ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › maatumouna ರವರ ಬ್ಲಾಗ್

ಮನಸ್ಸಿನ ಮೌನ ಮಾತುಗಳು......ಕ(ವಿ)ತೆಯಾಗಿ

ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

December 2, 2008 - 10:15pm — maatumouna

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ. ನಾನು ಗಮನಿಸಿದಂತಹ ಸಂಗತಿಗಳನ್ನು ಹೇಳಲು ಇಷ್ಟಪಡುತ್ತೇನೆ ಅಥವಾ ಪ್ರಯತ್ನಪಟ್ಟಿದ್ದೇನೆ.

ನನಗನಿಸುವ ಮಟ್ಟಿಗೆ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ನಮ್ಮ ಹಿಂದೂ ಸಮಾಜಕ್ಕೆ ಇಂದು ತನ್ನನ್ನು ತಾನು ಪರಾಮರ್ಶಿಸಿಕೊಳ್ಳುವಂತಹ ಹೊಸ್ತಿಲಿಗೆ ಬಂದಿದೆ. ಈ ಮತಾಂತರವೆಂಬ ಭೂತ ನಮನ್ನ ಕಾಡ್ತಾ ಇದೆ ಅಂದರೆ ಅದರಲ್ಲಿ ನಮ್ಮ ದೌರ್ಬಲ್ಯಗಳ ಕೊಡುಗೆ ಕೂಡ ಇದೆ ಎಂದು ನನಗೆ ಅನಿಸುತ್ತದೆ. ಮತಾಂತರಿಗಳು [ ಅವರು ಯಾರೇ ಆಗಿರಬಹುದು ] ನಮ್ಮ ಸಮಾಜದಲ್ಲಿರುವ ಕೆಳವರ್ಗಕ್ಕೆ [ಪ್ರಕೃತಿಯ ದೃಷ್ಟಿಯಲ್ಲಿ / ದೇವರ ಸೃಷ್ಟಿಯಲ್ಲಿ ಕೆಳವರ್ಗ ಎನ್ನುವುದು ಇಲ್ಲದಿದ್ದರೂ ಬೇರೆ ಪದ ಹೊಳೆಯದೆ ಹಾಗೆ ಉಪಯೋಗಿಸಿದ್ದೇನೆ] / ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ತಮ್ಮ ಗುರಿಯನ್ನು ಇರಿಸಿಕೊಂಡಿದಾರೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರೂ ಮತಾಂತರ ಹೊಂದಿದ್ದರು ಅದು ಆಮಿಷಕ್ಕೊಳಗಾಗದೆ ಆಗಿರುವಂತಹದ್ದು. ಅಥವ ಅದು ಅವರ ಪ್ರಜ್ಞಾಪೂರ್ವಕ ನಿರ್ಧಾರವಾಗಿರಬಹುದು.

ಶತ ಶತಮಾನಗಳ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವಿಧಗಳಾಗಿ ವಿಂಗಡಿಸಿದ್ದು ಅವರು ಮಾಡುವ ಕೆಲಸಕ್ಕನುಗುಣವಾಗಿ ಅಷ್ಟೆ . ಕಾಲಕ್ರಮೇಣ ಈ ವರ್ಗಗಳು ಜಾತಿಗಳಾಗಿ, ಉಪಜಾತಿಗಳಾಗಿ ತಾನು ಶ್ರೇಷ್ಠ, ಮತ್ತೊಬ್ಬ ಕೀಳು ಎಂಬ ಭ್ರಮೆಗೊಳಗಾಗಿದ್ದು ಒಂದು ದುರಂತ. ಇನ್ನೂ ಅಸ್ಪ್ರುಶ್ಯತೆಯಂತಹ ಅಸಹ್ಯ ಪದ್ಧತಿ ಇದೆ ಎಂದರೆ ನಾವು ನಾಗರೀಕರಾಗಿ ವಿಕಾಸಹೊಂದಿದ್ದೀವ ಅಥವಾ ಅನಾಗರೀಕತೆಯತ್ತ ಮುಖ ಮಾಡಿದ್ದೇವಾ ? ಇಂತಹ ಪದ್ಧತಿಗಳು [ಇನ್ನೊಂದು ಉದಾಹರಣೆಯೆಂದರೆ ದೇವದಾಸಿಪದ್ದತಿ] ನಮ್ಮ ಧರ್ಮದ ದೌರ್ಬಲ್ಯಗಳಲ್ಲವೇ?

ಶ್ರೀಕೃಷ್ಣ " ವಸುದೈವ ಕುಟುಂಬಕಂ " ಅಂತ ಹೇಳಿದ. ವಿಶ್ವದಲ್ಲಿರುವ ಸಕಲ ಜೀವ ಜಂತುಗಳು ದೇವರ ಸೃಷ್ಟಿಯಲ್ಲಿ ಒಂದೇ. ಹಾಗಾದರೆ ನಾವೆಲ್ಲರೂ ಒಂದೇ ಎಂದು ಯಾಕೆ ಭಾವಿಸಬಾರದು. ಜಾತಿ ಪದ್ದತಿಯನ್ನು ಬೇರು ಸಮೇತ ಕೀಳೋದು ಅಷ್ಟು ಸುಲಭವಲ್ಲ ನಿಜ. ಈ ವಿಚಾರವಾಗಿ ಕ್ರಾಂತಿಯಾಗಲಿ ಅಂತ ನಿರೀಕ್ಷೆಸೋದು ತಪ್ಪಾಗುತ್ತೆ. ಆದರೆ ಈ ವಿಚಾರವಾಗಿ ಉದಾತ್ತ ಚಿಂತನೆಗಳು ನಡೆಯಬೇಕಿದೆ. ಮತಾಂತರವನ್ನು ವಿರೋಧಿಸುವ ಮೊದಲು ನಮ್ಮನು ನಾವು ತಿದ್ದಿಕೊಳ್ಳಬೇಕಿದೆ. ನಮ್ಮ ಸಮಾಜದ ವಿಚಾರವಂತರು, ಬುದ್ದಿಜೀವಿಗಳು, ಧರ್ಮದ ಬಗ್ಗೆ ಜ್ಞಾನವನ್ನು ಹೊಂದಿರುವವರು, ಮಠಗಳ ಮುಖ್ಯಸ್ಥರು ಜನರಲ್ಲಿ ಧರ್ಮದ ಬಗ್ಗೆ ಅರಿವನ್ನು, ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಬೇಕಿದೆ. ಮಠ ಮಾನ್ಯಗಳು ಒಂದು ಜಾತಿಯ ಶ್ರದ್ಧಾ ಕೇಂದ್ರಗಳಾಗದೆ ನಮ್ಮ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕೋಟ್ಯಾಂತರ ಹಣ ವೆಚ್ಚಮಾಡಿ ದೇವಸ್ಥಾನಗಳನ್ನು ಕಟ್ಟುವ ಬದಲು ದುರ್ಬಲ / ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಆ ಹಣವನ್ನು ವಿನಿಯೋಗಿಸುವುದು ಸೂಕ್ತ. ಜನರು vote bank ರಾಜಕೀಯಕ್ಕೆ ಬಲಿಯಾಗದೆ ನಾವು ದೂರ ಇಟ್ಟಿರುವವರು ನಮ್ಮವರೇ ಎಂದು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮನಸ್ಥಿತಿಯನ್ನ ಬೆಳೆಸಿಕೊಳ್ಳಬೇಕಿದೆ. ಆಗ ಮತಾಂತರ ಅಥವಾ ಇನ್ನ್ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಸಮಾಜಿಕ ಅಭದ್ರತೆಯನ್ನು ತರುವಂತಹ ಚಟುವಟಿಕೆಗಳ ಆಟ ನಮ್ಮಲ್ಲಿ ನಡೆಯುವುದಿಲ್ಲ ಎಂಬುದು ನನ್ನ ಆಶಯ.

  • ಚಿಂತನೆ
~.~
  • maatumouna ರವರ ಬ್ಲಾಗ್
  • Login or register to post comments
  • 253 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 2, 2008 - 11:47pm — savithru

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

savithru's picture

Quote:
ಶ್ರೀಕೃಷ್ಣ " ವಸುದೈವ ಕುಟುಂಬಕಂ " ಅಂತ ಹೇಳಿದ.

ಕೃಷ್ಣ ಹೇಳಿದ್ನ?! ಅಲ್ಲ ಅನಿಸುತ್ತೆ...ಇದು ಹಿತೊಪದೇಶದಲ್ಲಿ ( ಪಂಚತಂತ್ರ?!) ಬರುತ್ತೆ ಅಂತೆ.

ಅಯಂ ನಿಜ ಪರೋವೇತಿ ಗಣನಾಂ ಲಘು ಚೇತಸಾಂ
ಉದಾರ ಚರಿತಾನಾಂತು ವಸುದೈವ ಕುಟುಂಬಕಂ
(ಸಂಸ್ಕೃತ ಪೊಲೀಸರು ತಪ್ಪಿದ್ದಲ್ಲಿ ಸರಿಪಡ್ಸಬೇಕು!)

ಉದಾರ ಚರಿತರು ಇಡೀ ಭೂಮಿಯೇ ( ವಸುಧೆ) ಒಂದು ಕುಟುಂಬ ಅಂತ ಗಣಿಸುತ್ತಾರೆ ಅಂತ.

ಆದರೆ ಕೆಲ ವಾಸುದೇವನ ಭಕ್ತರು ಅದನ್ನ "ವಾಸುದೇವ ಕುಟುಂಬ" ಅಂತ ಅರ್ಥೈಸುತ್ತಾರೆ. ಇದರಿಂದನೇ ನಿಮಗ ಈ ಮಾತನ್ನ ಕೃಷ್ಣ ಹೇಳಿದ ಅನ್ನಿಸಿರಬಹುದು.

ಉಳಿದಂತೆ ನಿಮ್ಮ ಚಿಂತನಗಳು ಚೆನ್ನಾಗಿವೆ.

ಸವಿತೃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 3, 2008 - 12:12am — hamsanandi

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

hamsanandi's picture

ನಾನು ಸಂಸ್ಕೃತ ಪೊಲೀಸೇನೂ ಅಲ್ಲ Eye-wink

ಈ ಪದ್ಯ ಹಿತೋಪದೇಶದ್ದೇ ಅಲ್ಲವೇ? ಅನ್ನುವುದು ನನಗೆ ಸರಿಯಾಗಿ ತಿಳಿದಿಲ್ಲ. ಆದರೆ ಒಂದಷ್ಟು ದಿವಸಗಳ ಹಿಂದೆ ಇದರ ಬಗ್ಗೆ ಬರೆದಿದ್ದೆ:

ತನ್ನಂತೆ ಪರರು: http://sampada.net/blog/hamsanandi/28/01/2008/7227

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 11:59am — savithru

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

savithru's picture

ಹಂಸಾನಂದಿಯವರೇ ..

Quote:
ನಾನು ಸಂಸ್ಕೃತ ಪೊಲೀಸೇನೂ ಅಲ್ಲ

ಇದು ನಿಮಗಲ್ಲ.

ಸುಮ್ಮ ಸುಮ್ಮನೆ ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಇತರರ ಸಿಲ್ಲಿ ಸಿಲ್ಲಿ ( ಬರವಣಿಗೆಯಲ್ಲಿ ಆಗುವ ಸ್ಪೆಲ್ಲಿಂಗ್ ಮಿಸ್ಟೆಕ್ಸು ಎತ್ತಿ ತೋರಿಸುವವರ ಬಗ್ಗೆ. ತತ್ವಕ್ಕೆ / ಅರ್ಥಕ್ಕೆ ತಲೆಕೆಡಿಸೊಕೊಳ್ಲದೆ ಕೈ ಮೀರಿ ಆದ ಬರೀ ತಪ್ಪು ಪದಗಳಿಗೆ ತಲೆಕೆಡಿಸಿಕೊಳ್ಳುವವರ ಬಗ್ಗೆ.

ನಿಮ್ಮ ಪ್ರತಿಕ್ರಿಯೆಗೆ ನನ್ನೀ. ನಿಮ್ಮ ಬರಹವನ್ನು ಓದಿದೆ.
ಬಸವಣ್ಣನ "ಇವನಾರವ ಇವನಾರವ ಅನ್ನದಿರಯ್ಯ" ಅನ್ನೋ ವಚನವೂ ಇದೆ ದಾಟಿಯಲ್ಲಿ ಬರುತ್ತೆ.

ಬೆನಕರೆ ..

ಅದೆಲ್ಲಿ ಹೋದಿರಿ. ದಯವಿಟ್ಟು ಇಲ್ಲಿನ ಚರ್ಚೆ / ಬರಹಗಳಲ್ಲಿ ಭಾಗವಹಿಸಿ. ನಿಮ್ಮ ತಿಳಿವಳಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಇರಿ.

ಹೆಚ್ಚಿನ ವಿವರಣೆಗೆ ನನ್ನೀ.

ಸವಿತೃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 12:20pm — mahesha

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

mahesha's picture

ಮಾನ್ಯ ಸವಿತೃ ಅವರೇ

ಇದನ್ನು ಕೃಷ್ಣನು ಹೇಳಿದ್ದನೋ, ರಾಮನು ಹೇಳಿದ್ದನೋ ಇಲ್ಲವೇ ಮೊಹಮದ್ ಪೈಗಂಬರರು ಹೇಳಿದ್ದರೋ, ಯಾರು ಹೇಳಿದ್ದು ಎಂಬುದು ಈ ಲೇಖನದ ಮೂಲೋದ್ದೇಶಕ್ಕೆ ಹೇಗೆ ಸಂಬಂಧವೆಂದು ಅರಿಯುವುದು ತುಸು ಕಷ್ಟಸಾಧ್ಯ.

ಹಾಗೆ

ಇಲ್ಲೊಂದು ಸಂಸ್ಕೃತದ ಶ್ಲೋಕವನ್ನುಲ್ಲೇಖಿಸಿರುವುದನ್ನು ಪಾಂಡಿತ್ಯ ಪ್ರದರ್ಶನವೆಂದೂ ಕೆಲ ಅಲ್ಪರು ತಿಳಿಯುವ ಭಯವಿದೆಯಲ್ಲ.

ಇನ್ನೂ ಕೊನೆಯ ವಾಸುದೇವನ ಭಕ್ತರ ಮೇಲಣ ಟೀಕೆಗೆ ನಿಮ್ಮ ವಚನದ ಮೇಲಣ ಪರಮಾಸಕ್ತಿಗೂ ನಂಟು ಬೆಸುದು ಕಗ್ಗಂಟು ಮಾಡಿಕೊಳ್ಳುವ ಕೆಡುಜಾಣರೂ ಸಂಸ್ಕೃತ ಪೋಲೀಸರು ಇರಬಹುದಲ್ಲ.

ಕೃಷ್ಣನು ಹೇಳಿದನಿಂತೆಂಬೊಂದೇ ಒಂದು ಉಲ್ಲೇಖವು ಇಡೀ ಮೂಲಲೇಖನದ ಸಾರವೇ? ಹಾಗೆ ಅನ್ನಿಸಲಿಲ್ಲವೆನಗೆ.

ಕ್ಷಮಿಸಿರಿ ನನ್ನೀ ಅಲ್ಪತನವನ್ನು!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 1:31pm — savithru

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

savithru's picture

ಹಮ್........

ಮಹೇಶ ಗುರುಗಳೇ

'ಯಾರು ಹೇಳಿದರು' ಅಂತ ಅನ್ನೋದು ಈ ಬರಹದ ಮೂಲ ಆಶಯಕ್ಕಿಂತ ಸ್ವಲ್ಪ ಬೇರೆಯಾಗಿರಬಹುದು. ಇದನ್ನು ಬೇರೆ ಎಳೆಯಲ್ಲಿ ಚರ್ಚಿಸಬಹುದಿತ್ತು. ಕ್ಷಮೆಯಿರಲಿ.

ನಿಮಗೆ ನನ್ನ ಮಾತು ವಾಸುದೇವನ ಭಕ್ತರ ಮೇಲಿನ ಟೀಕೆ ಅಂತ ಅದೇಗೆ ಅನ್ನಿಸಿತೋ .... ನನಗಂತೂ ಅರ್ಥ ಆಗ್ತ ಇಲ್ಲ.
ಇನ್ನು ನನ್ನದು "ಕೇವಲ" ವಚನಗಳ ಮೇಲಷ್ಟೇ ಆಸಕ್ತಿ ಅಂತ ನಿಮಗೆ ಅನ್ನಿಸಿದರೆ ಅದಕ್ಕೆ ನಾನು ಏನೂ ಮಾಡಕ್ಕೆ ಆಗಲ್ಲ. ಅವರವರ ಭಾವಕ್ಕೆ ತಕ್ಕಂತೆ ಅಷ್ಟೆ ಅಂತ ಹೇಳಬಲ್ಲೆ.

ನಿಮ್ಮಲ್ಲಿ ಯಾರಾದರೂ ಉಪನಿಷತ್ತುಗಳ ಬಗ್ಗೆ , ವೇದಗಳ ಬಗ್ಗೆ, ಬರೆದು ನೋಡಿ... ನಾನಂತೂ ಆಸಕ್ತಿ ತೋರಿಸುತ್ತೇನೆ.

ಸರಿ ಈ ಚರ್ಚೆಯನ್ನು ಬೇರೆ ಕಡೆ ಮುಂದುವರಿಸೋಣ. ಇಲ್ಲಿ ಈ ಲೇಖನದ ಮೂಲ ಆಶಯದಂತೆ ಮಾತು ಬೆಳೀಲಿ.

ಸವಿತೃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2008 - 1:38pm — mahesha

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

mahesha's picture

ನನ್ನ ಪ್ರತಿಕ್ರಿಯೆಯಲ್ಲಿ ನನಗನ್ನಿಸಿದ್ದಂತಹವು ಯಾವುದೂ ಇಲ್ಲ.

ನಿಮ್ಮ ಪ್ರತಿಕ್ರಿಯೆಗೆ ಹಲವರು ಹೇಗೆ ಪ್ರತಿಕ್ರಿಯಿಸಬಹದುದೆಂದು ಹೇಳಿದ್ದಷ್ಟೆ.

ನಿಮ್ಮ ವಚನ, ವೇದ ಮುಂತಾದ ಹಲವು ವಿಷಯಗಳಾಸಕ್ತಿಯನ್ನು ನಾನು ಬಲ್ಲೆನು.!

ಮತಾಂತರದ್ದು ಮುಂದುವರಿಯಲಿ..

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 3, 2008 - 1:52pm — benaka

ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

benaka's picture

ಮಿತ್ರರೆ,

ನನಗೆ ತಿಳಿದಂತೆ, ಇದು ಮನುಸ್ಮೃತಿಯಲ್ಲಿನ ಶ್ಲೋಕ.(ಮನುಸ್ಮೃತಿ ೧೧-೧೨-೨೨)
ಹಿತೋಪದೇಶ ಮಾತ್ರವಲ್ಲ, ಪಂಚತಂತ್ರ, ಋಗ್ವೇದ, ಮಹೋಪನಿಷದ್, ವಿಕ್ರಮಚರಿತೆ ಮುಂತಾದ ಹಲವಾರು ಆಕರಗಳಿದಕ್ಕಿವೆ ಎಂದು ಕೇಳಿದ್ದೇನೆ. ಆದರೆ, ಈ ಶ್ಲೋಕದ ಉದ್ದೇಶವೇ ಬೇರೆ, ಇದರ ಅರ್ಥವನ್ನೇ ತಿರುಚಲಾಗಿದೆ ಎನ್ನುವ "ಬುದ್ಧಿಜೀವಿ"ಗಳೂ ಇಲ್ಲದಿಲ್ಲ. ಅಂತಹ ಒಂದು ಲೇಖನ ಭಾರತೇಂದು ಪುಟದಲ್ಲಿದೆ; ಓದಿನೋಡಿ:

ಈ ಶ್ಲೋಕದ ಉದ್ದೇಶವೇ ಬೇರೆ - ಭಾರತೇಂದು ಲೇಖನ

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಧರ್ಮ ಹಾಗೂ ಅಧ್ಯಾತ್ಮ
  • ಚಿಂತಕರ selective criticism
  • ಬ್ರಾಹ್ಮಣರೆಂದರೆ ಯಾಕ್ರಿ ಕೆಲವರಿಗೆ ಕಣ್ಣುರಿ, ಹೊಟ್ಟೆ ಉರಿ,
  • ಜಾತಿಯು ಧರ್ಮಾಧಾರಿತವೇ, ಸಾಮಾಜಿಕವೇ.
  • ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ
Syndicate content

ಲೇಖಕರು

maatumouna's picture

ಪೂರ್ಣ ಹೆಸರು
ನವೀನ ಕೆ.ಎಸ್.

ಪರಿಚಯ

ವೃತ್ತಿಯಿಂದ ಸಾಫ್ಟವೇರ್ ತಂತ್ರಜ್ಞ .
ಸಾಹಿತ್ಯ, ಸಿನಿಮಗಳಲ್ಲಿ ಹೆಚ್ಚಿನ ಆಸಕ್ತಿ.
ಕೆಲವೊಮ್ಮೆ ಬರಹಗಾರ, ಕವಿ.

ನನ್ನ ಬ್ಲಾಗ್ :
maatumouna.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 2:28pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:26pm
  • asuhegde
    ಉ: ಉದ್ದ ಕಾಲಿನ ನೊಣ ೨
    January 9, 2009 - 2:24pm
  • Virupakshagouda
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 2:20pm
  • Rakesh Shetty
    ಉ: ಆಕಾಶದ ಮೋಡದಲ್ಲಿ
    January 9, 2009 - 2:15pm
  • palachandra
    ಉ: ಉದ್ದ ಕಾಲಿನ ನೊಣ ೧
    January 9, 2009 - 2:15pm
  • palachandra
    ಉ: ಉದ್ದ ಕಾಲಿನ ನೊಣ ೨
    January 9, 2009 - 2:11pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:07pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:05pm
  • mahesha
    ಉ: ಮೌನ ಎದೆ
    January 9, 2009 - 2:03pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator