ಕೃಷ್ಣಮೊರ್ತಿ ಅಜ್ಜಹಳ್ಳಿ
ಕವನ,ಹನಿ ಕವನ,ನಗೆ ಹನಿ ,ಹಾಸ್ಯ,ಚುಟುಕಗಳು,ಗಾದೆಗಳು,ನುಡಿಮುತ್ತುಗಳು ಇತ್ಯಾದಿ
*ನೀನಿರಲು ಗೆಳತಿ ನಾಕು*
ಚೇತನವು ನೀ ನನ್ನ ಬಾಳಿಗೆ
ನೀ ಬರಲು ಸ್ವಾಗತವು ನಯನದೊಳಗೆ
ಪ್ರೀತಿತುಂಬಿ ಎದೆಯೊಳಗೆ
ಗೆಳತಿ ನೀ ಬಾ ಒಳಗೆ ಈ ಗಳಿಗೆ
ಬರಲಿ ನನಗೆ ನೂರುಚಿಂತೆ
ನೀನಿರು ಜೊತೆಗೆ ನನ್ನ ಕಾಂತೆ
ನಗುವೆ ಮರೆತು ಎಲ್ಲ ಚಿಂತೆ
ಹಾರುವೆ ಮರಿಹಕ್ಕಿಯಂತೆ
ಇರಲಿ ನೂರು ಬದುಕ ಬವಣೆ
ಇರಲು ನೀನು ಸಾಕು ರಮಣಿ
ತೂರಿ ಬಿಡುವೆ ಕವಣೆ
ಹಾರಿ ಬರುವೆ ನಿನ್ನ ಬಳಿಗೆ ಮೃಗನಯನೆ
ಅರಳಿ ಮನದೊಳಗೆ ನೂರು ಆಸೆ
ಕೊರಳ ಹಿಡಿದಿದೆ ನುಡಿಯದೆ ಕೂಸೆ
ಸರಳವಲ್ಲವೆ ಈ ನನ್ನ ಕವನದ ಬಾಷೆ
ವಿರಳವು ಕೇಳು ನನ್ನಂತವರು ಬಿಡು ಸಂಶೆ
ಕೃಷ್ಣಮೊರ್ತಿಅಜ್ಜಹಳ್ಳಿ

- krishnamurthy bmsce ರವರ ಬ್ಲಾಗ್
- Login or register to post comments
- 433 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: