ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › madhava_hs ರವರ ಬ್ಲಾಗ್

ಶ್ರೀನಿವಾಸ ಕಲ್ಯಾಣ

June 12, 2008 - 3:13pm — madhava_hs

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.

ಶ್ರೀನಿವಾಸ ಕಲ್ಯಾಣ ನಡೆಸುವುದು ಸಂತೋಷದ ವಿಚಾರವೇ. ಅನ್ನಮಯ್ಯರ ಕೀರ್ತನೆಗಳ ಜೊತೆಗೆ ಪುರಂಧರ/ಕನಕ ದಾಸರು ರಚಿಸಿರುವ ಕನ್ನಡ ಹಾಡುಗಳನ್ನೂ ಹಾಡಿಸಬಹುದಲ್ಲವೇ?

  • ಭಾಷೆ
~.~
  • madhava_hs ರವರ ಬ್ಲಾಗ್
  • Login or register to post comments
  • 359 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 7:51pm — agilenag

ಉ: ಶ್ರೀನಿವಾಸ ಕಲ್ಯಾಣ

agilenag's picture

ಈ ಹಿಂದೆ ಸಂಪದದಲ್ಲಿ ನಾನು ಹಾಸನದಲ್ಲಿ ನೋಡಿ ಆನಂದಿಸಿದ ಶ್ರೀನಿವಾಸ ಕಲ್ಯಾಣ ವೇದಿಕಾ ಪ್ರದರ್ಶನದ ಬಗ್ಗೆ ಬರೆದಿದ್ದೆ. ಒಂದು ಫೋಟೋವನ್ನು ಕೂಡ ಹಾಕಿದ್ದೆ. ಆಸಕ್ತರು ನೋಡಬಹುದು. ಈ ಪ್ರದರ್ಶನದ ಕಾಲದಲ್ಲಿ ಕನ್ನಡದ ದಾಸರ ಪದಗಳೇ ಹೆಚ್ಚಾಗಿದ್ದು, ಸಂದರ್ಭಕ್ಕೆ ತಕ್ಕಂತ ಕೀರ್ತನೆಗಳನ್ನು ಅಳವಡಿಸಿ ಸುಶ್ರಾವ್ಯವಾಗಿ ಹಾಡಿ ನೋಡುಗರನ್ನು ರಂಜಿಸಿದರು. ಪ್ರದರ್ಶನ ಕಾಲದಲ್ಲಿ ತಿಳಿದು ಬಂದೆದ್ದಂದರೆ ಯಾವ ರಾಜ್ಯದಲ್ಲಿ ಪ್ರದರ್ಶನ ನಡೆಯುತ್ತದೋ, ಆ ರಾಜ್ಯದ ಭಾಷೆಯ ದಾಸರ ಪದಗಳನ್ನೇ ಪ್ರದರ್ಶನದಲ್ಲಿ ಅಳವಡಿಸಲಾಗಿರುತ್ತದೆ ಎಂಬುದು. ಎಂತಹ ಉದಾತ್ತ ಮನೋಭಾವ ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 9:38pm — Sunil Jayaprakash

ಉ: ಶ್ರೀನಿವಾಸ ಕಲ್ಯಾಣ

Sunil Jayaprakash's picture

ನಿಮಗೆ ಸಿಗಬಹುದಾದ ಉತ್ತರಗಳು. ನನಗಂತು ಇವುಗಳಲ್ಲಿ ಕೆಲವನ್ನು ಕೇಳೀ ಕೇಳೀ ಸಾಕಾಗಿದೆ.

೧. ಸಂಗೀತಕ್ಕೆ ಭಾಷೆಯ ಹಂಗಿಲ್ಲ.
೨. ಭಕ್ತಿ ಮುಖ್ಯ, ಭಾಷೆ ಯಾವ್ದಾದ್ರೇನು.
೩. ಭಾಷೆಯನ್ನು ಮೀರಿದ ಸಂಗೀತವನ್ನ ಗೌರವಿಸಪ್ಪಾ.
೪. ಕೇಳೋ ಹಾಗಿದ್ರೆ ಕೇಳು, ಇಲ್ಲಾ ಎದ್ಹೋಗು, ತಲೆಯೆಲ್ಲ ಹರಟಬೇಡ.

ಭಕ್ತಿಯ ಉತ್ಕಟೆಯಲ್ಲಿ ಸಾಂಸ್ಕೃತಿಕವಾಗಿ ಹಾಗು ಸಾಮಾಜಿಕವಾಗಿ ಸಾಧಿಸಬೇಕಾದ ಎಷ್ಟೋ ಅಂಶಗಳು ಮೂಲೆಗೆ ಸರಿಸುತ್ತಿದ್ದೇವೆ (*).
೧ ಹೊಯ್ಸಳ, ಚಾಲುಕ್ಯ ಶೈಲಿಯ ಶಿಲ್ಪಕಲೆಯನ್ನು ತಂಜಾವೂರಿನ ಶೈಲಿಯು, ಭಕ್ತಿಯ ಮುಸುಕು ಹಾಕಿಕೊಂಡು ಕರ್ನಾಟಕದ ದೇವಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು.
೨. ಪುರಂದರರ/ಕನಕದಾಸರ/ವಿಜಯದಾಸರ/ಕರ್ನಾಟಕದ ದಾಸರ ಬದಲಾಗಿ ಅನ್ನಮಯ್ಯರ ಕೀರ್ತನೆಗಳನ್ನು(**) ಹಾಡುವುದು ಒಂದು ಕಡೆಯಾದರೆ, ಸಂಗೀತ ಕಚೇರಿಗೆ ಹೋದರೆ ಬರೀ ತೆಲಗು ಗೀತೆಗಳನ್ನೇ ಹಾಡಿಸೀ ಹಾಡಿಸೀ, ಕೇಳಿಸೀ ಕೇಳಿಸೀ, ಭಕ್ತಿಯ ಹೆಸರಿನಲ್ಲಿ ಕರ್ನಾಟಕ ಶಾಸ್ತೀಯ ಸಂಗೀತವೆಂದರೆ, ತೆಲಗು ಹಾಡುಗಳೆನ್ನುವಂತೆ ಮಾಡುವುದು.
೩. ಇದರಿಂದ ಬೇಸತ್ತು, ಕನ್ನಡಿಗರು ಶಾಸ್ತ್ರೀಯ ಸಂಗೀತದ ಕವಲೊಡೆದಂತಿರುವ ಸುಗಮಸಂಗೀತದೆಡೆಗೆ ಹೆಚ್ಚು ಒಲವು ತೋರಿದರೆ, "ಕನ್ನಡಿಗರಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಕಡಿಮೆ" ಎಂದುಕೊಳ್ಳುವುದು.
೪. ಇವಷ್ಟೇ ಆಲ್ಲದೆ, ಚರ್ಚುಗಳಲ್ಲಿ ಕನ್ನಡದ ಹಾಡುಗಳಿಗೆ ಬದಲಾಗಿ, ಭಕ್ತಿಯ ಹೆಸರಿನಲ್ಲಿ ಇಂಗ್ಲೀಷ್/ತಮಿಳು/ಮಲಯಾಳಂ ಪ್ರಾರ್ಥನೆಗಳನ್ನು ಹಾಡಿಸುವುದು.
೫. ಸಾಯಿಬಾಬಾ ಮಂದಿರಗಳಲ್ಲಿ ಹಿಂದಿ ಭಜನೆಗಳನ್ನು ಏರ್ಪಡಿಸುವುದು. ಆ ಹಿಂದಿ ಭಜನೆಗಳನ್ನೂ ಕನ್ನಡದವರಲ್ಲದ ಗಾಯಕರುಗಳಿಂದ ಹಾಡಿಸುವುದು.

ಇಂತಹ ವಿಷಯಗಳು "ಆಸ್ತಿಕ, ನಾಸ್ತಿಕ" ಹಿನ್ನೆಲೆಯಲ್ಲಿಯೇ ಚರ್ಚೆಗೈಯಲ್ಪಡುವುದರಿಂದ, ಅದಕ್ಕೆ ಹೆಚ್ಚಿನ ಜನರ ಬೆಂಬಲವೂ ಇಲ್ಲದೆ ಹೋಗುತ್ತದೆ. "ಒಟ್ನಲ್ಲಿ ಕನ್ನಡತನ ಬೇಡ, ಆದರೆ ತಮ್ಮವರ ಹಾಗು ತಮ್ಮ ದೇವರುಗಳ ಸೇಫ್ಟಿ, ಆ ದೇವರುಗಳ ಮೇಲೆ ಕನ್ನಡದವರ ಭಕ್ತಿ, ದುಡ್ಡು ಎಲ್ಲ ಬೇಕು" Sad

ಇಂತಹವುಗಳನ್ನು ಅನಕೃ ಅವರು ವಿರೋಧಿಸಿದ್ದರ ಬಗ್ಗೆ ಬರಹ.ಕಾಮಿನಲ್ಲಿ ಒಳ್ಳೆಯ ಬರಹವಿದೆ.
* - ಇಲ್ಲಿ ಭಕ್ತಿಮಾರ್ಗಿಗಳನ್ನು ನಾನು ಅಣಕವಾಡುತ್ತಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಕರ್ನಾಟಕದ ಸಂಸ್ಕೃತಿಯ ಮೇಲೆ ಭಕ್ತಿಯ ಹೆಸರಿನಲ್ಲಿ ಹಿಂಬಾಗಿಲಿನಿಂದ ಆಗುತ್ತಿರುವ ಹೇರಿಕೆಯನ್ನು ಪ್ರಸ್ತಾಪಿಸಿದ್ದೇನಷ್ಟೇ.
** - ಇಲ್ಲಿ ಅನ್ನಮಯ್ಯರ ಪ್ರಸ್ತಾಪ ಸಾಂದರ್ಭಿಕವಷ್ಟೇ. ಕರ್ನಾಟಕದ ದಾಸರಿಗೆ ಎಷ್ಟು ಗೌರವ ಸಲ್ಲುತ್ತದೆಯೋ ಬೇರೆಯವರಿಗೂ ಅಷ್ಟೇ ಗೌರವ ಸಲ್ಲುತ್ತದೆ. ಆದ್ದರಿಂದ ಇದನ್ನು ಭಾಷೆ/ಭಕ್ತಿ ಮಾರ್ಗವನ್ನು ವಿರೋಧಿಸುವ ಕಾಮೆಂಟ್ ಎಂದು ಭಾವಿಸಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:23pm — hamsanandi

ಉ: ಶ್ರೀನಿವಾಸ ಕಲ್ಯಾಣ

hamsanandi's picture

ಸುನಿಲ್ ಅವರ ಟಿಪ್ಪಣಿಗೆ ಒಂದು ಮರು ಟಿಪ್ಪಣಿ ಹಾಕಬೇಕೆನಿಸಿತು. ನನಗೆ ಸರಿಯಾಗಿ quote ಮಾರ್ಕ್ ಹಾಕಲು ಆಗದೆ, ಹಾಗೇ ಅವರ ಟಿಪ್ಪಣಿಯಿಂದಲೇ ಸ್ವಲ್ಪ ಕತ್ತರಿಸಿ ಅಂಟಿಸುತ್ತಿದ್ದೇನೆ

>>>
>>> ೧. ಸಂಗೀತಕ್ಕೆ ಭಾಷೆಯ ಹಂಗಿಲ್ಲ.
>>>

ಇದು ಕೆಲವರಿಗೆ ನಿಜವಿರಬಹುದು. ಎಲ್ಲರಿಗೂ ಇಲ್ಲದಿರಬಹುದು. ಇದು ಅವರು ಬೆಳೆದು ಬಂದ ವಾತಾವರಣ, ಸಂಗೀತದಲ್ಲಿರುವ ಹಿನ್ನಲೆ, ಮೊದಲಾದುವುಗಳಿಂದ ನಿರ್ಧರಿತವಾಗುತ್ತೆ. ಮತ್ತೆ, ಇದೊಂದು ಬೆಳೆಸಿಕೊಳ್ಳಬಹುದಾದ ಆಸಕ್ತಿ. ಉದಾಹರಣೆಗೆ, ಭಾಷೆಯೂ. ಪದಗಳೂ ಇರದ ವಾದ್ಯ ಸಂಗೀತವನ್ನೂ ನಾವು ಇಷ್ಟಪಡಬಹುದಲ್ಲವೇ? ಹಾಗೆ. ಒಟ್ಟಿನಲ್ಲಿ, ಎಲ್ಲರಿಗೂ ಒಂದೇ ಮಾರು ಹಾಕಲು ಆಗದು ( One size does not fit all - ನ ಕನ್ನಡ ಭಾವಾನುವಾದ ಹೇಗಿದೆ Eye-wink ? )

>>>
>>> ೨. ಭಕ್ತಿ ಮುಖ್ಯ, ಭಾಷೆ ಯಾವ್ದಾದ್ರೇನು.
>>>

ಮುಕ್ಕಾಲು ಪಾಲು ಭಕ್ತಿಯೇ ಹೆಚ್ಚಾಗಿದ್ದವರಿಗೆ, ಅಲ್ಲಿ ಹಾಡುವ ಅಗತ್ಯವೂ ಇರದು Smiling ಬಹುಶಃ ಮಂತ್ರ ಪಠನೆಯೋ, ಧ್ಯಾನವೋ ಯಾವುದಾದರೂ ಸಾಕಾಗಬಹುದು!

>>>
>>> ೩. ಭಾಷೆಯನ್ನು ಮೀರಿದ ಸಂಗೀತವನ್ನ ಗೌರವಿಸಪ್ಪಾ.
>>>

ನಿಜವಾಗಿ ಹಾಡುವವರ quality ಅದಕ್ಕೆ ತಕ್ಕದಾಗಿದ್ದರೆ, ಗೌರವಿಸೋಣ - ಆದರೆ, ಅದು ಎಲ್ಲಾ ಸಮಯದಲ್ಲೂ ಎಲ್ಲಿರುತ್ತೆ?

>>>
>>> ೪. ಕೇಳೋ ಹಾಗಿದ್ರೆ ಕೇಳು, ಇಲ್ಲಾ ಎದ್ಹೋಗು, ತಲೆಯೆಲ್ಲ ಹರಟಬೇಡ.
>>>

ಹ್ಹ ಹ್ಹ - ಇಂತ ಅಸಂಬದ್ಧವಾಗಿ ಯಾರಾದ್ರು ಹೇಳಿದ್ರೆ ಅವರ ಮಾತನ್ನು ಲೆಕ್ಕಕ್ಕಿಟ್ಕೋಬೇಡಿ!

>>>
>>> ೨. ಪುರಂದರರ/ಕನಕದಾಸರ/ವಿಜಯದಾಸರ/ಕರ್ನಾಟಕದ ದಾಸರ ಬದಲಾಗಿ ಅನ್ನಮಯ್ಯರ ಕೀರ್ತನೆಗಳನ್ನು(**) ಹಾಡುವುದು ಒಂದು ಕಡೆಯಾದರೆ, >>> ಸಂಗೀತ ಕಚೇರಿಗೆ ಹೋದರೆ ಬರೀ ತೆಲಗು ಗೀತೆಗಳನ್ನೇ ಹಾಡಿಸೀ ಹಾಡಿಸೀ, ಕೇಳಿಸೀ ಕೇಳಿಸೀ, ಭಕ್ತಿಯ ಹೆಸರಿನಲ್ಲಿ ಕರ್ನಾಟಕ ಶಾಸ್ತೀಯ
>>> ಸಂಗೀತವೆಂದರೆ, ತೆಲಗು ಹಾಡುಗಳೆನ್ನುವಂತೆ ಮಾಡುವುದು.
>>>

ಇದಕ್ಕೆ ಒಂದು ಮುಕ್ಯ ಕಾರಣವೇನೆಂದರೆ ಹರಿದಾಸರ ಮೂಲ ಮಟ್ಟುಗಳು ಮಾಯವಾಗಿರುವುದು. ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ ಹಾಗೇ ಸುಮಾರಾದ ಮಟ್ಟುಗಳನ್ನು ಹಾಕಿದರೆ, ಆ ರಚನೆಗಳು ತೂಕವಾಗಿರುವುದಿಲ್ಲ ಎನ್ನುವುದು ನಿಜ. ಅಂತಹ ತೂಕವಾದ ಮಟ್ಟುಗಳನ್ನು ಹಾಕುವುದು ದೊಡ್ಡ ಕೆಲಸವೇ - ಅದನ್ನು ಹಲವಾರು ಸಂಗೀತಗಾರರು ಮಾಡಿಯೂ ಇದ್ದಾರೆ (ಅವರಲ್ಲಿ ಕೆಲವರು ಕನ್ನಡದವರೂ ಅಲ್ಲ ಅನ್ನೋದನ್ನ ಮರೆಯೋದು ಬೇಡ). ಆದರೆ ಇದೇ ತೊಂದರೆ ಅನ್ನಮಯ್ಯ, ರಾಮದಾಸ ಮೊದಲಾದವರ ತೆಲುಗು ರಚನೆಗಳಿಗೂ ಇದೆ.

ಈಗ ಹೆಚ್ಚಿನ ರಚನೆಗಳು ತೆಲುಗಿನಲ್ಲಿರುವುದಕ್ಕೆ ಚಾರಿತ್ರಿಕ ಕಾರಣಗಳಿವೆ - ಅದೇ ರೀತಿ ೧೮ನೇ ಶತಮಾನದಲ್ಲಿ ಬಹಳಷ್ಟು ಸಂಗೀತ ರಚನೆಗಳು ಕನ್ನಡದಲ್ಲಿದ್ದು, ಅವು ಕನ್ನಡನಾಡಿನ ಹೊರಗೂ ಪ್ರಚಾರದಲ್ಲಿದ್ದವು ಎಂದು ಹೇಳಲು ಗಟ್ಟಿ ಆಧಾರಗಳಿವೆ.

ಇನ್ನು ಕರ್ನಾಟಕ ಸಂಗೀತದಲ್ಲಿ ಭಕ್ತಿಪ್ರಧಾನವಾದ ರಚನೆ ಹೆಚ್ಚಾದರೂ - ಹೆಚ್ಚಿನ ರಸಿಕರು ಅದರಲ್ಲಿರುವ ಸಂಗೀತ ರಸವನ್ನು ಸವಿಯುವುದಕ್ಕೆ ಹೋಗುತ್ತಾರೆ ಎನ್ನುವುದು ನನ್ನ ಅನಿಸಿಕೆ. ಏಕೆಂದರೆ, ಕೆಲವು ರಚನೆಗಳ ಸಾಹಿತ್ಯವಂತೂ ತೀರಾ insignificant ಅನ್ನೋ ರೀತಿಯಲ್ಲಿರುತ್ತೆ. ಮನೋಧರ್ಮ ಸಂಗೀತದಲ್ಲಂತೂ ಸಾಹಿತ್ಯದ ಅಂಶ ಕಡಿಮೆಯೇ.

ಮನೋಧರ್ಮ ಸಂಗೀತದಲ್ಲಿ ಕನ್ನಡ ಸಂಗೀತಗಾರರು ಒಂದು ವಿಧದಲ್ಲಿ ಬದಲಾಗಬಹುದು - ಪಲ್ಲವಿ ಹಾಡುವಾಗ, ಸಾಹಿತ್ಯ ಗೌಣವಾದರೂ, ಏನಾದರೂ ಪದಗಳು ಇದ್ದೇ ಇರುತ್ತವೆ. ಅಂತಹ ಕಡೆಯಲ್ಲಿ, ಕನ್ನಡದ ಸಾಲುಗಳನ್ನು ಉಪಯೋಗಿಸಿಕೊಂಡೇ ಹಾಡಬಹುದು. ಕೆಲವರು ಅದನ್ನು ಮಾಡುತ್ತಲೂ ಇದ್ದಾರೆ. ಆದರೆ ಇನ್ನೂ ಹೆಚ್ಚಿಗೆ ಮಾಡಬಹುದು , ಮಾಡಬೇಕು.

>>>
>>>೩. ಇದರಿಂದ ಬೇಸತ್ತು, ಕನ್ನಡಿಗರು ಶಾಸ್ತ್ರೀಯ ಸಂಗೀತದ ಕವಲೊಡೆದಂತಿರುವ ಸುಗಮಸಂಗೀತದೆಡೆಗೆ ಹೆಚ್ಚು ಒಲವು ತೋರಿದರೆ, "ಕನ್ನಡಿಗರಗೆ >>>ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಕಡಿಮೆ" ಎಂದುಕೊಳ್ಳುವುದು.
>>>

ಕನ್ನಡಿಗರಿಗೆ ಶಾಸ್ತ್ರೀಯ ಸಂಗೀತದಲ್ಲಿ ಇರಬೇಕಾದಷ್ಟು ಆಸಕ್ತಿ ಕಾಣುತ್ತಿಲ್ಲ ಅನ್ನುವುದು ಬಹಳ ಬೇಸರದ ಸತ್ಯ. ಉದಾಹರಣೆಗೆ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗಂತೂ, ಇಡಿ ಕಾಲೇಜಿನಲ್ಲಿ ಒಂದರಿ ಹಾಕಿ ಸೋಸಿದರೂ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತರು ಸಿಗುತ್ತಿದ್ದುದ್ದು ಕೈಬೆರಳೆಣಿಕೆಯಷ್ಟೇ. ಈಗ ಪರಿಸ್ಥಿತಿ ಬದಲಾಗಿದ್ದರೆ, ನಾನು ನನ್ನ ಅಭಿಪ್ರಾಯ ಬದಲಿಸಿಕೊಳ್ಳಲಿ ತಯಾರು.

ಸುಗಮ ಸಂಗೀತವೂ ಚೆನ್ನ - ಆದರೆ ಅದರಲ್ಲಿರುವಷ್ಟು ಸಾಹಿತ್ಯಕ್ಕೆ ಪ್ರಾಮುಖ್ಯತೆ ಶಾಸ್ತ್ರೀಯ ಸಂಗೀತದಲ್ಲಿಲ್ಲ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:38pm — kalpana

ಉ: ಶ್ರೀನಿವಾಸ ಕಲ್ಯಾಣ

kalpana's picture

ಹಂಸಾನಂದಿಗಳೇ,
"ಇದಕ್ಕೆ ಒಂದು ಮುಕ್ಯ ಕಾರಣವೇನೆಂದರೆ ಹರಿದಾಸರ ಮೂಲ ಮಟ್ಟುಗಳು ಮಾಯವಾಗಿರುವುದು. ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ ಹಾಗೇ ಸುಮಾರಾದ ಮಟ್ಟುಗಳನ್ನು ಹಾಕಿದರೆ, ಆ ರಚನೆಗಳು ತೂಕವಾಗಿರುವುದಿಲ್ಲ ಎನ್ನುವುದು ನಿಜ. ಅಂತಹ ತೂಕವಾದ ಮಟ್ಟುಗಳನ್ನು ಹಾಕುವುದು ದೊಡ್ಡ ಕೆಲಸವೇ - ಅದನ್ನು ಹಲವಾರು ಸಂಗೀತಗಾರರು ಮಾಡಿಯೂ ಇದ್ದಾರೆ (ಅವರಲ್ಲಿ ಕೆಲವರು ಕನ್ನಡದವರೂ ಅಲ್ಲ ಅನ್ನೋದನ್ನ ಮರೆಯೋದು ಬೇಡ). ಆದರೆ ಇದೇ ತೊಂದರೆ ಅನ್ನಮಯ್ಯ, ರಾಮದಾಸ ಮೊದಲಾದವರ ತೆಲುಗು ರಚನೆಗಳಿಗೂ ಇದೆ."

ದಯವಿಟ್ಟು ಮಟ್ಟು ಅಂದ್ರೆ ಏನು? ತೂಕವಾದ ಮಟ್ಟು ಅಂದ್ರೆ ಏನು? ಯಾವ ಸಂಗೀತಗಾರರು ಹೇಗೆ ಮಾಡಿದ್ದಾರೆ? ಇದನ್ನು ಉದಾಹರಣೆ ಸಮೇತ ವಿವರಿಸುತ್ತೀರ? ಒಂದು ಪ್ರತ್ಯೇಕ ಬ್ಲಾಗ್ ಲೇಖನವಾದರೂ ಸರಿ, ದಯವಿಟ್ಟು ಹಾಕಿ. ತೆಲುಗು, ತಮಿಳು ಕೃತಿಗಳನ್ನೇ ಹೆಚ್ಚಾಗಿ ನಾನೂ ಕನಾಟಕ ಸಂಗೀತ ಕಛೇರಿಗಳಲ್ಲಿ ಕೇಳುವುದು, ಮತ್ತು ಸಂಗೀತ ಗುರುಗಳೂ ಹೇಳಿಕೊಡುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 11:04am — madhava_hs

ಉ: ಶ್ರೀನಿವಾಸ ಕಲ್ಯಾಣ

madhava_hs's picture

ಸಂಗೀತಕ್ಕೆ ಭಾಷೆಯ ಹಂಗಿಲ್ಲ ನಿಜ. ಆದರೆ ಹಾಡಿನ ಭಾಷೆಯೇ ಅರ್ಥವಾಗದಿದ್ದ ಮೇಲೆ ಏನು ಪ್ರಯೋಜನ? ಭಾಷೆಯ ಹಂಗಿಲ್ಲ ಎಂದಮೇಲೆ ಸಾಹಿತ್ಯ ಏಕೆ ಬೇಕು? ಕೇವಲ ಆಲಾಪನೆಯಲ್ಲೇ ಸ.ರಿ..ಗ.ಮ.ಪ...ಎಂದು ಮುಗಿಸಬಹುದಲ್ಲ?

ನನಗೆ ’ಕೃಷ್ಣಾ ನೀ ಬೇಗನೇ ಬಾರೋ..’ ಕೇಳಿದಾಗ ಅದನ್ನು ಅರ್ಥೈಸಿಕೊಳ್ಳುವುದರ ಮೂಲಕ ಸಿಗುವ ಭಕ್ತಿ ಇದೆಯಲ್ಲ ಅದು ’ನಗುಮೋಮು..’ ಇಂದ ಸಿಗುವುದಿಲ್ಲ. ಏಕೆಂದರೆ ಅರ್ಥವೇ ಆಗುವುದಿಲ್ಲ. ಅದೇ ಹಾಡನ್ನು ಹಾಡಬೇಕೆಂದರೆ ಕನ್ನಡಕ್ಕೆ ತರ್ಜಮೆ ಮಾಡಿ ಹಾಡಬಹುದಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರೀನಿವಾಸ ರಾಮಾನುಜಂ
  • ಶ್ರೀನಿವಾಸ ಉಡುಪರ ಮಕ್ಕಳ ಕವನಗಳು
  • ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೇದಿಕಾ ಪ್ರದರ್ಶನ
  • ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಚಿತ್ರ
  • ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮ
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator