ಪುರಾಣಗಳು/ಉಪನಿಷತ್ ಗಳು.
ವೇದಗಳಲ್ಲಿ ನಾಲ್ಕು ವೇದಗಳು ಎಂದು ಕೇಳಿದ್ದೇನೆ.
ಮಹಾ ಪುರಾಣಗಳು ೧೮, ಉಪ ಪುರಾಣಗಳು ೧೮ ಎಂದೂ ಕೇಳಿದ್ದೇನೆ.
ರಾಮಾಯಣ, ಮಹಾಭಾರತಗಳು ಮಹಾ ಪುರಾಣಗಳೇ? ನಾ ಕೇಳಿರುವ ಕೆಲವು ಹೆಸರುಗಳೆಂದರೆ:
ವಿಷ್ಣು ಪುರಾಣ, ಗರುಡ ಪುರಾಣ, ಪದ್ಮ ಪುರಾಣ, ನರಸಿಂಹ ಪುರಾಣ ಇತ್ಯಾದಿ.
ಇವುಗಳಲ್ಲಿ ರಾಜಸ/ಸಾತ್ವಿಕ ಪುರಾಣಗಳೆಂದು ವಿಭಾಗಗಳಿವೆಯೇ?
ಯಾವುವು ೧೮ ಮಹಾ/ಉಪ ಪುರಾಣಗಳು?
ವೇದಗಳಿಗೂ ಉಪನಿಷತ್ಗ್ ಗಳಿಗೂ ಏನುವ್ಯತ್ಯಾಸ? ಎಷ್ಟು ಉಪನಿಷತ್ ಗಳಿವೆ?
ಬಲ್ಲವರು ಉತ್ತರಿಸಿ.

- madhava_hs ರವರ ಬ್ಲಾಗ್
- Login or register to post comments
- 566 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಪುರಾಣಗಳು/ಉಪನಿಷತ್ ಗಳು.
rajagopal
You can visit the following URL to get some informations about Vedas and Upanishads.
http://www.crystalinks.com/vedas.html
and the following URL for details about Puranas.
http://www.puranas.org/
ಉ: ಪುರಾಣಗಳು/ಉಪನಿಷತ್ ಗಳು.
ವೇದಗಳು ನಾಲ್ಕು ಅಂತ ಒಪ್ಪದ ಒಂದ ಪಂಗಡವಿದೆ...
ವೇದಗಳು ತ್ರಯೀ.. ಅಥರ್ವವೇದವನ್ನು ಲೆಕ್ಕ ಮಾಡಲ್ಲ ಹಲವರು.
ರಾಮಾಯಣ, ಮಹಾಭಾರತ ಪುರಾಣಗಳಲ್ಲ.
ಉಪನಿಶತ್ತು, ಅರಣ್ಯಕ, ಬ್ರಾಹ್ಮಣ ಮುಂತಾದವು ಇವು ವೇದ ಹೋಳುಗಳು..
ಉಪ + ನಿಶತ್ = ಹತ್ತಿರ ಹೋಗು?
ಉಪನಿಶತ್ತಲ್ಲಿ ಗುರುವಿಂದ ಅಂತೇವಾಸಿಗಳು/ಶಿಶ್ಯರಿಗೆ ಹೇಳಿರುವ ಬೋದನೆಗಳಿರುತ್ತವಂತೆ!
’ವೇದಂ ಅನುಚ್ಯಾ ಆಚಾರ್ಯೋ ಅಂತೇವಾಸಿನಂ ಅನುಶಾಸ್ತಿ’
( ತಯ್ತೇರಿಯ ? )
ಉ: ಪುರಾಣಗಳು/ಉಪನಿಷತ್ ಗಳು.
ವೇದಗಳು ಅಗಣಿತ! ಅವ್ಗಳು ಎಷ್ಟು ಅಂತ ಹೇಳಕ್ಕೆ ಆಗುತ್ತ?!
ಆದರೆ ಈ ವೇದರಾಶಿಯನ್ನು ನಾಲ್ಕು (ವ್ಯಾಸ ) ಭಾಗಗಳಲ್ಲಿ ಹಂಚಿದ್ದಾರೆ.
ಈ ಜನರಿಗೆ ಅಥರ್ವಣ ವೇದದಲ್ಲಿ ಅಶ್ಲೀಲ ಕಂಡಿದರಿಂದ ಅದನ್ನು ಬರು ಬರುತ್ತಾ ಬಳಕೆಯಿಂದ ಕೈ ಬಿಟ್ಟರು. ಹಾಗಾಗಿ ಕೆಲವರ ಲೆಕ್ಕದಂತೆ ಮೂರೇ ವೇದಗಳು.
ಈ ಉಪನಿಷತ್ತು ಗಳು ವೇದಗಳ ಕೊನೆಯ ಭಾಗ. ಇತರ ಮೂರು ಭಾಗಗಳು
೧. ಸಂಹಿತೆಗಳು.
2.ಬ್ರಾಹ್ಮಣಗಳು
3. ಅರಣ್ಯಕಗಳು.
ಈ ಉಪನಿಷತ್ತುಗಳ ಸಾರ ವೇದಾಂತ!
ನಮ್ಮ ಜನ ಈ ವೇದಗಳು ಎಲ್ಲ ಅಪೌರುಷೇಯ ಅನ್ನೋ ಬ್ರಮೆಯನ್ನು ಹುಟ್ಟು ಹಾಕಿ ಬಿಟ್ಟಿದ್ದಾರೆ.
ಈ ಪುರಾಣಗಳು ವೇದಗಳ ನಿರಾಕಾರ ತತ್ವಕ್ಕೆ ಆಕಾರ ಕೊಟ್ಟು ಹೆಣೆದ ಕಟು ಕಥೆಗಳು. ಇವುಗಳಲ್ಲಿ ಸ್ವಲ್ಪ ಇತಿಹಾಸವೂ ಇದೆ. ೧೮ ಪುರಾಣಗಳನ್ನು ಬರೆದಿದ್ದು ವ್ಯಾಸನೆ!
ಈ ವೈಷ್ಣವ, ಶೈವ.. ಮುಂತಾದ ಮತಗಳ ನಡುವೆ ಗುದ್ದಾಟ ಶುರುವಾದ ಮೇಲೆ ಈ ಪುರಾಣಗಳನ್ನು ಸಾತ್ವಿಕ, ರಾಜಸ್ಕ ತಾಮಸಿಕ ಅಂತ ವಿಭಾಗಿಸಾಲಾಯಿತು.
ರಾಮಾಯಣ , ಮಹಾಭಾರತ ವನ್ನು ಇತಿಹಾಸ ಅಂತ ಕರೀತಾರೆ. ಮಹಾಭಾತಕ್ಕೆ ( ಜಯ ಪುರಾಣ) ಪಂಚಮ ವೇದ ಅನ್ನೋ ಅಡ್ಡ ಹೆಸರು ಇದೆ.
ಉಪನಿಷತ್ತುಗಳ ಸಂಕೆ ೧೦೮ ಅನ್ನುತಾರೆ. ೨೦೦ ಕ್ಕೂ ಹೆಚ್ಚು ಉಪನಿಷತ್ತುಗಳು ಸಿಕ್ಕಿವೆ.
ಸವಿತೃ
ಉ: ಪುರಾಣಗಳು/ಉಪನಿಷತ್ ಗಳು.
ಅಥರ್ವ(ಣ) ವೇದದಲ್ಲಿ ಅಶ್ಲೀಲವಲ್ಲ. ಬದಲಿಗೆ ಮಾಟ ಮಂತ್ರ ಮತ್ತು ವಶೀಕರಣ ಇತ್ಯಾದಿ ವಾಮಾಚಾರಗಳಿದ್ದುವುದಱಿಂದ ಅದಕ್ಕೆ ಅಷ್ಟು ಮನ್ನಣೆಯಿಲ್ಲ.
ಉ: ಪುರಾಣಗಳು/ಉಪನಿಷತ್ ಗಳು.
ಗುರುಗಳೇ ನನ್ನ ಹತ್ತಿರ ಅಥರ್ವಣ ವೇದ ( ಕನ್ನಡ ಭಾಷ್ಯ ಸಮೇತ) ಇದೆ.
ಇತರ ವೇದಗಳ ಕೆಲ ಸಂಪುಟಗಳೂ ಇವೆ.
ವಾಮಾಚಾರ ಅಂದ್ರೆ ಏನು ಅಂತ ಸ್ವಲ್ಪ ಯೋಚಿಸಿ ಅಲ್ಲೇ... ಬರೀರಿ ಅಂತ ನಾನೇನೂ ಕೇಳಲ್ಲ.
ಸವಿತೃ
ಉ: ಪುರಾಣಗಳು/ಉಪನಿಷತ್ ಗಳು.
ಮಾಧವರೆ,
ವೇದ ಉಪನಿಷತ್‌ಗಳನ್ನು ಬಿಡಿ.ಕೆಲವರು ಬರೆದ ಕನ್ನಡ ಲೇಖನಗಳೇ ಅರ್ಥವಾಗುವುದಿಲ್ಲ. ಇನ್ನೂ simple ಆಗಿ ಬರೆಯಬಾರದೇ ಅಂತ ಅನಿಸುವುದು.
ಲೇಖನಗಳಲ್ಲಿ ಶ್ಲೋಕ ಬಂದಾಗ ಅರಿತವರು ಅದನ್ನು ಓದುವರು.ಉಳಿದ ನನ್ನಂತಹವರು ಶ್ಲೋಕವನ್ನು ನೋಡದೇ ಅದರ ಕನ್ನಡ ಭಾಷಾಂತರವನ್ನು ಮಾತ್ರ ಓದುವರು.
ಸಾಮಾನ್ಯರ ಈ ಕಷ್ಟ ಹಿಂದಿನ ಮುನಿಗಳಿಗೆ ಗೊತ್ತಿತ್ತು.ಅದಕ್ಕಾಗಿ ವೇದ,ವೇದಾಂತ(ಉಪನಿಷತ್)ಗಳ ಸಾರವನ್ನು ಹೇಳಿದರು-ಇತಿಹಾಸ, ಪುರಾಣಗಳ ಮೂಲಕ.
ಈ ಸಮಯದಲ್ಲಿಯೇ ಬೇರೆ ಒಂದೆರಡು ಮಾತು-
ಸನಾತನ ಧರ್ಮ ಎನ್ನಿ,ಹಿಂದೂ ಧರ್ಮ ಎನ್ನಿ,ಯಾವುದನ್ನೂ ಹೀಗೇ ಪಾಲಿಸಿ ಎಂದು ಕಟ್ಟುನಿಟ್ಟು ವಿಧಿಸಿಲ್ಲ.ಕಾಲಕಾಲಕ್ಕೆ ಹಳತಾದುದನ್ನು,ಅಗತ್ಯವಿಲ್ಲದ್ದನ್ನು ತೆಗೆಯಲು,ಹೊಸದನ್ನು ಸೇರಿಸಲು ಸ್ವಾತಂತ್ರ್ಯ ನೀಡಿದ್ದಾರೆ.
ಅದೇ ರೀತಿ ಬದಲಾವಣೆಗಳನ್ನು ತಂದಿರುವ ಮುನಿಗಳ ಸರಪಳಿಯಲ್ಲಿ ಮನು(ಮನುವಾದಿ ಎಂದಿರಾ?),ಯಾಜ್ಞ್ಯವಲ್ಕ್ಯ,ಪರಾಶರ..ಎಲ್ಲಾ ಒಂದೊಂದು ಕೊಂಡಿಗಳು. ಬಸವಣ್ಣ, ಶರೀಫ, ವಿವೇಕಾನಂದ, ಗಾಂಧಿ..ಯವರೂ ಸಹ ಈ ಸರಪಳಿಯ ಮುಂದುವರಿದ ಭಾಗ.
ಕೊಳಕುಎಂದು ಮುಖಸಿಂಡರಿಸಿ ಅಥವಾ ತೀರ್ಥ ಎಂದು ಕುಡಿಯಿರಿ-ಹಿಂದೂ ಧರ್ಮ ಗಂಗಾನದಿಯಂತೆ. ಕೊಳಕು ಮಾಡಿದ್ದು ನಾವು ಅಥವಾ ನಮ್ಮ ಹಿರಿಯರು. ಸರಿಯಲ್ಲ ಎನಿಸಿದನ್ನು ತಿದ್ದಲು ಪ್ರಯತ್ನಿಸುವ. ಇಷ್ಟು ಉದ್ದ ನಾಲಗೆ ಹರಿಯಲು ಬಿಟ್ಟ ನಮ್ಮ ಧರ್ಮವನ್ನೇ ನಾವು ಕೀಳಾಗಿ ಕಾಣುವುದು ಬೇಡ.
ಇನ್ನು ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ-
ರಾಮಾಯಣ,ಭಾರತ,ಹರಿವಂಶ,ಯೋಗವಾಶಿಷ್ಠಗಳು ‘ಇತಿಹಾಸ’.
ರಾಜಸ(೬ಪುರಾಣಗಳು-ಬ್ರಹ್ಮನಿಗೆ),ಸಾತ್ವಿಕ (೬-ವಿಷ್ಣುವಿಗೆ), ತಾಮಸ (೬-ಶಿವನಿಗೆ) ಪುರಾಣಗಳು.
೧೮ ಮಹಾ/ಉಪಪುರಾಣಗಳಿಗಾಗಿ ರಾಜಗೋಪಾಲ್‌ರವರು ಕೊಟ್ಟ ಲಿಂಕ್ ನೋಡಿ.
ಮಹಾಪುರಾಣಗಳಲ್ಲಿ ಮುಖ್ಯವಾದವು-ಶ್ರೀಮದ್ಭಾಗವತ,ವಿಷ್ಣು,ಮಾರ್ಕಾಂಡೇಯ.
ವೇದಗಳ ಸಾರ,ವೇದಗಳ ಕೊನೆಯ ಭಾಗ ಉಪನಿಷತ್ ಬಗ್ಗೆ ಮಹೇಶ್‌ರವರು ಹೇಳಿರುವರು.
-ತಪ್ಪುಗಳಿದ್ದಲ್ಲಿ ಕ್ಷಮಿಸಿ.
ಗಣೇಶ.
ಸವಿತೃ ಅವರ ಪ್ರತಿಕ್ರಿಯೆ ಈಗ ಓದಿದೆ. ಚೆನ್ನಾಗಿದೆ.
ಉಪನಿಷತ್ ಗಳು ೧೧೮೦.
ಉ: ಪುರಾಣಗಳು/ಉಪನಿಷತ್ ಗಳು.
gaNesha avre ನಿಮ್ಮ ಉತ್ತರ chenaagide.
>>ರಾಜಸ(೬ಪುರಾಣಗಳು-ಬ್ರಹ್ಮನಿಗೆ),ಸಾತ್ವಿಕ (೬-ವಿಷ್ಣುವಿಗೆ), ತಾಮಸ (೬-ಶಿವನಿಗೆ) ಪುರಾಣಗಳು.
ವೈಯಕ್ತಿಕವಾಗಿ ನನಗೆ ಈ ಪುರಾಣಗಳಲ್ಲಿ ನಂಬಿಕೆ ಇಲ್ಲವಾದರೂ... ಈ ಸಂದರ್ಭದಲ್ಲಿ ನನ್ನ ಅನಿಸಿಕೆಯನ್ನು ಇಲ್ಲಿ ಬರೆಯುತ್ತಿದ್ದೇನೆ.
ಬ್ರಹ್ಮ>>ಸಾತ್ವಿಕ ಗುಣವನ್ನು ಸಂಕೆತಿಸುತ್ತಾನೆ.
ವಿಷ್ಣು >>ರಾಜಸಿಕ ಗುಣವನ್ನು ಸಂಕೆತಿಸುತ್ತಾನೆ
ರುದ್ರ>> ತಾಮಸಿಕ ಗುಣವನ್ನು ಸಂಕೆತಿಸುತ್ತಾನೆ.
ಇದು ಕೆಲ ಮಹಾನ್ ಪಂಡಿತರ ತೀರ್ಪು. ಒಪ್ಪೋಣ?!
ಆದ್ರೆ ಪುರಾಣಗಳನ್ನು ಮೇಲಿನ ಆಧಾರದಿಂದ ವಿಭಾಗಿಸಿಲ್ಲ ಅಂತ ನನಗೆ ಅನ್ನಿಸುತ್ತದೆ. ಹಾಗೇನಾದರೂ ಆಗಿದ್ದರೆ ಇದು ನಮ್ಮ ವೈಷ್ಣವ ಪಂಡಿತರ ಪ್ರಕಾರ ಮಾತ್ರ.
ನಾನು ಬಹಳಷ್ಟು ಬಾರಿ ನೋಡಿರುವಂತೆ .. ಮೇಲಿನ ರೀತಿ ಪುರಾಣಗಳನ್ನು ವಿಭಾಗಿಸುವ ಪಂಡಿತರು "ಶಿವ" ವನ್ನು ಅದಕೆ ಅಪಾರ್ಥ ಮಾಡಿ konDidaaraarO ಗೊತ್ತಿಲ್ಲ. ನನ್ನ ಪ್ರಕಾರ ಶಿವ ಬೇರೆ ರುದ್ರ ಬೇರೆ!!
ಇನ್ನು ಯೋಗವಾಶಿಷ್ಠkke ಬಂದರೆ adu ಒಂದು ರೀತಿಯ bhOdhana ( prabhu samhite?) grantha. bhagavdgeeteya ರೀತಿ. vashishTa raamanige ಹೇಳುವ neeti ಪಾಠ.
ಸವಿತೃ
ಉ: ಪುರಾಣಗಳು/ಉಪನಿಷತ್ ಗಳು.
ಸವಿತೃ ಸರ್,
ಈ ಪುರಾಣಗಳ ಉದ್ದೇಶ- ಪುರಾಣ ಕತೆಗಳ ಮೂಲಕ ಜನರನ್ನು ಆಕಾರದೆಡೆಗೆ ಸೆಳೆದು ಅಲ್ಲಿಂದ ನಿರಾಕಾರದೆಡೆಗೆ ಒಯ್ಯುವುದು.( ಆದರೆ ನಡೆದುದೇ ಬೇರೆ..)
ಮುಕ್ಕೋಟಿ ದೇವರಲ್ಲಿ (ಮಾಧವರೆ,ಹೆಸರು ಕೇಳಬೇಡಿ
)ಬ್ರಹ್ಮನಿಗೆ ಸೃಷ್ಠಿ, ವಿಷ್ಣುವಿಗೆ ಪಾಲನೆ, ಶಿವನಿಗೆ ಲಯ ಕೆಲಸವಲ್ಲವೇ?
ಕೇಳಿದವರಿಗೆ ವರ ನೀಡುವ (ರಾಜನ?) ಗುಣ ರಾಜಸ ಬ್ರಹ್ಮನದ್ದು; ಅದಕ್ಕೆ ಬ್ರಹ್ಮನಿಗೆ ಸಂಬಂಧಿಸಿದ ಪುರಾಣಗಳು-ರಾಜಸ ಪುರಾಣಗಳು.
ಲಯ ಮಾಡುವುದು-ತಾಮಸ ಗುಣ-ಅದಕ್ಕೆ ತಾಮಸ ಪುರಾಣ ಎಂದಿರಬಹುದಲ್ವೇ?
ಗಣೇಶ.
ಉ: ಪುರಾಣಗಳು/ಉಪನಿಷತ್ ಗಳು.
>ಕೇಳಿದವರಿಗೆ ವರ ನೀಡುವ (ರಾಜನ?) ಗುಣ ರಾಜಸ ಬ್ರಹ್ಮನದ್ದು; ಅದಕ್ಕೆ ಬ್ರಹ್ಮನಿಗೆ ಸಂಬಂಧಿಸಿದ ಪುರಾಣಗಳು-ರಾಜಸ ಪುರಾಣಗಳು.
>ಲಯ ಮಾಡುವುದು-ತಾಮಸ ಗುಣ-ಅದಕ್ಕೆ ತಾಮಸ ಪುರಾಣ ಎಂದಿರಬಹುದಲ್ವೇ?
ಏಕೋ ನನಗೆ ಈ ಮಾತುಗಳು ಒಪ್ಪಿಗೆ ಆಗಲಿಲ್ಲ.
ಸತ್ವ, ರಾಜಸ, ತಾಮಸ....ಈ ಪದಗಳ ಅರ್ಥ ......"ಸರಿಯಾದ ಅರ್ಥ" ...ಸಮಯ ಸಿಕ್ಕಿದಾಗ ಹುಡುಕ್ತೀನಿ.
ತಿಳಿದಿದ್ದವ್ರು ಬರೆಯಿರಿ. ಈ "ಲಯ" ಅಂದ್ರೆ ಏನು ಅಂತಾನೂ ಯಾರಾದ್ರೂ ನಮ್ಮೊಡನೆ ಹಂಚಿಕೊಳ್ಳಿ.
ಅಲ್ಲದೆ ಇದುವರೆಗೆ ಈ ಶಿವ ಅದೇನು "ಲಯ"ದ ಕೆಲಸ ಮಾಡಿದ್ದಾನೆ ಅಂತ ನಂಗೆ ಈ ಕ್ಷಣಕ್ಕೆ ಹೊಳೀತ ಇಲ್ಲ. ದಯವಿಟ್ಟು ತಿಳಿದವರು ಬರೆಯಿರಿ.
ಸವಿತೃ
ಉ: ಪುರಾಣಗಳು/ಉಪನಿಷತ್ ಗಳು.
ಶಿವ ಎಂದರೆ ಮಂಗಳ, ಶುಭ. ರುದ್ರ ಎಂದರೆ ಹೆದರಿಕೆಯಿಂದ ಅೞು ತರಿಸುವವನೆಂದರ್ಥ. ರುದ್=ಅೞು (ಸಂಸ್ಕೃತದಿಂದ)
ಉ: ಪುರಾಣಗಳು/ಉಪನಿಷತ್ ಗಳು.
ಮಹೇಶ್,ಗಣೇಶ್, ಸವಿತೃ, ರಾಜ ಗೋಪಾಲ್ ರವರಿಗೆ ಮಾಹಿತಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಮಹಾಭಾರತದ ಯುಧ್ಧದ ಸನ್ನಿವೇಶದಲ್ಲಿ ಅರ್ಜುನನು ’ಹಿರಿಯರು ಬಂಧುಗಳನ್ನು ಕೊಂದು ರಾಜ್ಯ ಪಡೆಯುವುದು ನನಗೆ ಶ್ರೇಯಸ್ಕರವಾಗಿ ಗೋಚರಿಸುತ್ತಿಲ್ಲ’ ಎನ್ನುತ್ತಾನೆ. ಇಲ್ಲಿ ಶ್ರೇಯಸ್ಸು ಎಂಬುವುದು ಯಾವುದು, ಮನುಷ್ಯನಿಗೆ ಶ್ರೇಯಸ್ಸೇ ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ವಿರುದ್ಧವಾಗಿ ಪ್ರೇಯಸ್ಸನ್ನರಸಿ ಹೋದರೆ ಮನುಷ್ಯ ಹೇಗೆ ಹಾಳಾಗಬಲ್ಲ ಎಂಬುದಕ್ಕೆ ದುರ್ಯೋಧನನೇ ಸಾಕ್ಷಿಯಾಗಿ ಕಾಣುತ್ತಾನೆ. ಪ್ರೇಯಸ್ಸು - ಶ್ರೇಯಸ್ಸು ಇವುಗಳನ್ನು ಅರ್ಥಮಾಡಿಕೊಂಡು ಮನುಷ್ಯ ಉತ್ತಮವಾದ ದಾರಿಯಲ್ಲಿ ಸಾಗಲಿ ಎಂದು ಸಂದೇಶ ಕೊಡುವ ಮಹಾಭಾರತ, ರಾಮಾಯಣಾದಿ ಮಹಾಕಾವ್ಯಗಳು ಎಷ್ಟು ಅದ್ಭುತ ಅಲ್ಲವೆ?
ಮಹಾಭಾಗವತವೂ ಬಹಳಷ್ಟು ಸಂದೇಶಗಳನ್ನು ನೀಡುವ ಗ್ರಂಥ, ಅದೇಕೋ ರಾಮಾಯಣ, ಮಹಾಭಾರತಗಳಷ್ಟು ಪ್ರಚಾರ ಪಡೆದಿಲ್ಲ.
ಉ: ಪುರಾಣಗಳು/ಉಪನಿಷತ್ ಗಳು.
ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್|
ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ||
ಮದ್ವಯಂ= ಮತ್ಸ್ಯ, ಮಾರ್ಕಂಡೇಯ (೨)
ಭದ್ವಯಂ= ಭವಿಷ್ಯ, ಭಾಗವತ (೨)
ಬ್ರತ್ರಯಂ=ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ(೩)
ವಚತಿಷ್ಟಯಂ=ವರಾಹ, ವಾಮನ, ವಾಯು, ವಿಷ್ಣು (೪)
ಅ=ಅಗ್ನಿ (೧)
ನಾ=ನಾರದ(೧)
ಪ=ಪದ್ಮ(೧)
ಲಿಂ=ಲಿಂಗ(೧)
ಗ=ಗರುಡ(೧)
ಕೂ=ಕೂರ್ಮ(೧)
ಸ್ಕಾ=ಸ್ಕಾಂದ(೧)
ಎಂಬುದಾಗಿ ೧೮ ಪುರಾಣಗಳನ್ನು ಹೇೞುತ್ತಾರೆ.
ಉ: ಪುರಾಣಗಳು/ಉಪನಿಷತ್ ಗಳು.
ತಪ್ಪೊಪ್ಪು:
ಅರ್ಥ ಹೇೞುವಾಗ ವಚತಿಷ್ಟಯಂ ಎಂಬುದನ್ನು ವಚತುಷ್ಟಯಂ ಎಂದು ತಿದ್ದಿಕೊಳ್ಳಿ. ಟೈಪಿಸುವಾಗ ಆದ ತಪ್ಪಿಗೆ ತಮ್ಮ ಕ್ಷಮೆಯಿರಲಿ. ನನ್ನ ಹಿಂದಿನ ಗರ್ವದ ಮಾತುಗಳಿಗೂ ಕ್ಷಮೆಯಿರಲಿ.