ಚು.

ಉ: ಕನ್ನಡದ ತಾಂತ್ರಿಕ ಶಬ್ದಗಳು

tarlesubba's picture

ಮಹೆಶರಾಯರೆ sewage treatment plant ಭಾಳ ಉಪ್ಕಾರ ಆಯ್ತು ನೊಡಿ.
ನಂಗೆ ಹೊಳೆದ ಕೆಲೊ ಪದಗಳು ನಿಮ್ಮ ವಿಚಾರ ಬೇಕು.
catchment area. bellandoor catchment area.
ಬೆಳಂದೂರ ತಳಿ?
traffic jam ಸಂಚಾರ ಹೆಪ್ಪುಗಟ್ಟುವುದು.
lane ಹಳಿ
traffic light ದೀಪ
ಒಮ್ಮೊಮ್ಮೆ lite ಅಂತ ಪ್ರಯೊಗ ಬರುತ್ತೆ. office lite, ಉದಾ BRTS lite ಹೀಗೆ. ಅದಿಕ್ಕೆ ತಿಳಿ ಬಳಸಿದರೆ ಹೆಂಗೆ? ತಿಳಿ ಬೀಯಾರ್ಟಿಯೆಸ್.
BRTS: Bus Rapid Transport System.
ಬಸವ: ಬಸ್ಸು ಸಂಚಾರ ವ್ಯವಸ್ತೆ.

BBMP ಬದಲು ಪಾಲಿಕೆ ಬಳಕೆ.

ಉ: ಕನ್ನಡದ ತಾಂತ್ರಿಕ ಶಬ್ದಗಳು

ವೈಭವ's picture

traffic jam ಗೆ ನಾವು ಆಡುಮಾತಿನಲ್ಲಿ ಹೇಳೋದು ಟ್ರಾಪಿಕ್ನಲ್ಲಿ 'ಕಚ್ಕೊಳ್ಳೋದು'
ಆದರೆ ಅದಕ್ಕೆ 'ಬಂಡಿದಟ್ಟಣೆ' /ಗಾಡಿದಟ್ಟಣೆ ಹೇಳ್ಬೋದು

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ತರಲೆ ಬಿಟ್ಟು

traffic jam = ಟ್ರಾಪಿಕ್ ಸಿಕ್ಕು/ಇಕ್ಕಟ್ಟು ( ಸಂಚಾರ/ಸಂಚಾರಿ ಅಂದ್ರೆ traffic ಅಲ್ಲ, ನಡೆದಾಡುವ )
catchment area = ಅಚ್ಚುಕಟ್ಟು ಜಾಗ ( ಹೀಗೆ ಏನೋ ಆಗಲೇ ಬಳಕೆ ಇದೆ, ಕಾವೇರಿ ಅಚ್ಚುಕಟ್ಟು ಪ್ರದೇಶ ಅಂತ )
traffic light = ಟ್ರಾಪಿಕ್ ಬೆಳಕು ( ಇಲ್ಲಿ ದೀಪ ಅನ್ನೋದು ತಪ್ಪು. ದೀಪ = lamp )

ಮಿಕ್ಕಿದ್ದು ನಂಗೆ ತಿಳಿಯಲಿಲ್ಲ

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

ತಿದ್ದು.. ಸಾಲು ಮುಗಿಯಲಿಲ್ಲ

traffic light = ಟ್ರಾಪಿಕ್ ಬೆಳಕು ( ಇಲ್ಲಿ ದೀಪ ಅನ್ನೋದು ತಪ್ಪು. ದೀಪ = lamp )
ಆದ್ರೆ.. ಟ್ರಾಪಿಕ್ ಬೆಳಕು ಅಂದ್ರೆ ಸರಿಗಾಣಲ್ಲ.. ಅದಕ್ಕೆ "ಟ್ರಾಪಿಕ್ ದೀಪ" ಅಂತ ಹೇಳಬೇಕು.

ಸಂಚಾರ/ರಿ ಅಂದ್ರೆ traffic ಅಲ್ಲ...

traffic police = ಸಂಚಾರಿ ಪೋಲಿಸು ಅಂದ್ರೆ :).. ನಡೆದಾಡುವ ಪೋಲಿಸು ಅಂತ ಆಗತ್ದೆ. :)

ಇಲ್ಲಿ ನೋಡಬೋದು
http://dsal.uchicago...
Ka. paraḍu to spread (intr., tr.), extend, be diffused; paradu trade, traffic; parada trader;
ಪರದು = traffic

ಅಚ್ಚಗನ್ನಡ ಒರೆ ಕೂಡ ಇದೆ.

ಉ: ಕನ್ನಡದ ತಾಂತ್ರಿಕ ಶಬ್ದಗಳು

madhava_hs's picture

Samskruta padagaLinda kannaDavu bhaaravaaguvudoo illa, haguravaaguvudoo illa. adella kelavara manasthiti ashte. ollada ganDanige mosarinalli kallu hegO haage sakkadada padagaLu.
sankuchita manobhaavavannu bittu vishaala manobhaavadinda noDidare yaava padagaLU bhaaravalla.

Sakkadada aneka padagaLu, vyaakaraNagaLu kannaDakke varadaanavaagive.

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

:D

ಉ: ಕನ್ನಡದ ತಾಂತ್ರಿಕ ಶಬ್ದಗಳು

mahesha's picture

^^^

ಹರಿಪ್ರಸಾದ್.. ಗಮನಿಸಿರಿ.. ಕಂಗ್ಲೀಸ್ !!

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ