24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನಕದಾಸರ ಕೀರ್ತನೆಗಳು - ೧

November 16, 2008 - 12:43pm
keshava_prasad
ಭಜಿಸಿ ಬದುಕೆಲೊ ಮನುಜ --------------------- ಕಾಂಬೋದಿ ರಾಗ, ಝಂಪೆ ತಾಳ. ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ ಅಜ ಸುರೇಂದ್ರಾದಿಗಳ ಆದಿ ವಂದಿತ ಪಾದ ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ತುಳಿದು ಕೊಂದಪಾದ ಲೋಕೇಶನಿಗೆ ಒಲಿದು ಪೂಜೆಗೊಂಬುವಪಾದ ಲೋಕಪಾವನ ಗಂಗೆ ಜನಿಸಿದಾ ಪಾದ ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ ಕೊಲಿಸಿ ಕಾಳಗದಿ ಕೌರವರ ಕೆಡಹಿದ ಪಾದ ಬಲಿದ ಕಾಳಿಂಗನು ತುಳಿದಪಾದ ಗರುಡ ಶೇಷಾದಿಗಳು ಪೊತ್ತುಕೊಂಡಿಹ ಪಾದ ಧರೆಯ ಈರಡಿಮಾಡಿ ಅಳೆದ ಪಾದ ಸಿರಿ ತನ್ನ ತೊಡೆಯ ಮೇಲಿರಿಸಿ ಸೇವಿಸಿದ ಪಾದ ವರಕಾಗಿನೆಲೆಯಾದಿ ಕೇಶವನ ಪಾದ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.