ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › lgnandan ರವರ ಬ್ಲಾಗ್

ಸ್ಪಂದನ

ಮನಸ್ಸುಗಳಿಗಾಗಿ,

ತಾರೆ ಜಮೀನ್ ಪರ್........

June 9, 2008 - 2:40am — lgnandan

ತಾರೆ ಝಮೀನ್ ಪರ್........
ಈ ಬ್ಲಾಗ್ ನ ಶೀರ್ಷಿಕೆ ನೋಡಿ ಏನ್ ಇವನು ಸಿನಿಮಾ ಕಥೆ ಹೇಳುವುದಕ್ಕೆ ಹೊರಟಿರುವವನ? ಎಂದ್ಕೊಳ್ಳಬೇಡಿ. ಇದು ನನ್ನ ಕಥೆ ಅಥವಾ ವ್ಯಥೆಯೆನ್ನಬಹುದು. ಅಮೀರ್ ಖಾನ್, ಆ ಚಿತ್ರದಲ್ಲಿ ಒಂದು ವಯಸ್ಸಿನ ಸೂಕ್ಷ್ಮ ಸಂವೇದನೆಯನ್ನು ಸ್ಪರ್ಷಿಸುವಂತೆ ನಿರ್ಧೇಶಿಸಿದ್ದಾರೆ. ನಾನು ಕೂಡ ನನ್ನ ಬಾಲ್ಯದ ಬಹುತೇಕ ದಿನಗಳನ್ನು ರೆಸಿಡೆನ್ಷಿಯಲ್ ಶಾಲೆಯಲ್ಲಿ ಕಳೆದೆ. ನನ್ನನ್ನು ಆ ಶಾಲೆಗೆ ಸೇರಿಸಲು ಕಾರಣ ನಾನೇನು ಚೆನ್ನಾಗಿ ಓದುತಿರಲಿಲ್ಲ ಎಂದಲ್ಲ, ಮನೆಯಲ್ಲಿ ನನ್ನ ರಂಪಾಟ, ಅಕ್ಕನ ಜೊತೆಯ ಧ್ಯೆನಂದಿನ ಜಗಳಗಳು (ಆಗೆ ಸುಮ್ಮನೇ), ನನ್ನ ತಂದೆ ತಾಯಿಗೆ ನನ್ನನು ಹೊರಗೆ ಕಳುಹಿಸಲು ಕಾರಣವಾಯಿತು. ಅಂತು ಇಂತು ನವೋದಯ ಎಂಬ ಶಾಲೆಗೆ ಸರಿಯಾಗಿ ಆಯ್ಕೆಯಾದೆ(6ನೇ ತರಗತಿಯಲ್ಲಿ). ಅಲ್ಲಿಗೆ ಮುಗಿಯಿತು ನನ್ನ ಜೀವನದ ಒಂದು ಘಟ್ಟ, ಅಲ್ಲಿಂದ ಶುರುವಾಯಿತು ನನ್ನ ಹಾಸ್ಟೆಲ್ ಜೀವನ, ಅದು ಇನ್ನೂ ಮುಗಿದಿಲ್ಲ ಬಿಡಿ. ಆದರೂ ನಾನು ಅಲ್ಲಿಗೆ ಹೋಗದೆ ಇದ್ದಿದ್ದರೇ ಕೆಲವು ಅಮೂಲ್ಯವಾದ ನೆನಪುಗಳನ್ನು ಮಿಸು ಮಾಡ್ಕೊಂತ ಇದ್ದೆ. ನೀವೇನೆ ಹೇಳಿ ಫ್ರೆಂಡ್-ಶಿಪ್ ನ ಮಹತ್ವ ಗೊತ್ತಾಗೋದು ಅಂತಹ ಪರಿಸ್ಥಿತಿಯಲ್ಲಿಯೆ. ನನ್ನ ಕೆಲವು ಸ್ನೇಹಿತರ ಸ್ನೇಹದಿಂದ ಅಲ್ಲಿ ಒಗ್ಗಿಕೊಳ್ಳುವುದಕ್ಕೆ ಸಾಧ್ಯವಾಯಿತು. ಅಲ್ಲಿಂದ ತಿಳಿದೆ ತಂದೆ, ತಾಯಿ, ಅಕ್ಕರಂತೆ ಸ್ನೇಹಿತರು ಅತಿ ಮುಖ್ಯ ಎಂದು. ಈಗಲೂ ಆ ನನ್ನ ಹಳೆಯ ಸ್ನೇಹಿತರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ಆ ದಿನಗಳಲ್ಲಿ ಕಾಡುತಿದ್ದ ಮನೆಯ ನೆನಪು, ಅದನ್ನು ಮರೆಯಲು ನನ್ನ ಪ್ರಯತ್ನ, ಸ್ನೇಹಿತರ ಜೊತೆ, ಈಗ ನೆನಸಿಕೊಳ್ಳಲು ನನಗೆ ಹುಳಿದಿರುವ ಕೆಲವು ಅವಿಸ್ಮರಣೀಯ ನೆನಪುಗಳು. ನನ್ನ ಕೆಲವು ಅನುಭವಗಳಿಗೆ ಅಕ್ಷರ ರೂಪ ಕೊಡಲು ಪ್ರಯತ್ನ ಪಟ್ಟೆ. ನಿಮ್ಮಲ್ಲು ಯಾರದರು ಹಾಸ್ಟೆಲ್ ನಲ್ಲಿ ನನ್ನ ತರಹ ಜೀವನ ಸಾಗಿಸಿರುವವರಿದ್ದೀರ? ನಿಮ್ಮ ಅನಿಸಿಕೆಗಳನ್ನು ನನ್ನ ಹತ್ತಿರ ಹಂಚಿಕೊಳ್ಳುತ್ತೀರ ಎಂದು ನಂಬಿದ್ದೇನೆ.

  • ನೆನಪುಗಳು...
~.~
  • lgnandan ರವರ ಬ್ಲಾಗ್
  • Login or register to post comments
  • 983 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2008 - 3:05am — kalpana

ಉ: ತಾರೆ ಝಮೀನ್ ಪರ್........

kalpana's picture

ನಂದನ್,
ಹಲವು ಸಾರಿ ನಾನೂ ನನ್ನ ಮಗನನ್ನು ಒಂದೆರಡು ವರ್ಷ ಹಾಸ್ಟೆಲ್ನಲ್ಲಿಟ್ಟು ಓದಿಸಿದರೆ ಹೇಗೆ ಎಂದು ಯೋಚಿಸಿದ್ದೇನೆ. ಮುಖ್ಯ ಅವನಿಗೆ ಶಿಸ್ತು, ಜವಾಬ್ದಾರಿ, ಸ್ವಲ್ಪ ಬರ್ಲಿ ಅಂತ. ಕೆಲವು ಸ್ನೇಹಿತರು ಅವರ ಮಕ್ಕಳನ್ನು ಹೀಗೆ ಕಳುಹಿಸಿ, ಮಕ್ಕಳಲ್ಲಿ ಒಳ್ಳೆಯ ಮಾರ್ಪಾಡಾಗಿದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಕಲಿಯದ್ದು ಅಲ್ಲೇನು ಕಲಿತಾರು ಅಂತ ಮೂಗು ಮುರಿದಿದ್ದಾರೆ. ನನಗೆ ನನ್ನ ಮಗ ಅಲ್ಲಿ ಹೋಗಿ ನಂತರ ನನ್ನನ್ನು ದ್ವೇಷಿಸಲು ಶುರು ಮಾಡಿದರೆ, ನಾನು ಅವನ ಪ್ರೀತಿ ಕಳೆದುಕೊಳ್ಳುತ್ತೀನೇನೋ ಎಂಬ ಭಯ. ನೀವೆನಂತೀರ? ನಿಮಗೆ ನಿಮ್ಮನ್ನು ಚಿಕ್ಕವಯಸ್ಸಿನಲ್ಲಿ ದೂರ ಕಳಿಸಿದ್ದರ ಬಗ್ಗೆ ಮನೆಯವರಲ್ಲಿ ಕೋಪವವಿದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 3:24am — lgnandan

ಉ: ತಾರೆ ಝಮೀನ್ ಪರ್........

lgnandan's picture

ಒಂದು ರೀತಿಯಲ್ಲಿ ಕೋಪ, ಹೇಳುಬೇಕು ಎಂದರೆ ಈ ವಿಷಯದ ಬಗ್ಗೆ ನನ್ನ ನಿಲುವು ದ್ವಂದ. ಎಕೆಂದರೆ ಆ ನನ್ನ ಮೊದಲನೆ ದಿನಗಳಲ್ಲಿ ನನ್ನ ಅಪ್ಪನ ಬಗ್ಗೆ ಕೊಪ ಬರುತಿತ್ತು. ಅವರೇ ನನ್ನನ್ನು ಶತಾಯುಗತಾಯ ಅಲ್ಲಿಯೆ ಓದಬೇಕೆಂದು ಅಂದುಕೊಂಡವರು. ಅವರೂ ನನ್ನ ಭವಿಷ್ಯದ ಬಗೆಯೆ ಯೋಚಿಸಿರುತ್ತಾರೆ, ಆದರೆ ಆ ಸಮಯದಲ್ಲಿ ನಮಗೆ ಅರ್ಥವಾಗುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 10:43am — vikashegde

ಉ: ತಾರೆ ಝಮೀನ್ ಪರ್........

vikashegde's picture

ನನ್ನ ಪ್ರಕಾರ ಮಕ್ಕಳು ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ಲಿನಲ್ಲಿ ಇರಬೇಕು. ಅಲ್ಲಿರುವಾಗಲೇ ಹೊರಜಗತ್ತಿನ ಪರಿಚಯ, ವಿವಿಧ ಜವಾಬ್ದಾರಿಗಳು, ಗೆಳೆತನ, ಹೊಂದಾಣಿಕೆ ಹೀಗೆ ಹತ್ತು ಹಲವಾರು ವಿಷಯಗಳಿಗೆ ಚೆನ್ನಾಗಿ ತೆರೆದುಕೊಳ್ಳಲಾಗುತ್ತದೆ. ಅದು ಒಂದು ರೀತಿ ಗೋಲ್ಡನ್ ಲೈಫೇ ಹೌದು. ಆದರೆ ಸಣ್ಣ ವಯಸ್ಸಿನಲ್ಲೇ ಹಾಸ್ಟೆಲಿನಲ್ಲಿ ಬಿಡುವುದು ಸರಿಯಲ್ಲ ಎಂದು ನನ್ನನಿಸಿಕೆ. ಕಾಲೇಜು ಹಂತಕ್ಕೆ ಬಂದ ಮೇಲೆ ಒ.ಕೆ.

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 1:00am — lgnandan

ಉ: ತಾರೆ ಝಮೀನ್ ಪರ್........

lgnandan's picture

ನನ್ನ ಅಭಿಪ್ರಾಯವು ಅದೇ. ಯಾವ ಯಾವ ವಯಸ್ಸಿನಲ್ಲಿ ಯಾರ ಯಾರ ಅಗತ್ಯ ಇರುವುದೋ ಅವರ ಸಾಮಿಪ್ಯ ನಮ್ಮಗೆ ಬಲು ಮುಖ್ಯ. ಪ್ರತಿಕ್ರಿಯೆ ನೀಡಿದ್ದಕ್ಕೆ ದನ್ಯವಾದಗಳು.
- ನಂದನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೀತಿ..........?
  • ತಾಯಿಯೇ ದೇವರು..
  • ಹೊಸ ಅಂಗಿ
  • ನಿನ್ನ ನೆನಪು..."
  • ಗೆಳೆಯನ ಫ್ರೆಂಡ್ಸ್
Syndicate content

ಲೇಖಕರು

lgnandan's picture

ಪೂರ್ಣ ಹೆಸರು
ನಂದನ್

ಪರಿಚಯ

ನಾನು ಇಂಜಿನಿಯರಿಂಗ್ ವಿದ್ಯಾರ್ಥಿ. ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸ್ಯೆನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಾಂಗ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬಾನೇ ಅಭಿಮಾನ. ಆ ಅಭಿಮಾನ ನನ್ನ ಬದುಕಿಗೊಂದು ಅರ್ಹತೆ. ಕನ್ನಡದ ಕಾದಂಬರಿಗಳು, ಲೇಕನಗಳನ್ನು ಓದುವ ಹವ್ಯಾಸ. ಆಗಾಗೇ ಮನಸ್ಸಿಗೆ ತೋಚಿದ್ದನ್ನು ಬರೆಯುತ್ತಿರುತ್ತೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator