ಟೀಚರ್ಸ್ ಡೇ!
ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ? ಇದ್ದರೂ ಇರಬಹುದು......ಏನಿದ್ದರೂ ಈ ಮಕ್ಕಳು ನನ್ನಲ್ಲಿ ಸುಪ್ತವಾಗಿದ್ದ ನನ್ನ ಗುರುಗಳ ಮೇಲಿನ ಭಕ್ತಿ, ಗೌರವ ಹಾಗೂ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸಲು ಪ್ರೇರಣೆಯಾಗಿದ್ದರೆ!
ಪ್ರಪಂಚದ ಎಲ್ಲಾ ಗುರುಗಳಿಗೆ ನನ್ನ ವಂದನೆಗಳು. ವಿಶೇಷವಾಗಿ ನನಗೆ ಕಲಿಸಿದ ಗುರುಗಳನ್ನು ನಾನು ಈದಿನ ಸ್ಮರಿಸಿ ನನ್ನ ಕೃತಜ್ಞತೆಯನ್ನು ಈ ಮೂಲಕ ತೋರಿಸಲು ಆಶಿಸುತ್ತೇನೆ.
ಬಾಲವಾಡಿಯಿಂದ ೫ನೇ ತರಗತಿಯವರೆಗೆ ಕಲಿಸಿದ ಸುಶೀಲಾ, ರತ್ನ ಟೀಚರ್ ಇವರಿಂದ ಕಲಿತ ಪಾಠ ಪ್ರೈಮರಿ ತರಗತಿಯಲ್ಲಿ ಕಳೆದ ಕಾಲವನ್ನು ಇನ್ನೂ ಹಸಿಯಾಗಿಡಲು ಕಾರಣವಾಯಿತು. ಇವರಿಬ್ಬರ ಜೊತೆಗೆ ನನಗೆ ಹೈಸ್ಕೂಲಿನಲ್ಲಿ ಕಲಿಸಿದ ಮುಕ್ತಾ, ರಾಧ, ದಮಯಂತಿ, ಶಾರ್ಲೆಟ್, ರಾಮಪ್ಪ, ನಾರಾಯಣ ತಂತ್ರಿ,ಮೊದಲಾದವರೂ ನನ್ನ ಮುಂದಿನ ಶಿಕ್ಷಣಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ನಾನೆಂದಿಗೂ ಮರೆಯಲಾರೆ. ಪಿಯುಸಿ ಹಾಗು ಕಾಲೇಜಿನಲ್ಲಿ ಕಲಿಸಿದ ಬಾಲಚಂದ್ರ ರಾವ್, ಚಂದ್ರಶೇಖರ್, ಶೆಣೈ ಸರ್, ಸ್ವರ್ಣಾ ಮೇಡಮ್, ಮುಡಿತಾಯಾ ಸರ್, ಆಚಾರ್ಯ ಸರ್, ....... ಇನ್ನೂ ಪ್ರತ್ಯೇಕ್ಷವಲ್ಲದೇ ಅನೇಕ ಪರೋಕ್ಷ ಗುರುಗಳನ್ನು ಸ್ಮರಿಸಿ, ಈ ದಿನವನ್ನು ಶಿಕ್ಷರಿಗೆ ಅರ್ಪಿಸಿದ ರಾಧಾಕೃಷ್ಣರಿಗೆ ನನ್ನ ಹಾರ್ಧಿಕ ಅಭಿನಂದನೆಗಳನ್ನು ಮತ್ತು ಕೃತಜ್ಞತೆಯನ್ನು ಆರ್ಪಿಸುತ್ತೇನೆ!
ಗುರು--- ಈ ಶಬ್ದಕ್ಕೆ ಎಷ್ಟು ಮಹತ್ವವಿದೆಯಲ್ಲವೇ? ಗು ಅಂದರೆ ಕತ್ತಲೆ, ರು ಅಂದರೆ ಕತ್ತಲೆಯನ್ನು ದೂರಮಾಡುವವ. ಅಂದರೆ ಬೆಳಕನ್ನು ತೋರಿಸುವವ. ತಾಯಿಯ ನಂತರ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖವಾದ ಪಾತ್ರವನ್ನು ಗುರು ವಹಿಸುತಾನೆ! ನಮ್ಮ ಮುಂದಿನ ಜೀವನಕ್ಕೆ ನಾಂದಿಯನ್ನು ಹಾಕುತ್ತಾನೆ. ಭದ್ರವಾದ ಅಡಿಪಾಯವಾದರೆ ಮುಂದಿನ ಜೀವನದಲ್ಲಿ ಬರುವ ಎಲ್ಲಾ ಅಡೆಚಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ. ಆದುದರಿಂದ तस्मै शी गुरुभ्य़ॊ नमः

- ksnayak ರವರ ಬ್ಲಾಗ್
- Login or register to post comments
- 368 hits
- Email this blog





RSS:
ಪ್ರತಿಕ್ರಿಯೆಗಳು
ಉ: ಟೀಚರ್ಸ್ ಡೇ!
ಬಾಲ್ಯಕಾಲದ ಶಿಕ್ಷಕರ ಹೆಸರು ನೆನಪಿಸಿಕೊಳ್ಳುವುದಕ್ಕೆ ಸ್ಫೂರ್ತಿ ನೀಡಿದ್ದಕ್ಕೆ ಧನ್ಯವಾದಗಳು.
.............
"ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು"
....................................................
ನಾಲ್ಕು ದಿನಗಳ ಹಿಂದೆ ಒಂದು ಸಣ್ಣ ಘಟನೆ.
ಮಾಸ್ತರು ಕರ್ರಗಿದ್ರು. ಕ್ಲಾಸಿನಲ್ಲಿ ಒಬ್ಬ ಹುಡ್ಗ ಹಾಡೊದಿಕ್ಕೆ ಶುರು ಹಚ್ಕೊಂಡ ‘ಕರಿಯ ಐ ಲವ್ ಯು’. ಬಿತ್ತು ಅವನಿಗೆ ಒಂದು ಲತ್ತೆ. ಶಾಲೆಗೆ ಪೋಷಕರ ಮುತ್ತಿಗೆ, ಪ್ರತಿಭಟನೆ. ಆ ಮಾಸ್ತರ್ರಿಗೆ ಬೇರೆ ಕಡೆಗೆ ಬಲವಂತದ ವರ್ಗ.
ಯಾಕೆ ಹೀಗಾಗುತ್ತಿದ್ದಾರೆ ಮಕ್ಕಳು? ಟಿವಿ ಪ್ರಭಾವಾನಾ?
ಗುರು ವ್ರಂದದ ಸಮಸ್ಯೆನೇ ಬೇರೆ? ಬೇರೆಯವರಿಗೆ ಹೋಲಿಸಿದ್ರೆ ವ್ರತ್ತಿಯಲ್ಲಿ ಅಂಥ ಬೆಳವಣಿಗೆ ಏನಿಲ್ಲ (ಸಂಬಳ, ಸವಲತ್ತು ಇತ್ಯಾದಿ). ಬಿಸಿಯೂಟ, ಪ್ರತಿಭಾ ಕಾರಂಜಿ ಅದೂ ಇದೂ ಹತ್ತಾರು ತಲೆನೋವು. ‘ನೀವು ಮಕ್ಕಳನ್ನು ರೂಪಿಸೋ ಶಿಲ್ಪಿಗಳು, ಅವ್ರ, ದೇಶದ ಭವಿಶ್ಯ ನಿಮ್ಮ ಕೈಲಿ’ ಅನ್ನೋ ಬೆಣ್ಣೆ ಮಾತುಗಳು. ಪಾಸ್ಸಿಂಗ್ ಪರ್ಸೆಂಟೇಜ್ ಜಾಸ್ತಿಯಾಗ್ಬೇಕು, ಸಿಲೇಬಸ್ ಮುಗಿಸ್ಬೇಕು ಅನ್ನೋ ಓಟದಲ್ಲಿ ಶಿಕ್ಷಕರು ಶಿಕ್ಷಣದ ಮೌಲ್ಯಯುತ ಉದ್ದೇಶಗಳನ್ನು ನೆನಪಿಟ್ಟುಕೊಂಡಿದ್ದಾರಾ?
ಹೆಚ್ಚು ಶಾಲೆ, ಹೆಚ್ಚು ಕಾಲೇಜು ಅಂದ್ರೆ ಶಿಕ್ಷಣ ಕ್ಷೇತ್ರದ ಅಭಿವ್ರದ್ಧಿನಾ?
ಶಿಕ್ಷಣ ಒಂದು ಸೇವೆಯಾಗಿ ಉಳಿದಿದೆಯಾ? ಶಿಕ್ಷಕರೂ ಏಕೆ ನಗರಾಭಿಮುಖರಾಗುತ್ತಿದ್ದಾರೆ? ಹೀಗೆ ನೋಡುತ್ತ ಹೋದರೆ ನೂರಾರು ಪ್ರಶ್ನೆಗಳು ಶಿಕ್ಷಕರ ದಿನದ ಸಂಭ್ರಮಕ್ಕೆ ಮಂಕು ಕವಿಸುತ್ತವೆ. ಹಾಗಂತ ಎಲ್ಲವೂ ನಿರಾಶದಾಯಕ ಅಂತೇನೂ ಅಲ್ಲ.
ಆದ್ರೆ ಸುಡುವ ಸಮಸ್ಯೆಗಳಿಗೆ ಪರಿಹಾರ ಇದ್ರೆ ಅದು ಏನು?
ಇದೇ ಸಮಯದಲ್ಲಿ, ಶಿವಮೊಗ್ಗದ ಹಳ್ಳಿಯೊಂದರಲ್ಲಿ ನಡೆಯುತ್ತಿರುವ ಮೌಲ್ಯಯುತ ಶಿಕ್ಷಣದ ಕುರಿತಾದ ಶಿಬಿರದ ನೆನಪಾಗುತ್ತಿದೆ. ಸಮಯ ಸಿಕ್ಕಾಗ ಮತ್ತೆ ಅದರ ಬಗ್ಗೆ ಬರೆಯುತ್ತೇನೆ.
ನಾನು ಮರೆಯದ, ಮರೆಯಲಾಗದ ಗುರುಗಳೆನ್ನೆಲ್ಲ ಸ್ಮರಿಸಿಕೊಳ್ಳುತ್ತ
ಗುರುಭ್ಯೋ ನಮಹ.
ಉ: ಟೀಚರ್ಸ್ ಡೇ!
ನಾನು ಒಂದನೇ ತರಗತಿ ಬೆಳಗಾವಿಯಲ್ಲಿ ಓದುತ್ತಿದ್ದಾಗಿನ ನೆನಪುಗಳು ಇನ್ನು ಹಾಗೆಯೇ ಇವೆ... ನನ್ ಟೀಚರ್, ಆ ಶಾಲೆ [ಶರ್ಮನ್ ಶಾಲೆ], ಮೈದಾನದ ಮಧ್ಯದಲ್ಲಿದ್ದ ಆ ಮಾವಿನಮರ ಎಲ್ಲ ಇನ್ನೂ ಹಾಗೇನೇ ಇರಬಹುದು...
ನಿಜವಾಗಲೂ गुरुः ब्रह्मा गुरुः विष्णु:। ......... तस्मै श्री गुरवॆ नमः॥
ವಿನಾಯಕ ಮುತಾಲಿಕ ದೇಸಾಯಿ
ಉ: ಟೀಚರ್ಸ್ ಡೇ!
ಹಾಗೆ ನೋಡಿದರೆ ಎಲ್ಲಾ ವೃತ್ತಿಯಲ್ಲೂ ಸಮಸ್ಯೆಗಳಿವೆ. ನನಗಸುವುದು ಹೋಲಿಸಿ ನೋಡಿದರೆ ಶಿಕ್ಷಕಗರಿರುವಷ್ಟು ಜವಾಬ್ದಾರಿ ಬೇರೆಯಾರಿಗೂ ಇಲ್ಲ. ಶಿಕ್ಷಕರು ಒಂದು ದೇಶದ ಭವಿಷ್ಯ ರೂಪಕರು. ಆದುದರಿಂದ ಈ ವೃತ್ತಿಗೆ ಬಂದವರು ಇದನ್ನು ಅರಿತು ತುಂಬಾ ಜಾಗರೂಕತೆಯಿಂದ ವರ್ತಿಸಬೇಕು.
ಹೊಡಿದು, ಬಡಿದು ಯಾವ ಮಕ್ಕಳನ್ನು ಸುಧಾರಿಸಲಾಗುವುದಿಲ್ಲ! ಎಳೆಯ ಮಕ್ಕಳಲ್ಲಿಯೇ ದೇಶಭಕ್ತಿ, ನೈತಿಕತೆ ಜಾಗರೂಕತೆಗೊಳಿಸಬೇಕಾದರೆ ಕೇವಲ ಗುರುಗಳು ಮತ್ತು ಹೆತ್ತವರು ಕೈಗೂಡಿಸಿದರೆ ಮಾತ್ರ ಸಾಧ್ಯ!
ಅಲ್ಲಿ ಇಲ್ಲಿ ಕೆಲವು ಶಿಕ್ಷಕರು ತಮ್ಮ ಜೀವನವನ್ನು ಮಕ್ಕಳ ಹಿತಕೋಸ್ಕರ ಆರ್ಪಿಸಿದುದನ್ನು ಕೇಳುವಾಗ ರೋಮಾಂಚನವಾಗುತ್ತದೆ!
ಶೀಲಾ