ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ನ್ಯಾನೋವಿನಿ೦ದ ಸಿಗಬೇಕಾರ ಸುಮಾರು ೧೦,೦೦೦ ಕ್ಕೂ ಹೆಚ್ಚು ಕೆಲಸವನ್ನು ನಾವು ಕಳೆದುಕೊ೦ಡಾಯ್ತು. ಅಷ್ಟರಲ್ಲೇ, ಜನವರಿಯಲ್ಲಿ ನಿ೦ತು ಹೋಗಿದ್ದ ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತೆ ನಡೆಯುವ ಸುದ್ದಿ ಬ೦ದಿದೆ. ಜನವರಿಯಲ್ಲಿ ನೇಮಕಾತಿಯ ಪ್ರಕ್ರಿಯೆ ಶುರುವಾಗಿ, ಕನ್ನಡಿಗರ ಅನ್ನಕ್ಕೇ ಕೈ ಹಾಕಲು ಬ೦ದ ಬಿಹಾರಿಗಳನ್ನು ನಾರಾಯಣ ಗೌಡ್ರ ರಕ್ಷಣಾ ವೇದಿಕೆ ಹುಡುಗರು ತಡೆಯದೇ ಹೋಗಿದ್ದಲ್ಲಿ, ಇವತ್ತಿಗಾಗಲೇ ಕರ್ನಾಟಕವೆಂಬ ಈ ಧರ್ಮ ಛತ್ರದಲ್ಲಿ ಇನ್ನೂ ೪೭೦೦ ಜನ ಬಿಹಾರಿಗಳು ನೆಲೆ ಕಂಡಿರುತ್ತಿದ್ದರು. ಇನ್ನು ಈ ಬಾರಿಯೂ ವಿಶೇಷವಾದ ರೈಲುಗಳು ಅಭ್ಯರ್ಥಿಗಳನ್ನು ಹೊತ್ತು ಕರ್ನಾಟಕಕ್ಕೆ ಹರಿದು ಬರುತ್ತವೆ. ಆದರೆ ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿಗೆ ಬೆದರಿದ್ದ ರೈಲ್ವೆ ಇಲಾಖೆ , ಈ ಬಾರಿ ಕುತ೦ತ್ರ ಮಾಡಿ, ಬೆ೦ಗಳೂರಿನ ಬದಲು ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಈ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಹೋದರೆ ಜನ ಪ್ರತಿಭಟಿಸುವುದಿಲ್ಲವೆ೦ದು ಇವರ ಭಾವನೆ ಇರಬಹುದಾ? ಅಲ್ಲಿರೋ ಕನ್ನಡಿಗರು ಬೆಚ್ಚಗೆ ಮಲಗಿರ್ತಾರೆ ಅನ್ನೋ ಗಟ್ಟಿ ನಂಬಿಕೆನಾ?

ಗ್ರೂಪ್ ಡಿ ಹುದ್ದೆ ಅಂದ್ರೆ ಏನು?

ಅಷ್ಟಕ್ಕೂ ಅದೇನು ಗ್ರೂಪ್ ಡಿ ಹುದ್ದೆಗಳೆ೦ದರೆ? ಗ್ರೂಪ್ ಡಿ ಯಲ್ಲಿನ ಎಲ್ಲ ಹುದ್ದೆಗಳು ರೈಲ್ವೇ ನಲ್ಲಿ ಲೈನ್ ಮೆನ್, ಕ್ಲೀನರ್, ಪೋರ್ಟರ್ ತರಹದ ಕೆಲಸಗಳು. ಒಟ್ಟು ಸುಮಾರು ೪೭೦೦ ಕೆಲಸಗಳು೦ಟು. ಇಂತ ಕಡಿಮೆ ನೈಪುಣ್ಯತೆಯ, ಕಡಿಮೆ ವಿದ್ಯಾರ್ಹತೆಯ ಕೆಲಸಗಳೂ ಕನ್ನಡಿಗರಿಗೆ ಸಿಕ್ಕೊದಿಲ್ಲ ಅಂದ್ರೆ, ಕನ್ನಡಿಗರು ಕೆಲ್ಸ ಹುಡುಕೊಂಡು ಚಂದ್ರ ಲೋಕಕ್ಕೆ ಹೋಗಬೇಕಾ ಹೇಳಿ?
ಕನ್ನಡಿಗರನ್ನು ನೇರವಾಗಿ filter out ಮಾಡಲು ಇವರು ಹೂಡಿರುವ ಸಂಚು ಅದ್ಭುತ !! ೮ನೇ ತರಗತಿ ಪಾಸಾದವನು ಹಿ೦ದಿ/ಇ೦ಗ್ಲೀಷ್ ನಲ್ಲಿ ಅರ್ಜಿ ತು೦ಬಬೇಕಂತೆ ! ನೀವೆ ಹೇಳಿ ೮ನೆ ತರಗತಿ ಓದಿರುವ ಹಳ್ಳಿ ಹೈದ ಅದೇಗೆ ಹಿ೦ದಿ/ಇ೦ಗ್ಲೀಷ್ ನಲ್ಲಿ ಪರೀಕ್ಷೆ ಬರೆಯುಲು ಸಾಧ್ಯ? ಕನ್ನಡದಲ್ಲಿ ಅರ್ಜಿ ಏತಕ್ಕೆ ಇಲ್ಲ, ಪರೀಕ್ಷೆ ಏಕೆ ಕನ್ನಡದಲ್ಲಿ ಇಲ್ಲ? ಇದು ಕನ್ನಡಿಗರನ್ನು ಸ್ಪರ್ಧೆಯಿಂದ ದೂರವಿಡುವ ನೇರ ಸಂಚಲ್ಲವೇ ? ಇದೆ೦ತಹ ಪ್ರಜಾತ೦ತ್ರ. ಭಾರತ ಒ೦ದು ಪ್ರಜಾತ೦ತ್ರ ರಾಷ್ಟ್ರ ಎ೦ದು ಅದಾವ ಗೌರವದಿ೦ದ ಹೇಳಿಕೊಳ್ಳಬೇಕು. ನಮ್ಮ ನೆಲದಲ್ಲೇ ನಮ್ಮನ್ನು second class citizens ತರಹ ಟ್ರೀಟ್ ಮಾಡೋ ಸರ್ಕಾರಕ್ಕೆ ಏನು ಹೇಳಬೇಕು ?

ಸ್ವತ: ರೈಲ್ವೇ ಕಾನೂನು ಏನು ಹೇಳುತ್ತದೆ ?

ರೈಲ್ವೇ ಇಲಾಖೆಗಾಗಿಯೇ ಇರುವ ಸಂಸ್ಥೆಯ ನಿಯಮ ಮತ್ತು ಕಾರ್ಮಿಕ ಕಾನೂನು ಪುಸ್ತಕದ ೪೮ನೇ ಪುಟದಲ್ಲಿ ನಿಯಮಾವಳು ಏನ್ ಹೇಳ್ಬೋದು ಹೇಳಿ?
ರೇಲ್ವೆ ಸುರಕ್ಷಾ ಪಡೆಯನ್ನು ಹೊರತುಪಡಿಸಿ ಡಿ ದರ್ಜೆ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಸ್ಥಳೀಯ ವ್ಯಕ್ತಿಗಳನ್ನೇ ನೇಮಕ ಮಾಡಿಕೊಳ್ಳತಕ್ಕದ್ದು. ಇದರಲ್ಲಿ ರೇಲ್ವೆ ನೇಮಕಾತಿ ಮಂಡಳಿ ಮೂಗು ತೂರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಡಿ ದರ್ಜೆ ನೌಕರರ ನೇಮಕಾತಿಗಾಗಿ ಒಟ್ಟು ೨೦ಕ್ಕೂ ಹೆಚ್ಚು ಉಪವಿಧಿಗಳನ್ನು ಈ ನಿಯಮಾವಳಿ ಕೈಪಿಡಿಯಲ್ಲಿ ಹೇಳಲಾಗಿದೆ.

ಈ ಕೈಪಿಡಿಯಲ್ಲಿರುವ ನಿಯಮಗಳಲ್ಲಿನ ಇನ್ನೂ ಕೆಲ ಅಂಶಗಳೆಂದರೆ

  1. ಖಾಲಿಯಾಗುವ ಕೆಲಸಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನೇಮಕಾತಿ ಮಾಡಿಕೊಳ್ಳತಕ್ಕದ್ದು
  2. ಸಾಮಾನ್ಯವಾಗಿ ಈ ನೇಮಕಾತಿಯನ್ನು ಆಯಾ ವಿಭಾಗ, ಲೋಕೋಷೆಡ್, ಕಾರ್ಯಾಗಾರ ಇತರೆ ಅಗತ್ಯವಿದ್ದೆಡೆ ವಿಭಾಗೀಯ ಮುಖ್ಯಸ್ಥರೇ ಮಾಡಿಕೊಳ್ಳಬಹುದು.
  3. ನೇಮಕಾತಿ ಪ್ರಕ್ರಿಯೆಯನ್ನು ಇಂಗ್ಲೀಷ್, ಹಿಂದಿ ಮತ್ತು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಮುಖ್ಯವಾಗಿ ನೀಡಬೇಕು
  4. ಇರುವ ಹುದ್ದೆಗಳು ಎಷ್ಟು, ವೇತನ ಎಷ್ಟು ಇತ್ಯಾದಿ ಅಗತ್ಯ ಮಾಹಿತಿಯನ್ನು ಸ್ಥಳೀಯ ಮಾಧ್ಯಮದಲ್ಲಿ ಪ್ರಕಟಿಸುವುದರೊಂದಿಗೆ ಅರ್ಜಿ ನಮೂನೆಯನ್ನು ಅತ್ಯಂತ ಸರಳವಾಗಿ ಸ್ಥಳೀಯ ಭಾಷೆಯಲ್ಲಿ ರೂಪಿಸತಕ್ಕದ್ದು. 
  5. ಪ್ರಕಟಣೆಗಳ ಪ್ರತಿಯನ್ನು ಸ್ಥಳೀಯ ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರಕ್ಕೂ ಮತ್ತು ಮೀಸಲಾತಿಯ ಸ್ಥಾನಗಳೆಷ್ಟು ಎಂಬುದನ್ನು ಉಲ್ಲೇಖಿಸಬೇಕು
  6. ಈ ವಿವರಗಳನ್ನು ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಾಲಯಕ್ಕೂ ರವಾನಿಸಬೇಕು.

ಈ ವಿವರಗಳು ಇಷ್ಟು ದಿನ ರೇಲ್ವೆಯ ಅಂತರ್ಜಾಲ ತಾಣದಲ್ಲಿ ಇತ್ತು. http://irsme.nic.in/establishments ಆದರೆ ಜನವರಿ ೨೦೦೮ ರಿ೦ದ ತೆರೆ ಕಾಣದಂತೆ ತಡೆ ಹಿಡಿಯಲಾಗಿದೆ. ಇದು ರೇಲ್ವೆಯ ಎಲ್ಲಾ ವಿಭಾಗೀಯ ಅಂತರ್ಜಾಲ ತಾಣಗಳಲ್ಲೂ ಲಭ್ಯವಿತ್ತು ಅದರೆ ಇದನ್ನೂ ಸಹ ಜನವರಿ ೨೦೦೮ ರಿ೦ದ ಕಾಣದಂತೆ ತಡೆಹಿಡಿಯಲಾಗಿದೆ! Indian Railways establishment volume 1 and 2 http://westcentralrailway.com/RTI_Personnel/Manuals/MANUALS.pdf.

ಇವತ್ತು ಆಗಲೇ ಕ.ರ.ವೇ ಈ ವಿಷ್ಯದಲ್ಲಿ ನಾಡಿನಾದ್ಯಂತ ಪ್ರತಿಭಟನೆ ಜಾಥಾ ಮಾಡಿ, ಸರ್ಕಾರಕ್ಕೆ, ರೈಲ್ವೆ ಇಲಾಖೆ, ಕನ್ನಡಿಗರನ್ನು ಕಡೆಗಣಿಸದಂತೆ ಎಚ್ಚರಿಕೆ ನೀಡಿದ್ದು ಓದಿ ಖುಷಿ ಆಯ್ತು. ಯಾರು ಮಾತಾಡಲಿಲ್ಲ ಅಂದ್ರೂ ಇವರಾದ್ರೂ ಕೆಲ್ಸ ಮಾಡ್ತಾ ಇದ್ದಾರಲ್ಲ ಈ ವಿಷ್ಯದಲ್ಲಿ ಅಂತಾ.ಈ ಬಾರಿಯಾದ್ರೂ ನಮ್ಮ ಸರ್ಕಾರ ಈ ವಿಷ್ಯದಲ್ಲಿ ನೇರವಾಗಿ ಕೇಂದ್ರದ ಜೊತೆ ಮಾತಾಡಿ, ಇಂತಹ ಕೆಲಸಗಳಿಗೆ ಸ್ಥಳಿಯರನ್ನೇ ಆಯ್ಕೆ ಮಾಡಿಕೊಳ್ಳಬೇಕು ಅನ್ನೊ ವಿಷ್ಯ ಮನದಟ್ಟು ಮಾಡಿ, ಆ ವಿಷ್ಯದಲ್ಲಿ ಕಾನೂನು ಬರೋ ತರಹ ಮಾಡಬೇಕು. ಏನಂತೀರಿ ಸ್ನೇಹಿತರೆ?

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

sunilkumara.ms's picture

ಕಿಶೋರ್ ಅವರೇ,
ನಿಮ್ಮ ಈ ಲೇಖನವು ಬೃಹದಾಕಾರವಾಗಿ ಬೆಳೆದಿರುವ ತಾರತಮ್ಯ ನೀತಿಯನ್ನು ಎತ್ತಿ ತೋರಿಸುವಂತಿದೆ. ಸಮಯಕ್ಕೆ ತಕ್ಕವಾದ ಲೇಖನ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ನಾಡಿನ ಜನ ಸಮುದಾಯಕ್ಕೆ ತಿಳಿಸಬೇಕಾಗಿದೆ. ನಿಮಗೆ ವಂದನೆಗಳು.

ಸುನಿಲ್ ಮಲ್ಲೇನಹಳ್ಳಿ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ನಿಮ್ಮ ತಲೆಬರಹದ ಸಾಲು ಹೀಗಿದೆ:
> ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ಬರಹದ ಮೊದಲ ಸಾಲು ಹೀಗಿದೆ:
> ನ್ಯಾನೋವಿನಿ೦ದ ಸಿಗಬೇಕಾರ ಸುಮಾರು ೧೦,೦೦೦ ಕ್ಕೂ ಹೆಚ್ಚು ಕೆಲಸವನ್ನು ನಾವು ಕಳೆದುಕೊ೦ಡಾಯ್ತು.

ಮತ್ತೆ ಓದಿ, ಇವೆರಡು ಸಾಲುಗಳನ್ನು...
ಚಂದ್ರ ಲೋಕ ಅಲ್ಲ, ಸದ್ಯಕ್ಕೆ ಹೋಗಬೇಕಾಗಿರುವುದು ಗುಜರಾತ್ ಗೆ Smiling
೧೦,೦೦೦ ಕೆಲಸ ಇನ್ನೂ ಹಾಗೇ ಇವೆ, ಹೋಗಿ ಬಾಚಿಕೊಳ್ಳಿ Smiling

--ಶ್ರೀ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

ಸುಮ್ಮನೆ ತಮಾಷೆಗೆ ಹಾಗಂದ್ರಿ ಅನ್ಕೊತಿನಿ.. ಇಲ್ಲ ಅಂದ್ರೆ ಕಿಶೋರ್ ಅವರು ಎತ್ತಿರೋ ಪ್ರಶ್ನೆ ನಿಜಕ್ಕೂ ಪ್ರತಿ ಕನ್ನಡಿಗನ ಕಣ್ಣು ತೆರೆಸಬೇಕಿದೆ.

ಹುಬ್ಬಳ್ಳಿಯಲ್ಲಿ ಈಗಾಗಲೇ ಅಲ್ಲಿಯ ರೈಲ್ವೆ ಜನರಲ್ ಸ್ಟೋರ್ ಏರಿಯಾ ಪೂರ್ತಿ ಬಿಹಾರಿಗಳ ಕಾಲೋನಿಯಾಗಿದೆ.. ಅಲ್ಲಿನ ಹಿರಿಯರಾದ ಪಾಟೀಲ್ ಪುಟ್ಟಪ್ಪನವರು, ವಿಜಯ ಸಂಕೇಶ್ವರ ಅವರೆಲ್ಲ ರೈಲ್ವೆ ವಲಯಕ್ಕಾಗಿ ನಿರಂತರ ಹೋರಾಟ ಮಾಡಿದ್ದು ಇನ್ನೂ ನೆನಪಿದೆ. ಅಷ್ಟೆಲ್ಲಾ ಕಷ್ಟ ಪಟ್ಟು ವಲಯ ಗಳಿಸಿದ್ದು ಬಿಹಾರಿಗಳಿಗೆ ಮಣೆ ಹಾಕಲಿಕ್ಕಾ?
ಕನ್ನಡದ ಮಕ್ಕಳಿಗೆ ಕೆಲಸ ಸಿಗಲ್ಲ ಅಂದ್ರೆ ಅದ್ಯಾವ ಕರ್ಮಕ್ಕೆ ಈ ವಲಯ ಬೇಕು??

ಇದನ್ನೆಲ್ಲಾ ಕೇಳೊರೆ ಇಲ್ವಾ? ಕ.ರ.ವೇ ಅವರೊಬ್ಬರೆ ಇದನ್ನೆಲ್ಲ ಪ್ರಶ್ನೆ ಮಾಡೋದು. ಆದ್ರೆ ಅವರ ಹೋರಾಟವನ್ನು ಬೆಂಬಲಿಸೋದು ಬಿಟ್ಟು ಅವರನ್ನೇ ಆಡಿಕೊಂಡು ಬಾಯಿಗೆ ಬಂದದ್ದು ಮಾತಾಡೋರೆ ನಮ್ಮಲ್ಲಿ ಜಾಸ್ತಿ..

ಹೀಗೆ ಪರಭಾಷಿಕರ ಅವ್ಯಾವಹತ ವಲಸೆ ಮುಂದುವರೆದ್ರೆ, ಕನ್ನಡಿಗರನ್ನ ಆ ದೇವರೆ ಕಾಪಾಡಬೇಕು
-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ತಮಾಷೆ ಅಲ್ಲ...

ಕೆಲಸ ಬೇಕು ಅಂದ್ರೆ ಎಲ್ಲಿ ಕೆಲಸ ಸಿಗತ್ತೋ ಅಲ್ಲಿ ಮಾಡಿ!

> ಹುಬ್ಬಳ್ಳಿಯಲ್ಲಿ ಈಗಾಗಲೇ ಅಲ್ಲಿಯ ರೈಲ್ವೆ ಜನರಲ್ ಸ್ಟೋರ್ ಏರಿಯಾ ಪೂರ್ತಿ ಬಿಹಾರಿಗಳ ಕಾಲೋನಿಯಾಗಿದೆ..

ಅಯ್ಯೋ ರಾಮ, ಗುಜರಾತ್ ಗೆ ಹೋಗಿ, ಕನ್ನಡ ಕಾಲೋನಿ ಮಾಡ್ರೀ!
ಬಿಹಾರಿಗಳು ಬಂದ್ರೂ ಅಂತ ಬೊಬ್ಬೆ ಯಾಕ್ರೀ?
ಕನ್ನಡಿಗರಿಗೆ ತಾಕತ್ತಿದ್ದರೆ, ಪರಿಶ್ರಮ ಹಾಕಿದ್ರೆ, ಎಲ್ಲ ಕೆಲಸ ಕನ್ನಡಿಗರಿಗೆ ದಕ್ಕತ್ತೆ...
ಬೇರೆ ರಾಜ್ಯದವರು ಬರಬಾರದು, ನಾವು ಅಲ್ಲಿಗೆ ಹೋಗಬಾರದು ಅನ್ನೋದು ಸಂಕುಚಿತ ಮನೋಭಾವ.
ಯಾವ ಕಂಪನಿನೂ, ನುಡಿ ನೋಡಿ ಕೆಲಸ ಕೊಡಲ್ಲ, ಅವನ ಅರಿಮೆ, ಕೆಲಸ, ಓದು ಇತ್ಯಾದಿ ನೋಡಿ ಕೊಡೋದು...

ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕೋತ್ತೀರಾ?
ಕೂತು ಉಂಡರೆ ಕುಡಿಕೆ ಹಣ ಸಾಲದು ಅಂತ ಕನ್ನಡದಲ್ಲಿ ಗಾದೆ ಇಲ್ವ?

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ನೀವು ಹೀಗೆ ಹೇಳಿದ್ದಕ್ಕೆ ನೆನಪಿಗೆ ಬಂತು...
ನಮ್ ತಂದೆ, ಅಜ್ಮೀರ್’ನಲ್ಲಿ ಇದ್ದಾಗ, ಅಲ್ಲಿನ ಕನ್ನಡ ಸಂಘಕ್ಕೆ ಕರೆದುಕೊಂಡು ಹೋಗುತ್ತಿದ್ದರು...
ಕನ್ನಡದ ಒಳ್ಳೊಳ್ಳೆ ಕಥೆ, ಕಾದಂಬರಿ ಪುಸ್ತಕಗಳು ಸಿಗುತ್ತಿದ್ದವು...ಮಜಾ ಇರ್ತಿತ್ತು...

ಕನ್ನಡಿಗ ಬರಿ ಕನ್ನಡನೆಲೆದಲ್ಲೆ ಕನ್ನಡಿಗನಾಗಿರಬೇಕಿಲ್ಲವಲ್ಲ...ಎಲ್ಲಿ ಹೋದರೂ ಕನ್ನಡಕ್ಕೆ ನೆಲೆ ಮೂಡಿಸಬಹುದು.
ಉದಾಹರಣೆಗೆ ನಮ್ ಸಂಪದದಲ್ಲೇ ಸಿಕ್ಕಾಪಟ್ಟೆ ಮಂದಿ ಇಲ್ವಾ??? Smiling
ಇದಕ್ಕಿಂತ ನಿಮಗೆ ಉದಾಹರಣೆ ಬೇಕಾ?!!!

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

Quote:
ಕನ್ನಡಿಗರಿಗೆ ತಾಕತ್ತಿದ್ದರೆ, ಪರಿಶ್ರಮ ಹಾಕಿದ್ರೆ, ಎಲ್ಲ ಕೆಲಸ ಕನ್ನಡಿಗರಿಗೆ ದಕ್ಕತ್ತೆ...

ಸ್ವಾಮಿ,, ತಾಕತ್ತು, ಪರಿಶ್ರಮ ಎಲ್ಲ ಅವಕಾಶ ಕೊಟ್ಟ ಮೇಲೆ ಮಾತಾಡಬೇಕು.. ಪರೀಕ್ಷೆಯ ಜಾಹಿರಾತು ಕನ್ನಡ ಪತ್ರಿಕೆಗಳಿಗೆ ಕೊಡದೇ, ಬರಿ ಬಿಹಾರದಲ್ಲಿನ ಪತ್ರಿಕೆಗಳಲ್ಲಿ ಕೊಡೊದು, ೮ ನೇ ಕ್ಲಾಸ್ ಪಾಸಾಗಿರೋನಿಗೆ ಹಿಂದಿ/ ಇಂಗ್ಲಿಷ್ ಅಲ್ಲಿ ಪರೀಕ್ಷೆ ಬರೆಯೋಕೆ ಹೇಳೊದು ಯಾವ ಸೀಮೆ ಸಮಾನತೆ ಸ್ವಾಮಿ?

Quote:
ಬೇರೆ ರಾಜ್ಯದವರು ಬರಬಾರದು, ನಾವು ಅಲ್ಲಿಗೆ ಹೋಗಬಾರದು ಅನ್ನೋದು ಸಂಕುಚಿತ ಮನೋಭಾವ.

ಬೇರೆ ರಾಜ್ಯದವರು ಬರಬಾರದು, ನಾವು ಅಲ್ಲಿಗೆ ಹೋಗಬಾರದು ಅಂತ ಯಾರು ಇಲ್ಲಿ ಹೇಳ್ತಿಲ್ಲ.. ಆದ್ರೆ ಇಲ್ಲಿರೋ ಎಲ್ಲ ಸಂಪನ್ಮೂಲಗಳನ್ನು ಸೂರೆ ಹೋಡಿತಿವಿ, ಆದ್ರೆ ಕೆಲ್ಸ ಮಾತ್ರ ಇನ್ಯಾರಿಗೋ ಅನ್ನೊ ಟೊಳ್ಳು ವಾದವನ್ನು, ವಾದಿಗಳನ್ನಷ್ಟೆ ಪ್ರಶ್ನಿಸುತ್ತಿರುವುದು. ಒಂದು ಮಾತು ನೆನಪಿರಲಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಈ ನೆಲದಲ್ಲಿ ಸೃಷ್ಟಿ ಆಗೋ ಯಾವುದೇ ಅವಕಾಶದ ಮೊದಲ ಪಾಲು ಆತನಿಗೆ ಸಲ್ಲಬೇಕು. ಇಷ್ಟೆಲ್ಲ ಕನ್ನಡಿಗರಿಗೆ ಉದಾರತೆಯ ಉಪದೇಶ ನೀಡೋ ನೀವು ನಿಮ್ಮ ಮನೆಯಲ್ಲಿನ ಒಂದು ಕೋಣೆ ತಮಿಳನಿಗೋ ಬಿಹಾರಿಗೋ ಬಿಟ್ಟು ಕೊಡು ಅಂದ್ರೆ ಕೊಡತಿರಾ? ಅಷ್ಟ್ಯಾಕೆ ಪಕ್ಕದ ಮನಿಯಾತಂಗೆ ಕೊಡ್ತಿರಾ?

[

-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

> ಸ್ವಾಮಿ,, ತಾಕತ್ತು, ಪರಿಶ್ರಮ ಎಲ್ಲ ಅವಕಾಶ ಕೊಟ್ಟ ಮೇಲೆ ಮಾತಾಡಬೇಕು..

ಹೌದು, ಸಧ್ಯದ ಅವಕಾಶ ಗುಜರಾತ್ ನಲ್ಲಿ ಇದೆ ಅಂದೆ...!

> ಒಂದು ಮಾತು ನೆನಪಿರಲಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
> ಈ ನೆಲದಲ್ಲಿ ಸೃಷ್ಟಿ ಆಗೋ ಯಾವುದೇ ಅವಕಾಶದ ಮೊದಲ ಪಾಲು ಆತನಿಗೆ ಸಲ್ಲಬೇಕು.

ರೈಲ್ವೇ ಬಗ್ಗೆ ಮಾತಾಡ್ತೀರ ಅಲ್ವಾ? ಸರ್ಕಾರದ (ಲಾಲುವಿನ) ಕಿತಾಪತಿ ಅಂತ ಇಟ್ಟುಕೊಳ್ಳಿ.
ಎಲ್ಲಿ ನಮ್ಮ ಕರ್ನಾಟಕದಿಂದ ಕೇಂದ್ರದಲ್ಲಿ ಎಷ್ಟು ಜನ ರೈಲ್ವೇ ಮಂತ್ರಿಗಳು ಇದ್ದರು ಅಂತ ಲೆಕ್ಕ ಹಾಕಿ...
ಜಾಫರ್ ಶರೀಫ್, ಜಾರ್ಜ್ ಫರ್ನಾಂಡಿಸ್ ಇನ್ನೂ ಹಲವರು ಅಂತ ಕಾಣತ್ತೆ...
ಆಗೆಲ್ಲ ಏನಾಗಿತ್ತು ನಮ್ಮ ನಾಡಿಗೆ ರೈಲ್ವೇ ಲೈನ್ ಹಾಕಿಸಿಕೊಳ್ಳಕ್ಕೆ ಧಾಡಿ...!
ರೈಲ್ವೇನಲ್ಲಿ ಕೆಲಸನೂ ಗಿಟ್ಟಿಸಬಹುದಿತ್ತಲ್ಲ...! ರೈಲ್ವೇ ಮಾತು ಬಿಡಿ...ಅದು ಸರ್ಕಾರದ್ದು...

ನಾನು ಹೇಳಿದ್ದು ೧೦೦೦೦ ಕೆಲಸ ಇದೆ, ನ್ಯಾನೋ ಕೆಲಸ ಗಿಟ್ಟಿಸಿರಿ ಅಂತ!
ಬಿಹಾರದವರು ಊರ ಬಿಟ್ಟು ಕೆಲಸ ಗಿಟ್ಟಿಸಲು ಬಂದರಲ್ಲವೇ? ಅದೇ ರೀತಿ ಮಾಡಿ ಅಂದೆ ನಾನು...
ಅದು ನಿಮಗೆ ತಮಾಷೆ ಅಂತ ಕಾಣಿಸ್ತಾ!!! ಅಚ್ಚರಿ...

> ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಹೌದು ಯಾರು ಇಲ್ಲ ಅಂದಿದ್ದೂ Smiling

> ನೀವು ನಿಮ್ಮ ಮನೆಯಲ್ಲಿನ ಒಂದು ಕೋಣೆ ತಮಿಳನಿಗೋ ಬಿಹಾರಿಗೋ ಬಿಟ್ಟು ಕೊಡು ಅಂದ್ರೆ ಕೊಡತಿರಾ?

ಮನೆ ಕಟ್ಟೋ ಕೂಲಿಗಳು ನಮ್ಮ ಮನೆ ಬಳಿ ಇದಾರೆ...
ರಾಯಚೂರಿನದು ಒಂದು ಗುಂಪು ತಮಿಳರದು ಒಂದು ಗುಂಪು...
ನಾನು ಕಣ್ಣಾರೆ ದಿನಾ ನೋಡೋದನ್ನ ಹೇಳ್ತೀನಿ...
ರಾಯಚೂರು ಗುಂಪು, ಕೆಲಸ ಮಾಡೋ ಬಗೆ ಹೀಗೆ:
ಕೆಲಸ ಶುರು ಮಾಡೋದು:
ಬೆಳಿಗ್ಗೆ ೯.೩೦-೧೦
ಮಧ್ಯಾಹ್ನದ ಊಟ ಬಿಟ್ಟು ಮಧ್ಯೆ ಟೀಗೆ ಅಂತ ೩-೫ ಸರತಿ ಬ್ರೇಕ್.
ಸಾಯಂಕಾಲ ೬ ಕ್ಕೆ ಜಾಗ ಖಾಲಿ ಮಾಡ್ತಾರೆ...

ತಮಿಳರ ಗುಂಪು, ಕೆಲಸ ಮಾಡೋ ಬಗೆ ಹೀಗೆ:
ಕೆಲಸ ಶುರು ಮಾಡೋದು: ಬೆಳಿಗ್ಗೆ ೮-೮.೩೦
ಮಧ್ಯಾಹ್ನದ ಊಟಕ್ಕೆ ಒಮ್ಮೆ ಬ್ರೇಕ್
ಸಾಯಂಕಾಲ ೭.೩೦-೮ ವರೆಗೆ ಕೆಲಸ...

ನೀವು ಮನೆ ಕಟ್ಟಿಸಿದರೆ ಯಾರ ಹತ್ತಿರ ಕಟ್ಟಿಸ್ತೀರ?
ಗೊತ್ತಾಯ್ತಾ, ಓದು ಬರಹ ಬರದೇ ಇದ್ರೂ, ಏನು ಸಮಾನತೆ ಅಂತಾ?

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

Quote:
ಹೌದು, ಸಧ್ಯದ ಅವಕಾಶ ಗುಜರಾತ್ ನಲ್ಲಿ ಇದೆ ಅಂದೆ...!

ಪೂರ್ತಿ ವಿಷಯಾಂತರ ಮಾಡ್ತಾ ಇದಿರಲ್ಲ ಸ್ವಾಮಿ. ಇಲ್ಲಿ ಪ್ರಶ್ನೆ ಎತ್ತಿರೋದು, ಕನ್ನಡದ ನೆಲದಲ್ಲಿ ಸೃಷ್ಟಿ ಆಗ್ತಿರೋ ಕೆಲಸದ ಬಗ್ಗೆ ಕನ್ನಡದ ಯಾವ ಪತ್ರಿಕೆಯಲ್ಲೂ ಜಾಹೀರಾತು ಕೊಡದೇ, ೮ನೇ ಪಾಸ್ ಮಾಡಿರೋ ಹಳ್ಳಿ ಹೈದನಿಗೆ ಹಿಂದಿ-ಇಂಗ್ಲೀಷ್ ಅಲ್ಲಿ ಪರೀಕ್ಷೆ ಬರೆಯೊಕೆ ಹೇಳೊದು, ಇವೆಲ್ಲ ಏನು ಸಮಾನತೆನಾ? ಹಗಲು ದರೋಡೆ ತರಹದ ಮೋಸ ಕಣ್ಣು ಮುಂದೆ ನಡಿತಿದೆ, ಆದ್ರೆ ತಮಗ್ಯಾಕೋ ಜಾಣ ಕುರುಡು.

Quote:
ಎಲ್ಲಿ ನಮ್ಮ ಕರ್ನಾಟಕದಿಂದ ಕೇಂದ್ರದಲ್ಲಿ ಎಷ್ಟು ಜನ ರೈಲ್ವೇ ಮಂತ್ರಿಗಳು ಇದ್ದರು ಅಂತ ಲೆಕ್ಕ ಹಾಕಿ...
ಜಾಫರ್ ಶರೀಫ್, ಜಾರ್ಜ್ ಫರ್ನಾಂಡಿಸ್ ಇನ್ನೂ ಹಲವರು ಅಂತ ಕಾಣತ್ತೆ... ಆಗೆಲ್ಲ ಏನಾಗಿತ್ತು ನಮ್ಮ ನಾಡಿಗೆ ರೈಲ್ವೇ ಲೈನ್ ಹಾಕಿಸಿಕೊಳ್ಳಕ್ಕೆ ಧಾಡಿ...!

ಅದೇ ಸ್ವಾಮಿ ಲಾಲೂಗೂ, ಮಂತ್ರಿಗಳಾಗಿ ಹೋದ ನಮ್ಮವರಿಗೂ ಇರೋ ವ್ಯತ್ಯಾಸ. ಲಾಲೂಗೆ ಬಿಹಾರಿಗಳಿಗೆ ಕೆಲಸ ಕೊಡಸೋದು ಮುಖ್ಯ, ಯಾಕೆಂದ್ರೆ ಅವನಿಗೆ ಬಿಹಾರಿಗಳೇ ವೋಟ್ ಬ್ಯಾಂಕ್. ನಮ್ಮವರಿಗೆ ಕನ್ನಡ-ಕನ್ನಡಿಗ ಅಂದ್ರೆ ಎಲ್ಲಿಲ್ಲದ ಅಸಡ್ಡೆ. ಕೆಲಸ ಕೊಡಸಿದ್ರೂ, ಕೊಡಿಸದಿದ್ರೂ ವೋಟ್ ಮಾಡ್ತಾರೆ ಅನ್ನೊ ದರ್ಪ. ಕನ್ನಡ-ಕನ್ನಡಿಗನೂ ಒಂದು ವೋಟ್ ಗೆಲ್ಲೊವಂತ ವಿಷ್ಯ ಆಗಲಿ, ಇವರೆಲ್ಲ ಮುಚ್ಕೊಂಡು ನಮ್ಮ ಕೆಲಸ ಮಾಡ್ತಾರೆ.

Quote:
ರೈಲ್ವೇ ಮಾತು ಬಿಡಿ...ಅದು ಸರ್ಕಾರದ್ದು...

ಏನು ನಿಮ್ಮ ಮಾತಿನ ಅರ್ಥ. ಸರ್ಕಾರ ಅಂದ್ರೆ ಅದರಲ್ಲಿ ಕನ್ನಡಿಗರಿಗೆ ಯಾವ ಪಾಲು ಇಲ್ಲವೋ? ನಮ್ಮ ರಾಜ್ಯದಿಂದ ತೆರಿಗೆ ಮಾತ್ರ ಬೇಕು, ಕೆಲಸ ಮಾತ್ರ ಕೇಳಬಾರದು ಅಂತಾನೋ?
ಮೊದಲು, ಕಿಶೋರ್ ತಮ್ಮ ಬರಹದಲ್ಲಿ ಹೇಗೆ ಅನ್ಯಾಯ ಆಗಿದೆ ಅನ್ನೊದನ್ನ ಬರೆದಿರುವುದನ್ನು ಓದಿ, ಅದು ಬಿಟ್ಟು ನ್ಯಾನೊಗೆ ವಿಷಯಾಂತರ ಮಾಡೋ ಪ್ರಯತ್ನ ಮಾಡ್ತಾ ಇದಿರಾ Smiling

ಇನ್ನೂ ನಿಮ್ಮ ರಾಯಚೂರು ಗುಂಪು, ತಮಿಳರ ಗುಂಪಿನ ಬಗೆಗಿನ ನಿಮ್ಮ ಕಮೆಂಟ್ ಬರಿ ನಿಮ್ಮೊಬ್ಬರ ಅನಿಸಿಕೆ ಅಷ್ಟೆ. ಅದನ್ನೇ ತಮಿಳರೆಲ್ಲ ಭಯಂಕರ ಶ್ರಮಜೀವಿಗಳು, ಕನ್ನಡಿಗರೆಲ್ಲ ಶತ ಸೋಮಾರಿಗಳು ಅನ್ನೋ ತರಹ generalise ಮಾಡಬೇಡಿ. ನನ್ನ ಸ್ನೇಹಿತ ಪವನನ ಮನೆ ಕಟ್ಟೊ ಪೂರ್ತಿ ಕೆಲ್ಸಾನಾ ಬಿಜಾಪುರ ಮೂಲದ ಕೆಲಸದವರು ಅಚ್ಚುಕಟ್ಟಾಗಿ, ಅದ್ಭುತವಾಗಿ ಮುಗಿಸಿ ಕೊಟ್ಟಿರೋದನ್ನ ಬೇಕಿದ್ರೆ ತೋರಿಸುವೆ, ಬನ್ನಿ ಒಮ್ಮೆ ಆರ್.ಟಿ.ನಗರಕ್ಕೆ.

-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ವಿಷಯಾಂತರ ಎಲ್ರೀ...ನಾನು ಕಾಮೆಂಟ್ ಹಾಕಿದ್ದೆ ನ್ಯಾನೋ ಬಗ್ಗೆ...ಒಮ್ಮೆ ಮೇಲೆ ನೋಡಿ, ನನ್ನ ಮೊದಲ ಕಾಮೆಂಟ್...!

ಹೋಗಲಿ ಬಿಡಿ...
> ಇವೆಲ್ಲ ಏನು ಸಮಾನತೆನಾ? ಹಗಲು ದರೋಡೆ ತರಹದ ಮೋಸ ಕಣ್ಣು ಮುಂದೆ ನಡಿತಿದೆ, ಆದ್ರೆ ತಮಗ್ಯಾಕೋ ಜಾಣ ಕುರುಡು

ಇದರ ಬಗ್ಗೆ ನಾನು ಮಾತಾಡಲೇ ಇಲ್ಲ! ಅನ್ಯಾಯ ಆಗಿದೆ ನಿಜ...
ನನ್ನ ಈ ಪ್ರಶ್ನೆಗೆ ಉತ್ತರ ಕೊಡಿ...ಕ.ರ.ವೇ, ಏನೋ ಮಾಡ್ತಿದಾರೆ ಅಂದ್ರಲ್ಲ ಏನು ಅಂತ ಸ್ವಲ್ಪ ಹೇಳಿ...

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

ನನಗೆ ನೆನಪಿರೋ ಹಾಗೆ, ಕಳೆದ ಜನವರಿಯಲ್ಲಿ ಈ ಮೋಸದ ಆಟ ಶುರು ಆದಾಗ, ಅದನ್ನ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಜನಾಂದೋಲನ ಮಾಡಿದ್ದೆ ಕ.ರ.ವೇ. ಅವತ್ತು ಕರ್ನಾಟಕದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಕಾವು ಪಡೆದುಕೊಂಡ ಮೇಲಷ್ಟೆ ಈ ಮೋಸದಾಟಕ್ಕೆ ತಾತ್ಕಾಲಿಕೆ ತೆರೆ ಬಿದ್ದದ್ದು.

ಇನ್ನೂ ಈ ಬಾರಿಯೂ, ೧೮ ನೇ ತಾರೀಖು ಶುರು ಆಗಲಿರೋ ಆ ಆಯ್ಕೆ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಮೋಸ ಮಾಡೋಕೆ ಬಿಡಲ್ಲ ಅನ್ನೊ ಎಚ್ಚರಿಕೆನಾ, ಜನರಲ್ಲಿ ಈ ಮೋಸದ ಬಗ್ಗೆ ಜಾಗೃತಿ ತರೋಕೆ ನಿನ್ನೆ ದಿನ ಪ್ರತಿಭಟನೆ ಜಾಥಾ ಮಾಡಿರೋ ಸುದ್ದಿ ಇವತ್ತಿನ ಪತ್ರಿಕೆಯಲ್ಲಿ ನೋಡಿ.

ಚಳವಳಿ, ಪ್ರತಿಭಟನೆ ಅನ್ನೋದು ನಡೆಯೋದೇ ಆಡಳಿತ ವ್ಯವಸ್ಥೆ ತನ್ನ ಕೆಲಸ ತಾನು ಮಾಡಲು ಸೋತಾಗ. ಹಾಗಾಗಿ ಹೆಚ್ಚು ಸಲ ಅದು ವ್ಯವಸ್ಥೆಗೆ ವಿರುದ್ಧವಾಗಿರುತ್ತದೆ ಮತ್ತು ಪೂರ್ಣಫಲ ಸಿಗುವುದಿಲ್ಲ. ಅದಕ್ಕೆ ಏಕೀಕರಣ ಚಳವಳಿಯೂ ಹೊರತಲ್ಲ. ಹಾಗೇ ನಾಡಿನ ತುಂಬಾ ದೊಡ್ಡ ಕ್ರಾಂತಿಯುಂಟುಮಾಡಿದ್ದ ಗೋಕಾಕ್ ಚಳವಳಿಯೂ ಆ ದೃಷ್ಟೀಲಿ ನೋಡೂದ್ರೆ ವೈಫಲ್ಯವೇ. ಹಾಗಾದ್ರೆ ಚಳವಳಿಗಳಿಂದ ಏನು ಪ್ರಯೋಜನ? ಚಳವಳಿಗಳು ಉಂಟು ಮಾಡೋ ಅಗಾಧವಾದ ಜನಜಾಗೃತಿಯೇ, ಜನರ ಒಗ್ಗಟ್ಟೇ ನಿಜವಾದ ಚಳವಳಿಯ ಯಶಸ್ಸಿನ ಮಾನದಂಡ. ಅದನ್ನೇ ಕ.ರ.ವೇ ಮಾಡ್ತಾ ಇರೋದು.
-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

Quote:
ಸದ್ಯಕ್ಕೆ ಹೋಗಬೇಕಾಗಿರುವುದು ಗುಜರಾತ್ ಗೆ . ೧೦,೦೦೦ ಕೆಲಸ ಇನ್ನೂ ಹಾಗೇ ಇವೆ, ಹೋಗಿ ಬಾಚಿಕೊಳ್ಳಿ

ಗುಜರಾತಲ್ಲಿ ಮೋದಿ ಕಷ್ಟ ಪಡ್ತಿರೋದು ಗುಜರಾತಿಗಳಿಗೆ ಕೆಲ್ಸ ಸಿಗಲಿ, ಗುಜ್ಜುಗಳಿಗೆ ದುಡ್ಡು ಮಾಡ್ಕೊಳ್ಳೊ ಅವಕಾಶ ಆಗಲಿ ಅಂತ.. ನ್ಯಾನೊ ಅಲ್ಲಿ ಮಾಡಿಸಿಕೊಂಡು, ೧೦,೦೦೦ ಜನ ಕನ್ನಡಿಗರಿಗೆ ಕೆಲ್ಸ ಕೊಡೊಕೆ ಅವರಿಗೇನು ತಲೆ ಕೆಟ್ಟಿದ್ಯಾ? Smiling

A strong KA, a strong TN, a strong AP, a strong Bihar and the likes can build a strong India...

ಇದು ಆಗೋಕೆ ಆಯಾ ರಾಜ್ಯದಲ್ಲಿ ಅಲ್ಲಿನ ಸ್ಥಳಿಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ಎಲ್ಲ ಅವಕಾಶ ಸಿಕ್ಕಬೇಕು.. ಅದರರ್ಥ, ಬಿಹಾರಿಗೆ ಬಿಹಾರದಲ್ಲಿ ಮೊದಲ preference ಸಿಗಬೇಕು, ಕರ್ನಾಟಕದಲ್ಲಿ ಕನ್ನಡಿಗನಿಗೆ,,,

ನನ್ನ ಮಾತಿನ ಅರ್ಥ ತಮಗಾಯ್ತು ಅಂತ ಅನ್ಕೊತಿನಿ.
-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ಏನ್ರೀ ಹೀಗೆಲ್ಲ ತಮಾಷೆ ಮಾಡ್ತೀರ...ಮೋದಿ ಏನಾದ್ರೂ ಹೇಳಲಿ, ಅಲ್ಲಿ ಕೆಲಸ ಕೊಡೋ ಮಂದಿ ಟಾಟಾ ನವರು.
ಒಬ್ಬ ಬುದ್ದಿವಂತ ಕನ್ನಡಿಗ, ದಡ್ಡ ಗುಜರಾತಿ ಇದ್ರೆ, ಟಾಟಾಗೆ ಮೋದಿ ಗುಜರಾತಿನ ಸೇರಿಸ್ಕೋ ಅಂದ್ರೆ, ಹೊಗಯ್ಯ ಅಂತಾರೆ!

ನಿಮ್ಮ ಪ್ರೊಫೈಲ್ ನೋಡಿದ್ರೆ ಸಾಫ್ಟ್ ವೇರ್ ಉದ್ಯೋಗಿ ಅಂತ ಹಾಕ್ಕೊಂಡಿದ್ದೀರ, ನಿಮ್ ಕಂಪನಿ ನಲ್ಲಿ ಸೇರಿಸ್ಕೋಬೇಕಾದ್ರೆ ನಿಮ್ಮದು ಯಾವ ನುಡಿ ಅಂತ ಕೇಳಿದ್ರಾ ? (c, c++, java ಈ ತರ ಬಿಟ್ಟು Eye-wink )

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

imunde's picture

ದಡ್ಡ ಮತ್ತು ಬುದ್ದಿವಂತ ಇವರಲ್ಲಿ ಒಬ್ಬರನ್ನ ಸೆಲೆಕಟ್ ಮಾಡಬೇಕಾದ್ರೆ ತೊಂದರೆ ಇರೊಲ್ಲ. ಆದ್ರೆ ಇಬ್ಬರೂ ದಡ್ಡರೇ (ಅಥವಾ ಬುದ್ದಿವಂತ) ಆಗಿದ್ರೆ ಅವರಲ್ಲಿ ಯಾರನ್ನ ಸೆಲೆಕ್ಟ್ ಮಾಡ್ತೀರಾ ಅನ್ನೋದು ಪ್ರಶ್ನೆ.

ಮೊದಲು ನಮ್ಮ ಊರಲ್ಲಿ ಕೆಲಸ ದಕ್ಕಿಸಿಕೊಳ್ಳೋಕೆ ಪ್ರಯತ್ನಿಸಬೇಕು. ಆಮೇಲೆ ಬೇರೆ ಊರಲ್ಲಿ ಕೆಲಸ ಹುಡುಕೋ ಪ್ರಶ್ನೆ. ನಮ್ಮ ಊರಲ್ಲೇ ನಮ್ಮವರಿಗೆ ಕೆಲಸ ಕೊಡಲು ತಾರತಮ್ಯ ನಡೀತಿರಬೇಕಾದ್ರೆ, ಬೇರೇ ಊರಲ್ಲಿ ಕೆಲಸ ಸಿಗೋದು ಯಾವ ಗ್ಯಾರಂಟಿ?

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ಸಾರ್,
ಟಾಟಾದವರ ಬಗ್ಗೆ ಹೇಳಿ...ಅದು ಪ್ರೈವೇಟ್ ಕಂಪನಿ...
ಇಬ್ಬರೂ ದಡ್ಡರಾದರೆ, ಇಬ್ಬರನ್ನೂ ಸೆಲೆಕ್ಟ್ ಮಾಡಲ್ಲ...
ಮೂರನೇ ಅವರಿಗೆ ಕೊಡ್ತಾರೆ...

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

ಗುಜರಾತ್ ನಲ್ಲಿ ಮೋದಿ ಕೆಲ್ಸ ಮಾಡೋದು ಗುಜರಾತಿಗಳ ಉದ್ಧಾರಕ್ಕೆ, ಕನ್ನಡಿಗರ ಉದ್ಧಾರಕ್ಕಲ್ಲ. ನ್ಯಾನೊ ಬರೋದ್ರಿಂದ ಗುಜಾರಾತಿನ ಆರ್ಥಿಕತೆಗಾಗಲಿ, ಗುಜರಾತಿಗಳಿಗಾಗಲಿ ನಯಾ ಪೈಸೆ ಪ್ರಯೋಜನ ಸಿಕ್ಕಲ್ಲ ಅಂದ್ರೆ ಟಾಟಾದವರನ್ನು ಕರೆಸೋಕೆ ಮೋದಿಗೆನು ಹುಚ್ಚು ನಾಯಿ ಕಡಿದಿಲ್ಲ. Smiling

ಪ್ರತಿಭೆ ಬಗ್ಗೆ ನಿಮ್ಮ ಪ್ರಶ್ನೆ ಸಕತ್ ತಮಾಷೆಯಾಗಿದೆ. ಪ್ರತಿಭೆಗಲ್ಲದೇ ಇನ್ನೆನಕ್ಕೂ ಮಣೆ ಹಾಕೋದು ಬೇಡ ಸರ್, ಆದ್ರೆ ಪ್ರತಿಭೆ ಇದೆಯೋ ಇಲ್ವೋ ಅನ್ನೊದನ್ನೆ ಪರೀಕ್ಷಿಸದೇ, ಕನ್ನಡಿಗರೆಲ್ಲ ದಡ್ಡರು, ಕೈಲಾಗದವರು, ಬಿಹಾರಿಗಳು, ತಮಿಳರು ಸರಸ್ವತಿ ಪುತ್ರರು ಅನ್ನೊ ಹಾಗೆ ತಾವು ಬರೆಯೋದನ್ನ ನೋಡಿ ನಗು ಬರ್ತಿದೆ Laughing out loud

ಇನ್ನೂ ಸಾಫ್ಟವೇರ್ ಕಂಪನಿಗಳಲ್ಲಿ ನಡೆಯೋ ಅನ್ಯಾಯದ ಬಗ್ಗೆ ತಮಗೇನು ತಿಳಿದ ಹಾಗಿಲ್ಲ. ತಮಿಳುನಾಡಿನ, ಆಂಧ್ರದ ಕಿತ್ತೊಗಿರೊ ಕಾಲೇಜುಗಳಿಂದ ಹುಡುಗರನ್ನ ತಂದು ಇಲ್ಲಿ ತುಂಬುತ್ತಾರೆ, ಆದ್ರೆ ಎಲ್ಲ ವ್ಯವಸ್ಥೆ ಇರೋ ನಮ್ಮ ದಾವಣಗೆರೆಗೋ, ಹುಬ್ಬಳ್ಳಿಯ ಬಿ.ವಿ.ಬಿಗೆ, ಬೆಳಗಾವಿಯ ಕೆ.ಎಲ್.ಇ /ಗೋಗಟೆ ಕಾಲೇಜಿಗೋ ಇವರ್ಯಾರು ಹೋಗಲ್ಲ. ಇದೆಲ್ಲ ಯಾಕೆ ಆಗುತ್ತೆ ಅಂದ್ರೆ,, ಸಾಫ್ಟವೇರ ಉದ್ಯಮದ ೬೦% ಕೆಲಸಗಳಿಗೆ ಯಾವ ದೊಡ್ಡ ನೈಪುಣ್ಯತೆನೂ ಬೇಕಿಲ್ಲ. ಒಬ್ಬ SSLC ಆದವನನ್ನೂ ಸರಿಯಾಗಿ ಟ್ರೈನ್ ಮಾಡಿದರೆ ಅವನೇ ಮಾಡಬಲ್ಲಂತ ಕೆಲ್ಸ ಬೇಜಾನ್ ಇದೆ. ಹೀಗಾಗಿ ಈ ಕೆಲ್ಸಗಳಲ್ಲೆಲ್ಲ ಭಯಂಕರ ಮೋಸ ಮಾಡಬೌದು, ಮಾಡ್ತಾನೂ ಇದ್ದಾರೆ.

-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ಮೋದಿಗೆ ಹುಚ್ಚು ನಾಯಿ ಕಡಿದಿಲ್ಲ ಒಪ್ಪಿದೆ...
ಟಾಟಾ ನವರಿಗೂ ಅಷ್ಟೆ! ಬಿಸಿನೆಸ್ ಸಾರ್...

ಅಲ್ಲರೀ, ನಾನು ೧೦೦೦೦ ಕೆಲಸ ಇದೆ ಅಂದ್ರೆ ಅದನ್ನ ಕನ್ನಡಿಗರಿಗೆ ಪ್ರಮೋಟ್ ಮಾಡೋದು ಬಿಟ್ಟು, ನನಗೆ ಗುಜರಾತ್ ಗೆ ಯಾಕೆ ಹೋಗಬೇಕು ಅಂತ ಕೇಳ್ತೀರ... ಈ ಥರ ವಾದಗಳಿಂದನೇ ಕನ್ನಡಿಗರು ಉದ್ದಾರ ಆಗಲ್ಲ!
ಪ್ರಯತ್ನ ಕೂಡ ಮಾಡ ಬೇಡಿ ಅಂತೀರಲ್ಲ... astonished!

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

ಟಾಟಾ ನವರಿಗೆ ಅಲ್ಲ ಟಾಟಾ ಅವರಿಗೆ

ಸುಮಾರ್‍ ಕಡೆ ಕಶ್ಟಪಡ್ತಾ ಇದ್ದೀರಿ ಅದಕ್ಕೆ ಹೇಳಿದೆ ಗೆಳತನದಿಂದ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

vasant.shetty's picture

ಅಲ್ಲಿಗೆ ಹೋಗಬೇಡಿ ಅಂತಾ ನಾನೆಲ್ಲೂ ಹೇಳಿಲ್ಲ. Don't put words into my mouth.

ನ್ಯಾನೊ ದಲ್ಲಿ ಪ್ರತಿಭಾವಂತ ಗುಜರಾತಿಗಳಿಗೆ ಮೊದಲ ಮಣೆ ಹಾಕಬೇಕು. ಅದರ ನಂತರವಷ್ಟೇ ಅನ್ಯ ರಾಜ್ಯದವರಿಗೆ ಕೊಡಬೇಕು. ಯಾವುದೇ ರಾಜ್ಯ ತನ್ನ ಹಣ, ನೆಲ, ಜಲಗಳನ್ನ ಕೊಡೊದು ತನ್ನ ನೆಲದ ಮಕ್ಕಳಿಗೆ ಕೆಲಸ ಸಿಗಲಿ, ತನ್ನ ನೆಲದ ಮಕ್ಕಳು ಉದ್ಧಾರ ಆಗಲಿ ಅನ್ನೊ ಕಾರಣಕ್ಕೆ, ಇದಕ್ಕೆ ಗುಜರಾತು ಹೊರತಲ್ಲ, ಕರ್ನಾಟಕವೂ ಹೊರತಲ್ಲ.

ಇಲ್ಲಿ ಚರ್ಚೆ ಆಗ್ತಿರೋದು, ಗ್ರೂಪ್ ಡಿ ಯಂತ ಕಡಿಮೆ ನೈಪುಣ್ಯತೆ, ಕಡಿಮೆ ವಿಧ್ಯಾರ್ಹತೆಯ ಕೆಲ್ಸಾನೂ ( ಅದು ನಮ್ಮ ಹುಬ್ಬಳ್ಳಿ, ಮೈಸೂರು, ಬೆಂಗಳೂರು ಕೇಂದ್ರಗಳಲ್ಲಿ ಸೃಷ್ಟಿ ಆಗ್ತಿರೋದು) ನಮ್ಮ ಜನಕ್ಕೆ ಕೊಡಲ್ಲ ಅಂದ್ರೆ, ಇದ್ಯಾವ ನ್ಯಾಯ ಅನ್ನೊ ಬಗ್ಗೆ.
-
ವಸಂತ

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

> ನ್ಯಾನೊ ದಲ್ಲಿ ಪ್ರತಿಭಾವಂತ ಗುಜರಾತಿಗಳಿಗೆ ಮೊದಲ ಮಣೆ ಹಾಕಬೇಕು.

Smiling
> ಇಲ್ಲಿ ಚರ್ಚೆ ಆಗ್ತಿರೋದು, ಗ್ರೂಪ್ ಡಿ ಯಂತ ಕಡಿಮೆ ನೈಪುಣ್ಯತೆ, ಕಡಿಮೆ ವಿಧ್ಯಾರ್ಹತೆಯ ಕೆಲ್ಸಾನೂ ( ಅದು ನಮ್ಮ ಹುಬ್ಬಳ್ಳಿ, ಮೈಸೂರು,
> ಬೆಂಗಳೂರು ಕೇಂದ್ರಗಳಲ್ಲಿ ಸೃಷ್ಟಿ ಆಗ್ತಿರೋದು) ನಮ್ಮ ಜನಕ್ಕೆ ಕೊಡಲ್ಲ ಅಂದ್ರೆ, ಇದ್ಯಾವ ನ್ಯಾಯ ಅನ್ನೊ ಬಗ್ಗೆ.

ಇದರ ಬಗ್ಗೆ ನಾನು ಒಂದು ಬರಹ ಬರೀತೀನಿ ಅಲ್ಲಿ ವಿಚಾರ ಮಾಡೋಣ...ಸದ್ಯಕ್ಕೆ ಟೈಮ್ ಇಲ್ಲ ...

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ಪ್ರವೀಣ್'s picture

ಶ್ರೀನಿವಾಸ್,

ನಿಮ್ಮ ಲೇಖನ ಬೇಗ ಬರಲಿ ಎಂದು ಹಾರೈಸುತ್ತೆನೆ, ಆದರೆ ಬೇರೆ ಗಮನೀಯ ವಿಷಯದಲ್ಲಿ ಬಂದು ಸುಖಾಸುಮ್ಮನೆ ವಿಷಯಾಂತರ ಮಾಡಬೇಡಿ, ಇದು ವಾದ -ವಿವಾದದ ತಾಣ ಅಲ್ಲ.
ನಿಮಗೆ ರೈಲ್ವೇ ನೇಮಕಾತಿ ಬಗ್ಗೆ ಗೊತ್ತಿದ್ದರೆ ಹಂಚಿಕೊಳ್ಳಿ, ಇದರಿಂದ ನನ್ನಂತಹ ಅನೇಕರಿಗೆ ಸಹಾಯ ಆಗುತ್ತದೆ. ಅದನ್ನು ಬಿಟ್ಟು ಇವರನ್ನು ಯಾಕೆ ತೆಗೆದುಕೊಳ್ಳಬಾರದು, ಕನ್ನಡಿಗರು ಮೈಗಳ್ಳರು ಅನ್ನೋ ರೀತಿಯಲ್ಲಿ ನಿಮ್ಮ ವಾದ ಮಂಡನೆ ಮಾಡಬೇಡಿ.
ಕೆಳಮಟ್ಟದ ಕೆಲಸಗಳನ್ನು ನೀವು ಐ.ಟಿ, ನೈಪುಣ್ಯತೆ ಕೆಲಸಗಳಿಗೆ ಹೋಲಿಸಿ ಪ್ರತಿಭೆ,ಬುದ್ದಿವಂತಿಕೆಯ ಮಾನದಂಡ ಎಂದು ಮಾತನಾಡಿದರೆ ನಿಮಗೆ ವಿಷಯ ಅರ್ಥ ಆಗಿಲ್ಲ ಎಂದು ತಿಳಿಯುತ್ತದೆ.

ಕಿಶೋರ್,
ಬಹಳ ಚೆನ್ನಾಗಿ ಬರೆದಿದ್ದೀರಾ ಲೇಖನ, ನಿಮ್ಮ ಮಾತು ನಿಜ. ಗಮನಿಸಿ ನೋಡಿ, ಈ ಡಿ ಗುಂಪಿನ ಹುದ್ದೆ ಎಂದರೆ ಯಾವುದೋ ಟಿಕೆಟ್
ಸಂಗ್ರಹಣ, ಇಲ್ಲ ತಪಾಸಣೆ ಕೆಲಸವಲ್ಲ. ಇದು ಕರ್ನಾಟಕದಲ್ಲಿ ಇರುವ ಹುಬ್ಬಳ್ಳಿ,ರಾಯಚೂರು,ಬೆಂಗಳೂರು,ಮಂಗಳೂರಿನಲ್ಲಿ ಸ್ವಚ್ಚತಾ ಮತ್ತು ಇತರ ಕೆಳಮಟ್ಟದ ಕೆಲಸಗಳು. ಇದಕ್ಕೆ ಯಾವ ಅರ್ಹತೆಯು ಬೇಕಿಲ್ಲ. ಇದಕ್ಕೆ ಕರ್ನಾಟಕದಿಂದಲೇ ಸುಮಾರು ಜನ ಅರ್ಜಿ ಹಾಕಿದ್ದರೂ ಕೂಡ ಅವರನ್ನು ಕಡೆಗಣಿಸಿದ್ದರೆ. ಅದೇ ಬಿಹಾರಿಂದ ಇದಕ್ಕೆ ಒಂದು ರೈಲ್ವೆ ಬೋಗಿ ಮಾಡಿ ಜನರನ್ನು ಕರೆ ತರುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಇ ತಾರತಮ್ಯ ವಿಷಯ ಎತ್ತಿದಾಗ ಲಾಲೂ ಅನ್ನೊ ಮಂತ್ರಿ ಕನ್ನಡಿಗರು ಕಚಡಾ(dirty people) ಅಂತ ಜರೆದಿದ್ದ.

ಈ ಸಲ ನಮ್ಮ ಮೇಲಿನ ಹಟಕ್ಕೆ, ೩ ರೈಲ್ವೇಯಲ್ಲಿ ಜನರನ್ನು ತಂದು, ಪೋಲಿಸ್ ಬಂದೊಬಸ್ತಿನಲ್ಲಿ ನೇಮಕಾತಿ ಮಾಡುತ್ತೇವೆ, ಧಮ್ ಇದ್ದರೆ ತಡೆಯಿರಿ ಅನ್ನೋ ರೀತಿಯಲ್ಲಿ ಜಾಹೀರಾತು ಕೊಟ್ಟು ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾನೆ. ಇದನ್ನು ಹಾಗೆ ಬಿಟ್ಟು ಬಿಟ್ಟರೆ ಅನೇಕ ಕನ್ನಡ ಕುಟುಂಬಗಳು ಬೀದಿಪಾಲಾಗುತ್ತವೆ , ಅನಿಯಂತ್ರಿತ ವಲಸೆ ಅಗುತ್ತದೆ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

> ಕೆಳಮಟ್ಟದ ಕೆಲಸಗಳನ್ನು ನೀವು ಐ.ಟಿ, ನೈಪುಣ್ಯತೆ ಕೆಲಸಗಳಿಗೆ ಹೋಲಿಸಿ ಪ್ರತಿಭೆ,ಬುದ್ದಿವಂತಿಕೆಯ ಮಾನದಂಡ ಎಂದು ಮಾತನಾಡಿದರೆ
> ನಿಮಗೆ ವಿಷಯ ಅರ್ಥ ಆಗಿಲ್ಲ ಎಂದು ತಿಳಿಯುತ್ತದೆ.

ರೀ ನಾನು ಬರೆದ ಮೊದಲ ಕಾಮೆಂಟ್ ಮತ್ತೆ ಓದಿ...ರೈಲ್ವೆ ಬಗ್ಗೆ ಮಾತೇ ಆಡಿಲ್ಲ ನಾನು!

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ಹಿರಣ್ಯಾಕ್ಷ's picture

ಇಂದು ಕನ್ನಡಿಗರಿಗೆ ಕೆಲಸ ಕೊಡದ ರೈಲ್ವೆ ಇಲಾಖೆ ವಿರುದ್ಧ ಜಾಥ ನಡೆಸಿ ಗೃಹ ಮಂತ್ರಿ ಗೆ ಮನವಿ ಪತ್ರ ಸಲ್ಲಿಸಿತು.

ಗೃಹ ಮಂತ್ರಿಗೆ ನೀಡಿದ ಮನವಿಪತ್ರವನ್ನು ಇಲ್ಲಿ ನೋಡಿ
http://karnatakarakshanavedike.org/modes/view/81/railway-gruha-mantri-ma...

ಜಾಥಾದ ಬಗ್ಗೆ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ

http://karave.blogspot.com/2008/10/blog-post_15.html

http://karave.blogspot.com/2008/10/blog-post_3377.html

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

harshab's picture

""ನ್ಯಾನೋವಿನಿ೦ದ ಸಿಗಬೇಕಾರ ಸುಮಾರು ೧೦,೦೦೦ ಕ್ಕೂ ಹೆಚ್ಚು ಕೆಲಸವನ್ನು ನಾವು ಕಳೆದುಕೊ೦ಡಾಯ್ತು. ""

ಹೆಂಗೆ ಅವೆಲ್ಲಾ ಕೆಲ್ಸಗಳು ಕನ್ನಡಿಗರಿಗೆ ಸಿಗ್ತಿದ್ದವು ಅನ್ಕಂಡ್ರಿ..?

ನನ್ನ ಪ್ರಕಾರ, ಒಂದು ರೀತಿ ಒಳ್ಳೇದೇ ಆಯ್ತು..... ಧಾರವಾಡ ಇನ್ನೊಂದು ಬೆಂಗ್ಳೂರ್ ಆಗೋದು ತಪ್ತು.....

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

kishoreyc's picture

ನಮ್ಮ ಊರಲ್ಲಿ ಕೆಲಸ ಇಲ್ಲದಿದ್ದರೆ ಬೇರೆ ಊರಿಗೆ, ದೇಶಕ್ಕೆ ಹೋಗಬೇಕು. ಆದರ ನಮ್ಮ ಕೆಲ್ಸಗಳನ್ನೇ ಬೇರೆಯವರಿಗೆ ಕೊಟ್ಟು ನಾವು ಕೆಲಸಕ್ಕೆ ಪರದೇಶಿಗಳ ತರಹ ಎಲ್ಲೇಲ್ಲೋ ಅಲಿಯಬೇಕು ಎ೦ಬ ನೀತಿ ಪಾಠ ಹೇಳುವರು ನಿಜವಾಗಿಯೂ ಮೂಡರೇ ಸರಿ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ಸರಿಯಾಗಿ ಹೇಳಿದೀರಿ...
ನೀವು ನನ್ ಬಗ್ಗೆ ಹಾಗೇ ಹೇಳಿದ್ರೆ................... ನಾನು ಆ ರೀತಿ ಹೇಳಲಿಲ್ಲ...ಹಾಗಂತ ನಿಮಗನಿಸಿದರೆ, ನಾನು ಬರೆದದ್ದರ ಹಿಂದೆ ಆ ಉದ್ದೇಶ ಇಲ್ಲ ಅಂತಿಟ್ಟುಕೊಳ್ಳಿ...

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

Smiling

ಕಿಶೋರ್‍......................

ನಮ್ಮ ರಾಜ್ಯದಲ್ಲಿ ಬೇಕಾದಶ್ಟು ಕೆಲಸಗಳಿವೆ.. ಹೆಚ್ಚುವರಿಯಾಗಿವೆ..

ಆದರೆ ಕನ್ನಡ ಮಂದಿ ಆ ಆ ಕೆಲಸಗಳಿಗೆ ಸೇರುವ ಆಸೆಯೇ ಇಲ್ಲವೇನೋ! Smiling

ಎಶ್ಟೋ ಕಡೆ ಹೆಚ್ಚುವರಿಯಾದ ಕೆಲಸಗಳನ್ನು ತುಂಬಿಸಲೆಂದೇ ಹೊರಗಡೆಯವರು ಬರುವುದು.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

kishoreyc's picture

ಒ೦ದೆರಡು ಉದಾಹರಣೆ ಕೊಟ್ಟರ ನಮಗೆ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

೧) ಸಾಪ್ಟ್‌ವೇರ್‍ ಕಂಪೆನಿಗಳಲ್ಲಿ ಎಶ್ಟೊಂದು ಕೆಲಸ ಇದ್ದರೂ, ಅಶ್ಟು ಕೆಲಸಕ್ಕೆ ಕನ್ನಡಿಗರೇ ಇಲ್ಲ.. ಇದಕ್ಕೆ ಕಾರಣ ನಮ್ ನೆಲದಲ್ಲಿ ಅಶ್ಟು ಮಂದಿ ಇಂಜಿಯರಿಂಗನ್ನೇ ಓದಲ್ಲ.
೨) ಐಏಎಸ್ ಮಾಡೋರು ಕನ್ನಡಿಗರು ಬಲು ಕಡಮೆ.
೩) ಹಾಗೆ ಐಐಟಿಗೆ ಸೇರೋ ಕನ್ನಡಿಗರು ಕಡಮೆ.
೪) ಕೇಂದ್ರ ಸರಕಾರ ಹಲವು ಪರೀಕ್ಶೆಗಳಿ ಕನ್ನಡಿಗರು ಕೂರೋರು ಕಡಮೆ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

srinivasps's picture

ಇನ್ನೂ ಬೇಕಾದಷ್ಟಿವೆ...
- ನರ್ಸ್ ಹುದ್ದೆ ಮಲಯಾಳಿಗಳಿಗೆ ಬಿಟ್ಟುಬಿಟ್ಟಿದೀವಿ

ಓದದೆ ಇರೋವರಿಗೆ...
- ಈಗ ನಮ್ ಊರ ತುಂಬಾ ರಾಜಸ್ಥಾನಿಗಳು, ಮಧ್ಯ ಪ್ರದೇಶದವರು ಎಲ್ಲ ಗ್ರಾನೈಟ್, ಮಾರ್ಬಲ್ ಹಾಕೋದಿಕ್ಕೆ ಬರ್ತಾರೆ...
- ಮನೆ ಕಟ್ಟೋ ಕೂಲಿಗಳು ಅಷ್ಟೆ, ತಮಿಳರೇ ಜಾಸ್ತಿ.
- ಸೆಕ್ಯುರಿಟೆ ಗಾರ್ಡ್ ಗಳು, ಗೂರ್ಖಗಳು - ಎಲ್ಲ ಉತ್ತರದವರೇ ಹೆಚ್ಚು...

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

ಈಗೀಗ ನಾನ್ ನಮ್ ಕಡೆ ಮನೆಕಟ್ಟಕ್ಕೆ ಉತ್ತರ ಕರ್ನಾಟಕದೋರನ್ನ ನೋಡ್ತಾ ಇದ್ದೀನಿ...

ಆದರೆ ಮುನಿಸಿಪಲ್ ಕೆಲಸ ಎಲ್ಲ ಬರೀ ತಲುಗು-ತಮಿಳರೇ ಮಾಡೋದು!!

ಹೆಚ್ ದುಡ್ಡು ಕೊಡೋ ಚಿನ್ನದ ವ್ಯಾಪಾರದಲ್ಲೂ ಕನ್ನಡಿಗರು ಇಲ್ಲ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

kishoreyc's picture

ಹಾಗಿದ್ದರ ರೈಲ್ವೇನಲ್ಲಿ ಸಿಗುವ ಹುದ್ದೆಗಳನ್ನು ಅಲಕ್ಷಿಸಬೇಕೇ? ಹುಬ್ಬಳ್ಳಿಯಲ್ಲಿ ಸಾಫ್ಟ್ ವೇರ್ ಬರುವವರೆಗು ಅಲ್ಲಿಯವರಿಗೆ ಕೆಲ್ಸ ಸಿಗೋಹಾಗಿಲ್ಲ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

ಇಲ್ಲ..

ಹುಬ್ಬಳ್ಳೀಲಿ ರಯ್ಲುವೇಲಿ ಎಲ್ಲರೂ ಕನ್ನಡಿಗರೇ ಇರಬೇಕು.. ಆದರೆ ಆ ಪರೀಕ್‌ಶೆಗಳಲ್ಲಿ ತೇರ್‍ಗಡೆಯಾಗಲು ಕನ್ನಡಿಗರು ತಯಾರಿ ಮಾಡಿದ್ದಾರ?

ಇನ್ನೊಂದು ತಮಿಳರಿಗೆ ಹಿಂದಿ ಒಂದು ಅವಶ್ಯಕತೆ ಅಲ್ಲ.. ಆದರೆ ಕನ್ನಡಿಗರಿಗೆ ಹಿಂದಿ ತಿಳಿದಿರಬೇಕು.. ಈ ಬಗ್ಗೆ ನಮ್ಮ ಸರಕಾರ ತುಸು ಗಮನ ಹರಿಸಿದರೆ ಕನ್ನಡಗರಿಗೆ ದಾರಿ ಸುಲಬವಾಗುವುದು.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

kishoreyc's picture

ಅಡ್ಡಬಿದ್ದೆ ಗುರು, ಇಲ್ಲಿ ಕನ್ನಡಿಗರಿಗೆ ಹಿ೦ದಿ ಪಾಠ ಹೇಳಕ್ಕೆ ಅಲ್ಲ ಸರ್ಕಾರ ಇರಬೇಕಾದದ್ದು. ಕನ್ನಡಿಗರ ಮೇಲೆ ಹಿ೦ದಿ ಭಾಷೆ ಹೇರದ ಹಾಗೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ವಾಗಿರಬೇಕು.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

ಹು ಸಾರ್‍..

ಕೇಂದ್ರ ಸರಕಾರದ ಕೆಲಸಕ್ಕೆ ಕನ್ನಡಿಗರಿಗೆ ಹಿಂದಿ ಗೊತ್ತಿರೋದು ಬೇಕೇ ಬೇಕು.. ಇದೇ ಹಿಂದಿ ಹೇರಿಕೆ....

ರಾಜ್ಯಬಾಶೆ ನೀತಿ ನೋಡಿ..

http://www.rajbhasha.nic.in/dolacteng.htm

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ಸಂಗನಗೌಡ's picture

ಹೌದು, ಒಂದ್ನಾಕು ಎಕರೆ ಹೊಲ ಇದ್ರೆ ಸಾಕು, ಅದರಲ್ಲೇ, ನೆಮ್ಮದಿಯಾಗಿತ್ತೀನಿ, ಅನ್ನುವ ಮೆಂಟಾಲಿಟಿಯಿಂದ ಕನ್ನಡಿಗ ಹೊರ ಬರಬೇಕು, ಹೆಚ್ಚಿನವರು ಓದು-ಕಲಿಕೆಯ ಕಡೆ ನುಗ್ಗಬೇಕು. ಬೇರೆ ಬೇರೆ ಕೆಲಸಗಳಲ್ಲಿ ನಿಪುಣತೆ ಹೊಂದಬೇಕು, ಕೆಲಸದಲ್ಲಿ ನುರಿತವನಾದರೆ, ಯಾವುದೇ ಕೆಲಸವಾದರೂ ಬೆಳೆಯಬಹುದು, ರಾಜನಂತೆ ಬದುಕಬಹುದು. ಇಂದಿನ ದಿನಗಳಲ್ಲಿ, ಡಿಗ್ರಿಗಳು ಗೋಡೆಗಳು, ಎಸ್ಟೋ ಜನ,.. ಟೆಂತ್, ಪಿ.ಯು.ಸಿಗಳಲ್ಲಿ,ಇಲ್ಲವೇ ಡಿಗ್ರಿನಲ್ಲಿ, ಯಾವುದೋ ಒಂದು ವಿಶಯ ಹೋಯ್ತು ಅಂತ, ಅದನ್ನ ಹಂಗೇ ನಿಲ್ಲಿಸಿ, ಯಾವುದ್ಯಾವುದೋ ಸಣ್ಣ-ಪುಟ್ಟ ಸಿಕ್ಕ ಸಿಕ್ಕ ಕೆಲಸದಲ್ಲಿ ತೊಡಗಿ, ಕಳೆದೇ ಹೊಗ್ತಾರೆ. ಅವಕಾಶಗಳು ಇದ್ದರೂ ಕನ್ನಡಿಗ ಅವುಗಳ ಬಳಕೆ ಮಾಡಿಕೊಳ್ಳದಿದ್ದರೆ, ಅವುಗಳಲ್ಲಿ ಬೇರೆ ರಾಜ್ಯದವರು ಬಂದು ಕೂಡುವದು ಸಹಜ. ಐ.ಟಿ ಇದಕ್ಕೆ ಮಾದರಿ. ಬೆಂಗಳೂರಲ್ಲಿ ಐ.ಟಿ. ಕಂಪನಿಗಳಲ್ಲಿ ಎನ್ನಡ-ಎಕ್ಕಡ ಮಾಮೂಲಿ, ಎ.ಪಿ ನಲ್ಲಿ ಐ.ಟಿಯಲ್ಲಿ ತೆಲುಗರು ಸಾಕಸ್ಟು ನುಗ್ಗಿದ್ದಾರೆ.

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

mahesha's picture

ಬಹಿರಂಗ ಪತ್ರ ಅಂತ ಬ್ಲಾಗ್ ಬರೆದಿದ್ದಾರೆ..

ಪೇಪರ್ರ‍ಲ್ಲಿ ಹಾಕಿಸಬೇಕು

ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

baktavarbaba's picture

ಧನ್ಯವಾದಗಳು ಕಿಶೋರ್....
ಗ್ರೂಪ್ ಡಿ ಹುದ್ದೆಗಳ ಬಗ್ಗೆ ಚೆನ್ನಾಗಿ ಮಾಹಿತಿ ಇರಲ್ಲಿಲ್ಲ .. ಲೇಖನವು ತುಂಬಾ ಚೆನ್ನಾಗಿ ಮೂಡಿ ಬಂದಿದೆ..

ಈ ಲೇಖನ ಪತ್ರಿಕೆಯಲ್ಲಿ ಬರಬೇಕು. ಬಹಳಷ್ಟು ಜನರಿಗೆ ಮನವರಿಕೆ ಆಗಬೇಕು .. ಜನ ಜಾಗೃತಿ ಮಾಡಬೇಕು.....

ನಿಮ್ಮ ಪ್ರೀತಿಯ
ಬಾಬಾ
9980572000

Syndicate content