ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › madhava_hs ರವರ ಬ್ಲಾಗ್

ಅಂತೂ ಇಂತೂ ಜಿಗುಪ್ಸೆ ಬಂತು

August 18, 2008 - 11:09am — madhava_hs

ಪೇಪರ್ ನವರು ಮತ್ತೆ ನಮಗೆ ಮೋಸಮಾಡಿದರು. ನೆನ್ನೆ ಈ ಚಿತ್ರ ಚೆನ್ಣಾಗಿದೆ ಎಂದು ನಾವುಗಳು ನಂಬಿಕೊಂಡು ಹೋಗಿದ್ದಾಯ್ತು. ಒಬ್ಬನ ಜೊತೆ ಒಂದು ಹುಡುಗಿಯ ಎಂಗೇಜ್ಮೆಂಟಾಗಿರುತ್ತೆ. ಪ್ರೇಮಸುಳಿಯಲ್ಲಿ ಸಿಕ್ಕಿ ಎಂಗೇಜ್ ಮೆಂಟ್ ಆದವನಿಗೆ ಬಿಸ್ಕಿಟ್ ಹಾಕಿ ತನ್ನಿಷ್ಟ ಬಂದವನ ಜೊತೆ ಮದುವೆಯಾಗುವುದು ಈ ಕತೆಯ ತಿರುಳು. ’ನುವ್ವೇ ಕಾವಾಲಿ’ ಯ ರಿಮೇಕ್ ಚಿತ್ರ ಹಿಂದೆ ಕನ್ನಡದಲ್ಲಿ ಬಂದಿತ್ತಲ್ಲವೇ. ಅದೂ ಇದೇ ಕತೆ. ಏಕೆ ಮತ್ತೊಮ್ಮೆ ಅದೇ ಕತೆ ಮಾಡಿ ನಮ್ಮ ತಲೆತಿಂದರು? ಕೆಲವು ’ಸಿನಿಮೀಯ ದೃಷ್ಯಗಳು’ ಇಂತಿವೆ.

೧. ಹಳ್ಳಿಗೆ ಹೋದ ನಾಯಕ ಏಕಾ ಏಕಿ ಸುಮಾರು ಹತ್ತಿಪ್ಪತ್ತು ಜನರನ್ನು ಅನಾಮತ್ತು ಹೊಡೆದುಬಿಡುತ್ತಾನೆ. ಸುತ್ತಲು ನಿಂತಿದ್ದವರೆಲ್ಲ ಮೂಕ ಪ್ರೇಕ್ಷಕರಾಗಿರುತ್ತಾರೆ.
೨. ಎಂಗೇಜ್ ಮೆಂಟ್ ಆದ ಭೂಪನಿಗೆ ಹುಡುಗಿಯ ಮೇಲೆ ಯಾವುದೇ ಪ್ರೀತಿ ಇತ್ಯಾದಿ ಮಣ್ಣಾಂಗಟ್ಟಿ ಭಾವನೆಗಳಿರುವುದಿಲ್ಲ. ಸ್ನೇಹಿತನಿಗೋಸ್ಕರ ಏನುಬೇಕಾದರು ಬಿಡಬಲ್ಲ.
೩. ನಾಯಕನೊಬ್ಬನೇ ಅದ್ಭುತವಾಗಿ ಹಾಡಬಲ್ಲ.
೪. ಸಾಫ್ಟ್ವೇರೆ ಕಂಪೆನಿಯ ಸರ್ವರ್ ಕ್ರಾಶ್ ಆಗಿದ್ದನ್ನು ಹೊಸದಾಗಿಸೇರಿದ್ದ ನಾಯಕ ಕಮ್ ಗಾಯಕ ರಾತ್ರೋರಾತ್ರಿ ಸರಿಪಡಿಸಿ ಸಿ.ಇ.ಓ ನಿಂದ ಶ್ಲಾಘನೆ ಅನುಭವಿಸುತ್ತಾನೆ.
೫. ಅಪ್ಪ ಮಗ ಒಟ್ಟಿಗೆ ಕುಳಿತು ಗುಂಡು ಹಾಕುತ್ತಾರೆ.

ಎಂಗೇಜ್ಮೆಂಟ್ ಮುರಿದು ಮದುವೆಯಾಗುವುದು ನಮ್ಮ ಕನ್ನಡ ಸಿನಿಮಾ ಸಂಸ್ಖೃತಿಗೆ ಒಗ್ಗುವುದಿಲ್ಲ. ’ಮುಂಗಾರು ಮಳೆ’ ಯಲ್ಲಿ ಕುಟುಂಬದ ಗೌರವಕ್ಕೋಸ್ಕರ ಪ್ರೀತಿ ತ್ಯಾಗಮಾಡಿದ ಗಣೇಶ ಹೇಗೆ ದಿನ ಬೆಳಗಾಗುವುದರಲ್ಲಿ ಹೀರೋ ಆದ ನೋಡಿ.

ನೀವುಗಳು ಅತೀವ ಸಂತೋಶದಿಂದ, ನೆಮ್ಮದಿಯಿಂದ ಇರುವವರಾಗಿದ್ದರೆ ಒಮ್ಮೆ ಬ್ರೇಕ್ ತೆಗೆದುಕೊಳ್ಳಲು ಈ ಚಿತ್ರ ನೋಡಿಬನ್ನಿ.

  • ಚಿತ್ರ
~.~
  • madhava_hs ರವರ ಬ್ಲಾಗ್
  • Login or register to post comments
  • 285 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2008 - 11:44am — Sunil Jayaprakash

ಉ: ಅಂತೂ ಇಂತೂ ಜಿಗುಪ್ಸೆ ಬಂತು

Sunil Jayaprakash's picture

ಈ ಸಿನಿಮಾ ಬಗ್ಗೆ ಗೊತ್ತಿಲ್ಲ, ಆದರೆ

೪. ಸಾಫ್ಟ್ವೇರೆ ಕಂಪೆನಿಯ ಸರ್ವರ್ ಕ್ರಾಶ್ ಆಗಿದ್ದನ್ನು ಹೊಸದಾಗಿಸೇರಿದ್ದ ನಾಯಕ ಕಮ್ ಗಾಯಕ ರಾತ್ರೋರಾತ್ರಿ ಸರಿಪಡಿಸಿ ಸಿ.ಇ.ಓ ನಿಂದ ಶ್ಲಾಘನೆ ಅನುಭವಿಸುತ್ತಾನೆ.

ಇದು ಸಾಧ್ಯವಿದೆ. ಮತ್ತು ಈ ರೀತಿಯಷ್ಟೇ ಅಲ್ಲ, ಇದಕ್ಕಿಂತ ಹೆಚ್ಚಿನ ತೊಂದರೆಗಳನ್ನು ತಪ್ಪಿಸಿರುವದನ್ನು ನಾನೇ ನೋಡಿದ್ದೇನೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 11:58am — madhava_hs

ಉ: ಅಂತೂ ಇಂತೂ ಜಿಗುಪ್ಸೆ ಬಂತು

madhava_hs's picture

ಶಹಭಾಷ್! ದೇವರು ಅಂತಹವರಿಗೆ ಇಂಕ್ರಿಮೆಂಟು ಕೊಟ್ಟು ಒಳ್ಳೇದು ಮಾಡಲಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:06pm — ravi_hamsa

ಉ: ಅಂತೂ ಇಂತೂ ಜಿಗುಪ್ಸೆ ಬಂತು

ravi_hamsa's picture

ಗುರುಗಳೇ

ಇದು ಇನ್ನೊಂದು ತೆಲುಗು ಚಿತ್ರದ ರಿಮೇಕ್. ಆಡುವಾರಿ ಮಾಟಲಕು ಅರ್ಥಾಲೆ ವೇರುಲೇ ಅನೋದು ಆ ಚಿತ್ರದ ಹೆಸರು. ನನ್ನ ಪ್ರಕಾರ ಜೀವನದಲ್ಲಿ ನಡೆಯೋದನ್ನ ನೋಡೋಕೆ ಜನ ಚಿತ್ರ ಮಂದಿರಕ್ಕೆ ಹೋಗೋದು ಕಡಿಮೇನೆ. ಅದಕ್ಕೆ ಹೀಗೆ. ಮುಂಗಾರುಮಳೆಯಲ್ಲಿ ಅಪ್ಪನ ಮುಂದೆ ಗುಂಡು ತೆಗೆಯೋದು, ಅಮ್ಮನ ಎದುರು ಅಪ್ಪನ್ನ ಬೈಯೋದು ಎಲ್ಲಾ ನೋಡಿದೆವಲ್ಲ. ಅದಕ್ಕಿಲ್ಲದ ವಾಸ್ತವದ ಚೌಕಟ್ಟು ಇದಕ್ಕೆ ಯಾಕೆ.

- ರವಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:10pm — anil.ramesh

ಉ: ಅಂತೂ ಇಂತೂ ಜಿಗುಪ್ಸೆ ಬಂತು

anil.ramesh's picture

ಈ ಚಿತ್ರದ ನಾಯಕ ಆದಿತ್ಯ ಬಾಬು "ಆದಿತ್ಯ ಆರ್ಟ್ಸ್" ಎಂಬ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾನೆ...
ಈತ ಆಂಧ್ರದವನು...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:23pm — anil.ramesh

ಉ:

anil.ramesh's picture

ಈ ಚಿತ್ರದ ನಾಯಕ ಆದಿತ್ಯ ಬಾಬು "ಆದಿತ್ಯ ಆರ್ಟ್ಸ್" ಎಂಬ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾನೆ...
ಈತ ಮೂಲತಃ ಆಂಧ್ರ ಪ್ರದೇಶದವನು...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಣೆಯಲ್ಲಿ ’ಮುಂಗಾರು ಮಳೆ’ ಚಿತ್ರ ಬಿಡುಗಡೆ - 11, ಜುಲೈ, 2007ರಿಂದ ಈ-ಸ್ಕ್ವೇರ್ ನಲ್ಲಿ ರಾತ್ರಿ 8.50ಕ್ಕೆ
  • ಕತೆಯಾಗದ ಹುಡುಗಿ
  • ಕನ್ನಡ ಸಿನಿಮಾ ನೋಡಬೇಕೆ?
  • ಜಗ್ಗೇಶ್ ಚಿತ್ರ
  • ಇದೇನ್‌ ಗುರು ಹೀಗೆ !
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • benaka
    ಉ: ಹಂಸನಾದ
    January 9, 2009 - 1:51pm
  • msudan86
    ಉ: ಜನಗಳು ಅಥವಾ ಜನನಾಯಕರ ಉದ್ದೇಶ ಸರಿಯೋ ಅಥವಾ ತಪ್ಪೋ ?
    January 9, 2009 - 1:50pm
  • asuhegde
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 1:44pm
  • gurubaliga
    ಉ: ಖಾಲಿ ಬಾಟಲಿ
    January 9, 2009 - 1:42pm
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 9, 2009 - 1:41pm
  • gurubaliga
    ಉ: ಮೌನ ಎದೆ
    January 9, 2009 - 1:40pm
  • savithasr
    ಉ: ಉದ್ದ ಕಾಲಿನ ನೊಣ ೨
    January 9, 2009 - 1:36pm
  • savithasr
    ಉ: ಉದ್ದ ಕಾಲಿನ ನೊಣ ೧
    January 9, 2009 - 1:33pm
  • gurubaliga
    ಉ: ರಾತ್ರಿಯಲ್ಲಿ: ಕಾಫ್ಕಾ ಕಥೆ
    January 9, 2009 - 1:29pm
  • savithasr
    ಉ: ಜೋಡಿಹಕ್ಕಿ
    January 9, 2009 - 1:24pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 162 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator