ಹಣ ಅಂದ್ರೆ ಏನು?
"ವ್ಯಾಪಾರ" ಮೊದಲ? "ಹಣ" ಮೊದಲ? ( ಹಣ ಅಂದ್ರೆ ಏನು? )
ನಮ್ಮ ದಿನ ನಿತ್ಯದ ಒಡನಾಟದಲ್ಲಿ ಮೊದಲು ಬಂದಿದ್ದು, ಹಣವೂ ಅಲ್ಲ, ವ್ಯಾಪಾರವೂ ಅಲ್ಲ. ಮೊದಲು ಹುಟ್ಟಿದ್ದು ಅವಶ್ಯಕತೆ,
* ಅವಶ್ಯಕತೆಯಿಂದ - ಅನಿವಾರ್ಯತೆ,
* ಅನಿವಾರ್ಯದಿಂದ - ಅವಲಂಬನೆ,
* ಅವಲಂಬನೆಯಿಂದ - ಪರಸ್ಪರ ಸಹಬಾಳ್ವೆ,
* ಸಹಬಾಳ್ವೆಯಲ್ಲಿಯೇ - ಒಂದು ಸ್ಪರ್ದೆ.
* ಈ ಸ್ಪರ್ದೆಯೇ - ವ್ಯಾಪಾರ.
* ವ್ಯಾಪಾರಕ್ಕೆ ಅನುವಾಗೋದಕ್ಕೆ ಹುಟ್ಟಿದ ಹೊಸ ಅಂಶವೇ "ಹಣ".
ಉದಾಹರಣೆಗೆ,
* ಮೊದ್ಲು ಮನುಷ್ಯನಿಗೆ ಬೇಕಿದ್ದು ತಿನ್ನೋಕೆ ಒಂದಿಷ್ಟು ಆಹಾರ, ಇದು ಅವಶ್ಯಕತೆ. ತಿನ್ನೋಕೇ ಬೇಕಾದ ಎಲ್ಲಾ ಉತ್ಪನ್ನಗಳನ್ನೂ ಒಬ್ಬನೇ ವ್ಯಕ್ತಿಯಿಂದ ಅಥ್ವ ಒಂದೇ ಕುಟುಂಬದಿಂದ ಪೂರೈಕೆ ಮಾಡ್ಕೊಳ್ಳೊಕ್ಕೆ ಹಾಗ್ತಿರ್ಲಿಲ್ಲ.
* ಅಕ್ಕಿಯಿದ್ದವ್ನತ್ರ ಗೋದಿ ಇರ್ತಿರ್ಲಿಲ್ಲ. ಗೋದಿ ಇದ್ದವ್ನತ್ರ ತರ್ಕಾರಿ ಇರ್ತಿರ್ಲಿಲ್ಲ. ಈಗ ಪರಸ್ಪರ ಸಹಕಾರ ಅನಿವಾರ್ಯವಾಯ್ತು. ಅಕ್ಕಿಯಿದ್ದವ್ನು ಒಂದಿಷ್ಟು ಅಕ್ಕಿ ಕೊಟ್ಟು ಅದಕ್ಕೆ ಬದಲಾಗಿ ಸ್ವಲ್ಪ ಗೋದಿ ಇರೋವ್ನತ್ರ ಗೋದಿಯನ್ನ, ತರ್ಕಾರಿಯವ್ನತ್ರ ತರ್ಕಾರಿಯನ್ನ ತೊಗೋಂಡ.
* ಇದೇ ತರ ಉಳ್ದವ್ರು ಸಹ ತಮ್ಮ ಉತ್ಪನ್ನಗಳನ್ನ ಇತರರ ಉತ್ಪನ್ನಗಳೊಂದಿಗೆ ಅವಶ್ಯಕತೆಗೆ ತಕ್ಕಂತೆ ಕೊಟ್ಟು ತಗೋಳ್ಳೋ ವ್ಯವಸ್ಥೆ ಸೃಷ್ಠಿ ಆಯ್ತು. ಈ ರೀತಿ ಪರಸ್ಪರ ಒಬ್ಬರಿಗೊಬ್ರು ಅವಲಂಬಿತವಾದ್ರು.
* ಈ ರೀತಿಯ ಪರಸ್ಪರ ಸಹಕಾರದ ಅನಿವಾರ್ಯತೆಯ ಅವಲಂಬನೆಯನ್ನೇ ನಾನು ಸಹಬಾಳ್ವೆ ಅಂತ ಕರೆದದ್ದು.
* ಈ ಸಹಬಾಳ್ವೆ ಹೀಗೇ ವ್ಯವಸ್ಥಿತವಾಗಿ ಸಾಗ್ತ ಇತ್ತು. ಜನಸಂಖ್ಯೆ ಹೆಚ್ಚಾಯ್ತು, ಉತ್ಪನ್ನಗಳ ಉತ್ಫಾದನೆ ಹಾಗೂ (ಕ)ಬಳಕೆ ಎರ್ಡರ ಪ್ರಮಾಣವೂ ಹೆಚ್ಚಾಯ್ತ ಬಂತು. ಮುಂದೆ ಇದರಲ್ಲಿ ಪರಸ್ಪರ ಸ್ಪರ್ಧೆ ಏರ್ಪಟ್ತು.
* ಈ ಸ್ಪರ್ಧೆಯನ್ನೇ ನಾನು ವ್ಯಾಪಾರ ಅಂದಿದ್ದು. ಆದ್ರೆ ಈ ಹೊಸ ವ್ಯಾಪಾರದ ವ್ಯವಸ್ಥೆಯಲ್ಲಿ ಒಂದಿನ ಒಂದು ಗೊಂದಲ ಉಂಟಾತು. ಹೇಗೆ?
* ಅಕ್ಕಿ, ಗೋದಿ, ತರ್ಕಾರಿ ಅಥ್ವಾ ಇನ್ನಾವುದೇ ಉತ್ಪನ್ನವಾಗಿರ್ಬೌದು, ಇವುಗಳನ್ನ ಕೊಡು-ತಗೋಳ್ಳೋವಾಗ, ಇವುಗಳ ಅಳತೆಯ ಪ್ರಮಾಣದಲ್ಲಿ, ಮೌಲ್ಯದ ವಿಷಯದಲ್ಲಿ, ಸಾಕಾಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ವು. ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಯ ಅವಶ್ಯಕತೆ ಇದೆ ಅನ್ನಿಸ್ತು. ಈ ಹೊಸ ಬೆಳವಣಿಗೆಯ ಪ್ರಕಾರ, ಪರಸ್ಪರರು ನೇರ್ವಾಗಿ ತಮ್ಮ ತಮ್ಮ ಉತ್ಪನ್ನಗಳನ್ನ ಅದಲು-ಬದಲು ಮಾಡ್ಕೊಳ್ಳೊದರ ಬದಲು, ಪ್ರತೀ ಉತ್ಪನ್ನಗಳಿಗೆ ಒಂದಿಷ್ಟು ಮೌಲ್ಯ ನಿಗದಿ ಮಾಡಿದ್ರು, ಈ ಮೌಲ್ಯವನ್ನ ಅಳತೆ ಮಾಡ್ಲಿಕ್ಕೆ ಬಂದ ಮತ್ತೊಂದು ಹೊಸ ವ್ಯವಸ್ಥೆಯೇ "ಹಣ".
* ವ್ಯಾಪಾರದಿಂದ ಹಣ, ಹಣದಿಂದ ಮತ್ತೋಂದಿಷ್ಟು ಹಣ. ಇದೆಲ್ಲಕ್ಕೆ ಅನುಕೂಲವಾಗುವಂತೆ ಒಂದು ಮಾರುಕಟ್ಟೆ.
ಇನ್ನೂ ಹೆಚ್ಚಿನ ಓದಿಗೆ ಆಸಕ್ತಿ ಇದ್ದಲ್ಲಿ ಏನಪ್ಪಾ ಇದು? ರೂಪಾಯಿಗೇನೇ ಬೆಲೆ ಕಟ್ಟೋದಾ! ಗೆ ಬೇಟಿ ನೀಡಿ.ಅಥ್ವ ನಿಮ್ಮ ಪ್ರತಿಕ್ರಿಯೆಗಳಲ್ಲಿ ವಿಷ್ಯದ ಆಸಕ್ತಿ ಗಮನಿಸಿ, ನಾನೇ ಅದನ್ನ ಇಲ್ಲಿಗೆ ತಂದು ಪ್ರಕಟಿಸುವೆ.
- lodyaashi's blog
- Login or register to post comments
- 151 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: