ಜಗ್ಗೇಶ್ ಚಿತ್ರ
ನೆನ್ನೆ ಟಿ.ವಿ ಯಲ್ಲಿ ಯಾವುದೋ ರಾಜಕೀಯಕಾರಣಗಳಿಗಾಗಿ ವಾರ್ತೆಯಲ್ಲಿ ಜಗ್ಗೇಶ್ ರನ್ನು ನೋಡುವಂತಾಯಿತು. ತಮ್ಮದೇ ಆದ ಶೈಲಿಯಲ್ಲಿ ಕೆಲವು ವಿವರಗಳನ್ನು ವಿವರಿಸುತ್ತಿದ್ದರು.
ಏನೋ ಒಂದು ಡೈಲಾಗ್ ಕೇಳಿದ ಸಂತೋಷವಾಯ್ತು.
ವಿಷಯ ಅದಲ್ಲ..
ಅವರ ಚಿತ್ರಗಳನ್ನು ನೋಡಿ ಬಹಳ ದಿನಗಳಾದವು. ಅವರ ಇತ್ತೀಚಿನ ಚಿತ್ರ ’ನೀ ಟಾಟಾ ನಾ ಬಿರ್ಲಾ’ ಹೇಗಿದೆ? ಚೆನ್ನಾಗಿದ್ದರೆ ವಾರಾಂತ್ಯದಲ್ಲಿ ನೋಡುವ ’ಸ್ಕೆಚ್’ ಹಾಕ್ತೀನಿ.

- madhava_hs ರವರ ಬ್ಲಾಗ್
- Login or register to post comments
- 319 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಜಗ್ಗೇಶ್ ಚಿತ್ರ
ಪ್ರಜಾವಾಣಿಯ ವಿಮರ್ಶೆಯಲ್ಲಿ ಚೆನ್ನಾಗಿಲ್ಲ ಅಂತ ಬಂದಿತ್ತು.
ಉ:
ಎದ್ದೇಳು ಮಂಜುನಾಥಕ್ಕೆ ಕಾಯಬೇಕು.
ಈ ವೀಕೆಂಡಿಗೆ ಬೇಕಿದ್ರೆ ಡೈಲಾಗ್ ಕಿಂಗ್ ಸಾಯಿಕುಮಾರರ ೫೦ನೇ ಚಿತ್ರ ಸಿಟಿಜನ್.. ಗೆ ಹೋಗಿಬನ್ನಿ .
[ಈ ಪ್ರತಿಕ್ರಿಯೆ ಎಡಿಟ್ ಮಾಡಲಾಗಿದೆ]
**************************
http://vikasavada.blogspot.com/
**************************
ಉ:
----ಎಡಿಟ್ ಮಾಡಲಾಗಿದೆ ! -----
ತೀರಾ ಈ ಪರಿ ಮಡಿವಂತಿಕೆಯಾ!!
ಅದು ನಾನು ಹೇಳಿದ್ದಲ್ಲ, ಸಾಯಿಕುಮಾರ್ ಚಿತ್ರದ ರಿಯಲ್ ಡೈಲಾಗು.
ಆಕ್ಷೇಪಾರ್ಹ ಪದ ಇರುವ ಕಡೆ ** ಕೂಡ ಹಾಕಿತ್ತು.
ಆದರೂ ತಪ್ಪಾಗಿದ್ದರೆ ಮನ್ನಿಸಿ.
**************************
http://vikasavada.blogspot.com/
**************************
ಉ: ಜಗ್ಗೇಶ್ ಚಿತ್ರ
ಅಸಹ್ಯಕರವಾದ ತುಂಬ ಕೀಳು ಅಭಿರುಚಿ ಇರುವ ಹಾಸ್ಯ...ಥೂ....
ಕೆಲ ವರ್ಷಗಳ ಹಿಂದೆ ರಿಲೀಸ್ ಆದ ಒಂದು ಹಿಂದಿ ಚಿತ್ರಕ್ಕೆ ಸ್ವಲ್ಪ ಮಸಾಲೆ ಹಾಕಿ ಮಾಡಿರೋ ಹಳಸಿದ ಚಿತ್ರಾನ್ನ .
ಅವತ್ತು ಭಾನುವಾರ ತುಂಬ ಮೂಡ್ ಔಟ್ ಆಗಿತ್ತು ಸ್ವಲ್ಪ ಸರಿಮಾದ್ಕೊಳ್ಳೋಣ ಅಂತ ಹೋದ್ರೆ ... ಯಾಕಾದ್ರೂ ಹೋದನೋ ಅಂತ ಅನ್ನಿಸ್ತು.
ಈ ನಿರ್ದೇಶಕರು / ಕಥೆ / ಡೈಲಾಗು ಬರದವರು ಅದೆಷ್ಟು ಬರಗೆಟ್ಟಿದಾರೋ .. ಹೊಟ್ಟೆಗೆ ಅದೇನು ತಿನ್ನುತ್ತಾರೋ ... ಅನ್ನ ಅಂತು ತಿನ್ನಲ್ಲ!.
ಸವಿತೃ
ಉ: ಜಗ್ಗೇಶ್ ಚಿತ್ರ
ಮಾಹಿತಿ ಕೊಟ್ಟು ನನ್ನ ಟೈಂ ಉಳಿಸಿದ್ದಕ್ಕೆ ನನ್ನಿ.
’ಆಕ್ಸಿಡೆಂಟ್’- ನಾನುನೋಡಿದ ಕಡೆಯ ಚಿತ್ರ. ’ಅರಮನೆ’ ಚೆನ್ನಾಗಿದೆ ಅಂತ ಗೆಳೆಯನೊಬ್ಬ ಹೇಳಿದ. ಮಿಂಚಿನ್ ಓಟ ಹೇಗಿದೆಯೋ ನೋಡಬೇಕು.
ಉ: ಜಗ್ಗೇಶ್ ಚಿತ್ರ
http://uni.medhas.org/unicode.php5?file=http%3A%2F%2Fwww.kannadaprabha.c...
*ಅಶೋಕ್
ಉ: ಜಗ್ಗೇಶ್ ಚಿತ್ರ
"ಮೊಗ್ಗಿನ ಮನಸ್ಸು" ಅಂತ ಸಿನಿಮಾ ಬಂದಿದೆಯಂತೆ. "ಅ ಸ್ಪೆಶಲ್ ಫಿಲಮ್ ಫಾಂ ಗರ್ಲ್ಸ್" ಅಂತ ಅಡಿಬರಹ ಇದೆ.