** ಬಂತು ಬಂತು ಚುನಾವಣೆ **
** ಬಂತು ಬಂತು ಚುನಾವಣೆ **
ಬಂತು ಬಂತು ನೋಡು ಚುನಾವಣೆ
ಮಿಂಡ ಪುಂಡ ಪೋಕರಿಗಳ ಚಲಾವಣೆ
ತುಂಬಿ ತುಳಿಕಿದ್ದರು ಊರಲ್ಲಿ ಬವಣೆ
ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ
ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ
ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು
ತಿಂದು ಅಂಡೆಲೆದು ಕಾಲ ಕಳೆಯುವ
ಮೈಗಳ್ಳನಿಗೂ ಹೆಂಡದ ತೀರ್ಥ ಬಂತು
ಕಂಡ ಕಂಡ ಅಬಲೆ ಹೆಣ್ಣುಗಳ ಸೆರಗಲ್ಲಿ
ಇಣುಕಿದ ಲಜ್ಜೆಗೆಟ್ಟ ಕಚ್ಚೆ ಅರುಕರು
ಚುನಾವಣೆಯ ಸ್ಪರ್ಧೆಯಲಿ ಸೆಣಸಲು
ಸಜ್ಜಾಗಿ ಬರುವರು ನೋಟು ಕೊಟ್ಟು ಓಟುಕೇಳಲು
ಬಿದ್ದುಹೋಗಿರುವ ಗುಡಿ ಗೋಪುರಗಳು
ಉದ್ದಾರಮಾಡುವ ಹೆಡ್ಡರ ಮಾತುಗಳಿಗೆದ್ದು
ಆಪಕ್ಷ ಈಪಕ್ಷ ನೂರಾರು ಪಕ್ಷಗಳಗೆ
ಪಕ್ಷಾಂತರ ಗೊಳ್ಳುವ ಅವಾಂತದಲಿ ಸಿಲುಕುವವು
ಮಲಗಿ ಮರೆಯಾಗಿದ್ದ ತಮ್ಮೊಳಗಿನ
ವೈಮನಸ್ಸು ಪಾರ್ಟಿಗಳ ಪ್ರೇರಣೆಗೆ
ಹೊಸ ಚೇತನ ಪಡೆದು ಚಿಗಿಯುವವು
ಮನಸ್ಸುಗಳ ನಡುವಿನ ಸೇತುವೆ ಮುರಿದು ಬೀಳುವವು
ಬೀದಿದೀಪಗಳಿಲ್ಲದೆ ಕತ್ತಲಲ್ಲಿ ಮರುಗಿದ್ದ
ಬೀದಿಕಂಬಗಳು ಮೂರು ದಿವಾದರು
ದೀಪದಲಿ ಬೀಗುತ್ತ ಬೆಳಗಿ ಮೆರೆಯುವವು
ಹರಡಿದ ಹೊನಲಿನಲಿ ಪಕ್ಷರಾಜಕಿಯ ನಡೆಯುವುದು
ಮೂಲೆಗುಂಪಾದ ದೀನ ಬಡಬಗ್ಗರಿಗೆ
ನೂರು ಬರವಸೆಗಳ ಸುಳ್ಳು ಆಸ್ವಾಸನೆಗಳು
ನಾವು ಅವರಂತಲ್ಲ ಲಂಚ ಹಗರಣ ನಮ್ಮಲ್ಲಿಲ್ಲ
ಒಮ್ಮೆ ಓಟುಕೊಟ್ಟು ನೋಡಿ ಎಂದೇಳುವರು
ಎಂದೂ ನಮ್ಮಕಡೆ ಮೂಸದ, ಹೆಣ್ಣು ಹೆಂಡ ಪಿಪಾಯಿಗಳು
ಶಂಡತನದಿ ಬಂದು ಕೈಯ ಕಾಲು ಹಿಡಿವರು
ಅಪ್ಪ ಅವ್ವ ಅಣ್ಣ ತಮ್ಮ ನೀವೆಲ್ಲ ನಮ್ಮವರು
ಎಂದು ಬೊಬ್ಬೆ ಇಟ್ಟು ಅರಚಿ ಕಿರುಚುವರು
ಊರಲ್ಲಿ ನೀರಿಲ್ಲದಿದ್ದರು ಹೆಂಡ ಸಾರಾಯಿ
ಬ್ರಾಂದಿಯ ಹೊಳೆ ಹರಿದು ಬರುವುದು
ಬಸ್ಸುಗಳೇ ಕಾಣದ ಊರದಾರಿಗಳಲ್ಲಿ ಮೂರುದಿನ
ಜೀಪು ಕಾರು ಗಾಡಿಗಳದೇ ಕಾರುಬಾರು

- KumaSwamy Kadakolla ರವರ ಬ್ಲಾಗ್
- Login or register to post comments
- 365 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ** ಬಂತು ಬಂತು ಚುನಾವಣೆ **
ನಿಮ್ಮ ಕವನ ಚೆನ್ನಾಗಿದೆ. ಬಹಳ ಹಿಂದೆ ಬೇಂದ್ರೆಯವರ ಶ್ರಾವಣ ಬಂತು ಕವನದ ಧಾಟಿಯಲ್ಲಿ ಇದೇ ರೀತಿಯ ಒಂದು ಅಣಕು ಕವಿತೆಯನ್ನು ಓದಿದ್ದೆ. ಪ್ರಜಾಪ್ರಭುತ್ವ ನಮಗೆ ಅನಿವಾರ್ಯ. ಕಪಟ, ಮೋಸ ವಂಚನೆ, ಸ್ವಾರ್ಥ ಇವೆಲ್ಲಾ ಸಮಾಜದ ಎಲ್ಲಾ ರಂಗಗಳಲ್ಲೂ ಇದ್ದದ್ದೇ. ಆದರೆ ರಾಜಕಿಯದಲ್ಲಿ ಇದು ಅತಿಯಾಗಿದೆ. ಪ್ರತಿಯೊಬ್ಬರೂ (ನಾನೂ ನೀವು ಎಲ್ಲಾ ಸೇರಿ) ಈ ಅನಿಷ್ಟವನ್ನು ತೊಡೆಯಲು ನಮ್ಮ ಶಕ್ತಿಯಿದ್ದಷ್ಟು ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬರಲಿರುವ ಚುನಾವಣೆಗಳಲ್ಲಿ ಉತ್ತಮ ಅಭ್ಯರ್ಥಿ ದೊರೆಯದಿದ್ದ ಪಕ್ಷದಲ್ಲಿ ಕಡಿಮೆ ಬ್ರಷ್ಟರಿಗೆ ಓಟು ಹಾಕೋಣ. ಪ್ರಜಾಪ್ರಭುತ್ವದಲ್ಲಿ ಮತದಾರರಿಗಿರುವ ಹಕ್ಕನ್ನು ವಿವೇಕಯುತವಾಗಿ ಉಪಯೋಗಿಸೋಣ. ನಿಮ್ಮ ಈ ಕವಿತೆ ಓದುಗರಲ್ಲಿ ವಿಚಾರಶೀಲತೆಯನ್ನು ಬೆಳಸಲಿ.
ಎನ್. ಅಂಜನ್ ಕುಮಾರ್
thewiseant@yahoo.co.in
yahoo messenger ನಲ್ಲೂ ಲಭ್ಯ
ಉ: ** ಬಂತು ಬಂತು ಚುನಾವಣೆ **
ನಿಮ್ಮಅನಿಸಿಕೆಗೆ ತುಂಬಾ ಧನ್ಯವಾದಗಳು