Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ನಮ್ಮ ಕನ್ನಡವನ್ನು develop ಮಾಡಿ.

September 1, 2007 - 11:27am — mahesha

===================೧==========================
ಕನ್ನಡ ನಮ್ಮ mother tongue ಅದರ development ನಮಗೆ ಬಲು important ಆಗಬೇಕು. ಕನ್ನಡವು ಬಲು ancientಆದ language. ಕನ್ನಡದಲ್ಲಿ 8th century ADಅಲ್ಲೇ "ಕವಿರಾಜಮಾರ್ಗಂ" ಎಂಬ great literary work compose ಆಗಿತ್ತಂತೆ. ಅಂತಹ great language ನಮ್ಮ ಕನ್ನಡ language. ಇಂತಹ language extinct ಆಗಬಾರದು. ಇದರಲ್ಲಿ all kinds of knowledge available ಇರಬೇಕು. ಅದಕ್ಕೆ ನಾವೆಲ್ಲ effort ಹಾಕಬೇಕು.

=================================================

===================೨==========================
ಕನ್ನಡ ನಮ್ಮ ಮಾತೃಭಾಷೆ ಅದರ ಅಭಿವೃದ್ಧಿ ನಮಗೆ ಬಲು ಮುಖ್ಯವು ಆಗಬೇಕು. ಕನ್ನಡವು ಬಲು ಪುರಾತನವು ಆದ ಭಾಷೆ. ಕನ್ನಡದಲ್ಲಿ ೮ನೇ ಶತಮಾನ ಕ್ರಿಸ್ತಶಕದ ಅಲ್ಲೇ "ಕವಿರಾಜಮಾರ್ಗಂ" ಎಂಬ ಶ್ರೇಷ್ಠ ಸಾಹಿತ್ಯ ಕೃತಿಯ ರಚನೆ ಆಗಿತ್ತಂತೆ. ಅಂತಹ ಶ್ರೇಷ್ಠ ಭಾಷೆ ನಮ್ಮ ಕನ್ನಡ ಭಾಷೆ. ಇಂತಹ ಭಾಷೆ ಕ್ಷೀಣ ಆಗಬಾರದು. ಇದರಲ್ಲಿ ಸರ್ವವಿಧಜ್ಞಾನಗಳು ಲಭ್ಯ ಇರಬೇಕು. ಅದಕ್ಕೆ ನಾವೆಲ್ಲ ಶ್ರಮ ಹಾಕಬೇಕು.
=================================================

===================೩==========================
ಕನ್ನಡ ನಮ್ಮ ತಾಯಿನುಡಿ ಅದರ ಏಳಿಗೆ ನಮಗೆ ಬಲು ಹಿರಿದು ಆಗಬೇಕು. ಕನ್ನಡವು ಬಲು ಹಳೆಯದು ಆದ ನುಡಿ. ಕನ್ನಡದಲ್ಲಿ 8ನೇ ನೂರೇಡು ಕ್ರಿಸ್ತನೇಡುಗಳಲ್ಲೇ "ಕವಿರಾಜಮಾರ್ಗಂ" ಎಂಬ ಮೇಲ್ಮಟ್ಟದ ಕಬ್ಬ/ಬರವಣಿಗೆ ನೆಗೞ್ಚು/ಹೆಣಿಕೆ ಆಗಿತ್ತಂತೆ. ಅಂತಹ ಮೇಲ್ನುಡಿ ನಮ್ಮ ಕನ್ನಡ ನುಡಿ. ಇಂತಹ ನುಡಿ ಅಳಿಯಬಾರದು. ಇದರಲ್ಲಿ ಎಲ್ಲ ತೆರದ ಅರಿವುಗಳು ದೊರೆಯಬೇಕು. ಅದಕ್ಕೆ ನಾವೆಲ್ಲ ದುಡಿಯಬೇಕು.
=================================================

೧ ಇಂಗಲೀಸೊಲವಿನೊರಿಗೆ
೨ ಸಕ್ಕದದೊಲವಿನೋರಿಗೆ
೩ ಅಚ್ಚಗನ್ನಡಿಗರಿಗೆ

Smiling

Ornamental seperator
  • mahesha ರವರ ಬ್ಲಾಗ್
  • Login or register to post comments
  • 372 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 1, 2007 - 12:02pm — shreekant.mishrikoti

ಉ: ನಮ್ಮ ಕನ್ನಡವನ್ನು develop ಮಾಡಿ.

shreekant.mishrikoti's picture

ಕನ್ನಡ ಸಾವಿರಾರು ವರ್ಶಗಳಿಂದ ಹೀಗೆ ನಾನಾ ಸವಾಲುಗಳನ್ನೆದುರಿಸಿ ಬದುಕಿಕೊಂದು ಬಂದಿದೆ . ಬದಲಾಗುತ್ತಲೂ ಇದೆ .
ನಾಳೆ ಏನಾಗುವದೆಂಬುದನ್ನು ಜನ ತಮ್ಮ ಬಳಕೆಯಿಂದ ನಿರ್ಧರಿಸುವರು .

ಬಹುಶ: ಇಂಗ್ಲೀಶ್ ಮಯ ಆಗುವದೆಂದೇ ತೋರುತ್ತದೆ .
ಆಗು ಹೋಗು ಮಾಡು ಇಂಥ ಕ್ರಿಯಾಪದ ರೂಪಗಳಷ್ಟೇ ಉಳಿದು , ಉಳಿದೆಲ್ಲ ಕ್ರಿಯಾಪದಗಳೂ , ಎಲ್ಲ ನಾಮಪದಗಳೂ , ಇಂಗ್ಲೀಶಿನವಿರುತ್ತವೆ . ಆಗ ಇಂಗ್ಲೀಶ್ ಕನ್ನಡದ ಜತೆ ಚೆನ್ನಾಗಿ ಇಂಟೆಗ್ರೇಟ್ ಆಗಿರುತ್ತದೆ .
ಕನ್ನಡದ ಅಲ್ಫಾಬೆಟ್ಟು ( ವರ್ಣಮಾಲೆ ಇರಲ್ಲ !) ಇಂಗ್ಲೀಶ್ ಅಕ್ಷರಗಳನ್ನೂ ಸೇರ್ಸಿಕೊಂಡಿರ್ತದೆ !
ಸೇರಿಸ್ಕೊಳ್ಲಿ ಬಿಡ್ಲಿ , ಕನ್ನಡದೋರ್ಗೆ ಎಲ್ರಿಗೂ ಇಂಗ್ಲೀಷ್ ಅಕ್ಷರ ಶಬ್ದ ಗೊತ್ತಿರದೆ , ಆವಾಗ ಹಳ್ಳಿಮುಕ್ಕನೂ ಇಂಗ್ಲೀಶ್ ಜಗತ್ತಿನೊಂದಿಗೆ ಸರಿಸಮಾನವಾಗಿ ಕಾನ್ಫಿಡೆನ್ಸಿಂದ ವ್ಯವಹರಿಸ್ತಾನೆ !
ಇಂಗ್ಲೀಶ್ ಬರೋರೆಲ್ಲ ಕನ್ನಡವನ್ನ ೨೪ ಗಂಟೆಗಳೊಳಗೆ ಕಲಿತ್ಬಿ ಡತಾರೆ !
ಕನ್ನಡ ಇಂಗ್ಲೀಶ್ ಏಕಾಕಾರ ಆಗ್ಬಿಡ್ತದೆ .

ಆವಾಗ ಯಾವ ಭಾಷಾ ಸಮಸ್ಯೆ, ಜಗಳಗಳೂ ಇರಲ್ಲ ; ಎಲ್ಲ ಭಾರತೀಯ ಭಾಶೆಗಳಿಗೂ ಇದೇ ಗತಿ ಬಂದಿರ್ತದೆ . ಹಾಗಾಗಿ ಒಂದ್ ಭಾಷೆಗೂ ಇನ್ನೊಂದಕ್ಕೂ ಹೆಚ್ಚು ಯತ್ವಾಸ ಇರೂದಿಲ್ಲ . ಯಾರ್ ಬೇಕಾದ್ರೂ ಯಾವ್ ಭಾಷೆನಾದ್ರೂ ಮಾತಾಡಬಲ್ಲವರಾಗಿರ್ತಾರೆ .

ನಮ್ಮ ನಿಮ್ಮ ಒಲವು dont matter!

ನೋಡೋಣ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
September 1, 2007 - 12:49pm — kpbolumbu

ಉ: ನಮ್ಮ ಕನ್ನಡವನ್ನು develop ಮಾಡಿ.

kpbolumbu's picture

'ಕನ್ನಡದಲ್ಲಿ ಉನ್ನತ ವಿದ್ಯಾಭ್ಯಾಸ'ದ ಬಗೆಗಿರುವ ಕಲ್ಪನೆಗಳು ಇಂತಹುದೊ೦ದು ಮಾರ್ಪಾಡಿಗೆ ಪೂರಕವಾಗಿಯೇ ಇವೆ. ಇ೦ಗ್ಲಿಷಿಗೆ 'ಉ' ಮತ್ತು 'ಅನ್ನು' ಸೇರಿಸಿದರೆ ಕನ್ನಡವಾಗುತ್ತದೆ೦ದು ಕೆಲವರು ಹೇಳುತ್ತಾರೆ. ಆದರೆ ನನಗನ್ನಿಸುವ೦ತೆ ಇತರ ನುಡಿಗಳನ್ನು ನಮ್ಮದಕ್ಕೆ ಒಗ್ಗಿಸಿಕೊ೦ಡು ಬಳಸಬೇಕು. ಅ೦ದರೆ ಸ೦ದರ್ಭಕ್ಕೆ ತಕ್ಕ೦ತೆ ಮೂಲದ್ದನ್ನು ಉಳಿಸಿಕೊಳ್ಳುವುದೂ ಬದಲಾಯಿಸುವುದೂ ಮಾಡಬೇಕು. ನಮ್ಮಲ್ಲಿ ಬಳಕೆಯಿರುವ ಇತರ ನುಡಿಗಳೆ೦ದರೆ ತಮಿಳು, ತೆಲುಗು, ಮಲೆಯಾಳ, ತುಳು, ಕೊ೦ಕಣಿ, ಮರಾಠಿ, ಸ೦ಸ್ಕೃತ ಮತ್ತು ಉರ್ದು. ಈ ಎಲ್ಲ ನುಡಿಗಳಿ೦ದ ಕನ್ನಡವು ಒರೆಗಳನ್ನು ಕಡಗೊ೦ಡಿದೆ. ಇ೦ತಿರಲು ಸ೦ದರ್ಭಕ್ಕೆ ತಕ್ಕ೦ತೆ ಇತರ ನುಡಿಗಳ ಒರೆಗಳನ್ನು ಬಳಸುವುದರಿ೦ದ ಅಪಾಯವೇನೂ ಇಲ್ಲ.
ಉದಾಹರಣೆ:
೧.ಶ೦ಬರ ಎ೦ದರೆ ಕನ್ನಡದಲ್ಲಿ 'ನೂರು' ಎ೦ಬ ಅರ್ಥವಿಲ್ಲವಾದರೂ ಬೆಳಗಾವಿಯ ಕನ್ನಡದಲ್ಲಿ ಅದನ್ನು ಅ೦ತೆಯೇ ಹೇಳುವರು.
೨.'ಸಕ್ಕತ್' ಕನ್ನಡದ್ದಲ್ಲವೆ೦ದರೆ ನಾವೂ ಒಪ್ಪುವುದಿಲ್ಲ.(ತಮಿಳಿನಿ೦ದ ಬ೦ದದ್ದು)

'ಕನ್ನಡದಲ್ಲಿ ಉನ್ನತ ವಿದ್ಯಾಭ್ಯಾಸ'ದ ಬಗೆಗಿರುವ ಕಲ್ಪನೆಗಳು : ಕೇಳಿ
__________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
September 1, 2007 - 6:31pm — ವೈಭವ

ಉ: ನಮ್ಮ ಕನ್ನಡವನ್ನು develop ಮಾಡಿ.

ವೈಭವ's picture

ನನಗೆ ಮೂರನೇ ಬಗೆಯ ಬರೆವಣಿಗೆ ಹತ್ತಿರ ಮತ್ತು ಅದು ನನ್ನದು ಅನ್ನಿಸಿತು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡವೇ ಜಾತಿ-ಧರ್ಮ-ದೇವರು ?
  • ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
  • ಕನ್ನಡ ಕಲಿಯುವದು ಕಷ್ಟವೇ?
  • ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!
  • ತಮಿಳು ಕ್ಲಾಸಿಕಲ್ ನುಡಿ ಅನ್ನೋದಕ್ಕೆ ಹಾರ್ಟ ಕೊಟ್ಟ ಓಲೆ.!!! ಇದರಲ್ಲಿ ಕನ್ನಡದ ಬಗ್ಗೆ ಕೆಲವು ತಪ್ಪು ಅರಿಕೆಗಳಿವೆ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
  • sushil
    ಉ: ಶ್ರೀಬಸವೇಶ್ವರರ ವಚನಗಳು
    May 12, 2008 - 11:25am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.

ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator