ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kishorpatwardhan ರವರ ಬ್ಲಾಗ್

ಭೇಲನೆಂಬ ಭಾರತೀಯ ವಿಜ್ಞಾನಿ

May 8, 2007 - 6:55pm — kishorpatwardhan

'ಮಾನವ ದೇಹದೊಳಗೆ ರಕ್ತ ಪದೇ ಪದೇ ತಿರುಗುವ ಕ್ರಿಯೆಯನ್ನು ಅಂದರೆ Blood Circulation ನ್ನು ಕಂಡುಹಿಡಿದ ವಿಜ್ಞಾನಿ ಯಾರು?' ಎಂದು ಕೇಳಿದರೆ ಆರನೇ ತರಗತಿಯ ಹುಡುಗ ಕೂಡ ’ವಿಲಿಯಮ್ ಹಾರ್ವೇ’ ಎನ್ನುತ್ತಾನೆ. ಎಲ್ಲ ವೈದ್ಯಕೀಯ ವಿಜ್ಞಾನಿಗಳೂ ಅವನನ್ನು ’ ಈ ವರೆಗೆ ವೈದ್ಯ ವಿಜ್ಞಾನ ಕಂಡ ಅತ್ಯದ್ಭುತ ಸಂಶೋಧನೆ ಯ ಕರ್ತೃ’ ಎಂದೇ ಹೊಗಳುತ್ತಾರೆ. ಹೌದು; ನಿಜಕ್ಕೂ ಇದು ಅತ್ಯದ್ಭುತ ಸಂಶೋಧನೆಯೇ ಸರಿ. ಯಾಕೆಂದರೆ ಈ ಮೂಲಭೂತ ತಥ್ಯವನ್ನು ಆಧರಿಸಿಯೇ ವೈದ್ಯಕೀಯ ವಿಜ್ಞಾನ ಇಷ್ಟೊಂದು ಪ್ರಗತಿ ಕಾಣುವುದು ಸಾಧ್ಯವಾಗಿದೆ.

ಆದರೆ ವಿಲಿಯಮ್ ಹಾರ್ವೇ ನಿಜಕ್ಕೂ ಈ ವಿಷಯ ತಿಳಿಸಿದ ಮೊದಲಿಗನೇ ಎಂಬ ಪ್ರಶ್ನೆ ಕೇಳಿಕೊಂಡಾಗ ’ಅಲ್ಲ’ ಎಂಬ ಉತ್ತರ ನೀಡಬೇಕಾಗುತ್ತದೆ. ಹಾಗಾದರೆ ಈ ಸಂಶೋಧನೆಯ ಅಸಲೀ ಹಕ್ಕುದಾರ ಯಾರು ? ಇದಕ್ಕೆ ಉತ್ತರವಾಗಿ ಒಂದು ಸಣ್ಣ ಕಥೆ ಹೇಳುತ್ತೇನೆ , ಕೇಳಿ:

ಹಿಂದೆ ನಮ್ಮದೇ ದೇಶದಲ್ಲಿಅಗ್ನಿವೇಶ, ಭೇಲ, ಜತೂಕರ್ಣ, ಪರಾಶರ, ಹಾರೀತ ಮತ್ತು ಕ್ಷಾರಪಾಣಿ - ಎಂಬ ಆರು ಮಂದಿ ಹುಡುಗರು, ಆತ್ರೇಯ ಪುನರ್ವಸು ಎಂಬ ವೈದ್ಯನ ಬಳಿ ಶಿಷ್ಯರಾಗಿ ಓದಿಕೊಂಡಿದ್ದರು. ಇದು ಸುಮಾರು ಕ್ರಿಸ್ತಪೂರ್ವ ಒಂದು ಸಾವಿರ ವರ್ಷಗಳ ಹಿಂದಿನ ಮಾತು. (ಕೆಲವು ವಿದ್ವಾಂಸರ ಪ್ರಕಾರ ಕ್ರಿಸ್ತಪೂರ್ವ ಎಂಟುನೂರು ವರ್ಷಗಳ ಹಿಂದೆ; ಏನಿದ್ದರೂ ಪಾಣಿನಿ ಅಷ್ಟಾಧ್ಯಾಯಿ ಬರೆಯುವುದಕ್ಕೆ ಮುಂಚೆ). ತಾವು ಎಲ್ಲ ಓದಿ ಆದಮೇಲೆ ಒಬ್ಬೊಬ್ಬರೂ ಒಂದೊಂದು ಪುಸ್ತಕ ಬರೆದರು. ಅವುಗಳಲ್ಲಿ ಅಗ್ನಿವೇಶ , ’ ಅಗ್ನಿವೇಶ ಸಂಹಿತೆ ’ ಬರೆದರೆ ಭೇಲ, ’ ಭೇಲ ಸಂಹಿತೆ’ ಬರೆದ. Actually, ಈ ಅಗ್ನಿವೇಶ ಸಂಹಿತೆಯೇ ಇವತ್ತು ನಾವು ’ ಚರಕ ಸಂಹಿತೆ’ ಎಂದು ಕರೆಯುವ ಪುಸ್ತಕ. ಅಗ್ನಿವೇಶ ಸಂಹಿತೆಯನ್ನು ಮತ್ತೆ edit ಮಾಡಿದ್ದು ಚರಕ. ಕಾಲಕ್ರಮೇಣ ಮತ್ತೆ ಚರಕ ಸಂಹಿತೆಯಲ್ಲಿ ಕೆಲವು ಅಧ್ಯಾಯಗಳು ಕಾಣದಾದಾಗ (ಕಾಣದಾಗಿದ್ದಕ್ಕೆ ಕಾರಣ ಖಚಿತವಾಗಿ ಗೊತ್ತಿಲ್ಲ) ಅವನ್ನು ಮತ್ತೆ ಸೇರಿಸಿ ಬರೆದವ ದೃಢಬಲ (ಸುಮಾರು ಕ್ರಿಸ್ತ ಶಕ ಹತ್ತನೇ ಶತಮಾನ). ಹಾಗಾಗಿ ಈಗ ನಾವು ಕಾಲೇಜುಗಳಲ್ಲಿ ಆಯುರ್ವೇದ ಕಲಿಯುವವರಿಗೆ ಹೇಳಿಕೊಡುವುದು ದೃಢಬಲ ಬರೆದ most recent edition ನ್ನು.

ಇನ್ನು ಭೇಲನ ವಿಷಯಕ್ಕೆ ಬರೋಣ. ಭೇಲ ಸಂಹಿತೆ, ಚರಕ ಅಥವಾ ಸುಶ್ರುತ ಸಂಹಿತೆಗಳಂತೆ famous ಆಗಲಿಲ್ಲ. ಕಾರಣ ಗೊತ್ತಿಲ್ಲ. ಕೆಲವರು ಅಗ್ನಿವೇಶ exceptionally brilliant ಆಗಿದ್ದರಿಂದ ಅವನು ಬರೆದ ಪುಸ್ತಕ ಬಹುಶಃ ತುಂಬ practical ಆಗಿತ್ತು ಅನ್ನುತ್ತಾರೆ. ಅದೇನೇ ಇರಲಿ, ಚರಕ ಅಥವಾ ಸುಶ್ರುತ ಸಂಹಿತೆಗಳಿಗೆ ಸಿಕ್ಕಿದ ಆದರ ಭೇಲ ಸಂಹಿತೆಗೆ ಸಿಗದೇ ಹೋದದ್ದರಿಂದ ಅದನ್ನು ಊಳಿಸಿಕೊಳ್ಳುವ ಪ್ರಯತ್ನಗಳು ಆಗಲಿಲ್ಲ. ಹೊಸ edition ಗಳೂ ಬಹುಶಃ ಬರಲಿಲ್ಲ. ಹಾಗಾಗಿ ಈಗ ಸಿಗುವ ಭೇಲ ಸಂಹಿತೆ ಪರಿಪೂರ್ಣವಾಗಿಲ್ಲ. ಅಲ್ಲಲ್ಲಿ ಹಲವು ಶ್ಲೋಕಗಳು ಇಲ್ಲವಾದರೆ, ಕೆಲವು ಅಧ್ಯಾಯಗಳೇ ಇಲ್ಲ. ಇನ್ನು ಕೆಲವೆಡೆ ಅರ್ಧರ್ಧ ಉಳಿದುಕೊಂಡಿರುವ ಶ್ಲೋಕಗಳು. ಹೀಗಾಗಿ ಭೇಲಸಂಹಿತೆಯ ಬಗ್ಗೆ ಯಾರೂ ಹೆಚ್ಚು ಗಮನ ಕೊಟ್ಟಿಲ್ಲ.

ಆದರೆ ಭೇಲನೇ ಮೊಟ್ಟಮೊದಲಿಗೆ blood circulation ನ್ನು ವಿವರಿಸಿದ್ದು ಎಂದರೆ ನಂಬುತ್ತೀರಾ?
ಹಾಂ, ಆದರೆ ಆತ ’ ರಕ್ತ ಪರಿಚಲನೆ ’ ಅಂತೇನೂ ಹೇಳಲಿಲ್ಲ; ಬದಲಿಗೆ ’ ರಸ ನಿಸ್ಸರಣ ’ ಅಂದಿದ್ದಾನೆ- ಹೀಗೆ:

हृदॊ रसॊ निःसरति तस्मादॆवं च सर्वशः ।
सिराभिर्हृदयं वैति तस्मात् हृत्प्रभवाः सिराः ॥ (ಸೂತ್ರ ಸ್ಥಾನ, ಅಧ್ಯಾಯ ೨೧ )

ಇದರ ಅರ್ಥ ಹೀಗಿದೆ:
ರಸವು ಹೃದಯದಿಂದ ಎಸೆಯಲ್ಪಟ್ಟು / ತಳ್ಳಲ್ಪಟ್ಟು ಇಡಿಯ ದೇಹದೊಳಕ್ಕೆ ಸಂಚರಿಸುತ್ತದೆ. ಮತ್ತೆ ಅದು ಸಿರೆಗಳ ಮೂಲಕ ಪುನಃ ಹೃದಯವನ್ನು ಸೇರುತ್ತದೆ. ಹೀಗಾಗಿ ಹೃದಯವೇ ಸಿರೆಗಳ ಮೂಲ.
(’Rasa’ gets forcefully ejected out of the heart, circulates all over the body and then re-enters the heart through the blood vessels called 'Siraa's. Therefore, the heart is the place of origin of these bloos vessels.)
ಸಿರಾ ಅಂದರೆ blood vessel ಎಂದರ್ಥ. ಅದು vein ಅಥವಾ artery -ಎರಡೂ ಆಗಿರಬಹುದು.
’ ರಸ ’ ಅಂದರೆ ನಾವು ಸಾಮಾನ್ಯ ಭಾಷೆಯಲ್ಲಿ 'ರಕ್ತ ' ಎಂದು ಕರೆಯುವ ಪದಾರ್ಥ (whole blood).
’ ರಸ ’ , ದೇಹದಲ್ಲಿ ಹರಿಯುವ ಎಲ್ಲ ದ್ರವ ಪದಾರ್ಥಗಳನ್ನು ಪ್ರತಿನಿಧಿಸುತ್ತದೆ ಹಾಗೂ Cardio vascular system - (ಕನ್ನಡದಲ್ಲಿ ' ರಕ್ತ ಪರಿಚಲನಾ ವ್ಯೂಹ ' ಎಂದು ಸಾಮಾನ್ಯವಾಗಿ ಕರೆಯುವ system )- ಗೆ ಸಂಬಂಧಿಸಿದಂತೆ ಅದರ ಅರ್ಥ whole blood. ( ಅಂದರೆ ಅದರಲ್ಲಿ Plasma, White Blood Cells, Red Blood Cells ಹಾಗೂ Platelets - ಎಲ್ಲವೂ ಸೇರಿವೆ.)

ಸುಮಾರು 1628 ರ ಹೊತ್ತಿಗೆ ವಿಲಿಯಂ ಹಾರ್ವೇ ಬರೆದ ಪ್ರಬಂಧ ಅಚ್ಚಾಗಿತ್ತು. ಅಲ್ಲಿ ಅವನು ಹೇಳಿದ್ದೂ ಇಷ್ಟೇ:
’ ರಕ್ತ ಹೃದಯದಿಂದ ತಳ್ಳಲ್ಪಟ್ಟು, artery ಗಳ ಮೂಲಕ ದೇಹದ ಎಲ್ಲ ಭಾಗಗಳಿಗೂ ತಲುಪುತ್ತದೆ; ಹಾಗೇ ಅದು vein ಗಳ ಮೂಲಕ ಪುನಃ ಹೃದಯವನ್ನು ತಲುಪುತ್ತದೆ. ’ ಹೀಗೆ cardio-vascular system ಒಂದು closed circuit - ಇದು ಆತ ಹೇಳಿದ ಒಟ್ಟು ವಿಷಯ. ಅಲ್ಲಿಯವರೆಗೂ ಪಾಶ್ಚಾತ್ಯ ವೈದ್ಯ ವಿಜ್ಞಾನ ಗ್ಯಾಲನ್ ಅನ್ನುವ ಗ್ರೀಕ್ ತತ್ವಶಾಸ್ತ್ರಿ ಹೇಳಿದ ತಪ್ಪು ಮಾತನ್ನೇ ನಂಬಿಕೊಂಡು ಬಂದಿತ್ತು - ಅದೇನೆಂದರೆ, ರಕ್ತ ತಯಾರಾಗುವುದು liver ನಲ್ಲಿ, ಮತ್ತು ರಕ್ತವನ್ನು ದೇಹದೊಳಗೆ ಸಂಚರಿಸುವಂತೆ ಮಾಡುವ ಅಂಗವೂ liver. ಗ್ಯಾಲನ್ ಮಾತನ್ನು ವಿರೋಧಿಸುವುದಕ್ಕೆ ವಿಲಿಯಂ ಹಾರ್ವೇ ತುಂಬ ಕಷ್ಟಪಡಬೇಕಿತ್ತು. ಅವನ ಮಾತನ್ನು ಅಲ್ಲಗಳೆಯುವುದೆಂದರೆ ಸಾಮಾನ್ಯ ವಿಷಯವೇನೂ ಆಗಿರಲಿಲ್ಲ. ಅದಕ್ಕೇ ಹಲವು ಪ್ರಯೋಗಗಳನ್ನು ಮಾಡಿ ತಾನು ಕಂಡದ್ದನ್ನು ಒಟ್ಟಾಗಿಸಿ ಪ್ರಬಂಧ ಬರೆದ. ಅದಕ್ಕೇ ಅವನಿಗೆ ಇಂದಿಗೂ ವಿಜ್ಞಾನ ಪ್ರಪಂಚದಲ್ಲಿ ಅಷ್ಟೊಂದು ಗೌರವ ಇರುವುದು.

ಆದರೆ ನಮ್ಮ ಭೇಲನೋ, ಪಾಪ, ಬರೆದದ್ದನ್ನೂ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಭಾರತೀಯರ ಉಪೇಕ್ಷೆಗೆ ಒಳಗಾದನಲ್ಲದೆ ಯಾವುದೇ ವೈದ್ಯಕೀಯ ಪಠ್ಯಪುಸ್ತಕದಲ್ಲಾಗಲಿ, ಇತಿಹಾಸದಲ್ಲಾಗಲಿ ಹೆಸರು ಮಾಡಲಿಲ್ಲ.

  • ಆಯುರ್ವೇದ / physiology
~.~
  • kishorpatwardhan ರವರ ಬ್ಲಾಗ್
  • Login or register to post comments
  • 521 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2007 - 8:22pm — ASHOKKUMAR

ಉ: ಭೇಲನೆಂಬ ಭಾರತೀಯ ವಿಜ್ಞಾನಿ

ASHOKKUMAR's picture

ಮೊದಲು ಈ ಬರಹ ಪ್ರಕಟಿಸಿದಾಗ "ನೀಲ್ ಹಾರ್ವೆಯೇ ಕ್ಷಮಿಸು" ಎಂದು ಶೀರ್ಷಿಕೆ ಕೊಟ್ಟಿದ್ದ ನೆನಪು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2007 - 8:27pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

ಹೌದು, ಶೀರ್ಷಿಕೆ ಬದಲಾಗಿದೆ; ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2007 - 9:44pm — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

ನಿಮ್ಮ ವಿಗ್ನಾನದ ಬರಹ ಚೆನ್ನಾಗಿ, ನನ್ನಿ!

ಕೆಲವು ಮನವಿಯಂತ ಸಲಹೆಯೊಂದು

೧) "ಮಾನವ ದೇಹದೊಳಗೆ ರಕ್ತ ಪದೇ ಪದೇ ತಿರುಗುವ ಕ್ರಿಯೆಯನ್ನು ಅಂದರೆ"
ಇದು ಮಾನವನ ಮೈಯೊಳು ರಕುತ/ನೆತ್ತರು ಹರಿ/ಸರಿದಾಡುವ ಕ್ರಿಯೆಗೆ Blood Circulation/ನೆತ್ತರ ಹರಿದಾಟ ಎನ್ನುವರು. ಅದು ಯಾವಾಗಲೂ ನಡೇತಾ ಇರತ್ದೆ ಆಲ್ವಾ? ಪದೇ ಪದೇ ಅಂದರೆ ಗೆಜ್ಜೆಗೆಜ್ಜೆಗೂ, ಅಡಿಗಡಿಗೆ, (ಬಿಟ್ಟುಬಿಟ್ಟು) ಅಂತ ಅಲ್ವಾ? ಗೊತ್ತಿಲ್ಲ ಹೇಳಿ.!

cardio-vasular-system ಅಂದರೆ cardia-ಗುಂಡಿಗೆ + vasular( blood vessels, artery + vein ) ಸೇರಿಸಿ ಆದ system. ಇದಕ್ಕೆ "ರಕ್ತ ಪರಿಚಲನಾ ವ್ಯೂಹ" ಸಮನಾಗದು. ಬದಲಿಗೆ "ಹೃನ್ನಾಳ ವ್ಯವಸ್ಥಾ", ಭೇಲನ ನುಡಿಯಲ್ಲಿ "ರಸಸಿರಾ ವ್ಯವಸ್ಥಾ", ಅಣ್ಣೆಗನ್ನಡದಲ್ಲಿ "ಗುಂಡಿಗೆ-ನರಗಳ ಓಜೆ/ವಯಿನ" ಎನ್ನಬಹುದು.

"ರಕ್ತ ಪರಿಚಲನಾ ವ್ಯೂಹ" ಅಂದರೆ blood circulation system, ಅಂತ ಅಲ್ವಾ!

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2007 - 10:14pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

ತುಂಬ ಸರಿಯಾಗಿ ಹೇಳಿದ್ದೀರಿ ಮಹೇಶ್.
ಹೌದು; ರಕ್ತ ಹರಿಯುವುದೇ ಸರಿ.

ನಾನು ’ ಪದೇ ಪದೇ’ ಅಂದದ್ದು ಹೃದಯದ ಮತ್ತೆ ಮತ್ತೆ ನಡೆಯುವ ಸಂಕೋಚ (contraction) ಮತ್ತು relaxation ಗಳನ್ನು ಮನಸ್ಸಿನಲ್ಲಿಟ್ಟುಕೊಂಡು. ( ರಕ್ತ aorta ವನ್ನು ಸೇರುವುದು pulsatile fashion ನಲ್ಲಿ. )

ರಕ್ತ ಪರಿಚಲನಾ ವ್ಯೂಹ ಎಂಬುದು ಸರಿಯಾದ ಅನುವಾದ ಅಲ್ಲ. ಆದರೆ ಕನ್ನಡ ಟೆಕ್ಸ್ಟ್ ಬುಕ್ ಗಳಲ್ಲಿ ಹಾಗೆ ಬರೆದಿರುತ್ತೆ; ಅಷ್ಟೇ. ಆಯುರ್ವೇದದಲ್ಲಿ ಅದನ್ನು ’ ರಸ ವಹ ಸ್ರೋತಸ್ ’ ಅನ್ನುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 11:50am — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

ಹಾ!! ಹಾಗಾ ...

ಹಾಗಾದರೆ ಸರಿ.. ಗುಂಡಿಗೆಯ ಬಡಿದವನ್ನು ನೀವು ಪದೇ ಪದೇ, ಅಡಿಗಡಿಗೆ ಅಂದಿರಿ.. ನನ್ನಿ!!

contraction = ಮುದುಡು, ಮುಡುಗು, ಉಡಗು, ಸುಂಕು, ಸುಕ್ಕು, ಸುರ್ಕು,
relaxation = ಹಿಗ್ಗು,

ಗುಂಡಿಗೆಯ ಮುಡುಗು ಮತ್ತು ಹಿಗ್ಗು ಅಡಿಗಡಿಗೆ ಆಗುವುದರಿಂದ, ಎದೆ ಬಡಿಗೆಯುಂಟಾಗುವುದು. Smiling

"cardio-vasular-system/ಗುಂಡಿಗೆ ನರಗಳ ಓಜೆ, ಇದು blood-circulation-systems/ನೆತ್ತರ-ಹರಿದಾಟ-ಓಜೆಗಳಲ್ಲಿ ಒಂದು, ಅಲ್ವಾ..

ಕೆಲವು ಜೀವಿಗಳಿಗೆ( species ) ರಕ್ತವಿದ್ದರೂ ಅದು ಹರಿದಾಡಲು ನರಗಳಿರುವುದಿಲ್ಲ, ( ಜಿರಳೇ?)
ಕೆಲವು ಜೀವಿಗಳಿಗೆ ನರವಿದ್ದರೂ ಗುಂಡಿಗೆ ಇರುವುದಿಲ್ಲ.
ಕೆಲವು ಜೀವಿಗಳಿಗೆ ಗುಂಡಿಗೆ + ನರಗಳ ಇರುವುದು.

ನಮ್ ಸಿದ್ದರಾಜು ಸರ್‍ ಪಾಟ, ಇನ್ನೂ ತುಸು ನೆಪ್ಪೈತೆ.! Smiling

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 11:52am — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

ತಿದ್ದುಪಡಿ
ಬಡಿದವನ್ನು = ಬಡಿತವನ್ನು
ಬಡಿಗೆಯುಂಟು = ಬಡಿತವುಂಟು
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 3:30pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

ಮಹೇಶರೇ, ಇಲ್ಲೊಂದು ವಿಷಯ:

’ ನರ ’ ಅಂತ ನಾವು ಸಾಮಾನ್ಯವಾಗಿ ಕರೆಯುವ ರಚನೆ ಇಂಗ್ಲಿಷ್ ನ Nerve ಗೆ ಸಮನಾದದ್ದು.
ರಕ್ತನಾಳಗಳಿಗಲ್ಲ. (ರಕ್ತನಾಳ = Blood Vessels).
ಹಾಗಾಗಿ ’ನರ’ ಶಬ್ದವನ್ನು ನಾನು ಬಳಸಿಲ್ಲ.

ಹಿಗ್ಗುವಿಕೆ - relaxation ಗೆ ಸಮವಲ್ಲ. ಬಹುಶಃ Dilatation ಗೆ ಅದು ಹತ್ತಿರ.
Dilated cardiomyopathy ಎಂಬುದೊಂದು pathological condition.

ಸಂಕೋಚ - ಕುಗ್ಗು - contraction ಗೆ ಸರಿ ಇರಬಹುದು ಅನ್ನಿಸುತ್ತೆ.
relaxation ಗೆ ಸಮನಾದ ಕನ್ನಡ ಶಬ್ದ ಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 3:56pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

Relaxation ಗೆ ' ವಿಶ್ರಾಂತ ಸ್ಥಿತಿ ' ಅನ್ನಬಹುದೇನೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 10:38pm — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

ಇಲ್ಲಿ relax ಅನ್ನು ವಿಶ್ರಾಂತಿ ಅಂತ ತಗೋಬಾರದು.

ಇಲ್ಲಿ relax ಅಂದರೆ blown up state ಅಂತ ತಗೋಬೇಕು ಅಲ್ವಾ!!

relax = ಸಡಿಲಿಕೆ, ಆರಾಮು, ಬಿಡುವು ಇನ್ನು ಹಲವು ಅರ್ತಗಳಿವೆ.
ಆದರೆ ಇಲ್ಲಿ ಗುಂಡಿಗೆ relax ಆಗಲ್ಲ, ಬದಲಿಗೆ ಉಬ್ಬಿ expand ಆಗುವುದು.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 10:34pm — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

೧ ನರ ಅಂದರೆ vien ಅಂತ ಕೂಡ ಬಳಕೆ ಇದೆ.
http://dsal.uchicago.edu/cgi-bin/philologic/getobject.pl?c.1:1:315.burrow

ಆದರೆ ನೀವು ಹೇಳಿದ್ದು ಒಂದು ನೋಟದಲ್ಲಿ ಸರಿ...

ನರಕ್ಕಿಂತ ’ನಾಡಿ’ ಇದು ಸರಿ ಅಲ್ವಾ?

ನೆತ್ತರ ನಾಡಿ = blood vessel. ನಾಡಿ ಬಡಿತ ದಂತೆ.

೨
ಸಾರ್‍ ಇಲ್ಲಿ..

ಗುಂಡಿಗೆ ಹಿಗ್ಗಿ/ಉಬ್ಬಿ/ಊದಿಕೊಂಡು/ಬಾತು ಮತ್ತು ಮುದುಡಿ/ಮುಡುಗಿ ನೆತ್ತರನ್ನು ಪಂಪ್ ಮಾಡುವುದು ಎಂದು ಹೇಳಬೋದು.
heart expands and contracts, pumping the blood.

http://dsal.uchicago.edu/cgi-bin/philologic/getobject.pl?c.1:1:1829.burrow
http://dsal.uchicago.edu/cgi-bin/philologic/getobject.pl?c.0:1:745.burrow
http://dsal.uchicago.edu/cgi-bin/philologic/getobject.pl?c.0:1:670.burrow

ಗುಂಡಿಗೆ ಒಂದು ಪುಗ್ಗೆ/ಬಲೂನ್ ಅಂತೆ ಅಲ್ವಾ. ಬುಗ್ಗೆ ಗಾಳಿಯನ್ನು ತುಂಬಿಕೊಂಡು ಬಾತುದರೆ/ಉಬ್ಬಿದರೆ/ಹಿಗ್ಗಿದರೆ, ಗುಂಡಿಗೆ ನೆತ್ತರನ್ನು ತುಂಬಿಕೊಂಡು ಹಿಗ್ಗುವುದು.

ಹೇಗೇ ಪುಗ್ಗೆ ರಭಸವಾಗಿ ಗಾಳಿಯನ್ನು ಹೊರಬಿಡುತ್ತಾ ಮುಡುಗುವುದು, ಹಾಗೇ ಗುಂಡಿಗೆಯೂ ರಭಸವಾಗಿ ಮುಡುಗಿ, ನೆತ್ತರನ್ನು ಹೊರಚಿಮ್ಮುವುದು.

ಕುಗ್ಗು ಅಂದರೆ contract ಅನ್ನೋದಕ್ಕಿಂತ sink, become low, decrease ಅಂತ ಬಳಕೆ ( ಬೆಲೆ ಕುಗ್ಗಿ )
http://dsal.uchicago.edu/cgi-bin/philologic/getobject.pl?c.0:1:1775.burrow

ಇಲ್ಲಿ ಗುಂಡಿಗೆ relax ಆಗುವುದು ಅಂತ ಅನ್ನೋದಕ್ಕಿಂತ ಅದು expand ಆಗುವುದು ಎನ್ನುವುದು ಸರಿ ಅಲ್ವಾ!!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 11:21pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

ಇಲ್ಲ ಮಹೇಶ್,
Technically speaking, 'contraction' and 'relaxation' - are the correct and specific terms.
Basically heart is made up of cardiac muscles and muscles do not expand. They can oly contract or relax.
Energy is required for contraction- because it is an active process. Relaxation is mostly a passive process.
May be relaxation can not be translated as ವಿಶ್ರಾಂತಸ್ಥಿತಿ. But we need to esarch some other term.
ಕನ್ನಡದಲ್ಲಿ ಬರೆದರೆ ಗೊಂದಲ ಇನ್ನೂ ಹೆಚ್ಚಾಗಬಹುದೆಂಬ ಕಾರಣಕ್ಕಾಗಿ ಇಂಗ್ಲಿಷ್ ನಲ್ಲಿ ಬರೆದಿದ್ದೇನೆ. ಕ್ಷಮಿಸೋಣವಾಗಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 11:26pm — ASHOKKUMAR

ಉ: ಭೇಲನೆಂಬ ಭಾರತೀಯ ವಿಜ್ಞಾನಿ

ASHOKKUMAR's picture

relaxation-ಸಹಜಸ್ಥಿತಿಗೆ ಮರಳುವುದು ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 11:30pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

ಹೌದು.
Absolutely correct. ಅದನ್ನು ಒಂದೇ ಶಬ್ದದಲ್ಲಿ ಹೇಳುವಂತಾದರೆ ಇನ್ನೂ ಚೆನ್ನಾಗಿರುತ್ತದೆ; ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2007 - 11:25am — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

ಅಯ್ಯೋ ಸ್ವಾಮಿ, ನೀವು ಕ್ಷಮೆ ಕೇಳುವಂತಹ ಯಾವ ತಪ್ಪನ್ನು ಎಸಗಿಲ್ಲ.

ಇಲ್ಲಿ ನಮ್ಮ ಗುರಿಯಿರುವುದು, ಸರಳವಾಗಿ, ಗೊಂದಲವಿಲ್ಲದೇ ಕನ್ನಡದಲ್ಲೀ( ಕಡಮೆ ಸಂಸ್ಕೃತವನ್ನು ಬಳಸಿ ) ವಿಜ್ನಾನ ಹೇಳುವುದು ತಾನೆ.

ಇರಲಿ ಬಿಡಿ!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 4:03pm — kishorpatwardhan

ಉ: ಭೇಲನೆಂಬ ಭಾರತೀಯ ವಿಜ್ಞಾನಿ

kishorpatwardhan's picture

Cardiovascular system = circulatory system (ರಕ್ತ ಸಂಚರಿಸುವಂತೆ / ಹರಿಯುವಂತೆ ಮಾಡುವ ಅಂಗಗಳ ಒಟ್ಟು ವ್ಯೂಹ)
ರಕ್ತ / ರಕ್ತದ ತಯಾರಿ / ರಕ್ತ ಕೋಶಗಳ ನಾಶ ...ಇತ್ಯಾದಿ ಕ್ರಿಯೆಗಳು ನಡೆಯುವ ವ್ಯೂಹ = Hemopoietic System
(ಕನ್ನಡದಲ್ಲಿ ಏನು?)

ಈ ಎರಡು ವ್ಯೂಹಗಳೂ - ( ಸಿಸ್ಟಮ್ ಗಳೂ )- ಬೇರೆ ಬೇರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ
  • "ನೀನಾರಿಗಾದೆಯೋ ಎಲೆ ಮಾನವ"
  • "ಲೋಕತಾರಕ ಬಾಪೂ," ಎಂಬ ಅಪರೂಪದ ಖಾದ್ಯ !
  • ಮೈಸೂರು ಅನಂತಸ್ವಾಮಿ, ಡಾಕ್ಟರ್ ಡ್ರೇ, ಸ್ಲೇಯರ್
  • ಈ ಪದಗಳಿಗೆ ಸಮಾನಾರ್ಥಕ ತದ್ಭವ ಶಬ್ದಗಳು ಯಾವುವು?
Syndicate content

ಲೇಖಕರು

kishorpatwardhan's picture

ಪರಿಚಯ

ನಾನು ಆಯುರ್ವೇದದ ಮೇಷ್ಟ್ರು.
ವಾರಾಣಸಿಯಲ್ಲಿ ವಾಸ.
ಊರು ಉಜಿರೆ. ಓದಿದ್ದು ಉಜಿರೆ, ಉಡುಪಿ ಮತ್ತು ವಾರಾಣಸಿಗಳಲ್ಲಿ.
ಕನ್ನಡಭಾಷೆ, ಫೋಟೋಗ್ರಾಫಿ, ಚಿತ್ರ ಬರೆಯುವುದು ಇತ್ಯಾದಿಗಳಲ್ಲಿ ಆಸಕ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator