ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ನಮ್ಮ ಮನೆಗೊಬ್ಬರು ಬಂದಿದ್ದರು. ಅವರ ವಿವರಗಳೆಲ್ಲ ಇಲ್ಲಿ ಬೇಕಾಗಿಲ್ಲ. ಅವರೇನೋ ಕೊಳಲು ನುಡಿಸೋರಂತೆ, ಅವರ ಮಕ್ಕಳೂ ’ಕ್ಲಾಸಿಕಲ್ ಮ್ಯೂಸಿಕ್’ಅಲ್ಲಿ ಸಕ್ಕತ್ ಇಂಟೆರೆಸಟು ಮಡಗಿಕೊಂಡಿದ್ದಾರಂತೆ. ಅದೆಲ್ಲ ಸರಿ..
ಮನೆಗೆ ಬಂದರು, ಮನೆ ಬಂದವರನ್ನು ಮಾತಾಡಿಸಬೇಕಲ್ಲ, ಅದು ಒಂದು ಸಹಜ ಕ್ರಿಯೆ ಅಲ್ಲವೇ?
ಅವರು ನನ್ನ ’ಹಾಬಿ’ಗಳನ್ನು ಕೇಳಿದರು, ನಾನು ’ಹೀಗೆ ಕೆಲವು ಕನ್ನಡ ಕಾದಂಬರಿ ಓದ್ತೀನಿ, ಹೊತ್ತು ಸಿಕ್ಕರೆ ಸಿನಿಮ ನೋಡ್ತೀನಿ’ ಅಂದೆ. ಅದೇನು ಆಯ್ತೋ ತುಸು ಮುಕದಲ್ಲಿ ಅದೇನೋ expressionಗಳು. ನನಗೆ ನಾನು ಅಂತಹದ್ದು ಏನು ನುಡಿದೆ ಎಂದು ಯೋಚಿಸ ಮಟ್ಟ ಇತ್ತದು.
ನಮ್ಮ ಮನೆಯೋರು ಬಲು ಆರಡಿನರಿ ಮಂದಿ. ನಮಗೆ ಸಂಗೀತ, ಸಾಹಿತ್ಯ ಇವುಗಳಲ್ಲಿ ಅಶ್ಟೊಂದು ಇಂಟರೆಸಟಿಲ್ಲ. ನಮ್ಮ ಅಮ್ಮನಿಗೆ ಅಡುಗೆ ಮಾಡೋದರಲ್ಲಿ ಸಿಗೋ ಕುಶಿ ಹಾಡು ಕೇಳೋದರಲ್ಲಿ ಇಲ್ಲ. ನಮ್ಮ ಅಪ್ಪನಿಗೆ ಅವರ ಗೆಳೆಯರ ಜೊತೆ ವ್ಯಾಪಾರದ ಮಾತುಕತೆಯಾಡೋಕುಶಿ, ಮಠದಲ್ಲಿ ನಡೆಯೋ ಸಂಗೀತ ಕಚೇರಿ ಕೇಳೋದರಲ್ಲಿ ಇಲ್ಲ. ಮನೆಯವರೆಲ್ಲ ಒಟ್ಟಿಗೆ ಸಿನಿಮಕ್ಕೆ ಹೋಗ್ತೀವಿ. ಈಗೀಗ ಕಡಮೆ ನಾನು ಕೆಲಸಕ್ಕೆ ಸೇರಿದ ಮೇಲೆ. ಸಿನಿಮ ಹಾಡು ಮನೇಲಿ ಕೇಳ್ತೀವಿ ಏಕೆಂದರೆ ನಮಗೆ ಹಿಡಿಸೋ ಮ್ಯೂಸಿಕ್ ಅದೇ, ಮತ್ತು ಹೆಚ್ಚು ಕಡೆ ಕೇಳಿಸೋದು ಅದೇ.
ಇದೇ ಸನ್ನಿವೇಶ ನಮ್ಮ ಹಲವು, ಹೆಚ್ಚು ಮನೆಯಲ್ಲಿ ಅಂತ ನನ್ನ ನಂಬಿಕೆ. ಇಲ್ಲದೇ ಹೋಗಿದ್ದರೆ ಯಾಕೆ ಸಿನಿಮ ಹಾಡುಗಳನ್ನ ಕೇಳಿಸೋ ರೇಡಿಯೋ ಚಾನಲ್ಲುಗಳು ಇಪ್ಪತ್ತನಾಲಕ್ಕು ಗಂಟೆ ಮೊಳಗುತ್ತಾ ಇದ್ದವು?
ನಮ್ಮ ಮನೇಲಿ ಎಲ್ಲರಿಗೂ ಸುಮ್ನೆಸುಮ್ನೆ ಇಂಗಳೀಸು/ಸಂಸ್ಕೃತ ಪದಗಳನ್ನು ’ಪ್ರಯೋಗ’ ಮಾಡೋರ ಕಂಡರೆ ಹೆದರಿಕೆ. ಅಂತವರಿಗೆ ಅದೇನೋ ಮೇಲ್ಮೆ. ಮಿಕ್ಕವರ ಕಂಡರೆ ಒಂತರ ’ಕತ್ತೇನು ಗೊತ್ತು ಕತ್ತುರಿ ಕಂಪು’ ಅನ್ನೋ ಮೇಲ್-ಅನಿಸು.
ಸರಿ.. ಬಂದವರು ಶುರು ಮಾಡಿದರು, ನಾನು flute ನುಡಿಸ್ತೀನಿ, ನಮ್ಮ ಮಕ್ಕಳು ಒಬ್ಬ ಮೃದಂಗ, ಮಗಳು vocal senior ಮಾಡಿದ್ದಾಳೆ. etc etc ಅವರ ಬಳಿ ಕಲಿತಿದ್ದು etc etc ಆ ಕಚೇರಿ ಈ ಕಚೇರಿ etc etc.. ನಮ್ಮ ಅಪ್ಪ ಅಮ್ಮ ಏನು ನಡುವೆ ಬಾಯಿ ಹಾಕದೇ ’ಹು ಹು’ ಅಂತಿದ್ದರು.. ನಾನು ಹು ಹು ಎಂದೆ. ನನ್ನ ತಮ್ಮ ಟಿವಿ ಕಡೆ ಮುಕ ಮಾಡಿ ಕೂತಿದ್ದ.
ಸರಿ ಇದ್ದಕ್ಕಿದ್ದ ಹಾಗೆ ಮಾತು ಹೊರಳಿತು.. "ನಮ್ಮ ಮನೇಲಿ ನಾವು ಸಿನಿಮ songs ಕೇಳೋದೇ ಇಲ್ಲ. ಊಟ ಮಾಡುವಾಗಲೂ ಕ್ಲಾಸಿಕಲ್ ಮ್ಯೂಸಿಕ್ಕನ್ನೇ ಕೇಳ್ತೀವಿ.. ಕ್ಲಾಸಿಕಲ್ ಮ್ಯೂಸಿಕಲ್ಲನ್ನು ಲವ್ ಮಾಡೋದಕ್ಕೂ ಸಂಸ್ಕಾರಬೇಕು. ಕ್ಲಾಸಿಕಲ್ ಮ್ಯೂಸಿಕಲ್ ಲವ್ ಮಾಡೋದು ಮಾಮೂಲಿ ಮಂದಿಗೆ ಆಗಲ್ಲ.. ಸಿನಿಮ ಹಾಡಲ್ಲಿ ಏನಿರುತ್ತದೆ.. ಅಸಯ್ಯ" ಅಂತ ವರಸೆ ತಗೆದರು. ನನ್ನ ತಮ್ಮ ಮೊದಲಿಂದಲೂ ಬಂಡಾಯಗಾರ.. ನೇರಾನೇರ ಮುಕಕ್ಕೆ ಹೇಳಿ ಹೋಗೋನು.. ಅವನು ಅಲ್ಲಿಂದ ಎದ್ದು ರೂಮಿಗೆ ಹೋದ. ನಾನು ’ಹು’ ಅನ್ನೋದು ನಿಲ್ಲಿಸಿದೆ. ನಮ್ಮ ಅಪ್ಪ "ಲೇ ಇವಳೇ, ಇನ್ನೊಂದು ಸುತ್ತು ಕಾಪಿ ಕೊಡೇ, ತಗೊಳ್ಳಿ ಮಾತಾಡಿ ದಣಿವಾಗಿರಬೇಕು’ ಅಂದು.. ಗಮನವನ್ನ ಕಾಪಿ ಕಡೆ ಸೆಳೆದರು.
ಈಗ ನನಗೆ ಮುಜುಗರ ತಂದಿದ್ದು.. ನಾವು ನಮ್ಮಿಶ್ಟ, ನಾವು ನಮ್ಮ ಇಶ್ಟದ ಸಿನಿಮ ಹಾಡು. ಅವರಂತೆ ’ಕ್ಲಾಸಿಕಲ್ ಸಂಗೀತ ಲವ್ ಮಾಡಕ್ಕೆ ಸಂಸ್ಕಾರ ಬೇಕು’ ಅಂದರೇನು ಅರ್ತ? ಅದನ್ನ ಇಶ್ಟ ಪಡದೋರಿಗೆ ಸಂಸ್ಕಾರ ಇಲ್ವಾ?
ಅದಕ್ಕೇ ಈಗೀಗ ಸಕ್ಕತ್ ಇಂಗಳೀಸು/ಸಂಸ್ಕೃತ ಬಳಸೋರ ಜೊತೆ ’ಕ್ಲಾಸಿಕಲ್ ಮ್ಯೂಸಿಕನ್ನು ಲವ್’ ಮಾಡೋರ’ ಕಂಡರೂ ಹೆದರಿಕೆ ಆಗತ್ತದೆ. ಅವರ ಜತೆ ಮಾತಾಡಕ್ಕೆ ನಮಗೆ ಹಿಂಸರಿಕೆ...
ನಾವು ಮೇಲಾಗದಿದ್ದರೂ ಬೇಡ, ಕೀೞಾಗೋದು ಬೇಡ ಅಲ್ವ!! ![]()

- mahesha ರವರ ಬ್ಲಾಗ್
- Login or register to post comments
- 818 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಮಹೇಶ್ , ಇದು ಕೆಲವರ ಚಾಳಿ , ಲೋಕದಲ್ಲಿ ಇವರು ಪೆಸಲ್ಲಾಗಿ ಹುಟ್ಟಿರುತ್ತಾರೆ , ಏನು ಮಾಡುವುದು ಮನೆಗೆ ಬರುವ ಇಂಥವರನ್ನೂ ಸಹಿಸಿಕೊಳ್ಳಬೇಕಲ್ಲ.
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಈ ಟಿವಿ ಚಾನೆಲ್‌ಗಳಲ್ಲಿ ರಿಯಲ್ಟಿ ಶೊ ಅಂತ ನಡೆಸಿ ಮಕ್ಕಳನ್ನ ಹಿಂಸೆ ಮಾಡೋದನ್ನ ನೋಡಿ ಉತ್ತೇಜಿತರಾದ ಪೋಷಕರು ಈಗ ತಮ್ಮ ಮಕ್ಕಳೂ ಟಿವಿಯಲ್ಲಿ ಬರಲಿ ಅಂಟ ಅವರನ್ನ ಬಲವಂತವಾಗಿ ಕ್ಲಾಸ್‌ಗೆ ದಬ್ಬುತ್ತಾರೆ. ಆ ಮಕ್ಕಳೊ ಗೊಳೊ ಅನ್ಕೊಂಡು ಬರ್ತಾರೆ.
ಅದಿರಲಿ ಇಷ್ಟು ದಿನ ಬರೀ ಕರ್ನಾಟಕ ಸಂಗೀತ ಬೇಕು ಅಂತಿದ್ದೋರು ಹಿಂದೂಸ್ತಾನಿ ಸಂಗೀತಾ ಇಲ್ಲವಾ ಏನು ಮೇಡಮ್ ಅದೊಂದು ಇಂಟ್ರೊಡ್ಯೋಸ್ ಮಾಡಿ ಅಂತ ದುಂಬಾಲು ಬೀಳ್ತಾ ಇದ್ದಾರೆ
ಇನ್ನೂ ನಿಮ್ಮ ಮಗಳಿಗೆ ಸಂಗೀತ ಹೇಳಿಕೊಟ್ಟಿಲ್ಲವಾ ? ನಿಮ್ಮದೇ ಮ್ಯೂಸಿಕ್ ಕ್ಲಾಸ್ ಇಟ್ಕೊಂಡು ಆಂತ ಕೇಳೊರಿಗೇನು ಕಡಿಮೆ ಇಲ್ಲ . ಅವರ ಕಣ್ಣಿಗೆ ಅವಳೇನೋ ಬಹಳ ದೊಡ್ಡವಳಾದ ಹಾಗೆ.
ಬರೀ ಎರೆಡು ವರ್ಷದ ಅವಳಿಗೆ ನಾನೆ ಹಿಂಸೆ ಬೇಡ ಅಂತ ಅವಳಿಷ್ಟದ ಹಾಗೆ ಬಿಟ್ಟಿದ್ದೀನಿ. ಅದಕ್ಕೂ ಆಕ್ಶೇಪ
ಅಯ್ಯೋ ನಮ್ಮ ಮಕ್ಕಳಿಗೆ ಇಂತಹ ಅನುಕೂಲ ಇದ್ದಿದ್ದರೆ ............................
ಒಟ್ಟಿನಲ್ಲಿ ತಾವು ಮೇಲೆ ಅಂತ ತೋರಿಸಿಕೊಳ್ಳೋಕೆ ಒಂದು ಸಂದರ್ಭ ಸಿಕ್ಕರೆ ಸಾಕು ಮಹೇಶ್ ನಮನ್ನ ಕೀಳು ಮಾಡಿಬಿಡ್ತಾರೆ
http://thereda-mana.blogspot.com/
ರೂಪ
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಒಟ್ಟಿನಲ್ಲಿ ತಾವು ಮೇಲೆ ಅಂತ ತೋರಿಸಿಕೊಳ್ಳೋಕೆ ಒಂದು ಸಂದರ್ಭ ಸಿಕ್ಕರೆ ಸಾಕು ಮಹೇಶ್,
ನಮನ್ನ ಕೀಳು ಮಾಡಿಬಿಡ್ತಾರೆ
ಆಂತ ಓದಿಕೊಳ್ಳಿ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಮಹೇಶ್, ಒಂದು ಒಳ್ಳೆ ಐಡಿಯಾ..
ಮನೆ ಮುಂದೆ ’ಸಂಸ್ಕಾರವಂತರಿಗೆ ಪ್ರವೇಶವಿಲ್ಲ’ ಅಂತ ಬೋರ್ಡು ತಗುಲಿಹಾಕಿದರೆ ಹೇಗೆ?
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಸ್ವಲ್ಪ ಅತಿಯಾಗಬಹುದು. ಸಂಸ್ಕಾರ, ಸೃಜನಶೀಲತೆ ಇವೆಲ್ಲ overrated. ಯಾವುದು ಸೃಜನಶೀಲತೆ, ಯಾವುದು ಸಂಸ್ಕಾರ ಎಂಬುದೇ ಗೊತ್ತಿಲ್ಲದೆ (ಇದು ಯಾರಿಗೂ ಗೊತ್ತಿರುವಂತಿಲ್ಲ) ತನ್ನದೇ ಸಂಸ್ಕಾರ, ತನ್ನದೇ ಸೃಜನಶೀಲತೆ ಎಂದುಕೊಂಡಾಗ ಮಹೇಶ ಬರೆದಿರುವ ಸನ್ನಿವೇಶದಲ್ಲಿರುವಂತವರಿಂದ ಅದು ಎದುರಾಗುತ್ತದೆ.
ಎಲ್ಲರಿಂದ ಎಲ್ಲ ಸಮಯ 'ಸಂಸ್ಕಾರ' ನಿರೀಕ್ಷಿಸುವುದೂ ಕಷ್ಟವೇ. ಆ ನಿರೀಕ್ಷೆಯೂ ವ್ಯಕ್ತಿಗನುಗುಣವಾದ ನಿರೀಕ್ಷೆಯಾಗಿರುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಮಾಯ್ಸ,
) ಒಳ್ಳೆದು.
’ಕ್ಲಾಸಿಕಲ್ ಸಂಗೀತ ಲವ್ ಮಾಡಕ್ಕೆ ಸಂಸ್ಕಾರ ಬೇಕು’ ಅನ್ನೋವ್ರನ್ನ ಸ್ವಲ್ಪ ದೂರದಿಂದಲೇ ಮಾತಾಡ್ಸಿ ಕಳ್ಸೋದು ಉತ್ತಮ. ಸಂಗೀತ ಅನ್ನೋದಕ್ಕೆ ದೇಶ,ಭಾಷೆ ಅನ್ನೋದೆಲ್ಲ ಇಲ್ಲ, ಹಂಗೆ ಕ್ಲಾಸಿಕಲ್ಲು ಅದು ಇಂತ differentiate ಮಾಡೋದಿಕ್ಕೆ ಬಳಸ್ಬೋದೆ ಹೊರ್ತು ಅದ್ರಲ್ಲು ನಮ್ಡೇ ಮೇಲು, ಉಳ್ದಿದ್ದು ಕೆಟ್ಟದ್ದು ಅಂತ ಹೇಳೋರಿಗೂ, ಧರ್ಮಾಂದರಿಗೂ (ಇದೂ ಸ್ವಲ್ಪ ಬೇರೆ ತರ ರೇಸಿಸಂ!!!) ಅಂತಾ ವ್ಯತ್ಯಾಸ ಏನೂ ಇಲ್ಲ. ನನಗೆ ಇದು ಇಷ್ಟ, ಅದು ಇಷ್ಟ ಇಲ್ಲ ಅಂದ್ರೆ ಸರಿ, ಅದು ಬಿಟ್ಟು ಕ್ಲಾಸಿಕಲ್ಲೇ ಮೇಲು, ಉಳ್ದಿದ್ದು ಸಂಗೀತಾನೇ ಅಲ್ಲ, ಎಲ್ಲ trash ಅಂತ ಹೇಳಿದ್ರೆ ಆಯ್ತು ಗುರು, ನೇವೇ ದೊಡ್ಡವ್ರು ಅಂತ ನಮ್ಮ ಪಾಡಿಗೆ ನಾವು ಕಳಚ್ಕೊಳೋದು (ನಿನ್ನ ತಮ್ಮನ ತರ
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಗುಱುಱಾಜ
www.kannadaguru.blogspot.com
ಮಾಯ್ಸಣ್ಣಾ
ಚಿ೦ತೆ ಮಾಡಬೇಡಿ. ಇದು ಕೆಲವರ ಚಾಳಿ.ಅವರಿಗೆ ತಾವೇನೋ ಡಿಫರೆ೦ಟು.ತಮ್ಮ೦ಥವರು ಯಾರೂ ಇಲ್ಲ ಎನ್ನುವ ಭಾವನೆ ಇರುತ್ತೆ.ತು೦ಬಾ ಕರ್ಮಠರಲ್ಲಿ ಇರುವ೦ತಹ ಗುಣ ಇದು.ನನಗೆ ಇ೦ಥವರನ್ನು ನೋಡಿದರೆ ಸಿಕ್ಕಾಪಟ್ಟೆ ನಗು ಬರುತ್ತೆ ಮಾರಾಯ್ರೆ.ನಮ್ಮ ತ್೦ದೆಯ ಸ್ನೇಹಿತರೊಬ್ಬರು ಕೂಡಾ ಹೀಗೆ ಇದ್ದಾರೆ.ಅವರು ಯಾವಾಗಲೂ ಹಸಿ ತರಕಾರಿನೇ ತಿನ್ನೊ೦ದ೦ತೆ.ಬೆಳಿಗ್ಗೆ ,ಮಧ್ಯಾಹ್ನ.. ಹೀಗೆ ಎಲ್ಲಾ ಸಮಯಕ್ಕೂ!! ಯಾವಾಗಲೂ ತರಕಾರಿ ಬೇಯಿಸೋದೆ ಇಲ್ಲವ೦ತೆ ಅದೇ ನ್ಯಾಚುರಲ್ಲು ಅದನ್ನು ಅಷ್ಟು ಸುಲಭವಾಗಿ ಹಿ೦ಬಾಲಿಸೊಕ್ಕಾಗಲ್ಲ ಅ೦ತೆಲ್ಲಾ ಅ೦ತಿದ್ರು. ಅಲ್ಲೇ ಕೂತಿದ್ದ ನನ್ನ ನಾಲ್ಕು ವರ್ಷದ ತಮ್ಮನೊಬ್ಬ ಪಾಪ ತನ್ನ ಮುಗ್ದತೆಯಿ೦ದ "ಹೋ ಹೋ ಅದೇನ್ ಕಷ್ಟ, ಹಸುಗಳು ಯಾವಾಗಲೂ ಹಸಿ ತರಕಾರಿನೇ ತಿನ್ನೊದು ನಿಮ್ಮಥರಾ’ ಅ೦ದು ಬಿಡೋದೆ ..?
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಒಳೇ ಉತ್ತರ ಕೊಟ್ತಿದ್ದಾನೆ
ಕೆಲವರಿಗೆ ಮಾರ್ನಿಂಗ್ ವಾಕ್ ಮಾಡುವ ಚಾಳಿ
ಅವರಿಗೆ ಇರಲಿ ಆದರೆ "ಅರೆ ನೀವ್ಯಾಕೆ ವಾಕ್‌ಗೆ ಬರೋದಿಲ್ಲ . ನಂಗಂತೂ ವಾಕ್ ಮಾಡದಿದ್ದರೆ ಊಟಾನೆ ಸೇರಲ್ಲ . " ಅಂತ ಹೇಳಿ ವಾಕ್ ಮಾಡುವುದರ ಪ್ರಯೋಜನಗಳನ್ನ ಹನುಮಂತನ ಬಾಲದಷ್ಟು ಉದ್ದ ಪಟ್ಟಿ ಮಾಡ್ತಾರೆ.
ಅವರವರ ಇಷ್ಟಕ್ಕೆ ಯಾಕೆ ಬಿಡೋದಿಲ್ಲವೋ ಈ ಜನ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಇಲ್ಲಿ ಮೇಲು, ಕೀಳು ಎನ್ನುವುದನ್ನು ಹೆಚ್ಚು ಎಳೆಯುವುದು ಬೇಡವೆನ್ನಿಸುತ್ತೆ.
‘ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರ ಬೇಕು‘ ಅಂತ ನಿಮ್ಮ ಮನೆಗೆ ಬಂದವ್ರೇನೋ ಹೇಳಿದ್ರು ಸರಿ. ಹಾಗೆ ಹೇಳುವುದು ಅವರ ಸಂಸ್ಕಾರ ನಿಜ. ಅವರು ಶಾಸ್ತ್ರೀಯ ಸಂಗೀತದಲ್ಲಿ ಪಾಂಡಿತ್ಯ, ಅಭಿರುಚಿ ಇಟ್ಟುಕೊಂಡಿದ್ದಾರೆ ಸ್ವಾಗತಿಸೋಣ. ಆದರೆ ಅವರ ಆಸಕ್ತಿ ಹಾಗೂ ಅಭಿಮಾನದ ಬಗ್ಗೆ ಹೇಳುವಾಗ ಕೊಂಚ ವ್ಯತ್ಯಾಸವಾಗಿದೆ. ಅವರ ಮಾತಿನ ಧಾಟಿಯಿಂದ ನಿಮಗೆ ಬೇಸರವಾಗಿದೆ.
ಈ ವ್ಯತ್ಯಾಸ ಎಲ್ಲರಲ್ಲೂ ಒಂದೊಂದು ರೀತಿಯಲ್ಲಿ ಇದ್ದೇ ಇರುತ್ತದೆ. ಅದು ನಮ್ಮ ಮನಸ್ಸಿಗೆ ನೋವು ಕೊಡುವ ಹಾಗಿದ್ದರೆ ಅದನ್ನು ಅಲಕ್ಷಿಸೋಣ. ನೀವೇ ಹೇಳಿ ಈಗ ಅವರ ಮಾತಿನ ರೀತಿಯನ್ನು ತಿದ್ದಲಾದೀತೆ? ಅಥವಾ ಇದ್ದಕ್ಕಿದ್ದ ಹಾಗೆ ನೀವು ಫಿಲ್ಮ್ ಮ್ಯೂಸಿಕ್ ಬಿಟ್ಟು ಶಾಸ್ತ್ರೀಯ ಸಂಗೀತ ಕೇಳುವುದು ಸಾಧ್ಯವಾದೀತೆ?
ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಅದು ಬೇರೆ ವಿಷಯ. ಆಯ್ಕೆ ನಿಮ್ಮದು
ಅವರಿರುವ ಪರಿಸರದಲ್ಲಿ ಅವರವರ ಮನೋಸ್ಥಿತಿ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ನಿಲುಕಿದ್ದೇ ಸಂಸ್ಕಾರ.
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಶ್ರೀದೇವಿ ಅವರೇ,
ಸಂಸ್ಕಾರ ಅನ್ನುವದು, ಮಾತು, ಸನ್ನಡತೆಯಲ್ಲಿ ಕಾಣುವಂತದು. ಒಂದು ಬಗೆಯ ಸಂಗೀತ(ಹಾಡುಗಾರಿಕೆ) ಕೇಳುವದರಲ್ಲಿ ಅಲ್ಲ. ದಿಟವಾದ ಹಾಡು ಒಲವಿಗನಿಗೆ, ಎಲ್ಲ ಬಗೆಯ ಹಾಡುಗಳೂ ಮನ ಒಪ್ಪಿಗೆಯಾಗುತ್ತವೆ.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಸಂಗನಗೌಡರೇ,
ಒಂದೇ ಪದಕ್ಕೆ ಹಲವಾರು ಮಗ್ಗಲುಗಳಿರುತ್ತವೆ. ನೀವು ಹೇಳಿದ ಹಾಗೆ ನಡೆ-ನುಡಿಯೂ ಸಂಸ್ಕಾರವೇ... ಕೇಳುವುದು, ಕಲಿಯುವುದು ಈ ಕ್ರಿಯೆಗಳೂ ಕೂಡ ನಾವು ಬೆಳೆದ ಪರಿಸರ, ಅಥವಾ ರೂಢಿಸಿಕೊಂಡ ಸಂಸ್ಕಾರದಿಂದಲೇ ಬಂದಂಥವು... ‘ಗರ್ಭಸಂಸ್ಕಾರ’ ಬಗ್ಗೆ ನಿಮಗೆ ಗೊತ್ತಿರಬಹುದು...
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಹಾಗೆ ನೋಡಿದರೆ ’ಸಂಸ್ಕಾರ’ ಅಂದರೇನೇ ರೂಡಿ ಮಾಡಿಕೊಂಡಿರುವದು ಅಂತ ತಾನೆ. ಅದರಲ್ಲಿ ಒಳ್ಳೆಯದೂ ಇರುತ್ತೆ, ಕೆಟ್ಟದ್ದೂ ಇರುತ್ತೆ. ಇನ್ನು, ಒಳ್ಳೆಯದು, ಕೆಟ್ಟದ್ದು ಅಂಬುದು ಅವರವರ ಅನಿಸಿಕೆ. ರೂಡಿ ಮಾತಲ್ಲಿ ಒಳ್ಳೆಯದನ್ನು ’ರೂಡಿ’ ಮಾಡಿಕೊಂಡವರನ್ನು ’ಸಂಸ್ಕಾರ’ವಂತರು ಅಂತಾರೆ. ಕೆಟ್ಟ ಹಾಡುಗಳು, ಸಿನಿಮಾ ಹಾಡುಗಳಲ್ಲೂ ಇವೆ, ಕ್ಲಾಸಿಕಲ್ ಸಂಗೀತದಲ್ಲೂ ಇವೆ ಅಲ್ಲವೇ? ಸಿನಿಮಾ ಹಾಡುಗಳೆಲ್ಲ ಕೆಟ್ಟ, ಕ್ಲಾಸಿಕಲ್ ಮ್ಯೂಸಿಕ್ ಅಸ್‍ಟೇ ಒಳ್ಳೆಯದು ಅನ್ನುವದು ಸರಿ ಅಲ್ಲ,.. ಇದು ನನ್ನ ಅನಿಸಿಕೆ ಅಸ್‍ಟೇ ಶ್ರೀದೇವಿ ಅವರೇ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಸಂಗನಗೌಡರೇ...
ನಾನೆಲ್ಲಿ ಹೆಳಿದೆ ಸಿನಿಮಾ ಸಂಗೀತ ಕೇಳುವುದು ಕೆಟ್ಟ ಸಂಸ್ಕಾರ ಅಂತ..... ನನ್ನ ಪ್ರತಿಕ್ರಿಯೆಯನ್ನು ತಾವು ಸರಿಯಾಗಿ ಗಮನಿಸಿಲ್ಲ ಎನ್ನಿಸುತ್ತೆ. ಒಂದು ವಿಷಯಕ್ಕೆ ಹಲವಾರು ದೃಷ್ಟಿಕೋನಗಳಿರುತ್ವೆ. ಹಾಗೇ ಸಂಸ್ಕಾರಕ್ಕೂ.... ಕನ್ಫ್ಯೂಸ್ ಮಾಡ್ಕೊಬೇಡಿ. ಶಾಸ್ತ್ರೀಯ ಸಂಗೀತ ಕೇಳುವುದಷ್ಟೇ ಒಳ್ಳೆಯ ಸಂಸ್ಕಾರ ಎಂದು ನಾನು ಹೇಳಿಯೇ ಇಲ್ಲ. ದಯವಿಟ್ಟು ಪ್ರತಿಕ್ರಿಯಿಸುವಾಗ ನಿಧಾನಿಸಿ...
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಈ ನನ್ನ ಅನಿಸಿಕೆಗೆ ಮಿಡಿದು ಅನಿಸಿಕೆ ಬರೆದವರು, ಬರೆಯೋರು ಎಲ್ಲರಿಗೂ ನನ್ನಿ...
ನಾನು ನಿಮಗೆ ಮರುಉಲಿ ಬರೆಯಲ್ಲ.. ಇಂತದ್ದರಿಂದ ನಮ್ಮಂತಹ ನಮ್ಮ ಪಾಡಿಗೆ ತಮ್ಮ ತಮ್ಮ ಮನೆಮಟ ನೋಡಿರುವ ಮನೆಗಳು ಕೀಳರಿಮೆ, ಬೇಸರ ಪಡೋದು ದಿಟ. ಅದನ್ನೆಲ್ಲ ಎಂದಿನಿಂದಲೂ ನುಂಗಿಕೊಂಡು, ಅಂತವರು ಹೋದ ಮೇಲೆ ಕಾಪಿ ಕುಡಿದು ಟೀವಿಯಲ್ಲಿ ಒಂದು ಸಿನಿಮವೋ ಸೀರಿಯಲ್ಲೋ ನೋಡಿ ಮಱೆತು ಬಿಡುವುದನ್ನ ಕಲಿತ್ತಿದ್ದೀವಿ. ಏನು ಮಾಡಣ, ನಾವು ಇರೋದೇ ಹೀಗಲ್ಲ.!!
ಒಂದು ಬಿನ್ನಹ.. ಈ ಎಳೆಯನ್ನ ಓದಿದೊರು ತುಸು ಮಾಮೂಲಿ ಮಂದಿಯನ್ನ ಅವರ ಪಾಡಿಗೆ ಅವರನ್ನ ಬದುಕಲು ಬಿಡಿ.. ಅವರಿಗೆ ದಿಟವಾಗಲೂ ’ಆ ಸಂಸ್ಕಾರ, ಸಂಸ್ಕೃತಿ, ಸಂಸ್ಕೃತ, etc etc’ ಬೇಕಾಗಿಲ್ಲ.. ಅವರಿಗೆ ಉಂಡು, ಮಲಗಿ, ಮಕ್ಕಳಿಗೆ ಓದಿಸಿ, ಕಲಿಸಿ ಮುಂದೆ ತಂದರೇನೇ ಸಾಕಾಗಿದೆ.
=====================================
ಮಾಯ್ಸ!
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಗುಱುಱಾಜ
www.kannadaguru.blogspot.com
ಛೇ...,ಛೇ....ಯಾಕೋ ತು೦ಬಾ ಬೇಜಾರು ಮಾಡ್ಕೊ೦ಡ೦ಗಿದಿರಾ,ಒ೦ದು ವಿಷಯ ಗೊತ್ತಿರಲಿ,ಈ ರೀತಿಯ ಅತೀಯಾಗಿ ಕರ್ಮಠರು ಅನೇಕ ಸ೦ತೋಷಗಳಿ೦ದ ವ೦ಚಿತರಾಗಿರುತ್ತಾರೆ.ಜೀವನವಿಡಿ ತಾನು ಕಾಫಿಯನ್ನೇ ಕುಡಿದಿಲ್ಲ ಎನ್ನುವವನು ಕಾಫಿಯಿ೦ದ ಸಿಗುವ ಸ೦ತೋಷದಿ೦ದ ವ೦ಚಿತನಾಗಿರುತ್ತಾನೆ.ಇನ್ನೂ ತಮ್ಮ ವಿಷಯದಲ್ಲಿ,ಆ ವ್ಯಕ್ತಿ ಸಿನಿಮಾ ಹಾಡುಗಳಿ೦ದ ಸಿಗುವ ಸ೦ತೋಶದಿ೦ದ ವ೦ಚಿತನಾಗಿದ್ದಾನೆ ಅಷ್ಟೇ.ಹಾಗಾಗಿ ಬೇಜಾರು ಮಾಡಿಕೊಳ್ಳಬೇಕಾಗಿರುವುದು ಆ ವ್ಯಕ್ತಿ ನೀವಲ್ಲ
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಗುರುರಾಯ
ಒಂದು ವಿಶರ ’ಕರ್ಮಠ’ ಅನ್ನೋ ಪದದ ಬಳಕೆ ಬೇಡ.. ಕರ್ಮಠರು, ಕರ್ಮಠ ಬ್ರಾಹ್ಮಣ ಎಂಬ ಪಂಗಡ ಇದೆ.. ಅವರು ಬಲು ನೇಮನಿಶ್ಟೆ ಮಾಡುವವರು ಎಂದು ಅದು ಬೇರೆ ಅರಿಕೆಯಲ್ಲಿ ಬಳಕೆಗೆ ಬಂದಿದೆ..
ನಾನು ಆ ಕರ್ಮಠ ಪಂಗಡದೋನೇ!
ಆದರೆ ನನಗೆ ಕರ್ಮಠತನ ಅಂದರೆ ಏನು ಅಂತಾನೇ ಗೊತ್ತಿಲ್ಲ.. ಗಾಳಿ ದೂಡಿದ ಕಡೆ ವಾಲೊನು.! 
=====================================
ಮಾಯ್ಸ!
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಗುಱುಱಾಜ
www.kannadaguru.blogspot.com
ದಯವಿಟ್ಟು ಕ್ಸಮಿಸಿ ,ಮಾಯ್ಸಣ್ಣ, ನಾನು ಕರ್ಮಠ ಎ೦ಬ ಪದ ಪಳಸಿದ್ದು ,’ಅತೀಯಾಗಿ ಯಾವುದನ್ನಾದರೂ ಪಾಲಿಸುವವರು ’ ಎ೦ಬರ್ಥದಲ್ಲಿ .ನನಗೆ ಬ್ರಾಹ್ಮಣರಲ್ಲಿ ಈ ತರಹ ಒ೦ದು ಒಳಜಾತಿ ಇದೆ ಎ೦ದು ತಿಳಿದಿರಲಿಲ್ಲ
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಕ್ಷಮೆ ಗಿಮೆ ಬೇಡ..
ನಿಮಗೆ ಗೊತ್ತಿರಲಿಲ್ಲ ಅಂತ ನನಗೆ ಗೊತ್ತಿತ್ತು.. ಬರಿ FYI
=====================================
ಮಾಯ್ಸ!
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಮಹೇಶ್-
"ಲೇ ಇವಳೇ, ಇನ್ನೊಂದು ಸುತ್ತು ಕಾಪಿ ಕೊಡೇ, ತಗೊಳ್ಳಿ ಮಾತಾಡಿ ದಣಿವಾಗಿರಬೇಕು’ ಅಂದ ನಿಮ್ಮಪ್ಪನಿಂದ ತುಂಬಾ ಕಲಿಯೋದಿದೆ ನೀವು
ನನಗಂತೂ ಸಕತ್ ನಗುಬಂತು.
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ನೀರೂ ಕೊಡಬಹುದು. ಕಾಫಿ ರೆಡಿಯಾಗುವ ತನಕ ಕಾಯುವುದು ಬೇಕಾಗುವುದಿಲ್ಲ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಅದು ನನಗೂ ಗೊತ್ತು...
ಆದರೆ ನನ್ನಪ್ಪ ವ್ಯಾಪಾರಿಗಳು ನಾನು ಇಂಜಿನಿಯರ್ ಅದಕ್ಕೆ ನಮಗೆ ನಮ್ಮ ಕೆಲಸದ ಗುಣಗಳು ಬಂದಿವೆ.!
=====================================
ಮಾಯ್ಸ!
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಮಾತನಾಡಲು ಸಂಸ್ಕಾರ ಬೇಕೆ ವಿನಃ , ಸಂಗೀತ ಇಷ್ಟಪಡುವುದಕ್ಕಲ್ಲ. ಸಂಸ್ಕಾರ ಇರುವವರು ಹೀಗೆ ಮಾತನಾಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಸಂಸ್ಕಾರ ಇರುವವರೆಲ್ಲರೂ ಸಂಗೀತವನ್ನು ಕೇಳಬೇಕೆಂದಿಲ್ಲ & vice versa. ಸಂಸ್ಕಾರ ತೋರುವುದು ಅವರ ನಡೆ ನುಡಿಗಳಲ್ಲಿ.
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಸಂಸ್ಕಾರ ಎಂದಕೂಡಲೇ ಯು.ಆರ್.ಅನಂತಮೂರ್ತಿಯವರ "ಸಂಸ್ಕಾರ" ಪುಸ್ತಕ ಓದಿ ಬೇಸ್ತು ಬಿದ್ದದ್ದು ನೆನಪಾಗುತ್ತದೆ.
. ಕೊನೆಯ ಪುಟದವರೆಗೂ ಸಂಸ್ಕಾರ ಎಂದರೆ ಮರಣಿಸಿದವರಿಗೆ ಮಾಡುವ ಸಂಸ್ಕಾರ ಎಂದು ಎಲ್ಲೆಲ್ಲೂ ಗೊತ್ತೇ ಆಗಲಿಲ್ಲ
. ಆಮೇಲೆ ಅದು ಕಥೆ ಎಂದು ಗೊತ್ತಾಗಲೂ ಬಹಳ ಸಮಯ ಹಿಡಿಯಿತು. ಈಗಲೂ ಸಂಸ್ಕಾರ ಎಂದರೆ ಏನೆಂದು ಅರ್ಥ ಮಾಡಿಕೊಳ್ಳಲು ’ಹೆಣ’ಗಾಡುತ್ತೇನೆ
ಸಂಸ್ಕಾರ ಎಂದರೆ ರೀತಿ ನೀತಿ ನಡತೆ ನಿಯಮ ಅಂತೆಲ್ಲಾ ಅಂದುಕೊಂಡು "ಸಂಸ್ಕಾರ" ಓದಲು ಶುರುಹಚ್ಚಿಕೊಂಡಿದ್ದೆ. ಮೊದಮೊದಲು ಏನೇನೂ ಅರ್ಥವಾಗುತ್ತಿರಲಿಲ್ಲ. ನಾನು ಅಂದುಕೊಂಡಿದ್ದೇ ಒಂದು, ಅದು ಇದ್ದದ್ದೇ ಒಂದು
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"