ನವ್ಯ, ನವೋದಯ, ಬಂಡಾಯ.....
ನವ್ಯ, ನವೋದಯ, ಬಂಡಾಯ ಇತ್ಯಾದಿ ಪದಗಳನ್ನು ಕೆಲವು ಲೇಖನಗಳಲ್ಲಿ ಬಳಸುತ್ತಿರುತ್ತಾರೆ. ಇವು ಸಾಹಿತ್ಯಗಳನ್ನು ವರ್ಗೀಕರಣಗೊಳಿಸುವ ವಿಧಗಳಿರಬಹುದು. ನವ್ಯ, ನವೋದಯ, ಬಂಡಾಯ ಸಾಹಿತ್ಯಗಳೆಂದರೇನು? ಈಗಿರುವ ಸಾಹಿತಿಗಳು ಯಾವ ವರ್ಗಕ್ಕೆ ಸೇರುತ್ತಾರೆ? ಗೊತ್ತಿದ್ದವರು ತಿಳಿಸಿ..

- madhava_hs ರವರ ಬ್ಲಾಗ್
- Login or register to post comments
- 141 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ನವ್ಯ, ನವೋದಯ, ಬಂಡಾಯ.....
ಮಾಧವರೇ , ನನಗೆ ತಿಳಿದಷ್ಟು ಹೇಳುತ್ತೇನೆ.
ಇದಕ್ಕಿಂತ ಒಳ್ಳೆಯ ಉತ್ತರ ಯಾರಾದರೂ ಕೊಡದೇ ಇದ್ದಲ್ಲಿ ಇದನ್ನೇ ಇಟ್ಟುಕೊಳ್ಳಿ .
ನವೋದಯ ಅನ್ನೋದು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹೊಸಗನ್ನಡದಲ್ಲಿ ಭಾವಗೀತೆಗಳು ,ಕತೆಗಳು ಬಂದಕಾಲ . ಬಿ.ಎಂ.ಶ್ರೀ ಮುಂತಾದವರಿಂದ ಹಿಡಿದು ಬೇಂದ್ರೆ ಕುವೆಂಪು ಮಾಸ್ತಿ ಮುಂತಾದವರ ಬರವಣಿಗೆ . ಆ ಮೊದಲು ಕನ್ನಡದಲ್ಲಿ ಭಾವಗೀತೆಗಳಾಗಲೀ , ಸಣ್ಣ ಕತೆಗಳಾಗಲೀ ಇರಲೇ ಇಲ್ಲ .
ನವ್ಯ ಅಂದರೆ ಪ್ರಾಸ, ಛಂದಸ್ಸು , ಲಘು ಗುರು ಗಣ ಇತ್ಯಾದಿಗಳನ್ನು ಕೈ ಬಿಟ್ಟ ಕಾವ್ಯದ ಕಾಲ . ಗೋಪಾಲಕೃಷ್ಣ ಅಡಿಗರಿಂದ ಶುರುವಾದ ಕಾವ್ಯ ಅಂತ ಕಾಣುತ್ತದೆ.
ಬಂಡಾಯ ಇದು ಹೂ , ಹೆಣ್ಣು , ಹಣ್ಣು , ಚಂದ್ರ , ತಾರೆ ಇತ್ಯಾದಿ ರಮ್ಯತೆಯಿಂದ ವಾಸ್ತವಿಕತೆಗೆ ಹೊರಳಿದ ಸಾಹಿತ್ಯ , ದೀನ ದಲಿತ ಕಾರ್ಮಿಕ ಪರ, ಶೋಷಣೆಯ ವಿರುದ್ಧ ಸಾಹಿತ್ಯ . ಚಂ.ಪಾ. ಕೂಡ ಒಂದು ಕಾಲಕ್ಕೆ ಬಂಡಾಯ ಕವಿ. ’ಎಲ್ಲೋ ಹುಟ್ಟಿ ಎಲ್ಲೋ ಬೆಳೆದು .... ಶಾಲ್ಮಲಾ’ ಹಾಡನ್ನು ನೀವು ಕೇಳಿರಬಹುದು , ಸಿ. ಅಶ್ವತ್ಥರ ದನಿಯಲ್ಲಿ. ಅದು ಇವರೇ ಬರೆದ ರೋಮ್ಯಾಂಟಿಕ್ ಕವಿತೆ. ಪಿ.ಲಂಕೇಶರು ಬಂಡಾಯವನ್ನು ಡಂಬಾಯ ಅಂತ ತಮಾಷೆ ಮಾದ್ತಿದ್ರು.
ನನಗೆ ತಿಳಿದ ಹಾಗೆ ತಿಳ್ಸಿದ್ದೀನಿ. ಅಲ್ಪ ಸೊಲ್ಪ ತಪ್ಪಿದ್ದರೂ ಇರಬಹುದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ನವ್ಯ, ನವೋದಯ, ಬಂಡಾಯ.....
ಧನ್ಯವಾದಗಳು ಮಿಶ್ರಕೋಟಿಗಳೇ.
ಉ: ನವ್ಯ, ನವೋದಯ, ಬಂಡಾಯ.....
ಬಹಳ ಸುಲಭವಾಗಿ ಅರ್ಥವಾಗುವಂತೆ ಬರೆದಿದ್ದಕ್ಕೆ ಧನ್ಯವಾದಗಳು.
ಕೀರ್ತಿ ಕಿರಣ್ ಎಂ