ಗಿಳಿಗೈಯಮ್ಮ
ದೋಭಿರ್ಯುಕ್ತಾ ಚರ್ತುಭಿಃ ಸ್ಫಟಿಕಮಣಿಮಯೀಮಕ್ಷಮಾಲಾಂದಧಾನಾ
ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ
ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾsಸಮಾನಾ
ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ.
( ಶ್ಲೋಕದಲ್ಲಾದ ತಪ್ಪುಗಳನ್ನು ತಿಳಿಸಿದ ಕಿಶೋರಪಟವರ್ದನರಿಗೆ ನನ್ನಿ )
ನಾಲ್ತೊಳೊಳು ಪಟಿಕವಣಿಯ ಜಪಸರವೊಂದುಗೈಯೊಳು
ಬೆಳ್ತಾವರೆ ಗಿಳಿ ಹೊತ್ತಗೆಗಳ ಮಿಕ್ಕ ಮುಗ್ಗೈಯೊಳು ಹಿಡಿದು
ಮಲ್ಲೇ ಚಂದಿರ ಸಂಕ ಪಟಿಕದ ಹೊಳಪಿಂದ ಮಿನುಗಿ ನಗುತಾ
ನೆಲೆಸಲೆನ್ನ ನಾಲಗೆಯಲಿ ಆ ಮಾತಿನೊಡತಿ ಎಂದೆಂದೂ|| ( ಹಂಸಾನಂದಿಯ ಜಾಣ್ಮೆ, ನನ್ನಿ )
ನಾಲ್ಕು ತೊಳುಗಳನ್ನು ಹೊಂದಿರುವ, ಒಂದೊಂದು ಕೈಯಲ್ಲಿ ಪಟಿಕದ ಮಣಿಯ ಜಪಸರ, ಬಿಳಿದಾವರೆವೂ, ಗಿಳಿ, ಹೊತ್ತಗೆಗಳನ್ನು ಹಿಡಿದಿರಿವ, ಹೊಳಯುವ, ಮಲ್ಲಿಗೆ, ಚಂದಿರ, ಸಂಕ, ಪಟಿಕದ ಮಣಿಗಳಂತೆ ಬೆಳಗುವ, ಸಮವಿಲ್ಲದಂತೆ ಹೊಳೆಯುವ, ಆ ಮಾತೊಡತಿ, ನನ್ನ ನಾಲಗೆಯಲ್ಲಿ ಯಾವಾಗಲೂ ನಲಿವಿನಿಂದ ಇರಲಿ.
( ಕನ್ನಡಯಿಸಿಕೆ ಸರಿ ಇಲ್ಲದಿದ್ದರೆ ಮನ್ನಿಸಿರಿ )
ಗಿಳಿಗೈಯಮ್ಮ, ಸರಗೈಯಮ್ಮ, ತಾವರೆಗೈಯಮ್ಮ, ಹೊತ್ತಗೆಗೈಯಮ್ಮ, ಮಾತೊಡತಿ, ಇವೆಲ್ಲ ನಮ್ಮ ಶೃಂಗೇರಿ ಶಾರದೆಗೆ ಒಪ್ಪುವುವು

- mahesha ರವರ ಬ್ಲಾಗ್
- Login or register to post comments
- 355 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಗಿಳಿಗೈಯಮ್ಮ
ಅನುವಾದ ಬಹಳ ಚೆನ್ನಾಗಿದೆ ಮಹೇಶರೆ!
ಕೊನೆಯ ಸಾಲನ್ನು
ನೆಲೆಸಲೆನ್ನ ನಾಲಗೆಯಲಿ ಆ ಮಾತಿನೊಡತಿ ಎಂದೆಂದೂ!
ಎಂದು ಮಾರಿಸಿದರೆ, ದ್ವಿತೀಯಾಕ್ಷರ ಪ್ರಾಸವೂ ಕೂಡಿಬರುತ್ತೆ (ಳ, ಲ ಗಳಲ್ಲಿ ವ್ಯತ್ಯಾಸವಿಲ್ಲ ಎಂದು ಎಲ್ಲ ಕವಿಗಳೂ ತೋರಿಸಿಕೊಟ್ಟಿದ್ದಾರಲ್ಲ ಹೇಗಿದ್ದರೂ!)
ಈ ಮೂಲ ಎಲ್ಲಿಯದ್ದು ಅಂತ ಗೊತ್ತೇ ನಿಮಗೆ?
-ಹಂಸಾನಂದಿ
ಉ: ಗಿಳಿಗೈಯಮ್ಮ
ಮಾಱಿತು.
ನಿಮ್ಮ ಸಲಹೆಗೆ ಚನ್ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಗಿಳಿಗೈಯಮ್ಮ
ಈ ಸರಸತಿಯ ಕುಂಬು/ಸ್ತುತಿ ನಾನು ಶೃಂಗೇರಿ(ಕೊಂಬುಬೆಟ್ಟ)ಯಿಂದ ನಡೆಯಿವ "ಸುರಸರಸ್ವತಿ ಸಂಸ್ಕೃತ" ಪರೀಕಸೆಯ "ಪ್ರಥಮ"ದಲ್ಲಿ ಓದಿದ ಮೊದಲ "ಪಾಠ".
ಇದರ ಮೂಲ ನನಗೆ ತಿಳಿದಮಟ್ಟಿಗೆ ಶೃಂಗೇರಿ ಮಠದ ಊ(ಯಾರೊ) ಗುರುಗಳ ನೆಗಳ್ವು. ಇದರ ಬಗ್ಗೆ 'ಶಂಕರಭಾಸ್ಕರ'ದಲ್ಲಿ ಬಂದಿದ್ದು ಅನ್ನಿಸತ್ದೆ.
ಮುಂದಿನ ಸರತಿ ನನ್ನಜ್ಜಿಯ ಬಳಿ ತಿಳಿದು ಬರುವೆನು.!!
===============================================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಗಿಳಿಗೈಯಮ್ಮ
ಮಹೇಶರೇ, ಮತ್ತೆ ತಪ್ಪು ಹುಡುಕುತ್ತಿದ್ದೆನೆ ಅಂದುಕೊಳ್ಳಬೇಡಿ:
ದೋರ್ಭಿರ್ಯುಕ್ತಾ ಆಗಬೇಕು; ದೋಭಿರ್ಯುಕ್ತಾ ಅಲ್ಲ. (ದೋಃ + ಭಿಃ + ಯುಕ್ತಾ = ದೋರ್ಭಿರ್ಯುಕ್ತಾ ) (ದೋಃ = ಕೈಗಳು)
ಭಾಸಮಾನಾsಸಮಾನಾ ಆಗಬೇಕು; ಸಮಾನ ಅಲ್ಲ.
ಸುಪ್ರಸನ್ನಾ ಆಗಬೇಕು; ಸುಪ್ರಸನ್ನ ಅಲ್ಲ.
ಕನ್ನಡ ಅನುವಾದ ಚೆನ್ನಾಗಿದೆ.
ಉ: ಗಿಳಿಗೈಯಮ್ಮ
ಹುಡುಕುತ್ತಿದ್ದೆನೆ => ಹುಡುಕುತ್ತಿದ್ದೇನೆ ಆಗಬೇಕು..
ಉ: ಗಿಳಿಗೈಯಮ್ಮ
ಅಯ್ಯೋ!!
ನೀವು ಹೇಳಿದೆಲ್ಲ ತಪ್ಪುಗಳು ತಪ್ಪುಗಳೇ.. ಇಗಲೇ ತಿದ್ದುವೆನು..
ಸುಪ್ರಸನ್ನಾ, ಸಮಾನಾ ಅಂತು ಅಯ್ಯೋ!!
ನನ್ನಿ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಗಿಳಿಗೈಯಮ್ಮ
ದೋಭಿರ್ಯುಕ್ತಾ ಬಗ್ಗೆ
dosan [ dosh-án ] n. fore-arm; arm.
ದೋಶನ್ = ತೋಳು, ಇದರ ಚತುರ್ಥೀ ದೋಭಿಃ ಎಂದು ಆಗುವುದು.
ಆದುದರಿಂದ ದೋಭಿಃ + ಯುಕ್ತಾ = ದೋಭಿರ್ಯುಕ್ತಾ ಇದು ಸರಿ ಅನ್ನಿಸತ್ತದೆ.
ದೋಃ + ಭಿಃ + ಯುಕ್ತಾ = ದೋರ್ಭಿಃಯುಕ್ತಾ ಎಂದು ಒಡೆಯುವುದು ನನಗೆ ಸರಿ ಕಾಣುತ್ತಿಲ್ಲ.!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಗಿಳಿಗೈಯಮ್ಮ
ಹೌದು, ದೋಃ + ಭಿಃ ಸರಿಯಲ್ಲ.
ಅದು ದೋಸ್ + ಭಿಃ ಆಗಬೇಕು.
ದೋರಾಂದೋಲನ (swinging the arm) ಇದ್ದ ಹಾಗೆ ದೋರ್ಭಿಃ ಅಂತಂದುಕೊಂಡಿದ್ದೆ.
ನಾನು ತಪ್ಪಿರುವ ಸಾಧ್ಯತೆಗಳಿವೆ.
ಉ: ಗಿಳಿಗೈಯಮ್ಮ
ಗಂಡು ದೇವತೆಯಾಗಿದ್ದರೆ "ಗಿಳಿಗಯ್ಯ", "ಸರಗಯ್ಯ", "ತಾವರೆಗಯ್ಯ"..ಅಂತ ಹೇಳಬಹುದಲ್ಲ (ಎಡಗಯ್ಯ, ಮುಕ್ಕಣ್ಣ, ನೆಗಳ್ದೇರ - ಇವುಗಳ ಹಾಗೆ), ಹಾಗೆನೇ ಇಂತಹ ಪದಗಳಲ್ಲಿ ಅಮ್ಮ ಪದ ಸೇರಿಸದೇ ಈ ಪದಗಳನ್ನು ಹೆಣ್ಣು ಲಿಂಗದ ರೂಪದಲ್ಲಿ ಹೇಗೆ ಬರೆಯೋದು?
ಗಿಳಿಗಯ್ಯಿ, ಸರಗಯ್ಯಿ...
ಇಲ್ಲಾ
ಗಿಳಿಗಯ್ಯೆ, ಸರಗಯ್ಯೆ....
ಇವು ಸರಿಯಾದ ಸ್ತ್ರೀ ಲಿಂಗ ರೂಪಗಳಾಗುತ್ತವೆಯೇ? ಹಾಗಲ್ಲದಿದ್ದರೆ ಸರಿಯಾದ ಸ್ತ್ರೀಲಿಂಗ ರೂಪಗಳು ಯಾವುವು? ಗೋತ್ತಿರುವವರು ತಿಳಿಸಿ.
ಉ: ಗಿಳಿಗೈಯಮ್ಮ
ನನ್ನ ತಿಳಿವಿನಂತೆ,
ಗಿಳಿಗಯ್ಯೆ ಇದು ಸರಿ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಗಿಳಿಗೈಯಮ್ಮ
ಕರಿ ತವಳೆ( ತವಳೆ ಅಂದ್ರೆ? )
೧) ಗಿಳಿಗಯ್ಯೆ ಇದು ಸರಿ ಅನ್ನಿಸುವುದು
ಆದರೆ ಹೆಂದೇವರುಗಳ ಹೆಸರು ಕನ್ನಡದಲ್ಲಿ ’ಅಮ್ಮ’ ಇಂದ ಕೊನೆಯಾಗುವುದು ನಮ್ಮ ನಡಾವಳಿ/ಸಂಸ್ಕೃತಿ. ಅದಕ್ಕೆ ’ಗಿಳಿಗೈಯಮ್ಮ’.
ಗಿಳಿಗಯ್ಯ-ಗಿಳಿಗಯ್ಯೆ,
ಚಂಗೂದಲ-ಚಂಗೂದಲೆ,
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಗಿಳಿಗೈಯಮ್ಮ
ನಮ್ಮೂರ್ ಕಡೆ ಕಪ್ಪೆನಾ ತವಳೆ ಇಲ್ಲಾ ತೌಳೆ ಅಂತಾರೆ.
ಉ: ಗಿಳಿಗೈಯಮ್ಮ
ಅಂದರೆ ನಿಮ್ಮ ಹೆಸರು ಕರಿಕಪ್ಪೆ, ಯಪ್ಪಾ ಯಪ್ಪಾ ಸೂಪರ್ ಕಣ್ರೀ ನೀವು, ಕರಿ ತವಳೆ. ಈ ರೀತಿ ಒಂದು ಕನ್ನಡ ಹಾಡಿದೆ. ಯಾವ ಸಿನಿಮಾ ಅಂತ ಗೊತ್ತಿಲ್ಲ. ಹೀಗೆ ಶುರವಾಗತ್ತೆ.
ಬರ್ತೌಳೇ, ಕರಿತೌಳೇ, ಹಿಡಿತೌಳೇ, --ತೌಳೆ, --ತೌಳೆ, ......
ಹೊಡಿತೌಳೆ ಬಡಿತೌಳೆ ನನ್ ಹೆಂಡ್ತಿ, ಕೇಳ್ರಪ್ಪಾ ಕೇಳ್ರಪ್ಪಾ ಈ ಸಂಗ್ತಿ.
ಕುಮಾರ್ ಬಂಗಾರಪ್ಪ ನಟಿಸಿದ್ದು ಅಂತ ಕಾಣತ್ತೆ. ಸೂಪರ್ರೋ ಸೂಪರ್ರು.