ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › Lokeshgowda ರವರ ಬ್ಲಾಗ್

ನೇಗಿಲು

ನೇಗಿಲ ಯೋಗಿಗೆ ನೇಗಿಲೇ ಆಧಾರ

ಕನ್ನಡತನ

August 10, 2008 - 8:40pm — Lokeshgowda
kannadamathe.jpg

ಮಾತೃ ಭಾಷೆ ಪ್ರೇಮ ಹುಟ್ಟಿನಿಂದಲೇ ಬಂದಿರಬೇಕೇ ವಿನಃ ಇನ್ನೊಬ್ಬರಿಂದ ನೋಡಿ ಕಲಿಯುವಂತಹದ್ದಲ್ಲ. ನಮ್ಮ ಕನ್ನಡಿಗರು ಬೇರೆಯವರ ಹಾಗಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡವನ್ನು ಕಲಿಸುವುದಿಲ್ಲ. ಅವರ ಭಾಷೆಯನ್ನೆ ಕಲಿಯಲು ಪ್ರಯತ್ನಿಸುತ್ತಾರೆ. ಯಾವ ಭಾಷೆಯವರು ಬಂದರೂ ಅವರಿಗೆ ಮಣೆ ಹಾಕುತ್ತಾರೆ ಎಂದು ಗೊಣಗುವವರನ್ನು ನಿತ್ಯ ಒಂದಿಲ್ಲೊಂದು ಕಡೆ ನೋಡ್ತಾ ಇರ್‍ತಿವಿ.
ಇದಕ್ಕೆ ಏನೂ ಮಾಡಲಿಕ್ಕೆ ಆಗೋದಿಲ್ಲ. ಕನ್ನಡಿಗರು ಹೃದಯ ಶ್ರೀಮಂತರು. ಅಲ್ಲದೆ ಬುದ್ಧಿವಂತರು. ಎಲ್ಲಾ ಭಾಷೆಗಳನ್ನು ಕಲಿತು ಅರಗಿಸಿಕೊಳ್ಳುವಷ್ಟು ಸಾಮರ್ಥ್ಯ ಇರುವಂತಹವರು. ಕವಿರಾಜಮಾರ್ಗಕಾರ ತನ್ನ ಕೃತಿಯಲ್ಲಿ ಕನ್ನಡಿಗರು ಎಂತಹವರು ಎಂದರೆ, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದೆಲ್ಲಾ ಗುಣಗಾನ ಮಾಡಿರುವುದು ಇದಕ್ಕೆ ಸಾಕ್ಷಿ ಎಂತಲೂ ಹೇಳಬಹುದು.

ಎಲ್ಲಾ ಕನ್ನಡಿಗರ ಬಗ್ಗೆ ಮಾತನಾಡುವ ಬದಲು ಕನ್ನಡದ ಬಗ್ಗೆ ನಾನು ಹೇಗಿರಬೇಕು. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ? ಎಂದು ಪ್ರಶ್ನಿಸಿಕೊಳ್ಳುವವರು ಮಾತ್ರ ಕಡಿಮೆ. ಈ ಸಂದರ್ಭದಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿರುವ ನನಗೆ ನಾನು ಯಾವ ರೀತಿ ಕನ್ನಡ ಪ್ರೇಮಿ, ಅಪ್ಪಟ ಕನ್ನಡಿಗ ಅಂತ ಹೇಳಿಕೊಳ್ಳಬೇಕು ಎನ್ನಿಸುತ್ತಿದೆ.
ಮದರಾಸು ವಿಶ್ವವಿದ್ಯಾನಿಲಯದಲ್ಲೊಮ್ಮೆ ಕನ್ನಡ ವಿಭಾಗದ ರಾಷ್ಟ್ರೀಯ ವಿಚಾರಸಂಕಿರಣ ನಡೆಯುತ್ತಿತ್ತು. ಸಮಾರಂಭದಲ್ಲಿ ಕನ್ನಡ ಸಾಹಿತಿಗಳು ಸೇರಿದಂತೆ ತಮಿಳು, ತೆಲುಗು, ಹಿಂದಿ, ಸಂಸ್ಕೃತ ವಿದ್ವಾಂಸರು ಪಾಲ್ಗೊಂಡಿದ್ದರು. ಸಮಾರಂಭವನ್ನು ಉದ್ಘಾಟಿಸಿದ್ದು ಬೆಂಗಳೂರು ವಿಶ್ವವಿದ್ಯಾಲದ ಕುಲಪತಿ ತಿಮ್ಮಪ್ಪ ಅವರು. ಎಲ್ಲಾ ಭಾಷೆಗಳ ವಿದ್ವಾಂಸರು ಸಮಾರಂಭದಲ್ಲಿ ಹಾಜರಿದ್ದರಿಂದ ಅವರಿಗೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂಬ ಗೊಂದಲ ಕಾಡಿತ್ತು. ಕನ್ನಡನಾಡಿನಿಂದ ಹೊರಗೆ ಬಂದು ಕನ್ನಡ ಮಾತನಾಡುವ ಭಾಗ್ಯ ಬಂದಿದೆಯಲ್ಲ ಎಂದು ಹೆಮ್ಮೆ ಪಡುವ ಬದಲು ನನ್ನ ವಿದ್ವತ್ ಕೇವಲ ಕನ್ನಡಿಗರಿಗಷ್ಟೆ ಸೀಮಿತವಾಗಬಾರದು. ಎಲ್ಲರಿಗೂ ತಿಳಿಯಬೇಕು ಎಂಬುದು ಅವರ ನಿಲುವಾಗಿತ್ತು.
ಸಮಾರಂಭದಲ್ಲಿ ಅವರು ತೆಗೆದುಕೊಂಡ ನಿರ್ಧಾರಕ್ಕೆ ಮೆಚ್ಚಲೇಬೇಕು. ಯಾವ ಭಾಷೆಯಲ್ಲಿ ನನ್ನ ಭಾಷಣ ಆರಂಭಿಸಬೇಕು ಎಂದು ಸಭಿಕರನ್ನು ಕೇಳಿಕೊಂಡಿದ್ದು ಅವರ ದೊಡ್ಡಗುಣ ಎನ್ನಬೇಕು. ಅವರು ಕೇಳಿದರೂ ಕೆಲವರು ಕನ್ನಡದಲ್ಲಿ ಮಾತನಾಡಿ ಎಂದು ಹೇಳುವ ಧೈರ್ಯವಿರಲಿಲ್ಲ. ಕೆಲ ಕನ್ನಡ ದ್ರೋಹಿಗಳು ಇಂಗ್ಲಿಷ್, ಇಂಗ್ಲಿಷ್ ಎಂದು ಕಿರುಚಿಕೊಂಡರು.
ಈ ಸಂದರ್ಭದಲ್ಲಿ ನನ್ನ ಕೋಪ ನೆತ್ತಿಗೇರಿತ್ತು. ಒಂದೇ ಬಾರಿ ಎದ್ದು ನಿಂತು ಕನ್ನಡ ಕನ್ನಡ ಎಂದು ತಿಮ್ಮಪ್ಪನವರಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದು ಆಗ್ರಹಿಸಿದೆ. ಕೊನೆ ಘಳಿಗೆಯಲ್ಲಿ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿ ಅದರಲ್ಲಿ ಸ್ವಲ್ಪ ಇಂಗ್ಲಿಷ್ ಬಳಸಿ ಯಾವ ಭಾಷೆಯವರಿಗೂ ಅನ್ಯಾಯವಾಗದಂತೆ ನ್ಯಾಯ ಒದಗಿಸಿದರು. ಕೊನೆಯಲ್ಲಿ ಮಾತನಾಡಿದ ತಮಿಳು ಪ್ರೊಫೆಸರ್‍ ಒಬ್ಬರು, ನಮ್ಮ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ನಾವು ಎಲ್ಲೇ ಇರಲಿ ನಮ್ಮ ಭಾಷೆ, ನಾಡು ನುಡಿಯ ಬಗ್ಗೆ ಮರೆಯಬಾರದು ಎಂದು ಹೇಳಿ ನನ್ನ ಆಗ್ರಹವನ್ನು ಶ್ಲಾಘಿಸಿದರು.

ತಮಿಳು ಪ್ರತಿಭಟನೆಯಲ್ಲಿ ಕನ್ನಡದ ಘೋಷಣೆ ಕೂಗಿ ಎಲ್ಲರ ಹುಬ್ಬರಿಸುವಂತೆ ಮಾಡಿದ್ದೆ ಒಮ್ಮೆ. ಚೆನ್ನೈನಲ್ಲಿ ವಿವಿ ಅವರಣದಲ್ಲಿ ಕಾಲೇಜಿನ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿತ್ತು. ಎಲ್ಲರೂ ತಮಿಳಿನಲ್ಲಿ ಘೋಷಣೆ ಕೂಗುತ್ತಿದ್ದರು. ನಾನೇಕೆ ಕನ್ನಡದಲ್ಲಿ ಘೋಷಣೆ ಕೂಗಬಾರದು ಎಂದು ಭಾವಿಸಿದ ನಾನು, ಬೇಕೇ ಬೇಕು ನ್ಯಾಯ ಬೇಕು ಎಂದು ಶುರು ಮಾಡಿದೆ. ತಮಿಳು ವಿದ್ಯಾರ್ಥಿಗಳು ನನ್ನನ್ನೇ ಫಾಲೋ ಮಾಡಿದರು. ಕೊನೆಗೆ ಅವರು ಸಹ ಕನ್ನಡದಲ್ಲೇ ಘೋಷಣೆ ಕೂಗಲು ಪ್ರಾರಂಭಿಸಿದರು. ಕೆಲ ತಮಿಳು ಸ್ನೇಹಿತರು ಈಗ ಸಿಕ್ಕಿದರೂ ಬೇಕೇ ಬೇಕೆ ನ್ಯಾಯ ಬೇಕು ಎಂದು ನನ್ನನ್ನು ರೇಗಿಸುತ್ತಾರೆ.

ನಾವಿರುವುದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ. ಇಲ್ಲಿ ನಮ್ಮವರಿಗಿಂತ ಅನ್ಯಭಾಷಿಕರೇ ಜಾಸ್ತಿ. ನನಗೆ ತೆಲುಗು, ತಮಿಳು, ಹಿಂದಿ ಸ್ವಲ್ಪ ಸ್ವಲ್ಪ ಬರುತ್ತದೆಯಾದರೂ ಯಾವ ಭಾಷೆಯಲ್ಲಿ ವಿಳಾಸ ಕೇಳಿದರೂ ಅವನಿಗೆ ಮೊದಲು ಕನ್ನಡ ಕಲಿ. ಅಮೇಲೆ ನಿನ್ನ ವ್ಯವಹಾರ ಪ್ರಾರಂಭಿಸು ಎಂದು ಗದರಿಸಿದ ನಂತರವೇ ವಿಳಾಸ ಹೇಳುವುದು.
ನನಗೂ ಸಹ ಬೇರೆ ಭಾಷೆಗಳನ್ನು ಕಲಿಯಬೇಕು ಎಂಬ ಅಸಕ್ತಿ ಇದೆಯೋ ವಿನಹ ಕನ್ನಡದ ಬಗ್ಗೆ ಇರುವ ತಾತ್ಸಾರದಿಂದಲ್ಲ. ರಾಜ್ ಕುಮಾರ್‍ ಹೇಳಿರುವಂತೆ ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ........ಕನ್ನಡಾ........ಕನ್ನಡಾ......

ಕನ್ನಡವೇ ಸತ್ಯ..... ಕನ್ನಡವೇ ನಿತ್ಯ..... ಸಿರಿಗನ್ನಡಂ ಗೆಲ್ಗೆ, ಬಾಳ್ಗೆ

- ಲೋಕೇಶ್‌ಗೌಡ ಎಚ್‌.ಸಿ.

  • ಕನ್ನಡ
  • ಕನ್ನಡಿಗ
  • ಕರ್ನಾಟಕ
  • ಭಾಷಾ ಪ್ರೇಮ
  • ಮಾತೃಭಾಷೆ
~.~
  • Lokeshgowda ರವರ ಬ್ಲಾಗ್
  • Login or register to post comments
  • 178 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
  • ಕನ್ನಡ
  • ನನ್ನವರಿಗೆ ಕನ್ನಡ ಕಲಿಸಿದ್ದು
  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಕನ್ನಡ ತಮಿಳು ಕವಲುಗಳು ಹೀಗಾದವು!
Syndicate content

ಲೇಖಕರು

Lokeshgowda's picture

ಪೂರ್ಣ ಹೆಸರು
ಲೋಕೇಶ್‌ಗೌಡ

ಪರಿಚಯ

ನಾನು ಪತ್ರಕರ್ತ. ಸದ್ಯ ನಾನು ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಸುದ್ದಿ ವಾಚಕನಾಗಿ ಕೆಲಸ ಮಾಡುತ್ತಿದ್ದೇನೆ. ಮೂಲತಃ ನಾನು ಹಾಸನ ಜಿಲ್ಲೆ ಅರಕಲಗೂಡಿನ ಹೆಗ್ಗಡಿಹಳ್ಳಿ ಗ್ರಾಮದವನು. ಓದಿದ್ದು ಹುಟ್ಟೂರು ಹೆಗ್ಗಡಿಹಳ್ಳಿ, ಹಾಸನ, ಹುಲಿಕಲ್, ಕೊಣನೂರು ಮತ್ತು ಚೆನ್ನೈನಲ್ಲಿ. ಮೊದಲ ಕೆಲಸ ಸೂರ್ಯೋದಯ ದಿನಪತ್ರಿಕೆಯಲ್ಲಿ. ನಂತರ ಈ ಟಿವಿ ಕನ್ನಡದಲ್ಲಿ ದುಡಿದು ಸುವರ್ಣ ಚಾನೆಲ್‌ಗೆ ವಲಸೆ ಬಂದಿದ್ದೇನೆ. ಬರವಣಿಗೆ, ಸುದ್ದಿ ವಾಚನ, ವರದಿಗಾರಿಕೆ, ಕೃಷಿ ನನ್ನ ನೆಚ್ಚಿನ ಆಸಕ್ತಿ ಕ್ಷೇತ್ರಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಮೌನ ಎದೆ
    January 9, 2009 - 2:54pm
  • asuhegde
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:48pm
  • kadakolla05
    ಉ: ಉದ್ದ ಕಾಲಿನ ನೊಣ ೨
    January 9, 2009 - 2:45pm
  • kadakolla05
    ಉ: ಉದ್ದ ಕಾಲಿನ ನೊಣ ೨
    January 9, 2009 - 2:43pm
  • ASHOKKUMAR
    ಉ: ಶ್ರೀಪಡ್ರೆ ಬ್ಲಾಗ್ "ಜೀವಜಲ"
    January 9, 2009 - 2:38pm
  • veeravenki
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:37pm
  • veeravenki
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 2:32pm
  • Rakesh Shetty
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 2:28pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:26pm
  • asuhegde
    ಉ: ಉದ್ದ ಕಾಲಿನ ನೊಣ ೨
    January 9, 2009 - 2:24pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 171 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator