ಎಲ್ಲಿ ಹೋದರು?
ಈಗ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದೇಶೀ ಬಾಲೆಯರನ್ನು ಕರೆಸಿ ಅರೆನಗ್ನ ನೃತ್ಯ ಮಾಡಿಸುವ ಕೆಟ್ಟ ಚಾಳಿ ಶುರುವಾಗಿದೆ. ವಿದೇಶೀ ನೆಲಗಳಲ್ಲಿ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಪುಟ್ಬಾಲ್ ಪಂದ್ಯಗಳಲ್ಲಿ ಈ ರೀತಿ ನೃತ್ಯ ಮಾಡಿಸುವ ರೂಢಿ ಇದೆ. ಇಲ್ಲಿನ ಸಂಸ್ಕೃತಿಗೆ ಒಗ್ಗದ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದಾಗಿತ್ತು. ಎಲ್ಲಿ ಹೋದರು ಶಿವ ಸೈನಿಕರು, ರಾಮ ಸೈನಿಕರು, ಮುತಾಲಿಕರು, ಬಿ.ಜೆ.ಪಿ ಗಳು? ಏಕೆ ಇವುಗಳನ್ನು ಪ್ರತಿಭಟಿಸುತ್ತಿಲ್ಲ? ಚುನಾವಣೆಯ ಕಾವೇ?

- madhava_hs ರವರ ಬ್ಲಾಗ್
- Login or register to post comments
- 506 hits
- Email this blog




RSS:
ಪ್ರತಿಕ್ರಿಯೆಗಳು
ಉ: ಎಲ್ಲಿ ಹೋದರು?
ಶಿವ ಸೈನಿಕರು, ಭಜರಂಗಿಗಳು, ಬಿ.ಜೆ.ಪಿ ಗಳು ಇಂತಹವುಗಳನ್ನು ವಿರೋಧಿಸಿದಾಗ ಅವರನ್ನು moral policeಗಳು ಅದೂ ಇದೂ ಎಂದು ಟೀಕಿಸುವ, ವಿರೋಧಿಸುವ ಜನರೂ, ಪಕ್ಷಗಳೂ ಇವೆಯಲ್ಲಾ ನಮ್ಮಲ್ಲಿ.
ಅಂತಹುದರಲ್ಲಿ ಎಲ್ಲದಕ್ಕೂ ಶಿವ ಸೈನಿಕರು, ಭಜರಂಗಿಗಳನ್ನೇ ಅಪೇಕ್ಷಿಸುವುದು ಹೇಗೆ?
ಎಲ್ಲಿ ಹೋದರು ಭಾರತೀಯ ಪ್ರಜ್ಞಾವಂತರು, ಸಂಸ್ಕಾರವಂತರು, ಸಭ್ಯರು? ಎಂದು ಕೇಳಬೇಕಾಗುತ್ತದೇನೋ.
ಉ: ಎಲ್ಲಿ ಹೋದರು?
ಅರೆನಗ್ನ ನೃತ್ಯ ಕ್ರೀಡೆ ನಿಜವಾದ ಅರ್ಥಕ್ಕೆ ಮಸಿಬಳಿಯುವಂಥದ್ದು. ಯಾವ ನಿಜವಾದ ಕ್ರಿಕೆಟ್ ಅಭಿಮಾನಿಯೂ ಆ ನೃತ್ಯ ನೋಡಲು ಬದಿರುವುದಿಲ್ಲ. ಅಲ್ಲಿ ಕುಣಿಯುವ ಈ ಹೆಣ್ಣುಗಳನ್ನ ನೋಡಿ ಅದ್ಯಾವ ತರದ sportive encouragement ಸಿಗುತ್ತೋ ನಾಕಾಣೆ. ಇದು IPL ಆಯೋಜಕರ ಮತ್ತೆ ತಂಡಗಳನ್ನ ( ಕ್ರಿಕೆಟ್ ಆಟವನ್ನ) ಕೊಂಡುಕೊಂಡಿರುವ ಕೊಟ್ಯಾಧಿಪತಿಗಳ ಕೀಳು ಅಭಿರುಚಿಯನ್ನ ಎತ್ತಿ ಹಿಡಿಯುತ್ತದೆ. ಭಾರತದ ಸಂಸ್ಕೃತಿಯನ್ನ ಹೊರ ಪ್ರಪಂಚದೆದುರು ಹರಾಜು ಹಾಕುತಿರುವಂತೆ ನಂಗೆ ಅನ್ನಿಸುತ್ತಿದೆ......
ಉ: ಎಲ್ಲಿ ಹೋದರು?
ಮಾಧವರೇ
ನೀವ್ಯಾಕ್ರೀ ಅದನ್ನೆಲ್ಲ ನೋಡಕ್ಕೆ ಹೋದ್ರೀ.. !
ಪುಣ್ಯವಂತರಿಗೆ ಕಾಲವಿಲ್ಲ...
=====================================
ಮಾಯ್ಸ!
ಉ: ಎಲ್ಲಿ ಹೋದರು?
ಕ್ರಿಕೆಟ್ಟೇ ಒಂದು ಕೆಟ್ಟ ಆಟ. ಅದು ಭಾರತ ಬಿಟ್ಟು ಯಾವಗ ತೊಲಗುತ್ತೆ ಅಂತ ಕಾಯ್ತಾ ಇದ್ದೀನಿ..
ನನ್ನ ಪ್ರಕಾರ ಈ ಅರೆನಗ್ನ ನೃತ್ಯ, ಐ.ಪಿ.ಎಲ್ಲು ಎಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ..
-ವರುಣ ಭಟ್