ಮಲೆಯಾಳಿಯೊಬ್ಬ ಹಾಡಿದ ಕನ್ನಡ ಹಾಡು-II
ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ: ಜಯಂತ್ ಕಾಯ್ಕಣಿ
ಮೂಲ ಗಾಯಕ: ಸೋನು ನಿಗಮ್
ಚಿತ್ರ: ಗಾಳಿಪಟ
ಹಾಡುವ ನಿಟ್ಟಿನಲ್ಲಿ ನನ್ನ ಮೂರನೇ ಪ್ರಯತ್ನ
. ಇಲ್ಲಿಂದ ಕೇಳಬಹುದು:
http://www.esnips.com/doc/9c00c92e-e539-43ea-a6d4-8938d0f509dd/Minchagi-...
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು
ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿ ಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು

- kpbolumbu ರವರ ಬ್ಲಾಗ್
- Login or register to post comments
- 399 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ನನ್ನ ಹಾಡು
eraDu baari kELide. uttama dhvani boLamburavare.
uttamavaagi haaDiddeeri.
ಉ: ನನ್ನ ಹಾಡು
ಧನ್ಯವಾದಗಳು, ನಿಮ್ಮ ಹಾರೈಕೆಯೇ ಮುಂದಣ ಪ್ರಯತ್ನಗಳಿಗೆ ಪ್ರೇರಣೆ.
______
ಬೊಳುಂಬು
ಉ: ನನ್ನ ಹಾಡು
ಕೆಪಿಬೊಳಂಬು, ನಿಮ್ಮ ಬರಹಗಳನ್ನ ನೋಡ್ತಾ ಇದ್ದರೆ, ನಿಮಗೆ ಹಾಡಲು ತುಂಬಾ ಉತ್ಸಾಹವಿರುವಂತೆ ಕಾಣುತ್ತದೆ. ಮೇಲಿನದು ಕೂಡ ಒಳ್ಳೆಯ ಪ್ರಯತ್ನ. ನಿಮ್ಮಲ್ಲಿ ಒಂದು ಕೋರಿಕೆ, ನೀವೇಕೆ ಸಂಪದದಲ್ಲಿ ಹಲವರು ಬರೆಯುವ ಕವನಗಳಿಗೆ (ಅಥವಾ ಕನ್ನಡ-ಬ್ಲಾಗಮಂಡಲದಲ್ಲಿರುವ ಕವನಗಳಿಗೆ) ನಿಮ್ಮದೇ ಶೈಲಿಯಲ್ಲಿ ಭಾವದುಂಬಿ ಹಾಡಲು ಪ್ರಯತ್ನಿಸಬಾರದು.
ಯೋಚಿಸಿ ನೋಡಿ. ನೀವು ಹಾಗೆ ಮಾಡುವಿರಾದರೆ, ನಾನೊಬ್ಬ ಸಹೃದಯ ಕೇಳುಗನಾಗಿ ಎಲ್ಲ ಹಾಡುಗಳನ್ನೂ ಕೇಳುವೆ.
ಉ: ನನ್ನ ಹಾಡು
ನನ್ನಿ ಸುನಿಲ್,
(ಇನ್ನು ಯಾರು ಕೇಳುತ್ತಾರೆ ಮಾರ್ರೆ).
ಕನ್ನಡದ ಬ್ಲಾಗಮಂಡಲದ ಕವಿತೆಗಳಿಗೆ ಭಾವವ ತುಂಬಿ ಹಾಡುವುದು ಚೆನ್ನಾಗಿರುತ್ತದೆ. ಆದರೆ ಇತರರು ಸಂಯೋಜಿಸಿದ ರಾಗ-ತಾಳಗಳನ್ನು ಅನುಕರಿಸಿ ಹಾಡಬಲ್ಲೆನೇ ಹೊರತು ನಾನು ಸಂಗೀತವನ್ನು ವಿಧಿವಿಧಾನಗಳೊಂದಿಗೆ ಕಲಿತವನಲ್ಲ.
ಹಾಗೆ ಮಾಡದಿದ್ದರೂ ನೀವು ಕೇಳಲೇಬೇಕು,
______
ಬೊಳುಂಬು