ಕನ್ನಡದೇಶವನ್ನು ಅತಿಹೆಚ್ಚು ಕಾಲ ಆಳಿದ ಅರಸತನ ಯಾವುದು?
ಕನ್ನಡದೇಶವನ್ನು ಅತಿಹೆಚ್ಚು ಕಾಲ ಆಳಿದ ಅರಸತನ ಒಡೆಯರದು. ಇವರು ಮೈಸೂರು ರಾಷ್ಟ್ರವನ್ನು ಆಳಿದವರು.
ಈ ಅರಸತನವು ೧೩ನೇ ಶತಮಾನದಿಂದ ಭಾರತವು ಸ್ವತಂತ್ರವಾಗುವ ತನಕ ಸುಮಾರು ೬೦೦ ವರುಸಕ್ಕಿಂತ ಹೆಚ್ಚು ಕಾಲ ಕನ್ನಡದೇಶವನ್ನು ಆಳಿದೆ.
ಇವರು ಚಾಲುಕ್ಯ, ವಿಜಯನಗರದವರಂತೆ ಹೆಚ್ಚು ಬಲಶಾಲಿಗಳು ಆಗಿರಲಿಲ್ಲವೆಂದು ತೋರುತ್ತದೆ. ಇವರ ಆಸ್ಥಾನದಿಂದ ಕನ್ನಡ ಸಾಹಿತ್ಯಕ್ಕೆ ಪ್ರಸಿದ್ಧರಾದ ಕವಿಗಳೂ, ಕೃತಿಗಳೂ ಹೆಚ್ಚಿನವು ಕಾಣಸಿಗುವುದಿಲ್ಲ. ಇವರು 'ಎಮ್ಮೆ'ನಾಡನ್ನು ನೆಮ್ಮದಿಯಿಂದ ಆಳಿದವರು.
ಇನ್ನು ಇವರು ಆಳಿದ ಮೈಸೂರು ಕೂಡ ಅತಿ ಅತಿ ಹಳೆಯದಾದ ಪ್ರದೇಶ.
'ಮಹಿಷ ಮಂಡಲ'ದ ಉಲ್ಲೇಖ ಪುರಾಣಗಳಲ್ಲಿ ಇವೆಯಂತೆ. ತಮಿಳಿನ BC ಕಾಲದ ಶಿಲ್ಪಧಿಕಾರಂ ಅಲ್ಲಿ ಕೂಡ ಮೈಸೂರನ್ನು "ಎರ್ಮೆನಾಡು" ಎಂದು ಕರೆಯಲಾಗಿದೆಯಂತೆ. ಹೆಸರಿಗೆ ತಕ್ಕಂತೆ ಇಲ್ಲಿ ಎಮ್ಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ.
ಮೈಸೂರು ಪ್ರದೇಶದಲ್ಲಿ ಎಂದೆಂದೂ ಆಡಳಿತ ಭಾಷೆ, ಕನ್ಡಡವೇ ಎಂದು ಆಗಿತ್ತು, ಆಗಿದೆ. ಇದು ಬೇರೆ ಭಾಷೆಯ ಅಡಿಯಲ್ಲಿ ಇದ್ದುದ್ದೇ ಇಲ್ಲ. ಟಿಪ್ಪು ಕೂಡ ಪಾರಸಿಯ ಜೊತೆ ಕನ್ನಡದಲ್ಲಿ ಆಳಿದನು.
ಈ ಪ್ರಸಿದ್ಧವಾದ ಎಮ್ಮೆನಾಡಿನ ಭಾಗವಾಗಿ ಕನ್ನಡಿಗರ ಹೆಮ್ಮೆಯ ಪಟ್ಟಣವಾದ ಬೆಂಗಳೂರು ಯಾವಗಲೂ ಇತ್ತು, ಇದೆ. ![]()

- mahesha ರವರ ಬ್ಲಾಗ್
- Login or register to post comments
- 910 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ತಮಿಳಿನ BC ಕಾಲದ ಶಿಲ್ಪಧಿಕಾರಂ??
ಯಾರ್ ಹೇಳಿದ್ದು ಅದು ಬಿ.ಸಿ ಕಾಲದ್ದು ಅಂತ. ನುಡಿ ತಿಳಿದ(ಭಾಷಾ ತಜ್ಞ)ವರಾರೂ ಅದನ್ನು ಕ್ರಿ.ಶ ಒಂದನೇ ಶತಮಾನಕ್ಕೂ ಹಿಂದಿನದೆಂದು ಹೇಳಿಲ್ಲ.
ಅಂತ ಕಾಲ್ಡವೆಲ್ ಮಹಾಶಯನೇ ಅದನ್ನು ಎಂಟರಿಂದ ಒಂಬತ್ತನೇ ಶತಮಾನದ್ದೆಂದಿರುವುದು. 'ತಮಿಳು ತಲೆಗಳ ನಡುವೆ' ನೋಡಿ.
Re: ತಮಿಳಿನ BC ಕಾಲದ ಶಿಲ್ಪಧಿಕಾರಂ??
ತುೞಿಲ್
"ತಮಿಳು ತಲೆಗಳ ನಡುವೆ" ಹಾಗಿರಲಿ. ಅವರು ಅದನ್ನು ೧೦ನೇ ಶತಮಾನ ಅಂತ ಹೇಳ್ತಾರೆ ಅಲ್ವಾ?
ಅದು ಒಂದನೇ ಶತಮಾನ AD ಅಂತವೇ ಇರಲಿ. ಅದು 5AD ಅಂತವೂ ಇದೆ!!
ಅದರೇ ಇಲ್ಲಿ ನೋಡಿ ಸ್ವಾಮಿ...
http://en.wikipedia.org/wiki/Cilappatikaram ಅಲ್ಲಿ ಐದು BCE.
ನೀವು 1AD, ಅವರು 5BC, ಇನ್ನು ಯಾರನ್ನು ನಂಬೋಣ. ಅದಕ್ಕೆ BC ಅಂತ ಅಂದು ಸುಮ್ಮನಾದೆ. ಇದಕ್ಕೆ ಇಳಂಗೂ ಅಡಿಗಳೇ ಬಂದು ಹೇಳಬೇಕು.
ಅದು BCಯೋ ADಯೋ, ಒಟ್ಟಿನಲ್ಲಿ ಹಳೆಯದು. ನಮ್ಮ ಹೆಮ್ಮೆಯ ’ಎಮ್ಮೆನಾಡು’ ಆಗಲೂ ಇತ್ತು ಈಗಲೂ ಇದೆ
.

======
Re: ತಮಿಳಿನ BC ಕಾಲದ ಶಿಲ್ಪಧಿಕಾರಂ??
ಇಲ್ಲ . ನೀವು ತಪ್ಪಾಗಿ ಓದಿದ್ದೀರ. ವಿಕಿಪೀಡಿಯಾದಲ್ಲಿ ೫ CE ಎಂದಿದೆ. BCE ಅಲ್ಲ .
ಆದರೆ ಎಮ್ಮೆ ನಾಡು ಇದ್ದೇ ಇತ್ತು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
CE ಅಂದರೆ AD
ಅಯ್ಯೋ ಕಡವಳ!!
ನೀವು ಸರಿ..
ನನ್ನಿ ಸಿರಿನಿಧಿ!
"ಸಿರಿಗನ್ನಡ ಬಾಳ್ಗೆ" ಅಂತ ಬರೆದಿರಲ್ಲ. ನಾನು ಬಾಳ್‌ಗೆ ನಿ’ಗಂಟು’ ಹುಡುಕಿದೆ.
ಅಲ್ಲಿ

Ka. bāḷ(ಬಾಳ್) knife, sword ಅಂತ ಬಂತು. ಸಿರಿಗನ್ನಡಂ ಬಾಳ್ಗಾ?
Ka. bār̤, bār̤u( ಬಾೞು) to live, be alive ಅಂತ ಬಂತು.
ಒಟ್ಟಿನಲ್ಲಿ "ಸಿರಿಗನ್ನಡ ಬಾೞ್ಗೆ" ಅಂತ!
ತಮಿಳಲ್ಲು ಇದೇ ಬಗೆಯಲ್ಲಿ "ತಮಿೞ್ ವಾೞ್ಕೈ" ಅಂತ ಇದೆ! ಅದೇನೇ ಇರಲಿ...
"ಸಿರಿಕನ್ನಡಂ ಆಳ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾೞ್ಗೆ" - ಬೀ.ಎಂ.ಶ್ರೀಕಂಠಯ್ಯ

======
Re: CE ಅಂದರೆ AD
1. ೞ್ ಅಕ್ಷರದ ಉಪಯೋಗ ನಿಲ್ಲಿಸಿ ಬಹಳ ವರ್ಷಗಳೇ ಆಗಿವೆ. 18ನೇ ಶತಮಾನ ಎಂದು ಅಂದಾಜು[1]. ೞ್ ಅಕ್ಷರಡ ಬಡಲಿಗೆ ಳ್ ಉಪಯೋಗ ಮಾಡಲಾಗುತ್ತಿದೆ. ಆದ್ದರಿಂದ ಬಾಳ್ಗೆ ಸರಿಯಾದ ಪ್ರಯೋಗ. ಇದು ನಿಮಗೂ ತಿಳಿದಿದ್ದೇ.
2. ಬಾಳು ಎಂದರೆ ಜೀವನ ಎಂಬ ಉಪಯೋಗ ಇದೆ. [2]
3. ಬಿ.ಎಂ.ಶ್ರೀ ಅವರ ಒಂದು ಕವನದಲ್ಲೂ ಹೀಗೇ ಇದೆ [3]
ನಿ"ಘಂಟು" ಹಳೆಯದು ಅಷ್ಟೆ. ನಿಘಂಟಿನಲ್ಲಿರುವ ಶಬ್ಡಕ್ಕಿಂತ ನಾಲಿಗೆಯಲ್ಲಿರುವ ಶಬ್ಡ ಮೇಲು. ತಾನೆ??
1. http://en.wikipedia.org/wiki/Kannada_language#_ref-kannada_literature_0
2. http://www.kannadasaahithya.com/uniarc/index.php?layout=main&cslot_1=328
3. http://sampada.net/node/622
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡ ಬಾೞ್ಗೆ
ೞ ಹೋಗಿ ಶಾನೆ ವರುಸಗಳು ಆಗಿವೆ.
ಆದರೆ "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" ಎನ್ನುವುದೇ ಹೞಗನ್ನಡ ಶೈಲಿಯಲ್ಲಿರುವ ಮಾತು. ಹಳಗನ್ನಡ ಶೈಲಿಯಲ್ಲಿ ಹಳಗನ್ನಡದ ಅಕ್ಕರ!!
ಹೊಸಗನ್ನಡದಲ್ಲಿ "ಸಿರಿಗನ್ನಡವು ಗೆಲ್ಲಕ್ಕೆ, ಸಿರಿಗನ್ನಡವು ಬಾಳಕ್ಕೆ" ಎಂದು ಹೇಳಿಕೋಬೋದು. ಅಲ್ವಾ?
ಸರಿ ಇರಲಿ ಬಿಡಿ... ಇವೊತ್ತು ಬಾಳ್ ಮತ್ತು ಬಾೞ್ ನಡುವೆ ಬೇರೆತನ ಹೆಚ್ಚು ಮಂದಿ ಗೊತ್ತಿಲ್ಲ.
ಸೋ, "ಬಾಳು" ಅಂದರೆ ಬದುಕು.
.
"ಬಾಳ್ ಅಂದರೆ ಕತ್ತಿ" ಇದು ಪರಮಾತ್ಮನ ಪಾದ ಸೇರಿತು. ಕನ್ನಡದ ಒಂದು ಪದದ ಸಾವಿಗೆ ನನ್ನ ಶ್ರದ್ಧಾಂಜಲಿ
======

ದನಿಗೂಡು: ಸಿರಿಗನ್ನಡ ಬಾೞ್ಗೆ
ಈ ಮಾತು ತುಂಬಾ ಇಷ್ಟವಾಯಿತು. ಹಳಗನ್ನಡದ ವಾಕ್ಯಕ್ಕೆ ಹಳಗನ್ನಡದ ಅಕ್ಷರ. ಇದು ಒಪ್ಪತಕ್ಕ ಮಾತು. ನಾನು ಇನ್ನು ಮುಂದೆ ಇದನ್ನು ಬಳಸುವಾಗ ಬಾೞ್ಗೆ ಎಂತಲೇ ಬಳಸುತ್ತೇನೆ. ಏಕೆಂದರೆ ಬಾಳ್ಗೆ ಎಂದರೆ ಚಾಕುವಿಗೆ, ಕತ್ತಿಗೆ. ಸಿರಿಗನ್ನಡವು ನಮ್ಮ ಅರೆಮರಿಕೆ ಮತ್ತು ಅಱಿ(ರಿ)ಯಮಿಕೆ ಎಂಬ ಕತ್ತಿ, ಚಾಕುಗಳಿಗೆ ಆಹುತಿಯಾಗುವುದು ಬೇಡ.
ಕನ್ನಡದ ಕರುಳ ಬಳ್ಳಿಯನ್ನು ನಾವುಗಳೇ ಕತ್ತರಿಸುವುದು ಯಾವ ಜನ್ಮಕ್ಕೂ ಬೇಡ. ಅದೇನೋ ಗೊತ್ತಿಲ್ಲ ಈ ಱ ಮತ್ತು ೞ ಅಕ್ಷರಗಳಲ್ಲಿ ಏನೋ ಮೋಡಿಯಿದೆ. ಅದರಲ್ಲೂ ೞ ನನಗೆ ತುಂಬಾ ಸುಂದರವಾಗಿ ಕಾಣುತ್ತದೆ
.
ಈ ಱ ಮತ್ತು ೞ ಗಳನ್ನು ಬಳಸುವ ಆಯ್ಕೆಯನ್ನು ಲೇಖಕನಿಗೇ ಬಿಟ್ಟರೆ ಹೇಗೆ ? ಹಾಗೆಯೇ ಹೊಸಗನ್ನಡದಲ್ಲಿ ಬರೆಯುವಾಗ ಯಾವುದು ಸುಲಭವೆನಿಸುವದೋ ಅದನ್ನೇ ಬಳಸೋಣ ಏನಂತೀರಾ ?
ಱ ಮತ್ತು ೞ ಟೈಪಿಸುವ್ದುದು ಹೇಗೆ?
ಇದನ್ನು ಟೈಪಿಸಲು ಹೇಳಿಕೊಡಿ ಪ್ಲೀಸ್!
Re: ಱ ಮತ್ತು ೞ ಟೈಪಿಸುವ್ದುದು ಹೇಗೆ?
ಱ ಮತ್ತು ೞ ಟೈಪಿಸುವ್ದುದು ಹೇಗೆ?
ಇದು ಹೇಗೆ ಟೈಪಿದಿರಿ?
ಇರಲಿ..
KGP keyboard ಅಲ್ಲಿ,
ಱ = rX
ೞ = LX
ೠ = RX
======

Re: ಱ ಮತ್ತು ೞ ಕನ್ನಡ ಯುನಿಕೋಡ್ ಕೀಲಿಮಣೆಯಲ್ಲಿ ಟೈಪಿಸಲು ಸಹಾಯ ಮಾಡಿ!
Quote:
>>ಱ ಮತ್ತು ೞ ಟೈಪಿಸುವ್ದುದು ಹೇಗೆ?
>>ಇದು ಹೇಗೆ ಟೈಪಿದಿರಿ?
cut & paste ಮಾಡಿದ್ದೆ!
ಱ, ೞ,ೠಗೆ ಋಣಿ!
Re: ಱ ಮತ್ತು ೞ ಟೈಪಿಕೆ
ಱ, ೞ,ೠಗೆ ಋಣಿ!
ಪರವಾಗಿಲ್ಲ. ನಿಮ್ಮನ್ನು ನಾನು 'ಋಣ'ದಿಂದ ಬಿಡಿಸಿದ್ದೇನೆ.
ನೆಮ್ಮದಿಯಿಂದಿರಿ
ಱ ಮತ್ತು ೞ ಕನ್ನಡ ಯುನಿಕೋಡ್ ಕೀಲಿಮಣೆಯಲ್ಲಿ ಟೈಪಿಸಲು ಸಹಾಯ ಮಾಡಿ
[/quote
ಅದು ಸರಿ...
ನೀವು ಯಾರ ಕೈಲಿ ಟೈಪಿಸುವುದು?
======

Re: ಟೈಪುವುದು,ಟೈಪಿಸುವುದು,ಟೈಪಿಕೆ,
ನಾನೇ ಕೀ.ಮ. ಒತ್ತಿದರೆ ಟೈಪುವುದು
ಬೇರೆಯವರಿಂದ ಟೈಪಿಸುವುದು
ಇನ್ನು ಟೈಪಿಕೆ ಹೇಗೆ?
ಟೈಪಿಕೆ, ಟೈಪಾಟ, ಟೈಪಣಿ, ಟೈಪುವೆ, ಟೈಪುಮೆ
ನಾನೇ ಕೀ.ಮ. ಒತ್ತಿದರೆ ಟೈಪುವುದು
ಬೇರೆಯವರಿಂದ ಟೈಪಿಸುವುದು
ಅದೇನಪ್ಪ!! ನೀವು "ಟೈಪಿಸಲು" ಅಂದಿರಲ್ಲ, ಯಾರಿಂದ ಅಂತ ಕೇಳಿದೆ?
ಇನ್ನು ಟೈಪಿಕೆ ಹೇಗೆ?
ಕಾಣು => ಕಾಣಿಕೆ
ಹೇಳು => ಹೇಳಿಕೆ
ತೋರು => ತೋರಿಕೆ
ಹಾಗೆ
ಟೈಪು => ಟೈಪಿಕೆ.
ಹಾಗೆ ಟೈಪಾಟಿಕೆ, ಟೈಪಾಟ, ಟೈಪಣಿ, ಟೈಪುವೆ, ಟೈಪುಮೆ ಇನ್ನು ಬೇಕಾದ ಹಂಗೆ typing(noun)ಗೆ ಒರೆ ಮಾಡಬಹುದು.
======

ಉ: ಸಿರಿಗನ್ನಡ ಬಾೞ್ಗೆ
-------------
"ಹೊಸಗನ್ನಡದಲ್ಲಿ "ಸಿರಿಗನ್ನಡವು ಗೆಲ್ಲಕ್ಕೆ, ಸಿರಿಗನ್ನಡವು ಬಾಳಕ್ಕೆ" ಎಂದು ಹೇಳಿಕೋಬೋದು. ಅಲ್ವಾ?"
--------------
ಗೆಲ್ಗೆ, ಬಾಳ್ಗೆ ಅಂದರೆ ಗೆಲ್ಲಕ್ಕೆ, ಬಾಳಕ್ಕೆ ಅಂತನಾ? ಹಳೆಗನ್ನಡದಲ್ಲಿ ಇವು ಗೆಲ್ಲಲಿ, ಬಾಳಲಿ ಅನ್ನುವ ಅರ್ಥ ಕೊಡುತ್ವೆ ಅಂತ ಸ್ಕೂಲಲ್ಲಿ ಓದಿದ್ದು ನೆನಪು.
ಆಗ್ಗೆ = ಆಗಲಿ?
ಮಾಳ್ಗೆ = ಮಾಡಲಿ?
ಆಳ್ಗೆ = ಆಳಲಿ?
ಗೊತ್ತಿದ್ರೆ ಹೇಳಿ.
ಉ: ಸಿರಿಗನ್ನಡ ಬಾೞ್ಗೆ
ಅಯ್ಯೋ ಹೌದಲ್ಲ!! ನನಗೆ ಹೊಳೆದೇ ಇರಲಿಲ್ಲ..
ಈಗೆ = ಕೊಡಲಿ.
ಕರಿಗಪ್ಪೆ,
ಅಕ್ಕುಂ = ಆಗುವುದು ಹೀಗೆ.. ನಂಗೆ ಕೆಲವು ಒರೆಗಳು ಬೇಕು
ಹೋಗುವುದು = ? / ಪೋಗುಂ?
ನೋಡುವುದು = ? ಮೋಡುಗುಂ?
ಶಂಕರಭಟ್ಟರ ಹಳೆಗನ್ನಡ ವ್ಯಾಕರಣ ಓದಿಲ್ಲ. ಈ ವಾರ ಹೋಗಿ ಓದ್ತೀನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
Re: ಕನ್ನಡದೇಶವನ್ನು ಅತಿಹೆಚ್ಚು ಕಾಲ ಆಳಿದ ಅರಸತನ ಯಾವುದು?
ಪಾಪ, ತಮಿಳಿನಲ್ಲಾದರೆ ಅಕ್ಷರಗಳಕೊರತೆ ಇದ್ದು, ಕನ್ನಡ ಪದಗಳನ್ನು ತಮಿಳು ಲಿಪಿಯಲ್ಲಿ ಸರಿಯಾಗಿ ಬರೆಯಲು ಆಗದು. ಆ ತೊಂದರೆ ಕನ್ನಡಕ್ಕಿಲ್ಲವಲ್ಲ ಸಧ್ಯ!
ಹಾಗಾದರೆ, ಇದನ್ನು ಸರಿಯಾಗಿ ಸಿಲಪ್ಪದಿಗಾರಂ/ಸಿಲಪ್ಪದಿಕಾರಂ ಎಂದು ಬರೆಯೋಣವೇ
?
-ಹಂಸಾನಂದಿ
ಸಿಲಪ್ಪದಿಕಾರಂ ಜತೆಯದು - ಒಂದು ಅನುವಾದ
ಎಷ್ಟು ಹಳೇದಾದರೇನು ಇವತ್ತೂ ಅನುಭವಿಸಬಹುದಲ್ಲ ಅಂತ- ಎ.ಕೆ.ರಾಮಾನುಜಂರ ಇಂಗ್ಲೀಷ್ ಭಾಷಾಂತರದಿಂದ ಅನುವಾದಿಸಿಕೊಂಡದ್ದು.
ಅವಳು ಗೆಳತಿಗೆ ಹೇಳಿದ್ದು:
ಭೂಮಿಗಿಂತ ಹಳೆಯದಾದ ಕಡಲು ತೊಳೆವ ಮರಳಿನಲ್ಲಿ-
ಹಕ್ಕಿ-ಕೂಗು ತುಂಬಿಹೋದ ತೋಪಿನಲ್ಲಿ-
ಗೊಂಚಲಹೂ ಹೊನ್ನೆ ಮರದ ನೆರಳಿನಡಿಯ ದಂಡೆಯಲ್ಲಿ-
ನಾವು ಪ್ರೀತಿ ಮಾಡಿದಾಗ-
ಅವನೇ ನನ್ನ ಕಣ್ಣ ತುಂಬ
ಅವನೇ ನನ್ನ ಕಿವಿಯ ತುಂಬ
ಅಪ್ಪಿದಾಗ ಸುಂದರವದು ನನ್ನ ತೋಳು
ಬಿಡಿಸಿಕೊಳ್ಳುವಾಗ ಮಾತ್ರ ಸಣ್ಣಗಾಯಿತು.
ಹೇಗೆ ಇದನು ಬಗೆಯಲೆ?
-Venmanipputi, Kuruntokai 299
Re: ಸಿಲಪ್ಪದಿಕಾರಂ ಜತೆಯದು - ಒಂದು ಅನುವಾದ
ಅನಿವಾಸಿನ್,
ಇದನ್ನು ಯಾರು ಕನ್ನಡಕ್ಕೆ ತರ್ಜುಮೆ ಮಾಡಿಲ್ಲವೇ? ಹುಡುಕುತ್ತಿದ್ದೇನೆ.
ಇದು ಹಿಂದಿಯಲ್ಲಿ 'ದೂದ' ದಲ್ಲಿ ಬರುತ್ತಿತ್ತು.
"ಕಣ್ಣಗೀ, ಕೋವಲನ್, ಮಾದವಿ, ಮಣಿಮೇಗಳೈ" ಅಂತ ಹಾಡು ಅಲ್ವಾ?

======
Re: ಸಿಲಪ್ಪದಿಕಾರಂ ಜತೆಯದು - ಒಂದು ಅನುವಾದ
ಇದರ ಬೇರೆ ತರ್ಜುಮೆ ನನಗೆ ಗೊತ್ತಿಲ್ಲ. (ನನ್ನದಂತೂ ಇಲ್ಲಿದೆ
)
ಹಿಂದಿಯ 'ದೂದ' ಎಂದರೆ ಏನದು? ಪತ್ರಿಕೆಯೆ?
(ಅನಿವಾಸಿನ್!?)
Re: ಸಿಲಪ್ಪದಿಕಾರಂ ಜತೆಯದು - ಒಂದು ಅನುವಾದ
ಸಾಹೇಬರೇ,
ದೂದ = ದೂರದರ್ಶನ(DD)
'ಅನಿವಾಸಿ' ಇದು ಸಂಸ್ಕೃತದ 'ಅನಿವಾಸಿನ್' ಶಬ್ದದ ಒಂದು ರೂಪ.
ಪ್ರಥಮಾ : ರಾಮಃ ರಾಮೌ ರಾಮಾಃ
ಸಂಭೋದನಾ: ಭೋ ರಾಮ, ಹೇ ರಾಮೌ, ರೇ ರಾಮಾಃ
ಇಲ್ಲಿ ಭೋ, ಹೇ, ರೇ optional.
ಇರುವಂತೆ,
ಪ್ರಥಮಾ : ಅನಿವಾಸೀ, ಅನಿವಾಸಿನೌ, ಅನಿವಾಸಿನಃ
ಸಂಭೋದನಾ : ಭೋ ಅನಿವಾಸಿನ್, ಹೇ ಅನಿವಾಸಿನೌ, ರೇ ಅನಿವಾಸಿನಃ
ಹಿಂದಿನ 'ಹೊಳ್ಳಿ' ಯಲ್ಲಿ, "ಅನಿವಾಸಿನ್" ಎಂದು ಸಂಭೋದಸಿದೆ..
ಇದೇ ಬಗೆಯಲ್ಲಿ "ಹೇ ರಾಜನ್, ಸ್ವಾಮಿನ್" ಮುಂತಾದ ಸಂಭೋದನೆಗಳೂ ಇವೆ.
ಸೊಲುಪ ತಲೆಹರಟೆ ಜಾಸ್ತಿ ಆಯ್ತಾ?

======
Re: ಸಿಲಪ್ಪದಿಕಾರಂ ಜತೆಯದು - ಒಂದು ಅನುವಾದ
ಹಾಗಾ! ಇದ್ದಕ್ಕಿದ್ದ ಹಾಗೆ ಸಂಸ್ಕೃತಕ್ಕೆ ನೆಗೆದು ಬಿಟ್ಟಿರಾ?
ಅಂದಹಾಗೆ ಸಂಭೋದನಾ ಅಲ್ಲ-- ಸಂಬೋಧನಾ ಅಲ್ಲವೆ?
ಸಂಭೋದನಾ ಅಲ್ಲ-- ಸಂಬೋಧನಾ ಅಲ್ಲವೆ?
ಅಯ್ಯೊ.. ಇದು ನನಗೂ ಗೊಂದಲ.
ನಾನು ನನ್ನ ಗೆಳೆಯನನ್ನು ಹೇಳಿದೆ ಆತ "ಸಂಭೋದ" ಸರಿ ಅಂದ.( mostly ಅವನಿಗೆ ಇದು 'ಸಂಭೋಗ'ದ ನಂಟು ಪದವಿರಬೇಕು ಎಂದು ಅನ್ನಿಸಿರಬಹುದು
).
ಸರಿ ಇರಲಿ..."ಸೊಲ್ಪ adjust ಮಾಡಿ"
ಈ ಸಂಸ್ಕೃತದ ಮಹಾಆಆಆಪ್ರಾಣಗಳು, ನನ್ನ ಪ್ರಾಣ ಹಿಂಡುತ್ತವೆ.

======
Re: ಸಂಭೋದನಾ ಅಲ್ಲ-- ಸಂಬೋಧನಾ
ನಿಘಂಟು ಹೀಗೆ ಹೇಳುತ್ತೆ...
ಸಂಬೋಧನಾ----------------------------------------------------------------------------
1. miss (ನಾ) 1) (Miss) ಕನ್ಯೆ, ಕುಮಾರಿ, ಮದುವೆಯಾಗದಿರುವ ಹೆಂಗಸು 2) ಗರ್ಭಪಾತ, ಗರ್ಭಸ್ರಾವ 3) ಗುರಿ ತಪ್ಪುವಿಕೆ, ವೈಫಲ್ಯ, ಸೋಲು 4) (Miss) (ಉಪಾಧ್ಯಾಯಿನಿಯನ್ನು ಕುರಿತ) ಸಂಬೋಧನಾ ಶಬ್ದಹುಡುಕು ಪದ: ಸಂಭೋದನಾ
ಸಂಭೋದನಾ
--------------------------------------------------------------------------------
ಯಾವುದೇ ಫಲಿತಾಂಶಗಳಿಲ್ಲ
ಸಂಬೋಧನಾ
Cologne Digital Sanskrit Lexicon: Search Results
1 sambodham. perfect knowledge or understanding MBh. Hariv. (sometimes w.r. for %{saMrodha}).
2 sambodhana mfn. (partly fr. Caus.) awaking , arousing MBh. ; perceiving , noticing , observing MBh. ; recognizing MaitrUp. ; the act of causing to know , reminding MBh. Hariv. ; calling to Pa1n2. 2-3 , 47 ; the vocative case or its termination Siddh. Subh.
ಸೋ,
ಅನಿವಾಸಿನರು ಹೇಳಿದುದು ಸರಿ. ಸಮ್‌ಬೋಧನೆ ಕರಕ್ಟು.
ಅಶೋಕ ಕುಮಾರರು ಯಾವ 'ಗಂಟು' ನೋಡಿದುದು.. ಬಲು ಚೆನ್ನಾಗಿರುವ ಅರ್ಥಗಳನ್ನು ದಯಪಾಲಿಸಿದೆ ಅದು
======

ಯಾವ (ನಿ)ಘಂಟು?ವೆಂಕಟಸುಬ್ಬಯ್ಯನವರ ಪ್ರಿಸ್ಮಂ ನಿಘಂಟು
ನಾನು ನೋಡಿದ್ದು ಪ್ರಿಸಮ್ (ನಿ)ಘಂಟು!
"ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ"ವರೆಗೂ
ತಮಿಳಲ್ಲಿ ಅಕ್ಕರಕೊರತೆಯಿಂದ ಏನು ತೊಂದರೆ ಇಲ್ಲ.
ಇಂಗ್ಲೀಷಲ್ಲೂ ಅಕ್ಕರಗಳ ಕೊರತೆ ಇದೆ, ಅದರಿಂದ ಇಂಗ್ಲೀಷಿಗೆ ಏನು ಕುತ್ತು?
ಅಕ್ಕರಗಳು ಕಡಮೆ ಇದೆ ಅಂತ ಆ ನುಡಿ ಸಣ್ಣಗಾಗುವುದಿಲ್ಲ. !!!
ತಮಿಳರು ಬರೆಯುವುದು ಒಂದೇ ತೆರ "சிலப்பதிகாரம்" ಎಂದು ಅದನ್ನು ಗೇಲಿಗೆ ಹೇಗೆ ಬೇಕಾದರು ಓದಬಹುದು.
"ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ" ವರೆಗೂ. ಅವರು ಹೇಳುವುದು "ಸಿಲಪ್ಪದಿಗಾರಂ" ಅಂತ( wikipedia )
ಆದರೆ ತಮಿಳು ಚ/ಸ ಗಳ ನಡುವೆ ವ್ಯತ್ಯಾಸ ತೋರಲ್ಲ. ಅದು ಆ ಭಾಷೆಯ ಸ್ವರೂಪ. ಹಾಗೆ ಮೃದು, ಕರ್ಕಶ ವ್ಯಂಜನಗಳ ನಡುವೆಯೋ ಭೇದವಿಲ್ಲ. ಇನ್ನು ಮಹಾಪ್ರಾಣಗಳು, ಶ, ಷಗಳು ಶಾಸ್ತ್ರೀಯ ತಮಿಳಲ್ಲಿ ಇಲ್ಲ.
"ಅವರ ನುಡಿ, ಅವರ ಮಡಿ" ನಮಗೇನು ಕಷ್ಟ?

======
Re: "ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ"ವರೆಗೂ
ಹೇಗೆ ಬೇಕಾದರೂ ಓದುವ ಹಾಗಿಲ್ಲ ಸ್ವಾಮಿ! ಸಿಲಪ್ಪದಿಗಾರಂ ಎಂದೇ ಓದಬೇಕು! ಶಿಲಪ್ಪದಿಗಾರಂ ಎಂದು ಕೆಲವರು ಹೇಳಬಹುದು. ಆದರೆ ಶಿಲಬ್ಬ ಅಂತೂ ಖಂಡಿತ ಅಲ್ಲ.
ತಮಿಳಿನಲ್ಲಿ ಅಕ್ಷರಗಳ ಕೊರತೆ ಇದ್ದರೆ, ಅದರ ತೊಂದರೆ ಕಾಣೋದು ಬೇರೆ ಭಾಷೆಯ ಪದಗಳನ್ನು ಬರೆಯೋದಕ್ಕೆ. ತಮಿಳಿನ ಪದಗಳನ್ನು ಬರೆಯುವುದಕ್ಕಲ್ಲ. ನಾವು, ಯಾವುದೇ ಲಿಪಿಯಲ್ಲಿ ಇನ್ನೊಂದು ಭಾಷೆಯ ಶಬ್ದವನ್ನು ಬರೆಯವಾಗ ಆದಷ್ಟೂ ಮೂಲ ಉಚ್ಚಾರಕ್ಕೆ ಹತ್ತಿರವಾಗಿ ಓದಲು ಅನುಕೂಲವಾಗುವಂತೆ ಬರೆಯುವುದು ಒಳ್ಳೆಯದು. ಆ ನಿಟ್ಟಿನಲ್ಲಿ, ಕನ್ನಡ ಲಿಪಿಯಲ್ಲಿ ಸಿಲಪ್ಪದಿಗಾರಂ ಎಂದು ಬರೆಯುವ ಅವಕಾಶ ಇರುವಾಗ, ತಪ್ಪು ತಪ್ಪಾಗಿ ಶಿಲಪ್ಪಧಿಕಾರಂ ಎಂದು ಬರೆಯುವ ಅಗತ್ಯವಿಲ್ಲ ಎಂದಷ್ಟೇ ನಾನು ಹೇಳೋದು.
ಇಂಗ್ಲೀಷಲ್ಲೂ ಅಕ್ಕರಗಳ ಕೊರತೆ ಇದೆ, ಅದರಿಂದ ಇಂಗ್ಲೀಷಿಗೆ ಏನು ಕುತ್ತು?
ಅಕ್ಕರಗಳು ಕಡಮೆ ಇದೆ ಅಂತ ಆ ನುಡಿ ಸಣ್ಣಗಾಗುವುದಿಲ್ಲ. !!!
ಈ ಯಾವ ಅಭಿಪ್ರಾಯಗಳೂ ನನ್ನವಲ್ಲ
ನನಗೆ ತಮಿಳು ಓದಿ, ಬರೆದು, ಮಾತನಾಡಲು ಬರುತ್ತೆ 
-ಹಂಸಾನಂದಿ
Re: "ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ"ವರೆಗೂ
ಹಂಸಾನಂದಿ
thanks...
ತಮಿಳು ತಲೆಗಳ ನಡುವೆಯಲ್ಲಿ ಅವರು "ಶಿಲ್ಪಧಿಕಾರಂ" ಅಂತ ಬರೆದಿದ್ದಾರೆ. ಹಾಗೆ ಮೊನ್ನೆ ಒಂದು ಕನ್ನಡದ ಕಿರುಬರಹದಲ್ಲೂ "ಶಿಲ್ಪಾದಿಕಾಂ" ಎಂತ ಬರೆದಿದ್ದರು. ಅದಕ್ಕೆ ನಾನು ಹಂಗ ಬರೆದೆನು.
ನಿನ್ನು ಮುಂದೆ "ಸಿಲಪ್ಪದಿಗಾರಂ" ಅಂತವೇ ಬರೆತೇನೆ. ಏನ್ ಮಾಡೋದು ಸ್ವಾಮಿ ಅರಿಯಮಿಕೆ
ನಾನು ತಮಿಳು ಕಲಿತಾ ಇದ್ದೀನಿ. ಬರೆಯಕ್ಕೆ ಬರುತ್ತೆ, ಓದಕ್ಕೆ ತುಸು ಕಷ್ಟ!!( ಅದೇ "ಸಿಲಪ್ಪತಿಕಾರಂ ಇಂದ ಶಿಲಬ್ಬದಿಗಾರಂ ವರೆಗೂ" ಗೊಂದಲ
)
======

ಉ: Re: "ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ"ವರೆಗೂ
ತುಂಬಾ ತಮಾಷೆಯಾಗಿದೆ ಈ ಚರ್ಚೆ.
ನಾನು ಮುಂಬಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನನ್ನ ತಮಿಳು ಗೆಳೆಯರಿಗೆ ಚರ್ಚ್ ಗೇಟ್ ಅನ್ನಿ ಅಂದರೆ, ಸರ್ಚ್ ಗೇಟ್ ಅನ್ನುತ್ತಿದ್ದರು. ಸರ್ಚ್ ಗೇಟ್ ಅನ್ನಿ ಎಂದರೆ ಚರ್ಚ್ ಗೇಟ್ ಅನ್ನುತ್ತಿದ್ದರು.
ಬೆಂಗಳೂರಿನಿಂದ ಚೆನ್ನೈಗೆ ನಿತ್ಯಾ ಓಡುವ ರೈಲು ಯಾವುದು ಎಂದರೆ
ಚತ್ತಾಪತ್ತಿ ಎಕ್ಸ್ ಪ್ರೆಸ್ ಅನ್ನೋದೇ?
ಹೇಗಿದೆ ಈ ತಮಿಳು ಭಾಷೆಯ ಚಮಾತ್ಕಾರ?
ಉ: Re: "ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ"ವರೆಗೂ
ಸುರುವಿನಲ್ಲಿ ಚ/ಸ ಎರಡೂ ಸರಿ, ಆದರೆ ನಡೂವಿನಲಿ ಅದು 'ಚ'ವೇ ಆಗಬೇಕು. ಪಡೆಯಪ್ಪದ ಹಾಡು ಕೇಳಿರಬಹುದು "ಸಿಂಗನಡೈ _______ಇಳಂಚಿಂಗಂ ಪಡೆಯಪ್ಪ". ಸುರುವಿನಲ್ಲಿ ಸಿಂಗನಡೈ/ ಚಿಂಗನಡೈ ಎರಡೂ ಆಗುತ್ತದೆ, ಆದರೆ ನಡುವಿನಲ್ಲಿ ಅದು 'ಇಳಂಚಿಂಗ'ವೇ ಆಗಬೇಕು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: Re: "ಚಿಲಪ್ಪತಿಕಾರಂ" ಇಂದ ಹಿಡಿದು "ಶಿಲಬ್ಬದಿಗಾರಂ"ವರೆಗೂ
ನಡುವಿನಲ್ಲಿ ಇಳಂಚಿಂಗ ಆಗಿರೋದು ಮುಂದೆ ಇರುವ ೦ ಇಂದ.
ಪಸಿಕಿರದ್!! ಪಚಿಕಿರದ್ ಅಲ್ಲ.!