ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › madhava_hs ರವರ ಬ್ಲಾಗ್

ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

November 13, 2007 - 7:17pm — madhava_hs

ಇತ್ತೀಚೆಗೆ ನಾನು ದೇವುಡು ನರಸಿಂಹ ಶಾಸ್ತ್ರಿಯವರು ಬರೆದ ಕೊನೆಯ ಗ್ರಂಥವಾದ ’ಮಹಾ ದರ್ಶನ’ ವನ್ನು ಓದಿದೆ. ದೇವುಡು ರವರ ’ಮಹಾ ಕ್ಷತ್ರಿಯ’ ಕೃತಿಗೆ ೧೯೬೨ ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ’ಮಹಾ ಬ್ರಾಹ್ಮಣ’ ಅವರ ಇನ್ನೊಂದು ಗ್ರಂಥ. ಇವರ ಕೃತಿಗಳಬಗ್ಗೆ ಬಹಳವಾಗಿ ಕೇಳಿದ್ದ ಹಾಗು ಓದಿದ್ದ ನನಗೆ ಯಾವುದಾದರೂ ಕಾದಂಬರಿಗಳನ್ನು ಓದಬೇಕೆಂದು ಬಹಳದಿನದಿಂದ ಅನ್ನಿಸಿತ್ತು.

’ಮಹಾ ದರ್ಶನ’ ಮಹರ್ಷಿ ಯಾಜ್ಞವಲ್ಕ್ಯರ ಜೀವನ ಚರಿತ್ರೆ. ಆ ಕೃತಿಯನ್ನು ಓದುತ್ತಾ ಹೋದಂತೆ ಯಾವುದೋ ಮಾಯಾಲೋಕದೊಳಗೆ ಪಯಣಿಸಿದ ದಿವ್ಯ ಅನುಭವ. ಪ್ರತಿಯೊಂದು ಘಟನೆಯನ್ನೂ ಕಣ್ಣಿಗೆ ಕಟ್ಟುವಂತೆ ಅವರು ವಿವರಿಸುವ ರೀತಿ, ತರ್ಕಬಧ್ದವಾದ ಉಪದೇಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಪ್ರಕೃತಿ ಮನುಷ್ಯನ ಸಂಬಂಧವನ್ನು ಅವರು ಎಳೆ ಎಳೆಯಾಗಿ ವರ್ಣಿಸಿದ್ದಾರಾದರೂ ನಮ್ಮಂಥ ಸಾಮಾನ್ಯರಿಗೆ ಇಂತಹ ಬಹಳ ಕ್ಲಿಷ್ಟ ಸೂಕ್ಷ್ಮಗಳು ಅರ್ಥವಾಗುವುದೇ ಇಲ್ಲ. ಬಹುಶಃ ಅಂಥಹ ಮೇಧಾವಿ ದೇವುಡು ರಂಥವರಿಗೆ ಮಾತ್ರ ಇಂತಹ ರಹಸ್ಯಗಳು ಕಲ್ಪನೆಗೂ ಸಿಕ್ಕಿ ವರ್ಣಿಸಲು ಸಾಧ್ಯವಾಗಿರುವುದು ಎಂದೆನಿಸುತ್ತದೆ.

ಕೆಲವು ಉದಾಹರಣೆಗಳನ್ನೇ ನೋಡಿ. "ಪಾತ್ರೆಯ ಹೊರಗೆ ತೊಳೆಯುವುದು ಮಸಿ ಹೋಗಿಸಲಿಕ್ಕೆ, ಒಳಗೆ ತೊಳೆಯುವುದು ಮುಸುರೆ ಹೋಗಿಸಲಿಕ್ಕೆ, ಶರೀರಕ್ಕೂ ಬಹಳಷ್ಟು ಇದೇ ತರ್ಕ ಅನ್ವಯ" ಇಂತಹ ಸಂಭಾಷಣೆಗಳು ಮಗು ಯಾಜ್ಞವಲ್ಕ್ಯ ಮತ್ತು ಅವನ ತಾಯಿಯ ನಡುವೆ ನಡೆಯುವಂಥವು. ಇನ್ನೊಂದು ಸನ್ನಿವೇಶದಲ್ಲಿ ಯಾಜ್ಞವಲ್ಕ್ಯ ಒಂದು ವರ್ಷದ ಕಾಲ ಒಂದು ವ್ರತಾಚರಣೆಯಲ್ಲಿರುತ್ತಾನೆ. ಈ ಅವಧಿಯಲ್ಲಿ ಕೇವಲ ಒಂದು ಹೊತ್ತಿನ ಆಹಾರ ಅದೂ ಮಿತಾಹಾರದಲ್ಲಿರುತ್ತಾನೆ. ’ಇದು ಹೇಗೆ ಸಾಧ್ಯ ಎಂದು ಅವನ ಪತ್ನಿ ಪ್ರಶ್ನಿಸಿದಾಗ ಅವನು ಉತ್ತರಿಸುವ ರೀತಿ ನಿಜಕ್ಕೂ ಅತ್ಯದ್ಭುತ. ಅಗ್ನಿದೇವತೆಗಳ ಕಲ್ಪನೆ ಮತ್ತು ಮನುಷ್ಯರು ಕೇವಲ ನಿಮಿತ್ತ ಮಾತ್ರ ಎಂದು ಒಂದು ಸನ್ನಿವೇಶದ ಮೂಲಕ ಹೇಳಿದ್ದಾರೆ.

ಈ ಕಾದಂಬರಿಯ ಬಗ್ಗೆ ಅಥವಾ ದೇವುಡುರವರ ಇನ್ಯಾವುದಾದರೂ ಕಾದಂಬರಿಯ ಬಗ್ಗೆ ಅಥವಾ ದೇವುಡು ರವರ ಬಗೆಗೆ ಓದುಗರು ವಿಚಾರಗಳನ್ನು ಹಂಚಿಕೊಳ್ಳಬಹುದು.

  • ಚಿಂತನೆ
~.~
  • madhava_hs ರವರ ಬ್ಲಾಗ್
  • Login or register to post comments
  • 483 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 14, 2007 - 7:14am — Sunil Jayaprakash

ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

Sunil Jayaprakash's picture

ಮಾಧವ, ದೇವುಡು ಅವರ ಕೃತಿಗಳ ಬಗ್ಗೆ ತುಂಬಾ ಕೇಳಿರುವೆ. ಡಿ.ಎಲ್.ಐನಲ್ಲಿ ದೇವುಡು ಅವರ ಮಹಾಬ್ರಾಹ್ಮಣ ಕೃತಿ ಇತ್ತು. ಅದನ್ನು ಡೌನ್ಲೋಡ್ ಮಾಡಿಟ್ಟಿದ್ದೆ. ಆದರೆ ಓದಿಗೆ ಹಚ್ಚಿರಲಿಲ್ಲ. ನಿಮ್ಮ ಬರಹವನ್ನೋದಿದ ಮೇಲೆ ಆ ಓದನ್ನು ಮುಂದುವರಿಸುವ ಹಂಬಲ ಮೂಡುತ್ತಿದ್ದೆ. ಸದ್ಯಕ್ಕೆ ರತ್ನಾಕರವರ್ಣಿಯ "ಭರತೇಶ ವೈಭವ" ಎಂಬ ಕಾವ್ಯ ಓದುತ್ತಿದ್ದೇನೆ. ಅದನ್ನು ಓದಿ ಮುಗಿಸಿದ ತಕ್ಷಣ ದೇವುಡು ಅವರ ಒಂದು ಪುಸ್ತಕವನ್ನು ಓದಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 14, 2007 - 1:39pm — benaka

ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

benaka's picture

ಸುನಿಲರೆ,

ನಾನು ಭರತೇಶವೈಭವ ಓದಿದ್ದು ನನ್ನ ಶಾಲಾದಿನಗಳಲ್ಲಿ! ಅದರಲ್ಲಿಯ ಛಂದಸ್ಸು/ಗಣ ಗಳನ್ನು ಗುರುತಿಸಲು ಸಂತಸವಾಗುತ್ತಿತ್ತು. ನನಗಿನ್ನೂ ನೆನಪಿರುವುದೆಂದರೆ:

ತನ್ನ ಅಧಿಕಾರಿಗಳಿಗೆ ತನ್ನ ಶಕ್ತಿಯ ಅರಿವು ಮೂಡಿಸಲು ನಾಟಕವಾಡುವ ಭರತ, ತನ್ನ ಕಿರುಬೆರಳು ಮಡಚಿಕೊಂಡುಬಿಟ್ಟಿದೆಯೆಂದು ಸೋಗುಹಾಕಿ, ಅದಕ್ಕೆ ಸರಪಳಿಯನ್ನು ಕಟ್ಟಿ ಅವರೆಲ್ಲರಿಂದ ಎಳೆಸುತ್ತಾನೆ!

ಆ ಪದ್ಯಭಾಗ ಮರೆತುಹೋಗಿದೆ; ನಿಮಲ್ಲಿದ್ದರೆ ಹಂಚಿಕೊಳ್ಳಿ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 14, 2007 - 1:40pm — benaka

ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

benaka's picture

ಸುನಿಲರೆ,

ನಾನು ಭರತೇಶವೈಭವ ಓದಿದ್ದು ನನ್ನ ಶಾಲಾದಿನಗಳಲ್ಲಿ! ಅದರಲ್ಲಿಯ ಛಂದಸ್ಸು/ಗಣ ಗಳನ್ನು ಗುರುತಿಸಲು ಸಂತಸವಾಗುತ್ತಿತ್ತು. ನನಗಿನ್ನೂ ನೆನಪಿರುವುದೆಂದರೆ:

ತನ್ನ ಅಧಿಕಾರಿಗಳಿಗೆ ತನ್ನ ಶಕ್ತಿಯ ಅರಿವು ಮೂಡಿಸಲು ನಾಟಕವಾಡುವ ಭರತ, ತನ್ನ ಕಿರುಬೆರಳು ಮಡಚಿಕೊಂಡುಬಿಟ್ಟಿದೆಯೆಂದು ಸೋಗುಹಾಕಿ, ಅದಕ್ಕೆ ಸರಪಳಿಯನ್ನು ಕಟ್ಟಿ ಅವರೆಲ್ಲರಿಂದ ಎಳೆಸುತ್ತಾನೆ!

ಆ ಪದ್ಯಭಾಗ ಮರೆತುಹೋಗಿದೆ; ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 14, 2007 - 9:02pm — Sunil Jayaprakash

ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

Sunil Jayaprakash's picture

ಬೆನಕ, ನೀವು ಊಹಿಸಬಹುದಾದ ಹಾಗೆ, ನಾನು ಭರತೇಶ ವೈಭವವನ್ನು ಓದಲು ನೆಗಳ್ಚಿರುವುದು ಕಳೆದ ಕೆಲವು ದಿನಗಳಿಂದಷ್ಟೇ. ಈ "ಸರಪಳಿ-ಪ್ರಕರಣ" ಇನ್ನೂ ಸಿಕ್ಕಿಲ್ಲ. ಅಳವಾಗಿಯೂ(ಖಂಡಿತವಾಗಿಯೂ) ಈ ಸನ್ನಿವೇಶ ಬಂದಾಗ ಎಲ್ಲರೊಡನೆ ಹಂಚಿಕೊಳ್ಳುವೆ. ನನ್ನಲ್ಲಿ ಇದರ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದಿರಿ. ಹಾಂ!! ಒಂದು ಮಾತು, ಈ ಪುಸ್ತಕವನ್ನು ಡಿ.ಎಲ.ಐನಿಂದ ನೇರವಾಗಿ ಓದಬೇಕೆಂದಿದ್ದರೆ ಇಲ್ಲಿ ಎಡತಾಗಿ. ನಾನು ಈ ಪುಸ್ತಕವನ್ನು ಕೊಂಡುದಲ್ಲದೆ, ೧೯ ಭಾಗಗಳಾಗಿ ವಿಂಗಡಿಸಿ ಡೌನ್ಲೋಡ್ ಕೂಡ ಮಾಡಿಟ್ಟಿದ್ದೇನೆ. ಬೇಕಿದ್ದರೆ ಹೇಳಿ ಎಲ್ಲಿಯಾದರೂ ಹೋಸ್ಟ್ ಮಾಡೋಣಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 7, 2007 - 11:02pm — Sunil Jayaprakash

ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

Sunil Jayaprakash's picture

ಬೆನಕರೆ, ನೀವು ಪ್ರಸ್ತಾಪಿಸಿದ್ದ "ಸರಪಳಿ-ಪ್ರಕರಣ" ಸಿಕ್ತು. ಇದು ಬರುವುದು "ಕಟಕ ವಿನೋದ" ಎಂಬ ಸಂಧಿಯಲ್ಲಿ. ಇದರ ಬಗ್ಗೆ ವಿವರವಾಗಿ ಬರೆಯುವ ಹಂಬಲವಿದೆ. ಎದುರು ನೋಡುತ್ತಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.
  • ಸಾಹಿತ್ಯ ಮೇಳ
  • ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
  • ಏಕೆ ಹೀಗೆ ಅನಿಸುತ್ತದೆಯೋ!
  • ಏಕೆ ಹೀಗೆ ಅನಿಸುತ್ತದೆಯೋ!
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator