ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ದ್ವೈತ - ಜೀವಾತ್ಮ, ಪರಮಾತ್ಮ ಬೇರೆ, ಬೇರೆ.
ಅದ್ವೈತ - ಎರಡೂ ಒಂದೇ.
ವಿಶಿಶ್ಟಾದ್ವೈತ - ?? ಏನು ಹೇಳುತ್ತದೆ?
ಈ ಮೂರು ತತ್ವಗಳಲ್ಲಿ ಯಾವುದು ಸರಿ?
ದ್ವೈತಿಗಳು ಸಮರ್ಥಿಸುವುದೇನೆಂದರೆ, ಪರಮಾತ್ಮ ಸರ್ವ ಸಮರ್ಥ. ಹಾಗಿದ್ದು ನಾವೇ ಬ್ರಹ್ಮ ಎಂಬುದು ಸರಿಯೇ? ಎಂದು. ಹಾಗೆಯೇ ಅವರು ತಾರತಮ್ಯವಾದವನ್ನು ಒಪ್ಪುತ್ತಾರೆ.
ಅದ್ವೈತಿಗಳು ಹೇಳುತ್ತಾರೆ, ಅಹಂ ಬ್ರಹ್ಮಾಸ್ಮಿ. ಹಾಗೂ ತಾರತಮ್ಯವಾದವನ್ನು ಒಪ್ಪುವುದಿಲ್ಲ. ’ಯಥಾ ಶಿವಮಯೋ ವಿಷ್ಣು, ಏವ ವಿಷ್ಣು ಮಯಶ್ಶಿವಃ’ ಎಂದು ಹೇಳುತ್ತಾರೆ.
ಹಾಗೆಯೇ, ಜೀವಾತ್ಮದ ಸ್ವರೂಪ ತರ್ಕಕ್ಕೆ ನಿಲುಕದ್ದು ಎಂದು ವೇದಗಳಲ್ಲಿ ಹೇಳಿವೆ ಎಂದು ಕೇಳಿದ್ದೇನೆ.
ಇನ್ನೊಂದು ಸಂದೇಹ. ದ್ವೈತಿಗಳೆಲ್ಲರೂ ಋಗ್ವೇದದವರೇ? ಅಥವಾ ಯಜುರ್ವೇದದವರೂ ಇರುತ್ತಾರೆಯೆ?. ಏಕೆಂದರೆ, ’’ಯಥಾ ಶಿವಮಯೋ ವಿಷ್ಣು, ಏವ ವಿಷ್ಣು ಮಯಶ್ಶಿವಃ’ ಇದು ಯಜುರ್ವೇದದಲ್ಲಿ ಬರುತ್ತದೆ.
ತಿಳಿದವರು ಈ ವಿಶಯದಲ್ಲಿ ಹೆಚ್ಚಿನ ಮಾಹಿತಿ ನೀಡಬೇಕಾಗಿ ವಿನಂತಿ.

- madhava_hs ರವರ ಬ್ಲಾಗ್
- Login or register to post comments
- 949 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ನನಗೆ ತಿಳಿದಿರೋ ಮಟ್ಟಿಗೆ (ಅಂದರೆ ಇಸ್ಖೂಲ್ ನಲ್ಲಿ ಓದಿದ್ದು ನೆನಪಿರೋ ಮಟ್ಟಿಗೆ
),
ವಿಶಿಶ್ಟಾದ್ವೈತ , ಅದ್ವೈತ ಮತದ ಒಂದು extension. ಇದರ ಪ್ರಕಾರ ಜೀವಾತ್ಮನೂ ಪರಮಾತ್ಮನೂ (ಬ್ರಹ್ಮ)ಒಂದೆ, ಆದರೆ ಅದರ ಸ್ವರೂಪ ಬೇರೆ ಬೇರೆ. ಒಂತರಾ unity in diversity ಇದ್ದ ಹಾಗೆ.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ದೇಹದ ಮಟ್ಟದಲ್ಲಿ ಯೋಚನೆ ಮಾಡಿದರೆ ದ್ವೈತ ಸರಿ.
ಆತ್ಮದ ಮಟ್ಟದಲ್ಲಿ ಯೋಚನೆ ಮಾಡಿದರೆ ಅದ್ವೈತ ಸರಿ.
ನಾನು ಮೆಚ್ಚುವ ಶಕ್ತಿ-ವಿಶಿಶ್ಟಾದ್ವೈತದ ಬಗ್ಗೆ, ನಮ್ಮ ನಾಡಿನ ಶರಣರು ಕೊಟ್ಟಂತಹ ಈ ತತ್ವದ ಬಗ್ಗೆ, ಶ್ರಿಪತಿ ಪಂಡಿತ ವಿವರವಾಗಿ ಭಾಷ್ಯ ಬರೆದ ಈ ತತ್ವದ ಬಗ್ಗೆ ದಯವಿಟ್ಟು ಯಾರಾದರೂ ಬರೆಯಿರಿ.
ಸವಿತೃ
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಇವು ಮೂರನ್ನು ಬಿಟ್ಟು ಬೇರೆ ಹಲವು ಇದೆ..
೧) ಆತ್ಮವೇ ಇಲ್ಲ( ಇದು ಸರಿ
)
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ದೇಹದ ಮಟ್ಟದಲ್ಲಿ ಯೋಚನೆ ಮಾಡಿದರೆ ದ್ವೈತ ಸರಿ.
ಆತ್ಮದ ಮಟ್ಟದಲ್ಲಿ ಯೋಚನೆ ಮಾಡಿದರೆ ಅದ್ವೈತ ಸರಿ.
ನಾನು ಮೆಚ್ಚುವ ಶಕ್ತಿ-ವಿಶಿಶ್ಟಾದ್ವೈತದ ಬಗ್ಗೆ, ನಮ್ಮ ನಾಡಿನ ಶರಣರು ಕೊಟ್ಟಂತಹ ಈ ತತ್ವದ ಬಗ್ಗೆ, ಶ್ರಿಪತಿ ಪಂಡಿತ ವಿವರವಾಗಿ ಭಾಷ್ಯ ಬರೆದ ಈ ತತ್ವದ ಬಗ್ಗೆ ದಯವಿಟ್ಟು ಯಾರಾದರೂ ಬರೆಯಿರಿ.
ಸಾದ್ಯವಾದರೆ ನನ್ನ ಅಲ್ಪ ಮತಿಗೆ ಹೊಳೆದಷ್ಟು ಬರೆಯಲು ಮುಂದೆ ಯತ್ನ ಮಾಡುತ್ತೇನೆ.
ಸವಿತೃ
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಸವಿತೃ...
ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು ದಿಟವಾಗ್ಲೂ ಇದ್ಯಾ? ಇಲ್ಲ ಬರೀ ಬುರುಡೆಯ? ಇವೆಲ್ಲ ಪ್ರೆಶ್ನೆಗಳಿಗೆ ಉತ್ರ ಸಿಕ್ಕಿದಾಗ...
ಸಿಗದ ತನಕ ಅವೆಲ್ಲ ಬರೀ ಕಲ್ಪನೆ ಇಲ್ಲ ಬರೀ ನಂಬಿಕೆ.
ಮೊದಲು ಆತ್ಮ ಅಂದ್ರೇನು, ಪರಮಾತ್ಮ, ಜೀವಾತ್ಮ ಅಂದ್ರೇನು ಅಂತ ಹೇಳಿ
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಮಹೇಶರೆ .. ನಿಮ್ಮ ಈ ಪ್ರಶ್ನೆ ಗೆ ಉತ್ತರಿಸುವ ಅರಿವು-ಅನುಭಾವ ನನಗಿಲ್ಲ. ನನ್ನದೇನಿದ್ರೂ ಪುಸ್ತಕದ ಓದು. ಅದೂ ಚೂರು ಪಾರು.
ಆತ್ಮ ಇದೆಯೋ ಇಲ್ಲವೋ , ಪರಮಾತ್ಮ ಇದೆಯೋ ಇಲ್ಲವೋ ನಿಃಜವಾಗಿಯೂ ನಂಗೆ ಗೊತ್ತಿಲ್ಲ. ಕೆಲವೊಮ್ಮೆ ಇಲ್ಲವೇ ಇಲ್ಲ ಅನ್ನಿಸಿದೆ. ಇನ್ನೂ ಇರಬಹುದೇನೋ ಅನ್ನಿಸಿದೆ.
ನಾನು ತುಂಬಾ ಆತ್ಮವಿಶ್ವಾಸ ದಿಂದ ರಾಜನ ರೀತಿಯಲ್ಲಿ ಮೆರೆಯುವಂತಹ ಸಮಯದಲ್ಲಿ ಯಾವುದೋ ಕಾಣದ ಕೈ ನನ್ನನ್ನು ತುಂಬಾ ಹೀನಾಯವಾಗಿ ಸೋಲಿಸಿತಲ್ಲಾ.. ಬಹುಶ ಅದು ಪರಮಾತ್ಮ ಇರಬಹುದು. ಅತ್ವಾ ನಾನು ಎಲ್ಲ ಕಡೆ ಅತೀ ಹೀನಾಯ ವಾಗಿ ಸೋಲುತ್ತಿರುವಾಗ ಕಡೇ ಪಕ್ಷ ಉಸಿರಾಡಲು ಅವಕಾಶ ಇರುವಷ್ಟ ದರೂ ಭರವಸೆಯನ್ನು ನನ್ನಲ್ಲಿ ಮೂಡಿಸಿತಲ್ಲ .. ಅದೂ ಪರಮಾತ್ಮ ಇರಬಹುದು. ನನ್ನ ಕಣ್ಣಿಗೆ ಎಂದೂ ಕನ್ಡಿಲ್ಲ. ಕಾಣುವುದೂ ಇಲ್ಲ. ( ಕಣ್ಣಿಗೆ ಕಾಣಲು ಅದಕ್ಕೆ ಹೆದರಿಕೆ ಇರಬಹುದು!).... ಇಲ್ಲಿ ಯಾವುದನ್ನೋ "ಅಕ್ಷರಶಃ" ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.
ಇನ್ನೂ ಆತ್ಮ... .ಆತ್ಮ ದ ಇರುವಿಕೆ "ನೇರವಾಗಿ" ನನ್ನ ಅನುಭವಕ್ಕೆ ಬಂದಿಲ್ಲ. ನಮ್ಮ ದೇಹದಲ್ಲಿ ಆತ್ಮ ಇರಬಹುದು. ಒನ್ದಲ್ಲದಿದ್ದರೆ ಎರಡು ಆತ್ಮಗಳು ಸಹಾ ಇರಬಹುದು.
ನನ್ನ ಪ್ರಕಾರ ಆತ್ಮ ನಮ್ಮ ಪ್ರಕೃತಿಯಲ್ಲಿನ ಒಂದು ಶಕ್ತಿ. " A form of Energy". ಇನ್ನೂ ಈ ಶಕ್ತಿ ಎಂದ್ರೆ ಏನು ಅಂತ ವಿಜ್ಞಾನ ಓದಿದವ್ರಿಗೆ ಎಲ್ಲರಿಗೂ ಅರ್ಥ ಆಗೇ ಆಗುತ್ತೆ.
ಬೆಳಕೂ, ಬೆಂಕಿ, ಗಾಳಿ.. ಹೀಗೆ.. ಎಲ್ಲವೂ ಒಂದೊಂದು ರೀತಿಯ ಶಕ್ತಿಗಳು. ಆತ್ಮವೂ ಹಾಗೆ ನಮಗೆ ಕಾಣದ /ಅನುಭವಕ್ಕೆ ಬಾರದ ಒಂದು ರೀತಿಯ ಶಕ್ತಿ ಇರಬಹುದು.
ಹಾಗೆ ಯೋಚ್ನೆ ಮಾಡಿದ್ರೆ ... ನಾನು ಆಸ್ತಿಕತ್ವಕ್ಕೆ ಹೋಲಿಸಿದ್ರೆ .. ನಾಸ್ತಿಕತ್ವಕ್ಕೆ ಹೆಚ್ಚು ಹತ್ತಿರ ಇರುವುದು. ಈ ವೇದಾಂತಗಳಲ್ಲಿ ಏನಿದೆ ಎನ್ನುವ ಕುತೂಹಲ ನನಗೆ.

ರೀ ಸವಿತೃ....
"ನಿಮ್ಮ ಈ ಪ್ರಶ್ನೆ ಗೆ ಉತ್ತರಿಸುವ ಅರಿವು-ಅನುಭಾವ ನನಗಿಲ್ಲ." ಹಿಂಗೆಲ್ಲ ಹೇಳ್ ಬ್ಯಾಡಿ...
ನಾವೆಲ್ರೂ ಹಿಂಗೇಯ, ಎಲ್ಲ ಗೊತ್ತಿರಕ್ಕಿಲ್ಲ...
ನೀವು ಹೇಳಿದ ಎಲ್ಲ ಸಂಗತಿ ನನ್ ತಲೆಯಾಗೂ ತಡಕಾಡಿ, ತಲೆ ತಿಂದು ಬಿಸಾಕಿತ್ತು.... ಅದಕ್ಕೆ ನಿಮ್ಮ ಅನುಬವ ಏನಿರಬೋದು ಅಂತ ತಿಳಿದುಕೊಳ್ಳು ಬಯಕೆಯಿತ್ತು.
"ಹಾಗೆ ಯೋಚ್ನೆ ಮಾಡಿದ್ರೆ ... ನಾನು ಆಸ್ತಿಕತ್ವಕ್ಕೆ ಹೋಲಿಸಿದ್ರೆ .. ನಾಸ್ತಿಕತ್ವಕ್ಕೆ ಹೆಚ್ಚು ಹತ್ತಿರ ಇರುವುದು. ಈ ವೇದಾಂತಗಳಲ್ಲಿ ಏನಿದೆ ಎನ್ನುವ ಕುತೂಹಲ ನನಗೆ."
ನನ್ ಅನಿಸಿಕೆ ಹೇಳ್ಲಾ... ನಾನು ಆಸ್ತಿಕನೋ, ನಾಸ್ತಿಕನೋ, ಅದು ಲೆಕ್ಕಕ್ಕಿಲ್ಲ, ಇಲ್ವೆ.. ಅದು ಬೇಕಾಗಿಲ್ಲ. ! ಬಾಳಲ್ಲಿ ಇದಕ್ಕಿಂತ ಒತ್ತುಕೊಡಬೇಕಾದವಿವೆ... ಅದಕ್ಕೆ.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ದ್ವೈತ, ಅದ್ವೈತ, ವಿಶಿಷ್ಟಾದ್ವೈತ - ಇವುಗಳೆಲ್ಲವೂ ವೇದಾಂತದ ಸಿದ್ಧಾಂತಗಳು. ಆವುಗಳ ವ್ಯಾಪ್ತಿ ಅತ್ಯಂತ ವಿಸ್ತಾರವಾದುದು. ಅವು ತಾವು ಸರಳೀಕರಿಸಿದಷ್ಟು ಸರಳವೂ ಅಲ್ಲ, ಅವುಗಳ ವ್ಯಾಪ್ತಿಯನ್ನು ಪುಟವೊಂದರಲ್ಲಿ ಹಿಡಿದಿಡಲು ಸಾಧ್ಯವೂ ಇಲ್ಲ. ಭಾರತೀಯ ತತ್ತ್ವಶಾಸ್ತ್ರದ ಮೇಲೆ ಅಗಾಧ ಪರಿಣಾಮ ಬೀರಿದ ಸಿದ್ಧಾಂತಗಳಿವು. ಈ ಸಿದ್ಧಾಂತಗಳ ಅನೇಕ ಆಚರಣೆಗಳು ಇಂದಿಗೂ ನಮ್ಮ ಜನಜೀವನದಲ್ಲಿ ಕಂಡುಬರುತ್ತದೆ ಎಂದರೆ ಅದರ ವ್ಯಾಪ್ತಿ, ಹಿರಿಮೆಗಳನ್ನು ಊಹಿಸಿಕೊಳ್ಳಿ. ಪ್ರತಿ ಸಿದ್ಧಾಂತವೂ ಅನೇಕ ಮತಾಚಾರ್ಯಗಳ ಬಹು ದೊಡ್ದ ಪರಂಪರೆಯಿಂದ ಬೆಳೆದು ಬಂದಿದ್ದು, ಸಿದ್ಧಾಂತಗಳ ವ್ಯಾಪ್ತಿ ಬಹುವಾಗಿ ಹರಡಿದೆ.
ಹಾಗಾಗಿ ಅವುಗಳ ಆಳ, ಅರಿವುಗಳನ್ನು ಅರಿಯದೆ ಒಮ್ಮೆಗೆ ಒಂದು ಸಿದ್ಧಾಂತ ಸರಿ, ಒಂದು ತಪ್ಪು ಎಂದು ವಿಮರ್ಶೆ ಮಾಡಲು ಪ್ರಯತ್ನ ಪಡುವುದೇ ಬಾಲಿಶವೆನಿಸುತ್ತದೆ.
ಇನ್ನು ಈ ಸಿದ್ಧಾಂತಗಳೆಲ್ಲವೂ ವೇದಾಂತಕ್ಕೆ ಸಂಬಂಧ ಪಟ್ಟವು. ಇವಕ್ಕೂ ಋಗ್ವೇದದ ಆಚರಣೆಗಳಿಗೂ , ಯಜುರ್ವೇದದ
ಆಚರಣೆಗಳಿಗೂ ಸಂಬಂಧ ಹೆಣೆಯುವುದು ಅಪ್ರಸ್ತುತ.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಆಶಿಯವರೆ,
’ಯಾವುದು ಸರಿ?’ ಎಂದು ಶೀರ್ಷಿಕೆ ಕೊಟ್ಟಿದ್ದು ಬಹುಶಃ ಅಷ್ಟು ಸರಿ ಇಲ್ಲ ಎಂದು ನಿಮ್ಮ ವಾದ ಅಲ್ಲವೇ. ಇರಬಹುದು.
ನಿಮ್ಮ ಅಭಿಪ್ರಾಯವನ್ನು ಇಲ್ಲಿ ಮಂಡಿಸಿದ್ದಕ್ಕಾಗಿ ಧನ್ಯವಾದಗಳು. ಇಲ್ಲಿ ಈ ವಿಚಾರವಾಗಿ ಹೆಚ್ಚು ವಿಚಾರ ಮಂಥನ ಮಾಡೋಣ, ಈ ಸಿದ್ದಾಂತಗಳಲ್ಲಿನ ಹೆಚ್ಚು ಹೆಚ್ಚು ಒಳ್ಳೆಯ ಅಂಶಗಳನ್ನು ತಿಳಿದು ಕೊಳ್ಳೋಣ ಎಂದಷ್ಟೆ ನನ್ನ ಉದ್ದೇಶ.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಪ್ರಸಾದ್, ನಾಗಮಂಗಲ.
ಅದ್ವೈತವಾಗಲೀ, ದ್ವೈತವಾಗಲೀ ಅಥವಾ ವಿಶಿಷ್ಠಾದ್ವೈತವಾಗಲೀ, ಎಲ್ಲ ಹಾದಿಗಳ ಅಂತಿಮ ನಿಲ್ದಾಣವೇ
ಸತ್ ಚಿತ್ ಆನಂದ.
ಈ ಆನಂದಕ್ಕಾಗಿ ಹಲವರು ಹಲವು ಮಾರ್ಗಗಳನ್ನು ಅನುಸರಿಸಿದ್ದಾರೆ. ಎಲ್ಲದರ ಕುರಿತು ಚರ್ಚಿಸುವುದಕ್ಕೆ ಈ ವೇದಿಕೆ ಕಷ್ಟಸಾಧ್ಯವಾಗಬಹುದು.
ಸುಲಭವಾಗಿ ಅತ್ಯಂತ ಸಂಕ್ಷಿಪ್ತವಾಗಿ ಗಣಿತಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ.......
ಅದ್ವೈತ .................. Non Differentiable
ದ್ವೈತ .................... Differentiable
ವಿಶಿಷ್ಠಾದ್ವೈತ ............ Differentially Non Differentiable
ಪ್ರಾಯಶಃ ಈ ವಿವರಣೆ ಹೆಚ್ಚೇನೂ ಸಮಾಧಾನವನ್ನು ಕೊಟ್ಟಿರಲಾರದು. ಆದರೂ, ತೀರಾ ಲೌಕಿಕವಾಗಿ ಅರ್ಥೈಸುವಲ್ಲಿ ಶಕ್ಯವೆಂದನಬಹುದು.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಯಾಕೆ? ತಿಳ್ಕೊಂಡು ಎನ್ ಮಾಡಬೇಕು ಅಂತ?
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ನಿಮ್ಮ ಪ್ರಶ್ನೆ - ನೀರೆಂದರೆ, ನದಿಯೋ, ಸಮುದ್ರವೋ, ಮಳೆಯೋ? ಎಂಬಂತಿದೆ.
ಹೇಗೆ ನೀರು ಈ ಎಲ್ಲವೂ ಆಗಿರಲು ಸಾಧ್ಯವೋ, ದ್ವೈತ-ಅದ್ವೈತ-ವಿಶಿಷ್ಟಾದ್ವೈತಗಳೂ ಸರಿಯಾಗಿರಲು ಸಾಧ್ಯ!
ಚಿತ್ರಕಲಾ ಪರೀಕ್ಷೆಯೊಂದರಲ್ಲಿ ಮೇಜಿನ ಮೇಲಿಟ್ಟ ಒಂದು ಹಣ್ಣನ್ನು ಸುತ್ತಲಿರುವ ಹತ್ತು ಜನರು ಹತ್ತು ರೀತಿಯಾಗಿ ನೋಡಬಹುದು.
ಒಬ್ಬನಿಗೆ ಮಾಗಿದ ಭಾಗದ ಕೆಂಪು ಬಣ್ಣ ಕಾಣುತ್ತದೆ; ಇನ್ನೊಬ್ಬನಿಗೆ ಹಸಿರು; ಮತ್ತೊಬ್ಬನಿಗೆ ತೊಟ್ಟು-ಎಲೆಯೂ ಕಾಣುತ್ತದೆ! ಮಗುದೊಬ್ಬನಿಗೆ
ಆ ತೊಟ್ಟು ಎದುರಿನ ವ್ಯಕ್ತಿಯ ಜುಟ್ಟಿಗೆ ತಾಗಿ ನೇತುಬಿದ್ದಂತೆ ಕಂಡು ನಗು ಬರುತ್ತದೆ! ಒಬ್ಬನಿಗೆ ಅದರ ಸಿಪ್ಪೆಯಲ್ಲಿ ಕಲೆಗಳಿವೆ ಎನ್ನಿಸಿದರೆ, ಇನ್ನೊಬ್ಬನಿಗೆ
ಅದು ಗಣಪತಿಯ ಸೊಂಡಿಲಿರುವ ಮುಖದಂತೆ ಕಾಣುತ್ತದೆ!!!!!
ಆ ಹಣ್ಣೇ "ಬ್ರಹ್ಮ"! ಆ ಪರೀಕ್ಷಾರ್ಥಿಗಳೇ ವ್ಯಾಖ್ಯಾನ/ಭಾಷ್ಯಕಾರರು!! ಇವರಲ್ಲಿ ಯಾರು ಸರಿ?ಯಾರು ತಪ್ಪು?
ಯದ್ಭಾವಂ ತದ್ಭವತಿ!!(ಮನಸ್ಸಿನಂತೆ ಮಾದೇವ!!?)
ಒಂದಾನೊಂದು ಕಾಲದಲ್ಲಿ ಒಳ್ಳೆಯ ಚರ್ಚೆಗಳು ನಡೆಯುತ್ತಿದ್ದ ಈ ವಿಷಯವೇ ಜಾತಿ-ಪಂಗಡಳಿಗೆ ಸೀಮಿತವಾಗುತ್ತ ಬಂದು ಶೈವ-ವೈಷ್ಣವ ಗುದ್ದಾಟ-ಕಿತ್ತಾಟಕ್ಕಿಳಿದು
ತನ್ನ ಮೂಲ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಈ ವಿಚಾರವಾಗಿ ವೇದಾಂತ ಪಂಡಿತರು ವಾದ-ಚರ್ಚೆಗಳಿಗಿಂತ ಹೆಚ್ಚಾಗಿ ವಿವಾದ ಹುಟ್ಟಿಸಿ, ಪ್ರಖ್ಯಾತಗೊಳ್ಳುವ ಕಾಲವಿದು!
ತಿಳಿದುಕೊಂಡೇನು ಉಪಯೋಗವೆನ್ನುವ ನರಿಗಳಿಗೆ ಇದು ಯಾವಾಗಲೂ ಹುಳಿಯೇ!! ನಿಮ್ಮ ಅರಿಯುವ ಮನಸ್ಸಿಗೆ ಓದಿನ ಮೂಲಕ ತಂಪೆರೆಯಿರಿ! ನರಿಗಳಗೊಡವೆ ಅರಿವಿಗೆ ಅಡ್ಡಿ!!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಬೆನಕ, ಇದಂತೂ ೧೦೦ಕ್ಕೆ ೧೦೦ರಷ್ಟು ನಿಜ
ಪಂಡಿತರುಗಳು ತಮ್ಮ ಎದುರಾಳಿಗಳ (ಎದುರಾಳಿಯವರ ವಾದದ ಬಗ್ಗೆಯಲ್ಲ) ಬಗ್ಗೆ ಸೂಚ್ಯವಾಗಿಯಾದರೂ ಏನನ್ನಾದರೂ ಬಯ್ಯುತ್ತಲೇ ಇರುವುದನ್ನು ನಾನೂ ಯಾವುದೇ ಉಪನ್ಯಾಸಕ್ಕೆ (ವೇದಾಂತವಷ್ಟೇ ಅಲ್ಲ, ಸಾಹಿತ್ಯ, ಕಾವ್ಯ, ಸಿನಿಮಾ........ಹೀಗೆ ಯಾವ ವಿಷಯ ಆದರೂ) ಹೋದರೂ ಕಾಣುತ್ತಲೇ ಇರುತ್ತೇನೆ
ನನಗಂತೂ ಕೆಲವೊಮ್ಮೆ ಸಿಕ್ಕಾಪಟ್ಟೆ ನಗು ಬಂದು ಬಿಡುತ್ತದೆ!!!! ನನ್ನ ಪ್ರಕಾರ "ಪಂಡಿತರು" ಮಾಡುವ ದೊಡ್ಡ ತಪ್ಪೆಂದರೆ ಅನುಭಾವಿಗಳು(ಕೇಳುಗರು, ಓದುಗರು, ನೋಡುಗರು...) ಏನು ಹೇಳಿದರೂ ನಂಬುತ್ತಾರೆ ಎಂದುಕೊಳ್ಳುವುದು

ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಲೇ... ಚನ್ನೇಲ...
ಇವ್ರೆಲ್ರೂ ಆತ್ಮ ಅಂದ್ರೆ, ಪರಮಾತ್ಮ ಅಂದ್ರೆ, ಜೀವಾತ್ಮ ಅಂದ್ರೆ ತಿಳಿದು ಮಾತಾಡತವ್ರೆ...
ನಂಗೆ ನೀನಾರ...
ಆತ್ಮ ಮುಂ.. ಅಂದ್ರೇನು ಅಂತ ಹೇಳೋ!
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಇದರ ಬಗ್ಗೆ ಯಾರು ಹೇಳಲಿಲ್ಲ...
=====================================
ಮಾಯ್ಸ!
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ನಾನು ನನ್ನ ವಾದವನ್ನು ತುಂಬಾ ತುಂಬಾ ರಿಯಲಿಸ್ಚಿಕ್ ಆದ ಒಂದು ಉದಾಹರಣೆಯೊಂದಿಗೆ ನಿಮ್ಮೆಲ್ಲರ ಮುಂದಿಡುತ್ತೇನೆ.
ಹೀಗೆ ಮುಂದುವರಿಸಿ, ಕ - ಒಂದು ಕಂಪನಿ, ಅ - ಒಬ್ಬ ನೌಕರ.
ಅದ್ವೈತ ವಾದ - ಈ ಕಂಪನಿ ಬೇರೆಯಲ್ಲ, ನಾನು ಬೇರೆಯಲ್ಲ. ನಾನು ಏನು ಮಾಡಬೇಕೆಂದು ನನಗೆ ನನ್ನ ಮೆನೇಜರ್ ಹೇಳಬೇಕಿಲ್ಲ. ನಾನು ಮಾಡುತ್ತಿರುವುದು ಕಂಪನಿಗಾಗಿ ಅಲ್ಲ, ನನಗಾಗಿ. ಕಂಪನಿಯ ಏಳಿಗೆ ಹಾಗು ನನ್ನ ಏಳಿಗೆ ಬೇರೆ ಬೇರೆ ಅಲ್ಲ. ಕಂಪನಿಯ ಸಿಇಓಗೆ ಎಷ್ಟು ಜವಾಬ್ದಾರಿ ಇದೆಯೋ ನನಗೂ ಅಷ್ಟೇ ಇದೆ. ಏಕೆಂದರೆ ನಾನೇ ಕಂಪನಿ!!!
ದ್ವೈತ ವಾದ - ನಾನು ಮತ್ತು ಕಂಪನಿ ಬೇರೆ. ಎಷ್ಟೇ ಆದರೂ ನಾನು ನೌಕರನೇ ಮತ್ತು ಸಿಇಓ ಸಿಇಓನೇ. ಈ ಸಂಸ್ಥೆಯ ಏಳಿಗೆಯೇ ನನ್ನ ಮೂಲೋದ್ದೇಶ. ನನಗೆ ಕಷ್ಟ ಆದರೂ ಪರವಾಗಿಲ್ಲ, ಈ ಸಂಸ್ಥೆಗೆ ನಾನೆಂದೂ ಮೋಸ ಮಾಡುವುದಿಲ್ಲ. ಕಂಪೆನಿ ಉದ್ದಾರ ಆದರೆ ನನಗೆ ಬೋನಸ್ ಸಿಕ್ಕಿ ನನ್ನ ಏಳಿಗೆ ಆಗುತ್ತದೆ.
ವಿಶಿಷ್ಟಾದ್ವೈತ - ನಾನು ಮತ್ತು ಕಂಪನಿ ಬೇರೆ, ನಿಜ. ಆದರೆ ನಾನು ಚೆನ್ನಾಗಿ ಕೆಲಸ ಮಾಡುತ್ತಾ ಸಾಗಿದರೆ ಮುಂದೊಂದು ದಿನ ಬಡ್ತಿ ಸಿಕ್ಕು ಮೇನೇಜರ್, ಡೈರೆಕ್ಟರ್, ಸಿಇಓ ಎಲ್ಲವೂ ನಾನೇ ಆಗುತ್ತೇನೆ
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಒಂದು ಪ್ರಶ್ನೆ. ದ್ವೈತ ಸಿದ್ದಾಂತದವರಲ್ಲೇ ಧರ್ಮ ಶ್ರದ್ದೆ, ವ್ರತಾಚರಣೆಗಳು ಹೆಚ್ಚು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.(ನಾನು ದ್ವೈತನಲ್ಲ). ಒಂದೇ ಧರ್ಮದ ಅನುಯಾಯಿಗಳಾದರು ಈ ಮೂರ್ವರಲ್ಲಿ ಇಷ್ಟು ವ್ಯತ್ಯಾಸವೇಕೆ? ಏಕೆ ಹೀಗೆ?
ಹಿಂದಿನ ಕಾಲದಲ್ಲಾದರೆ ಇಂತಹ ಸಂದೇಹಗಳು ಬಂದಾಗ ವಾಗ್ವಾದ ಗಳನ್ನು ನಡೆಸಿ ಸೋತವನು ಮತ್ತು ಅವನ ಹಿಂಬಾಲಕರು ಗೆದ್ದವರ ಶಿಷ್ಯರಾಗುತ್ತಿದ್ದರು. ಸಮಾಜ ಏಕ ಪಂಥವಾಗಿರುತ್ತಿತ್ತು. ಈಗೇಕೆ ಹತ್ತು ಹಲವು ಪಂಥಗಳು, ಗುಂಪುಗಳು? ಯಾವುದು ಸರಿ ಎಂದು ಒಮ್ಮೆ ನಿರ್ಧರಿಸಿದರೆ ಈ ಗೊಂದಲಗಳ ಬದಲು ಸಮಾಜಕ್ಕೆ ಒಂದು ಸ್ಪಷ್ಟ, ನಿರ್ಧಿಷ್ಟ ದಾರಿ ದೊರೆತಂತಾಗಿ ಜನರು ಆ ಮೂಲಕ ಒಗ್ಗೂಡಬಹುದಲ್ಲವೇ?
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಮಾಧವ, ಇದಕ್ಕೆ ಉತ್ತರ ತಿಳಿದುಕೊಳ್ಳಲು ಮೇಲಿನ ಚರ್ಚೆ ನೋಡಿದರೆ ಗೊತ್ತಾಗುವುದಿಲ್ಲವೇ. ಎತ್ತು ಏರಿಗೆಳೆದರೆ ಕೋಣ ನೀರಿಗೆಳಿತಾ ಐತೆ. ಎಲ್ಲರಿಗೂ ಅವ್ರವ್ರದ್ದೇ ಸರಿ.(ಯಾರೂ ವೈಯಕ್ತಿಕವಾಗಿ ತಗೋಬಾರ್ದಾಗಿ ವಿನಂತಿ) ಈಗ ಎಲ್ಲರೂ ಎಲ್ಲದನ್ನೂ ಪ್ರಶ್ನೆ ಮಾಡೋ ಮಟ್ಟಕ್ಕೆ ಇದ್ದಾರೆ (ಇದಕ್ಕೆ ಜಾತಿ ಸಂಬಂಧ ಕೋಡೋರೂ ಇದಾರೆ ನೋಡಿ). ತಾವು ಏನೂ ಗೊತ್ತಿಲ್ಲದಿದ್ದರೂ ಪರ್ವಾಗಿಲ್ಲ ಅವ್ರು ಹೇಳಿದ್ದು ನಾವ್ಯಾಕೆ ಒಪ್ಕಬೆಕು, ಅವ್ರು ಹೇಳಿದ್ದೆ ಹೆಂಗೆ ಸರಿ ಅನ್ನುವ ಜನ ಜಾಸ್ತಿ ಆಗಿದ್ದರಿಂದ ನೀವು ಹೇಳಿದ "ಏಕ ಪಂಥ" ನೋ ಇನ್ನೆಂತದ್ದೋ ಬಕ್ಕಬಾರಲು ಬಿತ್ತು.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
>>ಯಾವುದು ಸರಿ ಎಂದು ಒಮ್ಮೆ ನಿರ್ಧರಿಸಿದರೆ ಈ ಗೊಂದಲಗಳ ಬದಲು ಸಮಾಜಕ್ಕೆ ಒಂದು ಸ್ಪಷ್ಟ, ನಿರ್ಧಿಷ್ಟ ದಾರಿ ದೊರೆತಂತಾಗಿ ಜನರು ಆ ಮೂಲಕ ಒಗ್ಗೂಡಬಹುದಲ್ಲವೇ?
ನಾನು ನೋಡುವ "so called" ಹಿಂದೂ ಧರ್ಮ ದಲ್ಲಿನ ಮುಕ್ಕಾಲು ಪಟ್ಟಿಗೂ ಹೆಚ್ಚು ಜನಕ್ಕೆ ಅವರದೇ ಆದ ಸ್ವಂತ ಸಿಧಾಂತಗಲಿಲ್ಲ.
ಇಂದು ಆವ್ರು ಎಲ್ಲ್ರೂ ನಿಮ್ಮ ಸೋಕಾಲ್ಡ್ ಹಿಂದೂ ಧರ್ಮದ ಈ ಸಿಧ್ಧಾನ್ತಗಳನ್ನು ಒಪ್ಪಿಕೊಂಡ್ರೆ ( offcourse , ಅವರಿಗೆ ಅದ್ರ ಅವಶ್ಯಕತೆಯಿಲ್ಲ!) ಆವ್ರನ್ನು ತಮ್ಮ ಮನದಲ್ಲಿ ತಮ್ಮಷ್ಟೇ ಶ್ರೇಷ್ಟರು ಅಂತ ಒಪ್ಪಿಕೊಂಡು ನೀವೆಲ್ಲ ಒಗ್ಗೊಡುತ್ತೀರ?!. ತಮ್ಮ ಮನದಲ್ಲಿ ಇರೋ ತಿರಸ್ಕಾರವನ್ನು ಬಿಟ್ಟು ಬಿಡುತೀರ?
ಸುಮ್ಮನೇ ತೋರುಮಾತಿಗೆ ದೊಡ್ಡ ದೊಡ್ಡ ಪದಗಳನ್ನು ಬಳಸಬೇಡಿ. ಪರಿವರ್ತನೆ ಮನದಾಳದಿಂದ ಬರಬೇಕು. ಅದೇ ನಿಜವಾದ ಸಿದ್ಧಾಂತ. ನಿಜವಾದ ಶ್ರೇಷ್ಟ ಸಂಸ್ಕೃತಿ!.
ಸವಿತೃ
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಸವಿತೃ...
ನೀವ್ಯಾಕೋ ನಂತರ( ನನ್ ತರ ) ಆಗ್ತಿದ್ದೀರಿ..

ನಾನ್ಯಾಕೆ ಹಿಂದು? ಅಂತ ಯೋಚಿಸಿ ...........
ಉತ್ರ ಸಿಕ್ಕದಿದ್ರು, ಒಂದು ಮುಸುಕು ಕಳಚಿದಂತಾದ್ರೂ ಆದೀತು..
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ಮಾಧವ,
ನನ್ನಪ್ಪ ದ್ವೈತಿ, ಆದರೆ ಯಜುರ್ವೇದಿ; ದ್ವೈತಿಗಳಲ್ಲೂ ಯಜುರ್ವೆದಿಗಲಿದ್ದಾರೆ.
ಇನ್ನು ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ವಿವರಣೆಗೆ ಇನ್ನೊಂದು ದೊಡ್ಡ ಬರಹವನ್ನೇ ಬರೆಯಬೇಕಾಗುತ್ತದೆ. ಆದರೆ ಮೂಡಿಬಂದ ಪ್ರತಿಕ್ರಿಯೆಗಳನ್ನು ಓದಿ ಸುಮ್ಮನಾದೆ.
ಕೇಶವ
Visit my blog:
http://kannada-nudi.blogspot.com
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
Sathyajith
ಮೂಲ ಬರಹ ಓದಿದಾಗ ನನಗೆ ತಿಳಿದಷ್ಟನ್ನು ಹೇಳುವ ಮನಸ್ಸಾಯಿತು. ಪ್ರತಿಕ್ರಿಯೆಗಳ ದಿಕ್ಕು ನೋಡಿ ಬೇಸರವಾಯಿತು. ನಮ್ಮಲ್ಲಿ ನಿಜವಾದ ಓದಿಗಿ೦ತ ಉತ್ತರಿಸುವ ಅತುರ, ಸತ್ಯ ಶೋಧನೆಯ ಪ್ರಯತ್ನಕ್ಕಿ೦ತ ನನ್ನ ಅಭಿಪ್ರಾಯವೇ ಶ್ರೇಷ್ಟ ಎನ್ನುವ ಭಾವ ಮುಖ್ಯವಾಗುತ್ತಿದೆಯಲ್ಲ ?
ಸತ್ಯಜಿತ್
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
ನಾನು ಇಲ್ಲಿ ಉತ್ತರವೊ೦ದನ್ನು ಕೊಡಲು ಪ್ರಯತ್ನಿಸುತ್ತೇನೆ:
ಅದ್ವ್ಯತ: ಭಕ್ತಿಯ ಅಶ್ರಯವಿಲ್ಲದೆ, ಆತ್ಮ(ಸರಳೀಕರಿಸಿ ಹೇಳುವುದಾದರೆ:ನಾನು) ಹಾಗೂ ಪರಮಸತ್ಯ(ಪರಮಾತ್ಮ),absolute truth ಇವೆರಡೂ ಒ೦ದೇ, ಎ೦ಬುದನ್ನು ಕ೦ಡುಕೊಳ್ಳಲು ನಮಗೆ ಸಾಧ್ಯ ಎನ್ನುತ್ತದೆ. ಭಗವ೦ತ , ನಿರ್ಗುಣಿ, ನಿರಕಾರಿ. ಅತ್ಮ ಪರಮಾತ್ಮನಲ್ಲಿ ಒ೦ದಾಗುವುದೇ ಮೋಕ್ಷ, ಮತ್ತು ಅದು ಸಾಧ್ಯ.
ದ್ವೈತ: ನೂರಾರು ಬಗೆಯ ಜನರಿದ್ದಾರೆ, ಎಲ್ಲರೂ ಒ೦ದೇ ಆಗಿರಲು ಸಾಧ್ಯವಿಲ್ಲ. ಭಗವ೦ತ ಸದ್ಗುಣ ಸ್ವರೂಪಿ. ಭಕ್ತಿ ಮಾರ್ಗವೊ೦ದೇ ದಾರಿ.
ಅತ್ಮ ಮತ್ತು ಪರಮಾತ್ಮ ಬೇರೆ ಬೇರೆ. ದೇವರಲ್ಲಿ ಒ೦ದಾಗುವುದು ಸಾಧ್ಯವಿಲ್ಲ, ಅವನ ಮಹಿಮೆಯನ್ನು ಅರಿಯುವುದೇ ಮೋಕ್ಷ.
ವಿಶಿಷ್ಟಾದ್ವ್ಯೆತ: ದೇವರು ಸರ್ವಗುಣ ಸ೦ಪನ್ನ, ಆದರೆ ಅವನು ಅತ್ಮವನ್ನೂ ವ್ಯಾಪಿಸಿರುತ್ತಾನೆ. ವಿಶಿಷ್ಟ: qualified- ಅದ್ವ್ಯತ. ಇದು ಅದ್ವ್ಯತ extension ಎನ್ನಬಹುದಾದರೂ, ಮೇಲಿನ ಎರಡನ್ನೂ ಬಹುಮಟ್ಟಿಗೆ ಸಮೀಕರಿಸುತ್ತದೆ.
ಉ: ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?
"ಸೃಷ್ಟಿ ಒಂದೇ, ದೃಷ್ಟಿ ಬೇಱೆ" ಎಂಬಂತೆ ಆಯಾ ಕಾಲಕ್ಕೆ ಆಯಾ ಕಾಲದ ಜನರಿಗೆ ಅರ್ಥವಾಗುವಂತೆ ಈ ಆಚಾರ್ಯತ್ರಯರು ಒಂದೇ ಸತ್ಯವನ್ನು ಹೇೞಿದ್ದು. ನಾವೆಲ್ಲ ನೋಡುವ ಜಗತ್ತು ಒಂದೇ. ನೋಡುವವನಿಗೆ ಅವನು ಜಗತ್ತನ್ನು ಹೇಗೆ ಜಗತ್ತನ್ನು ನೋಡಿ ಅರ್ಥೈಸಿಕೊಳ್ಳುತ್ತಾನೋ ಅದಕ್ಕೆ ತಕ್ಕಂತೆ ದೃಷ್ಟಿಕೋನಗಳು ಬೇಱೆ ಬೇಱೆಯಾದವಷ್ಟೆ. ಹೇಗೆ ಒಂದೇ ವಿಷಯದ ಕುಱಿತು ನನ್ನ ಅಭಿಪ್ರಾಯ ಹೀಗೆ. ನಿನ್ನ ಅಭಿಪ್ರಾಯ ಹಾಗೆ ಎಂದ ಹಾಗೆ.