ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಮಧು ಹೆಗಡೆ ಅಪ್ಪೆಕೆರೆ
ಪರಿಚಯ
ಬದುಕು ಮತ್ತು ಬರೆಹ ಎರಡರ ಬಗ್ಗೆ ಪ್ರೀತಿ ಇದೆ.ಸಂಗೀತ ಸಾಹಿತ್ಯದ ಬಗ್ಗೆ ಆಸಕ್ತಿ. ಮಕ್ಕಳ ಕನಸುಗಳಿಗೆ ಸ್ಫೂರ್ತಿ ತುಂಬುವದು
ಅಪ್ಪಾ....ದಾರಿ ಬಿಡು
ಅಪ್ಪಾ..ಈ ಕತ್ತಲಿನೊಳಗೆ
ನನ್ನನ್ನೇಕೆ ಬಂಧಿಸಿಟ್ಟೆ ?
ಭವಿಷ್ಯದ ಬೆಳಕೆಡೆಗೆ
ಹೆಜ್ಜೆಯಿಡುವ ಕನಸು
ಹೊಸಕಿ ಹಾಕಿ ನನ್ನ
ಮುಗ್ಧತೆಗೆ ಕಾವಲಿನ ಬೇಲಿ
ಹಿಂದಿನ ಎಂಜಲು ಉಳಿಸಿ
ಅಮೃತವೆಂದು ಕೈಯಲ್ಲಿ ಹಿಡಿಸಿ
ನಿನಗಿಷ್ಟವೋ ಕಷ್ಟವೋ ಎಂದು
ಎಂದೂ ಕೇಳದ ಕಿವುಡನಾದೆಯೇಕೆ?
ಈ ಕತ್ತಲಿನಲ್ಲೆ ಬೆಳಕಿದೆಯೆಂದು
ನಂಬಿಸಿ..
ಧರ್ಮದ ಗೋಡೆ ಕಾವಲಿಟ್ಟು
ಸಂಪ್ರದಾಯದ ಛಾವಣಿ ಹೊದೆಸಿ ಬಿಟ್ಟೆ ಏಕೆ ?
ಆದರೆ ....ಇನ್ನು ಕಾಯುವದಿಲ್ಲ
ನಿಮ್ಮ ನಂಬಿಕೆಯ ಈ ಗೂಡ
ಹರಿದೊಗೆದು ಬೆಳಕಿಗೆ ಮೈಯೊಡ್ಡುವ
ತವಕ ! ನನಗೆ ದಾರಿಬಿಡು
- Madhu Appekere's blog
- Login or register to post comments
- 134 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಅಪ್ಪಾ....ದಾರಿ ಬಿಡು
ಸುಳ್ಳಲ್ಲ ಮಗು ನಿನ್ನ ಮಾತು
ಅಪ್ಪಂದಿರ ಆಂತರಿಕ ಆತಂಕ
ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು
ಮಗೂ ಸ್ವಾತಂತ್ರ್ಯ ಬೇಕು
ಸ್ವತಂತ್ರಳಿಗೂ ಬೇಲಿ ಬೇಕು
ಸ್ವಾತಂತ್ರ್ಯದ ಪರಿಧಿಯಲಿ ಅಪ್ಪನಿರಬೇಕು
ಎಲ್ಲವನೂ ಹರಿದೊಗೆದು
ಒದ್ದು ನಡೆದರೆ ಮುಂದೆ
ಸಮಾಜದ ಮುಂದೆ ಬತ್ತಲಾಗಿ ನಿಲಬೇಕು
ನಿನ್ನ ಅರಿವಿನ ಮಟ್ಟ
ನೀನರಿತದ್ದೇ ಅಲ್ಲ ಆ ಅಪ್ಪನೂ
ಅರಿಯಬೇಕು ಅರಿತಂದು ನಿನಗಾತ ದಾರಿ ಬಿಡಬೇಕು
- ಆಸು ಹೆಗ್ಡೆ
ಉ: ಅಪ್ಪಾ....ದಾರಿ ಬಿಡು
ಆಸು ಹೆಗ್ಡೆಯವರೆ
ನಿಮ್ಮ ಕವನವೂ ಇಷ್ಟವಾಯಿತು.
ಉ: ಅಪ್ಪಾ....ದಾರಿ ಬಿಡು
ಮಧು ಅವರೇ
ಮನೋಜ್ಞ ಕವನ
ಉ: ಅಪ್ಪಾ....ದಾರಿ ಬಿಡು
ಧನ್ಯವಾದಗಳು ಗೋಪಿನಾಥಣ್ಣ.