ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!

July 18, 2008 - 11:58am — anilkumar


ಲ೦ಡನ್ ಪ್ರವಾಸ: ಭಾಗ ೧೧

ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!

     ಬ್ರಿಟಷರ೦ತಹವರನ್ನು ಪ್ರಾಯಶ: ಬ್ರಿಟಿಷರೇ ನೋಡಿರಲಾರರು. ಅವರೆಲ್ಲ ಬುಧ್ಢ, ಕ್ರೈಸ್ಥರಿದ್ದ೦ತೆ. ಸ್ವತ: ಕ್ರಿಸ್ಥ ಕ್ರಿಶ್ಚಿಯನ್ ಜಾತಿಯವನಲ್ಲ, ಬುಧ್ಢ ಬೌದ್ಧ ಧರ್ಮೀಯನಲ್ಲ. ಹಾಗೆ ಬ್ರಿಟಿಷರು ಇಡೀ ಜಗತ್ತನ್ನು ಕ್ರಮಿಸುವ ಕಾಲದಲ್ಲಿ ಎಲ್ಲಿಯೂ ಅವರ೦ತಹವರನ್ನೇ ಸ್ವತ: ಅವರುಗಳು ’ಎದುರಿಸಿರಲಿಲ್ಲ.’ ಅಲ್ಲಲ್ಲ, ಜಗವೆಲ್ಲ ಅಲೆದಾಡಿ ಸ್ವಲ್ಪ ಭಿನ್ನವಾಗಿಬಿಟ್ಟಿದ್ದ ಬ್ರಿಟಿಷರೆಲ್ಲರೂ, ಹಾಗೆ ಮಾಡದೆ ಇ೦ಗ್ಲೆ೦ಡಿನ ಒಳಗೇ, ಲ೦ಡನ್ ಸುತ್ತಮುತ್ತಲೇ ಉಳಿದುಕೊ೦ಡುಬಿಟ್ಟವರಿಗೆ "ಅಮೇರಿಕನ್ಸ್ ಮತ್ತು ಅಸ್ಟ್ರೇಲಿಯನ್ನರಾಗಿ" ಕ೦ಡುಬರುತ್ತಾರೆ. ಬ್ರಿಟಿಷರು ದೆವ್ವಗಳನ್ನು ಈಗಲೂ ನ೦ಬುತ್ತಾರೆ. ಪಾಪ ದೆವ್ವಗಳಿರುವುದಾದರೂ ನ೦ಬುವವರಿ೦ದ, ನ೦ಬುವವರಿಗಾಗಿ, ನ೦ಬುವವರಿ೦ದಲೇ ಅಲ್ಲವೆ? ಆಸ್ಟ್ರೇಲಿಯದ ವೇಗದ ಹಾಗೂ ಸ್ಪಿನ್ ಬೌಲರ್ಗಳನ್ನು ಎದುರಿಸುವಾಗ ಬ್ರಿಟಿಷ್ ಕ್ರಿಕೆಟ್ ಟೀಮ್ ಭೂತದರ್ಶನವಾಗದಿರಲಾರದೆ? ಆದರೆ ಇವರೆಲ್ಲ ಮೆಟಫರಿಕ್ ಭೂತಗಳು.  ಮುಂದೆ ಓದಿ »

  • ಪ್ರವಾಸ ಕಥನ
~.~
  • ೧ ಪ್ರತಿಕ್ರಿಯೆ
  • 79 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

July 17, 2008 - 10:58pm — narendra
ಜಯಂತ್ ಕಾಯ್ಕಿಣಿ

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಒಂದು ಘಳಿಗೆ ಈ ಅಂಶವನ್ನು ಮರೆತು ನೋಡಿದರೆ ಜಯಂತರು ಸೃಷ್ಟಿಸುವ ಪಾತ್ರಗಳು, ಅವರು ನಿರ್ಮಿಸುವ ಊರು, ಕೇರಿಗಳು, ಸನ್ನಿವೇಶಗಳು ಯಾವುದೂ ಇಂದಿನ, ನಮ್ಮ ಸುತ್ತಮುತ್ತಿನ ಜನಜೀವನಕ್ಕೆ ಪ್ರಸ್ತುತವೇ ಅಲ್ಲ ಎನಿಸಿ ಅವೆಲ್ಲ ಒಂದು ಅಸಂಗತ ಲೋಕದ ಚಿತ್ರಗಳು ಎನಿಸಬಹುದು. ನಮಗೆ ಒಬ್ಬ ಇಂದ್ರನೀಲ, ಒಬ್ಬಳು ಮಧುಬನಿ, ಭಾಮಿನಿ, ರೂಪಕ್ ರಾಥೋಡ್ ಕಣ್ಣಿಗೆ ಬೀಳುವುದೂ ಕಷ್ಟವಾಗಿರುವ ಈ ಸುಡುಬಿಸಿಲಿನಂಥ ದಿನಗಳಲ್ಲಿ ಜಯಂತ್‌ಗೆ ಹೇಗೆ, ಎಲ್ಲಿ ಈ ತಂಪಾದ ಮಂದಾನಿಲದಂಥ ಮಂದಿ ಸಿಕ್ಕರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಸರಳವಿಲ್ಲ. ಕತೆಗಾರನ ಸಂವೇದನೆಯ ಸ್ತರಗಳು, ಆತನ ಜೀವನದೃಷ್ಟಿ ಮತ್ತು ಮನುಷ್ಯನ ಮೂಲಭೂತ ಸತ್ ನಲ್ಲಿ ಕತೆಗಾರನಿಗಿರುವ ಅಚಲ ನಂಬುಗೆ ಬಹುಷಃ ಇಂಥ ಪಾತ್ರಗಳ ಸೃಷ್ಟಿಗೆ ಕಾರಣವಾಗುತ್ತಿರಬೇಕು. ಅದಿಲ್ಲದೆ ಬದುಕಿನ ಕಹಿ ಅನುಭವಗಳ ಪಾದಧೂಲಿಯನ್ನು ಮತ್ತೆ ಮತ್ತೆ ಅಳಿಸಿ ಹಾಕಿ ಸಿಹಿಯನ್ನು ಮೆಲುಕು ಹಾಕುವುದು ಜಯಂತರಂಥ ಜಯಂತರಿಗೆ ಮಾತ್ರ ಸಾಧ್ಯವಾದೀತು!  ಮುಂದೆ ಓದಿ »

  • ಪುಸ್ತಕ ವಿಮರ್ಶೆ
~.~
  • 3 ಪ್ರತಿಕ್ರಿಯೆಗಳು
  • 169 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಧರ್ಮಿಷ್ಟರ ದಂಧೆ

July 15, 2008 - 5:39pm — anivaasi

"ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!" ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ "ಹಾಳಾಗಿ ಹೋಗಲಿ" ಎಂಬಂತೆ ಇನ್ನೊಂದತ್ತ ತಿರುಗಿದರು.

ಈ ಒಂದು ವಾರದಲ್ಲಿ ಸಿಡ್ನಿಯ ಮಂದಿಗೆ ತಮ್ಮ ನಂಬಿಕೆಯ ಬಗ್ಗೆಯಷ್ಟೇ ಅಲ್ಲ - ಆದರೆ ಕ್ಯಾತಲಿಕ್ ಎಂಬ ಬಹುದೊಡ್ಡ  ಸಂಯೋಜಿತ ಧರ್ಮದ ಬಗ್ಗೆ ತಲೆಯಲ್ಲಿ ಹಲವು ಯೋಚನೆ ಅನುಮಾನ ಅಭಿಮಾನ ಎಲ್ಲ ಮೂಡಿ ಮುಳುಗುತ್ತಿದೆ. ನೂರಾರು ಸಾವಿರ ಮಂದಿ ಸೇರಬೇಕೆ ಅದೂ ಈ ಕಾಲದಲ್ಲಿ ಅಂದಾಗ ಇಸ್ಲಾಂ ಧರ್ಮದ ಹಜ್ ಯಾತ್ರೆಯನ್ನು ನೆನಪಿಸುತ್ತಾರೆ. ಹಿಂದೂಗಳ ಪ್ರತಿ ಹಬ್ಬಕ್ಕೂ ಹತ್ತಾರು ಸಾವಿರವಾದರೂ ಸೇರುವುದನ್ನೂ, ಕುಂಭಮೇಳಕ್ಕೆ ಕೋಟಿ ಕೋಟಿಯಲ್ಲಿ ಸೇರುವುದನ್ನು ಎತ್ತಿ ತೋರಿಸುತ್ತಾರೆ. ಒಬ್ಬರಿಗಿರುವ ನಂಬಿಕೆ ಇನ್ನೊಬ್ಬರಿಗೆ ಬೇಡವೇ ಎಂಬಂತೆ ಮುಖ ನೋಡುತ್ತಾರೆ.

ಜಾಗತಿಕ ಯುವ ದಿನ ಎಂದು ಕ್ಯಾತಲಿಕ್ ಚರ್ಚ್ ಹಮ್ಮಿಕೊಳ್ಳುವ ಈ ಉತ್ಸವ ಎರಡು ವರ್ಷಕೊಮ್ಮೆ ನಡೆಯುತ್ತದಂತೆ. ಸಿಡ್ನಿಗೆ ನೂರಾರು ಸಾವಿರ ಮಂದಿ ಬಂದಿಳಿದು ಗದ್ದಲ ಶುರುಮಾಡಿದ್ದಾರೆ. ಸಿಡ್ನಿಯ ಮುಖ್ಯ ಬೀದಿಗಳೆಲ್ಲಾ ಮುಚ್ಚಲಾಗಿದ್ದು ಧರ್ಮಿಷ್ಟರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ. ಸಿಡ್ನಿಯ ನಡುವಲ್ಲಿರುವ ಚಂದವಾದ ಡಾರ್ಲಿಂಗ್ ಹಾರ್ಬರಿನಲ್ಲಿ ಪೋಪಜ್ಜನ ಮಾಸ್ ಅಂತೆ. ನಂತರ ಸಿಡ್ನಿಯನ್ನು ಆವರಿಸಿರುವ ಸಾಗರದ ಒಳನೀರುಗಳಲ್ಲಿ ಪೋಪಜ್ಜನ ಬೋಟಕೇಡ್ ಅಂತೆ.  ಮುಂದೆ ಓದಿ »

~.~
  • anivaasi ರವರ ಬ್ಲಾಗ್
  • 15 ಪ್ರತಿಕ್ರಿಯೆಗಳು
  • 335 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

July 15, 2008 - 2:20pm — Chamaraj
ಕಳೆದ ೩೦ ವರ್ಷಗಳಿಂದ ರಸ್ತೆ ಬದಿಯ್ಲಲಿಯೇ ಜೀವನ ಸಾಗಿಸಿರುವ ಧಾರವಾಡದ ಬಸಪ್ಪ ಮುಳಗುಂದ.

ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.

ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.

ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 6 ಪ್ರತಿಕ್ರಿಯೆಗಳು
  • 152 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!

July 15, 2008 - 12:05pm — harshavardhan v...
ಕವಿವಿ ಆವರಣದಲ್ಲಿ ಮುಗಿಲನು ಚುಂಬಿಸುವಾಸೆಯಲಿ ತೇಲಾಡುತನಿಂತ ನೀಲಗಿರಿ ತೋಪು. ಚಿತ್ರ:ಹರ್ಷವರ್ಧನ ಶೀಲವಂತ.

"ಹೂವು ಹೊರಳುವವು
ಸೂರ್ಯನ ಕಡೆಗೆ,
ನಮ್ಮ ದಾರಿ ಬರಿ
ಚಂದ್ರನ ವರೆಗೆ..."

‘ಚೆಂಬೆಳಕಿನ ಕವಿ’ ನಾಡೋಜ ಚೆನ್ನವೀರ ಕಣವಿ ಅವರು ಅತ್ಯಂತ ಸುಂದರವಾಗಿದ್ದ ಧಾರವಾಡದ ಅಂದಿನ ಸ್ವಚ್ಛಂದ ಪರಿಸರವನ್ನು ಆಸ್ವಾದಿಸುತ್ತ ಮನದುಂಬಿ ಉದ್ಧರಿಸಿದ ವಾಕ್ಯಗಳಿವು.

ಆದರೆ ಇಂದು ಕವಿಯ ಕಲ್ಯಾಣನಗರದ ಮನೆಯಿಂದ ಕೇವಲ ಹತ್ತಾರು ಹೆಜ್ಜೆ ದೂರದ ಆ ಸ್ವಚ್ಚಂದ ಗಿರಿ-ಕಾನನದ ಪರಿಸರ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿದೆ. ಗುಡ್ಡಗಳಂತೂ ನೆಲಸಮವಾಗಿವೆ. ಕಾಡು ಪ್ರಾಣಿಗಳು, ಪಕ್ಷಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ನೆರಳು ನೀಡುವ ಗಿಡಗಳು ಸಹ ಇನ್ನಿಲ್ಲವಾಗಿವೆ. ಕೆರೆಗಳು ಮರಣಶಯ್ಯೆಯಲ್ಲಿವೆ. ಸಾಂಸ್ಕೃತಿಕ ರಾಜಧಾನಿ ಕ್ರಮೇಣ ಬಂಜೆಯಾಗುತ್ತಿದೆ. ಧಾರವಾಡ ಕಳೆದ ಕೇವಲ ೩೦ ವರ್ಷಗಳಲ್ಲಿ ಸಾಧಿಸಿದ ‘ಪ್ರಗತಿ’ಯ ಓರೆ ನೋಟ ಇದು!  ಮುಂದೆ ಓದಿ »

  • ಅನುಭವ ಕಥನ
~.~
  • Login or register to post comments
  • 100 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
123456789…ಮುಂದಿನ ›ಕೊನೆಯ »
Syndicate content Syndicate content

ಲೇಖಕರು

Anonymous User's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator