ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ನನ್ನ ಹಳೆಯ ಜಂಗಮ ಯಂತ್ರ (ಮೊಬೈಲು) ವನ್ನು ಬದಲಾಯಿಸಲು ಯೋಚಿಸುತ್ತಿದ್ದೇನೆ. ಅಪೇಕ್ಷೆ ಇರುವ ಸೌಕರ್ಯಗಳೆಂದರೆ ನೀಲಿ ಹಲ್ಲು (ಬ್ಲೂಟೂತ್), ಎಫ್. ಎಂ ಮತ್ತು ಎಂಪಿಥ್ರೀ.. ಈ ಮೂರರಲ್ಲಿ ಯಾವುದು ಚೆನ್ನಾಗಿವೆ ಗೊತ್ತೇ?
೧. ಎಲ್ ಜಿ..ಯಾವುದೋ ೧೯೫ ವೋ ಏನೋ..ಹಾಡು ಹಸೆ ಚೆನ್ನಾಗಿ ಕೇಳ್ತದಂತೆ..
೨. ಸೋನಿ ಎರಿಕ್ ಮಗ (ಎರಿಕ್ಸನ್) ಡಬ್ಲೂ೨೦೦ಐ ಅಥವಾ ೩೦೦ ಐ.
೩. ನೋಕಿಯಾ..
ಹಾಂ...ಬ್ಯಾಟರಿ ತುಂಬಾಹೊತ್ತು ಬರಬೇಕು..

- madhava_hs ರವರ ಬ್ಲಾಗ್
- Login or register to post comments
- 286 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಮಾಧವ, ನನ್ನ ಸಲಹೆಯೆಂದರೆ, ವೈಫೈ ಇರುವ ಮೊಬೈಲ್ ತೊಗೊ (ತೊಗೊಳ್ಳಿ, ನೀವು ನನ್ನ ಓರಗೆಯವರಲ್ಲದಿದ್ದರೆ). ತುಂಬಾ ಬಳಕೆಗೆ ಬರತ್ತೆ, ದುಡ್ಡು ಹೆಚ್ಚಾದರೂ, ಮತ್ತೆ ಬೇರೆ ಬೇರೆ ರೀತಿಯಲ್ಲಿ ಹಣ ಉಳಿಸಬಹುದು.
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ನನ್ನಿ ಸುನಿಲ. ನಿಮ್ಮ ಓರಗೆಯವನು ಎಂದುಕೊಳ್ಳಿ. ಅಡ್ಡಿಯಿಲ್ಲ
ವೈಫೈ ಇರುವ ಆ ಹೈಫೈ ಫೋನಿಗೆ ಎಷ್ಟಾಗಬಹುದು?
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
೧೦,೦೦೦+ ಅನ್ಸತ್ತೆ, ಗೊತ್ತಿಲ್ಲ.
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ನೋಕಿಯಾ N72 ಚೆನ್ನಾಗಿದೆ. ಹಾಡು ಕೇಳಬಹುದು, FM ಕೇಳಬಹುದು, Bluetooth ಇದೆ, Battery back up ಚೆನ್ನಾಗಿದೆ
ಆದ್ರೆ ನಿಮಗೆ ಅದು ಹಳೇ model ಅನ್ನಿಸ ಬಹುದು.
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಮಾಧವರವ್ರೆ,
ನನ್ನ ಪ್ರಕಾರ ಎಲ್ಲ ಸೌಕರ್ಯಗಳಿರುವ ಒಡಾಡುವ ದೂರವಾಣಿಯು( ಮೊಬೈಲಿಗೆ ನನ್ನ ಸಹದ್ಯೋಗಿ ಇಟ್ಟಿರುವ ಹೆಸರು- ನಿಮ್ಮ ಜಂಗಮ ಯಂತ್ರ) ದೊರೆಯುವುದಿಲ್ಲ. ಕೆಳಗೆ ನನ್ನ ತಿಳಿದಿರವಷ್ಟು ಕೆಲವು ಸಲಹೆಯನ್ನು ಕೊಟ್ಟಿರುತೇನೆ.
ಎಲ್.ಜಿ - ಚಿತ್ರಗಳು ಚೆನ್ನ್ಗಿ ಬರುತ್ತದೆ
ಮೋಟರೊಲ - ಸಣ್ಣನೆ ಮತ್ತು ಕಮ್ಮಿ ತೊಕಕ್ಕೆ
ಸೋನಿ ಎರಿಕ್ಮಗ - ಸುಶ್ರವ್ಯ ಸಂಗೀತ ಅಲಾಪನೆಗೆ
ಸ್ಯಾಮ್ಸಂಗ್ - ನೋಡಲು ಉತ್ತಮ ವಿನ್ಯಾಸಾಕ್ಕಾಗಿ
ನೋಕಿಯ ಧೀರ್ಗ ಬ್ಯಾಟರಿ ಬಾಳಿಕೆಗೆ.ಯಾರದರು ಈ ಎಲ್ಲ ಗುಣಗಳಿರುವ ಜಂಗಮ ಯಂತ್ರವ ಕಂಡಿಡಿಯಾರಬಾರದೇಕೆ....
ಬೆನ್ Q ಮತ್ತು ಜೆಟ್ ಲಿ ಬಗ್ಗೆ ಅಷ್ತೊಂದು ಮಾಹಿತಿ ಇಲ್ಲ
ಆದ್ರೆ ಮಾಧವ...ನೀವು ಸೊನಿ ಎರಿಕ್ಸೊನ್ ಕರೀದಿಸಬಹುದು( ಆದ್ರೆ ಬ್ಯಾಟರಿ ಬ್ಯಾಕ್ ಅಪ್ ಮಾತ್ರ ತುಂಬ ಕಮ್ಮಿ ಇದೆ ....ದಿನಾನು ಚಾರ್ಗೆ ಮಾಡ್ಬೇಕು. )
ಸ್ಪ್ರಹಿ
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಧನ್ಯವಾದಗಳು ಸ್ಪೃತಿಯವರೇ..
ಸ್ಠಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ.. ಸುಮಾರು ಎರಡು ವರ್ಷ ಉಪಯೋಗಿಸಿದ ನಂತರ ಅರಿವಿಗೆ ಬಂದದ್ದೆಂದರೆ ಜಂಗಮ ಯಂತ್ರಕ್ಕೆ ಅಳಿವಿಲ್ಲ..ಜಂಗಮಯಂತ್ರ can not be destroyed but only be replaced
ನನ್ನಂಥ ಸೋಮಾರಿ ೩-೪ ದಿನಕ್ಕೊಮ್ಮೆ ಚಾರ್ಜು ಮಾಡಿದರೆ ಅದೇ ಮೊಬೈಲಿನ ಭಾಗ್ಯ. ಇನ್ನು ದಿನಾ ಚಾರ್ಜ್ ಮಾಡುವುದು..ಉಹುಂ..ಇದು ಆಗುವ ಮಾತಲ್ಲ..ಹಾಗಾಗಿ ಸೋನಿ ಎರಿಕ್ಮಗ ನಮಗೆ ಹೊಂದೊಲ್ಲ ಬಿಡಿ
ಮೋಟರೋಲ ಬ್ಯಾಟರಿ ಹೇಗೆ ? ಯಾರೋ ಮೋಟೊ ಯುವ ಚನ್ನಾಗಿದೆ ಅಂದರು..ಅದು ಕಾಸಿಗೆ ತಕ್ಕ ಕಜ್ಜಾಯ(ಬೆಲೆ) ಅರ್ಥಾತ್ value for money ಅಂದರು..
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಮೋಟೊರೋಲ ದು Moto rokr E6 ಚೆನ್ನಾಗಿದೆ.. touch screen, ಫೋಟೋ ಪರ್ವಾಗಿಲ್ಲ, ಹಾಡು ಚೆನ್ನಾಗೇ ಕೇಳತ್ತೆ.. blue tooth ಇದೆ.. word documentಗಳು, pdfಗಳು ಎಲ್ಲಾ support ಮಾಡತ್ತೆ.. ಬೆಲೆ 10K.. ಆಫೀಸ್ ಅಲ್ಲಿ ಡೇಟಾ ಕೇಬಲ್ ಇಟ್ಕೊoಡಿದ್ರೆ ಯಾವಾಗ್ ಬೇಕಾದ್ರೂ ಚಾರ್ಜ್ ಮಾಡ್ಕೋಬಹುದು..
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ನೀವು ನೋಕಿಯಾ 3110 ಕ್ಲಾಸಿಕ್ ಟ್ರೈ ಮಾಡ್ಬೋದು
ನಿಮ್ಮವನೇ,
ಅರವಿಂದ
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಮಾಧವ,
ಮೋಟೊ ಯುವದ ಬ್ಯಾಟರಿ ಬ್ಯಾಕ್ ಅಪ್ ಅಷ್ತೊಂದು ಚೆನ್ನಗಿಲ್ಲ (ನೋಕಿಯದಷ್ತು) ಅಂಥ ಕೇಳಿಪಟ್ಟೇ. ನೀವು ನಿಮ್ಮ ಬಗ್ಗೆ ಹೇಳಿರೋದು ನೋಡಿದ್ರೆ ನಿಮಗೆ ನೋಕಿಯನೆ ಸರಿ ಅನ್ನಿಸುತ್ತೆ.
ಸ್ಪ್ರಹಿ