ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › keshav ರವರ ಬ್ಲಾಗ್

ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

July 19, 2007 - 6:58am — keshav

ಅಚ್ಚ ಕನ್ನಡ ಪದಗಳ ಶಬ್ದಕೋಶ ಓದಿ, ಈ ಹಿಂದೆ ಬ್ಲಾಗಿಸಿದ ಉತ್ತರ ಕರ್ನಾಟಕ ಮಿನಿ ಶಬ್ದಕೋಶವನ್ನು ಬರೆಯುತ್ತಿದ್ದೇನೆ. ಇನ್ನೂ ಮುಂದ ಬೆಳಸೂ ವಿಚಾರ ಐತಿ, ಆ ಮಾತು ಬ್ಯಾರೆ.

ಅ:
ಅಗದೀ, ಅಗದಿ
: ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ
ಅಡಸಳ ಬಡಸಳ: ಅವ್ಯವಸ್ಥ
ಅಂವ: ಆತ

ಆ:
ಆಕಿ: ಅವಳು

ಉ:
ಉತ್ತತ್ತಿ: ಒಣ ಖರ್ಜೂರ

ಕ:
ಕಾಲ್ಮಡಿ: ಮೂತ್ರವಿಸರ್ಜನೆ

ಖ:
ಖಜ್ಜೂರಿ: ಖರ್ಜೂರ
ಖರೆ: ನಿಜ
ಖಾನೆ: ವಿಭಾಗ
ಖೊಳಮಿಸುವುದು: ತುಂಬ urgent ಆಗುವುದು
ಖೋಲಿ: ಕೋಣೆ

ಗ:
ಗಿರಮಿಟ್ಟು: ಏನೇನೋ ಹಾಕಿ ಗಿರಿಗಿರಿ ತಿರುಗಿಸಿ ಮಾಡಿದ ಚುರುಮುರಿ

ಚ:
ಚುರುಮುರಿ: ಮಂಡಕ್ಕಿ: ಮಂಡಾಳ
ಚೊಲೊ: ಒಳ್ಳೆಯವ.

ಛ:
ಛೊಲೊ: ಒಳ್ಳೆಯವ.

ತ:
ತಡಿ: ತಾಳು
ತಂಬಿಗಿ ತೊಗೊಂಡು ಹೋಗೂದು: ಮಲವಿಸರ್ಜನೆ ಕಾರ್ಯ

ದ:
ದಮ್: ತಾಳು (ಬಿಜಾಪುರದ ಕಡೆ)

ಪ:
ಪಡಸಾಲಿ: drawing room
ಪುಟಾಣಿ: ಹುರಿಗಡ್ಲೆ
ಪೇರುಹಣ್ಣು: ಪೇರಲೆಹಣ್ಣು

ಫ:
ಫಳಾರ: ಫಲಾಹಾರದ shortform! ತಿಂಡಿ, tiffin, breakfast

ಬ:
ಬಯಲಕಡಿ: ಮಲವಿಸರ್ಜನೆ
ಬ್ರಾಮ್ರು: ಬ್ರಾಹ್ಮಣರು

ಮ:
ಮನೂಕ: ಒಣ ದ್ರಾಕ್ಷಿ
ಮಂಡಕ್ಕಿ: ಮಂಡಾಳ: ಚುರುಮುರಿ
ಮಂಡಾಳ: ಮಂಡಕ್ಕಿ: ಚುರುಮುರಿ
ಮುಂದ?: ಮಾತಾಡುವಾಗ "ಆಮೇಲೆ?" ಅನ್ನುತ್ತಾರಲ್ಲ, ಹಾಗೆ

ತ:
ತಿಂಡಿ: ಕೆರೆತ

ಧ:
ಧಾರಣಿ: price

ರ:
ರಗಡ: ಬೇಕಾದಷ್ಟು

ವ:
ವಗ್ಗರಣಿ: ವಗ್ಗರಣೆ ಹಾಕಿದ ಅವಲಕ್ಕಿ

ಸ:
ಸರs: ಸಾರ್!
ಸಸಾ: ಸರ್ವೇ ಸಾಧಾರಣ/ಸಾಮಾನ್ಯದ shortform, on an average
ಸಂಡಾಸ: ಮಲವಿಸರ್ಜನೆ, lavatory
ಸೋವಿ: cheap

ಶ:
ಶ್ಯಾಣ್ಯಾ: ಜಾಣ
ಶಿಕೋಣಿ: tution
ಶೆಂಗಾ: ನೆಲಗಡಲೆ,

ಹ:
ಹಂಗ: ಹಾಗೇ
ಹಂಗಾರ: ಹಾಗಾದರೆ
ಹಂಗಂದ್ರ: ಹಾಗೆ ಹೇಳಿದರೆ

  • ಉತ್ತರ ಕರ್ನಾಟಕ
  • ಕನ್ನಡ
  • ಶಬ್ದಕೋಶ
~.~
  • keshav ರವರ ಬ್ಲಾಗ್
  • Login or register to post comments
  • 1182 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 19, 2007 - 11:34am — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

ಚನ್ನಾಗಿದೆ... ಹಿಂಗಾ ಬರೀತಾ ಇರ್ರಿ‍.

ಕಾಲ್ಮಡಿ ಬೊಂಬಾಟ್ ಒರೆ.! Smiling ಇದಕ್ಕೆ 'ಜಲಭಾದೆ, ಕಾಲ್ತೊಳೆ' ಇವು ಬಳಕೆಯಲ್ಲಿವೆ.

'ಉತ್ತತ್ತಿ' ಇದು ನಮ್ಮ ಕಡೆಯಾಗೂ ಐತೆ.
'ಚುರುಮುರಿ' ಇದು ಮೈಸೂರಲ್ಲಿ ಒಂದು ಹೆಸರುವಾಸಿ ಮಂಡಕ್ಕಿ ತಿನಿಸು.
'ಬಯಲ ಕಡೆ' Smiling ಇದು ನಮ್ಮ ಕಡೆ 'ಕೆರೆ ಕಡೆ' Smiling

ಪೇರಲೆಹಣ್ಣು ಇದು ಹೇರಳೇಹಣ್ಣಾ?

ಕೇಶವರ ಪಟ್ಟಿಯಲ್ಲಿ 'ಕಕ್ಕಸು' ಇದಕ್ಕೆ ಸಮವಾದ ಒರೆಗಳು ಹೇರಳವಾಗಿವೆ Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:59pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

ಪೇರಲ ಹಣ್ಣು - ಸೀಬೆ ಹಣ್ಣು
ಚಿಕ್ಕು ಹಣ್ಣು - ಚಕ್ಕೋತ , ಸಪೋಟ
ಅನಕಾತ - ಸದ್ಯಕ್ಕೆ
ರಗಡು- ಕಂಡಾಪಟ್ಟೆ
ಮನಗಂಡು - ರಗಡು
ಅಡಕಲ ಖೋಲಿ - ಸ್ಟೋರ್ ರೂಂ
ಆಜೂಬಾಜು - ಅಕ್ಕಪಕ್ಕ
ಸೋವಿ - ಅಗ್ಗ
ತುಟ್ಟಿ -ಧೀಡೀ ದುಪ್ಪಟ್ಟು - ದುಬಾರಿ
ಖೋಲಿ - ಕೋಣೆ
ಅಚ್ಚಿಮೊನ್ನೆ - ಮೊನ್ನೆಯ ಹಿಂದಿನ ದಿನ ( ಆಚೆಮೊನ್ನೆ )

ಆತ (ಅವನು) ಈತ( ಇವನು) , ಇಬ್ಳಾರು - ಇಬ್ಬರೂ ಇವು ಬಳ್ಳಾರಿ ಕಡೆಯ ಆಡುಮಾತಿನಲ್ಲಿವೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:05pm — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

ಚಕ್ಕೋತ ಅಂದ್ರೆ ಸಪೋಟ ಅಲ್ಲ, ನಮ್ಮ ಕಡೆ..

ಚಕ್ಕೋತ ಹಣ್ಣು ಕಿತ್ತಳೆ, ಮೂಸಂಬಿಯ ಜಾತಿ ಹಣ್ಣು. ಆದರೆ ಮೂಸಂಬಿಗಿಂತ ದೊಡ್ಡದಾದು. ಸುಲಿದು ತಿನ್ನಬೇಕು.

"ಚಕ್ಕೋತ ಚಕ್ಕೋತ..." ಹಾಡು Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:36pm — Khavi

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

Khavi's picture

ಮಹೇಶ
"ಕಕ್ಕಸ"ಕ್ಕೆ ಹೋಗುವದಕ್ಕೆ ಇನ್ನೂ ಒಂದಿದೆ.. "ತಂಬಿಗೆ ತಗೊಂಡು ಹೋಗುವುದು" ಅಂತ. ಅಂದರೆ "ತಂಬಿಗೆಯಲ್ಲಿ ನೀರು ತಗೊಂಡು ಹೋಗಿದ್ದಾರೆ" ಅಂದರೆ ಅವರು ಏತಕ್ಕೆ ಹೋಗಿದ್ದಾರೆ ಅಂತ ನಾವೇ ತಿಳಕೋಬೇಕು... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:50pm — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

"ತಂಬಿಗೆಯಲ್ಲಿ ನೀರು ತಗೊಂಡು ಹೋಗಿದ್ದಾರೆ" ಇದನ್ನ ನಾವು "ಚೊಂಬು ತಕ್ಕೊಂಡು ಹಿತ್ತಲ್ಗೆ ಹೋಗು" ಅಂತೀವಿ.. Smiling

ನಮ್ಮ ಮನೆಯಲ್ಲಿ "ಹಿತ್ತಲ್ ಹೋಗ್ತೀನಿ" ಅಂದ್ರೇ ಇದೇ!! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 4, 2007 - 6:19am — venkatesh

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

venkatesh's picture

ನಮ್ಮ ಕಡೆ ಅಂದರ, ಧಾರವಾಡದ ಮಂದಿ, ಬರ್ರಿ. ತುಸ ಕೂಡ್ರಿ. ಇಲ್ಲೆ ಹಿತ್ಲಕಡೀ ಹೋಗ್ಯಾರೆ. ಇನ್ನೇನ್ ಬಂದ್ಬಿಡ್ತಾರ್. ಇಲ್ಲಾ ಅಂದ್ರ ಹಿಂಗ್ ಮಾಡ್ರಿ. ಹಿಂದಗಡಿ ಬಂನ್ರಿ. ಚಲೋ ಆತ್ ನೀವ್ ಬಂದದ್ದು.
ಈ ತರಹ, ನಮ್ಮಕಡೆ ಮಾತಿನ ಧಾಟಿ. ಥೇಟ್ ನಿಮ್ಮತರ್ಹನೇ. ನಾನು ಹೊಳಲ್ಕೆರೆಯಂವ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 7, 2007 - 6:33pm — venkatesh

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

venkatesh's picture

ನಾನು ಹಾಗೂ ನನ್ನ ಪರಿವಾರ ಒಮ್ಮೆ, ರೈಲಿನಲ್ಲಿ ಊರಿಗೆ ಹೋಗ್ತಿದ್ದ್ವಿ. ಅಲ್ಲಿ ಒಬ್ಬ್ರು ಧಾರವಾಡದ್ ಮಂದಿ ಸಿಕ್ರು. ಅದು, ಇದು ಗಪ್ಪ ಎಲ್ಲ ಆದ್ಮೇಲೆ, ನನ್ನ್ಮಗುನನೋಡಿ, " ಎಲ್ಲ ಅಮ್ಮನ್ ತಲಿ ಕಡ್ದಿಟ್ಟಂಗ್ ಅದ "-ಅಲ್ಲೇನ್ರಿ. ಅಂದಾಗ ಅಕಿ ಮಾತ್ ನಮ್ಗೆ ಪಾಡಾತು ನೋಡ್ರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2007 - 3:57pm — naasomeswara

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

naasomeswara's picture

ಮಲೆನಾಡಿನ ಕಡೆ ಯಕ್ಷಗಾನದ ಮಟ್ಟು ಒಂದು ಹೀಗಿದೆ....

ತಂಬ್ಗೆ ತಕ್ಕಂಡ್ ದಿಂಬಕ್ಕ್ ಹೋಗು
ದಿನ ಬಿಟ್ ದಿನ ತೊಕ್ಕಾ...

- ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2007 - 4:27pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

ಮಾತಿನಲ್ಲಿ ಇನ್ನೂ Short ಆಗಿ ತಂಬ್ತೋಂಡ್ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 11:48am — Sunil Jayaprakash

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

Sunil Jayaprakash's picture

ಕಲ್ಮಾಡಿಗೂ ಕಾಲ್ಮಡಿಗೂ ಇರುವ ವ್ಯತ್ಯಾಸವೇನು ? ಸುರೇಶ್ ಕಲ್ಮಾಡಿ ಅಂತ ಒಬ್ಬರಿದ್ದಾರಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:41pm — Khavi

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

Khavi's picture

ಕಲ್ಮಾಡಿ ಅಂದರೆ ಒಂದು ಅಡ್ಡಹೆಸರು... ಕಲ್ಲಿನ ಮಹಡಿ ಮನೆಯವರು ಅಂತ ಇರಬಹುದೇನೋ... ಅದು ಕಲ್ಮಾಡಿ ಆಗಿದೆ.. ಕಾಲ್ಮಡಿ ಅಲ್ಲ Smiling
ನಮ್ಮ ಕಡೆ.. ಮೂಲಿಮನೆಯವರು, ನಡುಮನೆಯವರು, ಹೊಸಮನಿಯವರು, ಹಳೆಮನೆಯವರು ಅಂತ ಎಲ್ಲಾ ಅಡ್ಡಹೆಸರುಗಳು ಇವೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 6:46pm — ಶ್ರೀನಿವಾಸ ವೀ. ಬ೦ಗೋಡಿ

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ಶ್ರೀನಿವಾಸ ವೀ. ಬ೦ಗೋಡಿ's picture

ಮಾಸ್ತಿಯವರ ಒಂದು ಕತೆಯ ಹೆಸರು "ಕಲ್ಮಾಡಿಯ ಕೋಣ". ಅದರಲ್ಲಿ ಮಾಸ್ತಿಯವರು, ಆ ಊರಿನಲ್ಲಿ ಮೊದಲು ಕಲ್ಲನ್ನು ಮಾರುತ್ತಿದ್ದಿರಬೇಕು. ಅದರಿಂದ "ಕಲ್ಲು ಮಾರಿ" ಎಂಬುದೇ ಕಲ್ಮಾರಿ, ಕಲ್ಮಾಡಿ ಅಂತ ಆಗಿರಬೇಕು ಎನ್ನುತ್ತಾರೆ. ಅಥವಾ ಆ ಊರಿನ ಗ್ರಾಮ ದೇವತೆ ಮಾರಮ್ಮ. ವಿಗ್ರಹ ಕಲ್ಲಿನದು. ಅದರಿಂದ ಸಹ "ಕಲ್ಲು ಮಾರಿ" ಎಂಬುದೇ ಕಲ್ಮಾಡಿ ಆಗಿರಬಹುದು ಎಂದು ಬರೆದಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:05pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

ಸಸಾ - ಸಹಸಾ
ಹಂಗಂದ್ರ: - ಹಾಗೆ ಅಂದರೆ
ಮುಂದ - ಮುಂದೆ
ಪುಠಾಣಿ - ಹುರಿಗಡಲೆ
ಆತು - ಅಯಿತು , ಹೋತು - ಹೋಯಿತು . ಇತ್ಯಾದಿ .
ಹೋತಿರು - ಹೋಲಿಕೆ ಹೊಂದಿರು

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 9:35am — kannadakanda

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

kannadakanda's picture

ನಿಮ್ಮ ಮಂಡಾಳು, ಮಂಡಳ್ಳು ಅಚ್ಚಗನ್ನಡದ ಮಂಡರಳು, ಹೋತಿರು=ಹೋಲುತ್ತಿರು->ಹೋಲ್ತಿರು->ಹೋತಿರು, ಕುಟ=ಕಿತ್ತ(ಮಂಡ್ಯ ಕಡೆ)=ಹತ್ತಿರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 1:55pm — Khavi

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

Khavi's picture

ಕೇಶವ ತುಂಬಾ ಚೆನಾಗಿ ಬರೆದಿದ್ದೀರಿ..
ಇವುಗಳಿಗೆ ಇನ್ನೂ ಕೆಲವೊಂದು ಸೇರಿಸೋಣ...

ಹರ್ಯಾಗೆ.. (Haryaage) = ಬೆಳಿಗ್ಗೆ
ನಾಷ್ಟಾ (Naashtaa) , ನ್ಯಾರಿ (Nyaari) = ತಿಂಡಿ, Breakfast
ಖಾರಬ್ಯಾಳಿ = ಹೆಚ್ಚು ಬೇಳೆ ಹಾಕಿದ ಸಾಂಬಾರು
ಸಾರು = ಕಡಿಮೆ ಬೇಳೆ ಹಾಕಿದ ಸಾಂಬಾರು, ತೆಲುಗಿನ ರಸಂ
ಉಳ್ಳಾಗಡ್ಡಿ = ಈರುಳ್ಳಿ
ಬಟಾಟಿ = ಆಲುಗಡ್ಡೆ

ಹೊಯ್ಕೊಳೊದು = ಬಾಯಿ ಬಾಯಿ ಬಡ್ಕೊಳೋದು Smiling

ಕಟಕನೆಯ = ಬಿರುಸಾದ (ಕಟಕ ರೊಟ್ಟಿ = ಬಿರುಸಾದ ರೊಟ್ಟಿ)
ಹಿಂದಾಗಡೆ = ಆಮೇಲೆ, ಆನಂತರ

ಲುಂಗಿ = ಪಂಚೆ
ದೋತ್ರ = ಧೋತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 7:26pm — ಸಂಗನಗೌಡ

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ಸಂಗನಗೌಡ's picture

ಹರ್ಯಾಗೆ - ಇದು ತುಂಬ ಒಳ್ಳೆ ಒರೆ. ಹರ್ಯಾಗೆ/ಹರ್ಯಾಗ = ಹರಿಯುವಾಗ, ಅಂದರೆ ಬೆಳಕು ಹರಿಯುವಾಗ ಅಂತ. Smiling
...
ಯಾಂಬಾಲ್ - ಯಾರಿಗೆ ಗೊತ್ತು/ಯಾವನು ಬಲ್ಲ Smiling
ಹನುಮಂತೇವರ ಗುಡಿ - ಆಂಜನೇಯನ ಗುಡಿ
ಮಳ್ಳ - ಮರುಳ, ಪೆದ್ದ
ಗಿಡ್ಡ - ಕುಳ್ಳ
ಪಡ್ಡ್ - ಒಂದು ಬಗೆಯ ತಿನಿಸು, ದಕ್ಷಿಣ ಕನ್ನಡ ಕಡೆ 'ಅಪ್ಪ' ಅಂತಾರೇನೋ??
ಪಟಕಾ - ಪೇಟಾ
ಮುತ್ಯಾ - ತಾತ, ಅಜ್ಜ
ಆಯಿ - ಅಜ್ಜಿ
ಕಾಕು - ಚಿಕ್ಕಮ್ಮ
ಕಾಕಾ - ಚಿಕ್ಕಪ್ಪ
ಅರಿಬಿ - ಬಟ್ಟೆ
ಟೊಪಿಗಿ - ಟೋಪಿ
ನಳ - ನಲ್ಲಿ/ಕೊಳಾಯಿ
ಎರಿನೆಲ - ಬಿತ್ತಲು ತಯಾರಾದ ನೆಲ
ಬಾನಾ - ದೇವರಿಗೆ ಕೊಡುವ ಎಡೆ
ಉಂಡಿ - ಲಾಡು
...
...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 7:26pm — ಸಂಗನಗೌಡ

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ಸಂಗನಗೌಡ's picture

ಹರ್ಯಾಗೆ - ಇದು ತುಂಬ ಒಳ್ಳೆ ಒರೆ. ಹರ್ಯಾಗೆ/ಹರ್ಯಾಗ = ಹರಿಯುವಾಗ, ಅಂದರೆ ಬೆಳಕು ಹರಿಯುವಾಗ ಅಂತ. Smiling
...
ಯಾಂಬಾಲ್ - ಯಾರಿಗೆ ಗೊತ್ತು/ಯಾವನು ಬಲ್ಲ Smiling
ಹನುಮಂತೇವರ ಗುಡಿ - ಆಂಜನೇಯನ ಗುಡಿ
ಮಳ್ಳ - ಮರುಳ, ಪೆದ್ದ
ಗಿಡ್ಡ - ಕುಳ್ಳ
ಪಡ್ಡ್ - ಒಂದು ಬಗೆಯ ತಿನಿಸು, ದಕ್ಷಿಣ ಕನ್ನಡ ಕಡೆ 'ಅಪ್ಪ' ಅಂತಾರೇನೋ??
ಪಟಕಾ - ಪೇಟಾ
ಮುತ್ಯಾ - ತಾತ, ಅಜ್ಜ
ಆಯಿ - ಅಜ್ಜಿ
ಕಾಕು - ಚಿಕ್ಕಮ್ಮ
ಕಾಕಾ - ಚಿಕ್ಕಪ್ಪ
ಅರಿಬಿ - ಬಟ್ಟೆ
ಟೊಪಿಗಿ - ಟೋಪಿ
ನಳ - ನಲ್ಲಿ/ಕೊಳಾಯಿ
ಎರಿನೆಲ - ಬಿತ್ತಲು ತಯಾರಾದ ನೆಲ
ಬಾನಾ - ದೇವರಿಗೆ ಕೊಡುವ ಎಡೆ
ಉಂಡಿ - ಲಾಡು
...
...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 8:03pm — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

"ಉಂಡಿ - ಲಾಡು"

ಸಂಗನ

ಪುರಿಉಂಡೇ, ರವೇ ಉಂಡೆ, ಇವಕ್ಕೆ ಏನು ಅಂತಾರೆ ನಿಮ್ಮ ಕಡೆ.

ನಮ್ಮ ಮನೆಯಲ್ಲಿ ನಾವು "ಲಾಡು ಉಂಡೆ" ಅಂತೀವಿ. ಲಾಡುಗೆ ಲಡ್ಡು, ಲಡ್ಡುಗೆ ಅಂತ ಕೂಡ ಅಂತಾರೆ.

"ಗಾರಿಗೆ, ಮಂಡಿಗೆ, ಲಡ್ಡುಗೆ, ಹೋಳಿಗೆಗಳಂ" ವಿವಾಹ ಭೋಜನವಿದು Smiling.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 8:00pm — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

ರಸಂ ತೆಲುಗಲ್ಲ.. ತೆಲುಗಲ್ಲೂ ಸಾರು ಸಾರೇ/ಚಾರೇ Smiling

ರಸಂ ತಮಿಳು, ಮಳಯಾಳಿಗಳದ್ದು, ಅಲ್ವಾ!! ರಸಂ ಸಂಸ್ಕೃತ!

ಲುಂಗಿ ಅಂದರೆ ಬಣ್ಣದ್ದು. ಪಂಚೆ ಅಂದರೆ ಬಿಳೀದು. ಇವು ನಮ್ಮ ಕಡೆ ಬೇರೇ ಬೇರೆ. so ಲುಂಗಿ != ಪಂಚೆ.

"ಹಿಂದಾಗಡೆ" Smiling ( ನಂಗೆ ನಗು ಬಂತು )

ವಿನಾಯಕ,
ನೀವೇ ಅಲ್ವಾ "ಆಮೇಲೆ ಬರ್ತೀನಿ" ಅಂತ ಹೇಳಕ್ಕೆ "ಹಿಂದಾಗಡೆ ಬರ್ತೀನಿ" ಎಂದು ಒಬ್ಬರನ್ನು ದಂಗು ಬಡಿಸಿದ ಕತೆ ಬರೆದುದು? Smiling

ಚನ್ನಾಗಿದೆ.. ಹಿಂಗಾ ಬರೀತಿರ್ರಿ‍..
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 8:17pm — Khavi

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

Khavi's picture

ಹೌದು ಮಹೇಶ್
ನಾನೆ ಬರೆದುದು... ವೀಣಾರವರ ಬ್ಲಾಗ್ ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 9:40pm — ವೈಭವ

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ವೈಭವ's picture

ನಾನು ಒಮ್ಮೆ ಹುಬ್ಬಳ್ಳಿಗೆ ಹೋಗಿದ್ದಾಗ ಈ 'ಗಿರ್ ಮಿಟ್ ' ತಿಂದಿದ್ದೆ. ಚಲೋ ಇತ್ರಿ. ಎರಡೆರಡು ಸರ್ತಿ ಚೆನ್ನಾಗಿ ಬಾರಿಸಿದ್ದೆ.
ಹುಬ್ಬಳ್ಳಿಲಿ "ಬ್ರಾಡ್ ವೇ" ಅಂತ ಒಂದಿದೆ( ನಿಜವಾದ ಹೆಸರು ಏನು ಗೊತ್ತಿಲ್ಲ). ಅಲ್ಲಿ ಬಡಗ ಕನ್ನಡ ನಾಡಿನ ಎಲ್ಲ ತಿನಿಸುಗಳು ಸಿಗುತ್ತೆ.
ನಾಲಗೆಗೆ ಹಬ್ಬ. ಅದ್ರಲ್ಲೂ ಕರದಂಟು ಸೂಪರ್.

ಇನ್ನು ಕುಂದಾ, ದಾರವಾಡ ಪೇಡ ಎಲ್ಲರಿಗೂ ಗೊತ್ತಿರ ಹಂಗೆ ಹೆಸರುವಾಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2007 - 12:57pm — veena

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

veena's picture

veena.

ಫಲಾಹಾರಕ್ಕೆ ನಾನು ಧಾರವಾಡದಲ್ಲಿ ಫರಾಳ ಎನ್ನುವುದನ್ನು ಕೇಳಿದ್ದೇನೆ. ಉದಾ. ದೀಪಾವಳಿಯ ತಿಂಡಿಗಳಿಗೆ ಅವರು ಫರಾಳ ಎನ್ನುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 7, 2007 - 2:29pm — rklava

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

rklava's picture

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಇನ್ನೂ ಕೆಲವು ಆಡುಭಾಷೆ ಪದಗಳು.
ರೊಕ್ಕ = ಹಣ
ಸೂಟಿ = ರಜೆ
ನೌಕ್ರಿ = ನೌಕರಿ = ಕೆಲಸ
ಸವುಡು/ಸೌಡು = ಬಿಡುವು
ಲಗೂನ = ಬೇಗ
ಸೊಬಕಾರ = ಸೋಪು
ಲೋಟ = ಗ್ಲಾಸು
ಭಕ್ಕರಿ = ರೊಟ್ಟಿ
ನಪಾಸು = ಫೇಲು
ಪಾಳೆ = ಸರತಿ/ಸಾಲು
ಸಾಲಿ/ಸಾಲಿಗುಡಿ = ಶಾಲೆ
ಹಾದಿ = ದಾರಿ
ಚಾಳೀಸು = ಕನ್ನಡಕ
ಚರಿಗಿ = ತಂಬಿಗೆ
ಚಿಮಣಿ ಎಣ್ಣಿ = ಸೀಮೆ ಎಣ್ಣೆ
ಚಾವಿ = ಕೀಲಿಕೈ
ಬ್ಯಾಸ್ತಾರ/ಬೆಸ್ತವಾರ = ಗುರುವಾರ
ಕಾಕಡ = ಕನಕಾಂಬರ ಹೂ
ರೇಡವೆ = ರೇಡಿಯೋ
ಬಕ್ಕಣ = ಜೇಬು
ಕದ = ಬಾಗಿಲು
ಮಾಸ್ತರ = ಮೇಷ್ಟ್ರು
ಓಣಿ = ಬಡಾವಣೆಯ ರಸ್ತೆ ??
ಲಾಟೀನು = ಲಾಂದ್ರ
ಜಳಕ = ಸ್ನಾನ
ದವಾಖಾನೆ = ಆಸ್ಪತ್ರೆ
ಬ್ಯಾನಿ = ರೋಗ
......
.......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 7, 2007 - 2:42pm — keshav

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

keshav's picture

ಲವ,
ನಿಮ್ಮ ಪಟ್ಟಿ ಭಾಳ ಚೊಲೋ ಅದ. ನನ್ನ ಬ್ಲಾಗಿನ್ಯಾಗ ಸೇರಸ್ತಿನಿ. ಇನ್ನೂ ಬರೀರಿ, ಶಬ್ದಕೋಶ ದೊಡ್ಡದು ಮಾಡೂನಂತ.
ಕೇಶವ
Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2007 - 12:16pm — girish.rajanal

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

girish.rajanal's picture

ನಮಸ್ಕಾರ,

ದೌಡ,ಉಘುನ=ಬೇಗ.
ಮಾಳಗಿ=ಮಾಳಿಗೆ.
ಖಾರಬ್ಯಾಳಿ=ಬೇಳೇಸಾರು.
ದಂದಕ್ಕಿ=ದನದ ಕೊಟ್ಟಿಗೆ.
ಬಂಡಿ=ಚಕ್ಕಡಿ.
ಮಂದಿ=ಜನ.
ಕಾಲ್ಮಡಿ=ಲಘುಶಂಕೆ.
ಕಂದೀಲು=ಲಾಂದ್ರ.
ಚಮಚ=ಸ್ಪೂನು.
ಸಂದಿ=ಓಣಿ.
ಸಂಗಟ=ಜೊತೆ,ಸಂಗಡ.
ಬೇಗಿನ್ಯಾಗ=ಬೆಳಿಗ್ಗೆ ಹೊತ್ತು.
ಉಂಬೋದು=ಉಣ್ಣುವುದು
ಬಾರಕೋಲು=ಚಾವಟಿ(ಎತ್ತುಗಳನ್ನು ಓಡಿಸಲು,ಬೆದರಿಸಲು).
ಬೆದರು,ಅಂಜು=ಹೆದರು
ಜಿಗಿ=ನೆಗೆ,ಎಗರುವುದು.
ಉಂಬೋದು=ಉಣ್ಣುವುದು.
ತಿಂಬೋದು=ತಿನ್ನುವುದು.
ತಿಣುಕು=ತೀವ್ರ ಪ್ರಯತ್ನ.
ಗಲ್ಲ,ಕಪಾಳ=ಕೆನ್ನೆ(ಕಪಾಳಮೋಕ್ಷ ಅಂತಾರಲ್ಲ ಹಂಗ).
ಶೂಲೆ=ನೋವು
ಹುಳ್ಳಿಸಂಕ್ಟಿ=ಹುರುಳಿ ಹಾಕಿ ಮಾಡಿದ ಪಾಯಸ.
ತೊಲೆ=ಪಿಲ್ಲರ್‍
ಕಿರಾಣಿ ಅಂಗಡಿ=ದಿನಸಿಅಂಗಡಿ(ಪ್ರಾವ್ಹಿಜನ್ ಸ್ಟೋರ್‍)
ಜಂಗಿ=ಬಹಳ,ಪಟ್ಟುಬಿಡದ
ತುರುಸಿನ=ಕುತೂಹಲಕರ,ಬಿರುಸಿನ
ಅರಬಟ್=ಬಲು ಹುರುಪು
ಹಳ್ಳ=ಝರಿ,ಸಣ್ಣಗೆ ಹರಿಯುವ ನೀರು.
ಬೋದು=ಕುಣಿ,ತಗ್ಗು.
ಸಂದೂಕ=ದೊಡ್ಡ ಮರದ ಪೆಟ್ಟಿಗೆ.
ಅಗಳಿ=ಬಾಗಿಲು ಮುಚ್ಚಿದ ನಂತರ ಹಾಕುವ ತಡೆ.
ಅಗಸಿ ಬಾಗಿಲು=ಊರ ದ್ವಾರ ಬಾಗಿಲು.
ತುಡುಗು=ಕಳುವು,ಕಳ್ಳತನ.
ಸರಹೊತ್ತು=ನಡುರಾತ್ರಿ.
ಚಂದ=ಅಂದದ,ಒಳ್ಳಯ
ಗುಡಿ=ದೇವಸ್ಥಾನ.
ಗುಡ್ಡ=ಬೆಟ್ಟ.
ಪಂಖಾ=ಫ್ಯಾನ್.
ಹಿಟ್ಟಿನ ಗಿರಣಿ=ಫ್ಲೋರ್‍ ಮಿಲ್.
ಪೇರಲ ಹಣ್ಣು=ಸೀಬೆ ಹಣ್ಣು.
ಕಲ್ಲಂಗಡಿ=ವಾಟರ್‍ ಮೆಲೊನ್.
ವಾಟೆ=ಲೋಟ
ಖಡುವು=ಚಾಕ್ ಪೀಸ್
ಪಾಟಿ=ಸ್ಲೇಟು.
ಬಳಪ=ಪಾಟಿ ಮೇಲೆ ಬರೆಯಲು ಉಪಯೋಗಿವ ಸಾಧನ,ಒಂದು ತರಹದ ಕಲ್ಲು.

ನೆನಪು ಮಾಡಿಕೊಂಡು ಇನ್ನೂ ಬರೀತಿನಿ..
ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2007 - 12:58pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

ಮೇಲಿನ ’ಉಘುನ ’ ಅನ್ನೋದನ್ನ ಲಘುನ , ಲಗೂನ ಅಂತ ಓದ್ಕೊಳ್ರಿ .
ಮಾಳಿಗಿ = ಟೆರೇಸು Smiling
ಕುಟ್ಟೆ = ಹತ್ರ ( ಕಾರವಾರ ಕಡೆ ಈ ಮಾತು ಇದೆ)
ಉಂಬೋದು , ತಿಂಬೋದು , ಅಂಬೋದು ಇವಕ್ಕೆ ಉಂಬೋಣ , ತಿಂಬೋಣ , ಅಂಬೋಣ ( ಅಭಿಪ್ರಾಯ ) ಅನ್ನೋ ಶಬ್ದಗಳು ಹಿಂದೆ ಬಳಕೆಯಲ್ಲಿದ್ದವು .
ಬೇಗಿನ್ಯಾಗ - ಇಲ್ಲಿ ಬೈಗು ಶಬ್ದ ಗಮನಿಸಬಹುದು .
ಶೂಲೆ - ಸೂಲಿ

ಇಂಗ್ಲೀಷ್ ನಮ್ಮ ನುಡಿಯಲ್ಲಿ ಒಳಹೊಕ್ಕು ಕನ್ನಡ ಪದಗಳನ್ನು ಮರೆಸುತ್ತಿರುವಾಗ ಸ್ಪೂನು , ಕಿಚನ್ನು ಮುಂತಾದವುಗಳಿಗೆ ಕನ್ನಡ ಶಬ್ದಗಳನ್ನು ಮತ್ತೆ ನೆನಪು ಮಾಡ್ಕೊಳ್ಳೋ ದಿವಸ ಬಂದಿದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2007 - 12:17pm — girish.rajanal

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

girish.rajanal's picture

ನಮಸ್ಕಾರ,

ದೌಡ,ಉಘುನ=ಬೇಗ.
ಮಾಳಗಿ=ಮಾಳಿಗೆ.
ಖಾರಬ್ಯಾಳಿ=ಬೇಳೇಸಾರು.
ದಂದಕ್ಕಿ=ದನದ ಕೊಟ್ಟಿಗೆ.
ಬಂಡಿ=ಚಕ್ಕಡಿ.
ಮಂದಿ=ಜನ.
ಕಾಲ್ಮಡಿ=ಲಘುಶಂಕೆ.
ಕಂದೀಲು=ಲಾಂದ್ರ.
ಚಮಚ=ಸ್ಪೂನು.
ಸಂದಿ=ಓಣಿ.
ಸಂಗಟ=ಜೊತೆ,ಸಂಗಡ.
ಬೇಗಿನ್ಯಾಗ=ಬೆಳಿಗ್ಗೆ ಹೊತ್ತು.
ಉಂಬೋದು=ಉಣ್ಣುವುದು
ಬಾರಕೋಲು=ಚಾವಟಿ(ಎತ್ತುಗಳನ್ನು ಓಡಿಸಲು,ಬೆದರಿಸಲು).
ಬೆದರು,ಅಂಜು=ಹೆದರು
ಜಿಗಿ=ನೆಗೆ,ಎಗರುವುದು.
ಉಂಬೋದು=ಉಣ್ಣುವುದು.
ತಿಂಬೋದು=ತಿನ್ನುವುದು.
ತಿಣುಕು=ತೀವ್ರ ಪ್ರಯತ್ನ.
ಗಲ್ಲ,ಕಪಾಳ=ಕೆನ್ನೆ(ಕಪಾಳಮೋಕ್ಷ ಅಂತಾರಲ್ಲ ಹಂಗ).
ಶೂಲೆ=ನೋವು
ಹುಳ್ಳಿಸಂಕ್ಟಿ=ಹುರುಳಿ ಹಾಕಿ ಮಾಡಿದ ಪಾಯಸ.
ತೊಲೆ=ಪಿಲ್ಲರ್‍
ಕಿರಾಣಿ ಅಂಗಡಿ=ದಿನಸಿಅಂಗಡಿ(ಪ್ರಾವ್ಹಿಜನ್ ಸ್ಟೋರ್‍)
ಜಂಗಿ=ಬಹಳ,ಪಟ್ಟುಬಿಡದ
ತುರುಸಿನ=ಕುತೂಹಲಕರ,ಬಿರುಸಿನ
ಅರಬಟ್=ಬಲು ಹುರುಪು
ಹಳ್ಳ=ಝರಿ,ಸಣ್ಣಗೆ ಹರಿಯುವ ನೀರು.
ಬೋದು=ಕುಣಿ,ತಗ್ಗು.
ಸಂದೂಕ=ದೊಡ್ಡ ಮರದ ಪೆಟ್ಟಿಗೆ.
ಅಗಳಿ=ಬಾಗಿಲು ಮುಚ್ಚಿದ ನಂತರ ಹಾಕುವ ತಡೆ.
ಅಗಸಿ ಬಾಗಿಲು=ಊರ ದ್ವಾರ ಬಾಗಿಲು.
ತುಡುಗು=ಕಳುವು,ಕಳ್ಳತನ.
ಸರಹೊತ್ತು=ನಡುರಾತ್ರಿ.
ಚಂದ=ಅಂದದ,ಒಳ್ಳಯ
ಗುಡಿ=ದೇವಸ್ಥಾನ.
ಗುಡ್ಡ=ಬೆಟ್ಟ.
ಪಂಖಾ=ಫ್ಯಾನ್.
ಹಿಟ್ಟಿನ ಗಿರಣಿ=ಫ್ಲೋರ್‍ ಮಿಲ್.
ಪೇರಲ ಹಣ್ಣು=ಸೀಬೆ ಹಣ್ಣು.
ಕಲ್ಲಂಗಡಿ=ವಾಟರ್‍ ಮೆಲೊನ್.
ವಾಟೆ=ಲೋಟ
ಖಡುವು=ಚಾಕ್ ಪೀಸ್
ಪಾಟಿ=ಸ್ಲೇಟು.
ಬಳಪ=ಪಾಟಿ ಮೇಲೆ ಬರೆಯಲು ಉಪಯೋಗಿವ ಸಾಧನ,ಒಂದು ತರಹದ ಕಲ್ಲು.
ಖಬರ=ಮಾಹಿತಿ,ಅರಿವು

ನೆನಪು ಮಾಡಿಕೊಂಡು ಇನ್ನೂ ಬರೀತಿನಿ..
ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2007 - 12:23pm — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

ಗುಡ್ಡ=ಬೆಟ್ಟ.

ಗುಡ್ಡ ಮತ್ತು ಬೆಟ್ಟ ಬೇರೆ ಬೇರೆ..

ಗುಡ್ಡ ಅಂದ್ರೆ ಬಂಡೆಕಲ್ಲುಗಳ ದಿಣ್ಣೆ
ಬೆಟ್ಟ ಅಂದ್ರೆ ಮಣ್ಣುದಿಣ್ಣೆ

ಬಳ್ಳಾರಿ ಗುಡ್ಡ, ರಾಗಿ ಗುಡ್ಡ, ಮಾವಿನ ಕೆರೆ ಗುಡ್ಡ( ಹಾಸನ )....
ಚಾಮುಂಡಿ ಬೆಟ್ಟ, ಬೆಳ್ಚುಕಲ್ ಬೆಟ್ಟ,..

ಇನ್ನು ಹಲವು ಹೀಗೆ .. ನಮ್ಮ ತೆಂಕಣದಲ್ಲೂ ಬಳಕೆಯಲ್ಲಿವೆ.. ಮಾದರಿ ಮಂದಿ, ಮಾಳಿಗೆ, ಕಲ್ಲಂಗಡಿ, ಹಳ್ಳ... ಇದನ್ನ ಬರೀ ಬಡಗುಗನ್ನಡ ಅನ್ನೋದು ನಮ್ಗೆ ಕಸಿವಿಸಿ.. ಅದು ಎಲ್ಲಗನ್ನಡ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2007 - 1:01pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

ಗುಡ್ಡ , ಬೆಟ್ಟ ಬೇರೆ ಅಂತ ನೀವು ಅಂದ್ಕೊಂಡ್ರೂ , ಉತ್ತರ ಕರ್ನಾಟಕದ ಮಾತಿನಲ್ಲಿ ಬೆಟ್ಟ ಇಲ್ಲ
ಇರೋದು ಗುಡ್ಡ , ’ದೋಡ್ಡ’ದಿದ್ದರೆ ಪರ್ವತ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2007 - 1:35pm — mahesha

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

mahesha's picture

ಯಾಕೆಂದ್ರೆ ಅಲ್ಲಿ ಬರೀ ಗುಡ್ಡಗಳೇ ಇರಬೋದು ಅದಕ್ಕೆ!

ಆದ್ರೆ ಹೀಗೆ ಉತ್ತರ ಕರ್ನಾಟಕದ ಪದಗಳು ಎಂದು ಮರಾಟಿ, ಉರ್ದು ಒರೆಗಳನ್ನೆಲ್ಲ ಕರೆದುಕೊಂಡು, ಹಾಗೇ ಕನ್ನಡದ್ದೇ ಒರೆಗಳ ಅರಿತ ಹಾಗೆಹೀಗೆ ಮಾಡಿ ಬೇರೆತನ ತೋರುವುದು ಬೇಕಾ ಅಂತ?

ಆ ಪಟ್ಟಿಯಲ್ಲಿ ಹೆಚ್ಚು ಹೊರನುಡಿ/ಅನ್ಯಭಾಷಾ ಒರೆಗಳೇ ಇವೆ.

ಹೀಗೆ ನಾವು ದಕ್ಷಿಣ ಕರ್ನಾಟಕದ ಪದಗಳು ಎಂದು ಎಂದಾದ್ರು ಪಟ್ಟಿ ಮಾಡಿದ್ದುಉಂಟಾ?

ಯಾಕೆ ಇಷ್ಟೊಂದು ನಾವು ಬೇರೆ ಎಂದು ಹೇಳಿಕೊಳ್ಳುವ ಹಂಬಲ!?

ಶಹರ ಇದು ಉತ್ತರ ಕರ್ನಾಟಕದ ಕನ್ನಡ, ಪಟ್ಟಣ ಇದು ದಕ್ಷಿಣ ಕರ್ನಾಟಕದ ಕನ್ನಡ ಅನ್ನೋದು ಸರಿಯೇ? ಶಹರ ಕನ್ನಡವೇ?

ಇರಲಿ, ಬಿಡಿ... ಕಸಿವಿಸಿ ಈ ಒಡೆಕಿಗೆ, ಬೇರೆ ಎಂದು ಹೇಳು ಹಂಬಲ, ಹುರುಪಿಗೆ..!! ಬರೀ ಕಸಿವಿಸಿ, ಸಿಟ್ಟು, ಮುನಿಸು, ಇಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2007 - 2:29pm — ಶ್ರೀನಿವಾಸ ವೀ. ಬ೦ಗೋಡಿ

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

ಶ್ರೀನಿವಾಸ ವೀ. ಬ೦ಗೋಡಿ's picture

mahesha wrote:
ಆದ್ರೆ ಹೀಗೆ ಉತ್ತರ ಕರ್ನಾಟಕದ ಪದಗಳು ಎಂದು ಮರಾಟಿ, ಉರ್ದು ಒರೆಗಳನ್ನೆಲ್ಲ ಕರೆದುಕೊಂಡು, ಹಾಗೇ ಕನ್ನಡದ್ದೇ ಒರೆಗಳ ಅರಿತ ಹಾಗೆಹೀಗೆ ಮಾಡಿ ಬೇರೆತನ ತೋರುವುದು ಬೇಕಾ ಅಂತ?

ಹಂಗೇನಿಲ್ಲ. ಆದ್ರೆ ಉತ್ತರ ಕರ್ನಾಟಕದ ಎಷ್ಟೋ ಪದಗಳು ಬೇರೆಯವರಿಗೆ ಅರ್ಥವಾಗೋದಿಲ್ಲಾ. (ಹಾಗೆಯೇ ಉತ್ತರ ಕರ್ನಾಟಕದವರಿಗೆ ಹವ್ಯಕ ಕನ್ನಡ ಪೂರ್ತಿ ಅರ್ಥವಾಗೋದಿಲ್ಲಾ). ಹೀಗೆ ಒಂದು ಕಡೆ ಈ ಪದಗಳನ್ನು ಪಟ್ಟಿ ಮಾಡಿದರೆ, ಬೇರೆಯವರಿಗೆ ಅನುಕೂಲವಗುತ್ತಲ್ಲಾ?
(ಆದ್ರೆ, ಈ ಪಟ್ಟಿಯನ್ನು ಉತ್ತರ ಕರ್ನಾಟಕದ ಮಂದಿ ಬಿಟ್ಟು ಬೇರೆಯವರು ನೋಡೋದು ಅನುಮಾನ! Sad )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 28, 2007 - 3:52pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

ನೋಡ್ರೀ ,
ಇಲ್ಲಿ ಒಂದಿಷ್ಟು ಶಬ್ದಗಳನ್ನ ಗುಡ್ಡೆ ಹಾಕ್ತಿದೀವಿ ,
ನಿಮಗೆ ಕೆಲವು ಅಪ್ಪಟ ಕನ್ನಡ ಶಬ್ದ ಸಿಕ್ರೂ ಸಿಗಬಹುದು ....ಬೇಕಾದ್ದನ್ನ ಆರಿಸ್ಕೊಳ್ಳಿ ....
ಪರಸ್ಪರ ಅರಿವಿನಿಂದ ಬೇರೆತನ ಕಮ್ಮಿ ಆಗುತ್ತೆ ಅಂತ ಯಾಕೆ ನೀವು ತಿಳ್ಕೋಬಾರ್ದು ?
ಪರಸ್ಪರ ಅರಿವಿನ ಕೊರತೆಯಿಂದಾನೇ ಬೇರೆತನ ಹೆಚ್ಚಾಗಿರೋದು ...
ಚಾಲ್ತಿಯಲ್ಲಿರೋ ಶಬ್ದ , ಬಳಕೆ ತಿಳಕೊಂಡರೆ ತಪ್ಪೆನು ? ಚಾಲ್ತಿಯಲ್ಲಿರೋ ಭಾಷಾಪ್ರಭೇದಗಳನ್ನು ತಿಳಕೋಬೇಕಲ್ವೇ ?
ಉತ್ತರ ಕರ್ನಾಟಕದವರು ಬೆಂಗಳೂರು ಕಡೆಯ ಭಾಶೆ ತಿಳಕೊಂಡಿಲ್ವೇ ?
ಇನ್ನು ಬೇರೆ ಭಾಷೆ ಶಬ್ದ ... ಭಾಷೆ ಶ್ರೀಮಂತ ಆಗುತ್ತದೆ ... ಇಂಗ್ಲೀಷ್ ಬೆಳೆದಿದ್ದೇ ಹಾಗೆ ಅಂತಾರಲ್ಲ ....
ಕನ್ನಡದಿಂದ ಸಂಸ್ಕೃತ ತಗೀರಿ , ಇಂಗ್ಲೀಷ್ ತಗೀರಿ , ಮರಾಠೀ , ಉರ್ದು , ಪಾರ್ಸಿ , ತೆಲುಗು, ತಮಿಳು ತಗೀರಿ ...
ಆಗ ಎಲ್ಲಿರ್ತೀರ ? ಎಷ್ಟು ಶತಮಾನ ಹಿಂದೆ ಹೋಗ್ತೀರಿ ? ನಿಮ್ಮ ಏಡು , ನಾಳುಗಳು , ಕಡೆವಳ .... ಹೀಗೆ ಬರೀತ , ಮಾತಾಡ್ತಾ ಹೋಗಿ , ನೀವು ಮಾತಾಡಿದ್ದು , ಬರೆದಿದ್ದು ಯಾರ್ಗೂ ಅರ್ಥ ಆಗಲ್ಲ ....

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 27, 2007 - 12:47pm — shreekant.mishrikoti

ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ

shreekant.mishrikoti's picture

http://www.sampada.net/blog/shreekantmishrikoti/14/12/2007/6666 ನೋಡೀರೇನು ?
ಇವು ನಾನು ಎನ್ಕೆ ಅವರ ವೈನಿ ಕಾದಂಬರಿ ಓದೋ ಮುಂದ ಸಿಕ್ಕ ಶಬ್ದಾ , ಇನ್ನೂ ಬರೀತಿರ್ತೀನಿ .
ನಿಮಗ ಬೇಕಾದ್ದು ಸೇರಿಸ್ಕೋಡ್ರಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಕನಸ್ಸು
  • ಬಸವಣ್ಣನ ನುಡಿ
Syndicate content

ಲೇಖಕರು

keshav's picture

ಪರಿಚಯ

I am a radiologist (doctor) by profession, but I spend lots of time in literature, music, movies and internet.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 497 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator