ದೇವರನ್ನು ನಂಬದೇ ಇದ್ದರೆ ನೆಮ್ಮದಿ ಇಲ್ಲ
ಈ ಜಗವು ಎಂತೆಂತ ಸೋಜಿಗಗಳಿಂದ ಕೂಡಿದೆ. ಈ ಜಗದ ಒಂದೊಂದು ಚಿಕ್ಕಚಿಕ್ಕ ಸಂಗತಿಗಳ ಒಳಹೊರಗೆ ದೊಡ್ಡ ದೊಡ್ಡ ನಿಬ್ಬರ/ಅತಿಶಯದ ಅಚ್ಚರಿಯ ಸಂಗತಿಗಳು.
ಇಂತಹ ಸಂಗತಿಗಳ ನಡುವೆ ’ಮನುಶ್ಯ’ ಅನ್ನೋ ಒಂದು ಸಂಗತಿ ಇದೆ. ಬರೀ ಮನುಶ್ಯ ಅನ್ನೋ ಸಂಗತಿಗೇನೇನೇ ಈ ’ಸೋಜಿಗ, ನಿಬ್ಬರ, ಅಚ್ಚರಿ’ ಅಂತ ಆಗೋದೇನೋ! ಮನುಶ್ಯದ ಮೆದುಳು ಅನ್ನೋ ಮಾಂಸದ ತುಂಡಲ್ಲಿ ಎಶ್ಟೋ ಕೋಟಿಕೋಟಿ (Ion)ಅಯಾನ್ಗಳು ಚಣಕ್ಕೆ ಅರೆಚಣಕ್ಕೆ, ಕಾಲುಚಣಕ್ಕೆ ಒಮ್ಮೆ ಹರಿದು ಮೆದುಳಿಗೆ ಶಾಕ್ ಕೊಟ್ಟು ಕೊಟ್ಟು ’ಅನುಬವ, ಅನ್ನಿಸು, ಬಾವನೆ’ ಮುಂತಾದವನ್ನು ’ಉಂಟು’ ಮಾಡುತ್ತೆ. ಈ ’ಉಂಟು ಮಾಡುವಿಕೆ’ ಎರಡು ಮೋಡಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಸಿಡಿಲು, ಮಿಂಚು ಬಂದಹಾಗೆ.
ಅಲ್ಲ ಅಲ್ಲ !! ಗಾಳಿಯು ಡಿಕ್ಕಿ ಹೊಡೆಸಿ, ಅಲ್ಲ ಗಾಳಿ ಬೀಸುವುದು ಹೇಗೆ? ನೇಸರ ಬಿಸಿಯಿಂದ ತಾನೆ, ಅದಕ್ಕೆ ನೇಸರ ಬಿಸಿಯಿಂದ ಬೀಸಿದ ಗಾಳಿಯಿಂದ ಮೋಡಗಳ ಡಿಕ್ಕಿ
, ಇನ್ನು ನೇಸರ ಬಿಸಿ ಹೇಗೆ? ........ಅದೂ ಇದೂ ಮಣ್ಣುಮಸಿ....
ಹೀಗೆ ತಲೆಕೆಡಿಸಿಕೊಳ್ಳುತ್ತಾ ಹೋಗುವ ’ಮರುಳು’ ಈ ಮನುಶ್ಯ ಸಂಗತಿಗೆ ಇದೆ. ’ತಲೆಕೆಡಿಸಿಕೊಳ್ಳವುದು’ ಹೇಗೆ ಎಂಬುದಕ್ಕೆ ಮೇಲನದು ಒಂದು ಮಾದರಿ/ಉದಾಹರಣೆ. ಈ ಮನುಶ್ಯ ಉಂಕು/ಯೋಚನೆ ಎಂಬುದನ್ನು ಮಾಡುವುದಂತೆ. ಅದರಿಂದ ಅವನ ಆ ಮೆದುಳು ಎಂಬ ಮಾಂಸದ ತುಂಡಲ್ಲಿ ಎಕ್ಕಾಮಕ್ಕ ಅಯಾನ್ಗಳು ಹರಿದು ಸಿಕ್ಕಾಪಟ್ಟೆ ಶಾಕ್ ಹೊಡೆದು ’ನೆಮ್ಮದಿ’ ಅನ್ನೋದು ಇಲ್ಲ ಅಂತ ಮತ್ತೆ ’ತಲೆಕೆಡಿಸಿಕೊಳ್ಳೋದು’ ಅನ್ನೋದನ್ನ ಮಾಡುತ್ತಂತೆ.
ಹೀಗೆ ’ವಿಚಿತ್ರ’ ಅನ್ನೋ ತರ ಇರೋ ಈ ಮನುಶ್ಯಕ್ಕೆ ಹಲವು ಸರತಿ ಆ ’ಉಂಕು’ ಅನ್ನೋದನ್ನ ಮಾಡದೇ ಇದ್ದರೇನೇನೇ ಈ ’ನೆಮ್ಮದಿ’ ಅನ್ನೋದು ಸಿಗೋದಂತೆ. ಅದಕ್ಕಾಗಿ ’ಉಂಕು’ ಅನ್ನೋದನ್ನ ಮಾಡದೇ ಇರಬೇಕಾದರೇ ’ನಂಬಿಕೆ’ ಅನ್ನೋದು ಬೇಕಂತೆ. ಈ ’ನಂಬಿಕೆ’ ಅನ್ನೋದು ಹೇಗೆ ಅಂದರೆ ಮೇಲಿಂದ ಮಳೆ ಬೀಳತ್ತೆ, ಅದು ಹೇಗೆ ಬೀಳತ್ತೆ ಎಂದು ’ಉಂಕು’ ಎಂಬುದನ್ನು ಮಾಡೋದು ಬಿಟ್ಟು ಯಾವುದೋ ಒಂದನ್ನು ’ನಂಬಿ’ ಬಿಡೋದು.. ಒಟ್ಟಿನಲ್ಲಿ ’ಉಂಕು’ ನಡೆಯಬಾರದು.
ನಂಬಿಕೆಯ ಮಾದರಿ/ಉದಾಹರಣಗಳು:
೧) ಬಾನಲ್ಲಿ ಒಬ್ಬ ’ನೀರು ಪೂರಯ್ಕೆಗಾರ’ನಿದ್ದಾನೆ. ಅವನು ಆಗಾಗ ಚವರಿಗೆಗಳಲ್ಲಿ ನೀರನ್ನು ಮಾಡಿ/ಸ್ರುಶ್ಟಿಸಿ ಸುರೀತಾನೆ.
೨) ಬಾನಲ್ಲಿ ಇನ್ನೊಂದು ’ಲೋಕ’ಅನ್ನೋದು ಇದೆ, ಅಲ್ಲಿನ ಮಂದಿಯ ಚರಂಡಿ ನೀರು ಮಳೆ.
೩) ಬಾನಲ್ಲಿ ಒಂದು ದೊಡ್ಡ ಬಚ್ಚಲು ಮನೆ ಇದೆ. ಆ ಬಚ್ಚಲನ್ನು ಬಳಸೋ ಮಂದಿಗೆ ಮನುಶ್ಯರ ಒಂದು ವರುಶ ಅನ್ನೋದು ಒಂದು ದಿನ ಅದಕ್ಕೆ ಸರಿಯಾಗಿ ಅವರ ಎರಡೇ ಜಾವಕ್ಕೆ ನೀರು ಬರತ್ತೆ. ಜೊತೆ ಹಲವು ಸರತಿ ’ಆನೀಕಲ್ಲು’ ಅನ್ನೋದು ಬೀಳತ್ತೆ.
ಹೀಗೆ ಒಂದನ್ನ ’ನಂಬಿ’ಬಿಡೋದು.. ಆಗ ’ಉಂಕು’ ಅನ್ನೋದು ಮಾಡಬೇಕಾಗಿಲ್ಲ... ಆಗ ’ನೆಮ್ಮದಿ’ ಬರತ್ತೆ, ಸಿಗತ್ತೆ, ಇರತ್ತೆ, ಹೊಂದುತ್ತೆ...... ಏನೋ ಒಂದು.
ಹೀಗೆ ನಂಬಿಕೆ ಅನ್ನೋದು ನೆಮ್ಮದಿಗೆ ಒಂದು ಹಿರಿಓಸುಗರ/ಕಾರಣ. ಅದಕ್ಕೆ ಈ ಮನುಶ್ಯ ’ದೇವರು’ ಅನ್ನೋದನ್ನ ’ನಂಬಿ’, ಹಲವು ಸಂಗತಿಗಳ ಬಗ್ಗೆ ’ಉಂಕು’ ನಡೆಸೋದರಿಂತ ತಪ್ಪಿಸಿಕೊಳ್ತದೆ.
ನೋಡಿ ಈ ಮಾಯ್ಸ ಅನ್ನೋ ಒಂದು ಮನುಶ್ಯ.. ಸುಮ್ಮನೆ ದೇವರನ್ನ ’ನಂಬಿ’ಕೊಂಡಿದ್ದರೆ ಹೀಗೆಲ್ಲ ಎಪ್ರತಪ್ರ ’ಉಂಕು’ ನಡೆಸಿ, ’ತಲೆಕೆಡಿಸಿ’ಕೊಂಡು ಮೆದುಳಲ್ಲಿ ಒಂದು ಮಣ ಮಣ ಅಯಾನ್ಗಳು ಹರಿದು ’ನೆಮ್ಮದಿ’ ಹಾಳುಮಾಡಿಕೊಳ್ತಾ ಇತ್ತಾ?
’ನೆಮ್ಮದಿ’ಯಿಂದ ಈ ಬರಹದ ಬಗ್ಗೆ ಹೆಚ್ಚು ’ಉಂಕು’ ನಡೆಸಬೇಡಿ. ![]()

- mahesha ರವರ ಬ್ಲಾಗ್
- Login or register to post comments
- 325 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ದೇವರನ್ನು ನಂಬದೇ ಇದ್ದರೆ ನೆಮ್ಮದಿ ಇಲ್ಲ
ಅಪ್ಪಾ ಮಾಯ್ಸ್ ತಾವು ಉಂಕು ಮಾಡದೆ ನೆಮ್ಮದಿಯಾಗಿದ್ದುಬಿಟ್ರೆ ನಮ್ಮ ಗತಿ ಏನು ಹೇಳ್ರಪಾ ; ನಿಮ್ಮ ಮೆದುಳಿನಲ್ಲಿ ಆಯಾನುಗಳು ತಾಕಲಾಡುವುದರಿಂದಲೇ ಅಲ್ಲವೇ ನಮ್ಮ ಮಂಡೆಗಳೂ ಆಯಾನಿಸಿ ಪ್ರತಿಕ್ರಿಯಿಸಲು ತಯಾರಾಗುವುದು .
ಉ: ದೇವರನ್ನು ನಂಬದೇ ಇದ್ದರೆ ನೆಮ್ಮದಿ ಇಲ್ಲ
ನನ್ನಿ...
ನಿಮ್ಮ ಮೆದುಳ ಅಯಾನ್ ಹರಿವು ’ಇನಿ’ಯಾಗಿ, ನಿಮಗೆ ’ನಲಿವು’ ಅನ್ನೋದು ತರಲಿ, ತೋರಲಿ, ಕಾಣಿಸಲಿ, ನೋಡಿಸಲಿ.. ಅಯ್ಯೋ ಏನೋ ಒಂದು!!
=====================================
ಮಾಯ್ಸ!