ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಶ್ರೀವಾಗ್ದೇವಿಗೆ ಶಬ್ದದಿ
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು
ದ್ಭಾವಿಪ ನಿರ್ಮಳಮೂರ್ತಿಗಿ
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ||

ಶ್ರೀವಾಗ್ದೇವಿಗೆ! ಶಬ್ದದಿನ್ ಆ ಆ ಇಂದ್ರಿಯದ ವಿಷಯಮಂ ಶ್ರೋತ್ರದೊಳ್ ಉದ್ಭಾವಿಪ ನಿರ್ಮಳಮೂರ್ತಿಗೆ, ಇಳಾವಂದ್ರೆಗೆ ಶಾಸ್ತ್ರಮುಖದೊಳ್ ಅವನತನ್ ಅಪ್ಪೆಂ
ಆ ಆ ಇಂದ್ರಿಯದ ವಿಷಯವನ್ನು( ಐದಿಂದ್ರಿಯಗಳ ಸಂಗತಿಗಳಾದ ಸದ್ದು, ಸ್ಪರ್ಶ/ತಾಗು, ನೋಟ, ಸವಿ, ಕಂಪುಗಳು ) ಬರೀ ಶಬ್ದದಿಂದ ಬರೀ ಕಿವಿಯಲ್ಲಿ( ಶ್ರೋತ್ರದಿಂದ್ರಿಯ ) ಅರಿಯಿಸುವ, ತಿಳಿಸುವ ಸಿರಿನುಡಿಯರಸಿ, ಹಸನುಮೈ, ಇಳೆಯ ಮಂದಿಯಿಂದ ವಂದಿಸಿಕೊಳ್ಳುವವಳು ಆದ ಸರಸ್ವತಿಗೆ ಶಾಸ್ತ್ರದ ಮೊದಲಲ್ಲಿ ಬಾಗಿದವನು( ಅವನತನು ) ಆಗುವೆನು.
"ಐದು ಇಂದ್ರಿಯಗಳ ಸಂಗತಿಗಳನ್ನು ಬರೀ ಮಾತಿನಲ್ಲಿ ಹೇಳುವ ಬಗೆ/ಕಲೆಯಾದುದು ಕಬ್ಬ!"
ಇದು ಕೇಶವನ "ಶಬ್ದಮಣಿದರ್ಪಣಂ" ಶಾಸ್ತ್ರದ ಮುದಲಲ್ಲಿ ಬಂದ ಸರಸ್ವತಿಯ ಕುಂಬು. ! ![]()
=========================================
ಕುಂಬು = obeisance

- mahesha ರವರ ಬ್ಲಾಗ್
- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಕುಂಬು ಅಂದರೆ ಕೊಂಬು? ನಮನ?
ಗೆದ್ದಲ್ಲು ಹಿಡಿದ ವಸ್ತುವನ್ನು ಕುಂಬು ಅಂತ ತುಳುವಲ್ಲಿ ಹೇಳುತ್ತಾರೆ.
*ಅಶೋಕ್
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಕುಂಬು ಅಂದ್ರೆ obeisance.
ನನ್ನ ಬ್ಲಾಗು ತುಳುವಲ್ಲಿ ಇಲ್ಗ!
!
- ಮಾಯ್ಸ !!
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ವಿ.ಕ.ದ ದಿನಪದ ಅಂಕಣ ನೋಡುತ್ತಿದ್ದೀರಾ? ಇವತ್ತು ಪಟ್ಟಾಂಗ ಶಬ್ದದ ಬಗ್ಗೆ ಹೇಳಿದ್ದರೆ. ಇದು ತುಳು ಮೂಲದ್ದು. ಕನ್ನಡದಲ್ಲಿ ಬಳಕೆಯಗ್ತಿದೆ. ಹಗಗಿ ನಿಮ್ಮ ಬ್ಲಾಗು ಕನ್ನಡದದ್ದಾದರೆ ಪದವೂ ಕನ್ನಡ ಇರಬೇಕಿಲ್ಲ.
ನಿಮ್ಮ ಇಂಗ್ಲಿಷ್ ಮತ್ತು ಕಷ್ಟವಿದೆ. ಅದರೂ ಅರಿವಾಯಿತು.
obeisance \oh-BEE-suhn(t)s; oh-BAY-suhn(t)s\, noun:
1. An expression of deference or respect, such as a bow or curtsy.
2. Deference, homage
*ಅಶೋಕ್
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಅಶೋಕ್, ತುಳುವಿನಲ್ಲಷ್ಟೇ ಅಲ್ಲ, ಕನ್ನಡದಲ್ಲಿಯೂ ಕೊಳೆಯುವ ಕುಂಬಿದೆಯಂತೆ, ನನಗೆ ತಿಳಿದಿರಲಿಲ್ಲ. ತುಳುವಿನಲ್ಲಿ ಮಾತನಾಡುವಾಗ ಇದನ್ನು ಹೆಚ್ಚಾಗಿ ಬಳಸುತ್ತಾರೆಯೇ ?
೧. ಕೊಳೆಯುವುದು ಎಂಬರ್ಥ ಬರುವ ಕುಂಬು
೨. ಗೌರವಿಸು ಎಂಬರ್ಥದ ಕುಂಬು
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಸುನೀಲ್‍ಜಿ,
ಹೌದು ತುಳುವಿನಲ್ಲಿ ಇದರ ಬಳಕೆ ಸಾಮಾನ್ಯ- ಗೆದ್ದಲು ಹಿಡಿದ ವಸ್ತುವಿನ ಬಗ್ಗೆ ಮಾತನಾಡುವಾಗ. ತುಳು ಪ್ರಭಾವದಿಂದ ಕನ್ನಡದ ಸಂಭಾಷಣೆಯಲ್ಲೂ ಇಂತಹ ಶಬ್ದಗಳು ಇಣುಕುತ್ತವೆ. ಉದಾ:ಜೋಸ್ತಿ, ಪಟ್ಟಾಂಗ, ಕುಂಬು, ಪ್ರಿಯ(ದುಬಾರಿ) ಇತ್ಯಾದಿ.
ನನ್ನಂತವರು ಪ್ರಯತ್ನಪೂರ್ವಕವಾಗಿ ಶುದ್ಧ(ಸಂಸ್ಕೃತ ಬೆರೆಸಿದ) ಕನ್ನಡ ಬಳಸುತ್ತೇವೆ.
*ಅಶೋಕ್
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಎಂತಹ ಸಂಸ್ಕೃತದ ಬರೆಸದ ಅಣ್ಣೆ ಕನ್ನಡ!!
- ಮಾಯ್ಸ !!
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಅಯ್ಯೋ ಹೌದಾ..ಹಾಗಾದರೆ ತುಳು ಪದಗಳು ಹೆಚ್ಚಿರುವ ಕನ್ನಡವನ್ನೇ ಬಳಸಿ, ನಮಗೂ ಹೆಚ್ಚು ಹೆಚ್ಚು ತುಳು-ಕನ್ನಡ ಪದಗಳ ವ್ಯಾಪ್ತಿ ತಿಳಿಯುತ್ತದೆ. ಆಸಕ್ತಿಯಿದ್ದವರು ತುಳುವಿನಲ್ಲಿ ಬಳಕೆಯಿರುವ ಪದಗಳನ್ನೂ ಕಲಿತುಕೊಳ್ಳುತ್ತಾರೆ.
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
"....ನನ್ನಂತವರು ಪ್ರಯತ್ನಪೂರ್ವಕವಾಗಿ ಶುದ್ಧ(ಸಂಸ್ಕೃತ ಬೆರೆಸಿದ) ಕನ್ನಡ ಬಳಸುತ್ತೇವೆ..."
ಯಾಕ್ ಸ್ವಾಮಿ ಆಟೊಂದು ಕಸ್ಟ ತಗೋತೀರ?
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ನಿಮ್ಮ ಇಂಗ್ಲಿಷ್ ಮತ್ತು(೪) ಕಷ್ಟವಿದೆ. ಅದರೂ ಅರಿವಾಯಿತು.
ತಿದ್ದುಪಡಿ:
೧...ಹೇಳಿದ್ದಾರೆ
೨..ಬಳಕೆಯಾಗ್ತಿದೆ
೩...ಹಾಗಾಗಿ
೪..ಮತ್ತೂ
ಕಣ್ತಪ್ಪಿಗೆ ಕ್ಷಮಿಸಿ.
*ಅಶೋಕ್
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ದೊಡ್ಡ ಬುದ್ದಿ!!
೧) ಈ ಎಳೆ, ಶಬ್ದಮಣಿದರ್ಪಣದ ಮೊದಲ ಪದ್ಯದಲ್ಲಿ ಬಂದ "ಸರಸ್ವತಿಗೆ ಕುಂಬು" ಬಗ್ಗೆ ಇರುವುದು
೨) ಕುಂಬು ಕನ್ನಡದ ಒರೆ. ನೀವು ನಿಮ್ಮ ಅಲುವಾಟದಂತೆ ಅರ್ಥ ಕೇಳಿದಿರಿ. ಅದಕ್ಕೆ ನನಗೆ ಗೊತ್ತಿರುವ ಅರ್ತ ತೋರಿದೆ.
೩)ವಿಕದಲ್ಲಿ ಬಂದಿದ್ದರೆ ಬರಲಿ. ಹಿಂದೆ ವಿಕದಲ್ಲಿ ಎಂತೆಂತ ಒರೆಗಳು ಬಂದಿದ್ದವು ಅಂತ ಗೊತ್ತು
ಈ 'ಪಟ್ಟಾಂಗ' ಒರೆಯನ್ನು ನಾನು ಕೇಳೇ ಇರಲಿಲ್ಲ( ತುಳುವಾದುದರಿಂದ ಇರಬೇಕು ). ನಾವು ಅಚ್ಚುಕಟ್ಟಾಗಿ ನಮ್ಮ ಕನ್ನಡದಲ್ಲಿ ಹರಟೆ, ಕಾಡುಹರಟೆ ಎನ್ನುವೆವು. "ಹರಟೆ" ಅಂತ ಉದಯ ಟೀವಿಯಲ್ಲಿ ಒಂದು ಪ್ರೋಗ್ರಾಮ್ಮು ಬರುವುದು. ಪಟ್ಟಾಂಗ, ಹರಟೆಯಷ್ಟು ಬಳಕೆಯಲ್ಲಿ ಇಲ್ಲ ಎಂದು ಅನ್ನಿಸುವುದು.!!!
ಇದರ ತುಳುಮೂಲ ಅಲ್ಲೇ ಹೇಳಿರುವುವಂತೆ ಒಂದು ಅಂದಾಜು. ಅಂದರೆ ನಿಕ್ಕುವವಿಲ್ಲ!!!
೪) ತುಳುವಿಂದ ಕನ್ನಡಕ್ಕೆ ಒರೆಗಳು ಬಂದಿದೆ ಎಂಬುದು ಒಂದು ನಂಬಿಕೆ, ಅಂದಾಜು ಅಷ್ಟೇ.!! ಅದು ನಿಕ್ಕುವವಾಗಿ ಹೇಳಲಾಗದು. ಏಕೆಂದರೆ ತುಳುವಿಗೆ "superstrate" ಕನ್ನಡವೇ. ಅಂದರೆ ತುಳುವು ಬಹಳ ಹಿಂದಿನಂದಲೂ ಕನ್ನಡದಿಂದಲೇ ಪದಗಳನ್ನು ಒಯ್ದಿರುವುದು.
ಅದೂ ಅಲ್ಲದೇ ಈ ದ್ರಾವಿಡ ಒರೆಗಳು ಒಂದು ದ್ರಾವಿಡ ನುಡಿಯಿಂದ ಮತ್ತೊಂದಕ್ಕೆ ತಮಿಳಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ ಅಂತ ಹೇಳೋದು ಅಷ್ಟು ಸರಿಯಿಲ್ಲ!!.
ಬೇಕಾದರೆ ಒಂದು ಹೊಸ ಎಳೆ ತಗೆಯಿರಿ ಅಲ್ಲಿ "ತುಳು-ಕನ್ನಡ" ಬಗ್ಗೆ ಮಾತಾಡೋಣ.!!
೫) ಒಂದು ಒರೆಗೆ ಹಲವರ್ಥಗಳಿರುವುದು ಮಾಮೂಲಿ. ಇದನ್ನು ವಿಶೇಶವಾಗಿ ಹೇಳಬೇಕಿಲ್ಲ. ಶಬ್ದಮಣಿದರ್ಪದದಲ್ಲೂ ಈ ವಿಶಯ ಬಂದಿದೆ. ಆದರೆ ಹೊತ್ತು-ಗೊತ್ತು/ಸಮಯ-ಸಂದರ್ಭ ಅರ್ಥ ತಗೆಯಬೇಕು.
ಇಲ್ಲಿ "ಸರಸ್ವತಿಯ ಕುಂಬು" ಅನ್ನೋದಕ್ಕೆ "ಸರಸ್ವತಿಯ ಗೆದ್ದಲ್ಲು ಹಿಡಿದ ವಸ್ತು" ಎಂದು ಅರ್ಥ ತಗೆದರೆ, ಏನು ಹೇಳೋಣ!!!(ತಮಾಷೆಗಾದರೂ...)
- ಮಾಯ್ಸ !!
============
"superstrate" = ಇದಕ್ಕೆ ಸಂಸ್ಕೃತ/ಕನ್ನಡ ಒರೆ ನನಗೆ ಗೊತ್ತಿಲ್ಲ, ಹುಟ್ಟಿಸುವ ಇಷ್ಟವಿಲ್ಲ
superstrate ನುಡಿ ಅಂದರೆ ಎರವಲು ಒರೆಗಳಿಗೆ ಮೊದಲು ನೋಡಲ್ಪಡುವ ನುಡಿ. ಕನ್ನಡಕ್ಕೆ ಸಂಸ್ಕೃತವನ್ನು ಮಾಡಿರುವಂತೆ.!!
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಮಹೇಶ,
ಕುಂಬು ಎಂಬ ಪದವನ್ನು ಯಾವ ಸೀಮೆಯಲ್ಲಿ ಬಳಸುತ್ತಾರೆ, ಇದು ಶಬ್ದಮಣಿದರ್ಪಣದಲ್ಲಿ ಬಂದಿದೆಯೇ ಅಥವಾ ಈ ಶ್ಲೋಕವನ್ನು ವಿವರಿಸಲೊಸುಗ ಬಳಸಿದ ಪದವೇ ?
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
ಬಳಕೆಯಾಗಿದೆ, ಯಾವ ಸೀಮೆಯಲ್ಲಿ ಎಂದು ಗೊತ್ತಿಲ್ಲ.
ಪದ್ಯವನ್ನು ಬಿಡಿಸಲೋಸುಗ ಬಳಸಿದುದು ದಿಟ!
ಇಲ್ಲಿ ದಿಟವಾದ ತೊಂದರೆ ಏನು? ( ತೆಲುಗಿನ ತೊಂದರ ಅಲ್ಲ, ಕನ್ನಡದ ತೊಂದರೆ )
- ಮಾಯ್ಸ !!
ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ
"ವಿವರಿಸಲೊಸುಗ" ಇದನ್ನು ವಿವರಿಸಲೋಸುಗ ಎಂದು ಅಂದುಕೊಂಡಿದ್ದೇನೆ!
ಇದು ಯಾವ ಸೀಮೆಯದು ಅಂತ ನನಗೆ ಗೊತ್ತಿಲ್ಲ, ಬೇಕಿಲ್ಲ.!!
- ಮಾಯ್ಸ !!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
"ಐದು ಇಂದ್ರಿಯಗಳ ಸಂಗತಿಗಳನ್ನು ಬರೀ ಮಾತಿನಲ್ಲಿ ಹೇಳುವ ಬಗೆ/ಕಲೆಯಾದುದು ಕಬ್ಬ"
ಈ ವಿಷಯವಾಗಿ ಯಾವುದಾರು ಸಂಸ್ಕೃತದ ಶ್ಲೋಕವಿದೆಯೇ?
ಇಂತಹ ಮಾತು ಬೇರೆಲ್ಲಾದರು ಬಂದಿದೆಯೇ?
ಕವಿಗಳು ಯಾವಾಗಲೂ 'ವಾಕ್'/'ಮಾತು' ಇನ ದೊಡ್ಡತನವನ್ನು ಹೊಗಳೇ ಹೊಗಳುವರು.
ಕಾಳಿದಾಸನ 'ವಾಕ್' ಮತ್ತು 'ಅರ್ಥ'ದ ಬಗ್ಗೆ ಒಂದು ಹೆಸರುವಾಸಿಯಾದ ರಘುವಂಶದ ಶ್ಲೋಕವಿದು
http://www.geocities.com/braahmii/Raghuvamsha/all_sargas/sarga1/rv_1_frame.htm
ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ||
"To derive the pertinent idiom and its ideation I adore the Parents of Universe, Paarvati and Parameshvara, who are like an ever-embodied entity of sound and its sense."
- ಮಾಯ್ಸ !!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಪದ, ಅಥವಾ ಮಾತಿನ ಹೆಚ್ಚುಗಾರಿಕೆಯನ್ನು ಕವಿರಾಜಮಾರ್ಗಕಾರನೂ ಹೀಗೆ ಹೊಗಳಿ, ಸರಸ್ವತಿಯನ್ನು ಸ್ತುತಿಸುತ್ತಾನೆ
ಶ್ಸ್ರೀ ವಿಶದವರ್ಣೆ ಮಧುರಾರಾವೋಚಿತೆ ಚತುರ ಚಾರು (ಚಿರ?) ಪದರಚನೆ ಚಿರಂದೇವಿ ಸರಸ್ವತಿ ಹಂಸೀಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್!
ಚತುರವಾದ ಮಾತುಗಳನ್ನು ರಚಿಸುವಂತಹ, ಬಿಳಿಯ ಬಣ್ಣದ, ಇಂಪಾದ ಕಂಠದ ಸರಸ್ವತಿ, (ಶುಭ್ರವಾದ?) ಹಂಸದಂತೆ ನನ್ನ ಮನಸ್ಸಿನಲ್ಲಿ ನೆಲೆಯಾಗಲಿ
-ಹಂಸಾನಂದಿ
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಹಂಸಾನಂದಿ ಬೊಂಬಾಟ್...
ಸದ್ಯ!!
ಕರ್ಣಾಟ ಭಾರತ ಕಥಾ ಮಂಜರಿಯ ಸರಸ್ವತಿಯ ಕುಂಬು...
(ತಪ್ಪು ತಿದ್ದಿರಿ, ನೆನಪಿಂದ ಬರೆದಿಹೆನು! ಹಿಂದೆ ಕೊಂಚ ಗಮಕದ ನೆಪ್ಪು )
ವಾರಿಜಾಸನೆ ಸಕಲ ಶಾಸ್ತ್ರವಿಚಾರದೋದ್ಭವೇ,
ವಚನರಚನೋದ್ಧಾರೇ ಸ್ಮೃತಿಪೌರಾಣದಾಗಮ ಸಿದ್ಧಿದಾಯಕಿಯೇ
ಶೌರಿಸುರಪತಿಸಕಲಮುನಿಜನಸೂರಿಗಳಿಗನುಪಮದ ಯುಕುತಿಯೇ
ಶಾರದೆಯೇ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲೀ
- ಮಾಯ್ಸ !!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಮಹೇಶರೆ,
ಗದುಗಿನ ಭಾರತದ ಷಟ್ಪದಿ ಸರಿಯಾಗಿದೆ
ಇಲ್ಲಿ ಬೇರೆ ಫಾಂಟ್/ಬಣ್ಣ ಬರಲು ಬೇರೆಡೆಯಿಂದ ಕತ್ತರಿಸಿ ಅಂಟಿಸಿದ್ದಿರಾ?
ಹಾಸನದಲ್ಲಿ ಯಾರ ಗಮಕ ಕೇಳಿದ್ರ್ರಿ ಸ್ವಾಮೀ? ನೀವೂ ಹಾಸನದ ಕಡೆಯವರು ಅಲ್ಲವೆ?
-ಹಂಸಾನಂದಿ
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ನನ್ನಮ್ಮನೂರು ಹಾಸನದ ಹೊಳೆನರಸೀಪುರ. ಅಪ್ಪನೂರು ಮಂಡ್ಯ-ಕಂಪಣದ ನಾಗಮಂಗಲದ ಹತ್ರದ ಹಳ್ಳಿ.!
ಆದರೆ ನಾಗಮಂಗಲ ಹಿಂದೆ ಹಾಸನದಾಗೆ ಇತ್ತಂತೆ, ಆದಕ್ಕೆ ನಮ್ಗೂ ಹಾಸನಕ್ಕೂ ಶಾನೆ ನಂಟು!! ಇಬ್ರೂ ಹೇಮಾವತಿಯ ಕುವರರೇ ಅಲ್ವಾ!!!
ನಾನು ಕೊಂಚ ಗಮಕ ಕಲಿತಿದ್ದು ಮಂಡ್ಯದಲ್ಲಿ, ಗಮಕಿ ಶೇಷಗಿರಿರಾಯರ ಬಳಿ( ಇವರು ನಮ್ಮ ಚಿಕ್ಕಮ್ಮನ ತಂದೆ). ಮದ್ದೂರಲ್ಲಿ "ಚೆನ್ನಾಗೌಡನ ಕೊಪ್ಪಲು"( ಹೆಸರು ಸರಿಯಾಗಿ ನೆಪ್ಪಿಲ್ಲ ) ಗಮಕದ ಪೋಟಿ ಇರ್ತಿತ್ತು. ನಾನು ಒಂದ್ ಕಿತ ಮೊದಲ-ಜಾಗ ಗಿಟ್ಟಿಸಿದ್ದೆ
!!
ನಂಗೆ ಬಲು ಇಷ್ಟವಾದುದು, ನಮ್ಮ ಗುರು ಹೇಳಿಕೊಟ್ಟ "ಕದಳಿಯೊಳ್ ಮದದಾನೆ ಹೊಕ್ಕಂದದಲಿ". ಇದಕ್ಕೆ ಏನು ರಾಗ ಹಾಕಿದ್ರು ಅವರು. ಗಂಟಲು ಕಿತ್ತು ಹೋಯ್ತಿತ್ತು.
ಅಯ್ಯೋ ಬಹಳ ಹಿಂದಿನ ಕತೆ, ಆಗ ನಾನು ಹೈಸ್ಕೂಲಲ್ಲಿ ಇದ್ದೆ.
ಇರ್ಲಿ, ಇರಿ ಸಾರ್.. "ಕಬ್ಬಿಗ ಕಾವನ್" ಅಲ್ಲಿ ಇರುವ ಸರಸ್ವತಿ ಕುಂಬು ಹುಡುಕಿ ಹಾಕ್ತೀನಿ..!!
- ಮಾಯ್ಸ !!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಬಣ್ಣ ಬರಕ್ಕೆ
ಅಂತ ಹಾಕ್ದೆ!<ಹೆಚ್೩>
ನನ್ನಿ ಹಂಸಾನಂದಿ!
- ಮಾಯ್ಸ !!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಇದರಾಗೆ ಮಾರನ ಮತ್ತು ಮೂರ್ಮೂರುತಿಗಳ ಕುಂಬವೆ!
- ಮಾಯ್ಸ !!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
"ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡ" ಎಂಬುವರ ಅಚ್ಚಗನ್ನಡ ನುಡಿಕೋಶದಲ್ಲಿ ಕುಂಬು ಪದದ ಬಗ್ಗೆ ಮತ್ತಷ್ಟು ವಿವರಣೆಯಿದೆ.
ಕುಮ್ಬು ೧ =(ಕುಡು೩). ಬಗ್ಗುವಿಕೆ; ತುೞಿಲ್, ಮೊೞ್ಗು, ಮಣಿ, ಪೊಡವಡಿಕೆ(ನಮಸ್ಕಾರ)
ಕುಮ್ಬಿಡು = ಕೆಳಗೆ ಬಗ್ಗು(ನಮಸ್ಕಾರ ಮಾಡು). ರಾಜಶೇಖರ ವಿಲಾಸ
ಕುಮ್ಬು ೨ = ಅೞಿವು(ವಿನಾಶ). ಮರಕ್ಕೆ ಕುಮ್ಬು ಹಿಡಿಯಿತು. ಮರ ಕುಮ್ಬಾಯಿತು. ಇದು ಅಶೋಕ್ ಅವರು ಸೂಚಿಸಿದ ಗೆದ್ದಲು ಹಿಡಿಯುವ ಕ್ರಿಯೆಗೆ ಹತ್ತಿರವಾಗಿದೆ.
ಎಂಥ ಸೋಜಿಗ, ಒಂದು ಪದಕ್ಕೆ ತನ್ನದೇ ವಿರುದ್ಧ ಪದಗಳನ್ನೂ ಸೂಚಿಸುವ ಶಕ್ತಿಯಿರುತ್ತದೆ!!!!!!!!!!
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ಸುನಿಲ,
ನಮ್ಮ ಬಳಿ "ಅಳಿವು, ಕೊಳೆತ, ತುಕ್ಕು" ಇದಕ್ಕೆ ಕನ್ನಡದ ಒರೆಗಳವೆ ಅಲ್ವಾ?
ಕೊರತೆ ಇರೋದು "ನಮಸ್ಕಾರ, ಪ್ರಣಾಮ, ವಂದನೆ" ಇಂತವಕ್ಕೆ.
ಈಗ ಕುಂಬು ಅಂದ್ರೆ 'ನಮಸ್ಕಾರ' ಅಂತ ತಿಳಿದುಕೊಳ್ಳಕ್ಕೆ ಯಾವ ತೊಂದರೆ ಇಲ್ಲ, ಅಂತ ನಿಂಗೂ ಅರಿವಾಗಿದೆ.!
ಈ ಎರಡು ಕುಂಬುಗಳ ತಿಳಿವನ್ನು ನಾವು ಸನ್ನಿವೇಶಕ್ಕೆ ತಕ್ಕಂತೆ ಸಲೀಸಾಗಿ ಪತ್ತೆಮಾಡಿಕೋಬೋದು !!
ಬೇಡ ಅಂದ್ರೆ ಬೇಟೆಗಾರ ಕೂಡ
ಕಾಯಿ = ತಂಗನಕಾಯಿ, wait, heat
ಹಚ್ಚು = on, paint, cut into piece
ಬಿತ್ತು = ಬಿದ್ದಿತು, sow,
ಅರಿವೆ = ಬಟ್ಟೆ, ತಿಳಿವು/ಅರಿಮೆ
ಹಸ = ಆಕಳು, ಹಸನು
ತಾಳಿ = ಮಾಂಗಲ್ಯ, ತಾಳ್ಮೆ ಮಾಡಿ.
ಬೇಕಾದಷ್ಟಿವೆ!
- ಮಾಯ್ಸ !!