~
ಶರಣ್ರಿಯಪ್ಪಾ
ಶರಣ್ರಿಯಪ್ಪಾ. ನನ್ನ ಹೆಸರ ಮಂಜುನಾಥ ಕುಲಕರ್ಣಿ.ಗುಲ್ಬರ್ಗಾದವಾ. ಈಗ ದೇಶಾ ಬಿಟ್ಟ ಬಂದಿನಿ.ಈವತ್ತ ಮೊದಲ್ನೆ ಸರ್ತಿ ಕಂಪ್ಯುಟರ್ನಾಗ ಕನ್ನಡದಾಗ ಬರಿಲಿಕ್ ಹತ್ತಿನಿ. ಇಷ್ಟ ದಿನಾ ನೀವೆಲ್ಲ ಬರ್ದಿದ್ದ ನೊಡಿ ನನಗೂ ಬರಿಬೇಕಂತ ಭಾಳ ಮನಸ್ಸಾಗ್ತಿತ್ತು. ಈವತ್ತ್ ಒಂದ ಪೊಣ ಘಂಟಾ ಕುಂತ ಇದನ್ನ ಕುಟ್ಟಿನಿ. ಮುಂದ ಇನ್ನಮುಂದ ಬರೀಬೇಕಂತ ಆಶಾ ಅದ.
ಈಗ ಸ್ವಲ್ಪ ತ್ರಾಸ ಆಗೆದ. ಮುಂದ ಬರ್ತಾ ಬರ್ತಾ ಬರ್ಯೊದು ಭಾಳ ತ್ರಾಸ ಆಗ್ಲಿಕ್ಕಿಲ್ಲ.

- kulmanju ರವರ ಬ್ಲಾಗ್
- Login or register to post comments
- 488 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಶರಣ್ರಿಯಪ್ಪಾ
ಬರ್ರೀ ,
ಗುಲ್ಬರ್ಗಾದಾವ್ರು ಯಾರರ ಬೇಕಾಗಿತ್ತು ಇಲ್ಲೆ ,
ಗುಲ್ಬರ್ಗಾ ಭಾಶಾ ಬಗ್ಗೆ ನಮಗಷ್ಟ ತಿಳಿಸಿ ಕೊಡ್ರೆಲಾ ? ಕಡೀಕ ಏನರ ಗುಲ್ಬರ್ಗಾದಾಗ ಮಾತಾಡೋ ಹಂಗ ಬರೀರಿ , ಅಷ್ಟು ಸಾಕ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಶರಣ್ರಿಯಪ್ಪಾ
ಇರುವದೆಲ್ಲವ ಬಿಟ್ಟು.....
ನಮ್ಮೂರ ಭಾಷಾ ಅಂದ್ರ ಮೀಸಳ ಭಾಜೀ(ನಮ್ಮ ಕಡಿ ಮತ್ತ ಮಹಾರಾಷ್ಟ್ರದಾಗ ಮಾಡೊ ಪಲ್ಯ . ಎಲ್ಲಾ ಕಾಳ ಕಡಿ ಹಾಕಿ ಮಾಡಿರ್ತಾರ) ಇಧ್ದಾಂಗ. ಕನ್ನಡಾ,ಮರಾಠಿ,ಉರ್ದು, ಎಲ್ಲಾ ಕಲ್ತಿರ್ತಾವ. ನಮ್ಮ ಮಾತ ಕೇಳಿ ಈ ಮೂರು ಭಾಷಾ ಮಾತಾಡಮಂದಿ ನಗತಾರ.
ನಮಗ ಆಳದೊರು ನಮಗ ಕೊಟ್ಟ ಸಾಂಸ್ಕೃತೀಕ ನಿಶಾನಿ ಇದು. ಹೆಚ್ಚುಕಮ್ಮಿ ಕನ್ನಡಾ ಆರನೂರ ವರ್ಷ ಇಲ್ಲಿ ಅಡಗೀಮನಿ ಭಾಷಾ ಆಗಿತ್ತು
ಉ: ಶರಣ್ರಿಯಪ್ಪಾ
"..ಹೆಚ್ಚುಕಮ್ಮಿ ಕನ್ನಡಾ ಆರನೂರ ವರ್ಷ ಇಲ್ಲಿ ಅಡಗೀಮನಿ ಭಾಷಾ ಆಗಿತ್ತು.."
ಹೌದಾ? ನಮ್ಮ ಚಾಲುಕ್ಯರ/ರಟ್ಟಕೂಟರ ಕಾಲದಲ್ಲಿ ಕಲುಬುರ್ಗಿಯ(ಗುಲ್ಬರ್ಗದ) 'ಮಾನ್ಯಖೇಟ'( ಈಗಿನ ಹೆಸರು ಗೊತ್ತಿಲ್ಲ) ಕನ್ನಡಿಗರ ಹೆಮ್ಮೆಯ ಊರಾಗಿತ್ತಂತೆ. ಇದು ಅಮೋಗವರುಶನ ಅರಸೂರು(ರಾಜಧಾನಿ)ಆಗಿತ್ತಂತೆ. ಸಿರಿವಿಜಯ(ಕವಿರಾಜಮಾರ್ಗ ಬರೆದವನು) ತಾನು 'ಮಾನ್ಯಖೇಟ' ಊರಿಗೆ ಬಂದುದನ್ನ ಚನ್ನಾಗಿ ಬಣ್ಣಿಸಿದ್ದಾನೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶರಣ್ರಿಯಪ್ಪಾ
ವೈಭವ್,
ಮಾನ್ಯಖೇಟದ ಈಗಿನ ಹೆಸರು ಮಳಖೇಡ, ಕಲ್ಬುರ್ಗಿಯ ಹತ್ತಿರವಿದೆ. ಈ ಊರು ಮಾಧ್ವ ಬ್ರಾಹ್ಮಣರಿಗೆ ಪವಿತ್ರ - ಅಲ್ಲಿ ಜಯತೀರ್ಥ ಸ್ವಾಮಿಗಳ ಬೃಂದಾವನವಿದೆ.
- ಕೇಶವ
Visit my blog:
http://kannada-nudi.blogspot.com
ಉ: ಶರಣ್ರಿಯಪ್ಪಾ
ಇರುವದೆಲ್ಲವ ಬಿಟ್ಟು.....
ವೈಭವ್,
ಭಾಳ ಖುಷಿ ಆಯ್ತು. ಹೌದು ರಾಷ್ಟ್ರಕೂಟರ ಮತ್ತ ಚಾಲುಕ್ಯರ ಕಾಲದಾಗ ಇಲ್ಲಿ ಕನ್ನಡಾ ಎನು ಬೇರ ಬಿಟ್ಟಿತ್ತು, ಅದೇ ಘಟ್ಟಿ ಬೇರಿಂದಾ ಮುಂದ ಆರನೂರ ವರ್ಷ ಅದು ಕುಟುಕ ಜೀವಾ ಹಿಡಕೊಂಡು ಬಾಳ್ಯದ. ಮುಂದ ಹೆಚ್ಚುಕಮ್ಮಿ ಹದಿನೇಳು ಹದಿನೆಂಟು ಶತಮಾನದಾಗ ಇಲ್ಲಿ ನಮ್ಮ ಹೈದರಾಬಾದ ಕರ್ನಾಟಕ ಸುತ್ತ ಮುತ್ತ ದಾಸ ಸಾಹಿತ್ಯ ಮತ್ತ ಅನುಭವ ಸಾಹಿತ್ಯ ಕನ್ನಡಾ ಉಳಿಯುಹಂಗ ಮಾಡ್ದು.
ಕೇಶವ
ಮಳಖೇಡ ಬರೇ ಮಾಧ್ವರಿಗೆ ಅಲ್ಲಾ ಜೈನ್ರಿಗೂ ಭಾಳ ಪವಿತ್ರ ಅದ. ಅಲ್ಲಿ ಜೆನರದು ಒಂದು ಮಠಾ ಐತಿ.
ಉ: ಶರಣ್ರಿಯಪ್ಪಾ
ಕುಲ್ಕರ್ಣಿಯವ್ರೆ,
ಬರ್ರಿ. ನಿಮ್ಗ ಸ್ವಾಗ್ತ. ಛಲೊ ಆತ್ನೊಡ್ರಿಯಪ್ಪ. ಬಂದ್ರಿ ತಡಾಯೇನ್ ಆಗಿಲ್ಲ್ರಿ. ಅಂದ್ರ, ನೀವು ಟಾಂಗಕ್ಕ ಕಟ್ಟಿದ್ ಕುದ್ರಿ ಹಂಗ ಕಣಮುಚ್ಚಿ ಓಡ್ಲಿಕ್ ಹತ್ತಿರಿ. ಸರಿಯದೆ. ಹೆದ್ರಬ್ಯಾಡ್ರಿ. ಅಂದಂಗೆ ನಿವ ಹೇಳಿದ್ದೇನು ಯಾವ್ದೇಶ ಬಿಟ್ಟಿರಿ. ನಿವಿರೊದ್ ಕರ್ನಾಟ್ಕದಗ ಅನ್ನೊದ್ನ್ ಮರ್ತಗಿರ್ತಿರ.
ಆಮೆಲ್ ಭೆಟ್ಟಿ ಆಗ್ತಿನ್ರಿ.
ಉ: ಶರಣ್ರಿಯಪ್ಪಾ
ಉ: ಶರಣ್ರಿಯಪ್ಪಾ
ನಮಸ್ಕಾರ್ರೀ,
ಮತ್ತ ಈಗ ಸವಾರಿ ಅಂದ ಕೂಡ್ಲೆ ಗುಲ್ಬರ್ಗಾ ಸ್ಪೆಷಾಲಿಟಿ, ಸವಾರಿ ಆಟೊ ನೆನಪಾಗ್ಲಿಕತ್ತದ, ಇನ್ನ ಆ ಸಿಸ್ಟಮ್ ಅದ ಏನು? ನಾನು ಗುಲ್ಬರ್ಗಾದವ, ಆದ್ರ ಗುಲ್ಬರ್ಗ ಬಿಟ್ಟು ಭಾಳ ದಿನ ಆತು.
ಟಾಂಗಾ ಕುದರಿ ಅಂದಕೂಡ್ಲೇ ಗುಡಿ ಇಂದ ಮಾರ್ಕೆಟ್, ಮಾರ್ಕೆಟ್ಟಿಂದ ಗುಡಿ ಸವಾರಿ ನೆನಪಾತ್ರಿ
Anil
ಉ: ಶರಣ್ರಿಯಪ್ಪಾ
ಒಬ್ರೆ ಇದಿರ. ತೆಪ್ಪು ಹೆಂಗ್ ಮಾಡ್ಲಿಕ್ ಸಾಧ್ಯ ಅದೆರಿ. ನಿಮ್ಮ ಜೋಡಿ ಒಬ್ಬಾಕಿ ಬರ್ತಳು ಅದು ಇದು ಮಾತ್ ಬರ್ತಾವು. ಮುಂದೆ ಕಂದಮ್ಮಗಳ್ನ ನೀವ್ ಕನ್ನಡ್ದ ಶಾಲಿಗ್ ಬ್ಯಾಡ ಇಂಗ್ಲೀಶ್ ಕಲಿಲಿ ಅಂತಿರಿ. ಆಕಿ , ಒಪ್ಪುದಿಲ್ಲ. ಆಗ್ನೋಡ್ರಿ ನಿಮ್ ಘರ್ಶಣೆ ಸುರುಆತಂತ್ಕೊಳ್ರಿ. ಸರಿಹೌದಲ್ಲೊ. ಇವಜ್ಜ ಏನೋ ವದರ್ಲಿಕ್ ಹತ್ಯಾನೆ, ಅಂದ್ಕಂತಿರು ಹೆಂಗೊ ನನ್ಗೆ ತಿಳಿವಲ್ದು. ನಾನಿಲ್ಲಿ. ನೀವಲ್ಲಿ. ದೇಶ ಬಿಟ್ಟಿನಿ ಅಂತಿರಲ್ರಿ. ನಿವೊಳ್ಳೆ. ನಾನ್ ಅಂಥ ಮಾತ್ ಹೇಳಿದ್ರು ಯಾರು ಕೇಳಂಗಿಲ್ರಿ. ತೆಗಿರಿ. ಎಂಧಾ ಮಾತು ! ಸಿಟ್ಟಾಗ್ ಬ್ಯಾಡ್ರಿ. ನಿಮಾಕಿ ಒಳ್ಳಿ ಗರಂ ಗರಂ ಚಹ ಮಾಡಿ ನಿಮ್ಮಕೈನಾಗ್ ಇಟ್ಳು ಅಂದ್ರ ನಿಮ್ಮ್ ಸಿಟ್ಟು ಸಿಡ್ಕು ಎಲ್ಲ ಮಾಯಆಗ್ತದ್ರಿ ! ನಗ್ರಿ, ಸಾಹೇಬ್ರ. ಬರೊಣೇನ್ರಿ.
ಉ: ಶರಣ್ರಿಯಪ್ಪಾ
ಕುಲಕರ್ಣಿಯವರೆ ಬರೀರಿ , ಗುಲ್ಬರ್ಗ ಕಡೆಯ ಗಂಡು ಕನ್ನಡವೂ ಸಂಪದದ ಆಸ್ತಿಯಾಗಲಿ.
ಉ: ಶರಣ್ರಿಯಪ್ಪಾ
ಕುಲರ್ಣಿಯವರ,
ನೀವೂ ’ಭೀ’ ಬರೀರಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಶರಣ್ರಿಯಪ್ಪಾ
ಇರುವದೆಲ್ಲವ ಬಿಟ್ಟು.....
ಸರ್ ನಾ ಕರ್ನಾಟಕದವನೇ ಆದ್ರ ಈಗ ದೇಶಾ ಬಿಟ್ಟಬಂದ್ ಪರದೇಶಿ ಆಗೀನಿ.
ಒಬ್ನೆ ಇದ್ದಿನಿ ಅಂತ ಆರಾಮಾಗಿದ್ದಿನಿ. ಮುಂದ ಕಟಗೊಂಡಕಿ ಬಂದ್ರ ಹಿಂಗ ಇರಂಗಿಲ್ಲ ಅನಸ್ತದ. ತಿಳದವ್ರು ಹೇಳ್ಬೆಕು
ಆಯ್ತ್ರಿ ಯಪ್ಪಾ ಆಮ್ಯಾಲ ಸಿಗೂಣು
ಹೌದ್ರಿ ಅನೀಲ್ ನಮ್ಮುರ್ ಆಟೊ ಭಾಳ ಛಲೊ ಅವ. ಸವಾರಿ ಗಿರಾಕಿಗೊಳು ಇದ್ರ ,ಸಿಟಿ ಬಸ್ಸ್ ಕಿಂತಾ ಭಾಳ ಸಸ್ತಾ ಆಗ್ತದ.ಆ ಪಧ್ದತಿ ಈಗ್ಲೂ ಅದ. ನಿಮಗ ಬ್ಯಾರೆ ಎಲ್ಲಾರಿಗು ಈ ಸವಾರಿ ಪಧ್ದತಿ ಗೊತ್ತಿರ್ಲಿಕ್ಕಿಲ್ಲ. ಅಂದ್ರ ಊರಾಗ ಕೆಲವೊಂದ ಜಾಗಕ್ಕ ಭಾಳ ಮಂದಿ ಹೊಗ್ತಾರ. ಹಂಗ ಹೋಗ್ಲಿಕ್ಕಿ ಆಟೊನಾಗ ಮುರ್ನಾಕು ಮಂದಿ ಬ್ಯಾರೆ ಬ್ಯಾರೆಯರ್ವು ಕೂಡೊದು. ಒಬ್ಬಬ್ಬ್ರಿಗು ಆಟೊದವ ರೊಕ್ಕ ತೊಗೊತಾನ. ಹಿಂಗಾದ್ರ ನಮಗೂ ಸಸ್ತಾ . ಅವ್ನಿಗೂ ಲಾಭಾ. ಛಂದ ಅದಯಿಲ್ಲೊ ಈ ಪಧ್ದತಿ.. ಅಂಥಾ ಕೆಲವು ಭಾಳ ಗರ್ದಿ ಇರೊ ಜಾಗಗೊಳು. 1) ಗುಡಿ(ಅಪ್ಪನ ಗುಡಿ= ಶರಣಬಸವೇಶ್ವರ ಗುಡಿ) ಇಂದ ಮಾರ್ಕೆಟ್, 2) ಮಾರ್ಕೆಟ್ ಇಂದ ದರ್ಗಾ. 3) ಮಾರ್ಕೆಟ್ಟಿಂದ ತಿಮ್ಮಾಪೂರಿ ಚೌಕ, 4) ತಿಮ್ಮಾಪೂರಿ ಚೌಕ ಇಂದ ಶಾಬಝಾರ. ಇಲ್ಲಿ ಹೋಗ್ಲಿಕ್ಕಿ ಐದ ಇಲ್ಲಾ ಆರು ರುಪಾಯಿ ಸಾಕು.
ಶ್ರೀಕಾಂತ ಅವ್ರ ಭಿ ನಮ್ಕಿಂತಾ ಜಾಸ್ತಿ ಬೀದರನೋರು ಉಪಯೋಗ ಮಾಡ್ತಾರ.