(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ,...
"ಲೋಹಿತಂತ್ರಾಂಶ" ಈ ಹೊಸ ತಂತ್ರಾಂಶದ ಹೆಸರು.
"ಲೋಹಿತಂತ್ರಾಂಶ" ಈ ಹೊಸ ತಂತ್ರಾಂಶದ ಹೆಸರು.
ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ".
ಗಣಕದಲ್ಲಿ ಕನ್ನಡವನ್ನ ಬಳಸಲು ಈಗಾಗಲೇ ಬರಹ ಹಾಗೂ ನುಡಿ ತಂತ್ರಾಂಶಗಳು ಸಾಕಷ್ಟು ಜನಪ್ರಿಯವಾಗಿವೆ. ಇದೇ ಸಾಲಿನಲ್ಲಿ ಇನ್ನೊಂದು ಹೊಸ ಸೇರ್ಪಡೆ ಈ ಲೋಹಿತಂತ್ರಾಂಶ.
ಯಾಕಪ್ಪಾ ಗೌಡ ಇನ್ನೊಂದು ಹೊಸ ತಂತ್ರಾಂಶ? ಎಂದು ಪ್ರಶ್ನಿಸಿದರೆ, ನನ್ನ ಬಳಿ ಹೆಚ್ಚೇನು ಸಮಾಜಾಯಿಷಿ ಸಿದ್ದವಿಲ್ಲ.
ಇದು ಕೇವಲ ಆಸಕ್ತಿಯಿಂದ ಆರಂಭಿಸಿದ project. ಬ್ಲಾಗ್ ಸ್ನೇಹಿತರ ಸಲಹೆ ಹಾಗೂ ಪ್ರೋತ್ಸಾಹದ ಜೊತೆಗೆ ನನ್ನ ಹಲವು ರಾತ್ರಿಗಳ ನಿದ್ದೆ ಹಾಗೂ ಕೆಲವು ವಾರಾತ್ಯಗಳ ಸಂಪೂರ್ಣ ಅರ್ಪಣೆಯಿಂದ ಈ ತಂತ್ರಾಂಶ ಇಷ್ಟರ ಮಟ್ಟಿಗೆ ಸಿದ್ದವಾಗಿದೆ.
ಇದನ್ನು ಉಚಿತ ತಂತ್ರಾಂಶವನ್ನಾಗಿಸಲು ಇಚ್ಚಿಸುತ್ತಿದ್ದೇನೆ.
ಲೋಹಿತಂತ್ರಾಂಶದ ವಿಶೇಷತೆಗಳು
೧. ಒಮ್ಮೆಗೇ ಅನೇಕ ಕಡತಗಳನ್ನ ತೆರೆದು ಕೊಳ್ಳಬಹುದು. ಪ್ರತೀ ಕಡತವೂ ಒಂದು ಹೊಸ Tab ನಲ್ಲಿ ತೆರೆದುಕೊಳ್ಳುತ್ತದೆ.
೨. LINUX ನಲ್ಲಿಯೂ ಈ ತಂತ್ರಾಂಶವನ್ನ ಬಳಸ ಬಹುದು.
೩. ಬರಹ ಹಾಗೂ ನುಡಿ, ಎರ್ಡೂ ಮಾದರಿಯ ಕೀಲಿಮಣೆ ಯಲ್ಲಿ ಬರೆಯ ಬಹುದು.
೪. ಕಡತಗಳನ್ನ PDF ಆಗಿಯೂ ಉಳಿಸಿ ಕೊಳ್ಳ ಬಹುದು
೫. ಪದಪೂರ್ತಿ ಸಹಾಯ (auto - completion) ವಿರುತ್ತೆ.
೬.ಅಕ್ಷರಗಳನ್ನ ಅಲಂಕರಿಸ ಬಹುದು, ಹಾಗೆ ಅಲಂಕರಿಸಿದ ಕಡತಗಳನ್ನ HTML ಆಗಿ ಉಳಿಸಿಕೊಳ್ಳ ಬಹುದು
೭ ಎಲ್ಲಾ ಕಡೆ ಸಂಪೂರ್ಣವಾಗಿ ಕೇವಲ ಯೂನಿಕೋಡ್ (UTF-16) ಮಾತ್ರ ಬಳಸಲಾಗಿದೆ
೮. ANSI ಕನ್ನಡವನ್ನ ಬೆಂಬಲಿಸಲಾಗಿದೆ. (ಅಂದರೆ ಬರಹದ BRH ಕಡತಗಳನ್ನ ತೆರೆಯಬಹುದು)
೯. Table ಗಳನ್ನ, ಚಿತ್ರಗಳನ್ನ ಸೇರಿಸ ಬಹುದು.
ವಿಶೇಷತೆಗಳ ಸಂಕ್ಷಿಪ್ತ ವಿವರಣೆ
LINUX ಬಳಕೆದಾರರು ಸಹ ಈ ತಂತ್ರಾಂಶವನ್ನ ಬಳಸಬಹುದು. ನಿಮ್ಮ LINUX ಗೆ ತಕ್ಕ ಭಿನ್ನ package ನೀಡಲಾಗುವುದು.
ಕೆಲವರು "ಬರಹ" ದ ಮಾದರಿಯನ್ನ, ಮತ್ತೆ ಇನ್ನು ಕೆಲವರು "ನುಡಿ" ಮಾದರಿಯನ್ನ ಅನುಸರಿಸುತ್ತಾರೆ. ಎರ್ಡೂ ಮಾದರಿಯ ಕೀಲಿ ಮಣೆ ಸಾಕಷ್ಟು ಪ್ರಚಾರ ದಲ್ಲಿದೆ. ಆದ್ದರಿಂದಲೇ ಎರ್ಡೂ ಮಾದರಿಯ ಮಣೆಗಳನ್ನ ಅಳವಡಿಸಲಾಗಿದೆ.
ನೀವು ಕೀಲಿಮಣೆ ಮಾದರಿಯನ್ನ switch ಮಾಡಿಕೊಳ್ಳಲು, ಮೇಲೆ ನೀಡಿರುವ "ಕಗಪ" ಅಥವ "ಕ್" ಎಂದಿರುವ ಗುಂಡಿಯನ್ನ ಒತ್ತಿ. ನಡುವೆ ಯಾವುದೇ ಗಳಿಗೆಯಲ್ಲಿ ನಿಮಗೆ ಬೇಕೆನಿಸಿದಾಗ ಬದಲಿಸಿಕೊಳ್ಳ ಬಹುದು.
PDF ಕಡತಗಳು ತುಂಬಾ portable, ಈ ಬಗ್ಗೆ ನಿಮಗೂ ತಿಳಿದಿರುತ್ತೆ, ಈ ರೀತಿಯ PDF ಕಡತಗಳನ್ನ ರಚಿಸಲು, ನೀವು ಮೇಲೆ ನೀಡಿರುವ "PDF" ಗುಂಡಿಯನ್ನ ಒತ್ತಿ. ಅದರಲ್ಲಿ ಹೊಸ ಕಡತದ ಒಂದು ಹೆಸರನ್ನ ಆಯ್ಕೆ ಮಾಡಿ. ನಂತರ "OK"
ಒತ್ತಿದರೆ ಸಾಕು ನಿಮ್ಮ PDF ಕಡತ ಸಿದ್ದ.
ಪದಪೂರ್ತಿ ಸಹಾಯ, ಏನಿದು ಅಂತೀರ? ಒಂದು ಉದಾಹರಣೆ ಕೊಡ್ತೀನಿ.
ನೀವು ಈಗ " ಪ್ರದರ್ಶನ" ಎಂದು ಬರೆಯಲು ಇಚ್ಚಿಸುವಿರಿ ಎಂದು ಇಟ್ಟು ಕೊಳ್ಳಿ. ಅದಕ್ಕೆ ನೀವು ಮೊದಲು "ಪ್ರ" ಎಂದು ("pra") ಬರೆಯುತ್ತೀರಿ, ಆಗ, ಕೂಡಲೇ "ಪ್ರ" ಅಕ್ಷರದ ಮುಂದೆ ನಿಮಗೆ ಒಂದು ಸಹಾಯ ಕಿಡಕಿ ತೆರೆಯುತ್ತೆ. ಅದರಲ್ಲಿ "ಪ್ರ" ಅಕ್ಷರದಿಂದ ಆರಂಬವಾಗುವ ಅನೇಕ ಪದಗಳನ್ನ ಪಟ್ಟಿ ಮಾಡಲಾಗಿರುತ್ತೆ. ಆ ಪಟ್ಟಿಯಲ್ಲಿ "ಪ್ರದರ್ಶನ" ಎಂಬ ನಿಮ್ಮ ಆಯ್ಕೆ ಕೂಡಲೇ ಕಂಡು ಬಂದಲ್ಲಿ ಆ ಪದವನ್ನ high light ಮಾಡಿ ಕೊಳ್ಳಿ, Up ಅಥವ Down arrow ಕೀಲಿಯನ್ನ ಒತ್ತಿ.
ನಂತರ Tab ಅಥ್ವ Enter ಕೀಲಿಯನ್ನ ಒತ್ತಿ. ಈಗ "ಪ್ರದರ್ಶನ" ಪದ ಕೂಡಲೇ ಬರುತ್ತೆ. ಪ್ರದರ್ಶನ ಅಲ್ಲದೆ, ಬೇರೆ ಪದಗಳು ಬೇಕು ಅನ್ನಿಸಿದರೆ, ಸುಮ್ಮನೆ ಬರೆಯುತ್ತ ಹೋಗಿ, ಹತ್ತಿರದ ಪದಗಳ ಪಟ್ಟಿ ತಾನಾಗೆ ತೆರೆಯುತ್ತೆ, ಬೇಕೆಂದರೆ ಆಯ್ಕೆ ಮಾಡಿ ಇಲ್ಲ ಅಂದರೆ ನಿಮ್ಮ ಪಾಡಿಗೆ ನೀವು ಬರೆಯುತ್ತಾ ಹೋಗಿ.
ಅಕ್ಷರಗಳನ್ನ ಅಲಂಕರಿಸುವುದರ ಬಗ್ಗೆ ನಿಮಗೇ ತಿಳಿದಿರುತ್ತೆ, ಅಲಂಕರಿಸಿದ ಪಠ್ಯವನ್ನ HTML ಹಾಗಿ ಉಳಿಸಿ ಕೊಳ್ಳಿ. HTML ಹಾಗೂ ಸಂಪೂರ್ಣ ಯೂನಿಕೋಡ್, ಈ ಎರ್ಡು ಗುಣಗಳ ಪ್ರಭಾವದಿಂದ ನಿಮ್ಮ ಕಡತವನ್ನ ಬೇರೆ ಯಾವುದೇ ಕಂಪ್ಯೂಟರ್ನಲ್ಲಿ FIREFOX ಅಥ್ವ INTERNET EXPLORERಅಥ್ವ google chroome ಮುಂತಾದ ಬ್ರೌಸರ್ ಗಳಲ್ಲಿ ಸುಲಭವಾಗಿ ತೆರೆಯ ಬಹುದು.
ಬರಹದಲ್ಲಿ ಬರೆದು ಉಳಿಸಿಕೊಂಡ BRH ಕಡತಗಳನ್ನ ತೆರೆದು, ಕನ್ನಡ ಯೂನಿಕೋಡ್ ಗೆ ತರ್ಜುಮೆ ಮಾಡಬಹುದು.
ಸದ್ಯಕ್ಕೆ ಇಷ್ಟು ಮಾಹಿತಿ ಸಾಕು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ತಿಳಿಸುವೆ. ಬ್ಲಾಗ್ ಮಿತ್ರರಾದ ಸಂದೀಪ್ ಶೆಟ್ಟಿ, ಶ್ರೀಹರ್ಷ ಸಾಲಿಮಠ್ ಹಾಗೂ ಸಾತ್ವೀಕ್ ಎಲ್ಲರಿಗೂ ನನ್ನ ವಂದನೆಗಳು.
ಸಂಪದದಲ್ಲಿ ಚಿತ್ರಗಳನ್ನ ಸೇರಿಸಲಾಗುತ್ತಿಲ್ಲ. ನನ್ನ ಬ್ಲಾಗಿನಲ್ಲಿ ಚಿತ್ರಗಳನ್ನ ಗಮನಿಸಿ
ಹೆಚ್ಚಿನ ಆಸಕ್ತಿ ಯಿರುವವರು, ನನ್ನನ್ನ ಈ ಕೆಳಕಂಡ ವಿಳಾಸದಲ್ಲಿ ತಲುಪ ಬಹುದು.
-
lohith.ds@gmail.com
lodyaashi@gmail.com
http://bennemasaladose.blogspot.com/
- lodyaashi's blog
- Login or register to post comments
- 1154 ಹಿಟ್ಸ್




ಪ್ರತಿಕ್ರಿಯೆಗಳು