ನಾಲಿಗೆ ಚಪಲ
ನಾಲಿಗೆ ಚಪಲಕ್ಕೆ, ಮನೆಯಲ್ಲಿ ರಜಾದಿನ ಟೈಂ ಪಾಸ್ ಗೆ ಏನಾದ್ರೂ ಬೇಕನ್ಸುತ್ತೆ ಅಲ್ವಾ. ಮೊನ್ನೆ ಗಾಂಧಿ ಬಜಾರಿಗೆ ಹೋದವನು ಒಂದಷ್ಟು ಒಬ್ಬಟ್ಟು ತಂದೆ. ಆದರೆ ಏನೋ ಒಂಥರಾ ಕಮಟು ವಾಸನೆ. ತಿನ್ನಲಾಗಲಿಲ್ಲ. ಜಯನಗರ/ಜೆ.ಪಿ ನಗರಗಳಲ್ಲಿ ಉತ್ತಮವಾದ ಬೇಳೆ ಹೋಳಿಗೆ ಸಿಗುವುದೇ?
ಏನಪ್ಪಾ ಇದಕ್ಕೂ ಒಂದು ಬ್ಲಾಗಾ ಅನ್ಕೋತೀರಾ?

- madhava_hs ರವರ ಬ್ಲಾಗ್
- Login or register to post comments
- 321 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಾಲಿಗೆ ಚಪಲ
ಗಾಂಧಿ ಬಜಾರ್ ಆಡ್ಯಾರ್ ಆನಂದಭವನದಲ್ಲಿ ಒಬ್ಬಟ್ಟು ಆಗಲೆ ಕಣ್ಣೆದುರಿಗೆ ಮಾಡಿಕೊಡುತ್ತಾರೆ ತಿಂದು ನೋಡಿ ತುಂಬಾ ಚೆನ್ನಾಗಿರುತ್ತೆ
http://thereda-mana.blogspot.com/
ರೂಪ
ಉ: ನಾಲಿಗೆ ಚಪಲ
ಮಾಹಿತಿಗೆ ನನ್ನಿ. ಆ ಕಡೆ ಹೋದಾಗ ತಿಂದು ನೋಡುತ್ತೇನೆ.
ಉ: ನಾಲಿಗೆ ಚಪಲ
ನೀವು ಮಾಡಿದ್ದು ಏನಾಯಿತು ?
ಉ: ನಾಲಿಗೆ ಚಪಲ
ನಾನು ಮಾಡಲಿಲ್ಲ
ಅಮ್ಮನಿಗೆ ಹೇಳಿ ಮಾಡಿಸಿ ತರಿಸಿ ತಿಂದುಬಿಟ್ಟೆ
ನಾನೆ ಮಾಡಿದರೆ ಖಂಡಿತಾ ಕಳಿಸುತ್ತೇನೆ ತಿನ್ನುವ ಗುಂಡಿಗೆ ಇದೆಯಾ?
http://thereda-mana.blogspot.com/
ರೂಪ
ಉ: ನಾಲಿಗೆ ಚಪಲ
ಗುಂಡಿಗೆಗೆ ಸವಾಲ್ !!!!!
ಉ: ನಾಲಿಗೆ ಚಪಲ
ನೀವು ವಿಶ್ವೇಶ್ವರಪುರಂ ಕಡೆಗೆ ಹೋದರೆ ಅಲ್ಲಿ ವಿ.ಬಿ ಬೇಕರಿ ಎದುರಿಗೆ ದಿನಾ ಸಂಜೆ ೭ ಗಂಟೆಯ ಮೇಲೆ ೮-೧೦ ಅಂಗಡಿಗಳವರು ಒಬ್ಬಟ್ಟು, ಬೋಂಡ ಮಾಡುತ್ತರೆ, ಮಾರುತ್ತಾರೆ. ಇಡೀ ರಸ್ತೆ ಬಾಯಿ ಚಪಲ ಬಿಡಿಸಲು ಹೇಳಿ ಮಾಡಿಸಿದ ಜಾಗ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನಾಲಿಗೆ ಚಪಲ
ಅಂದಹಾಗೆ, ’ಚಪಲ’ ಅನ್ನುವ ವಿಷಯಬಂದಾಗ, ’ಚಪಲ ಚನ್ನಿಗರಾಯ’ ಎನ್ನುವುದನ್ನು ಕೇಳಿದ್ದೇನೆ. ’ಶಿಸ್ತಿಗೆ’ ’ಶಿವಪ್ಪನಾಯಕ’ ನ ಥರಾ..
ಯಾರು ಈ ಚನ್ನಿಗರಾಯ..ಅಥವಾ ಸುಮ್ನೆ ರೈಮಿಂಗ್ ಪದಗಳಂತೆ ಬಳಸುತ್ತಾರೋ..
ಉ: ನಾಲಿಗೆ ಚಪಲ
ಚಪಲ ಚೆನ್ನಿಗರಾಯ - ಕಾಶಿನಾಥ್
ಉ: ನಾಲಿಗೆ ಚಪಲ
ಎಲ್ಲ್ಲಿ ತೆಗೆದುಕೊ೦ಡಿದ್ದು ಶ್ರೀನಿವಾಸ ಕಾ೦ಡಿಮೆ೦ಟ್ಸ್(ಸುಬ್ಬಮ್ಮನ ಅ೦ಗಡಿಲಾ)?
ಮು೦ಚೆಲ್ಲಾ ಚೆನ್ನಾಗಿರುತಿತ್ತು. ಈಗ .....................ಬೇಡಪ್ಪ ಅನ್ನಿಸಿಬಿಟ್ಟಿದೆ.
ಗಾ೦ಡಿಬಜಾರ್ನ ಅಡ್ಯಾರ್ ಆನ೦ದಭವನದಲ್ಲಿ ನಮ್ಮ ಮು೦ದೇನೇ ಮಾಡಿದ್ರೂ, ತುಪ್ಪದಲ್ಲಿ ಬೇಯಿಸಿದ ಕಾಯಿಹೋಳಿಗೆ ಸ್ವಲ್ಪ ಕಹಿ ಬರುತ್ತೆ. ಯಾಕೆ ಅ೦ತ ಗೊತ್ತಿಲ್ಲ.
ಉ: ನಾಲಿಗೆ ಚಪಲ
ನಾಲಿಗೆ ಚಪಲ ಕ್ಕೆ ಅಂತ, ಯಾವ್ಗ್ ಬೇಕಾದ್ರೆ ಆವಾಗ ತಿಂದ್ರೆ ಒಬ್ಬಟ್ಟುನ original ರುಚಿ ನಿಜ್ವಗ್ಲೂ ಸಿಗೋಲ್ಲ, ಹಬ್ಬದ time ನಲ್ಲಿ ತಿಂದ್ರೆ ತಿಂದಹಾಗೆ ಆಗೋದು,
ಏನ೦ತೀರ
ಗುರುಪ್ರಸಾದ್