ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › kishan_mv ರವರ ಬ್ಲಾಗ್

ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್

November 10, 2006 - 5:59pm — kishan_mv

ಮಾನ್ಯರೆ,

ಸುವರ್ಣ ಕರ್ನಾಟಕದ ಶುಭ ಸಂಧರ್ಭದಲ್ಲಿ, ಘನತೆವೆತ್ತ ಕರ್ನಾಟಕ ಸರ್ಕಾರ ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್. ಅಂನಂತಮೂರ್ತಿ ಹಾಗು ಹಲವಾರು ಕನ್ನಡಿಗರ ಆಶಯದಂತೆ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ವಿಷಯ ಹಲವರ ಪರ-ವಿರೋಧದಿಂದಾಗಿ, ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಮೂಲ ಹೆಸರನ್ನು ಉಳಿಸಲು ಸರ್ಕಾರ ಮುಂದಾಗಿದಕ್ಕೆ ಕನ್ನಡಿಗರೂ ಸೇರಿದಂತೆ ಹಲವಾರು ಅನ್ಯಭಾಷಿಗರು ಎಷ್ಟೋ ಮಂದಿ ಇದಕ್ಕೆ ಅಪಸ್ವರ ಎತ್ತಿದ್ದಾರೆ. ಕೇವಲ ಅನ್ಯಭಾಷಿಗರು ವಿರೋದಿಸಿದರೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವೂ ಇರಲ್ಲಿಲ್ಲ. ಬೆಂಗಳೂರಿನ ಮರು ನಾಮಕರಣಕ್ಕೆ ವಿರೋಧಿಸುತ್ತಿರುವ ಕನ್ನಡಿಗರೆಲ್ಲರಿಗೂ ನನ್ನದೊಂದು ಕಿವಿ ಮಾತು. ಕನ್ನಡ ೨೦೦೦ ವರ್ಷಕ್ಕೂ ಹಳೆಯದಾದ ಭಾಷೆ. ದಕ್ಷಿಣ ಭಾರತದ ೨ನೇ ಹಳೆಯ ಭಾಷೆ ಅದು ನಿಮಗೂ ಗೊತ್ತು! ಅನನ್ಯ ಸಂಸ್ಕೃತಿ ವೈಭೋಗತೀತ ಇತಿಹಾಸವಿರುವ ಕನ್ನಡ ನಾಡಿನಲ್ಲಿ, ಊರುಗಳ ಹೆಸರು ಇಂಗ್ಲೀಷದ್ದಾಗಿರಬೇಕೆ? ಮರು ನಾಮಕರಣವನ್ನು ವಿರೋಧಿಸುವವರು ನೀಡುವ ಮೊದಲ ಕಾರಣ ಬೆಂಗಳೂರಿನ ರಸ್ತೆ, ನೈರ್ಮಲ್ಯ ಹೀಗೆ ಹಲವಾರು ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು. ಇವರಿಗೆ ಸಮಸ್ಯೆಗಳು ಬಗೆಹರಿಯುವುದೆಂದು ಹೇಳಿದವರು ಯಾರು? ಸರ್ಕಾರ ಆರೋಗ್ಯ, ನೈರ್ಮಲ್ಯ, ರಸ್ತೆ ಇವುಗಳ ಬಗ್ಗೆ ಆಲೋಚಿಸಬೇಕೆಂದು ಹೇಳುವ ಇವರ ಮಾತು ನಿಜ, ಹಾಗಾದರೆ ಸರ್ಕಾರ ಹಾಗು ಜನತೆ ಭಾಷೆ ಹಾಗು ಸಂಸ್ಕೃತಿಯ ಸಮಸ್ಯೆಗಳಿಗೆ ಆಲೋಚಿಸಬಾರದೆ? ನಮ್ಮ ಭಾಷೆ ಹಾಗು ಸಂಸ್ಕೃತಿಯು ಅಳಿಸುತ್ತಿರುವಾಗ ನಾವೆಲ್ಲರೂ ಕೈಕಟ್ಟಿ ಕೂರಬೇಕೇ? ಹೀಗಿರುವಾಗ ಬ್ಯಾಂಗ್ಳೂರ್ ಹಾಗು ಇತರ ನಗರಗಳ ಹೆಸರನ್ನು ಕನ್ನಡದ ಹೆಸರುಗಳಿಂದ ಮರು ನಾಮಕರಣ ಮಾಡಿದರೆ ತಪ್ಪೇನು?

ಇನ್ನೂ ಕೆಲವರ ಆಂಬೋಣವೇನೆಂದರೆ, ಮರು ನಾಮಕರಣಕ್ಕೆ ಸರ್ಕಾರಕ್ಕೆ/ಖಾಸಗಿ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚಾಗುವುದೆಂದು. ಕನ್ನಡದಲ್ಲಿ ಒಂದು ಗಾದೆ ಮಾತಿದೆ 'ಅಡ್ಡಾಡ್ಡಾಗಿ ಹೋಗುವಾಗ ಹಿಡುಗಿನ ಬರಲಿಂದೇನು?' ಎಂದು. ಸರ್ಕಾರದ ಹಲವಾರು ಯೋಜನೆಗಳಲ್ಲಿ ಸೋರಿಕೆಯಾಗುವ ಹಣದ ಸಾವಿರದ ಒಂದು ಭಾಗವು ಮರುನಾಮಕರಣಕ್ಕೆ ಖರ್ಚಾಗದು. ಇನ್ನು ಖಾಸಗಿ ಕಂಪನಿಗಳು ಇಲ್ಲಿನ ಜಲ, ನೆಲ ಹಾಗು ಜನರನ್ನು ಉಪಯೋಗಿಸಿಕೊಳ್ಳುವುದಿಲ್ಲವೆ? ಹಾಗೆಂದ ಮೇಲೆ ಕಂಪನಿಗಳಿಗೆ ಇಲ್ಲಿನ ಭಾಷೆಯನ್ನು ಬೆಂಬಲಿಸುವುದು ಅವರ ಸಾಮಾಜಿಕ ಜವಾಬ್ದಾರಿಯಾಗುವುದಿಲ್ಲವೇ? ಹಾಗಾದಲ್ಲಿ ಇದರಿಂದಾಗುವ ಖರ್ಚನ್ನು ಭರಿಸುವುದರಲ್ಲಿ ತಪ್ಪೇನು?

ಮೂರನೆಯದಾಗಿ ಬ್ಯಾಂಗ್ಳೂರ್ ಏಟಿ ಸಿಟಿ ಎಂಬ ಬ್ರಾಂಡ್ ಹಾಳಾಗುವುದೆಂಬುದು ಕೆಲವರ ಆಂಬೋಣ. ಬಾಂಬೆಯನ್ನು ಭಾರತದ ವಾಣಿಜ್ಯ ರಾಜಧಾನಿ ಎಂದು ಎಲ್ಲರೂ ಗುರುತಿಸಿದ್ದರು. ಮುಂಬೈ ಎಂದು ಮರುನಾಮಕರಣ ಮಾಡಿದ ಮೇಲೆ ಮುಂಬೈಯನ್ನು ವಾಣಿಜ್ಯ ರಾಜಧಾನಿ ಎಂದು ಯಾರೂ ಗುರುತಿಸುತಿಲ್ಲವೆ?.

ಇನ್ನು, ವಿದೇಶಿಯರಿಗೆ ಹಾಗು ಅನ್ಯ ಭಾಷಿಗರಿಗೆ ಉಚ್ಚಾರ ಕಷ್ಟವೆಂದು ಹೇಳುವುದು ಹಾಸ್ಯಾಸ್ವದವಾಗಿದೆ. ಎಕೆಂದರೆ, ಹಲವಾರು ನಗರಗಳ ಹೆಸರುಗಳು ಈಗಲೂ ಭಾರತೀಯ ಹೆಸರುಗಳೇ ಹಾಗಿವೆ ಉದಾಹರಣೆಗೆ ಬೀದರ್, ಕಾಸರಗೋಡು, ದಕ್ಷಿಣ ಕನ್ನಡ ಇತ್ಯಾದಿ. ಇನ್ನು ಬದಲಾವಣೆಗೆ ಒಗ್ಗುವುದು ಕಷ್ಟವೆಂಬುದಾದರೆ, ಮುಂಬೈ, ಕೋಲ್ಕತ್ತವನ್ನು ಸರಿಯಾಗಿ ಉಚ್ಚಾರಿಸುತ್ತಿಲ್ಲವೆ? ಉಪಯೋಗಿಸಿದಂತೆ ಉಚ್ಚಾರಿಸುವುದು ಸುಲಭ. ಹೀಗಾಗಿ ಬೆಂಗಳೂರು ಹಾಗು ಇತರ ನಗರಗಳ ಮರು ನಾಮಕರಣ ಸುವರ್ಣ ಕರ್ನಾಟಕದ ಸುಸಂದರ್ಭದಲ್ಲಿ ಸಮಯೋಜಿತವೂ ಹಾಗು ಇದು ಅಗತ್ಯವೂ ಆಗಿದೆ. ಹಾಗಾಗಿ ಎಲ್ಲ ಕನ್ನಡಿಗರೂ ಒಗ್ಗಟ್ಟಿನಿಂದ ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಲಹೆಯನ್ನು ಸಕಾಲದಲ್ಲಿ ನೀಡಿದ ಸಾಹಿತಿಗಳಿಗೆಲ್ಲರಿಗೂ ನಾವು ಕೃತಜ್ಞತೆಗಳನ್ನು ಸಲ್ಲಿಸೋಣ.

ಧನ್ಯವಾದಗಳು,
ಎಂ.ವಿ. ಕಿಶನ್

~.~
  • kishan_mv ರವರ ಬ್ಲಾಗ್
  • Login or register to post comments
  • 750 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 11, 2006 - 9:02am — anant

ಬೆಂಗಳೂರು ನಾಮಕರಣ

anant's picture

ಸ್ವಾಮಿ ,

ಕನ್ನಡದಲ್ಲಿ ನಾವು ಬುದ್ಧಿಜೀವಿಗಳು ಅಂದರೆ ಎರಡು ಕೋಡು ಇರುವವರು ಎಂಬ ದುರಹಂಕಾರದ ಒಂದು ಪಡೆ, ಯಾವಾಗಲೂ ಇದೇ ಕೋಮಿನ ಇನ್ನೊಂದು ಪಡೆಯನ್ನು ವಿರೋಧಿಸಲು ಸಜ್ಜಾಗಿರುವದು ಕನ್ನಡಾಂಬೆಯ ದುಧೈವ. ಸರಕಾರ ಇದನ್ನು ಎಂದೋ ಮಾಡಬೇಕಿತ್ತು. ಸಾರ್ವಜನಿಕವಾಗಿ ಕನ್ನಡಿಗರೆಲ್ಲರೂ ಅತ್ಯಂತ ಅನಿವಾರ್ಯ ಪರಿಸ್ಥಿತಿ ಹೊರತು ಪಡಿಸಿ ಅನ್ಯಭಾಷೆಯಲ್ಲಿ ಮಾತಾಡುವದೇ ಇಲ್ಲ ಎಂಬ ಪ್ರತಿಜ್ನೆ ಮಾಡದ ಹೊರತು ಕನ್ನಡದ ಉದ್ಧಾರ ಸಾಧ್ಯವಿಲ್ಲ.

ಈ ಪ್ರತಿಜ್ನೆಯನ್ನು ಈ ಶುಭ ವರ್ಷದಲ್ಲಿ ಕೈಗೊಳ್ಳೋಣ.

 

ಅನಂತ ಪಂಡಿತ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 11, 2006 - 1:18pm — venkatesh

ನ ಮ್ಮ ಬೆಂ ಗ ಳೂ ರು !

venkatesh's picture

ಮಾನ್ಯರೆ ಮೊದಲು 'ನಾಮಕರಣ' ಬಹು ಮುಖ್ಯ. ಅದರ್ಲ್ಲೇನಿದೆ ಹೋಗ್ಲಿ ಬಿಡಿಸರ್....ನಿಮ್ಮ ಪಕ್ಕದ್ ಮನೆಯವನ್ ನ ಎಲ್ರೂ ಹಿಡದ್ಕೊಂಡ್ ಚಚ್ಚಿದರು ಸರ್..... ಹೋಗ್ಲಿ ಬಿಡಿ ಸರ್..ಏನು ತಪ್ ಮಾಡಿದಾನೊ.....

ಸರ್, ನಿಮ್ ಹೆಂಡ್ತಿ, ಮಾರ್ಕೆಟ್ ನಲ್ಲಿ ಬಿದ್ರಂತೆ..ಯಾವನೊ ಅವರ್ ಪರ್ಸ್ ಕಸ್ಕೊಂಡ್ ಅವರನ್ ನೂಕಿ, ಬೀಳ್ಸಿ ,ಓಡ್ ಹೊದ್ನಂತೆ.. ಹೋಗ್ಲಿ....ಅ !! ಏನ್ ನೀವ್ ಹೇಳಿದ್ದು... ಆಗ ನಮ್ಗೆ ಬರೊದ್ ಬುದ್ಧಿ. ಅಂದ್ರೆ, ನಮಗೆ ಏನಾದ್ರು ತೊಂದ್ರೆ ಆದಾಗ ಮಾತ್ರ. ಈ ಮನೊಭಾವದಿಂದ ದೂರ ಬರಬೇಕಾದ್ರೆ, ನಮ್ದು, ನಮ್ಜನ, ನಮ್ತನ, ನಮ್ಮ ನೆರೆ-ಹೊರೆ ಬಗ್ಗೆ ಜ್ಞಾನ ಎವೆಲ್ಲ ಮುಖ್ಯ.
"ಬೆಂಗಳೂರು ಅಂತ ಕರೀರಲೆ ಅಂದ್ರೆ ಕರೀಬೇಕಪ್ಪ".... ಅದ್ರಲ್ಲಿ ಮುಲಾಜೇನ್ರಿ.. ಚೆನ್ನೈ ನಲ್ಲಿ ಮದ್ರಾಸ್, ಅಂತ ಹೇಳಿ ನೋಡಿ ಮತ್ತೆ ನಿಮಗೆ ಉತ್ತರಿಸ್ತಾರೇನೋ. ಇಲ್ಲ...ನಮ್ಗ್ಯಾಕ್ ಇಷ್ಟು ಒಳ್ಳೇ ತನ.?. 'ಯಾರ್ನ್ ಮೆಚ್ಚಿಸಕ್ಕೆ'! ಪ್ರಪಂಚನ ಎದುರಿಸೊದಕ್ಕೆ ನಮ್ಮತನ ಮುಖ್ಯ. 'ಉದಾರ ಹೃದಯಿಗಳು ಕನ್ನಡ್ದೋರು'. ಇವೆಲ್ಲ ಬೊಗಳೆ ಕಣ್ರಿ. ನಂಬಬೇಡಿ. ಚಿತ್ರ ದುರ್ಗ, ಎಮ್ಮ್ಕಿಗನೂರು, ತುಮಕೂರು, ಹಾಸನ,( Hassan) ಚಿಕ್ಕಬಳ್ಳಾಪುರ, ಅವೆಲ್ಲ ಹಾಗೆ ಹೇಳ್ಲಿ ಬಿಡಿ. ಸ್ವಲ್ವ ದಿನದಲ್ಲಿ ಎಲ್ಲ ಸರಿಹೋಗುತ್ತೆ.

ಬೀಜಿಂಗ್, ಕೊಲ್ಕಟ, ಕೊಚ್ಚಿ, ಮುಂಬೈ, ಇವನ್ನೆಲ್ಲ ಜನ ಸರಿಯಾಗ್ ಹೇಳ್ತಿದಾರೆ.
Chitaldroog, Bangalore Emmiganore --what are all this non sense ! In fact, we are worried more about this. Outsiders, simply follow this. Let them do it. why worry.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 12, 2006 - 4:59am — kannadiga_1956

Hindi Beda... Kannada beku...

kannadiga_1956's picture

Please spread this message across to all kannadigas 

By learning/speaking in Hindi we are not getting benefitted in any way. In Job English is enough. Only benefit we have got is that we are able to understand when Hindiwallas rudicule our language, Culture, etc.
By Learning and speaking in Hindi, we are increasing market for them in everything from TV Channels, Films, Music albums. We maybe doing this from Patriotism point of view, but they always think "We ourselves dont like Kannada, and feel free to talk against kannada in front of us". No wonder Hindi entertainment field is growing as they have huge market and at what cost ??  at the cost of Kannada market.  In recent years no good Books, Music or Films are forthcoming in Kannada because not many creative people are in that field. Creative people are going into other fields as there is no money in whatever that is kannada. There is no Money because our kannada market is very small.  In This Capitalist Economy Market decides everything.  If we do not consolidate our market atleast now, kannada will be washed away. 

Few Things which I feel is good: 

- Let us not speak Hindi anywhere in Bangalore or Karnataka. Let us stick to Kannada and limit English only to office as much as possible.
- Let us subcribe to atleast 1 kannada Newspaper
- Let us BAN "Times of India" all over karnataka. That is no-1 anti Kannada paper. This way let the message go to all anti-kannada businesses.  Deccan Herald is the good choice as it is Karnataka Newspaper.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 12, 2006 - 7:56am — venkatesh

ಹಿಂದಿ ಬೇಡ ಕನ್ನಡ ಬೇಕು !!!

venkatesh's picture

ಸ್ವಾಮಿ, ಇದನ್ನು ನೀವು ಕನ್ನಡದಲ್ಲೇ ಬರೆದಿದ್ದರೆ ಚೆನ್ನಾಗಿತ್ತು ! ಹೊಗ್ಲಿ ಬಿಡಿಸರ್...ನಮ್ಯಾ.....!

೧. ಕರ್ನಾಟಕದಲ್ಲಿ ಹಿಂದಿ ಮಾತಾಡುವುದನ್ನು ನಿಲ್ಲಿಸಿ. ಇದರ ಬದಲು, ಕನ್ನಡ ಬಳಕೆ ಜಾಸ್ತಿ ಮಾಡಿ ಅಂತ ಹೇಳಿ. ಉದಾ: ಅವ್ರಿಗೆ ಓಟ್ ಕೊಡಬೇಡಿ ಅನ್ನೊದ್ರಬದ್ಲು ನನಗ್ ಕೊಡಿ ಓಟ್ ಅನ್ನೊದ್ ಒಳ್ಳೇದಲ್ವೆ ?

೨. ಕನ್ನಡ ಪತ್ರಿಕೆ ಕೊಂಡ್ ಓದೊ ಒಳ್ಳೆ ಅಭ್ಯಾಸ ಬೆಳೆಸ್ಕೊಳ್ಳಿ- ಸರಿ.

೩. ಟೈಮ್ಸ್ ' ಬ್ಯಾನ್ ಮಾಡಿ, ಹಿಂದಿಚಿತ್ರ ಬ್ಯಾನ್ ಮಾಡಿ ಇದೆಲ್ಲ ಒಳ್ಳೆ ಉಪಾಯಗಳಲ್ಲ.

೪. ಡೆಕ್ಕನ್ ಹೆರಾಳ್ಡ ಒಳ್ಳೆ ಪತ್ರಿಕೆ. ಹೆಚ್ಚು ಹೆಚ್ಚು ಕೊಂಡ್ಕೊಂಡ್ ಓದಿ. ಅದಕ್ಕಿಂತ ಟೈಮ್ಸ್ ನಲ್ಲಿ ನೌಕರಿ ಆಡ್ಸ್ ಜಾಸ್ತಿ ಇರತ್ತೆ. ಓದ್ಲಿ ಬಿಡಿ.

೫. ಇಂಗ್ಲೆಂಡ್ ಜನ, 'ವಿಷ್ವದೊರೆಲ್ಲ ತಮ್ಮ ಭಾಷೆ ಕಲ್ತ್ಕೊಂಡ್, ತಮ್ ಎಲೆಗೆ ಕಲ್ಲ್ಹಾಕ್ ತಿದ್ದಾರಲ್ಲಪ್ಪ' ಅಂತ ಎಂದು ಅನ್ನಲ್ಲ. ಹಾಗ್ ನೋಡಿದ್ರೆ ಇಂಗ್ಲೀಷ್ ಕಲಿತ್ಕೊಂಡು ಅವರ್ ಜಾಬ್ ಗಳೆಲ್ಲಾ ಭಾರತ್ದೊರ್ಗೆ ಸಿಗ್ತಾ ಇದೆ ಯಲ್ಲ ! ಅದಲ್ಲ ಪ್ರಾಬ್ಲೆಮ್- ನಮ್ ತನ ಇಟ್ಕೊಳ್ಳಿ ;ಯಾರ್ ಹೊಟ್ಟೇಮೇಲು ಹೊಡಿಬೇಡಿ. ಒಳ್ಳೆ ಬುಕ್ ಬರೀರಿ. ಒಳ್ಳೆ ಚಿತ್ರ ತಯಾರ್ಸ್ರಿ. ಒಳ್ಳೆ ಕೆಲಸ, ಬೇರೆಯವರಿಗಿಂತ ಚೆನ್ನಾಗಿ ಮಾಡಿ ತೊರಿಸ್ರಿ. ಮೇಟಿಯಾಗಿರ್ರಿ. ಎಲ್ಲ ಇಟ್ಕೊಳ್ಳಿ. ನಿಮಗ್ತಿಳಿದಂತೆ, ಅನುಕೂಲವಾಗುವಂತೆ ವರ್ತಿಸಿ. ಅದು ಮುಖ್ಯ. ಯಾವಾಗ್ಲು 'ಪಾಸಿಟೀವ್' ಆಗಿರಿ.

ಏನಂತೀರಿ. ಮೊದಲು ಕನ್ನಡ್ದಲ್ಲಿ ನಿಮಗೆ ಗೊತ್ತಿದ್ನ ಹೇಳಿ. ಇಲ್ಲಿ ಎಲ್ರಿಗು ಕನ್ನಡ ಬರುತ್ತೆ !!
ಇಂಗ್ಲೀಷ್, ಯಾಕೆ ಅಂತ !!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 12, 2006 - 5:27pm — ಸಂಗನಗೌಡ

ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ.

ಸಂಗನಗೌಡ's picture

Quote:
ದಕ್ಷಿಣ ಭಾರತದ ೨ನೇ ಹಳೆಯ ಭಾಷೆ ಅದು ನಿಮಗೂ ಗೊತ್ತು!

ಇದನ್ನು ಒಪ್ಪಬೇಕಿಲ್ಲ. ಇದು ನಾವು ಕನ್ನಡಿಗರ ಪೆದ್ದುತನಕ್ಕೆ ಕನ್ನಡಿ.

ಇಲ್ಲಿ ನೋಡಿ

ಪುಟ ೧೭ ನೋಡಿ

ಗುಜರಾತಿನಲ್ಲಿ http://local.live.com ನೋಡಿದರೆ, ಗುಜರಾತಿನ ಅನೇಕ ಊರುಗಳ ಹೆಸರುಗಳು, ಕನ್ನಡದ್ದೇ ಆಗಿವೆ. ಕಾಮನಕಟ್ಟೆ ಎಂಬ ಊರು ಗುಜರಾತಿನಲ್ಲಿದೆ. ಮಹಾರಾಷ್ಟ್ರದ ಹಲಾವಾರು ಊರುಗಳ ಹೆಸರುಗಳೂ ಕನ್ನಡದ್ದೇ ಆಗಿವೆ. ಈಗಲೂ ಮಹಾರಷ್ಟ್ರದ ತಾಲೂಕೊಂದರ ಹೆಸರು 'ಕನ್ನಡ' ಎಂದಿದೆಯಂತೆ.

ಮೇಲಿನ ಹೊತ್ತಿಗೆಯಲ್ಲಿ ಕೊಟ್ಟಿರುವಂತೆ, ಹರಪ್ಪಾ ನಡಾವಳಿಯ(ಸಂಸ್ಕೃತಿ) ಲಿಪಿಯು ಕನ್ನಡ ಮತ್ತು ತುಳುಗಳಿಗೆ ಹೆಚ್ಚು ಹತ್ತಿರವಿದೆ, ತಮಿಳಿಗಲ್ಲ.

ಕನ್ನಡ ಮತ್ತು ತುಳುವಿನಲ್ಲಿ ತಮಿಳಿನಲ್ಲಿರದ ಆದರೆ ಅದರಲ್ಲಿರುವ ಪದಗಳಿಗಿಂತಲೂ ಹಳೆಯದಾದ ಪದಗಳಿರುವ ಆರುಪು(ಸಾಧ್ಯತೆ) ಇದೆಯೆಂದು ೧೭ ನೇ ಹಾಳೆಯಲ್ಲಿ ನಿಚ್ಚಳವಾಗಿ ಬರೆಯಲಾಗಿದೆ.

ಗುಜರಾತಿನ ಕೆಲ ಬುಡಕಟ್ಟು ಮಂದಿಯ ಮನೆನುಡಿ ಕನ್ನಡವೇ ಆಗಿದೆಯೆಂದು ಕೇಳಿದ್ದೇನೆ. 

ಕನ್ನಡವು ತಮಿಳಿನನಿತೇ ಹಳೆಯದು, ಇಲ್ಲವೇ ಅದಕ್ಕಿಂತಲೂ ಹಳೆಯದು, ಅದಕ್ಕಿಂತ ಇತ್ತೀಚಿನದಂತೂ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 13, 2006 - 11:14am — kishan_mv

ತಪ್ಪಿದ್ದಲ್ಲಿ ಕ್ಷಮಿಸಿ

kishan_mv's picture

ಕನ್ನಡ ಎರಡನೇ ಹಳೆಯ ಭಾಷೆ ಎಂದು ನಾನು ತಿಳಿಸಿರುವೆ ಮೂರನೆಯದಲ್ಲ. ಕನ್ನಡ ತಮಿಳಿಗಿಂತಲೂ ಹಳೆಯ ಭಾಷೆ ಎಂದು ಕೆಲವು ಸಾಕ್ಷಗಳು ದೊರಕಿದ್ದರೂ ಅವುಗಳನ್ನು ಧೃಡಿಕರಿಸಿಲ್ಲ. ನನ್ನಿಂದೇನಾದರು ತಪ್ಪಾಗಿದ್ದಲ್ಲಿ ಕ್ಷಮಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 30, 2007 - 4:58pm — mahesha

ಉ: ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ.

mahesha's picture

ಕನ್ನಡವೇ ಎಲ್ಲದಕ್ಕಿಂತ ಹೆಚ್ಚು ಹಳೆಯ ನುಡಿ....

ಈಗಿನ ಹೊಸ ಹುಡುಕುಗಳಿಂದ ಸಕ್ಕದದ ಹಪ್ಪೆಚ್ಚು ಹಳೆಯದಾದ ರುಗ್ವೇದದಲೂ ದ್ರಾವಿಡ ಒರೆಗಳು ದೊರೆತಿವೆ. ಅದರಿಂದ ಸಕ್ಕದ ಮೇಲೆ ದ್ರಾವಿಡ ನುಡಿಗಳ ನೆರಳು ಸಾಬೀತಾಗಿದೆ...

ದ್ರಾವಿಡ ನುಡಿಗಳ ಬಗ್ಗೆ ಹುರುಪಿರುವವರು http://www.ijdl.org/Html/Announcement.htm
">ಇಲ್ಲಿ ನೋಡಿರಿ

ಅದರಲ್ಲಿ ಪಾಲುಗೊಂಡು ನಮ್ಮ ದ್ರಾವಿಡನುಡಿಗಳ ಬಗ್ಗೆ ಹೆಚ್ಚರಿಯಹುದು.
======================================
ಹೆಪ್ಪೆಚ್ಚು = ಹೆರ್‍ + ಪೆಚ್ಚು( ಹೆಚ್ಚು ) = ಹೆರ್ಪೆಚ್ಚು => ಹೆಪ್ಪೆಚ್ಚು ( ಸಿಕ್ಕಾಪಟ್ಟೆ ಹೆಚ್ಚು )
ಒಪ್ಪೊತ್ತು = ಒರ್‍ + ಪೊತ್ತು ( ಹೊತ್ತು ) = ಒರ್ಪೊತ್ತು => ಒಪ್ಪುತ್ತು

ಪೆರ್ಚು=>ಪೆಚ್ಚು=>ಹೆಚ್ಚು

ಪೆರ್‍ = ದೊಡ್ಡ, ಜಾಸ್ತಿ, ತುಂಬ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 30, 2007 - 8:05pm — ಸಂಗನಗೌಡ

ಉ: ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ.

ಸಂಗನಗೌಡ's picture

ನಮ್ಮ ನುಡಿಯ ಬಗ್ಗೆ ಹೆಮ್ಮೆ ಇರಲಿ, ಬೇರೇ ನುಡಿಗಳಿಗೂ ತಲೆ ಬಾಗೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2007 - 1:29pm — manjunathsinge

ಉ: ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್

manjunathsinge's picture

ಸಂಪದದಲ್ಲಿ, ಇಂಥಹ ಪ್ರತಿಕ್ರಿಯೆಗಳನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಯಾರದರು ಏನೊ ಒಂದನ್ನು ಕನ್ನಡೇತರ ಭಾಷೆಯಲ್ಲಿ ಹೇಳಿದರೆ ಸಾಕು, ಅದರ ಬಗ್ಗೆಯೇ ಒಂದು ದೊಡ್ಡ ಚರ್ಚೆ ಏರ್ಪಡುತ್ತದೆ. ಮೂಲ ವಿಷಯ ಮರೆತೇ ಹೋಗುವರು. ಎಲ್ಲಿಯವರೆಗು ಇಂತಹ ಜಗಳ ಬಿಟ್ಟು, ಒಬ್ಬರಿಗೊಬ್ಬು ಸಹಕರಿಸುತ್ತ ಸೃಜನಶೀಲರಾಗುವುದಿಲ್ಲವೋ ಅಲ್ಲಿಯವರೆಗು ಯಾವ ಹೆಸರು ಬದಲಾದರು ನಮ್ಮ ಜನರ ಭ್ರಾಂತಿ ಮಾತ್ರ ಬದಲಾಗದು. "ಎಲ್ಲಾ ಭಾಷೆಯನ್ನು ಪ್ರೀತಿಸು, ಕನ್ನಡವನ್ನು ಪೂಜಿಸು" ಎನ್ನುವ ಮಾತನ್ನು ನೆನೆದು, ಒಬ್ಬರಿಗೊಬ್ಬರು ಸಹಕರಿಸಿದರೆ, ಸಂಪದ ಒಳ್ಳೆಯ ಸಲಹೆಗಳ ಮಹಾಸಾಗರವೇ ಆಗಬಹುದೇನೊ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಸಂಪದ"ದ ಕೊನೆಯ ದಿನಗಳು
  • ಕದಡುತ್ತಿರುವ ಮಲೆನಾಡಿನ ನೆಮ್ಮದಿ..!
  • ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ
  • ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ
  • ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!
Syndicate content

ಲೇಖಕರು

kishan_mv's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator