~
ಶಿವಮಣಿ ಎಂಬ ಅದ್ಭುತ ಪ್ರತಿಭೆ
ಈ ಬಾರಿ ದಸರಾದಲ್ಲಿ ಶಿವಮಣಿಯನ್ನು ಕರೆಸಿದ್ದರು. ಎಷ್ಟು ಚೆನ್ನಾಗಿ ಸಂಗೀತ ವಾಧ್ಯಗಳನ್ನು ನುಡಿಸುತ್ತಿದ್ದ ಅಲ್ಲವೇ. ಖ್ಯಾತ ಸಂಗೀತಗಾರ ಎ.ಆರ್.ರೆಹಮಾನ್ ಹಾಡುಗಳಿಗೂ ಈತನೇ ಪಕ್ಕವಾದ್ಯಗಳನ್ನು ನುಡಿಸುವುದಂತೆ. ಬೆಂಗಳೂರಿನಲ್ಲಿಯೂ ಗಣೇಶ ಹಬ್ಬದ ಸಮಯದಲ್ಲಿ ಈ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಂತೆ.
ಅಗ್ಗದಲ್ಲಿ ಹಾಡುಗಳನ್ನು ಬರೆಸಿ ’ಚಿತ್ರಾನ್ನ ಚಿತ್ರಾನ್ನ’ ಮಾಡುವ ಬದಲು ಸಂಗೀತ ನಿರ್ದೇಶನಕ್ಕೆ ಭಾಷೆಯ ಹಂಗಿಲ್ಲದೆ ಉತ್ತಮ ಸಂಗೀತ ನೀಡಬಲ್ಲವರನ್ನು ಹುಡುಕುವುದು ಕನ್ನಡ ಚಿತ್ರಗಳಲ್ಲಿ ಶುರುವಾಗಬೇಕು. ಆಫ್ ಕೋರ್ಸೆ, ಸಂಗೀತ ಯಾರದ್ದಾದರೇನಂತೆ ಹಾಡು ಕನ್ನಡದ್ದಾಗಿದ್ದರೆ ಸಾಕು ನಮಗೆ ಅಲ್ಲವೇ?

- madhava_hs ರವರ ಬ್ಲಾಗ್
- Login or register to post comments
- 399 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಶಿವಮಣೆ ಯಾವ ಕನ್ನಡದ ಹಾಡಿಗೆ ಡ್ರಮ್ ಬಡೆದಿದ್ದಾರೆ?
ಯುವ ದಸರ ಅಂದರೆ ಹಿಂದಿ ಹಾಡುಗಳ ಸಮ್ಮೇಳನ.. ಈ ಬಗ್ಗೆ ಏನ್ಗುರು ಬರಹ ಓದಿರಿ.
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ನಾನು ಹೇಳ ಹೊರಟಿದ್ದು ಶಿವಮಣಿ ಡ್ರಂ ಬಡಿತದ ಬಗ್ಗೆಯಷ್ಟೇ, ಹಿಂದಿ ಹಾಡುಗಳ ಬಗ್ಗೆ ಅಲ್ಲ !!
>>"ಯುವ ದಸರ ಅಂದರೆ ಹಿಂದಿ ಹಾಡುಗಳ ಸಮ್ಮೇಳನ.."
ಹೌದು ಈ ಬಗ್ಗೆ ನನಗೂ ಬೇಸರವಿದೆ. ದೇಶದ ಮೂಲೆ ಮೂಲೆಯಿಂದ ಮೈಸೂರಿಗೆ ಬರುವವರು ಮೈಸೂರು ಸಂಸ್ಕೃತಿ, ಭಾಷೆ ನೋಡಲು ಬರುತ್ತಾರೆ ವಿನಃ ಹಿಂದಿ ಹಾಡು ಕೇಳಲು ಅಲ್ಲ. ಇದನ್ನು ಆಯೋಜಕರು ಅರಿಯಬೇಕಿತ್ತು. ಒಂಥರಾ ರಷ್ಯನ್ ಸಂಸ್ಕೃತಿ ಉತ್ಸವ ನೋಡಲು ಹೋಗಿ ಭರತನಾಟ್ಯ ನೋಡಿಕೊಂಡು ಬಂದಂತೆ !
ನಾನು ಹೇಳಿದ್ದು ಶಿವಮಣಿ ಡ್ರಂ ಬಡಿತದ ಬಗ್ಗೆಯಷ್ಟೇ !!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಅದನ್ನೇ ಕನ್ನಡ ಹಾಡುಗಳಲ್ಲಿ ಡ್ರಂ ಬಾರಿಸಲ್ವೇ?
ಕನ್ನಡ ಹಾಡುಗಳಿಗೆ ಡ್ರಂ ಬಾರಿಸೋರು ಅಲ್ಲೂ ಕನ್ನಡ ಹಾಡುಗಳ ತಾಳ ಬಾರಿಸಿದ್ರೆ ಚಂದಿತ್ತಲ್ವ?
ಶಿವಮಣಿಗೇನು ಬೆಂಗಳೂರಿನ ದೊಡ್ಡ ೫ ತಾರೆ ಹೊಟೆಲುಗಳಲ್ಲೂ ಅವಕಾಶ ಸಿಗತ್ತೆ.
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಶಿವಮಣಿಯವರ ಸಂಗೀತ ಕಚೇರಿಗೆ ನಾನೂ ಹೋಗಿದ್ದೆ...
ಯುವ ದಸರಾದಲ್ಲಿ ಶಿವಮಣಿ 'ಹಾಲು ಜೇನು' ಒಳಗೊಂಡು ೨-೩ ಕನ್ನಡ ಹಾಡಿಗೆ ವಾದ್ಯಗಳ ಹಿಮ್ಮೇಳ ಕೊಟ್ಟರು...
ಆ ರಿಮಿಕ್ಸ್ ನನಗೆ ಅಷ್ಟು ಚೆನ್ನು ಎನಿಸಲಿಲ್ಲ...
ಮಹೇಶರೆ,
ಶಿವಮಣಿ ಅವರದ್ದು ಬರೀ ತಾಳ ವಾದ್ಯವಾದ್ದರಿಂದ ನುಡಿಯ ಹಂಗಿಲ್ಲ - ಅಲ್ಲವೇ?
ಹೌದು, ಹಮ್ಮ ಹಮ್ಮ ಮುಂತಾದ ಕೆಲವು ಹಿಂದಿ ಹಾಡಿಗೆ ಜನ ಕುಣಿದಿದ್ದೇನೋ ನಿಜ...ಆದರೇನು, ಇವರ ಕಲೆ ನುಡಿಗೆ ಸೀಮಿತವಿಲ್ಲ...
--ಶ್ರೀ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಶಿವಮಣಿಯ ಡ್ರಮ್ಮಿಗೂ ದಸರೆಗೂ ಏನು ಸಂಬಂದ?
ಕನ್ನಡಕ್ಕೂ ದಸರೆಗೂ ಸಂಬಂದವಿದೆ..
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಏನ್ರೀ ಹಿಂಗಂದ್ ಬಿಟ್ರೀ!
ನಮ್ ಕನ್ನಡ ನಾಡಲ್ಲಿರೋ ಪ್ರತಿಭೆಗಳು ಮಾತ್ರ ಜಾಗತಿಕವಾಗಿ ಪ್ರಸಿದ್ಧವಾಗಬೇಕು, ಬೇರೆ ಊರ/ರಾಜ್ಯದ ಪ್ರತಿಭೆ ಬೇಡ ಅನ್ನೋ ದಾಟಿ ನಿಮ್ಮ ಮೇಲಿನ ಮಾತಲ್ಲಿ ಇದೆ...
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಬೇರೆ ರಾಜ್ಯ ಊರೋರಿ ಆ ರಾಜ್ಯದಲ್ಲಿ ಅವಕಾಶ ಕೊಟ್ಟಿಲ್ವ?
ನಮ್ ರಾಜ್ಯದಲ್ಲಿ ಡ್ರಮ್ ಬಡಿಯೋಗೆಲ್ಲಿ ಅವಕಾಶ ಕೊಟ್ಟಿದ್ದಾರೆ?
ಎಶ್ಟು ಮಂದಿ ನಮ್ ಕನ್ನಡ ಕಲೆಗಾರು ಆ ಯುವದಸರದಲ್ಲಿ ಇದ್ದರು?
೯೦% ಬೇರೆಯೋರೆ ತಾನೆ?
ದಸರೆ ನಾಡ ಹಬ್ಬವೇ, ರಾಷ್ಟ್ರೀಯ ಹಬ್ಬವೋ?
ಸರಿ ಮುಂದಿನ ಸರತಿ.. ದಸರೆ ಪ್ರಯುಕ್ತ ಮೈಕಲ್ ಜಾಕ್ಸನ್ ಕರೆಸಲಿ ಬಿಡಿ..!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಹಲವಾರು ತಾಳ ವಾದ್ಯಗಳನ್ನು (ಸುಮಾರು ೨೦ ವಾದ್ಯಗಳು) ಒಬ್ಬನೇ ಬಾರಿಸುವುದು ಅದ್ಭುತ ಪ್ರತಿಭೆ ಅಲ್ಲವೇ?
ಅದ್ಭುತ ಪ್ರತಿಭೆ ನಮ್ಮ ನಾಡಿನವರಿಗೆ ಒಂದು ಸ್ಫೂರ್ತಿಯ ಸೆಲೆಯಾಗಬಹುದು...
ಕನ್ನಡ ನಾಡಲ್ಲೇ ಇಂತಹ ಪ್ರತಿಭೆಗಳು ಹೊರಹೊಮ್ಮಬಹುದು...
ಜಾಗತಿಕ ಪ್ರತಿಭೆಯನ್ನು ನಮ್ಮ ನಾಡಿನ ಮುಂದೆ ಇಡುವುದನ್ನು ಮೆಚ್ಚಬೇಕು...
ಮೈಕೆಲ್ ಜಾಕ್ಸನ್ ಕೂಡ ಬರಲಿ..ಒಳ್ಳೇದೆ!
ಅಂದ ಹಾಗೆ, ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನ ಅಂದೇ ಇತ್ತು...ನಮ್ಮ ನಾಡವರೇ ಇವರು...
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ನಂಗೆ ಬ್ರಿಟ್ನಿ ಬೇಕು..! ಆಗ ನಾವು ಪಕ್ಕ ಇಂಟರ್‍ನ್ಯಾಶೆನಲ್ ಲೆವಲ್..
ಸಕ್ಕತ್ರೀ.. ಈ ಬ್ಲಾಗನ್ನ ನಮ್ ಮಂತ್ರಿಗಳು ಓದಲಿ ದೇವ!!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
> ನಂಗೆ ಬ್ರಿಟ್ನಿ ಬೇಕು..!
ರೀ ಈಗ ತಾನೆ ಮದ್ವೆ ಆಗಿದೀರ, ಬ್ರಿಟ್ನೆ ಬೇಕು ಅಂತೀರ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ನಮ್ ಹೆಂಡ್ತಿಗೂ ಅವಳು ಇಶ್ಟ..!!
ಅವಳ ಹಾಡು ಕೇಳೋಕೆ ರೀ.. .. ನಾನು ಕಣ್ಣುಮುಚ್ಚಿ ಹಾಡು ಕೇಳ್ತೀನಿ..
ನೀವು ಶಿವಮಣಿಯನ್ನ ನೋಡಕ್ಕೆ ಹೋಗಿದ್ರ, ರಾಮ ರಾಮ~
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
> ರಾಮ ರಾಮ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಏನೋಪ್ಪ.. ! ಅಚ್ಚರಿ ನನಗೂ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
> ೯೦% ಬೇರೆಯೋರೆ ತಾನೆ?
ಸ್ವಲ್ಪ ಕೆಳಗೆ ನೋಡಿ...೯೦ ಹೇಗಾಯ್ತು ಅಂತ ಹೇಳಿ
01.10.08
Wednesday 6.30 p.m. to 7.30 pm Inauguration by
Vijay R. Bharadwaj,
National Cricket player
After 7.30 p.m. Onwards Program by Vasundara Das
02.10.08
Thursday 6.00 p.m. to 7.00 pm Music and Dance performance by College troupes
After 7.00 p.m. onwards Musical Evening,
Sri Kailash Kher & Troupe, Mumbai
03.10.08
Friday 6.00 p.m. to 7.00 pm Dance Program by, Sanathana Natyashala, Mangalore
7.00 p.m. to 8.00 pm Bharatanatyam by Krupa Troupe
8.00 p.m. onwards Music Concert by
Jago Hindustani and Party, Pune
04.10.08
Saturday 6.00 p.m. to 7.00 pm Music and Dance performance
by College Troupes
7.00 p.m. to 8.00 pm Music Concerty by
Shankar Mahadevan, Mumbai
05.10.08
Sunday 6.00 p.m. to 7.00 pm Music and Dance performance
by College Troupes
7.00 p.m. Onwards Jugalbandi
Sivamani, Chennai and Praveen Godhkindi, Bangalore
06.10.08
Monday 6.00 p.m. to 7.00 pm Music and Dance performance
by College Troupes
7.00 p.m. Onwards Music Concert by
Rajesh Krishnan and party, Bangalore
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಮೊನ್ನೆ ದಿಲ್ಲೀಲಿ ಡೊಳ್ಳು ಕುಣಿತ ನೋಡ್ದೆ! ಡ್ರಂಕುಣಿತ!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಡೆಲ್ಲೀಲಿ ಯಾಕೆ ಡೊಳ್ಳುಕುಣಿತವಿತ್ತು?
ಡೆಲ್ಲಿ ಎಶ್ಟೇ ಆದರೂ ನಮ್ ದೇಶದ ರಾಜದಾನಿ ಅಲ್ಲಿ.. ಎಲ್ಲಾ ಸಲ್ಲವುದು... !!
ಆದರೆ ಮಯ್ಸೂರ ದಸರೆ ಇನ್ನೂ ಒಂದು ಮಟ್ಟ ಮೇಲಕ್ಕೆ ಇಂಟರ್‍ನ್ಯಾಶಿನಲ್ ಲೆವೆಲ್ಲಿಗೆ ಏರಿಸಲು.. ಮುಂದಿನ ವರ್ಶ ಬ್ರಿಟ್ನಿ, ರೋಬಿ ವಿಲಿಯಮ್ಸ್.., ಮುಂತಾದವರ ಹಾಡುಗಾರಿಕೆ ಇಡಬೇಕು..
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಝಾರ್ಖಂಡದ ದೇವಘರ್ ದಲ್ಲೂ ನೋಡಿದೆ. ನಮ್ಮ ನಾಡ ಡ್ರಂ ಕುಣಿತ.
"ಮೈಕೈ ಎಲ್ಲ ಜಾಕಿಸಾಣ" ನಮ್ಮೊರವ್ನೆ ಅಲ್ವ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ನಿಮ್ಮ ವಾದ ಚೆನ್ನಾಗಿದೆ, ಮೈಸೂದು ದಸರಾದಲ್ಲಿ, ಹಳೆ ಮೈಸೂರು ಸಂಸ್ಥಾನದ್ದು ಬಿಟ್ಟು ಬೇರೆ ಏನು ನಡೆಯಲೇ ಬಾರದು.
ಹಂಪಿ, ರಾಯಚೂರು, ಗುಲ್ಬರ್ಗಾ ಇಲ್ಲಿರುವವರ ಕಲೆಗಳನ್ನು, ಆಯಾ ಜಿಲ್ಲೆಗೆ ಸೀಮಿತಗೊಳಿಸಿ.
ಮೈಸೂರಿಗೇಕೆ? ಅಲ್ಲೇನ್ ಕೆಲ್ಸ?
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ರೀ
ಹೇಳ್ತಾ ಇಲ್ವ.. ಮಯ್ಸೂರಲ್ಲಿ ಬ್ರಿಟ್ನಿ, ರಾಬಿ ವಿಲಿಯಮ್ಸ್ ಕರೆಸಿ ಅಂತ...ಇವರ ಮುಂದೆ ಶಿವಮಣಿ ಯಾವ ಮೂಲೆ...
ಇಂಟರ್‍ನ್ಯಾಶೆನಲ್ ಮಟ್ಟಕ್ಕೆ ಹೋಗಣ.
ಇಡೀ ಕರ್ನಾಟಕವೇ ಇರತ್ತೆ ಜನಪದ ಮೇಳ, ದಸರ ಮೆರವಣಿಗೆಯಲ್ಲಿ.. ! ಅದ್ಯಾಕೆ ಅಂದರೆ.. ರಾಯಚೂರು, ಗುಲಬರುಗ ಮುಂತಾದವೂ ಟಿಪ್ಪು ಸುಲ್ತಾನನ ಕಾಲದಲ್ಲಿ ಮಯ್ಸೂರಿಗೆ ಸೇರಿದ್ದವು.. ಇನ್ನು ದಸರ ವಿಜಯನಗರದ ಸಂಪ್ರದಾಯ.. ವಿಜಯನಗರಕ್ಕೆ ಈ ಪ್ರದೇಶಗಳೆಲ್ಲ ಸೇರಿದ್ದವು..
ಈ ಕಂತೆ ಪುರಾಣ ಯಾಕೆ... ಸುಮ್ನೆ...
ಮುಂದಿನ ವರ್ಶ "ಡೇಂಜರ್‍ಸ್"MJ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
> ಇಂಟರ್‍ನ್ಯಾಶೆನಲ್ ಮಟ್ಟಕ್ಕೆ ಹೋಗಣ.
ಶಿವಮಣಿ ಇನ್ಟರ್ ನಾಶನಲ್ ಫೇಮಸ್ ಅಲ್ಲ ಅಂತ ನಿಮಗೆ ಯಾರು ಹೇಳಿದ್ದು?
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ರೀ ಶಿವಮಣೆ ನಮ್ ದೇಶದೋನು ಆದುದರಿಂದ ಅವನು ಇಂಟರ್‍ನ್ಯಾಶನಲ್ ಅಲ್ಲ...
ನಮಗೆ ಏನಿದ್ದರೂ ಹೊರರಾಜ್ಯದೋರು, ಹೊರದೇಶದೋರ್ ತಾನೇ ಬೇಕಾಗಿರೋದು!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
> ನಮಗೆ ಏನಿದ್ದರೂ ಹೊರರಾಜ್ಯದೋರು, ಹೊರದೇಶದೋರ್ ತಾನೇ ಬೇಕಾಗಿರೋದು!
ಅಲ್ಲ...ಪ್ರತಿಭೆಯನ್ನಷ್ಟೆ ಗುರುತಿಸಿರುವುದು...
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಅದೇ
ನಮಗೆ ಏನಿದ್ದರೂ ಹೊರರಾಜ್ಯದೋರು, ಹೊರದೇಶದೋರ್ ಪ್ರತಿಭೇ ತಾನೇ ಬೇಕಾಗಿರೋದು
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಸ್ವಲ್ಪ ಮೇಲೆ, ನಾನು ಮುಂಚೆ ಹಾಕಿದ, ಯುವ ದಸರಾ ದಲ್ಲಿ ನಡೆದ ಕಾರ್ಯಕ್ರಮಗಳ ಪಟ್ಟಿ ನೋಡಿ...
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಹು ಆರಲ್ಲಿ ನಾಲಕ್ಕು ಹೊರಗಡೆಯವರದು.. ಲೆಕ್ಕ ಹಾಕಿರಿ.
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಯಾವುದು ಆರರಲ್ಲಿ ನಾಲಕ್ಕು? ೧೩-೧೪ ಕಾರ್ಯಕ್ರಮಗಳಿವೆ ಅಲ್ಲಿ...!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಸರಿಯಾಗಿ ನೋಡಿ...
-------------------------------------------------------------------------------------------
Vijay R. Bharadwaj, - ಕನ್ನಡ ನಾಡವರು....
National Cricket player
After 7.30 p.m. Onwards Program by Vasundara Das - ಕನ್ನಡ ನಾಡವರು....
02.10.08
Thursday 6.00 p.m. to 7.00 pm Music and Dance performance by College troupes - ಕನ್ನಡ ನಾಡವರು....
After 7.00 p.m. onwards Musical Evening,
Sri Kailash Kher & Troupe, Mumbai
03.10.08
Friday 6.00 p.m. to 7.00 pm Dance Program by, Sanathana Natyashala, Mangalore - ಕನ್ನಡ ನಾಡವರು....
7.00 p.m. to 8.00 pm Bharatanatyam by Krupa Troupe - ಕನ್ನಡ ನಾಡವರು....
8.00 p.m. onwards Music Concert by
Jago Hindustani and Party, Pune
04.10.08
Saturday 6.00 p.m. to 7.00 pm Music and Dance performance
by College Troupes - ಕನ್ನಡ ನಾಡವರು....
7.00 p.m. to 8.00 pm Music Concerty by
Shankar Mahadevan, Mumbai
05.10.08
Sunday 6.00 p.m. to 7.00 pm Music and Dance performance
by College Troupes - ಕನ್ನಡ ನಾಡವರು....
7.00 p.m. Onwards Jugalbandi
Sivamani, Chennai and Praveen Godhkindi, Bangalore
Praveen Godhkindi - ಕನ್ನಡ ನಾಡವರು....
06.10.08
Monday 6.00 p.m. to 7.00 pm Music and Dance performance
by College Troupes - Praveen Godhkindi
7.00 p.m. Onwards Music Concert by
Rajesh Krishnan and party, Bangalore - ಕನ್ನಡ ನಾಡವರು....
--------------------------
೩೦% ಅಗಲಿಲ್ಲವಲ್ರೀ!
ಏನು ಗುರುದಲ್ಲಿ ಬರೆದಿದ್ದನ್ನ ನಂಬ್ತೀರ, ಸತ್ಯ ಏನು ಅಂತ ಅರಿಯಲ್ವಾ?
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
http://enguru.blogspot.com/2008/10/kanaadada-yuvakaranne-kadeganisida.ht...
ನೋಡಿರಿ.
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಮಾನ್ಯ ಶ್ರೀನಿವಾಸ್,
ನಿಮ್ಮ ಲೇಖನ ನೋಡಿದೆ ಹಾಗು ನಿಮ್ಮ ವಾದವನ್ನು ಕೂಡ. ಮಹೇಶ್ ಅವರು ಹೇಳುತ್ತಿರುವುದರಲ್ಲಿ ತಪ್ಪೇನಿದೆ ಹೇಳಿ. ಅರೆ ದಸರಾ ನಮ್ಮ ನಾದ ಹಬ್ಬ, ನಮಗಾಗಿ ನಮ್ಮ ಜನರಿಗಾಗಿ ಇರುವ ನಾಡ ಹಬ್ಬ. ಇಲ್ಲಿ ಪ್ರತಿಭೆ ಬೆಳಕಿಗೆ ಬರಬೇಕಾಗಿರುವುದು ನಮ್ಮ ಜನರದೇ ಹೊರತು ಬೇರೆಯವರನ್ನ ತಂದು ಇಲ್ಲಿ ಮೆರೆಸೋದಲ್ಲ. ನೀವು ಹಾಕಿರುವ ಪಟ್ಟಿಯನ್ನ ನೋಡಿ. ಅಲ್ಲಿ primetime ಅಂತ ಕರಿಯುವ ಸಮಯ ಅಂದ್ರೆ ೮ ರ ಮೇಲೆ. ಅದೆಲ್ಲ ಯಾರ ಪಾಲು ಆಗಿದೆ ಅಂತ ನೋಡಿ. ಕೇವಲ ರಾಜೇಶ್ ಕೃಷ್ಣನ್ ಒಬ್ಬರಿಗೆ ಆ ಜಾಗ ಸಿಕ್ಕಿದೆ. ಇನ್ನುಳಿದವರು ಏನು ಅವರಿಗೆ ಅಲ್ಲಿ perfom ಮಾಡುವ ಯೋಗ್ಯತೆ ಇಲ್ವಾ. ಅಥವಾ ಹಿಂದಿ ಮತ್ತು ಬೇರೆ ಭಾಷೆ ಅಲ್ಲಿ ಕೊಡ್ಲಿಲ್ಲ ಅಂದ್ರೆ ಜನ ಬರಲ್ಲ ಅಂತ್ಲ. ನಿಮ್ಮ ಪ್ರಕಾರ ಹೊರ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅಂದ್ರೆ ನಮ್ಮ ಜನಕ್ಕೆ ಯಾರು ಅವಕಾಶ ಕೊಡ್ತಾರೆ.
ಎಷ್ಟು ರಾಜ್ಯದವರು ನಮ್ಮ ಇಲ್ಲಿಯ ಪ್ರತಿಭೆಗಳನ್ನ ಕರೆಸಿಕೊಂಡು ಹೀಗೆ ಅವಕಾಶಗಳನ್ನು ಕೊಟ್ಟಿದ್ದಾರೆ. ನೀವು ಯೋಚಿಸಿ. ಮೊದಲು ಕನ್ನಡ, ಕರ್ನಾಟಕ ಆಮೇಲೆ ಬೇರೆಯದು ಅಂತ ಅನ್ಕೊಂಡ್ರೆ ಮಾತ್ರ ನಮ್ಮ ರಾಜ್ಯ ಉಧ್ಧಾರ ಆಗೋಕೆ ಸಾಧ್ಯ.
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
> ದಸರಾ ನಮ್ಮ ನಾದ ಹಬ್ಬ
ಮೊದಲು "ನಾಡು" define ಮಾಡಿ...
ದಸರಾ ಆಚರಣೆ ಕರ್ನಾಟಕದ ಯಾವ ಯಾವ ಭಾಗದಲ್ಲಿ ಅಗುತ್ತಿತ್ತು ಅನ್ನುವುದರ ಬಗ್ಗೆ ವಿಸ್ತೃತ ವಿಚಾರ ನೀಡಿ.
ಆಮೇಲೆ ಮಿಕ್ಕಿದ್ದು ಮಾತಾಡೋಣ...
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಅಂದ ಹಾಗೆ, ಲೇಖನ ಮಾಧವರದ್ದು. ಅವರಿಗೆ credit ಕೊಡ್ರೀ
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಕ್ಷಮಿಸಿ ಮಾಧವ,
>ದಸರಾ ಆಚರಣೆ ಕರ್ನಾಟಕದ ಯಾವ ಯಾವ ಭಾಗದಲ್ಲಿ ಅಗುತ್ತಿತ್ತು ಅನ್ನುವುದರ ಬಗ್ಗೆ ವಿಸ್ತೃತ ವಿಚಾರ ನೀಡಿ.
ಯಾವ ಭಾಗದಲ್ಲಿ ಅಂದ್ರೆ ನಮ್ಮ ಕರ್ನಾಟಕದಲ್ಲ?
ದಸರಾ ಹಬ್ಬಕ್ಕೆ ನಮ್ಮ ನಾಡಿನಲ್ಲೇ ಮಹತ್ವದ ಸ್ಥಾನ ಇದೆ. ಯಾವ ಭಾಗ ಅನ್ನುವುದಕ್ಕಿಂತ ನಮ್ಮನ್ನು ಆಳಿದ ಎಲ್ಲ ರಾಜಮನೆತನದವರುಅದನ್ನ ಸಂಭ್ರಮದಿಂದ ಆಚರಣೆ ಮಾಡ್ತಿದ್ರು ಅನ್ನೋದು ಇಲ್ಲಿ ಗಮನಾರ್ಹ. ಚಾಲುಕ್ಯರು ರಿಂದ ವಿಜಯನಗರದ ಅರಸರು ಮತ್ತು ನಮ್ಮ ಕೊನೆಯ ಮೈಸೂರು ಸಂಸ್ಥಾನದಲ್ಲೂ ಇದನ್ನ ಅರ್ಚರಣೆ ಮಾಡ್ತಿದ್ರು.
ಇದನ್ನ ಮೈಸೂರು ರಾಜರು ನಾಡ ಹಬ್ಬ ಅಂತ ಘೋಷಣೆ ಮಾಡಿದ್ರು.
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
ಚೇತನ್..
ಉತ್ತರ ಕರ್ನಾಟಕದಲ್ಲಿ ನವರಾತ್ರಿ ಹಬ್ಬಕ್ಕೆ ಮಂದಿ ಉಪಾಸ ಇರ್ತಾರಂತೆ...
ಅದೂ ಅಲ್ಲದೇ ಈ ನವರಾತ್ರಿಯಂನು ತುಂಗೆ ತೀರದ ಹಂಪೆಯಲ್ಲೇ ಶುರುಮಾಡಿದ್ದು ವಿಜಯನಗರದರಸರು(ಕ್ರುಶ್ಣದೇವರಾಯಂಗಿಂತ ಮುಂನವೇ)...
ವಿಜಯನಗರದ ನೆಲೆದ ಹರವಿನಲ್ಲಿ ಬರುವ ಅಶ್ಟು ಕಂನಡಿಗರಿಗೆ ಹಬ್ಬವಿದು.. ವಿಜಯನ ಕ್ರುಶ್ಣೆಯಿಂದ ಕಾವೇರಿಯ ತನಕ ಇತ್ತಲ್ಲ ಇವೊತ್ತಿನ ಕರ್ನಾಟಕದಂತೆಯೇ.!
ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
೧. ಯುವ ದಸರಾ ೯೦% ಹೊರನಾಡವರದ್ದು ಅಂದಾಗ ಅದು ತಪ್ಪು ಅಂತ ತೋರಿಸಿದೆ ಅಷ್ಟೆ..
೨. ನಿಮಗೆ ಬರಿ ರಾಜೇಶ್ ಕೃಷ್ಣನ್ ಮಾತ್ರ ಯಾಕ್ರೀ ಕಣ್ಣಿಗೆ ಬೀಳ್ತಾರೆ.
ಪ್ರೈಮ್ ಟೈಮ್ ನಲ್ಲೇ ಪ್ರವೀಣ್ ಕೊಳಲು ನುಡಿಸಿದ್ದು..
೩. ವಸುಂಧರ ದಾಸ್ ಬೆಂಗಳೂರವ್ರು...ಇವರಿಗೂ ಪ್ರೈಮ್ ಟೈಮ್ ಸಿಕ್ಕಿತ್ತು!
ಅವರು ಏನು ಹಾಡಿದರು ಅನ್ನೋದು ಬೇರೆ ವಾದ, ಇಲ್ಲಿ ಶಿವಮಣಿ ನಮ್ಮ ನಾಡವರಲ್ಲ ಅಂತಷ್ಟೆ ಇದೆ...
4. ಕೊನೆಯದಾಗಿ, ನಮ್ಮ ಮೈಸೂರು ಅರಸರು, ಅವರು ಆಳುತ್ತಿದ್ದಾಗಲೇ, ಬೇರೆ ನಾಡ ವಿದ್ವಾಂಸರನ್ನು ಕರೆಸುತ್ತಿದ್ದರು ಕಲೆಯನ್ನು ಆಸ್ವಾದಿಸಲು...ಈಗ ನಮ್ಮದೇನು ತಕರಾರು!!!
ಇಷ್ಟಕ್ಕೂ ನಮ್ಮ ನಾಡ ಪ್ರತಿಭೆ ಮಾತ್ರ ಬೇಕೆ - ಹಾಗೆ ಆಗಲಿ ಬಿಡಿ; ನಾನು ಹೇಳೋದನ್ನ ಹೇಳಿದೀನಿ...