ದಾಸ ಸಾಹಿತ್ಯ
ದಾಸ ಸಾಹಿತ್ಯದ ವಿಷಯದಲ್ಲಿ ಕನ್ನಡ ಸಾರಸ್ವತ ಲೋಕ ಬಹಳ ಶ್ರೀಮಂತವಾಗಿದೆ. ಸುಮಾರು ೧೩೦೦೦ ಕ್ಕೂ ಹೆಚ್ಚು ಕೀರ್ತನೆಗಳು, ೩೦೦೦ ಸುಳಾದಿಗಳು, ೫೦೦ ಉಗಾಭೋಗಗಳು ಇತ್ಯಾದಿ ಇದುವರೆಗೆ ದೊರೆತಿರುವ ಅಂಕಿ ಅಂಶಗಳು. ದಾಸಸಾಹಿತ್ಯ.ಆರ್ಗ್ ನಲ್ಲಿ ಇವೆಲ್ಲವನ್ನೂ ಶೇಖರಿಸಲಾಗಿದೆ ಎಂದು ಕೇಳಿದೆ, ಇದೊಂದು ಕರ್ನಾಟಕ ಸರ್ಕಾರದ ಯೋಜನೆ. ಆದರೆ ಆ ತಾಣವನ್ನು ತೆಗೆದು ಓದಲು ಸಾಧ್ಯವಾಗುತ್ತಿಲ್ಲ. ಕೆಲವು ತಂತ್ರಾಂಶ ತೊಂದರೆಗಳಿವೆ ಅನ್ನಿಸುತ್ತೆ. , ಇಷ್ಟೆಲ್ಲಾ ಮಾಡಿದರೂ ಹೀಗೆ ಓದುಗರಿಗೆ ಅನುಕೂಲವಾಗದಿದ್ದರೆ ಏನುಪಯೋಗ?
ಸುಳಾದಿಗಳ ಪುಸ್ತಕವಂತೂ ಮಾರುಕಟ್ಟೆಯಲ್ಲಿ ಒಂದೂ ಲಭ್ಯವಿಲ್ಲ. ಧಾರವಾಡದ ಒಂದು ಸಂಘಟನೆಯವರು ಒಂದು ಹೊತ್ತಿಗೆಯನ್ನು ಕೆಲವು ತಿಂಗಳಹಿಂದೆ ಬಿಡುಗಡೆ ಮಾಡಿದ್ದಾರೆಂದು ಕೇಳಿದೆ. ಅದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಮೇಲೆ ಹೇಳಿದ ಎಲ್ಲ ಸಾಹಿತ್ಯವನ್ನೂ ಒಂದು ಸಿ.ಡಿ ಯಲ್ಲಿ ಅಥವಾ ಒಂದು ಅಂತರ್ಜಾಲತಾಣದಲ್ಲಿ ತರುವ ಪ್ರಯತ್ನ ಅಗತ್ಯವಾಗಿದೆ.

- madhava_hs ರವರ ಬ್ಲಾಗ್
- Login or register to post comments
- 230 hits
- Email this blog




RSS:
ಪ್ರತಿಕ್ರಿಯೆಗಳು
ಉ: ದಾಸ ಸಾಹಿತ್ಯ
ಮಾಧವ ಅವರೆ,
ಈ ಹಿಂದೆ ನಾನು ಈ ಬಗ್ಗೆ ಬರೆದದ್ದನ್ನು ನೀವು ನೋಡಿಲ್ಲದಿರಬಹುದು.
http://www.sampada.net/blog/hamsanandi/06/12/2007/6563
ಹೌದು - ಮಾಡಬೇಕಾದ್ದು ಬಹಳಷ್ಟು ಇದೆ.
ಕೆಲವು ಪ್ರಯತ್ನಗಳನ್ನು ಈ ಕೆಳಗೆ ನೋಡಿ. ನೀವು ಸಹಾಯ ಮಾಡಬಲ್ಲಿರಾದರೆ, ನಮ್ಮ ಬಳಿ ಸರಕು ಬಹಳ ಇದೆ
ನನಗೊಂದು ಸಾಲು ಬರೆದು ಹಾಕಿ.
http://purandara.wordpress.com/
http://www.rasikas.org/wiki/purandara-compositions
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/