ಶರಣರ ಬದುಕನ್ನು ಮರಣದಲ್ಲಿ ನೋಡು
ಹೀಗೊಂದು ಕೇಳ್ಮೆ ಕನ್ನಡದಲ್ಲಿ ಇದೆ. ನಾನು ಕೇಳಿದಪ್ರಕಾರ ಇದರರ್ಥ ಅವರಿಗೊದಗಿಬಂದ ಸಾವು, ಸನ್ನಿವೇಶಗಳು ಯಾತನಾರಹಿತ ಕ್ಷಣಗಳು ಅವರು ಹೇಗೆ ಬದುಕಿದರೆಂದು ಸೂಚಿಸುತ್ತದೆ ಎಂದು. ಸಾಮಾನ್ಯವಾಗಿ ಸಾವು ಮನುಷ್ಯನ ಜೀವನದಲ್ಲಿ ಭೌತಿಕವಾಗಿ ಅತ್ಯಂತ ನೋವಿನ ಕ್ಷಣ ಎನ್ನುತ್ತಾರೆ. ಯಾರಾದರೂ ಆರೋಗ್ಯವಾಗಿದ್ದುಕೊಂಡು ಇದ್ದಕ್ಕಿದ್ದಂತೆ ಹೃದಯಾಘಾತವಾಗಿಯೋ ಅಥವಾ ನಿದ್ದೆಯಲ್ಲಿಯೋ ಸಾವನ್ನಪ್ಪಿದರೆ ’ಸುಲಭ ಸಾವು’ ಎಂದು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.
ಅಂದರೆ ವ್ಯಕ್ತಿ ಪರೋಪಕಾರಿಯಾಗಿ, ಸಾತ್ವಿಕನಾಗಿ ಬದುಕಿದಾಗ ಆತನಿಗೆ ಸುಲಭಸಾವು ಎಂದು ಈ ವಾಕ್ಯದ ಅರ್ಥವೇ?

- madhava_hs ರವರ ಬ್ಲಾಗ್
- Login or register to post comments
- 177 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
ನನಗೂ ಈ ವಾಕ್ಯದ ಬಗ್ಗೆ ಮೊದಲಿನಿಂದಲೂ ಕುತೂಹಲ ಇದೆ.ಜೊತೆಗೇ ಗೊಂದಲವೂ ಸಹ. ಯಾಕೆಂದರೆ ಶರಣರು ಎಂದರೆ ನೆನಪಾಗೋದು ೧೨ನೆಯ ಶತಮಾನ. ನನಗೆ ತಿಳಿದ ಮಟ್ಟಿಗೆ ೧೨ನೆಯ ಶತಮಾನದ ಶರಣರಲ್ಲಿ ಹೆಚ್ಚಿನ ಜನ ಸುಖದ ಸಾವನ್ನು ಕಂಡವರಲ್ಲ. ಬಿಜ್ಜಳನ ಸೈನ್ಯದಿಂದ ತಪ್ಪಿಸಿಕೊಳ್ಳಲು ಪಡುಪಾಟಲು ಪಟ್ಟು, ತಲೆ ಮರೆಸಿಕೊಳ್ಳಲು ಊರೂರು ಅಲೆದು ಹೀನಾಯ ಸಾವು ಕಂಡರು. ಅದರೂ ಈ ನುಡುಗಟ್ಟು ಹೇಗೆ ಪ್ರಚಲಿತವಾಯ್ತೊ? ಇದನ್ನು ಯಾರಾದರು ವಿವರಿಸಿ ಹೇಳಿದರೆ ಉಪಕಾರವಾದೀತು.
ಜಯಲಕ್ಷ್ಮೀ.ಪಾಟೀಲ್.
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
ಜಯಲಕ್ಷ್ಮಿಯವ್ರೆ,
ಕಲ್ಯಾಣ ಕ್ರಾಂತಿಯ ( ಕ್ರಾಂತಿಯನ್ನು ಎರಡು ರೀತಿಯಲ್ಲಿ ಅರ್ಥ ಮಾಡಿ ಕೊಳ್ಳಬಹುದು!!) ಸಮಯದಲ್ಲಿ
ಹಲ ಶರಣರು ಕತ್ತಿ ಹಿಡಿದಿದ್ದು ನಿಜ. ಆಗ ಹುಟ್ಟಿಕೊಂಡ ನುಡಿಗಟ್ಟು " ಶರಣರಿಗೆ ಮರಣವೇ ಮಾನವಮಿ"
"ಶರಣರ ಬದುಕನ್ನು ಮರಣದಲ್ಲಿ ನೋಡು"....ಈ ನುಡಿಗಟ್ಟನ್ನು ಸ್ವಲ್ಪ ಬೇರೆ ತರದಲ್ಲಿ ಅರ್ಥ ಮಾಡಿಕೊಳ್ಳಬೇಕು.
ಕಾಯಕವೇ ಕೈಲಾಸ ಅಂತ ಬದುಕಿ ಅದರಿಂದ ಬಂದ ಹಣವನ್ನು ಶರಣರು ಎಂದೂ ಕೂಡಿಟ್ತವರಲ್ಲ. "ಕೂಡಿಡುವಿಕೆ" ಶರಣ ಧರ್ಮಕ್ಕೆ ವಿರುದ್ದ. ಹಾಗಾಗಿ ಕೆರೆಯ ನೀರನು ಕೆರೆಗೆ ಚೆಲ್ಲಿ ಅನ್ನೋ ರೀತಿಯಲ್ಲಿ ತಮ್ಮದೆಲ್ಲವನೂ ಸಮಾಜಕ್ಕೆ ನೀಡಿ ಬದುಕಿದವರು. ಅಂದ್ರೆ ಸಮಾಜದಲ್ಲಿ ಜನಸಾಮಾನ್ಯರಾಗಿದ್ದವರು. ಬದುಕಿದ್ದಾಗ "ಇವನಾರೋ" ಅನ್ನೋ ರೀತಿ ಎಲೆ ಮರೆ ಕಾಯಿಯಾಗಿ ಬದುಕಿ ಜನರ ಗಮನಕ್ಕೆ ಬಾರದೆ .....ಸತ್ತಾಗ ಅವರಿಂದ ಉಪಕೃತರಾದವರು ಅವರನ್ನು ನೆನೆಯುವ / ನೆರೆಯುವ ರೀತಿಯಿಂದ ಅವರ ದೊಡ್ಡತನವನ್ನು ತಿಳಿಯಬಹುದಿತ್ತು.
ಸವಿತೃ
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
ಧನ್ಯವಾದ ಸವಿತೃ ಅವ್ರೆ. ನನ್ನ ಗೊಂದಲ ದೂರ ಮಾಡಿದಿರಿ. 'ಮರಣವೆ ಮಹಾನವಮಿ' ಎಂಬುದರ ಬಗ್ಗೆ ಗೊತ್ತಿತ್ತು. ಆದರೆ ಈ ನುಡಿಗಟ್ಟು ನನ್ನನ್ನು ಗೊಂದಲಗೊಳಿಸಿತ್ತು.
ಜಯಲಕ್ಷ್ಮೀ.ಪಾಟೀಲ್.