ಕೃಷ್ಣಮೊರ್ತಿ ಅಜ್ಜಹಳ್ಳಿ
ಕವನ,ಹನಿ ಕವನ,ನಗೆ ಹನಿ ,ಹಾಸ್ಯ,ಚುಟುಕಗಳು,ಗಾದೆಗಳು,ನುಡಿಮುತ್ತುಗಳು ಇತ್ಯಾದಿ
ಕವನ *ಪ್ರಿಯಗೆಳತಿಗೆ*
*ಪ್ರಿಯಗೆಳತಿಗೆ*
ಹಾರದಿರು ನೀ ಗೆಳತಿ ಬೇಲಿ ಈ ಜಾತಿ
ಹಾರಿದರೆ ಪಡುವೆ ನೀ ನೂರು ಪಜೀತಿ
ಭಂದು ಬಳಗದ ಪ್ರೀತಿಯ ಪಂಜರ
ಬಿಟ್ಟು ಹಾರದಿರು ಎಚ್ಚರ
ಮೋಹದಾ ಮಾಯದಾ ಬಲೆಗೆ
ನೀ ಬೀಳದಿರು (ಗೆಳತಿ)ಗಿಳಿಯೆ ?
ದಾಹ ನಿಟ್ಟುಸಿರು ನಿನಗೆ ತಪ್ಪದು ನೀ ಅರಿಯೆ
ಬದುಕಲು ನಿನಗಿಹುದು ಹಲವು ದಾರಿ
ಹೋಗಿ ಬಾ ಹರಸುವೆನು ಚಂದಿರ ಚಕೋರಿ
ನೀನಾಗು ಆದರ್ಶ ನಾರಿ
ಹೋಗದೆ ಪ್ರೀತಿ ಸಾಗರದಿ ಜಾರಿ
ಎಚ್ಚರವೆ ನಾರಿ ಮೆಚ್ಚಿರುವೆ ನಿನ್ನ ವಯ್ಯಾರಿ
ಕೃಷ್ಣಮೊರ್ತಿಅಜ್ಜಹಳ್ಳಿ

- krishnamurthy bmsce ರವರ ಬ್ಲಾಗ್
- Login or register to post comments
- 774 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕವನ *ಪ್ರಿಯಗೆಳತಿಗೆ*
ಸರ್,
ಅದು ಭಂದು ಅಲ್ಲ, ಬಂಧು ಆಗಬೇಕಿತ್ತು. ಮುಂದಿನ ಸಾರಿ ಸರಿಪಡಸಿ..
ನಿಮ್ಮವ,
ಗಿರೀಶ ರಾಜನಾಳ