ಶಾಲೆಗಳಲ್ಲಿನ ಟ್ರೈಮಿಸ್ಟರ್ ಪದ್ಧತಿ
ಮಕ್ಕಳ ಮೇಲಿನ ಅನಗತ್ಯ ಭಾರವನ್ನು ತಗ್ಗಿಸುವದಕ್ಕಾಗಿ ಸರಕಾರ ಪ್ರಾಥಮಿಕ ಶಾಲೆಗಳಿಗಾಗಿ ಟ್ರೈಮಿಸ್ಟರ್ ಪಧ್ಧತಿಯನ್ನ ಜಾರಿಗೆ ತ೦ದಿದೆ. ಇದರಿ೦ದ ಒ೦ದು ದೃಷ್ಟಿಯಲ್ಲಿ ಮಕ್ಕಳ ಭಾರ ತಗ್ಗಿದೆ. ಆದರೆ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವಲ್ಲಿ ಕೊ೦ಚ ಎಡವಟ್ಟಾದ ಕಾರಣದಿ೦ದಲೋ ಅಥವಾ "ಪ್ರತಿ ಪಾಠದ ನ೦ತರ ಪರೀಕ್ಷೆ ನಡೆಸಿ ದಾಖಲಿಸಿ" ಎನ್ನುವ ಸೂಚನೆಯಲ್ಲಿ ಪರೀಕ್ಷೆ ಎ೦ಬ ಪದವನ್ನು ಲಿಖಿತ ಪರೀಕ್ಷೆ ಎ೦ಬ ಸುಲಭ ಅರ್ಥದಲ್ಲಿ ಗ್ರಹಿಸಿದ್ದುದರಿ೦ದಲೋ ಏನೋ ಮಕ್ಕಳು ಪ್ರತಿ ದಿನ ಎರಡು ಮೂರು ಪರೀಕ್ಷೆ ಬರೆಯುತ್ತ ಹೈರಾಣಾಗುತ್ತಿದ್ದಾರೆ.ಪಠ್ಯೇತರ ಚಟುವಟಿಕೆಗಳು ಬದಿಗೆ ಸರಿದಿವೆ.ಕಲಿಕೆ ನಲಿಕೆಯಾಗುವ ಸೂಚನೆ ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ
ಎ೦ಥ ದುರ೦ತ್!

- kiranbhat ರವರ ಬ್ಲಾಗ್
- Login or register to post comments
- 888 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಕನ್ನಡದಲ್ಲಿ ಬರೆಯಿರಿ
ಕಿರಣ್ ರವರೆ, ಸಾಧ್ಯವಾದಷ್ಟು ಕನ್ನಡದಲ್ಲಿ ಬರೆಯಿರಿ...
ಕನ್ನಡದಲ್ಲಿ ಟೈಪಿಸುವ ಬಗ್ಗೆ ವಿವರ ಪಡೆಯಲು FAQ ನೋಡಿ.
--
"ಹೊಸ ಚಿಗುರು, ಹಳೆ ಬೇರು"
ಸೆಮಿಸ್ಟರ್ ಕುರಿತು
ಧನ್ಯವಾದ
ಗುರು, ನನಗೆ
ಗುರು, ನನಗೆ ಅರಿವಿದ್ದಹಾಗೆ ಸರ್ಕಾರಿ ಶಾಲೆಗಳಲ್ಲಿರುವುದು semester ಪದ್ಧತಿಯಲ್ಲ, trimester ಪದ್ಧತಿ.. (ಅಂದರೆ ಇನ್ನು ಒಂದು extra ಪರೀಕ್ಷೆ!)
"ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ"
ಟ್ರೈಮಿಸ್ಟರ್.....
ಶ್ಯಾಂ
ಧನ್ಯವಾದ
ಸೆಮಿಸ್ಟರ್ ನ್ನು ಟ್ರೈಮಿಸ್ಟರ್ ಆಗಿಸಿದ್ದೇನೆ
ಎಂತೆಂಥ ಮಿಸ್ಟರ್ ಬಂದರೂ ನಮ್ಮ ಮೇಷ್ಟ್ರುಗಳು ಮನಸ್ಸು ಮಾಡಿದರೆ ಮಕ್ಕಳ ಕಲಿಕೆಯನ್ನು ನಲಿಕೆಯಾಗಿಸಬಹುದು, ಕನಸಲ್ಲೂ ಮಾರ್ಕು ಮಾರ್ಕು ಎಂದು ಬಡಬಡಿಸುವ ಪಾಲಕರೂ ಈ ಕುರಿತು ಯೋಚಿಸಿದರೆ ಒಳಿತು
ಮಾರ್ಕ್ಸ್ ಮುಖ್ಯವಲ್ಲ
ನೀವು ಹೇಳೋದು ನಿಜ. ಮಾರ್ಕ್ಸ್ ಮುಖ್ಯವಲ್ಲ. ಓದಿನ ಜೊತೆಗೆ ಅವರು ರೂಡಿಸಿಕೊಳ್ಳುವ 'ಕ್ರಿಯೇಟಿವಿಟಿ' ಮುಖ್ಯ. ಹೆಚ್ಚಿನದು ಬರಿ 'ಕಕಾ ಮಗ್ಗಿ'ಗೆ ಸಮಯ ಹಾಕಿದರೆ ಕ್ರಿಯೇಟಿವಿಟಿ ಬರೋದೆಂತು? ಬರಿ ಹೇಳಿಕೊಟ್ಟದ್ದನ್ನು ಮಾಡುವ ಮೆಶೀನುಗಳಂತಾಗಿ ಬಿಡುತ್ತಾರೆ!
--
"ಹೊಸ ಚಿಗುರು, ಹಳೆ ಬೇರು"
ಮಾರ್ಕ್ಸ್ ಮುಖ್ಯ ರೀ!
ಅಂಕಗಳು ಮುಖ್ಯವಲ್ಲದೇ ಇರಬಹುದು.. ಆದರೆ ಮಾರ್ಕ್ಸ್ (ಕಮ್ಯೂನಿಸಮ್ ಹುಟ್ಟುಹಾಕಿದ ಕ್ರಾಂತಿಕಾರಿ) ತುಂಬಾನೆ ಮುಖ್ಯ!!
ಅದೇನೆ ಇರಲಿ, ಈಗಿನ ಸರ್ಕಾರಿ ಪಠ್ಯಪುಸ್ತಕಗಳು, ಚಟುವಟಿಕೆಗಳು ಬಹಳ ಚೆನ್ನಾಗಿವೆ. ನನಗೆ ಇಂದು ಶಾಲೆಗೆ ಸೇರಿಸುವ ಮಗುವೊಂದಿದ್ದರೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ (offcourse, ಚೆನ್ನಾಗಿ ನಡೆಯುತ್ತಿರುವಂತಾದ್ದು) ಸೇರಿಸಲು ಯೋಚನೆಯೇ ಮಾಡಾಬೇಕಾಗಿರಲಿಲ್ಲ..
ನಮ್ಮ ಹಾಗೆ ಅರ್ಥವಿಲ್ಲದ ಅ ಆ ಇ ಈ ಗಟ್ಟು ಹೊಡೆದು ಪದಗಳನ್ನು ಕಲಿಯಲು ಮುಂದಿನ ತರಗತಿಯ ತನಕ ಕಾದು ಆ ತರಗತಿಗೆ ಹೋದಾಗ ಹಿಂದಿನದು ಮರೆತು ಆಗುತ್ತಿದ್ದ ಪಜೀತಿ ಇಂದಿನವರಿಗಿಲ್ಲ..
ಶುರುವಿನಲ್ಲೆ, ರ ಗ ಸ ದ ಅ ಕಲಿಸಿ, ತಕ್ಷಣವೇ ಈ ಅಕ್ಷರಗಳಿಂದ (ಅಕ್ಷರ ಜೋಡಣೆಯಿಂದ) ಸಣ್ಣ ಸಣ್ಣ ಪದಗಳನ್ನು ಹೇಳಿಕೊಡುತ್ತಾರೆ, ಮಗುವಿನಲ್ಲಿ ಭಾಷಾವಿಕಸನಕ್ಕೆ ಇದು ಸಹಜವಾಗಿಯೇ ಸಹಯಾಕಾರಿಯಾಗುತ್ತದೆ. ಅಂತೆಯೇ ಖಾಸಗೀ ಶಾಲೆಗಳಲ್ಲಿನ ಮಕ್ಕಳ ಕುಂದುತ್ತಿರುವ ಭಾಷಾ ಜ್ನ್ಯಾನದ ಮಟ್ಟಕ್ಕೂ ಇದು ಔಷಧಿಯಾದೀತು (ಅವರು ಸರ್ಕಾರಿ syllabus ಪಾಲಿಸಿದರೆ)
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
;)
--
"ಹೊಸ ಚಿಗುರು, ಹಳೆ ಬೇರು"
ಕನ್ನಡಕ್ಕೆ
ಈಗ ನಿಮಗೆ ಕನ್ನಡ ಟೈಪಿಸಲು ಸಾಧ್ಯವಾಗುತ್ತಿದೆ ಎಂದು ತೋರುತ್ತಿದೆ. ಈ ಮಾತುಕತೆಯ ಎಳೆಯನ್ನ ಕನ್ನಡದಲ್ಲೇ
ಮತ್ತೊಮ್ಮೆ ಬರೆದು ಹಾಕಿಬಿದಬಹುದಲ್ವೆ?
--
"ಹೊಸ ಚಿಗುರು, ಹಳೆ ಬೇರು"