ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ksnayak ರವರ ಬ್ಲಾಗ್

ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

August 14, 2007 - 3:58pm — ksnayak

ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ ಮೂಡದಂತೆ ಹೆದರಿಕೆ ಮೂಡಿಸಿರಬೇಕು. ಆಗ ಪುರಾಣಗಳು ಕೇವಲ ಕಥೆಗಳಂತೆ ಕಾಣುತ್ತಿತ್ತು. ನಾನು ಬೆಳೆದಂತೆ ಮಹಾಭಾರತ, ರಾಮಾಯಾಣದ ಕಥೆಗಳೆಲ್ಲವೂ ಒಂದಾನೊಂದು ಕಾಲದಲ್ಲಿ ನಡದ ನಿಜ ಘಟನೆಗಳೆಂದು ತಿಳಿಯಿತು. ಮತ್ತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದವು. ನಮ್ಮ ಸಮಾಜವಿಜ್ಞಾನ ಪುಸ್ತಕದಲ್ಲಿ ತಿಳಿಸುವಂತೆ ವೇದದ ಕಾಲದಲ್ಲಿ ಮಹಿಳೆಯರಿಗೆ ಅತ್ತ್ಯುತ್ತಮ ಸ್ಥಾನ ದೊರಕ್ಕಿತ್ತು ಎಂದು ತಿಳಿದು ಬರುತ್ತದೆ. ಆದರೆ ತ್ರೇತಾ ಮತ್ತು ದ್ವಾಪರಾ ಯುಗದಲ್ಲಿನ ನಾಯಿಕೆಯರ ಪಾಡು ಹೇಗಿತ್ತು? ಸೀತೆ, ದ್ರೌಪದಿ, ಕುಂತಿ, ಊರ್ಮಿಳೆ ಇವರೆಲ್ಲಾ ಅನುಭವಿಸಿದ ಪಾಡು ನೋಡಿದರೆ ಅಯ್ಯೋ ಎನಿಸುತ್ತದೆ. ಸೀತೆಯನ್ನು ಕಾಡಿಗಟ್ಟುವಾಗ ಯಾರು ಈ ಬಗ್ಗೆ ಚಕಾರವೆತ್ತುವುದಿಲ್ಲ. ವಿಚಿತ್ರವಲ್ಲವೇ? ಯಾವನೋ ಒಬ್ಬನ ಮಾತಿಗೆ ಬೆಲೆಕೊಟ್ಟು ರಾಮ ತನ್ನ ಪ್ರಿಯ ಪತ್ನಿಯನ್ನು ಕಾಡಿಗಟ್ಟುವುದೇ? ಹೋಗಲಿ, ಆಕೆಯ ವಾಸ್ತವ್ಯದ ಬಗ್ಗೆ ಏನಾದರೂ ಮಾಡಬಹುದಿತ್ತಲ್ಲವೇ! ಲಕ್ಶ್ಮಿಯ ಅವತಾರವೆಂದು ತಿಳಿಯುವ ಸೀತೆಗೇ ಈ ತರದ ಕಷ್ಟ ಬರಬೇಕಾದರೆ ಉಳಿದ ಮಹಿಳೆಯರ ಪಾಡು ಏನಾಗಿರಬಹುದು?
ಮತ್ತೆ ದ್ವಾಪರದ ನಾಯಿಕೆ ದ್ರೌಪದಿ, ತುಂಬಿದ ಸಭೆಯಲ್ಲಿ ದುಶ್ಶಾಸನನು ಆಕೆಯ ಸೀರೆಯನ್ನೆಳೆವಾಗ, ಕ್ರಿಷ್ಣೆಯ ೫ ಬಲಶಾಲಿ ಪತಿಗಳು ಏನು ಮಾಡುತ್ತಿದ್ದರು! ಧರ್ಮರಾಯ ಎಂದು ಹೆಸರು ಪಡೆದಿರುವ ಯುಧಿಷ್ಟರನಿಗೆ ತಾನು ಸೋತ ಬಳಿಕ ತನ್ನ ಪತ್ನಿಯನ್ನು ಪಣವಿಡುವ ಹಕ್ಕಿತ್ತೇ? ಅಸ್ಥಾನದಲ್ಲಿದ್ದ ಭೀಷ್ಮನು ಈ ಎಲ್ಲಾ ತಮಾಷೆಯನ್ನು ತಡೆಯಬಹುದಿತ್ತಲ್ಲವೇ?
ವಿಚಿತ್ರವೆಂದರೆ ಗಂಗೇಯನು ದುರ್ಯೋಧನನ ಉಪ್ಪಿನ ಋಣದಲ್ಲಿ ಬಿದ್ದಿದುರಿಂದ ಮೌನವಾಗಿದ್ದಾನಂತೆ! ದ್ರತರಾಷ್ಟ್ರನಂತೂ ಮೊದಲೇ ಕುರುಡ, ಈಗಂತೂ ಪುತ್ರ ವ್ಯಾಮೋಹದಿಂದ ನ್ಯಾಯದ ಕಣ್ಣನ್ನು ಕಳಕೊಂಡಿದ್ದಾನೆ.
ದೇವಾಂಶ ಸಂಭೂತರೆಂದು ತಿಳಿಯುವ ರಾಮ ಕೄಷ್ಣರ ಕಾಲದಲ್ಲಿ ನಡೆದಿದೆಯೆಂದ ಮೇಲೆ ಕಲಿಯುಗದ ಮಹಿಳೆಯ ಪಾಡು ಏನಾಗಿರಬಹುದು? ನಾಯಿಪಾಡು ಎಂದೇ ಹೇಳಬಹುದು. ಆದರೂ ಈಗೀಗ ಮಹಿಳೆಯರು ಎಚ್ಚೆತ್ತುತ್ತಿದ್ದಾರೆ. ತಮ್ಮ ಸ್ಥಾನ ಮಾನಕ್ಕಾಗಿ ಹೋರಾಡುತ್ತಿದ್ದಾರೆ. ನಾನಂತೂ ಆಶಾವಾದಿ, ಖಂಡಿತ ಹತ್ತಿಪ್ಪತ್ತು ವರ್ಷಗಳ ಬಳಿಕ ಮಹಿಳೆಯರಿಗೆ ಅವರಿಗೆ ತಕ್ಕುದಾದ ಸ್ಥಾನ ದೊರಕೀತು!

  • ಮಹಿಳೆ
~.~
  • ksnayak ರವರ ಬ್ಲಾಗ್
  • Login or register to post comments
  • 445 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 16, 2007 - 6:11pm — Aram

ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

Aram's picture

"ನಾನಂತೂ ಆಶಾವಾದಿ, ಖಂಡಿತ ಹತ್ತಿಪ್ಪತ್ತು ವರ್ಷಗಳ ಬಳಿಕ ಮಹಿಳೆಯರಿಗೆ ಅವರಿಗೆ ತಕ್ಕುದಾದ ಸ್ಥಾನ ದೊರಕೀತು!"
--- ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದ ತಸ್ ಲೀಮಾ ನಸ್ರೀನ್ ಎಂಬವಳ ಪಾಡು ಕೇಳಿದ್ದೀರಲ್ಲ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2007 - 10:41am — ksnayak

ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

ksnayak's picture

ನಮಸ್ಕಾರ ಆರಮನವರಿಗೆ,

ನೀವೇ ನನ್ನ ಮಾತನ್ನು ಸಾಧಿಸಲು ಸಹಾಯ ಮಾಡಿದ್ದಿರಿ! ನನ್ನ ಮೊದಲ ಬ್ಲಾಗ್ ಗೆ ಪ್ರತಿಕ್ರಿಯೆ ಕೊಟ್ಟು! ನಾನಂತೂ ಇದಕ್ಕೆ ಯಾವ ಪ್ರತಿಕ್ರಿಯೆಯ ನಿರೀಕ್ಶ್ಕೆ ಮಾಡಿರಿರಲಿಲ್ಲ. ಆದರೂ ೨ ಪ್ರತಿಕ್ರಿಯೆಯು ನನ್ನಲ್ಲ್ಲಿ ಸ್ಪೂರ್ತಿಯನ್ನು ಹುಟ್ಟಿಸಿದೆ ಹಾಗು ಆಶಾವಾದ ಎಂಬ ನಂಬಿಕೆಗೆ ಬಲ ಕೊಟ್ಟಿದೆ.
ನೀವು ತಸ್ಲೀಮಾ ಪ್ರಕರಣವನ್ನು ಇನ್ನೊಂದು ದ್ರಷ್ಟಿ ಕೋಣದಿಂದ ನೋಡಿಲ್ಲವೆಂದು ಕಾಣುತ್ತದೆ. ಈ ಘಟಣೆ ಮಾರನೇ ದಿನ ಎಲ್ಲಾ ಪತ್ರಿಕೆಯ ಮುಖ ಪುಟದಲ್ಲಿ ಕಾಣಿಸಿತು. ಮಹಿಳೆಯ ಬಗ್ಗೆ ನಡೆದ ಒಂದು ಸಣ್ಣ ಘಟನೆ ಎಂದು ಪರಿಗಣಿಸದೆ ಪತ್ರಕರ್ತರು ಹಾಗು ಪತ್ರಿಕೆಗಳು ಇದನ್ನು ಮುಖ್ಯ ಸಂಗತಿ ಎಂದೇ ತಿಳಿದು ಖಂಡಿಸಿದವು. ಅಲ್ಲದೆ, ತಸ್ಲೀಮಾನವರ ರಕ್ಷಣೆ ನಿಂತವರು ಯಾರು? ಅಲ್ಲಿದ್ದ ಪುರುಷ ಪತ್ರಕರ್ತರಲ್ಲವೇ? ದ್ರೌಪದಿಯ ಸೀರೆಯನ್ನೇಳೆವಾಗ ಅಲ್ಲಿದ್ದ ಮಹಾರಥಿಗಳೆಲ್ಲಾ ಅವಳ ಸಹಾಯಕ್ಕೆ ಬಂದರೇ?
ತಸ್ಲೀಮಾ ಬಗ್ಗೆ ಹೇಳಬೇಕೆಂದರೆ ಅವರು ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲದ ಮುಸ್ಲಿಮ್ ಜನಾಂಗಕ್ಕೆ ಸೇರಿದವರಾದರೂ ಧೈರ್ಯದಿಂದ ತಮಗೆ ಅನಿಸಿದನ್ನು ಬರೆದು ಪ್ರಕಟಿಸುವ ಎದೆಗಾರಿಕೆಯನ್ನು ತೋರಿಸುವವರು. ಇಂತವರು ಎಲ್ಲಾ ಮಹಿಳೆಯರಿಗೆ ಮಾದರಿಯಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2007 - 6:29pm — muralihr

ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

muralihr's picture

ದ್ರೌಪದಿ ಐದು ಪತಿಗಳನ್ನು ಮದುವೆ ಮಾಡಿಕೊಳ್ಳಬಹುದಿತ್ತು. ಕೃಷ್ಣಾ ರುಕ್ಮಿಣಿಯನ್ನು ಕದ್ದು ಒಯ್ಯ ಬಹುದಿತ್ತು. ಅರ್ಜುನ ಸ೦ನ್ಯಾಸದ ನ೦ತರವೂ ಕದ್ದು ಸುಭದ್ರ ವಿವಾಹ ವಾಗಬಹುದಿತ್ತು.
ಅ೦ದರೆ ಆಗ ಗ೦ಡು ಹೆಣ್ಣಿನ ಸ೦ಗಮಕ್ಕೆ ವೀರತ್ತ್ವದ ಆವಶ್ಯಕತೆಯಿತ್ತು.
ಅಲ್ಲಿ ಬರುವ ಪಾತ್ರಗಳಲ್ಲಿ ಆತ್ಮ ಶಕ್ತಿಯಿತ್ತು.
ಈಗ ಗ೦ಡು ಹೆಣ್ಣಿನ ಸ೦ಗಮಕ್ಕೆ ಕಾಲವೂ ಇಲ್ಲಾ .. ಅವಕಾಶ ಮಾತ್ರವಿದೆ.
ಎಲ್ಲಾ ಅವಸರದಲ್ಲಿ ಜಾರಿ ಹೋಗ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2007 - 10:46am — ksnayak

ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

ksnayak's picture

ನಮಸ್ತೆ ಮುರಲಿಹರ್!,
ಎಲ್ಲಿದ್ದಿರಿ ಮಹಾರಯರೇ ನೀವು? ಆಗ ಬರುವ ಪಾತ್ರಗಳಿಗೆ ಹೇಗೆ ಆತ್ಮ ಶಕ್ತಿಯಿತ್ತೋ ಈಗಲು ಹಾಗೆಯೇ ಇದೆ. ಆದರೆ ಅದರ ಅರಿವಿಲ್ಲವಷ್ಟೇ! ಈಗಲೂ ೫ ಅಲ್ಲ ೧೦ ಮದುವೆ ಮಾಡಿಕೊಳ್ಳುತ್ತಾರೆ, ಆದರೆ ಅದನ್ನು ನಿಭಾಯಿಸುವ ಶಕ್ತಿಯಿಲ್ಲವಷ್ಟೇ! ಎದ್ದೇಳಿರಿ,ಎಚ್ಚರಗೊಳ್ಳಿರಿ, ಈಗಲೂ ಸನ್ಯಾಸಿಗಳು ಮದುವೆಯಾಗುವುದಿಲ್ಲವಾ? ಕೃಷ್ಣನಂತೆ ಪ್ರೇಮಿಗಳು ತಮ್ಮ ಪ್ರೇಯಸಿಯರನ್ನು ಕದ್ದು ಒಯ್ಯುತ್ತಾರೆ, ಆದರೆ ಕಲಿಯುಗದ ರಾವಣ, ದುರ್ಯೋಧನ, ಧುಶ್ಯಾಸನರು ಅವರನ್ನು ನೆಮ್ಮದಿಯಾಗಿಗಿರಲು ಬಿಡುವುದಿಲ್ಲ. ಕಾಲವೇನು ಬದಲಾಗಿಲ್ಲ ಹೆಸರು ಮಾತ್ರ ಬದಲಾಗಿದೆಯಷ್ಟೇ!
ಶೀಲಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುರಾಣಗಳು/ಉಪನಿಷತ್ ಗಳು.
  • ಒಂದಾನೊಂದು ಕಾಲದಲ್ಲಿ
  • ಭಾವನಾ, ಹಂಗಾಮ, ಜಯಂತ್ ಇತ್ಯಾದಿ
  • ಮಹಿಳೆಯರ ಪಾಲ್ಗೊಳ್ಳುವಿಕೆ
  • ಸಮ್ಮಿಶ್ರ ಎಂಬ ಕಲಸುಮೇಲೊಗರ.
Syndicate content

ಲೇಖಕರು

ksnayak's picture

ಪೂರ್ಣ ಹೆಸರು
ಕೆ. ಶೀಲಾ ನಾಯಕ್.

ಪರಿಚಯ

ಗ್ರಹಿಣಿ, ಪದವೀದರೆ. ಸಾಹಿತ್ಯ ಹಾಗು ತಂತ್ರಜ್ಞಾನದಲ್ಲಿ ಆಸಕ್ತಿಯಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 85 ಅತಿಥಿಗಳು ಆನ್ಲೈನ್ ಇರುವರು.


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator