ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › madhava_hs ರವರ ಬ್ಲಾಗ್

ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

November 20, 2007 - 1:19pm — madhava_hs

ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಒಳ್ಳೊಳ್ಳೆಯ ಹಾಡುಗಳು ಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ’ಆ ದಿನಗಳು ಚಿತ್ರದ’ ಸಿಹಿ ಗಾಳಿ, ಸಿಹಿ ಗಾಳಿ.....ಒಂದು ಇಂಪಾದ, ಮಧುರವಾದ ಹಾಡು. ಇದಕ್ಕೆ ಸಂಗೀತ ನೀಡಿ ಹಾಡಿರುವವರು ಇಳಯರಾಜ. ೧೩ ವರ್ಷಗಳ ಹಿಂದೆ ’ಶಿವಸೇನೆ’ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶಿಸಿದ್ದರು. ಅವರೇ ಹಾಡಿದೆ ’ಚಿಕ್ಕ ಮಗಳೂರ ಓ ಚಿಕ್ಕಮಲ್ಲಿಗೆ..ಅಕ್ಕರೆಯ ಮಾತು ಬಂದ್ ಹೇಳು ಮೆಲ್ಲಗೇ..’ ಕೂಡ ಉತ್ತಮ ಗೀತೆಯಾಗಿತ್ತು. ಇನ್ನು ಅವರ ಹಳೆಯ ಚಿತ್ರಗಳಾದ ’ಗೀತ’ ಹಾಗು ’ಈ ಬಂಧ ಅನುಬಂಧ (?)(ಅನಿಲ್ ಕಪೂರ್ ನಟಿಸಿರುವ ಚಿತ್ರ) ಗಳಲ್ಲಿಯೂ ಉತ್ತಮ ಗೀತೆಗಳಿವೆ. ಇಷ್ಟು ಒಳ್ಳೆಯ ಹಾಡುಗಳನ್ನು ಕೊಟ್ಟ ಇಳೆಯ ರಾಜ ಇನ್ನು ಮುಂದೆಯೂ ಕೆಲವು ಕನ್ನಡ ಚಿತ್ರಗಳಿಗೆ ಸಂಗೀತ ನೀಡಬಹುದು. ಇಳೆಯರಾಜ ತಮಿಳಿನವರೇ ಇರಬಹುದು. ಆದರೆ ಪ್ರತಿಭೆಗೇಕೆ ಮತ್ಸರ??

ಇನ್ನು ಈ ವಾರ ಬಿಡುಗಡೆಯಾದ ’ಚಂಡ’ ಚಿತ್ರದ ’ನೀ ಚೆಂದನೋ..ನಿನ್ನಾಸೆ ಚೆಂದಾನೊ..’ ಕೂಡ ಚೆನ್ನಾಗಿದೆ. ಯಾರು ಇದರ ಸಂಗೀತ ನಿರ್ದೇಶಕರು?? ಈ ಹಾಡನ್ನು ಹಾಡಿರುವವರು ಕುಮಾರ್ ಶಾನು. ಇವರೇ ಹಿಂದೆ ಹಾಡಿದ ’ದೇವರು ವರವನು ಕೊಟ್ರೆ...’ ಕೂಡ ಬಹಳ ಯಶಸ್ವಿ ಗೀತೆಯಾಗಿತ್ತು.

ಗೆಳೆಯ ಚಿತ್ರದ ’ಈ ಸಂಜೆ ಯಾಕಾಗಿದೇ..’ ಕೂಡ ಬಹಳ ಉತ್ತಮ ಗೀತೆ. ಇದನ್ನು ಹಾಡಿದವರು ಸೋನು ನಿಗಮ್ ಎನ್ನಿಸುತ್ತದೆ.

ಇನ್ನು ಮಿಲನ ಚಿತ್ರದ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.

’ನಿನದೇ ನೆನಪು’ ಚಿತ್ರದ ಒಂದೆರಡು ಹಾಡುಗಳೂ ಸುಶ್ರಾವ್ಯವಾಗಿವೆ.

ಒಟ್ಟಿನಲ್ಲಿ ಕನ್ನಡ ಚಲನ ಚಿತ್ರಗೀತೆ ಪ್ರಿಯರಿಗೆ ಇದು ಸುಗ್ಗಿ ಕಾಲ!!.

  • ಕನ್ನಡ ಹಾಡುಗಳು.
~.~
  • madhava_hs ರವರ ಬ್ಲಾಗ್
  • Login or register to post comments
  • 449 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 20, 2007 - 1:56pm — shreekant.mishrikoti

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

shreekant.mishrikoti's picture

ಅನಿಲ್ ಕಪೂರ್ ನಟಿಸೋದು - ’ಪಲ್ಲವಿ ಅನುಪಲ್ಲವಿ’ ಯಲ್ಲಿ , ಅದು ಮಣಿರತ್ನಂ ನಿರ್ದೇಶನದ್ದು , ಇಳಯರಾಜ ಸಂಗೀತ - ಹಾಡು - ’ನಗುವ ನಯನ ಮಧುರ ಮೌನ , ಮಿಡಿವ ಹೃದಯ ಇರೆ ಮಾತೇಕೆ ?’
ಬೇರೊಂದು ಕನ್ನಡ ಸಿನೇಮಾದಲ್ಲೂ ಈ ಹಾಡು ಇದ್ದಕ್ಕಿದ್ದ ಹಾಗೇ ಹಾಕಿದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2007 - 1:56pm — shreekant.mishrikoti

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

shreekant.mishrikoti's picture

ಅನಿಲ್ ಕಪೂರ್ ನಟಿಸಿರೋದು - ’ಪಲ್ಲವಿ ಅನುಪಲ್ಲವಿ’ ಯಲ್ಲಿ , ಅದು ಮಣಿರತ್ನಂ ನಿರ್ದೇಶನದ್ದು , ಇಳಯರಾಜ ಸಂಗೀತ - ಹಾಡು - ’ನಗುವ ನಯನ ಮಧುರ ಮೌನ , ಮಿಡಿವ ಹೃದಯ ಇರೆ ಮಾತೇಕೆ ?’
ಬೇರೊಂದು ಕನ್ನಡ ಸಿನೇಮಾದಲ್ಲೂ ಈ ಹಾಡು ಇದ್ದಕ್ಕಿದ್ದ ಹಾಗೇ ಹಾಕಿದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2007 - 2:09pm — Sunil Jayaprakash

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

Sunil Jayaprakash's picture

ಮಾಧವ, ಅರೆರೆ, ಒಳ್ಳೆ ಪಾಯಿಂಟ್ ಎತ್ತಿದ್ರಿ, ನನಗೆ ಈ ಬಗ್ಗೆ ಹೇಳಬೇಕೆನಿಸಿತ್ತು. ಈ ವರ್ಷ ಕನ್ನಡದಲ್ಲಿ ತುಂಬಾ ಒಳ್ಳೆಯ ಹಾಡುಗಳು ರಿಲೀಸ್ ಆಗಿವೆ. ಇದರ ಬಗ್ಗೆ ಹೆಚ್ಚುಬರೆಯಬೇಕು ಮಾಧವ.

ಕೊಕೊ: ಇಳಯರಾಜ ಅವರ ಬಗ್ಗೆ ಮತ್ತಷ್ಟು ಹಂಚಿಕೊಳ್ಳಬೇಕೆನಿಸಿತು. ನೋಡಿ, ಎಷ್ಟೋ ವರ್ಷಗಳ ನಂತರ ಇಳಯರಾಜ ಮರಳಿಬಂದಿದ್ದಾರೆ ಅಂತ ಮಾಧ್ಯಮದವರು ದೊಡ್ಡ ದೊಡ್ಡ ಹೆಡ್ಲೈನ್ಸಿನಲ್ಲಿ ಅಜಂತಾ ಎನ್ನುವ ಸಿನಿಮಾಕ್ಕೆ, ನೀವು ಹೇಳಿದ ಹಾಗೆ, ಪ್ರತಿಭೆಗೆ ಮತ್ಸರ ಸಲ್ಲದು ಅಂತೆಲ್ಲ ಪ್ರಚಾರ ಕೊಟ್ರು. ಆದರೆ ನೀವೇ ಬೇಕಿದ್ದರೆ ಕನ್ನಡಆಡಿಯೋ.ಕಾಂನಿಂದ ಅಜಂತಾ ಚಿತ್ರದ ಹಾಡುಗಳನ್ನು ಕೇಳಿ, ಇಳಯರಾಜರ ಗತ್ತು ಕುಂದಿರುವುದನ್ನು ಗಮನಿಸಬಹುದು. ಒಂದು ಟ್ಯೂನೂ ಕೂಡ ನೆನಪಿನಲ್ಲಿ ಉಳಿಯುವುದಿಲ್ಲ. ಪ್ರತಿಭೆಗೆ ಮತ್ಸರ ಸಲ್ಲದು ಎನ್ನುವುದು ಸುಲಭ, ಆದರೆ ಚೆನ್ನಾಗಿಲ್ಲದಿರುವುದನ್ನು ಎತ್ತಿ ತೋರಿಸುವ ಎದೆಗಾರಿಕೆಯನ್ನು ನಾವು ಕನ್ನಡಿಗರು ರೂಢಿಸಿಕೊಳ್ಳಲೇಬೇಕು, ಏನಂತೀರಾ.

ಯಾವುದಕ್ಕೂ ಅಜಂತಾ ಚಿತ್ರದ ಹಾಡು ಕೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2007 - 3:06pm — ವೈಭವ

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ವೈಭವ's picture

ಹೌದು. ಇಳಯರಾಜರ ಮೋಡಿ ಮರೆಯಾಗುತ್ತಿದೆ
ಈಗೇನಿದ್ದರೂ ಮನೊ ಮೂರುತಿ ಮತ್ತು ಹರಿಕ್ರಿಶ್ಣರ ಹೊತ್ತು. Smiling

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2007 - 5:20pm — ಸಂಗನಗೌಡ

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ಸಂಗನಗೌಡ's picture

ಹರಿಕಿಸ್ನ ಅವರ 'ಕ್ರಿಸ್ನ' ಸಿನಿಮಾದ 'ಸತ್ಯಭಾಮ ಬಾರಮ್ಮ' ಹಾಡ್ ಕೇಳಿ, ಸಕ್ಕತ್ ರಾಕ್ಕಿಂಗ್ ಹಾಡು. ಲಿರಿಕ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2007 - 3:08pm — madhava_hs

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

madhava_hs's picture

ಸುನೀಲ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಈ ಅಜಂತಾ ಚಿತ್ರ ಯಾವಾಗ ಬಂದಿತ್ತು, ಹೋಯಿತು ಎಂಬುದು ಕೂಡ ನನಗೆ ತಿಳಿಯದು. ಇದರರ್ಥ ಏನೆಂದರೆ, ಉತ್ತಮವಾಗಿಲ್ಲದ ಸರಕಾಗಿದ್ದರೆ ಜನ ಮಾನಸದಲ್ಲಿ ಇರುವುದಿಲ್ಲ. ಒಬ್ಬ ನಿರ್ದೇಶಕ ಕೆಲವು ತೋಪು ಚಿತ್ರಗಳನ್ನು ಕೊಟ್ಟು, ೧ ಹಿಟ್ ಚಿತ್ರವನ್ನು ಕೊಡುವುದು ಸಹಜ. ನಮ್ಮ ಯೋಗರಾಜ ಭಟ್ಟರನ್ನೇ ನೋಡಿ. ಅವರ ತೋಪು ಚಿತ್ರಗವಾದ ’ರಂಗ ಎಸ್.ಎಸ್.ಎಲ್.ಸಿ’ ಯನ್ನೇ ನೆಪವಾಗಿಟ್ಟು ಕೊಂಡು ಅವರನ್ನು ಹೀಯಾಳಿಸಬೇಕೋ, ಅಥವಾ ’ಮುಂಗಾರು ಮಳೆ’ ಯನ್ನು ತರಿಸಿದ್ದಕ್ಕೆ ಅವರನ್ನು ಉತ್ತೇಜಿಸಬೇಕೋ?. ನಾನು ಹೇಳುವುದಿಷ್ಟೇ; ಒಳ್ಳೆಯ ಹಾಡುಗಳಿದ್ದು ನಮಗಿಷ್ಟವಾಗಿದ್ದರೆ ಸಂತೋಷ ಪಡೋಣ, ಹಾಡು ಕೊಟ್ಟವರನ್ನು ಉತ್ತೇಜಿಸೋಣ. ಆದರೆ ನೀವೇ ಹೇಳಿದಂತೆ ಸರಕು ಉತ್ತಮ ವಾಗಿಲ್ಲ ದಿದ್ದರೆ ತಿರಸ್ಕರಿಸೋಣ, ವಿನಾಕಾರಣ ಅವರ ಮುಖಸ್ತುತಿ ಮಾಡುವುದು ಬೇಡ. ’ಅಜಂತಾ’ ವಿಷಯದಲ್ಲಿ ಮಾಧ್ಯಮಗಳು ಇಳಯ ರಾಜರನ್ನು ವಿನಾಕಾರಣ ವೈಭವೀಕರಿಸಿದ್ದರೆ ಅದು ತಪ್ಪೇ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2007 - 3:01pm — ವೈಭವ

ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ವೈಭವ's picture

ನಂಗೆ ಇತ್ತೀಚಿನ ಅಚ್ಚುಮೆಚ್ಚು
ಯುಗ ಸಿನಿಮಾದ "ಕರುನಾಡು ಕಂಡ ಕರಿಯ ಕಣಮ್ಮಿ..... ಇವೆನೇನೆ ನಿಂಗೆ ಒಡೆಯ ಕಣಮ್ಮಿ" Smiling .ಸಕ್ಕತ್ತಾಗಿದೆ
musicindiaonline.com ನಿಂದ ಕೇಳಿ ನಲಿಯಬಹುದು. ತುಂಬ ಹೊಸತನವಿದೆ ಹಾಡಿನಲ್ಲಿ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎ.ಆರ್.ರೆಹಮಾನ್ ಕನ್ನಡಕ್ಕೆ
  • ಭಲೇ ಗುರುಕಿರಣ್ !
  • ಅರ್ಬನ್ ಲ್ಯಾಡ್ಸ್
  • ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ
  • 'ಸರೆಗಮ'ದ ನಿರ್ಲಕ್ಷ್ಯ
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 139 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator