ನೋವು ನಲಿವು..
ಹೂವು ಮುಳ್ಳಿನ ನಂಟು
ಒಂದೆ ಗಿಡದಲಿ ಉಂಟು
ಹಗಲು ರಾತ್ರಿಯ ಗುಟ್ಟು
ಒಂದಿರದು ಇನ್ನೊಂದ ಬಿಟ್ಟು
ಕಷ್ಟವೆಂದರೆ ಬಾಳು
ನೋವು ನಲಿವಿನ ನೆರಳು
ಇಷ್ಟವೆಂದು ಬಗೆಯಲು
ನಲಿವು ತಾ ನೋವಿನ ಗೆಲುವು..
--------------------------------------------
ನನ್ನದು ಕವಿ ಹೃದಯವಲ್ಲ ಆದರೂ ಗೀಚಿದ್ದೀನಿ.. ಹೇಗಿದೆಯೆಂದು ತಿಳಿಸಿದರೆ.. ಸಂತೋಷ

- Khavi ರವರ ಬ್ಲಾಗ್
- Login or register to post comments
- 480 hits
- Email this blog





RSS:
ಪ್ರತಿಕ್ರಿಯೆಗಳು
ಉ: ನೋವು ನಲಿವು..
ವಿನಾಯಕರೇ,
ಚನ್ನಾಗೇ ಇದೆ. ನಿಮಗೂ ಕವಿ-ಮನ ಇದೆ ಅಂತ ಈ ಎಂಟು ಸಾಲುಗಳಿವೆ!! ನೀವು ಗೀಚಿದ್ದು, ಸುಚಿತ್ರವಾಗಿದೆ!
"ಇಷ್ಟವೆಂದು ಬಗೆಯಲು
ನಲಿವು ತಾ ನೋವಿನ ಗೆಲುವು.."
ನನಗೆ ತುಂಬಾ ಹಿಡಿಸಿದ ಸಾಲುಗಳು!
ನನ್ನಿ!
ಉ: ನೋವು ನಲಿವು..
ನನ್ನಿ ಮಹೇಶ್
ಉ: ನೋವು ನಲಿವು..
ಚನ್ನಾಗಿದೆ. ನಿಮ್ಮ ಕವಿತ್ವ ಸಮ್ವೆದನಾಶೀಲವಾಗಿದೆ.
ಹಾಗಾಗಿ, ಮತ್ತಸ್ಟು ಕಾವ್ಯಸುಧೆ ಹರಿಯಲಿ.
ಉ: ನೋವು ನಲಿವು..
ಚ್ಹೋಟಾ ಚಾಯ್ ಕುಡಿದ೦ಗಾಯ್ತು !
ಉ: ನೋವು ನಲಿವು..
ಹಂಗಂದ್ರೆ?
ಚಹ ಕಡಿಮೆ ಆಯ್ತು ಅಂತಾನಾ...
ನನ್ನಿ..