ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
"ಭಾರತ ಒಂದು ಹಲವು ಭಾಷೆಗಳ ನಾಡು. ಇಲ್ಲಿ ಎಲ್ಲ ಭಾಷೆಗಳು ತಮ್ಮ ವಿವಿಧತೆಯಿಂದ ಮೆರೆಯುತ್ತಿವೆ. ನಮ್ಮ ವೈಶಿಷ್ಟ್ಯವೇ ವಿವಧತೆಯಲ್ಲಿ ಏಕತೆ. "ಅನೇಕತಾ ಮೇ ಏಕತಾ".......
......
...."
ಇಂತ ಹಲವು ಮಾತುಗಳನ್ನು ನಾವು ನಮ್ಮ ದೊಡ್ಡ ದೊಡ್ಡ 'ಭಾರತವಾದಿ', 'ರಾಷ್ಟ್ರವಾದಿ', 'ರಾಷ್ಟ್ರಪ್ರೇಮಿ' ಹೀಗೆಲ್ಲ ಕರೆಸಿಕೊಳ್ಳವ ಮಂದಿಯ ಬಾಯಿಯಲ್ಲಿ ಕಿವಿ ತೂತು ಬೀಳುವಷ್ಟು ಕೇಳಿದ್ದೇವೆ.
ಆದರೆ ದಿಟ ಏನು ಗೊತ್ತಾ???? ನಮ್ಮ ದೇಶದಲ್ಲಿ ಸಾಯುತ್ತಿರುವಷ್ಟು ಸಂಖ್ಯೆಯಲ್ಲಿ, ಆಫ್ರಿಕಾದಲ್ಲೂ ಭಾಷೆಗಳು ಸಾಯುತ್ತಿಲ್ಲ.!! ಆಗಲೇ ಹಲವು ಬುಡಕಟ್ಟು ನುಡಿಗಳು ಸತ್ತು ಹೋಗಿವೆ. ಮುಖ್ಯವಾಗಿ "ಮಧ್ಯಪ್ರದೇಶ" ರಾಜ್ಯದ ಬೆಟ್ಟಗಾಡು ನುಡಿಗಳು, ಬಿಹಾರ, ಛತ್ತೀಸಗಢದ ಕಾನಿಗರ ನುಡಿಗಳು 'ಹಿಂದಿ' ಹೊಡೆತಕ್ಕೆ ಆಗಲೇ ನಲುಗಿ ಸತ್ತು ಹೋಗಿವೆ. ಅವಕ್ಕೆ 'ಶದ್ಧಾಂಜಿಲಿ ಯನ್ನು ಕೋರೋಣ.
ಈಗ ನಮ್ಮ ದೇಶದಲ್ಲಿ ಸಾಯುತ್ತಿರುವ ನುಡಿಗಳನ್ನು ಅವಕ್ಕೆ ಕೆಲವೋಸುಗರಗಳನ್ನ ನೋಡೋಣ.
ಒರಿಯಾ, ಮಣಿಪುರಿ, ಬಡಗ, ತೋದ, ..... ದೊಡ್ಡ ಪಟ್ಟಿ..
ಬಡಗ, ತೊದ, ಇವು ನೀಲಗಿರಿ ಬೆಟ್ಟದ ಜನರ ನುಡಿಗಳು. ಬಡಗವು ಕನ್ನಡದ ಒಂದು ಕಿರುನುಡಿ. ನೀಲಗಿರಿಯ ತುಂಬ ಹೆಚ್ಚು ಇರುವ ಮಂದಿಯ ತಾಯ್ನುಡಿ ಈ ಬಡಗ ನುಡಿ, ಅವರನ್ನು ಬಡಗರು ಎಂದು ಕರೆಯುವರು. ಹಾಗೆ ಇನ್ನೊಂದು ತೋದ, ಇವರ ಬಗ್ಗೆ ನನಗೆ ಹೆಚ್ಚು ತಿಳಿವಿಲ್ಲ. ಇಂದು ಬಡಗರು ತಮ್ಮ ತಾಯ್ನುಡಿಯನ್ನು ಬಿಟ್ಟ, ತಮಿಳನ್ನು ಅಪ್ಟಿಕೊಳ್ಳುತ್ತಿದ್ದಾರೆ. ನಾಳು-ನಾಳು ಬರೀ ಬಡಗವನ್ನೇ ಮಾತಾಡುವವರು ಕಡಮೆ ಯಾಗಿ, ಆಡು ಬಡಗವೂ ತಮಿಳಿನಿಂದ ತುಂಬಿ ಹೋಗುತ್ತಿದೆ. ಇದಕ್ಕೆ ಕಾರಣಗಳು
೧) ಬಡಗರು, ಅವರಿಗೆ ಹತ್ತಿರ ನುಡಿಯಾದ ಕನ್ನಡಿಗ ಜೊತೆ ಇರದಿರುವುದು
೨) ತಮಿಳು ಸರಕಾರ ಬಡಗ ನುಡಿಗೆ ಯಾವ ಬೆಂಬಲವನ್ನೂ ಕೊಡದಿರುವುದು ( ನಮ್ಮ ತುಳುವಿದೆ ತುಳು ಅಕಾಡೆಮಿಯಾದರೂ ಇದೆ. ಇದಕ್ಕೆ ಇಂತಹ ಯಾವ ಒಂದು ನೆರವೂ ಇಲ್ಲವಂತೆ)
೩) ನೀಲಗಿರಿಯಲ್ಲಿ ಬಡಗಲ್ಲಿ( ಕನ್ನಡ ಲಿಪಿ ಬಳಸಿ ) ಯಾವ ಬೋರ್ಡುಗಳನ್ನು ಹಾಕಲು, ತಮಿಳು ಸರಕಾರ ಅನುವು ನೀಡದೇ, ತಮಿಳು ಲಿಪಿಯಲ್ಲೇ ಬಡಗವನ್ನೂ ಬರೆಯಲು ಒತ್ತಾಯ ಮಾಡಿರುವುದು.
೪) ನೀಲಗಿರಿಯ ಟೀ-ತೋಟಗಳಿಗೆ ಶ್ರಿಲಂಕೆಯಿಂದ ಹೇರಳವಾಗಿ ಲಂಕೆ-ತಮಿಳರನ್ನು ತುಂಬುತ್ತಿರುವುದು.
೫) ಬಡಗದಲ್ಲಿ ಕಲಿಕೆಯನ್ನು ನಿಲ್ಲಿಸಿರುವುದು, ಇಲ್ಲವೇ ಕೊಡದಿರುವು ಇರುವುದು.
ಇದು ಬಡಗದ ಗೋಳಾದರೆ,
ಒರಿಯಾ ನುಡಿಯದ್ದು ಮೊತ್ತೊಂದು. ಒರಿಯಾ ನುಡಿ ಬಲು ಹಳೆಯ ಇತಿಹಾಸವಿದೆ. ಅದಕ್ಕೆ ತನ್ನದೇ ಆದ ನಡಾವಳಿ, ಕುಣಿತಗಳು, ಹಾಡು-ಹಾಸೆಗಳು, ಅರಸತನಗಳು, ಕಬ್ಬಗಳೂ ಇವೆ. ಇಂತಹ ಹಳೆಯ, ಸಂಸ್ಕೃತಿಕವಾಗಿ ಶ್ರಿಮಂತವಾದ ಒರಿಯಕ್ಕೆ ಏನು ಬೇನೆ? ಅಂದರೆ
೧) ಒರಿಯ ರಾಜ್ಯದಲ್ಲಿ 'ಒರಿಯ'ದಲ್ಲಿ ಬಿ.ಎ ಮಾಡಲೂ ಮಂದಿಯಿಲ್ಲದೇ ಸರಕಾರ ಒರಿಯಾದಲ್ಲಿ ಪದವಿ ಕಲಿಕೆಯನ್ನು ನಿಲ್ಲಿಸಲು ಅಪ್ಪಣೆ ಹೊರಡಿಸಿತ್ತು. ಅದು ಕೆಲವು ಮಂದಿಯ ಹೋರಾಟದಿಂದ ಸದ್ಯ ತಡೆಯಾಗಿದೆ.
೨) ಹೆಚ್ಚು ಹೆಚ್ಚು ಒರಿಯ ಜನರು, ಇಂಗ್ಲೀಶು/ಹಿಂದಿಗೆ ಮಾರು ಹೋಗುತ್ತಿದ್ದಾರೆ.
೩) ಒರಿಯ ನುಡಿಯಲ್ಲಿ, ಹೆಚ್ಚಿನ ಮುಂದುವರಿದ ಕಲಿಕೆ ದೊರೆಯುವುದಿಲ್ಲ. ಈಗಿರುವ ಒರಿಯ ಕಲಿಕೆಯಿಂದ 'ನಾವು ಬರೀ ಕಾವಲುಗಾರರು ಆಗುಬಹುದೇ ಹೊರತು, ಬೇರೇನು ಹೆಚ್ಚಿನದನ್ನು ಪಡೆಯಲು ಆಗುವುದೇ ಇಲ್ಲ" ಎಂಬ ಅನಿಸು ಹಲವು ಒರಿಯಿಗರಲ್ಲಿ ಬಂದು ಬಿಟ್ಟಿದೆಯಂತೆ.
೪) ಸರಕಾರದ ಒರಿಯ ಸಿಕ್ಕಾಪಟ್ಟೆ "ಸಂಸ್ಕೃತ-ಮಯ"ವಾಗಿ ಸಾಮನ್ಯರಿಗೆ ಕಗ್ಗಂಟಾಗಿದೆ. ಅದಕ್ಕೆ ಒರಿಯಿಗರೇ, ಒರಿಯೆಯಲ್ಲಿ ಕಾಗದಗಳನ್ನು ಬರೆಸುವುದನ್ನು 'ಬೇಡ'ವೆಂದು ಹೇಳಿ, ಇಂಗ್ಲೀಶಲ್ಲಿ ಬರೆಸಿಕೊಳ್ಳುವರಂತೆ. ಆಡು-ಒರಿಯೆಗೂ ಈ 'ಸಂಸ್ಕೃತಮಯ' ಒರಿಯೆಗೂ ಸಿಕ್ಕಾಪಟ್ಟೆ ವ್ಯತ್ಯಾಸ!
೫) ಹಿಂದಿ/ದೇವನಾಗರಿ ಲಿಪಿಯ ಬಳಕೆ ಹೆಚ್ಚಾಗಿ, ಹೆಚ್ಚಾಗುತ್ತಾ ಇರುವುದರಿಂದ, ಒರಿಯಾ ಲಿಪಿ ಮೂಲೆಗುಂಪಾಗಿದ್ದು, ಮಂದಿಗೆ ಅದನ್ನು ಬರೆಯುವುದೇ ಕಷ್ಟ ಎನ್ನಿಸ ಹತ್ತಿದೆಯಂತೆ.
ಹೀಗೆ ಮಣಿಪುರಿ, ಡೋಗ್ರಿ( ಕಾಶ್ಮೀರದ ನುಡಿ)ಗಳು.
ಈ ಅರಿಕೆಗಳನ್ನು ನಾನು ನನ್ನ ಬಂಗಾಳಿ ಗೆಳೆಯನಿಂದ ಪಡೆದುಕೊಂಡಿಹೆನು. ಅದ ನಿಕ್ಕುವತನವನ್ನು ಹುರುಪಿರುವವರು ನೋಡಿಕೊಳ್ಳಬೇಕು.
ಇವೆಲ್ಲವನ್ನು ಗಮನಿಸಿ, ನಾವು ಒಂದು ತೀರ್ಪಿಗೆ ಬಂದೆವು. ಇಂದು ಒಂದು ನುಡಿ ಬದುಕವೇಕಾದರೆ, ಅದಕ್ಕೆ ಈ ಕೆಳಗಿನ ಬಲಗಳು ಬೇಕೇ ಬೇಕು. ಒಂದು ಕಡಮೆಯಾದರೂ ಅದರ ಸಾವು ಹೆಚ್ಚು ಹತ್ತಿರವಾಗುವುದು.
೧) ಸರಕಾರದ ಇಂಬು ಬೇಕೇ ಬೇಕು. ಸರಕಾರವೇ ನುಡಿಗಳು 'Sanskritize' ಮಾಡಹತ್ತಿದರೆ ಅವು ಸಾಯುವುವು. ನುಡಿಗಳನ್ನು ಅವುಗಳ 'native' ರೂಪದಲ್ಲೇ ಉಳಿಸಬೇಕು, ಅವನ್ನು 'polish' ಮಾಡುವೆವು, ಎಂದು 'Sanskritize' ಮಾಡಿದರೆ, ಅವು ತನ್ನತನವನ್ನು ಕಳೆದುಕೊಂಡು ಸಾಯುವುವು.
೨) ತಾಯ್ನುಡಿಯನ್ನು ಕಾಯುವುದು, ಆಡುವುದು, ಬೆಳೆಸುವುದು, ಅದರ 'native/ಮೂಲ/ಬೇರು' ಸ್ವರೂಪವನ್ನು/ಬಗೆಯನ್ನು ಉಳಿಸುವುದು, ಆ ಆ ತಾಯ್ನುಡಿಗರ ಹೊಣೆ. ತಮ್ಮ ತಾಯ್ನುಡಿಯನ್ನೇ "ಬಲು ಕಷ್ಟ, ನಮಗೇಕೆ ಬೇಕು, ಕೀಳುಮಟ್ಟದ್ದು, ಚನ್ನಾಗಿಲ್ಲ, polishಮಾಡಿಕೊಳ್ಳಬೇಕು, ಕಲಿತರೆ ಯಾವ ಲಾಭವಿಲ್ಲ" ಹೀಗೆಲ್ಲ ಅಂದುಕೊಂಡು ಬಿಡುವುದರಿಂದ ಆ ನುಡಿಗಳು ಸಾಯುವುವು. ಯಾವ ನುಡಿಯನ್ನು ತನ್ನ ಮಕ್ಕಳೇ( ಆ ನುಡಿಯನ್ನು ತಾಯ್ನುಡಿಯಾಗಿ ಹೊಂದಿರುವವರೇ ) ದೂರ ತಳ್ಳುವರೋ ಅಂತಹ ನುಡಿಗಳು ಬಲು ಬೇಗ ಸಾಯುವುವು.
೩) ಆ ನುಡಿಗಳಲ್ಲಿ ಮುಂದುವರಿದ ಕಲಿಕೆ ( advanced studies ) ದೊರೆಯಬೇಕು. ಮಂದಿಗೆ ತಮ್ಮ ತಾಯ್ನುಡಿಯಲ್ಲೇ ಎಲ್ಲ ಮುಂದುವರಿದ ಕಲಿಕೆಯನ್ನು ಪಡೆಯಲು ದೊರೆಯಬೇಕು. ಆಗ ಆ ನುಡಿಯಿಂದ ಅವರಿಗೆ ಹೆಚ್ಚು ಹಣಗಳಿಸುವ ದಾರಿ ಕಾಣುವುದಲ್ಲೇ, ಆ ನುಡಿಯು ಶ್ರೀಮಂತವಾಗುವುದು. ಇದು ಸರಕಾರದ ಒಂದು ಹೊಣೆ.
೪)ಹೇರಳವಾಗಿ ನಮ್ಮ 'nativity'ಗೆ ಧಕ್ಕೆಯಾಗುವಂತೆ ವಲಸಿಗರು ಬರುವುದನ್ನು ತಡೆಯುವುದು. ಇಂತಹ Demographic ಮಾಪಾರ್ಟುಗಳು ಅಲ್ಲಿನ ಮೂಲ ನೆಲೆಸಿಗರ ಸಂಸ್ಕೃತಿಯನ್ನು ಹಾಳುಗೆಡುವುದು. ಅಸ್ಸಾಮ್ನಲ್ಲಿ ಇದು ದೊಡ್ಡ ಹಾವಳಿಯಂತೆ. "ಅಸ್ಸಾಮಿ" ಬಂಗಾಳದೇಶದಿಂದ ಬಂದ ವಲಸಿಗರ ಬಂಗಾಳಿಯಿಂದ ಕುತ್ತು. ಅಸ್ಸಾಮಿಯ ಇಂದು ಬಂಗಾಳಿಮಯ!
೫) ಆ ಆ ನುಡಿಗಳನ್ನು ಆ ಆ ಲಿಪಿಯಲ್ಲೇ ಬರೆಯಬೇಕು. ಆ ಆ ಲಿಪಿಗಳ ಬಳಕೆ ಹೆಚ್ಚಿಸಲು, ಕಾಲಕ್ಕೆ ತಕ್ಕಂತೆ ಮಾಪಾರ್ಟುಗಳನ್ನು ಮಾಡಬೇಕು. ಮತ್ತು ಆದಷ್ಟು ಕಡಮೆ ಅಕ್ಕರಗಳಿರ ಲಿಪಿಯಾಗಿಸಬೇಕು. ಮಳಯಾಳಿಯಲ್ಲಿ ಇದ್ದ ಒತ್ತಕ್ಕರಗಳನ್ನು ಬಿಟ್ಟು, ತಮಿಳಂತೇ ಲಿಪಿಯನ್ನು ಮಾಪರ್ಡಿಸಿಕೊಂಡಿದ್ದರಿಂದ ಮಳಯಾಳಿಯನ್ನು ಅಚ್ಚುಹಾಕಲು, ಕಂಪ್ಯೂಟರಲ್ಲಿ ತರಲು ನೆರವಾಯ್ತಂತೆ. ಕೊರಿಯಾ ದೇಶದವರೂ ಹಿಂದೆ ಬಳಸುತ್ತಿದ್ದ ಚೀಣೀ ಲಿಪಿಯನ್ನು ಸರಳಗೊಳಿಸಿಕೊಂಡರು.
ಕೊನೆದಾಗಿ:
ಪ್ರತೀ ವರುಷ ಸಂಸ್ಕೃತ-ಹಿಂದಿಯ ಏಳಿಗೆಗಾಗಿ ಆರುನೂರು(6೦೦) ಕೋಟಿಗಳನ್ನು ಖರ್ಚುಮಾಡುವ ಕೇಂದ್ರ ಸರಕಾರಕ್ಕೆ ಈ ನುಡಿಗಳ ಬಗ್ಗೆ ಕೊಂಚವೂ ಕಾಳಜಿಯಿಲ್ಲ ಅನ್ನುವುದು ಯಾವ ಹೆಡ್ಡನಿಗೂ ತಿಳಿಯುವ ಸಂಗತಿ. ಇಷ್ಟೊಂದು ಹಣವನ್ನು ಕಳೆದ ಅರವತ್ತು ವರುಷದಿಂದ ಪ್ರತೀ ವರುಷ ಈ ಎರಡೇ ಎರಡು ನುಡಿಗಳ ಮೇಲೆ ಖರ್ಚು ಮಾಡುತ್ತಿದ್ದಾರೆ.
ನಮ್ಮ Central Home Ministryಯ ಕೆಲಸವೇ ಹಿಂದು ಬೆಳೆಸುವುದಾಗಿ ಹೋಗಿದೆ.
ಇತ್ತೀಚೆಗಷ್ಟೇ ತಮಿಳಿಗೆ ವರುಷಕ್ಕೆ ಹತ್ತು ಕೋಟಿ ಕೊಡುತ್ತಿರುವುದು. ಅದೂ ತಮಿಳು ರಾಜಕೀಯದವರ ಎಡೆಬಿಡದ ದುಡಿಮೆಯಿಂದಾಗಿ. ಅದಕ್ಕೆ ಈ ಸಂಗತಿಗಾಗಿ ಈ ತಮಿಳರು ಹೊಗಳತಕ್ಕವರು.
http://www.rajbhasha.gov.in/
http://www.sanskrit.nic.in/
ಮತ್ಯಾವ ಭಾರತದ ನುಡಿಗಳಿಗೂ ಕೇಂದ್ರ ಸರಕಾರ ಇಂತಹ ಒಂದು ಇಂಟರ್ನೆಟ್ ಸೈಟು ಮಾಡಿಲ್ಲ.
ಕರ್ನಾಟಕ ಸರಕಾರವೂ ಕನ್ನಡಕ್ಕೆ ಇಂತಹ ಕೆಲಸ ಮಾಡಿಲ್ಲ.

- mahesha ರವರ ಬ್ಲಾಗ್
- Login or register to post comments
- 477 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ನನ್ನಿ ಮಹೇಶರೆ,
ಕರುಳು ಹಿಚುಕಿದಂತಾಯಿತು...ಒಟ್ಟಿನಲ್ಲಿ ತಮಿಳು, ಹಿಂದಿ ನುಡಿಗಳು ಎಲ್ಲಿ ಹೋಗುತ್ತವೋ ಅಲ್ಲಿ ಬೇರೆ ನುಡಿಗಳು ಸಾಯದೇ ಇರುವುದಿಲ್ಲ.
ಬಡಗಕ್ಕೆ ಅಲ್ಲಿಯವರು ದನಿ ಎತ್ತುವುದಿಲ್ಲವೇಕೆ ? ತಿಳಿಯುತ್ತಿಲ್ಲ.
ಒಂದು ಕಡೆ ಸಿರಿಲಂಕಾದ ತಮಿಳರ(ಕಡಿಮೆ ಎಣಿಕೆಯಲ್ಲಿರುವ) ಬಗ್ಗೆ ಮಾತಾಡುವ ಇವರು ಕಡಿಮೆ ಎಣಿಕೆಯಲ್ಲಿರುವ ಬಡಗರ ಮೇಲೆ ಈ ರೀತಿ ಮೋಸ ಮಾಡುತ್ತಾರೆ.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಹಿಂದೆ ಬಡಗರು ಕೊರಲೆತ್ತಿದ್ದೂ ಉಂಟು. 1994( ಹತ್ತಿರ, ನಿಕ್ಕುವವಾದ ಏಡು ಮರೆತಿಹೆನು ) ವರೆಗೂ ಕನ್ನಡಾಳ್ವಿಕೆಯು ಅವರಿ ಕೊಂಚ ನೆರವಾಗುತ್ತಿತ್ತು. ಆ ಬಳಿಕ ಅದು ಪೂರ ನಿಲ್ತು ಹೋಯಿತು. ಆಗಲೇ ಸಿರಿಲಂಕೆಯ ತಮಿಳರ ವಲಸೆ ಹೆಚ್ಚಾಗಿದ್ದು.
ನಾವು ಕನ್ನಡದ ಒಳಕನ್ನಡಿಗರು, ಕನ್ನಡನಾಡಿನ ಹೊರಗಿರುವ ಹಲವು ಕನ್ನಡ ಬುಡಕಟ್ಟು ಮಂದಿಯನ್ನು, ಗುಂಪುಗಳನ್ನು ಮರೆತು ಬಿಟ್ಟಿದ್ದೀವಿ, ಇಲ್ವೇ ನಮಗೆ ಅವರ ಬಗ್ಗೆ ಕೊಂಚವೂ ಉಂಕಿಲ್ಲ!
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಅರ್ಧ ಸತ್ಯ ಬೇಡ ಮಹೇಶ, ಅದು ಒಳ್ಳೆಯದಲ್ಲ.
ದಯವಿಟ್ಟು ನೋಡಿ. http://www.urducouncil.nic.in/ ಇದು HRD ministry ಕೆಳಗೆ ಕೆಲಸ ಮಾಡುವ ಸಂಸ್ಥೆ. ಇವರು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯ ಉರ್ದು ಡಿಪ್ಲೊಮಾಕ್ಕೆ ನಾನು ರಜಿಸ್ಟರ್ ಕೂಡಾ ಮಾಡಿದ್ದೆ.
ಮತ್ತದೇ ತಪ್ಪು. ಪೂರ್ವಗ್ರಹ ಪೀಡಿತವೆನ್ನಬಹುದೆ?
ಇವತ್ತು ಉತ್ತರ ಪ್ರದೇಶದಲ್ಲಿ ಉರ್ದು ಒಂದು ಆಡಳಿತ ಭಾಷೆಯಾಗಿ ಅಂಗೀಕಾರವಾಗಿದೆ. ಮತ್ತು ಕಮ್ಯುನಿಷ್ಟರ ಪಶ್ಚಿಮ ಬಂಗಾಳದಲ್ಲಿ ಕೂಡ ಅದಕ್ಕೊಂದು official language status ಕೊಡುವ ಪ್ರಸ್ತಾಪ ಇತ್ತು. ಮುಂದೇನಾಯಿತೋ? ವಿಚಿತ್ರ ನೋಡಿ, ಪೂರ್ವ ಪಾಕಿಸ್ತಾನದ ಪಂಜಾಬಿಗಳ ಉರ್ದು ಪ್ರಾಬಲ್ಯ ಮತ್ತು ದೌರ್ಜನ್ಯ ವಿರೋಧಿಸಿ, ಬಂಗಾಳಿಯ ಹಿರಿಮೆ ಗರಿಮೆಯ ಪ್ರಶ್ನೆಯಾಗಿ ಬಾಂಗ್ಲಾದೇಶ ಆಸ್ತಿತ್ವಕ್ಕೆ ಬಂತು. ಆದರಿಂದು? ಕಮ್ಯುನಿಷ್ಟರು ಅವರ ಮೇಲೆಯೆ ಉರ್ದುವನ್ನು ಹೇರುವ ಓಟಿನ ರಾಜಕೀಯ ಮಾಡುತ್ತಿದ್ದಾರೆ! ಯಾರು ಪ್ರಶ್ನಿಸಬೇಕು?
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
""ಮತ್ಯಾವ ಭಾರತದ ನುಡಿಗಳಿಗೂ ಕೇಂದ್ರ ಸರಕಾರ ಇಂತಹ ಒಂದು ಇಂಟರ್ನೆಟ್ ಸೈಟು ಮಾಡಿಲ್ಲ.""
ಅರ್ಧ ಸತ್ಯ ಬೇಡ ಮಹೇಶ, ಅದು ಒಳ್ಳೆಯದಲ್ಲ.
ದಯವಿಟ್ಟು ನೋಡಿ. http://www.urducouncil.nic.in/ ಇದು HRD ministry ಕೆಳಗೆ ಕೆಲಸ ಮಾಡುವ ಸಂಸ್ಥೆ. ಇವರು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯ ಉರ್ದು ಡಿಪ್ಲೊಮಾಕ್ಕೆ ನಾನು ರಜಿಸ್ಟರ್ ಕೂಡಾ ಮಾಡಿದ್ದೆ.
""ನಮ್ಮ Central Home Ministryಯ ಕೆಲಸವೇ ಹಿಂದು ಬೆಳೆಸುವುದಾಗಿ ಹೋಗಿದೆ."
ಮತ್ತದೇ ತಪ್ಪು. ಪೂರ್ವಗ್ರಹ ಪೀಡಿತವೆನ್ನಬಹುದೆ?
ಇವತ್ತು ಉತ್ತರ ಪ್ರದೇಶದಲ್ಲಿ ಉರ್ದು ಒಂದು ಆಡಳಿತ ಭಾಷೆಯಾಗಿ ಅಂಗೀಕಾರವಾಗಿದೆ. ಮತ್ತು ಕಮ್ಯುನಿಷ್ಟರ ಪಶ್ಚಿಮ ಬಂಗಾಳದಲ್ಲಿ ಕೂಡ ಅದಕ್ಕೊಂದು official language status ಕೊಡುವ ಪ್ರಸ್ತಾಪ ಇತ್ತು. ಮುಂದೇನಾಯಿತೋ? ವಿಚಿತ್ರ ನೋಡಿ, ಪೂರ್ವ ಪಾಕಿಸ್ತಾನದ ಪಂಜಾಬಿಗಳ ಉರ್ದು ಪ್ರಾಬಲ್ಯ ಮತ್ತು ದೌರ್ಜನ್ಯ ವಿರೋಧಿಸಿ, ಬಂಗಾಳಿಯ ಹಿರಿಮೆ ಗರಿಮೆಯ ಪ್ರಶ್ನೆಯಾಗಿ ಬಾಂಗ್ಲಾದೇಶ ಆಸ್ತಿತ್ವಕ್ಕೆ ಬಂತು. ಆದರಿಂದು? ಕಮ್ಯುನಿಷ್ಟರು ಅವರ ಮೇಲೆಯೆ ಉರ್ದುವನ್ನು ಹೇರುವ ಓಟಿನ ರಾಜಕೀಯ ಮಾಡುತ್ತಿದ್ದಾರೆ! ಯಾರು ಪ್ರಶ್ನಿಸಬೇಕು?
ಟಿಪ್ಪಣಿ: ಮೇಲೆ ಕೋಟ್ ಮಾಡೊಕ್ಕೆ ಮರೆತಿದ್ದೆ.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಗುರುಜಿ,
ಮಾತಿಗೆ ನನ್ನ ಒಪ್ಪಿಗೆ ಇದೆ. ಉರ್ದುವನ್ನು ಬಿಟ್ಟಿದ್ದು ತಪ್ಪಾಯಿತು. ಆದರೆ ಬ್ಲಾಗನ್ನು ತಿದ್ದುವ ಅನುವಿಲ್ಲ( ಇದು ಎಂದಿನಿಂದ ತಿಳಿಯದು ).
ಆದರೆ "ಉರ್ದು, ಹಿಂದಿ, ಹಿಂದುಸ್ತಾನಿ" ಇವು linguistic ಇಂದ ಒಂದೇ. ಆದರೆ 'ರಾಜಕೀಯ'ವಾಗಿ ಬೇರೆ ಬೇರೆ.
ನನ್ನ ಮೂಲ ಬರಹದಲ್ಲಿ ಹಿಂದಿ = ಹಿಂದಸ್ತಾನಿ, ಉರ್ದು ಎಂದು ತೆಗೆದುಕೊಳ್ಳಬೇಕು!! ನನ್ನ ಬರಹವು 'linguistic' ಕೋನದಿಂದಿದೆ. ನಾನು 'ರಾಜಕೀಯ' ಕೋನವನ್ನು ಗಮನಿಸಿಲ್ಲ!
"ಉರ್ದು, ಹಿಂದಿ, ಹಿಂದುಸ್ತಾನಿ" ಇವು ಹೇಗೆ linguistic ಇಂದ ಒಂದೇ ಎಂದು ಇಲ್ಲಿ ಹೆಚ್ಚು ಮಾತುಕತೆ ಬೇಡ! ಅದರ ಬಗ್ಗೆ ಹುರುಪಿರುವವರು ನೋಡಬಹುದು.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಗುರು,
ಒಳ್ಳೆಯ ಅರಿಕೆ..
ಉರ್ದು ಮರೆತದ್ದಕ್ಕೆ ಮನ್ನಿಸಿರಿ............. ಈ ಉರ್ದುವನ್ನು ಸೇರಿಸುವೆನು.
ನಾನು ಇಲ್ಲಿ ಬೇರ ಕೋನದಿಂದ ಬರೆದುದು, ದಯವಿಟ್ಟು, ಇಲ್ಲಿ ಜಾತಿ, communist ಮುಂತಾದ ರಾಜಕೀಯ ಇವನ್ನು ಬರೆಸಬೇಡಿರಿ!!
ಉರ್ದು, ಹಿಂದಿ, ಸಂಸ್ಕೃತ ಇವು ಮೂರ ಬಿಟ್ಟು ಮಿಕ್ಕ ನೆಲ ನುಡಿಗಳ ಪಾಡೇನು?
"ಉರ್ದು, ಹಿಂದಿ, ಹಿಂದುಸ್ತಾನಿ" ಇವೆಲ್ಲ ಒಂದೇ ನುಡಿ ( ಹಲವರ ಅನಿಸಿಕೆ ). ಇದೊಂದು ದೊಡ್ಡ ಗೊಂದಲ. ಅದರ ಬಗ್ಗೆ ಇಲ್ಲಿ ಆಳವಾದ ಮಾತುಕತೆ ಬೇಡ.
ಉರ್ದು, ಹಿಂದಿ, ಹಿಂದುಸ್ತಾನಿ ಎಲ್ಲವೂ linguistic ಕೋನದಿಂದ ಒಂದೇ ಆದರೆ 'ರಾಜಕೀಯ' ಕಾರಣಗಳಿಂದ ಅವು ಬೇರೆ ಬೇರೆ.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
""ನಾನು ಇಲ್ಲಿ ಬೇರ ಕೋನದಿಂದ ಬರೆದುದು, ದಯವಿಟ್ಟು, ಇಲ್ಲಿ ಜಾತಿ, communist ಮುಂತಾದ ರಾಜಕೀಯ ಇವನ್ನು ಬರೆಸಬೇಡಿರಿ!!""
ಹಾಗಾದ್ರೆ ಈ ಕೆಳಗಿನ ನಿಮ್ಮ ವಾಕ್ಯ ಯಾವ ಕೋನದಿಂದ ಬಂದದ್ದು ತಿಳಿಸುವಿರಾ?
""ನಮ್ಮ Central Home Ministryಯ ಕೆಲಸವೇ ಹಿಂದು ಬೆಳೆಸುವುದಾಗಿ ಹೋಗಿದೆ.""
ಹಿಂದು ಮತ್ತು ಹಿಂದಿ ನಡುವೆ ಕೇವಲ ಒಂದು ಸ್ವರ ಮಾತ್ರ ವ್ರತ್ಯಾಸವೇ? ಬಹಳವಿದೆ
ಇನ್ನು ""ಮಿಕ್ಕ ನೆಲ ನುಡಿಗಳ ಪಾಡೇನು?"" ಇದರ ಬಗ್ಗೆ ಯಾವುದೇ ತಕರಾರಿಲ್ಲ. ಅವೆಲ್ಲಾ ಉಳಿಯಬೇಕು ಮತ್ತು ಬೆಳೆಯಬೇಕು.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಗುರುಜಿ
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಗುರುಜಿ,
ನನ್ನ ಕೋಟಿ ಕ್ಷಮಯಾಚನೆ. ಆ ಅಚ್ಚುತಪ್ಪನ್ನು "ಹಿಂದಿ ಬೆಳೆಸುವುದು" ಎಂದು ಸರಿಪಡಿಸಿಕೊಂಡು ಓದಬೇಕೆಂಬ ವಿನಂತಿ.
ಈ ಎಳೆ 'ಹಿಂದು, ಮುಸ್ಲಿಮ್' ಮುಂತಾದ ಧರ್ಮಗಳ ಬಗ್ಗೆ ಇಲ್ಲ.
ಬರೀ 'ಹಿಂದಿ, ಮುಂತಾದ" ನುಡಿಗಳಿಗೆ ಕೇಂದ್ರ ಸರಕಾರ ತರಾಮಾರ ಇಂಬಿನ ಬಗ್ಗೆ!
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಈ ಬರಹದಲ್ಲಿ ಉರ್ದು ಬಗ್ಗೆ ಕೇಂದ್ರ ಸರಕಾರದ ನೆರವಿನ ಬಗ್ಗೆ ಅರಿಕೆ ಬಿಟ್ಟು ಹೋಗಿದೆ. ಅದಕ್ಕೆ ಮನ್ನಿಸಿ, ಅದು ತಿಳಿಯದೇ ಆದ ತಪ್ಪು!
"ಉರ್ದು, ಹಿಂದಿ, ಹಿಂದುಸ್ತಾನಿ" ಇವು linguistically ಒಂದೇ ಎಂದು ನಾನು ನಂಬಿರುವೆನು. ನನ್ನ ಅರಿವಿನಂತೆ
ಉರ್ದು ಅಂದರೇ ಹೆಚ್ಚು ಪಾರಸೀ ಒರೆಗಳ ಹಿಂದುಸ್ತಾನಿ ನುಡಿ. ಹಿಂದಿ ಹೆಚ್ಚು ಸಂಸ್ಕೃತ ಒರೆಗಳಿರುವ ಹಿಂದುಸ್ತಾನಿ ನುಡಿ.
ಹಿಂದುಸ್ತಾನಿ ಅಂದರೆ ಅದು ಉರ್ದುವೂ ಹೌದು, ಹಿಂದಿಯೂ ಹೌದು.
ಉರ್ದು, ಹಿಂದಿಗಳ ನಡುವೆ ಹೆಚ್ಚು ವ್ಯಾಕರಣದಲ್ಲಿ ವ್ಯತ್ಯಾಸವಿಲ್ಲವಂತೆ( ಓದಿದ್ದು )!! ಬರೀ ಎರವಲು ಪದಗಳ ಮೂಲದಲ್ಲಿ ವ್ಯತ್ಯಾಸ!
ಈ ಕಾರಣದಿಂದಲೇ, ಉತ್ತರಪ್ರದೇಶದಲ್ಲಿ ಉರ್ದು ಮತ್ತು ಹಿಂದಿ ಎರಡೂ ಎಲ್ಲರಿಗೂ ಸಲೀಸಾಗಿ ಅರ್ಥವಾಗುವುದು( ಓದಿದ್ದು )!
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಕೇರಳದಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಕಾಸರಗೋಡಿನಲ್ಲಿರುವ ಕನ್ನಡಿಗರ ಬಗ್ಗೆ ನೀವು ಸೊಲ್ಲೆತ್ತಲಿಲ್ಲ. ಕಾಸರಗೋಡಿನ ಕನ್ನಡ ಪರ ಚಟುವಟಿಕೆಗಳನ್ನು ಯಾರೂ ಗಮನಿಸುವುದಿಲ್ಲ ಮತ್ತು ಇಲ್ಲೂ ಹಾಗೇ ಆಗಿದೆ.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಕೇರಳದ ಕನ್ನಡಿಗ ಬಗ್ಗೆ ನನಗೆ ಅರಿವಿಲ್ಲ.!!
ಇದು ಬರೀ ಕನ್ನಡದ ಬಗ್ಗೆ ಬರೆದ ಬರಹವಲ್ಲ. ಬರಹದ ಹೆಸರೇ ಹೇಳುವಂತೇ "ಒರಿಯ, ಮಣಿಪುರಿ, ಡೋಗ್ರಿ, ಬಡಗಕನ್ನಡ( ಇದು ಕರ್ನಾಟಕದ ಕನ್ನಡಕ್ಕಿಂತ ಬೇರೆಯಾಗಿದೆ)" ಇಂತಹ ಸಣ್ಣಪುಟ್ಟ ನುಡಿಗಳು ಹೇಗೆ ಸಾಯುತ್ತಿವೆ ಎಂದು.
ನೀವು "ಕೇರಳ ಕನ್ನಡಿಗರ" ಬಗ್ಗೆ ಮಾಹಿತಿ ನೀಡುವ ಬರಹ ಬರೆದು, ಸೊಲ್ಲೆತ್ತಿ, ನಮ್ಮ ಬೆಂಬಲವಿದೆ.! ಬೇರೊಬ್ಬರು ಸೊಲ್ಲತ್ತಿಲ್ಲ ಎಂದು ಕಾಯಬೇಡಿರಿ!
ಆದರೆ ಕೇರಳದ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿವೆ ಎಂದು ಕೇಳಿದ್ದೇನೆ.
"ಬಡಗ" ಕನ್ನಡದ dialect. ಇದನ್ನು ನಾವು "ಕೊಡವ"ದ ಅಂತೆ ಬೇರೆ ನುಡಿಯೆಂದು ತಿಳಿಯಬೇಕು. ಕನ್ನಡದ ಉಳಿವಿಗೆ ಕರ್ನಾಟಕವಿದೆ. ಬಡಗ ನುಡಿಯ ಉಳಿವಿಗೆ ಏನಿದೆ, ಬಡಗ ಮಂದಿಯನ್ನು ಬಿಟ್ಟು?
ಕೊಡವನ್ನೂ ಕನ್ನಡದ ಕಿರುನುಡಿ-dialect ಎಂದು ಹಲವು ಬಗೆದಿದ್ದಾರೆ( ಗೊಂದಲವೂ ಇದೆ ). ಕೊಡವಕ್ಕೆ, ತುಳುವಿಗೆ ನಮ್ಮ ಕರ್ನಾಟಕದಲ್ಲಿ ನೆರವಿದೆ. ತುಳು ಅಕಾಡೆಮಿ ಇದಕ್ಕೆ ಪುರಾವೆ.
ಆದರೆ ತಮಿಳು ನಾಡಲ್ಲಿ ಬಡಗಕ್ಕೆ ಏನಂದರೆ ಏನೂ ನೆರವಿಲ್ಲ!
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಕಾಸರಗೋಡಿನ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯವಿದೆ ಎ೦ಬ ವಾದ ಸುಳ್ಳು. ಅನೇಕ ಮಹನೀಯರು, ಸ೦ಘಸ೦ಸ್ಥೆಗಳು ಇ೦ದಿಗೂ ಹೋರಾಟ ನಡೆಸುತ್ತಿವೆ. ಆದರೆ ಇಲ್ಲಿ ತಿಳಿಸಿರುವ ಬಡಗ ಕನ್ನಡದ ಸಮಸ್ಯೆಯ ಬಗ್ಗೆ ನಾವೂ ಕೇಳಿಯೇ ಇಲ್ಲ! ಮತ್ತು ಯಾವುದೇ ರೀತಿಯ ಹೋರಾಟ ಕೂಡ ನಡೆದಿಲ್ಲ.
ತಮಿಳರು ಇಲ್ಲಿಯ ಕನ್ನಡಿಗರ ಸೊಲ್ಲನ್ನಡಗಿಸಿದ್ದಾರೆ. ಇದೊ೦ದು ನಾನು ಪ್ರತ್ಯಕ್ಷವಾಗಿ ಕ೦ಡ ಸ೦ಗತಿ. ನಾನು ಒ೦ದು ಸಲ ಮದುಮಲೈ ಅರಣ್ಯ ಪ್ರದೇಶದಲ್ಲಿರುವ ರಿಸಾರ್ಟ್ಗೆ ಹೋಗಿದ್ದೆ ಆವಾಗ ನನಗೆ ಅಲ್ಲಿನ ಕನ್ನಡಿಗರ ಶೋಚನೀಯ ಸ್ಥಿತಿ ಅನುಬವವಾಯಿತು. ನಾನು ರಿಸಾರ್ಟ್ನಲ್ಲಿದ್ದಾಗ, ಅಲ್ಲಿ ಒ೦ದು ಟ್ರೆಕ್ಕಿ೦ಗ್ ಮಾಡುವ ಆಸೆಯಾಯಿತು, ಆಗ ರೆಸಾರ್ಟ್ ವ್ಯವಸ್ತಾಪಕರು ಒಬ್ಬ ಗೈಡ್ ನೇಮಿಸಿ ನನ್ನ ಜೊತೆ ಕಳಿಸಿಕೊಟ್ಟರು. ಆ ಗೈಡ್ ಒಬ್ಬ ಕನ್ನಡಿಗ ಮತ್ತು ಸಿದ್ದಿ ಎ೦ಬ ಬುಡಕಟ್ಟು ಜನಾ೦ಗಕ್ಕೆ ಸೇರಿದವನಾಗಿದ್ದ. ಟ್ರೆಕ್ಕಿ೦ಗ್ ಮಾರ್ಗದಲ್ಲಿ ನನಗೆ ಕನ್ನಡದಲ್ಲಿ ಮಾತನಾಡುತ್ತಿದ್ದ ಅವನನ್ನು ಮಾತನಾಡಿಸಿದಾಗ ಮೂಲ ಲೇಖನದಲ್ಲಿ ತಿಳಿಸಿದ ಎಲ್ಲ ಸಮಸ್ಯೆಯ ಬಗ್ಗೆ ತಿಳಿಸಿದ. ತಮಿಳರ ಅಟ್ಟಹಾಸದಲ್ಲಿ ಇವರ ಬಾಷೆ, ಸ೦ಸ್ಕೃತಿ ಸಶಿಸಿ ಹೋಗುತ್ತಿದೆ ಎ೦ದು ಹಲುಬಿದ. ನನಗೆ ನಿಜವಾಗಿಯೂ ಬಹಳ ನೋವಾಯಿತು. ಈ ಕನ್ನಡಿಗರ ಬಗ್ಗೆ ಒ೦ದೇ ಒ೦ದು ಮಾತು ಸಹ ಯಾವ ಸ೦ಘಸ೦ಸ್ತೆಯೂ ಮಾತನಾಡದಿರುವುದು ವಿಷಾದನೀಯ!.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಪ್ರಪಂಚ ಅವರ ಅನುಭವ ಹೇಳಿದ್ದು ನಮ್ಮ ಕಣ್ತೆರೆಸುವಂತಹದ್ದು.
ಸಿದ್ದಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮುಂದೆ ಬರೆಯೋಣ! ಇನ್ನೂ ಹಲವಾರು ಕನ್ನಡ ಬುಡಕಟ್ಟು ಜನಾಂಗಗಳು ನಮ್ಮ ಭಾರತದಲ್ಲಿ ಇವೆ. ಮಧ್ಯಪ್ರದೇಶದ 'ಹೊಲೆಯ ಕನ್ನಡ'ದವರು, ನೇಪಾಳದಲ್ಲೂ ಒಂದು ಇದೆಯಂತೆ( ಹೆಚ್ಚು ಗೊತ್ತಿಲ್ಲ ), ಮಹಾರಾಷ್ಟ್ರದಲ್ಲೂ ಇವೆ. ಇವುಗಳ ಬಗ್ಗೆ ಅರಿಯೋಣ.
ಬಡಗರ ಜೊತೆ ಇರುವ 'ಇರುಳ'ರು, 'ತೊದ'ರು, ಮುಂತಾದವರಲ್ಲೂ ಕನ್ನಡ ಬುಡಕಟ್ಟು ಮಂದಿ ಇದ್ದಾರಂತೆ.
ನಮ್ಮ ಕನ್ನಡ ನಾಡಲ್ಲೇ ಸೋಲಿಗರು, ಹಾಲಕ್ಕಿ, ಜೇನು ಕುರುಬ, ಕಾಡು ಕುರುಬ ಮುಂತಾದ ಕನ್ನಡ ಬುಡಕಟ್ಟು ಮಂದಿ ಇದ್ದಾರೆ. ಇವರು ' 'ಅಚ್ಚಚ್ಚಕನ್ನಡಿಗ'ರು
. ಇನ್ನೂ ಇವರಿಗೆ ಹೊರಗಿನ ಗಾಳಿ ಹೆಚ್ಚು ಸೋಕಿಲ್ಲ!
ಕವಿರಾಜಮಾರ್ಗದಲ್ಲಿ( ನಮ್ಮ 'ಸುನಿಲ'ನನ್ನು ನೆನೆಯುತ್ತಾ ) ವಿಷಾದವೂ ಒಂದು ಸಪ್ತರಿಪುವರ್ಗದಲ್ಲೊಂದು( ಅರಿಷಡ್ವರ್ಗದಂತೆ ) ಎಂದು ಹೇಳಿದೆ. ವಿಷಾದವೂ ನಮ್ಮಲ್ಲಿ ಸಮಸ್ಯೆಗೆ ಉಪಾಯವನ್ನು ತರಬೇಕು ಹೊರತು, ನಮ್ಮ ಹುರುಪಿಲ್ಲದವರು/ಉತ್ಸಾಹಹೀನರನ್ನಾಗಿಸಬಾರದು
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ನಿಜಕ್ಕೂ ಈ ಬಡಗ ಕನ್ನಡದ ಬಗ್ಗೆ ಮಾಹಿತಿಯನ್ನ ಕಲೆ ಹಾಕಿ ಕನ್ನಡಿಗರ ಕಣ್ತೆರೆಸುವ ಕಾಯಕ ಮಾಡಿದ್ದೀರ, ಅದಕ್ಕಾಗಿ ದನ್ಯವಾದಗಳು. ನಾನು ಹೇಳಿದ ಘಟನೆ ನಡೆದು ಸುಮಾರು ೫ ವರ್ಷಗಳೇ ಕಳೆದು ಹೋಗಿದ್ದುವು. ನಾನು ಇವರ ಬಗ್ಗೆ ಸ೦ಪೂರ್ಣ ಮರೆತುಹೋಗಿತ್ತು. ಈ ಲೇಖನ ನನ್ನ ಅನುಬವವನ್ನ ಮರುಕಳಿಸಿತು. ಪರ ಬಾಷಿಗರಿ೦ದ ತೀರ ಆಘಾತಕ್ಕೊಳಗಾಗಿರುವ ಕನ್ನಡಿಗರ ಸಮಸ್ಯೆಯನ್ನು ಸರಕಾರ ಮತ್ತು ಸ೦ಘಸ೦ಸ್ಥೆಗಳು ಆದ್ಯತೆ ಕೊಡಬೇಕಾಗಿದೆ.
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಕರ್ನಾಟದದ ಸರಕಾರ, ಸಂಘಸಂಸ್ಥೆ ಅಂದ್ರೆ ನಾವೇ, ಕನ್ನಡಿಗರೇ!!
ಹೆಚ್ಚು ಹೆಚ್ಚು ಮಂದಿಗೆ ಇದರ ಬಗ್ಗೆ ತಿಳಿದು, ಕಾಳಜಿ ಬಂದರೆ ಆಯ್ತು!
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಇದು ಕನ್ನಡದ ಬಗ್ಗೆ ಬರೆದ ಬರಹವೇನೋ ಅಲ್ಲದಿದ್ದರೂ ಕಾಸರಗೋಡಿನಲ್ಲಿ ಕನ್ನಡ ಮನ್ನಣೆ ಕಳೆದುಕೊಳ್ಳುತ್ತಿದೆ ಎಂಬುದೂ ಅಷ್ಟೇ ನಿಜ.ಕೇರಳದಲ್ಲಿ ಕನ್ನಡ ಭಾಷಿಗರು ಕಾಸರಗೋಡಿನಲ್ಲಿ ಮಾತ್ರವಲ್ಲದೆ ವಯನಾಡು ಜಿಲ್ಲೆಯಲ್ಲೂ ಇದ್ದಾರೆ. ಕೇರಳದ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿವೆ, ನಾನೂ ಅಂತಹ ಒಂದು ಶಾಲೆಯಲ್ಲಿ ಕಲಿತವನು.
ಇಂತಹ ಮಾತುಗಳನ್ನಾಡಿದರೆ ಅದಕ್ಕೆ ಬೇಡದಿದ್ದರೂ ಒಂದು ರಾಜಕೀಯ ರಂಗು ಬಂದುಬಿಡುತ್ತದೆ.
ಇನ್ನೊಂದು ಮಾಹಿತಿ- ವಯನಾಡಿನ ಆದಿವಾಸಿ ಬುಡಕಟ್ಟಿಗೆ ಸೇರಿದವರು ಕನ್ನಡ ಮಿಶ್ರಿತ ಮಲೆಯಾಳಂ ನುಡಿಯನ್ನಾಡುತ್ತಾರೆ.
ಪ್ರಪಂಚ -"ಕಾಸರಗೋಡಿನ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯವಿದೆ ಎ೦ಬ ವಾದ ಸುಳ್ಳು." ನಿರ್ಲಕ್ಷ್ಯವಿದೆ ಎಂದಲ್ಲ ನನ್ನ ಹೇಳಿಕೆ. ಜನಸಾಮಾನ್ಯರು ಆಸಕ್ತಿ ಕಳೆದುಕೊಂಡಿದ್ದಾರೆ, ಅದರಿಂದಾಗಿಯೇ ತಾನೇ ಅನೇಕರು ಹೋರಾಡಬೇಕಾಗಿ ಬಂದಿರುವುದು..
ಉ: ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
ಇದರಲ್ಲಿ ವೈಯಕ್ತಿಕವಾದ ತೊಡಗಿಸಿಕೊಳ್ಳುವಿಕೆಯೇ ಹೆಚ್ಚು ಪರಿಣಾಮಕಾರಿಯೆನಿಸುತ್ತದೆ.