ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..
ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ
) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ
ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ..
ನಾನು ಮುಂಜಾವಿನ ಬಯಕೆ (ಮೊರ್ನಿಂಗ ವಿಷಸ್)ಹೇಳಿ.. ಏನಪ್ಪ ಸಮಾಚಾರ ಎಂದೆ..
"There´s a flu shot from the company." ಅಂತ ಅಂದ..
ಅವನು ಜರ್ಮನಿಯಲ್ಲಿ ಮಾತಾಡೋದನ್ನ ಹಾಗೆ ಇಂಗ್ಲೀಷಗೆ ಭಟ್ಟಿ ಇಳಿಸಿದ್ದ ಆ ಪುಣ್ಯಾತ್ಮಾ..
ನಾನು ಆವಕ್ಕಾದೆ... ಏನಪ್ಪ ಕಂಪನೀಲಿ.. ಫ್ಲು ಹೊಡೀತೀದಾರಾ.. ಅಂದೆ..
ಅದಕ್ಕೆ ಅವನು.. "Nein, nein.. Der Winter naht. Der Grippeimpfstoff steht zur Verfügung."
ಅಂತ ಅಂದ... ಮೊದಲು ತಿಳಿಲಿಲ್ಲ ಆಮೇಲೆ ನಿಧಾನವಾಗಿ ಅರಿವಾಯ್ತು.. ಹೆಮ್ಮಾರಿ ನೆಗಡಿನ ಓಡಿಸಲಿಕ್ಕೆ ಚುಚುಮದ್ದು ಕೊಡ್ತಾ ಇದ್ದಾರೆ.. ಅದಿಕ್ಕೆ ಕರೀತಿದ್ದಾನೆ ಅಂತ
ಸರಿ ಅವನ ಜೊತೆಗೆ Arzt (ಡಾಕ್ಟರ್ !!) ಹತ್ತಿರ ಹೋದೆ.
ಅವಳಿಗೋ ಒಂದು ಚೂರು ಇಂಗ್ಲೀಷು ಬರಲ್ಲ.. ನನಗಾದರೋ ಜರ್ಮನಿ ನುಡಿ ತುಸುತುಸು ತಿಳಿಯುತ್ತೆ.. ಆದರೆ ವೈದ್ಯಕೀಯ ನುಡಿಒರೆಗಳು ನನಗೆಲ್ಲಿ ತಿಳಿಯಬೇಕು..
ಅವಳಾದರೋ ನಾಲ್ಕೈದು ಇಂಜೆಕ್ಷನ್ ತೋರಿಸಿ ಯಾವದು ಕೊಡಲಿ ಅಂತ ಕೇಳ್ತಿದಾಳೆ.. ನನಗೋ ಅದರಲ್ಲಿ ಯಾವುದು ಅಂತ ತಿಳೀತಿಲ್ಲ..
ನನಗೆ ಮೈ ಬಿಸಿ ಏರಲಿಕ್ಕೆ ಸುರು ಆಯಿತು.. ಎಲ್ಲಿ ಈ ಮಾರಾಯತಿ ಗೊತಾಗದೇನೆ.. ಯಾವುದಾದರೊ Reaction ಆಗೋ ಚುಚ್ಚು ಮದ್ದು ಕೊಟ್ಟರೆ ಹೇಗೆ ಅಂತ
ಅಲ್ಲಿ ಹುಡುಕಿದರೆ ಯಾರಿಗೂ ಇಂಗಲೀಸು ಬರ್ತಾ ಇಲ್ಲ.. ಅಯ್ಯೋ ದೇವರೆ ಅನ್ನೋವಾಗ ಯಾವನೋ ಒಬ್ಬ ಒಂದು ಜರ್ಮನ-ಇಂಗಲೀಸು ಒರೆಗಂಟು ನೋಡಿದರು....
ನನ್ನ ಹೈಟು, ವೈಟು, ಬ್ಲಡ್ ಪ್ರೆಜರ್ , ಮತ್ತೆ ರಕ್ತ ನೋಡಿ.. ಕೊನೆಗೆ ಯಾವದನ್ನೋ ಒಂದು ಬರುತ್ತೆ ಅಂತ ಚುಚ್ಚಿದರು..
ಎಲ್ಲ ಆಯ್ತು ಅಂತ ಹಲ್ಲು ಕಿರಿದಳು.. ಅವಳಿಗೆ aufwiedersehen ( ಮತ್ತೆ ಸಿಗೋಣ
ಅಂತ ವಿದಾಯ)ಹೇಳಿ..
ಅಬ್ಬ ಬದುಕಿದೆಯ ಬಡಜೀವವೆ ಅಂತ ಹೊರಬಂದೆ .. ಹಿಂದೆ ನೋಡದೆನೆ.. ನನ್ನ arbeitsplatzಗೆ ಹಿಂದಿರುಗಿದೆ..
ನನ್ನ ಆಫೀಸಿನಲ್ಲಿರೋರಿಗೆ ತುಸು ಇಂಗಲೀಸು ಗೊತ್ತು... (ಇಲ್ಲಿ ಇಂಗ್ಲಿಷ ಅವಶ್ಯಕತೆ ಇದ್ದರೆ ಮಾತ್ರ ಅಂಥವರಿಗೆ ಇಂಗ್ಲೀಷ ಟ್ರೇನಿಂಗ ಕೊಡುತ್ತಾರೆ..)
ಆದರೂ ಗೊತ್ತಿರೋ ಇಂಗ್ಲೀಷ ಅಂದರೆ ಹರುಕು ಮುರುಕು ಆದ Technical words ಅಷ್ಟೆ..
ಅದನ್ನೆ ಕಷ್ಟಪಟ್ಟು... ಹಾಗೂ ಹೀಗೂ ಮಾತಾಡುತಾರೆ..
ಹೀಗಾಗಿ ನಾನು ಇವರ ಜೊತೆಗೆ ಇಂಗಲೀಸಿನಲ್ಲಿ ತುಂಬಾ ನಿಧಾನವಾಗಿ ಮೆಲ್ಲಗೆ ಮಾತಾಡಬೇಕು...
ನಾನು ನನ್ನ ಇಂಡಿಯದ ಜೊತೆಗಲಸಗಾರರೊಂದಿಗೆ ಇಂಗಲೀಸಿನಲ್ಲಿ ಮಾತಾಡೋದನ್ನ ತುಂಬಾ ಗಮನಿಸಿದ್ದಾರೆ..
ಅದಕ್ಕೆ ಒಂದು ಸಾರಿ ಚಾ ಸಮಯದಲ್ಲಿ ನನ್ನ ಕೇಳಿದರು.. ನೀವು ಯಾಕೆ ನಿಮ್ಮ ನುಡಿಯಲ್ಲಿ ಮಾತಾಡೋದಿಲ್ಲ ಅಂತ ..
ಅದಕ್ಕೆ ನಾನೆಂದೆ.. ಇಂಗಲೀಸು ನಮಗೆ ಆಫೀಸಿಯಲ್ ನುಡಿ ಅದಿಕ್ಕೆ ಅದರಲ್ಲಿ ಮಾತಾಡೋದು..
ಆಗ ಅವನು ಹುಬ್ಬೇರಿಸಿ.. "ach so.., aber warum nicht Ihre Mutter-Sprache Ihre offizielle Sprache ist" ಅಂತ ಮತ್ತೆ ಕೇಳಿದರು (ಓಹೋ.. ಆದರೆ ನಿಮ್ಮ ತಾಯಿ ನುಡಿ ಯಾಕೆ ನಿಮ್ಮ official ನುಡಿ ಅಲ್ಲ?)
ಅದಕ್ಕೆ ನಾ ಹೇಳಿದೆ.. ಅದು ನಮ್ಮ ಹಣೆಬರಹ ಅಂತ.. ಅವರು ಸುಮ್ಮನೆ ನಕ್ಕರು.. ಏನು ತಿಳಿದರೋ ಏನೋ..
ಆದರೆ ಜನ ಒಳ್ಳೆಯವರು..
ಅಂತು ಇಂತು ಇವರನ್ನ್ ನೋಡಿ ಒಂತರ ಹೆಮ್ಮೆ ಬರುತ್ತೆ...
ಬಿನ್ನೆತ್ತೆಯಿಂದ ಇಂಜನೀಯರಿಂಗ, ಮೆಡಿಕಲ್ ಎಲ್ಲಾನು ಜರ್ಮನಿಯಲ್ಲೇ ಕಲೀತಾರಲ್ಲ ...
ನಮ್ಮ ದೇಸದಲ್ಲು ಹೀಗೆ ಇದ್ದರೆ ಚೆನ್ನ ಅಲ್ಲವ ಅನಕೋತೀನಿ.. ಆದರೆ ಅನಕೋಂಡು ಸುಮ್ಮನೆ ಕೂರಬೇಕಾಗಿದೆ ನನಗೆ..

- Khavi ರವರ ಬ್ಲಾಗ್
- Login or register to post comments
- 586 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಜರ್ಮನಿಯವರು ಮುಂದುವರೆದಿರುವುದು ಅವರು ತಾಯಿನುಡಿಯ ಒಲವಿನಿಂದಲೇ. ಅವ್ರು ಇಂಗಲೀಸ್ ಕಲಿಯದಿರುವುದನ್ನು ಎಂದೂ 'ಐಬು' ಅಂತ ತಿಳಿದಿಲ್ಲ. ಜರ್ಮನ್ ಯಾಕೆ? ಪಿನ್ ಲಾಂಡಿನಲ್ಲ 'ಪಿನ್ನಿಸ್' ಕೈಮನೆ ಇದೆ. ನಾವು ಇನ್ನು ಕನ್ನಡ ಕುಟ್ಟಲು/ಟೈಪ್ ಇಂಗಲೀಸ್ ಕೈಮಣೆಯೊಂದಿಗೆ ಎಗರಾಡ್ತಾ ಇದ್ದೀವಿ.
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ವೈಭವ,
ಹೌದು ಯುರೋಪಿನ ಎಲ್ಲ ನಾಡುಗಳೂ ಇಂಗಲೀಸು ತಂ ಪಕ್ಕದ ನುಡಿ ಅಂತನೇ ಬಗೀತಾರೆ...
ಅವರಿಗೆ ತಮ್ಮ ನುಡಿಯಲ್ಲೇ ಕಲಿತರೆನೇ ತಲೆಯಲ್ಲಿ ಇಳಿಯೋದು... ಬೇರೆ ನುಡಿ ಅವರಿಗೆ ಒಗ್ಗೋದಿಲ್ಲ..
ಜರ್ಮನಿಯವರಿಗೂ ಅವರದೇ ಆದ ಕೈಮಣೆ ಉಂಟು..
ನಮ್ಮ ಜನರೂ ಇದ್ದಾರೆ.. ಇಂಗಲೀಸು ಇಲ್ಲದೆ ಬಾಳಿಲ್ಲ ಅಂತ..
ನಾ ಹೇಳೋದೀಟೆ... ನಮ್ಮ ಜನರಿಗೆ ನಮ್ಮ ನುಡಿಯಲ್ಲೇ ಎಲ್ಲ ಆಗಬೇಕು.. ಹಾಗಂತ ಧಿಡೀರನೆ ಎಲ್ಲ ಆಗೋದಿಲ್ಲ.. ಗೊತ್ತು..
ಅದಕ್ಕೆ ತುಸು ನಾಳುಗಳು ಬೇಕು.. ಆದರೆ ಇಂಗಲೀಸಿಗೆ ಹೆಚ್ಚು ಶರಣು ಹೊಡೀಬಾರದು... ಅಲ್ಲವೆ...
ಅದು ಎಲ್ಲಿ ಬೇಕೋ, ಏಟು ಬೇಕೋ ಆಟೇ ಬಳಸಬೇಕು... ಯಾವಾಗ ಬೇಕೋ ಆವಾಗ ಮಾತ್ರ ಕಲೀಬೇಕು..
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಇನ್ನೊಂದು ಅರಿಮೆ.
ಕನ್ನಡ ಮಾತಾಡುವವರು - ೪೪ ಮಿಲಿಯನ್
ಪಿನ್ನಿಶ್ ಮಾತಾಡುವವರು - ೮ ಮಿಲಿಯನ್
೮ ಮಿಲಿಯನ್ ಮಂದಿ ಮಾಡಿದುದನ್ನು ೪೪ ಮಿಲಿಯನ್ ಮಂದಿ ಮಾಡರಾರರೆ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಬರತ ಮತ್ತು ವಿನಾಯಕರೇ
ನಿಮ್ಮ ಕನಸು/ಕಣಸು ನನಸಾಗಲಿ ಎಂದು ಹಾರೈಕೆಯಷ್ಟೇ ಮಾಡಬೋದು. ಆದ್ರೆ ನಂಗೆ ಅದು ಆಗುವ hope ಹೊರಟು ಹೋಗಿದೆ.
ನಾವು ಕನ್ನಡಿಗರು xenophoic ಅಂತೆ!! ( ನನ್ನಂತೆ ಕನ್ನಡದೊರು ಕಡಮೆ ಇರೊ ಕಂಪೆನಿಯಲ್ಲಿ ಕಾಮನ್ನಾಗಿ ಕೇಳಿವು ಹಳಿತ; ಹೀಗೆ ಟೈಂಸಾಪ್ಹ ಇಂಡಿಯ ಕೂಡಿ ಹೇಳಿದೆ )
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಈ "ಟೈಂಸಾಪ್ಹ ಇಂಡಿಯ" toilet of india ಮತ್ತು trash of india ಅಂತ ಅನೇಕ ಸಲ ಕೇಳಿದ್ದೇನೆ. ಅವರಿಂದ ನಾವು ಎಂಥ ಜನ ಎನ್ನುವುದಕ್ಕೆ ಸರ್ಟಿಫಿಕೆಟ್ ಬೇಕಾಗಿಲ್ಲ.
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ನಾವು ಅದನ್ನ Times of north India ಅಂತೀವಿ; ಪುಲ್ ಬಯಾಸ್!
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
"ಟೈಂಪಾಸ್ ಇಂಡಿಯ" ಅಂದರೆ ತುಂಬಾ ಚೆನ್ನ..
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಖವಿಯವರೆ,
ನಿಮ್ಮ ಅನುಭವ ಚೆನ್ನಾಗಿ ಹಂಚಿಕೊಂಡಿದ್ದೀರ.
ನಿಮ್ಮ ತಾಯಿ ನುಡಿ ಯಾಕೆ ಅಫಿಷಿಯಲ್ ನುಡಿಯಲ್ಲ ಎಂದರೆ "ಹಣೆಬರಹ" ಅಂತ ತುಂಬಾ ಬೇಜಾರು ಮಾಡಿಕೋಬೇಡಿ. ಅವರಿಗೆ ಕಾಲೋನೈಸೇಷನ್ ಅಂದರೆ ಏನು? ಕಾಲೋನೈಸ್ಡ್ ದೇಶದ ಗೋಳು ಬರೇ ನಮ್ಮಲ್ಲಿ ಅಲ್ಲ ಬೇರೆ ಬೇರೆ ಕಡೆಗಳಲ್ಲೂ ಅದೇ ಕತೆ ಎಂದು ವಿವರಿಸಿ. ಇದರ ಬಗ್ಗೆ ಜನರಲ್ಲಿ ಇರುವು ತಳಮಳವನ್ನೂ ತಿಳಿಸಿ.
ಯೂರೋಪಿನ ವಸಾಹತುಗಳ ಇಂದಿನ ರೂಪ ಇದು ಅಲ್ಲವೆ?
ಅನುಭವ ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್...
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ತುಳಿಲು... ಅನಿವಾಸಿಗಳೆ..
ಹೌದು ನೀವು ಹೇಳೋದು ನಿಜ..
ಆದರೆ ಹಾಗೆ ನೋಡಿದರೆ.. . ಈ ವಸಾಹತು ನಾಡುಗಳಲ್ಲಿ ನಮ್ಮ ಇಂಡಿಯ, ಸಿರಿಲಂಕೆ ಮತ್ತು ಕೆನ್ಯಾಗಳು ತುಸು ಮೇಲಂತೆ ಹೇಳ್ತಾರೆ...
ಯಾಕೆಂದರೆ ಈಗ ನೋಡಿ ನ್ಯೂಜಿಲ್ಯಾಂಡ, ನೀವಿರೋ ಆಸ್ಟ್ರೇಲಿಯ, ಅಮೇರಿಕಾ ಮೋದಲಾದ ಕಡೆ ಎಲ್ಲವನ್ನೂ ಸಾಧಿಸಿದರೂ ಅಲ್ಲಿರೋ ಮೂಲ ನುಡಿಗಳು, ನಡಾವಳಿಗಳು ಹೇಳ ಹೆಸರಿಲ್ಲದಂತೆ ಕರಗಿ ಹೋಗ್ತಿವೆ..
ಇತ್ತೀಚಿಗೆ ಎಲ್ಲೋ ಒಂದು ಸುದ್ದಿ ಓದಿದ ನೆಂಪು.. ನ್ಯೂಜಿಲ್ಯಾಂಡನಲ್ಲಿರೋ ಹಳೆಯ ಬುಡಕಟ್ಟು ನುಡಿಯೊಂದರ ಕೊನೆಯ ವಾರಸುದಾರ ಮಾತ್ರ ಬದುಕಿ ಉಳಿದ್ದಾನಂತೆ.. ಇದು ಅಲ್ಲಿ ನೆಟ್ಟ ಇಂಗಲೀಸರ ನುಡಿಯ ಪರಿಣಾಮ..
ಅದಕ್ಕೆ ಈ ಇಂಗಲೀಸರು ಬೇರೆಡೆಗಳಲ್ಲಿ ಮಾಡಿದಂತೆ ನಮ್ಮಲ್ಲಿ ಮಾಡಲಾಗಲಿಲ್ಲವಲ್ಲ ಅದು ನಮ್ಮ ಪುಣ್ಯ... ಬದಲಾಗಿ ನಮಗೆ ನಮ್ಮ ನುಡಿ ಬೆಳೆಯಲಿಕ್ಕೆ ಅನುವು ಮಾಡಿದರು.. ಆದರೆ ನಮ್ಮ ಜನಗಳೇ ಇಂಗಲೀಸಿನ ಹಿಂದೆ ಬಿದ್ದಿದ್ದಾರೆ.. ಅಲ್ಲವೆ..
ಉ: ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ನಮ್ಮ ದೇಸದಲ್ಲು ಹೀಗೆ ಇದ್ದರೆ ಚೆನ್ನ ಅಲ್ಲವ ಅನಕೋತೀನಿ.. ಆದರೆ ಅನಕೋಂಡು ಸುಮ್ಮನೆ ಕೂರಬೇಕಾಗಿದೆ ನನಗೆ..
ನುಡಿಯ ಹೆಮ್ಮೆ ನುಡಿಯುವವರ ಕೆಲಸಗಳಿಂದ. ಜರ್ಮನರು ಇಂಜನೀಯರಿಂಗ, ಮೆಡಿಕಲ್ ಎಲ್ಲಾದರಲ್ಲು ಸುಮಾರು ೧೫೦ ವರ್ಷದಿಂದಲೇ ಮುಂದೆ ಇದ್ದಾರೆ. ಸುಮಾರು ನೋಬೆಲ್ ಪ್ರಶಸ್ತಿಗಳನ್ನ ತಗೊಂಡಿದ್ದಾರೆ. ಸುಮಾರು ೧೫೦ ವರ್ಷ ಹಿಂದೆ ಇಂಗ್ಲೀಶು ಜರ್ಮನ್, ಫ್ರೆಂಚಿನ ತರ ನಾಲ್ಕರಲ್ಲಿ ಒಂದಾಗಿತ್ತು . ಆಮೇಲೆ ಅವರ ವಸಾಹತುಗಳು, ಎರಡು ಮಹಾ ಕದನಗಳಲ್ಲಿ ಗೆಲುವು ಮತ್ತು ಅಮೇರಿಕದ( ಇಂಗ್ಲೀಶು ಮಾತಾಡುವ) ಮೇಲೋಟದಿಂದ ಇಂಗ್ಲೀಶು ಬೇರೆಲ್ಲವನ್ನೂ ಹಿಂದೆ ಹಾಕಿತು.
ಯುರೋಪಿನಲ್ಲಿ ಮೊದಲು ವಿಜ್ಞಾನದ ಬರಹ ಇದದ್ದು ಲ್ಯಾಟಿನ್ನಿನಲ್ಲಿ. ಆಮೇಲೆ ಇಂಗ್ಲೀಶು ಜರ್ಮನ್, ಫ್ರೆಂಚಿನಲ್ಲೂ ಶುರುವಾದವು. ಅದ್ದರಿಂದ ಯುರೋಪಿನವರಿಗೆ ಸುಮಾರು ೨೦೦ ವರುಷ ಅವರದೇ ನುಡಿಯಲ್ಲಿ ವಿಜ್ಞಾನ,ಇಂಜನೀಯರಿಂಗ, ಮೆಡಿಕಲ್ ಬರಹದ ಪರಂಪರೆ ಇದೆ. ನಮ್ಮ ಹಾಗಲ್ಲ.
ನುಡಿಯ ಮೇಲೆ ಅಷ್ಟೋಒದು ಗರ್ವ ಇರೋ ತಮಿಳರು ಕೂಡ ಇಂಗ್ಲೀಶು ಕಲಿಯಲೇಬೇಕು. ಕನ್ನಡ ಇಂಗ್ಲೀಶಿನ ತರ ಆಗ ಬೇಕಾದರೆ, ಕನ್ನಡಿಗರು ನಾಲ್ಕು ನೋಬೆಲ್ ತಗೋಬೇಕು. ನಮ್ಮ ನಾಡಿನ ಮಾರುಕಟ್ಟೆಯಲ್ಲೇ ವಿಜ್ಞಾನ,ಇಂಜನೀಯರಿಂಗ ಸೇವೆಗಳು ಖರ್ಚಾಗಬೇಕು. ಈಗಿನ ತರ ರಫ್ತಾಗಬಾರದು. ಬೇರೆ ಕಡೆಯಿಂದ ಬರುವ ಜನ ಆಗ ನಮ್ಮ ನುಡಿ ಕಲೀತಾರೆ. ಎಲ್ಲಾ ತರದ ಬರಹ ನಮ್ಮ ನುಡಿಯಲ್ಲೂ ಬರುತ್ತವೆ.ಈಗ ಚೀನಾದಲ್ಲಿ ವ್ಯವಹಾರ ಮಾಡ್ತಾ ಇರುವ ಕಂಪನಿಗಳೆಲ್ಲಾ ಮ್ಯಾಂಡರಿನ್ ಕಲಿತಿವೆ.
"damascus steel" ನ ಮೂಲ ಕನ್ನಡ ನಾಡಿನ "ಉಕ್ಕು" ತಯಾರಿಕೆಯಿಂದ ಬಂದಿದೆ ಅಂಥ ಹೇಳ್ತಾರೆ. ಹಾಗೆ ಎಲ್ಲಾ ನಡೆದು ನಾವು ಗುಲಾಮರಾಗದೆ ಇದ್ದಿದ್ದರೆ ಕೆಮಿಸ್ಟ್ರಿ, ಲೋಹ ವಿಜ್ಞಾನ ಕನ್ನಡದಲ್ಲೇ ಇರ್ತಿತ್ತೋ ಏನೋ? ಯಾರಿಗೆ ಗೊತ್ತು.