~
ಇವತ್ತಿನ ವಚನ
ಕೆಲವ೦ ಬಲ್ಲವರಿ೦ದ ಕಲ್ತು
ಕೆಲವ೦ ಮಾಳ್ಪವರಿ೦ದ ಕ೦ಡು ಮತ್ತೆ
ಹಲವ೦ ತಾನೆ ಸ್ವತಃ ಮಾಡಿ ತಿಳಿ ಎ೦ದ ಸರ್ವಜ್ಞ

- keshava ರವರ ಬ್ಲಾಗ್
- Login or register to post comments
- 529 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
~
ಕೆಲವ೦ ಬಲ್ಲವರಿ೦ದ ಕಲ್ತು
ಕೆಲವ೦ ಮಾಳ್ಪವರಿ೦ದ ಕ೦ಡು ಮತ್ತೆ
ಹಲವ೦ ತಾನೆ ಸ್ವತಃ ಮಾಡಿ ತಿಳಿ ಎ೦ದ ಸರ್ವಜ್ಞ

ಪ್ರತಿಕ್ರಿಯೆಗಳು
ಇದು ವಚನ ಅಲ್ಲ ಸೋಮೇಶ್ವರ ಶತಕದ ಪೀಠಿಕೆ
ನನಗೆ ತಿಳಿದಿರುವ ಮಟ್ಟಿಗೆ ಇದು ಸರ್ವಜ್ಞನ ವಚನ ಅಲ್ಲ. ಸೋಮೇಶ್ವರ ಶತಕದಲ್ಲಿನ ಮೊದಲ ಪದ್ಯ.
ಕೆವಲಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳೋನುದತಂ.....ಹರ ಹರಾ ಚೆನ್ನಸೋಮೇಶ್ವರಾ..
ಇದು ಸರ್ವಜ್ಞನ ವಚನ ಎಂಬುದಕ್ಕೆ ಯಾವುದಾದರು ಪುರಾವೆ ಇದೆಯೇ. ಏಕೆ ಕೇಳುತ್ತಿದ್ದೇನೆಂದರೆ ಕೆಲವು ದಿನಗಳ ಹಿಂದೆ ನಾನು ಸೋಮೇಶ್ವರ ಶತಕವನ್ನು ಓದಿದ್ದೆ. ಶತಕದ ಆರಂಭದಲ್ಲಿ ಸೋಮ ಕವಿ ನನ್ನನ್ನು ನಿಮ್ಮವನೇ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಾ ಈ ಪದ್ಯ ಬರೆದಿದ್ದಾನೆ. ಅದರ ಬಗ್ಗೆ ಒಂದು ಪುಟ್ಟ ವಿಮರ್ಶೆಯನ್ನೂ (ಪ್ರಾಶ್ನಾರ್ಥಕ) ಸಹ ಬರೆದಿದ್ದೆ. ಅದಕ್ಕೆ ಕೇಳಿದೆ ಅಷ್ಟೆ.
ಹಯ್ಯೋ ಇದು
ಹಯ್ಯೋ ಇದು ಸರ್ವಜ್ಞನ ವಚನಾನೆ.
ಸೋಮೇಶ್ವರ ಬೇರೆ ರೀತಿಯಲ್ಲಿ ಹೇಳಿರಬಹುದು ಅಷ್ಟೇ.
http://www.missouri.edu/~physchan/kannada/SARVAGNA/sarvagna.html
ಇಲ್ಲಿ ಹೋಗಿ ನೋಡಬಹುದು
ಗೂಗಲ್
ಗೂಗಲ್ ಇರುವುದರಿ೦ದ ಎಷ್ಟು ಬೇಕಾದರು ಹುಡುಕಬಹುದು
( ನಾನೂ ಅಲ್ಲೆಯೇ ಹುಡುಕಿದ್ದು ಖಚಿತಪಡಿಸಿಕೊಳ್ಳುವುದಕ್ಕೆ)
ಸೋಮೇಶ್ವರ ಶತಕದ ಪೀಠಿಕೆ
ಸೋಮೇಶ್ವರ ಶತಕದ ಸಂಪೂರ್ಣ ಪದ್ಯ ಇಲ್ಲಿ ಹಾಕುತ್ತಿದ್ದೇನೆ. ಎಷ್ಟು ಸಾಮ್ಯವಿದೆ ನೋಡಿ, ಇದಕ್ಕೂ ಸರ್ವಜ್ಞನ ವಚನಕ್ಕೂ.
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ||
ಅಂದರೆ ಹೇಗೆ ಅನೇಕ ನದಿ, ಹಳ್ಳ, ತೊರೆಗಳು ಸೇರಿ ಸಮುದ್ರವಾಗುವುದೋ, ಹಾಗೆಯೇ
ಮನುಷ್ಯನು ಸಹ ಕೆಲವು ವಿಷಯಗಳುನ್ನು ಪಂಡಿತರಿಂದಲೂ, ಕೆಲವನ್ನು ಶಾಸ್ತ್ರಗಳನ್ನು ಓದುತ್ತಲೂ, ಕೆಲವನ್ನು ತಿಳಿದವರಿಂದ ಅರಿತು, ಕೆಲವನ್ನು ಸ್ವತಃ ಕಂಡು, ಕೆಲವನ್ನು ಸಜ್ಜನರ ಸಹವಾಸದಿಂದಲೂ ತಿಳಿಯುತ್ತಾ ಸರ್ವಜ್ಞನಾಗುವನು.
ಇದರಿ೦ದ
ಇದರಿ೦ದ ತಿಳಿಯುತ್ತದೆ ಸರ್ವಙ್ಞನ ಕಾಲ ಸೋಮೇಶ್ವರನಿಗಿ೦ತ ಹಳೆಯದು ಅ೦ತ.
----------ಸರ್ವಜ್ಞನಪ್ಪಂ ನರಂ --------
ಉ:ಇದರಿಂದ ..ತಪ್ಪು ನಿರ್ಣಯ
ತಪ್ಪು ನಿರ್ಣಯಕ್ಕೆ ಬಂದಿದ್ದೀರಿ ಅನ್ನಿಸುತ್ತೆ. ಕೇವಲ ಪದಮಾತ್ರದಿಂದಲೇ ಅವನು ಇವನಿಗಿಂತ ಹಳಬ ಎಂದು ಹೇಳಲು ಬಾರದು. ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವನು ಎಂದಷ್ಟೇ ಅರ್ಥ. ನೀವೇ ಕೊಟ್ಟಿರುವ ಎಳೆಯಲ್ಲಿ http://www.missouri.edu/~physchan/kannada/SARVAGNA/sarvagna.html ಸರ್ವಜ್ಞನ ಕಾಲ ೧೭ ಶತಮಾನ ಅಂತ ಇದೆ. ಆದರೆ ಸೋಮನ ಕಾಲ ೧೧-೧೩ ನೇ ಶತಮಾನ.(ವಿದ್ವಾಂಸರೆಲ್ಲ ಒಪ್ಪಿರುವಂಥದ್ದು)
ಆದ್ದರಿಂದ ಎರಡರಲ್ಲಿ, ನೀವು ನೀಡಿರುವ ಎಳೆಯಲ್ಲಿನ ಮಾಹಿತಿ ಅಥವಾ ನೀವು ತೆಗೆದುಕೊಂಡ ನಿರ್ಣಯ, ಒಂದು ತಪ್ಪಿರಲೇಬೇಕಲ್ಲವೇ?. ಕುತೂಹಲ ತಾರಕಕ್ಕೇರುತ್ತಿದೆ. ಸರ್ವಜ್ಞನ ಕಾಲ ಯಾವುದು. ಸರ್ವಜ್ಞನ ಬಗ್ಗೆ ತಿಳಿದಿರುವ ಸ್ನೇಹಿತರು ಸಮಸ್ಯೆ ಬಗೆಹರಿಸಬೇಕೆಂದು ಪ್ರಾರ್ಥನೆ.
sunil wrote:ಆದರೆ
The period of Sarvagna's life has not been determined accurately, and very little is
known about him. Based on studies of his literary style and the references of later writers, historians estimate that he might have lived during the first half of the 17th century.
ಅ೦ದರೆ ಅವನ ಕಾಲ ಇನ್ನೂ ಖಚಿತವಾಗಿ ತಿಳಿದು ಬ೦ದಿಲ್ಲ.
---ಸರ್ವಙ್ಞನಪ್ಪ೦ ನರ೦ --- ಎ೦ದರೆ ಸರ್ವಙ್ಞನನ್ನೂ ಮೀರಿಸಬಲ್ಲ-ಅ೦ಥವನು ಅ೦ತ
ಅ೦ದರೆ ಸರ್ವಙ್ಞನ ವಿಷಯ ಅವನಿಗೆ ತಿಳಿದಿರಬೇಕು ಅ೦ತ ತಾನೇ ಅರ್ಥ
ಸರ್ವಜ್ಞ
ತ್ರಿಪದಿಗಳೆ೦ಬ ಮೂರು ಸಾಲಿನ ವಚನಗಳನ್ನು ಬರೆದ ಪ್ರಸಿದ್ಧ ಕವಿ. ಸರ್ವಜ್ಞ ಜೀವಿಸಿದ್ದ ಕಾಲವನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿ೦ದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿ೦ದ ಅವನು ಜೀವಿಸಿದ್ದ ಕಾಲ ಸುಮಾರಾಗಿ ೧೭ ನೇ ಶತಮಾನದ ಆದಿಭಾಗ ಎ೦ದು ಪ್ರತಿಪಾದಿಸಲಾಗಿದೆ. ಸರ್ವಜ್ಞನ ಕೆಲವು ಬರಹಗಳಿ೦ದ ಆತನ ನಿಜವಾದ ಹೆಸರು ಪುಷ್ಪದತ್ತ ಎ೦ದು ಊಹಿಸಲಾಗಿದೆ. "ಸರ್ವಜ್ಞ" ಅವನ ಕಾವ್ಯನಾಮ. ಒಟ್ಟು ಸುಮಾರು ೧೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನ೦ತರದ ಕಾಲದಲ್ಲಿ ಬೇರಬೇರೆ ಲೇಖಕರಿ೦ದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿ೦ದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ. ಸರ್ವಜ್ಞನ ತ್ರಿಪದಿಗಳಲ್ಲಿ ಒ೦ದು ಉದಾಹರಣೆ: "ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ? ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ||"
ಸರ್ವಜ್ಞ -ವಿ- ಸೋಮೇಶ್ವರ
ಒಳ್ಳೆಯ ಸ್ವಾರಸ್ಯಕರ ಚರ್ಚೆ.
ನಾನು ಸೋಮೇಶ್ವರ ಶತಕವನ್ನು ಶಾಲೆಯಲ್ಲಿ ಬಿಟ್ಟು, ಬರೆಲ್ಲು ಓದಿಲ್ಲ. ಹಾಗೆ ನಾನು ಸರ್ವಜ್ಞನ ಎಲ್ಲ ವಚನಗಳನ್ನು ತಿಳಿದಿಲ್ಲ.
ಆದರೆ ಸರ್ವಜ್ಞನ ವಚನಗಳ ಬಗ್ಗೆ , ನನ್ನ ಅರಿವಿಗನುಗುಣವಾಗಿ, ಕೆಲವು ಸಂಗತಿಗಳನ್ನು ಇಲ್ಲಿ ಹೇಳಲಿಚ್ಛಿಸುವೆನು.
೧)ಸರ್ವಜ್ಞನ ವಚನಗಳೆಲ್ಲ ಬಿಡಿವಚನಗಳು. ಅಂದರೆ ಅದು ಯಾವ ಹೆಸರಿರುವ ಗ್ರಂಥದಲ್ಲಿಲ್ಲ.
೨)ಸರ್ವಜ್ಞ ವಚನಗಳಲ್ಲಿ, ಒಂದು ವಚನಕ್ಕು ಮತ್ತೊಂದು ವಚನಕ್ಕು ಭಾಷಾಶೈಲಿಯಲ್ಲಿ ವ್ಯತ್ಯಾಸಕಾಣಬಹುದು. ಅಂದರೆ ಒಂದು ವಚನದಲ್ಲಿ ಬಹಳ ಹಳೆಗನ್ನಡಪದಗಳಿದ್ದರೆ, ಮತ್ತೊಂದರಲ್ಲಿ ಅನೇಕ ಹೊಸಗನ್ನಡಪದಗಳಿರಬಹುದು.
೩)ಸರ್ವಜ್ಞನ ಕಾಲದ ನಂತರವು ಹಲವು "ಸರ್ವಜ್ಞ" ಎಂಬ ಅಂಕಿತವುಳ್ಳ ವಚನಗಳು ರಚಿತವಾಗಿರಬಹುದು.
ಆದ್ದರಿಂದ ಹಲವು ಸಮಯಗಳಲ್ಲಿ ಸರ್ವಜ್ಞನ ವಚನಗಳು ವಿವಾದಾಸ್ಫದವಾಗುವುವು.
ಈ ರೀತಿಯ ಸಂಗತಿಯನ್ನು ಕೆಲವು ಕನಕದಾಸರ ಮತ್ತು ಪುರಂದರದಾಸರ ಕೀರ್ತನೆಗಳಲ್ಲಿಯು ಸಹ ಕಾಣಬಹುದು.
ಉ: ಇವತ್ತಿನ ವಚನ
ಕೇಶವ ಅವರೇ, ಇದು ಸೋಮೇಶ್ವರ ಶತಕವೇ, ಸರ್ವಜ್ಞನ ವಚನವಲ್ಲ.